ಇಬ್ರಿಯರಿಗೆ ಬರೆದ ಪತ್ರ
6 ಹಾಗಾಗಿ ಕ್ರಿಸ್ತನ ಬಗ್ಗೆ ನಾವು ಮೊದಮೊದ್ಲು ಕಲಿತ ಬೋಧನೆಗಳೇ+ ಸಾಕು ಅಂತ ಹೇಳ್ದೇ ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರೋಣ.+ ಮೂಲ ಬೋಧನೆಗಳನ್ನ ಅಂದ್ರೆ ವ್ಯರ್ಥ* ಕೆಲಸಗಳಿಗಾಗಿ ಪಶ್ಚಾತ್ತಾಪ, ದೇವರ ಮೇಲೆ ನಂಬಿಕೆ, 2 ಬೇರೆ ಬೇರೆ ದೀಕ್ಷಾಸ್ನಾನ, ಕೈಗಳನ್ನ ಇಡೋದು,+ ಸತ್ತವರಿಗೆ ಮತ್ತೆ ಜೀವ ಬರೋ ವಿಷ್ಯ,+ ಶಾಶ್ವತ ನ್ಯಾಯತೀರ್ಪು ಇವುಗಳ ಬಗ್ಗೆ ಮಾತ್ರ ಪದೇಪದೇ ಕಲಿಯೋದು ಬೇಡ. 3 ನಿಜ ಏನಂದ್ರೆ ದೇವರ ಸಹಾಯದಿಂದ ನಾವು ಪ್ರಗತಿ ಮಾಡ್ತಾ ಪ್ರೌಢರಾಗೋಕೆ ಆಗುತ್ತೆ.
4 ಕೆಲವರು ಸತ್ಯದ ಬೆಳಕನ್ನ, ದೇವರಿಂದ ಉಡುಗೊರೆಯನ್ನ,* ಪವಿತ್ರಶಕ್ತಿಯನ್ನ ಈ ಹಿಂದೆ ಪಡೆದಿದ್ರು.+ 5 ದೇವರ ಶ್ರೇಷ್ಠ ಮಾತು ಮತ್ತು ಮುಂದೆ ಸಿಗೋ ಲೋಕದ ಆಶೀರ್ವಾದಗಳನ್ನ* ರುಚಿನೋಡಿದ್ರು. 6 ಆದ್ರೆ ಅವ್ರೀಗ ನಂಬಿಕೆಯಿಂದ ಬಿದ್ದುಹೋಗಿದ್ದಾರೆ.+ ಅವ್ರಿಗೆ ಪುನಃ ಪಶ್ಚಾತ್ತಾಪಪಡೋಕೆ ಸಹಾಯ ಮಾಡಕ್ಕಾಗಲ್ಲ. ಯಾಕಂದ್ರೆ ಅವರು ದೇವರ ಮಗನನ್ನ ಮತ್ತೆ ಮರದ ಕಂಬಕ್ಕೆ ಜಡಿತಾರೆ, ಆತನನ್ನ ಎಲ್ರ ಮುಂದೆ ಅವಮಾನ ಮಾಡ್ತಾರೆ.+ 7 ಉದಾಹರಣೆಗೆ ಆಗಾಗ ಬೀಳೋ ಮಳೆ ದೇವರು ನೆಲಕ್ಕೆ ಕೊಡೋ ಆಶೀರ್ವಾದ. ಮಳೆನೀರನ್ನ ನೆಲ ಹೀರ್ಕೊಂಡು ರೈತನಿಗೆ ಫಲ ಕೊಡುತ್ತೆ. 8 ಆದ್ರೆ ನೆಲದಲ್ಲಿ ಮುಳ್ಳುಗಿಡಗಳು ಕಳೆಗಳು ಬೆಳೆದ್ರೆ ಆ ನೆಲ ಏನೂ ಉಪಯೋಗಕ್ಕೆ ಬರಲ್ಲ. ಅದು ಬೇಗ ಶಾಪಕ್ಕೆ ಗುರಿಯಾಗುತ್ತೆ. ಕೊನೆಗೆ ಅದನ್ನ ಸುಟ್ಟು ಹಾಕಲಾಗುತ್ತೆ.
9 ಪ್ರಿಯರೇ, ನಾವು ಹೀಗೆ ಹೇಳಿದ್ರೂ ನೀವು ಅವ್ರ ತರ ಇಲ್ಲ, ರಕ್ಷಣೆಗೆ ನಡೆಸೋ ಕೆಲಸಗಳನ್ನ ಮಾಡ್ತಿದ್ದೀರಿ ಅನ್ನೋ ಭರವಸೆ ನಮಗಿದೆ. 10 ನೀವು ಪವಿತ್ರ ಜನ್ರಿಗೆ ಸೇವೆ ಮಾಡಿದ್ರಿ, ಇನ್ನೂ ಮಾಡ್ತಾ ಇದ್ದೀರ. ನಿಮ್ಮ ಈ ಕೆಲಸವನ್ನ ದೇವರ ಹೆಸ್ರಿಗಾಗಿ ನೀವು ತೋರಿಸಿದ ಪ್ರೀತಿಯನ್ನ ದೇವರು ಮರಿಯಲ್ಲ.+ ಯಾಕಂದ್ರೆ ಆತನು ಅನ್ಯಾಯ ಮಾಡಲ್ಲ. 11 ಮುಂಚೆಯಿಂದ ನೀವು ಮಾಡ್ತಾ ಬಂದ ಹಾಗೆ ಪ್ರತಿಯೊಬ್ರೂ ಕಷ್ಟಪಟ್ಟು ಸೇವೆ ಮಾಡ್ತಾ ಇರಬೇಕು ಅನ್ನೋದು ನಮ್ಮ ಇಷ್ಟ. ಆಗ ನಿಮ್ಮ ನಿರೀಕ್ಷೆ+ ನಿಜವಾಗುತ್ತೆ ಅನ್ನೋ ಪೂರ್ಣ ಭರವಸೆ ಕೊನೆ ತನಕ ನಿಮಗಿರುತ್ತೆ.+ 12 ಹಾಗಾಗಿ ನೀವು ಸೋಮಾರಿ ಆಗಬೇಡಿ.+ ನಂಬಿಕೆ, ತಾಳ್ಮೆ ತೋರಿಸೋ ಮೂಲಕ ದೇವರು ಮಾತು ಕೊಟ್ಟದ್ದನ್ನ ಪಡೆದವ್ರ ತರ ನೀವೂ ಆಗಬೇಕು.
