ಮಲಾಕಿ
3 “ನೋಡಿ! ನನ್ನ ಸಂದೇಶವಾಹಕನನ್ನ ಕಳಿಸ್ತಿದ್ದೀನಿ. ಅವನು ನನ್ನ ಮುಂದೆ ಹೋಗಿ ದಾರಿ ಸಿದ್ಧ ಮಾಡ್ತಾನೆ.+ ಆಮೇಲೆ ನೀವು ಹುಡುಕ್ತಿರೋ ನಿಜವಾದ ಒಡೆಯ ಥಟ್ಟನೆ ತನ್ನ ದೇವಾಲಯಕ್ಕೆ ಬರ್ತಾನೆ.+ ಅಷ್ಟೇ ಅಲ್ಲ ಸಂತೋಷದಿಂದ ನೀವು ಕಾಯ್ತಿರೋ ಒಪ್ಪಂದದ ಸಂದೇಶವಾಹಕನೂ ಬರ್ತಾನೆ. ನೋಡ್ತಾ ಇರಿ! ಅವನು ಖಂಡಿತ ಬರ್ತಾನೆ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
2 “ಆದ್ರೆ ಅವನು ಬರೋ ದಿನದಲ್ಲಿ ಯಾರು ತಾನೇ ಅವನನ್ನ ಎದುರಿಸ್ತಾರೆ? ಅವನು ಕಾಣಿಸ್ಕೊಳ್ಳುವಾಗ ಯಾರು ತಾನೇ ಅವನ ಮುಂದೆ ನಿಲ್ಲಕಾಗುತ್ತೆ? ಯಾಕಂದ್ರೆ ಅವನು ಲೋಹವನ್ನ ಶುದ್ಧೀಕರಿಸೋ ಬೆಂಕಿ ತರ ಇದ್ದಾನೆ, ಬಟ್ಟೆ ಶುದ್ಧ ಮಾಡೋ ಸಾಬೂನಿನ+ ತರ ಇದ್ದಾನೆ. 3 ಬೆಳ್ಳಿಯನ್ನ ಶೋಧಿಸಿ ಕಲ್ಮಶ ತೆಗಿಯೋ ಅಕ್ಕಸಾಲಿಗನ ತರ ಕೂತು,+ ಲೇವಿಯ ಗಂಡು ಮಕ್ಕಳನ್ನ ಶುದ್ಧೀಕರಿಸ್ತಾನೆ. ಅವ್ರನ್ನ ಬೆಳ್ಳಿಬಂಗಾರದ ಹಾಗೆ ಶುದ್ಧೀಕರಿಸ್ತಾನೆ. ಅವರು ಯೆಹೋವನಿಗೆ ನೀತಿನಿಷ್ಠೆಯಿಂದ ಉಡುಗೊರೆ ಅರ್ಪಣೆಯನ್ನ ಅರ್ಪಿಸ್ತಾರೆ. 4 ಹಳೇ ಕಾಲದ ತರಾನೇ ಯೆಹೂದದ ಮತ್ತು ಯೆರೂಸಲೇಮಿನ ಉಡುಗೊರೆ ಅರ್ಪಣೆ ಯೆಹೋವನನ್ನ ಸಂತೋಷಪಡಿಸುತ್ತೆ.+
5 ನಿಮಗೆ ತೀರ್ಪು ಮಾಡೋಕೆ ನಿಮ್ಮ ಹತ್ರ ಬರ್ತಿನಿ. ಮಾಟಮಂತ್ರ,+ ವ್ಯಭಿಚಾರ, ಸುಳ್ಳು ಆಣೆ ಮಾಡುವವ್ರ,+ ವಿದೇಶಿಯರಿಗೆ ಸಹಾಯ ಮಾಡೋಕೆ ಒಪ್ಪದ,*+ ಅಷ್ಟೇ ಅಲ್ಲ ಕೂಲಿ ಕೆಲಸಗಾರರಿಗೆ,+ ವಿಧವೆಯರಿಗೆ, ಅನಾಥರಿಗೆ* ಮೋಸ ಮಾಡುವವರ+ ವಿರುದ್ಧ ತಕ್ಷಣ ಕ್ರಮ ತಗೊಳ್ತೀನಿ. ಯಾಕಂದ್ರೆ ಅವ್ರಿಗೆ ನನ್ನನ್ನ ಕಂಡ್ರೆ ಭಯ ಇಲ್ಲ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
6 “ಯಾಕಂದ್ರೆ ನಾನು ಯೆಹೋವ. ನಾನು ಬದಲಾಗಲ್ಲ.*+ ನೀವು ಯಾಕೋಬನ ಮಕ್ಕಳಾಗಿರೋದ್ರಿಂದ ನೀವು ಇನ್ನೂ ಸಂಪೂರ್ಣ ನಾಶವಾಗಿಲ್ಲ. 7 ನಿಮ್ಮ ಪೂರ್ವಜರ ಕಾಲದಿಂದ್ಲೂ ನೀವು ನನ್ನ ಆಜ್ಞೆಗಳನ್ನ ಪಾಲಿಸದೆ ಮುರಿತಾ ಬಂದಿದ್ದೀರ.+ ನನ್ನ ಹತ್ರ ವಾಪಸ್ ಬನ್ನಿ, ಆಗ ನಾನೂ ನಿಮ್ಮ ಹತ್ರ ವಾಪಸ್ ಬರ್ತಿನಿ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
ಆದ್ರೆ “ನಾವು ವಾಪಸ್ ಬರೋದು ಹೇಗೆ?” ಅಂತ ನೀವು ಕೇಳ್ತೀರ.
