ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ ಹೂವುಗಳು” ಅನ್ನೋ ರಾಗದಲ್ಲಿ ಹಾಡಬೇಕು. ಕೋರಹನ+ ಮಕ್ಕಳ ರಚನೆ. ಮಸ್ಕಿಲ್.* ಇದು ಪ್ರೇಮ ಗೀತೆ.
45 ಒಂದು ಒಳ್ಳೇ ವಿಷ್ಯದಿಂದ ನನ್ನ ಹೃದಯ ಉಕ್ಕಿಬರ್ತಿದೆ.
ನನ್ನ ನಾಲಿಗೆ ಒಬ್ಬ ನಿಪುಣ ಲೇಖಕನ*+ ಲೇಖನಿ*+ ತರ ಇರಲಿ.
2 ರಾಜನೇ, ಮನುಷ್ಯರಲ್ಲಿ ನಿನ್ನಂಥ ಸುರಸುಂದರಾಂಗ ಇನ್ನೊಬ್ಬ ಇಲ್ಲ.
ಒಳ್ಳೇ ಮಾತು ನಿನ್ನ ತುಟಿಯಿಂದ ಹರೀತಾ ಇರುತ್ತೆ.+
ಹಾಗಾಗಿ ದೇವರು ನಿನ್ನನ್ನ ಶಾಶ್ವತಕ್ಕೂ ಆಶೀರ್ವದಿಸ್ತಾನೆ.+
4 ವೈಭವದಿಂದ ಜಯವನ್ನ* ಸಾಧಿಸ್ತಾ ಹೋಗು,+
ಕುದುರೆ ಸವಾರಿ ಮಾಡ್ತಾ ದೀನರಿಗಾಗಿ, ಸತ್ಯಕ್ಕಾಗಿ ಮತ್ತು ನೀತಿಗಾಗಿ ಯುದ್ಧಮಾಡು,+
ನಿನ್ನ ಬಲಗೈ ಭಯವಿಸ್ಮಯ ಹುಟ್ಟಿಸೋ ವಿಷ್ಯಗಳನ್ನ ಮಾಡುತ್ತೆ.*
5 ನಿನ್ನ ಬಾಣಗಳು ಚೂಪಾಗಿವೆ. ಅವು ರಾಜನ ಶತ್ರುಗಳ ಹೃದಯಗಳನ್ನ ಛಿದ್ರಮಾಡುತ್ತೆ,+
ಜನಾಂಗಗಳ ಜನ್ರನ್ನ ನಿನ್ನ ಮುಂದೆ ಬೀಳಿಸುತ್ತೆ.+
7 ನೀನು ಒಳ್ಳೇತನ ಪ್ರೀತಿಸಿದೆ,+ ಕೆಟ್ಟತನವನ್ನ ದ್ವೇಷಿಸಿದೆ.+
ಹಾಗಾಗಿ ನಿನ್ನ ದೇವರು ಬೇರೆಲ್ಲ ರಾಜರಿಗಿಂತ ಜಾಸ್ತಿ ನಿನ್ನನ್ನ ಸಂತೋಷ ಅನ್ನೋ ತೈಲದಿಂದ+ ಅಭಿಷೇಕಿಸಿದ್ದಾನೆ.+
8 ನಿನ್ನ ಇಡೀ ಬಟ್ಟೆ ಗಂಧರಸ,* ಅಗರುಮರ* ಮತ್ತು ದಾಲ್ಚಿನ್ನಿ ಚಕ್ಕೆಯ* ಸುವಾಸನೆ ಬರುತ್ತೆ,
ಅರಮನೆಯಲ್ಲಿರೋ ಆನೆ ದಂತದಿಂದ ಮಾಡಿರೋ ತಂತಿವಾದ್ಯ ನಿನಗೆ ಖುಷಿಕೊಡುತ್ತೆ.
9 ಗೌರವಾನ್ವಿತ ಸ್ತ್ರೀಯರಲ್ಲಿ ನಿನ್ನ ರಾಜಕುಮಾರಿಯರೂ ಇದ್ದಾರೆ.
ರಾಣಿ ಓಫೀರಿನ ಚಿನ್ನದಿಂದ+ ಅಲಂಕರಿಸ್ಕೊಂಡು ನಿನ್ನ ಬಲಗಡೆ ನಿಂತಿದ್ದಾಳೆ.
10 ನನ್ನ ಮಗಳೇ, ನಾನು ಹೇಳೋದನ್ನ ಕೇಳಿಸ್ಕೊಂಡು ಗಮನಕೊಡು,
ನಿನ್ನ ಜನ್ರನ್ನ, ನಿನ್ನ ಅಪ್ಪನ ಮನೆಯನ್ನ ಮರೆತುಬಿಡು.
11 ರಾಜ ನಿನ್ನ ರೂಪಲಾವಣ್ಯವನ್ನ ನೋಡೋಕೆ ಹಾತೊರಿತಾನೆ,
ಯಾಕಂದ್ರೆ ಆತನು ನಿನ್ನ ಒಡೆಯ,
ಹಾಗಾಗಿ ತಲೆಬಾಗಿ ಅವನಿಗೆ ನಮಸ್ಕಾರ ಮಾಡು.
12 ತೂರಿನ ಮಗಳು ಉಡುಗೊರೆ ತಗೊಂಡು ಬರ್ತಾಳೆ,
ದೊಡ್ಡ ದೊಡ್ಡ ಶ್ರೀಮಂತರು ನಿನ್ನ ಮೆಚ್ಚಿಗೆಯನ್ನ ಇಷ್ಟಪಡ್ತಾರೆ.
14 ನೇಯ್ದ ರಾಣಿಯ ಬಟ್ಟೆಗಳನ್ನ ಅವಳಿಗೆ ತೊಡಿಸಿ ರಾಜನ ಹತ್ರ ಕರ್ಕೊಂಡು ಬಂದ್ರು.
ಅವಳ ಹಿಂದೆ ಅವಳ ಸಖಿಯರಾದ ಕನ್ಯೆಯರೂ ರಾಜನ ಹತ್ರ ಬಂದ್ರು.
15 ಅವ್ರನ್ನ ಸಂತೋಷ, ಸಂಭ್ರಮದಿಂದ ಕರ್ಕೊಂಡು ಬರ್ತಾರೆ,
ಅವರು ರಾಜನ ಅರಮನೆಯನ್ನ ಪ್ರವೇಶಿಸ್ತಾರೆ.
16 ನಿನ್ನ ಮಕ್ಕಳು ನಿನ್ನ ಪೂರ್ವಜರ ಸ್ಥಾನವನ್ನ ಪಡ್ಕೊಳ್ತಾರೆ.
ನೀನು ಅವ್ರನ್ನ ಭೂಮಿಯಲ್ಲೆಲ್ಲ ಅಧಿಕಾರಿಗಳಾಗಿ ನೇಮಿಸ್ತೀಯ.+
17 ಮುಂದೆ ಬರೋ ಎಲ್ಲ ತಲೆಮಾರುಗಳಿಗೆ ನಾನು ನಿನ್ನ ಹೆಸ್ರನ್ನ ತಿಳಿಸ್ತೀನಿ.+
ಹಾಗಾಗಿ ದೇಶದ ಜನ್ರು ನಿನ್ನ ಹೆಸ್ರನ್ನ ಶಾಶ್ವತಕ್ಕೂ ಹೊಗಳ್ತಾರೆ.