ಯೆಶಾಯ
2 ನಿಮ್ಮ ಸ್ವಂತ ತಪ್ಪುಗಳೇ ನಿಮ್ಮನ್ನ ದೇವರಿಂದ ದೂರ ಮಾಡಿದವು.+
ಆತನು ನಿಮ್ಮಿಂದ ತನ್ನ ಮುಖವನ್ನ ಮರೆಮಾಡೋಕೆ ನಿಮ್ಮ ಪಾಪಗಳೇ ಕಾರಣವಾದವು,
ನೀವು ಹೇಳೋದನ್ನ ಕೇಳಿಸ್ಕೊಳ್ಳೋಕೆ ಆತನು ನಿರಾಕರಿಸಿದನು.+
ನಿಮ್ಮ ತುಟಿಗಳು ಸುಳ್ಳು ಹೇಳ್ತವೆ,+ ನಿಮ್ಮ ಬಾಯಿ ಅನೀತಿಯನ್ನ ಆಡುತ್ತೆ.
ಅವರು ಬೂಟಾಟಿಕೆಯ* ವಿಷ್ಯಗಳ ಮೇಲೆ ಭರವಸೆ ಇಟ್ಟು+ ಕೆಲಸಕ್ಕೆ ಬಾರದ ಮಾತುಗಳನ್ನ ಆಡ್ತಾರೆ.
ಅವರು ಸಮಸ್ಯೆಯನ್ನ ಗರ್ಭಧರಿಸಿ ಹಾನಿಕರ ವಿಷ್ಯಗಳನ್ನ ಹೆರ್ತಾರೆ.+
5 ಅವರು ವಿಷಪೂರಿತ ಹಾವಿನ ಮೊಟ್ಟೆಗಳನ್ನ ಇಡ್ತಾರೆ,
ಮೊಟ್ಟೆ ಒಡೆದಾಗ ಅದ್ರಿಂದ ವಿಷಕಾರೋ ಹಾವು ಹೊರಗೆ ಬರುತ್ತೆ.
ಯಾರಾದ್ರೂ ಆ ಮೊಟ್ಟೆಗಳನ್ನ ತಿಂದ್ರೆ ಸತ್ತುಹೋಗ್ತಾರೆ.
ಆ ಜನ್ರು ಜೇಡರ ಬಲೆಯನ್ನೂ ಹೆಣಿತಾರೆ.+
ಅವ್ರ ಕೆಲಸಗಳು ಹಾನಿಕರವಾಗಿವೆ,
ಅವರು ಹಿಂಸಾತ್ಮಕ ಕೆಲಸಗಳನ್ನ ಮಾಡ್ತಾರೆ.+
ಅವ್ರ ಯೋಚನೆಗಳು ಹಾನಿಕರ ಯೋಚನೆಗಳಾಗಿವೆ,
ಅವ್ರ ಮಾರ್ಗಗಳಲ್ಲಿ ನಾಶ ಮತ್ತು ವಿನಾಶಗಳಿವೆ.+
ಅವರು ತಮ್ಮ ಮಾರ್ಗಗಳನ್ನ ಅಂಕುಡೊಂಕಾಗಿ ಮಾಡ್ಕೊಂಡಿದ್ದಾರೆ,
ಆ ಮಾರ್ಗಗಳಲ್ಲಿ ನಡೆಯುವವರಿಗೆ ಶಾಂತಿ ಅನ್ನೋದೇ ಇರಲ್ಲ.+
9 ಹಾಗಾಗಿ ನ್ಯಾಯ ನಮ್ಮಿಂದ ತುಂಬ ದೂರದಲ್ಲಿದೆ,
ನೀತಿ ನಮ್ಮ ಹತ್ರನೂ ಬರ್ತಿಲ್ಲ.