8 “ದೇವರನ್ನ ದೋಚೋಕೆ ಮನುಷ್ಯನಿಂದ ಸಾಧ್ಯನಾ? ಆದ್ರೆ ನೀವು ದೋಚ್ತೀರ”
ಆಮೇಲೆ “ನಾವು ಹೇಗೆ ನಿನ್ನನ್ನ ದೋಚಿದ್ವಿ?” ಅಂತ ಕೇಳ್ತೀರ.
“ದಶಮಾಂಶವನ್ನ* ತರದೆ ಮತ್ತು ಕಾಣಿಕೆಗಳನ್ನ ಕೊಡದೆ ನೀವು ನನ್ನನ್ನ ದೋಚಿದ್ದೀರ.9 ನೀವು ನನ್ನನ್ನ ದೋಚೋದ್ರಿಂದ ಖಂಡಿತ ಶಾಪಕ್ಕೆ* ಗುರಿಯಾಗಿದ್ದೀರ. ನೀವು ಮಾತ್ರವಲ್ಲ ಇಡೀ ದೇಶ ನನ್ನನ್ನ ಕೊಳ್ಳೆ ಹೊಡಿತಿದೆ. 10 ನನ್ನ ಆಲಯದಲ್ಲಿ ಆಹಾರದ ಕೊರತೆಯಾಗದೆ ಇರೋ ತರ+ ಎಲ್ಲದ್ರ ಹತ್ತರ ಒಂದು ಭಾಗವನ್ನ* ಸಂಪೂರ್ಣವಾಗಿ ದೇವಾಲಯಕ್ಕೆ* ತಗೊಂಡು ಬನ್ನಿ.+ ನಿಮಗೆ ಯಾವ ವಿಷ್ಯದಲ್ಲೂ ಕೊರತೆಯಾಗದ ಹಾಗೆ ನಾನು ಸ್ವರ್ಗದ ಬಾಗಿಲುಗಳನ್ನ ತೆರೆದು+ ಆಶೀರ್ವಾದಗಳ ಸುರಿಮಳೆಯನ್ನೇ ಸುರಿಸ್ತೀನಾ* ಅಂತ ದಯವಿಟ್ಟು ನನ್ನನ್ನ ಪರೀಕ್ಷಿಸಿ ನೋಡಿ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
11 “ನಿಮ್ಮ ಬೆಳೆಯನ್ನ ನುಂಗಿಹಾಕೋ ಕೀಟಗಳನ್ನ ನಾನು ಗದರಿಸ್ತೀನಿ. ಅವು ನಿಮ್ಮ ದೇಶದ ಬೆಳೆಯನ್ನ ಹಾಳುಮಾಡಲ್ಲ. ನಿಮ್ಮ ದ್ರಾಕ್ಷಿತೋಟ ಹಣ್ಣುಬಿಡದೆ ಇರಲ್ಲ”+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
12 “ನೀವು ಸಂತೋಷವಾಗಿ ಇದ್ದೀರ ಅಂತ ಎಲ್ಲ ದೇಶಗಳು ಹೇಳಲೇಬೇಕು.+ ಯಾಕಂದ್ರೆ ನಿಮ್ಮ ದೇಶ ಸಂತೋಷಕ್ಕೆ ಕಾರಣವಾಗುತ್ತೆ” ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
13 “ನೀವು ನನ್ನ ವಿರುದ್ಧ ತುಂಬ ಕಠಿಣ ಮಾತುಗಳನ್ನ ಆಡಿದ್ದೀರ” ಅಂತ ಯೆಹೋವ ಹೇಳ್ತಿದ್ದಾನೆ.
