ಎಫೆಸದವರಿಗೆ ಬರೆದ ಪತ್ರ
2 ಅಷ್ಟೇ ಅಲ್ಲ, ನೀವು ನಿಮ್ಮ ಅಪರಾಧ, ಪಾಪಗಳಿಂದಾಗಿ ಸತ್ತಿದ್ರೂ ದೇವರು ನಿಮ್ಮನ್ನ ಬದುಕಿಸಿದನು.+ 2 ಒಂದು ಸಮಯದಲ್ಲಿ ನೀವು ಈ ಲೋಕದ* ಪ್ರಕಾರ ನಡೀತಿದ್ರಿ.+ ಈ ಲೋಕದ ಮನೋಭಾವವನ್ನ ಆಳ್ತಿರೋ ರಾಜನ ಇಷ್ಟದ ಪ್ರಕಾರ ಮಾಡ್ತಿದ್ರಿ. ಆ ಮನೋಭಾವ+ ಗಾಳಿ+ ತರ ಎಲ್ಲ ಕಡೆ ಇದೆ. ಅದು ಮಾತು ಕೇಳದ ಜನ್ರನ್ನ ಹಾಳು ಮಾಡ್ತಾ ಇದೆ. 3 ಹಿಂದೆ ನಾವೆಲ್ರೂ ಆ ಜನ್ರ ತರ ಇದ್ವಿ. ಯಾಕಂದ್ರೆ ನಾವು ನಮ್ಮ ಪಾಪ ತುಂಬಿರೋ ಆಸೆಗಳಿಗೆ ತಕ್ಕ ಹಾಗೆ ನಡೀತಿದ್ವಿ,+ ನಮ್ಮ ಯೋಚ್ನೆ ಪ್ರಕಾರ ವರ್ತಿಸ್ತಿದ್ವಿ.+ ಬೇರೆಲ್ಲ ಜನ್ರ ತರ ನಾವು ಹುಟ್ಟಿದಾಗಿಂದಾನೇ ದೇವರ ಕೋಪಕ್ಕೆ ಗುರಿಯಾಗಿದ್ವಿ.+ 4 ಆದ್ರೆ ದೇವರು ಕರುಣಾಮಯಿ.+ ಆತನಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದೆ.+ 5 ಹಾಗಾಗಿ ನಾವು ನಮ್ಮ ಅಪರಾಧಗಳಿಂದಾಗಿ ಸತ್ತಿದ್ರೂ ದೇವರು ನಮ್ಮನ್ನ ಬದುಕಿಸಿ ಕ್ರಿಸ್ತನ ಜೊತೆ ಒಂದು ಮಾಡಿದನು.+ ದೇವರು ಅಪಾರ ಕೃಪೆಯಿಂದ ನಿಮ್ಮನ್ನ ರಕ್ಷಿಸಿದನು. 6 ಕ್ರಿಸ್ತ ಯೇಸು ಜೊತೆ ಒಂದಾಗಿರೋ ನಮ್ಮನ್ನ ದೇವರು ಜೀವಂತವಾಗಿ ಎಬ್ಬಿಸಿ ಕ್ರಿಸ್ತನ ಜೊತೆ ಸ್ವರ್ಗದಲ್ಲಿ ಕೂರಿಸಿದನು.+ 7 ಮುಂದೆ ಬರೋ ಕಾಲದಲ್ಲಿ* ಕ್ರಿಸ್ತ ಯೇಸು ಜೊತೆ ಒಂದಾಗಿರೋ ನಮ್ಮ ಕಡೆಗೆ ದೇವರು ತನ್ನ ಅಪಾರ ಕೃಪೆಯನ್ನ ಹೇರಳವಾಗಿ, ಉದಾರವಾಗಿ ತೋರಿಸೋಕೆ ಹೀಗೆ ಮಾಡಿದನು.