ನಾವು ಬೆಳಕಿಗಾಗಿ ನಿರೀಕ್ಷಿಸ್ತಾ ಇದ್ದೀವಿ, ಆದ್ರೆ ಕತ್ತಲೆನೇ ಇದೆ,
ಪ್ರಕಾಶಕ್ಕಾಗಿ ಎದುರುನೋಡ್ತಾ ಇದ್ದೀವಿ, ಆದ್ರೆ ಕತ್ತಲೆಲೇ ನಡಿತಿದ್ದೀವಿ.+
ಸಂಜೆಯ ಕತ್ತಲಲ್ಲಿ ಎಡವೋ ತರ ಮಟಮಟ ಮಧ್ಯಾಹ್ನದ ಹೊತ್ತಲ್ಲಿ ಎಡವುತ್ತಿದ್ದೀವಿ,
ಬಲಿಷ್ಠ ವ್ಯಕ್ತಿಗಳ ಮಧ್ಯ ನಾವು ಸತ್ತವರ ತರ ಇದ್ದೀವಿ.
11 ನಾವೆಲ್ಲ ಕರಡಿ ತರ ಗುರುಗುಟ್ಟುತ್ತಿದ್ದೀವಿ,
ಪಾರಿವಾಳದ ತರ ದುಃಖದಿಂದ ಕೂಗ್ತಿದ್ದೀವಿ.
ನಾವು ನ್ಯಾಯಕ್ಕಾಗಿ ನಿರೀಕ್ಷಿಸ್ತಿದ್ದೀವಿ, ಆದ್ರೆ ಅದು ನಮಗೆ ಸಿಗ್ತಿಲ್ಲ,
ರಕ್ಷಣೆಗಾಗಿ ಎದುರು ನೋಡ್ತಿದ್ದೀವಿ, ಆದ್ರೆ ಅದು ನಮ್ಮಿಂದ ತುಂಬ ದೂರದಲ್ಲಿದೆ.
ನಮ್ಮ ದಂಗೆಗಳ ಬಗ್ಗೆ ನಮಗೆ ಗೊತ್ತಿದೆ,
ನಮ್ಮ ತಪ್ಪುಗಳ ಬಗ್ಗೆ ನಾವು ಚೆನ್ನಾಗಿ ತಿಳಿದಿದ್ದೀವಿ.+
13 ನಾವು ಪಾಪ ಮಾಡಿ, ಯೆಹೋವನನ್ನ ನಿರಾಕರಿಸಿದ್ದೀವಿ,
ನಮ್ಮ ದೇವರನ್ನ ಹಿಂಬಾಲಿಸದೆ ಆತನಿಗೆ ಬೆನ್ನುಹಾಕಿದ್ದೀವಿ.
ನಾವು ದಬ್ಬಾಳಿಕೆಯ ಮತ್ತು ದಂಗೆಯ ಬಗ್ಗೆ ಮಾತಾಡಿದ್ದೀವಿ,+
ನಮ್ಮ ಹೃದಯಗಳಲ್ಲಿ ಸುಳ್ಳುಗಳನ್ನ ಇಟ್ಕೊಂಡು ಅವುಗಳ ಬಗ್ಗೆ ಮಾತಾಡ್ಕೊಂಡ್ವಿ.+
14 ನ್ಯಾಯನ ಹಿಂದಕ್ಕೆ ತಳ್ಳಲಾಗಿದೆ,+
ನೀತಿ ದೂರದಲ್ಲಿ ನಿಂತಿದೆ,+
ಸತ್ಯ* ಪಟ್ಟಣದ ಮುಖ್ಯಸ್ಥಳದಲ್ಲಿ* ಎಡವಿದೆ,
ಪ್ರಾಮಾಣಿಕತೆಗೆ ಪಟ್ಟಣವನ್ನ ಪ್ರವೇಶಿಸೋಕೆ ಆಗ್ತಿಲ್ಲ.