ಆದ್ರೆ “ನಾವು ನಿನ್ನ ವಿರುದ್ಧ ಏನು ಮಾತಾಡಿದ್ವಿ?” ಅಂತ ನೀವು ಕೇಳ್ತೀರ.+
14 “ನೀವು ಹೀಗೆ ಹೇಳ್ತೀರ: ‘ದೇವರ ಸೇವೆ ಮಾಡೋದು ವ್ಯರ್ಥ.+ ನಮ್ಮ ಜವಾಬ್ದಾರಿ ನಿಭಾಯಿಸಿದ್ದಕ್ಕೆ ನಮಗೇನು ಸಿಕ್ತು? ಸೈನ್ಯಗಳ ದೇವರಾದ ಯೆಹೋವನ ಮುಂದೆ ನಮ್ಮ ಪಾಪಗಳನ್ನ ಒಪ್ಕೊಂಡು ನಮಗೇನು ಲಾಭ ಆಯ್ತು? 15 ಅಹಂಕಾರಿಗಳು ಸಂತೋಷವಾಗಿ ಇರ್ತಾರೆ, ಕೆಟ್ಟವರು ಏಳಿಗೆ ಆಗ್ತಾರೆ ಅಂತ ಅನಿಸುತ್ತೆ.+ ಅವರು ದೇವರನ್ನ ಪರೀಕ್ಷಿಸೋ ದುಸ್ಸಾಹಸ ಮಾಡ್ತಾರೆ. ಆದ್ರೂ ಅವ್ರಿಗೆ ಏನೂ ಆಗಲ್ಲ.’”
16 ಆಗ ಯೆಹೋವನಿಗೆ ಭಯಪಡುವವರು ಮಾತಾಡ್ಕೊಂಡ್ರು. ಪ್ರತಿಯೊಬ್ಬನು ತನ್ನ ಜೊತೆಗಾರನ ಜೊತೆ ಮಾತಾಡ್ಕೊಂಡ. ಯೆಹೋವ ಅದನ್ನ ಗಮನಕೊಟ್ಟು ಕೇಳಿಸ್ಕೊಳ್ತಾ ಇದ್ದನು. ಯೆಹೋವನ ಭಯ ಇರುವವ್ರ ಮತ್ತು ಆತನ ಹೆಸ್ರನ್ನ ಧ್ಯಾನಿಸುವವ್ರ*+ ಹೆಸ್ರುಗಳನ್ನ ದೇವರು ತನ್ನ ಮುಂದೆಯಿದ್ದ ಜ್ಞಾಪಕ ಪುಸ್ತಕದಲ್ಲಿ ಬರೆದಿಡೋಕೆ+ ಆಜ್ಞೆ ಕೊಟ್ಟನು.
17 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ಆ ದಿನದಲ್ಲಿ ನಾನು ಅವ್ರನ್ನ ನನ್ನ ವಿಶೇಷ ಸೊತ್ತನ್ನಾಗಿ*+ ಮಾಡ್ಕೊಳ್ತೀನಿ. ಆಗ ಅವರು ನನ್ನವರಾಗ್ತಾರೆ.+ ಒಬ್ಬ ತಂದೆ ತನ್ನ ವಿಧೇಯ ಮಗನಿಗೆ ಕನಿಕರ ತೋರಿಸೋ ಹಾಗೆ ನಾನು ಅವ್ರಿಗೆ ಕನಿಕರ ತೋರಿಸ್ತೀನಿ.+ 18 ಆಗ ನೀವು ನೀತಿವಂತನಿಗೂ ಕೆಟ್ಟವನಿಗೂ+ ಮತ್ತು ದೇವರನ್ನ ಆರಾಧಿಸುವವನಿಗೂ ಆರಾಧಿಸದವನಿಗೂ ಇರೋ ವ್ಯತ್ಯಾಸವನ್ನ ಮತ್ತೊಮ್ಮೆ ನೋಡ್ತೀರ.”