8 ನಿಮ್ಮಲ್ಲಿ ನಂಬಿಕೆ ಇರೋದ್ರಿಂದ ದೇವರು ಅಪಾರ ಕೃಪೆ ತೋರಿಸಿ ನಿಮ್ಮನ್ನ ರಕ್ಷಿಸಿದನು.+ ಈ ರಕ್ಷಣೆ ಸಿಕ್ಕಿದ್ದು ನಿಮ್ಮಿಂದ ಅಲ್ಲ, ಅದು ದೇವರು ಕೊಟ್ಟ ಉಡುಗೊರೆ. 9 ಅದು ನಿಮ್ಮ ಕೆಲಸದಿಂದ ಬಂದ ಸಂಬಳನೂ ಅಲ್ಲ.+ ಹಾಗಾಗಿ ಕೊಚ್ಕೊಳ್ಳೋಕೆ ಯಾರಿಗೂ ಕಾರಣ ಇಲ್ಲ. 10 ನಾವು ದೇವರ ಕೈಕೆಲಸ ಆಗಿದ್ದೀವಿ ಮತ್ತು ಕ್ರಿಸ್ತ ಯೇಸು ಜೊತೆ ಒಂದಾಗಿರೋದ್ರಿಂದ+ ಒಳ್ಳೇ ಕೆಲಸಗಳನ್ನ ಮಾಡೋಕೆ ನಮ್ಮನ್ನ ದೇವರು ಸೃಷ್ಟಿ ಮಾಡಿದನು.+ ನಾವು ಈ ಕೆಲಸಗಳನ್ನ ಮಾಡಬೇಕಂತ ದೇವರು ಮುಂಚೆನೇ ತೀರ್ಮಾನ ಮಾಡಿದ್ದನು.
11 ನಿಮಗೆ ನೆನಪಿದ್ಯಾ? ಮನುಷ್ಯರಿಂದ ಸುನ್ನತಿಯಾದವರು ಬೇರೆ ಜನಾಂಗದವ್ರಾದ ನಿಮ್ಮನ್ನ ಒಂದು ಸಮಯದಲ್ಲಿ “ಸುನ್ನತಿ ಆಗದ ಜನ” ಅಂತ ಕರಿತಿದ್ರು. 12 ಆಗ ನಿಮಗೆ ಕ್ರಿಸ್ತ ಯಾರಂತ ಗೊತ್ತಿರಲಿಲ್ಲ, ನೀವು ಇಸ್ರಾಯೇಲ್ ಜನಾಂಗದಿಂದ ದೂರ ಇದ್ರಿ, ಮಾತು ಕೊಟ್ಟಾಗ, ಒಪ್ಪಂದ ಮಾಡ್ಕೊಂಡಾಗ ನೀವು ಅದ್ರ ಭಾಗ ಆಗಿರಲಿಲ್ಲ.+ ಈ ಲೋಕದಲ್ಲಿ ಜೀವಿಸ್ತಿದ್ದ ನಿಮಗೆ ನಿರೀಕ್ಷೆ ಇರಲಿಲ್ಲ, ದೇವರು ಯಾರಂತ ಗೊತ್ತೂ ಇರಲಿಲ್ಲ.+ 13 ಆದ್ರೆ ಈಗ ನೀವು ಕ್ರಿಸ್ತ ಯೇಸು ಜೊತೆ ಒಂದಾಗಿದ್ದೀರ. ಹಾಗಾಗಿ ಒಂದು ಸಮಯದಲ್ಲಿ ದೇವರಿಂದ ದೂರ ಇದ್ದ ನೀವು ಕ್ರಿಸ್ತನ ರಕ್ತದಿಂದ ಆತನ ಹತ್ರ ಬಂದಿದ್ದೀರ. 14 ಕ್ರಿಸ್ತ ನಮಗೆ ಶಾಂತಿ ಕೊಟ್ಟಿದ್ದಾನೆ.+ ಆತನು ಎರಡು ಗುಂಪುಗಳನ್ನ ಒಂದು ಮಾಡಿ+ ಅವ್ರ ಮಧ್ಯ ಇದ್ದ ಗೋಡೆಯನ್ನ ಬೀಳಿಸಿಬಿಟ್ಟನು.