ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ಗಿತ್ತೀತ್ ರಾಗದಲ್ಲಿ ಹಾಡಬೇಕು. ಕೋರಹನ ಮಕ್ಕಳ+ ಮಧುರ ಗೀತೆ.
84 ಸೈನ್ಯಗಳ ದೇವರಾದ ಯೆಹೋವನೇ,
ನಿನ್ನ ಮಹಾ ಪವಿತ್ರ ಡೇರೆ ಎಷ್ಟು ಮನೋಹರ!+
ನನ್ನ ಹೃದಯ, ನನ್ನ ಶರೀರ ಸಂತೋಷದಿಂದ ಜೈಕಾರ ಹಾಕ್ತಾ ಜೀವ ಇರೋ ದೇವರನ್ನ ಹೊಗಳ್ತಿದೆ.
3 ಸೈನ್ಯಗಳ ದೇವರಾದ ಯೆಹೋವನೇ,
ನನ್ನ ರಾಜನೇ, ನನ್ನ ದೇವರೇ! ನಿನ್ನ ಮಹಾವೇದಿ ಹತ್ರ
ಪಕ್ಷಿಗೂ ವಾಸಿಸೋಕೆ ಜಾಗ ಸಿಗುತ್ತೆ,
ಗುಬ್ಬಿನೂ ಗೂಡು ಕಟ್ಕೊಳ್ಳುತ್ತೆ.
ಅಲ್ಲಿ ತನ್ನ ಮರಿಗಳನ್ನ ಸಾಕಿಸಲಹುತ್ತೆ.
4 ನಿನ್ನ ಮನೆಯಲ್ಲಿ ವಾಸಿಸೋರು ಭಾಗ್ಯವಂತರು!+
ಅವರು ಯಾವಾಗ್ಲೂ ನಿನ್ನನ್ನ ಹೊಗಳ್ತಾರೆ.+ (ಸೆಲಾ)
5 ನಿನ್ನಲ್ಲಿ ಶಕ್ತಿ ಪಡಿಯೋ ಗಂಡಸರು ಭಾಗ್ಯವಂತರು,+
ಯಾರ ಹೃದಯ ನಿನ್ನ ಆಲಯಕ್ಕೆ ಹೋಗೋ ದಾರಿಯಲ್ಲಿ ನಡೆಯೋಕೆ ಬಯಸುತ್ತೋ ಅವರು ಖುಷಿಯಾಗಿ ಇರ್ತಾರೆ.
6 ಅವರು ಬಾಕಾ ಕಣಿವೆಯನ್ನ* ಹಾದುಹೋಗುವಾಗ,
ಅದನ್ನ ನೀರಿನ ಬುಗ್ಗೆಗಳಾಗಿ ಮಾಡ್ಕೊತಾರೆ,
ಮುಂಗಾರು ಮಳೆ ಅದನ್ನ ಆಶೀರ್ವಾದಗಳಿಂದ ಮುಚ್ಚುತ್ತೆ.*
7 ನಡೀತಾ ನಡೀತಾ ಅವ್ರ ಶಕ್ತಿ ಜಾಸ್ತಿ ಆಗ್ತಾ ಹೋಗುತ್ತೆ,+
ಅವ್ರಲ್ಲಿ ಎಲ್ರೂ ಚೀಯೋನಿನ ದೇವರ ಮುಂದೆ ಹಾಜರಾಗ್ತಾರೆ.
8 ಸೈನ್ಯಗಳ ದೇವರಾದ ಯೆಹೋವನೇ, ನನ್ನ ಪ್ರಾರ್ಥನೆ ಕೇಳು.
ಯಾಕೋಬನ ದೇವರೇ, ಹೇಳೋದನ್ನ ಕೇಳಿಸ್ಕೊ. (ಸೆಲಾ)
10 ಬೇರೆಲ್ಲೋ ಸಾವಿರ ದಿನ ಕಳೆಯೋದಕ್ಕಿಂತ ನಿನ್ನ ಅಂಗಳದಲ್ಲಿ ಒಂದು ದಿನ ಕಳೆದ್ರೂ ಸಾಕು!+
ಕೆಟ್ಟವರ ಡೇರೆಯಲ್ಲಿ ಇರೋದಕ್ಕಿಂತ
ನನ್ನ ದೇವರ ಆಲಯದ ಹೊಸ್ತಿಲಲ್ಲಿ ಸೇವೆ ಮಾಡೋದೇ* ನನಗಿಷ್ಟ.
11 ಯಾಕಂದ್ರೆ ಯೆಹೋವ ದೇವರು ನಮ್ಮ ಸೂರ್ಯ,+ ನಮ್ಮ ಗುರಾಣಿ.+
ಆತನು ನಮಗೆ ದಯೆ ತೋರಿಸ್ತಾನೆ, ನಮ್ಮ ಗೌರವ ಹೆಚ್ಚಿಸ್ತಾನೆ.
ಯಾರು ನಿಯತ್ತಿನ ದಾರಿಯಲ್ಲಿ ನಡಿತಾರೋ
ಅವ್ರಿಗೆ ಒಳ್ಳೇ ವಿಷ್ಯಗಳನ್ನ ಕೊಡೋಕೆ ಯೆಹೋವ ಹಿಂದೇಟು ಹಾಕಲ್ಲ.+