13 ದೇವರು ಅಬ್ರಹಾಮನಿಗೆ ಮಾತುಕೊಟ್ಟಾಗ ತನ್ನ ಮೇಲೆನೇ ಆಣೆ ಇಟ್ಟನು.+ ಯಾಕಂದ್ರೆ ಆತನಿಗಿಂತ ದೊಡ್ಡವನು ಯಾರೂ ಇರಲಿಲ್ಲ. 14 ದೇವರು ಅಬ್ರಹಾಮನಿಗೆ “ನಾನು ಖಂಡಿತ ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿಯನ್ನ ಲೆಕ್ಕ ಮಾಡೋಕೆ ಆಗದಷ್ಟು ಜಾಸ್ತಿ ಮಾಡ್ತೀನಿ” ಅಂತ ಮಾತು ಕೊಟ್ಟನು.+ 15 ದೇವರು ಆ ಮಾತು ಕೊಟ್ಟಿದ್ದು ಅಬ್ರಹಾಮ ತಾಳ್ಮೆ ತೋರಿಸಿದ ಮೇಲೆ. 16 ಮನುಷ್ಯರು ತಮಗಿಂತ ದೊಡ್ಡವ್ರ ಮೇಲೆ ಆಣೆ ಇಡ್ತಾರೆ. ಅದು ಅವ್ರ ಮಾತು ಸತ್ಯ ಅನ್ನೋದಕ್ಕೆ ಸಾಕ್ಷಿ ಆಗಿರೋದ್ರಿಂದ ಎಲ್ಲ ವಿವಾದನೂ ಅಲ್ಲಿಗೇ ಮುಗಿಯುತ್ತೆ.+ 17 ಅದೇ ರೀತಿ ದೇವರು ತಾನು ಮಾತು ಕೊಟ್ಟದ್ದನ್ನ ಆಸ್ತಿಯಾಗಿ ಪಡೆದವ್ರಿಗೆ ತನ್ನ ಉದ್ದೇಶ* ಬದಲಾಗಲ್ಲ ಅಂತ ಇನ್ನೂ ಸ್ಪಷ್ಟವಾಗಿ ತೋರಿಸೋಕೆ ಇಷ್ಟಪಟ್ಟನು.+ ಹಾಗಾಗಿ ಆಣೆಯಿಟ್ಟು ಹೇಳೋ ಮೂಲಕ ತಾನು ಕೊಟ್ಟ ಮಾತನ್ನ ಪಕ್ಕಾ ಮಾಡಿದನು.* 18 ದೇವರು ಕೊಟ್ಟ ಮಾತು, ಇಟ್ಟ ಆಣೆ ಯಾವತ್ತೂ ಬದಲಾಗಲ್ಲ. ಇದ್ರ ಬಗ್ಗೆ ಆತನು ಸುಳ್ಳು ಹೇಳೋಕೆ ಸಾಧ್ಯಾನೇ ಇಲ್ಲ.+ ಹಾಗಾಗಿ ಆಶ್ರಯ ಪಡಿಯೋಕೆ ದೇವರ ಹತ್ರ ಓಡಿ ಬಂದಿರೋ ನಾವು ನಮ್ಮ ಮುಂದೆ ಇಟ್ಟಿರೋ ನಿರೀಕ್ಷೆಯನ್ನ ಗಟ್ಟಿಯಾಗಿ ಹಿಡ್ಕೊಳ್ಳೋಕೆ ಆಗಿದೆ. 19 ಈ ನಿರೀಕ್ಷೆ+ ನಮ್ಮ ಜೀವನಕ್ಕೆ ಲಂಗರದ ಹಾಗಿದೆ. ಸಂಶಯಪಡದೆ ದೃಢವಾಗಿರೋಕೆ ಅದು ಸಹಾಯ ಮಾಡುತ್ತೆ ಮತ್ತು ಪರದೆ ದಾಟಿ ಹೋಗೋಕೆ ದಾರಿ ತೋರಿಸುತ್ತೆ.+ 20 ಯೇಸು+ ನಮಗಿಂತ ಮುಂಚೆ ಹೋಗಿ ನಮಗಾಗಿ ದಾರಿ ತೆರೆದು ಸಿದ್ಧ ಮಾಡಿದ್ದಾನೆ. ಮೆಲ್ಕಿಜೆದೇಕನ ಹಾಗೆ ಆತನು ಶಾಶ್ವತವಾಗಿ ಮಹಾ ಪುರೋಹಿತನಾಗಿದ್ದಾನೆ.+