ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.
31 ಯೆಹೋವನೇ, ನಾನು ನಿನ್ನಲ್ಲಿ ಆಶ್ರಯ ಪಡ್ಕೊಂಡಿದ್ದೀನಿ.+
ಯಾವತ್ತೂ ನನಗೆ ಅವಮಾನ ಆಗದೆ ಇರೋ ತರ ನೋಡ್ಕೊ.+
ನಿನ್ನ ನೀತಿಯ ಕಾರಣ ನನ್ನನ್ನ ಕಾಪಾಡು.+
2 ನಾನು ಹೇಳೋದನ್ನ ಬಗ್ಗಿ ಕೇಳಿಸ್ಕೊ.
ತಕ್ಷಣ ಬಂದು ನನ್ನನ್ನ ರಕ್ಷಿಸು.+
ನನಗಾಗಿ ಬೆಟ್ಟದ ಭದ್ರಕೋಟೆ ಆಗು,
ನನ್ನನ್ನ ರಕ್ಷಿಸೋಕೆ ಸುರಕ್ಷಿತ ಸ್ಥಳ ಆಗು.+
3 ಯಾಕಂದ್ರೆ ನೀನು ನನ್ನ ಕಡಿದಾದ ಬಂಡೆ, ನನ್ನ ಭದ್ರಕೋಟೆ.+
ನಿನ್ನ ಹೆಸ್ರಿಗೆ ತಕ್ಕ ಹಾಗೆ+ ನೀನು ನನ್ನನ್ನ ನಡಿಸ್ತೀಯ, ಮಾರ್ಗದರ್ಶಿಸ್ತೀಯ.+
5 ನಾನು ನನ್ನ ಜೀವವನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ.+
ಯೆಹೋವನೇ, ಸತ್ಯದ ದೇವರೇ*+ ನೀನು ನನ್ನನ್ನ ಬಿಡಿಸಿದ್ದೀಯ.
6 ಯಾವ ಪ್ರಯೋಜನಕ್ಕೂ ಬರದ ವ್ಯರ್ಥ ಮೂರ್ತಿಗಳನ್ನ ಆರಾಧಿಸೋರನ್ನ ನಾನು ದ್ವೇಷಿಸ್ತೀನಿ.
ನಾನು ಮಾತ್ರ ಯೆಹೋವನಲ್ಲೇ ಭರವಸೆ ಇಟ್ಟಿದ್ದೀನಿ.
7 ನಿನ್ನ ಶಾಶ್ವತ ಪ್ರೀತಿಯಿಂದ ನನಗೆ ತುಂಬ ಖುಷಿಯಾಗುತ್ತೆ,
ಯಾಕಂದ್ರೆ ನನ್ನ ಸಂಕಟವನ್ನ ನೀನು ನೋಡಿದ್ದೀಯ,+
ನನ್ನ ಮನದಾಳದ ಯಾತನೆಯನ್ನ ನೀನು ತಿಳ್ಕೊಂಡಿದ್ದೀಯ.
8 ನೀನು ನನ್ನನ್ನ ಶತ್ರುವಿನ ಕೈಗೆ ಒಪ್ಪಿಸದೆ,
ಸುರಕ್ಷಿತ ಜಾಗದಲ್ಲಿ* ನಿಲ್ಲಿಸಿದ್ದೀಯ.
9 ಯೆಹೋವನೇ, ನಾನು ತುಂಬ ಕಷ್ಟದಲ್ಲಿದ್ದೀನಿ. ನನಗೆ ದಯೆ ತೋರಿಸು.
ಕಡುಸಂಕಟದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+ ನನ್ನ ದೇಹದಲ್ಲಿ ಶಕ್ತಿನೇ ಇಲ್ಲ.+
ನನ್ನ ತಪ್ಪಿಂದಾಗಿ ನನ್ನ ಬಲ ಕುಗ್ಗಿಹೋಗ್ತಿದೆ,
ನನ್ನ ಎಲುಬು ಸವೆದುಹೋಗ್ತಿದೆ.+
11 ನನ್ನ ಎಲ್ಲ ಶತ್ರುಗಳು,
ವಿಶೇಷವಾಗಿ ನನ್ನ ಪರಿಚಿತರೇ ನನ್ನನ್ನ ಕೀಳಾಗಿ ನೋಡ್ತಿದ್ದಾರೆ.+
ನನ್ನ ಆಪ್ತರೇ ನನ್ನನ್ನ ನೋಡಿ ಭಯಪಡ್ತಾರೆ,
ನನ್ನನ್ನ ದಾರಿಯಲ್ಲಿ ನೋಡಿದ್ರೆ ಸಾಕು ಅವರು ನನ್ನಿಂದ ದೂರ ಓಡಿಹೋಗ್ತಾರೆ.+
12 ಸತ್ತವನನ್ನ ಮರೆಯೋ ತರ ಅವರು ನನ್ನನ್ನ ಮರೆತಿದ್ದಾರೆ, ಅವ್ರ ಹೃದಯದಿಂದ* ನನ್ನನ್ನ ತೆಗೆದುಹಾಕಿದ್ದಾರೆ.