+ 15 ಕ್ರಿಸ್ತ ತನ್ನ ದೇಹವನ್ನ ಬಲಿ ಕೊಟ್ಟು ಎರಡು ಗುಂಪುಗಳ ಮಧ್ಯ ಇದ್ದ ವೈರತ್ವವನ್ನ ಅಂದ್ರೆ ನಿಯಮ, ಆಜ್ಞೆಗಳಿರೋ ನಿಯಮ ಪುಸ್ತಕವನ್ನ ಕೊನೆ ಮಾಡಿದನು. ಎರಡು ಗುಂಪುಗಳನ್ನ ತನ್ನ ಜೊತೆ ಒಂದು ಮಾಡಿ ಅವ್ರನ್ನ ಒಂದು ಹೊಸ ಜನಾಂಗವಾಗಿ ಮಾಡೋಕೆ+ ಮತ್ತು ಅವ್ರಿಗೆ ಶಾಂತಿ ಕೊಡೋಕೆ ಆತನು ಹೀಗೆ ಮಾಡಿದನು. 16 ಅಷ್ಟೇ ಅಲ್ಲ ಹಿಂಸಾ ಕಂಬದಿಂದ*+ ಆ ಎರಡೂ ಗುಂಪಿನ ಜನ್ರನ್ನ ಒಂದೇ ದೇಹವಾಗಿ ಮಾಡೋಕೆ ಮತ್ತು ದೇವರ ಜೊತೆ ಶಾಂತಿ ಸಂಬಂಧಕ್ಕೆ ತರೋಕೆ ಇದನ್ನ ಮಾಡಿದನು. ಕ್ರಿಸ್ತ ತನ್ನ ಮರಣದಿಂದಾನೇ ಆ ವೈರತ್ವಕ್ಕೆ ಅಂತ್ಯ ಹಾಡಿದನು.+ 17 ಆತನು ಬಂದು, ದೇವರಿಂದ ದೂರ ಇದ್ದ ನಿಮಗೂ ದೇವರ ಹತ್ರ ಇದ್ದವ್ರಿಗೂ ಶಾಂತಿಯ ಬಗ್ಗೆ ಸಿಹಿಸುದ್ದಿಯನ್ನ ಸಾರಿದನು. 18 ಆತನ ಮೂಲಕ ಎರಡು ಗುಂಪಿನವ್ರಾದ ನಾವು ಒಂದೇ ಪವಿತ್ರಶಕ್ತಿಯಿಂದ ಯಾವ ತಡೆನೂ ಇಲ್ದೆ ತಂದೆಗೆ ಪ್ರಾರ್ಥಿಸ್ತೀವಿ.
19 ಹಾಗಾಗಿ ನೀವು ಇನ್ಮುಂದೆ ಅಪರಿಚಿತರೂ ವಿದೇಶಿಯರೂ ಅಲ್ಲ.+ ಬದಲಿಗೆ ಪವಿತ್ರ ಜನ್ರ ಜೊತೆ ಪ್ರಜೆಗಳೂ+ ದೇವರ ಕುಟುಂಬದವರೂ ಆಗಿದ್ದೀರ.+ 20 ಅಪೊಸ್ತಲರು ಮತ್ತು ಪ್ರವಾದಿಗಳು ಅನ್ನೋ ಅಡಿಪಾಯದ ಮೇಲೆ ನಿಮ್ಮನ್ನ ಕಟ್ಟಲಾಗಿದೆ.+ ಆ ಅಡಿಪಾಯದ ಮೂಲೆಗಲ್ಲು ಕ್ರಿಸ್ತ ಯೇಸುನೇ.+ 21 ಇಡೀ ಕಟ್ಟಡದ ಎಲ್ಲ ಭಾಗಗಳು ಒಟ್ಟಿಗೆ ಗಟ್ಟಿಯಾಗಿ ಜೋಡಿಸಲಾಗಿವೆ. ಅದು ಕ್ರಿಸ್ತನ ಜೊತೆ ಒಂದಾಗಿರೋದ್ರಿಂದ+ ಯೆಹೋವನಿಗಾಗಿ* ಒಂದು ಪವಿತ್ರ ಆಲಯ ಆಗ್ತಿದೆ.+ 22 ಕ್ರಿಸ್ತನ ಜೊತೆ ಒಂದಾಗಿರೋದ್ರಿಂದ ನೀವೆಲ್ಲ ಸೇರಿಸಿ ಒಂದು ಕಟ್ಟಡವಾಗಿ ನಿರ್ಮಾಣ ಆಗ್ತಿದ್ದೀರ. ಆ ಕಟ್ಟಡ ದೇವರು ವಾಸಿಸೋಕೆ ಇರೋ ಆತನ ಆಲಯ ಆಗಿದೆ. ಆತನು ಅಲ್ಲಿ ತನ್ನ ಪವಿತ್ರಶಕ್ತಿ ಮೂಲಕ ವಾಸ ಮಾಡ್ತಾನೆ.+