16 ಸಹಾಯ ಮಾಡೋಕೆ ಅಲ್ಲಿ ಯಾರೂ ಇಲ್ಲದ್ದನ್ನ ನೋಡಿ,
ಮತ್ತೊಬ್ಬನ ಪರ ವಹಿಸೋಕೆ ಯಾರೂ ಇಲ್ಲದ್ದನ್ನ ಕಂಡು ಆತನಿಗೆ ತುಂಬ ಆಶ್ಚರ್ಯ ಆಯ್ತು,
ಹಾಗಾಗಿ ಆತನು ತನ್ನ ಸ್ವಂತ ತೋಳಿಂದ ರಕ್ಷಣೆ* ತಂದುಕೊಟ್ಟನು,
ಆತನ ಸ್ವಂತ ನೀತಿನೇ ಆತನನ್ನ ಬೆಂಬಲಿಸಿತು.
18 ಅವರು ಮಾಡಿದ ಕೆಲಸಕ್ಕೆ ಆತನು ಅವ್ರಿಗೆ ಪ್ರತಿಫಲ ಕೊಡ್ತಾನೆ,+
ತನ್ನ ಶತ್ರುಗಳಿಗೆ ತನ್ನ ಕ್ರೋಧ ತೋರಿಸ್ತಾನೆ, ಅವ್ರಿಗೆ ತಕ್ಕ ಶಾಸ್ತಿ ಮಾಡ್ತಾನೆ.+
ದ್ವೀಪಗಳಿಗೆ ಕೊಡಬೇಕಾಗಿದ್ದ ಶಿಕ್ಷೆಯನ್ನ ತಪ್ಪದೆ ಅವುಗಳಿಗೆ ಕೊಡ್ತಾನೆ.
19 ಪಶ್ಚಿಮದಲ್ಲಿರುವವರು ಯೆಹೋವನ ಹೆಸ್ರಿಗೆ ಹೆದರ್ತಾರೆ,
ಪೂರ್ವದಲ್ಲಿರುವವರು ಆತನ ಮಹಿಮೆಗೆ ಭಯಪಡ್ತಾರೆ,
ಯಾಕಂದ್ರೆ ಆತನು ರಭಸವಾಗಿ ಹರಿತಿರೋ ನದಿ ತರ ಬರ್ತಾನೆ,
ಅದನ್ನ ಹರಿಯೋ ತರ ಯೆಹೋವನ ಪವಿತ್ರ ಶಕ್ತಿನೇ ಮಾಡುತ್ತೆ.
20 ಯೆಹೋವ ಹೀಗೆ ಹೇಳ್ತಿದ್ದಾನೆ “ಬಿಡುಗಡೆ ಮಾಡುವವನು+ ಚೀಯೋನಿಗೂ
ತಪ್ಪು ಮಾಡುವುದನ್ನ ಬಿಟ್ಟುಬಿಟ್ಟಿರೋ ಯಾಕೋಬನ ವಂಶದವರ+ ಹತ್ರಕ್ಕೂ ಬರ್ತಾನೆ.”+
21 “ಇದು ನಾನು ಅವ್ರ ಜೊತೆ ಮಾಡ್ಕೊಂಡಿರೋ ಒಪ್ಪಂದ”+ ಅಂತ ಯೆಹೋವ ಹೇಳ್ತಿದ್ದಾನೆ. “ನಿನ್ನ ಮೇಲಿರೋ ನನ್ನ ಪವಿತ್ರ ಶಕ್ತಿಯನ್ನ ಮತ್ತು ನಿನ್ನ ಬಾಯಲ್ಲಿ ನಾನು ಇಟ್ಟಿರೋ ನನ್ನ ಮಾತುಗಳನ್ನ ನಿನ್ನ ಬಾಯಿಂದಾಗಲಿ ನಿನ್ನ ಮಕ್ಕಳ, ಮೊಮ್ಮಕ್ಕಳ ಬಾಯಿಂದಾಗಲಿ ಯಾವತ್ತೂ ತೆಗೆದುಹಾಕಲ್ಲ” ಅಂತ ಯೆಹೋವ ಹೇಳ್ತಿದ್ದಾನೆ.