ನಾನು ಒಡೆದ ಮಡಿಕೆ ತರ ಇದ್ದೀನಿ.
13 ನಾನು ನನ್ನ ಬಗ್ಗೆ ಸಿಕ್ಕಾಪಟ್ಟೆ ಕೆಟ್ಟ ಗಾಳಿಸುದ್ದಿಗಳನ್ನ ಕೇಳಿಸ್ಕೊಂಡಿದ್ದೀನಿ,
ಆತಂಕ ನನ್ನನ್ನ ಸುತ್ಕೊಂಡಿದೆ.+
ಅವ್ರೆಲ್ಲ ನನ್ನ ವಿರುದ್ಧ ಸೇರಿದಾಗ,
ನನ್ನ ಪ್ರಾಣ ತೆಗೀಬೇಕು ಅಂತ ಹೊಂಚುಹಾಕ್ತಾರೆ.+
14 ಆದ್ರೆ ಯೆಹೋವನೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ.+
“ನೀನೇ ನನ್ನ ದೇವರು” ಅಂತ ಜೋರಾಗಿ ಹೇಳ್ತೀನಿ.+
15 ನನ್ನ ಜೀವ* ನಿನ್ನ ಕೈಯಲ್ಲಿದೆ.
ನನ್ನ ಶತ್ರುಗಳ ಕೈಯಿಂದ, ನನಗೆ ಹಿಂಸೆ ಕೊಡೋರ ಕೈಯಿಂದ ನನ್ನನ್ನ ಬಿಡಿಸು.+
16 ನಿನ್ನ ಸೇವಕನ ಕಡೆ ತಿರುಗಿ ನೀನು ನಕ್ಕರೆ ಸಾಕು.+
ನಿನ್ನ ಶಾಶ್ವತ ಪ್ರೀತಿಯಿಂದ ನನ್ನನ್ನ ಕಾಪಾಡು.
17 ಯೆಹೋವನೇ, ನಾನು ನಿನಗೆ ಮೊರೆ ಇಡ್ತೀನಿ, ನನಗೆ ಅವಮಾನ ಆಗದ ಹಾಗೆ ನೋಡ್ಕೋ.+
ಕೆಟ್ಟವರಿಗೆ ಅವಮಾನ ಆಗಲಿ,+ ಸಮಾಧಿಯಲ್ಲಿ* ಬಾಯಿ ಮುಚ್ಕೊಂಡಿರಲಿ.+
ನಿನ್ನ ಮೇಲೆ ಭಯಭಕ್ತಿ ಇರೋರಿಗೆ ನೀನು ಅದನ್ನ ಕೂಡಿಸಿಟ್ಟಿದ್ದೀಯ,+
ನೀನು ಎಲ್ಲ ಜನ್ರ ಮುಂದೆ, ನಿನ್ನನ್ನ ಆಶ್ರಯ ಮಾಡ್ಕೊಂಡವ್ರಿಗೆ ಅದನ್ನ ತೋರಿಸಿದ್ದೀಯ.+
20 ಜನ್ರ ಸಂಚಿನಿಂದ ಕಾಪಾಡೋಕೆ,
ನೀನು ಅವ್ರನ್ನ ನಿನ್ನ ಸನ್ನಿಧಿಯಲ್ಲಿ ಬಚ್ಚಿಡ್ತೀಯ,+
ಪ್ರಾಣ ತೆಗಿಯೋ ದಾಳಿಯಿಂದ* ರಕ್ಷಿಸೋಕೆ,
ಅವ್ರನ್ನ ನಿನ್ನ ಆಸರೆಯಲ್ಲಿ ಮರೆಮಾಡ್ತೀಯ.+
21 ಯೆಹೋವನಿಗೆ ಹೊಗಳಿಕೆ ಸಿಗಲಿ,
ಯಾಕಂದ್ರೆ ಮುತ್ತಿಗೆ ಹಾಕಿದ್ದ ಪಟ್ಟಣದಲ್ಲಿ+ ನಾನಿದ್ದಾಗ, ಆತನು ತನ್ನ ಶಾಶ್ವತ ಪ್ರೀತಿಯನ್ನ ನನಗೆ ಅದ್ಭುತವಾಗಿ ತೋರಿಸಿದ್ದಾನೆ.+
22 ನಾನು ತುಂಬ ಹೆದರಿಹೋದೆ,
“ಅವರು ನನ್ನನ್ನ ಸಾಯಿಸಿಬಿಡ್ತಾರೆ” ಅಂದ್ಕೊಂಡೆ.+
ಆದ್ರೆ ನಾನು ಸಹಾಯಕ್ಕಾಗಿ ಮೊರೆಯಿಟ್ಟಾಗ ನೀನು ಅದನ್ನ ಕೇಳಿಸ್ಕೊಂಡೆ.+
23 ಯೆಹೋವನಿಗೆ ನಿಷ್ಠೆ ತೋರಿಸೋರೇ ಆತನನ್ನ ಪ್ರೀತಿಸಿ!+
24 ಯೆಹೋವನಿಗಾಗಿ ತಾಳ್ಮೆಯಿಂದ ಕಾಯ್ತಿರೋರೇ+