ಯೆಶಾಯ
ನನ್ನ ಹತ್ರ ಬಂದು ಮಾತಾಡಲಿ.+
ತೀರ್ಪಿಗಾಗಿ ನಾವೆಲ್ಲ ಒಟ್ಟುಸೇರೋಣ ಬನ್ನಿ.
ನ್ಯಾಯವನ್ನ ತೀರಿಸೋಕೆ ತನ್ನ ಕಾಲ ಹತ್ರ* ಅವನನ್ನ ಕರೆದವನು ಯಾರು?
ಅವ್ರನ್ನ ಅವನ ಕತ್ತಿಯ ಮುಂದೆ ಧೂಳನ್ನಾಗಿ ಮಾಡಿದವನು ಯಾರು?
ಅವನ ಬಿಲ್ಲಿನ ಮುಂದೆ ಅವ್ರನ್ನ, ಗಾಳಿ ಬಡ್ಕೊಂಡು ಹೋಗೋ ಕೂಳೆ ತರ ಮಾಡಿದವನು ಯಾರು?
3 ಅವನು ಅವ್ರನ್ನ ಅಟ್ಟಿಸ್ಕೊಂಡು ಹೋಗ್ತಾನೆ, ಯಾವುದೇ ಅಡ್ಡಿಯಿಲ್ಲದೆ ಮುನ್ನುಗ್ತಾನೆ,
ಇಂದಿನ ತನಕ ಯಾವ ದಾರಿಗಳಲ್ಲಿ ಅವನು ಹೆಜ್ಜೆ ಇಟ್ಟಿರಲಿಲ್ವೋ ಅವುಗಳನ್ನ ಹಾದುಹೋಗ್ತಾನೆ.
4 ಇದನ್ನೆಲ್ಲ ಮಾಡಿದವನು ಯಾರು? ನೆರವೇರಿಸಿದವನು ಯಾರು?
ಆರಂಭದಿಂದ ಸಂತತಿಗಳನ್ನ ಒಟ್ಟುಸೇರಿಸಿದವನು ಯಾರು?
5 ಇದನ್ನ ನೋಡಿ ದ್ವೀಪಗಳು ಭಯಪಟ್ವು.
ಭೂಮಿಯ ಕಟ್ಟಕಡೆಯಲ್ಲಿ ವಾಸ ಮಾಡ್ತಿರೋರು ನಡುಗೋಕೆ ಶುರು ಮಾಡಿದ್ರು.
ಅವ್ರೆಲ್ಲ ಒಟ್ಟುಸೇರಿ ಬಂದ್ರು.
6 ಪ್ರತಿಯೊಬ್ಬ ತನ್ನ ಜೊತೆಗಾರನಿಗೆ ಸಹಾಯ ಮಾಡ್ತಾನೆ.
ತನ್ನ ಸಹೋದರನಿಗೆ “ಧೈರ್ಯವಾಗಿರು” ಅಂತಾನೆ.
7 ಕರಕುಶಲಗಾರ ಲೋಹದ ಕೆಲಸಗಾರನಿಗೆ ಧೈರ್ಯ ಹೇಳ್ತಾನೆ,+
ಸುತ್ತಿಗೆಯಿಂದ ಹೊಡೆದು ಲೋಹವನ್ನ ಸಮತಟ್ಟು ಮಾಡುವವನು
ಲೋಹವನ್ನ ಅಡಿಗಲ್ಲಿನ ಮೇಲಿಟ್ಟು ಅದಕ್ಕೆ ಆಕಾರ ಕೊಡೋಕೆ ಸುತ್ತಿಗೆಯಿಂದ ಹೊಡೆಯುವವನನ್ನ ಬಲಪಡಿಸ್ತಾನೆ.
“ಲೋಹ ಚೆನ್ನಾಗಿ ಬೆಸೆದ್ಕೊಂಡಿದೆ” ಅಂತ ಅವನು ಹೇಳ್ತಾನೆ.
ಆಮೇಲೆ ಮೂರ್ತಿ ಬೀಳದ ಹಾಗೆ ಅದಕ್ಕೆ ಮೊಳೆಗಳನ್ನ ಹೊಡಿತಾನೆ.
8 “ಆದ್ರೆ ಇಸ್ರಾಯೇಲೇ, ನೀನು ನನ್ನ ಸೇವಕ,+
ಯಾಕೋಬನೇ, ನಿನ್ನನ್ನ ನಾನು ಆರಿಸ್ಕೊಂಡಿದ್ದೀನಿ,+
ನೀನು ನನ್ನ ಸ್ನೇಹಿತ ಅಬ್ರಹಾಮನ ಸಂತತಿ.+
ನಾನು ನಿನಗೆ ಹೀಗೆ ಹೇಳಿದೆ ‘ನೀನು ನನ್ನ ಸೇವಕ.+
ನಾನು ನಿನ್ನನ್ನ ಆರಿಸ್ಕೊಂಡಿದ್ದೀನಿ, ನಿನ್ನನ್ನ ತಿರಸ್ಕರಿಸಲಿಲ್ಲ.+
10 ಹೆದರಬೇಡ. ಯಾಕಂದ್ರೆ ನಾನು ನಿನ್ನ ಜೊತೆ ಇದ್ದೀನಿ.+
ಕಳವಳಪಡಬೇಡ. ಯಾಕಂದ್ರೆ ನಾನು ನಿನ್ನ ದೇವರು.+
ನಾನು ನಿನ್ನನ್ನ ಬಲಪಡಿಸ್ತೀನಿ. ಹೌದು, ನಾನು ನಿನಗೆ ಸಹಾಯ ಮಾಡ್ತೀನಿ,+
ನಾನು ನಿನ್ನನ್ನ ನನ್ನ ಬಲಗೈಯಿಂದ* ಗಟ್ಟಿಯಾಗಿ ಹಿಡ್ಕೊಳ್ತೀನಿ.’
11 ನೋಡು! ಯಾರೆಲ್ಲ ನಿನ್ನ ವಿರುದ್ಧ ಕೋಪಗೊಂಡಿದ್ದಾರೋ ಅವರು ಅವಮಾನಕ್ಕೆ ಗುರಿಯಾಗ್ತಾರೆ, ನಾಚಿಕೆಗೆ ಒಳಗಾಗ್ತಾರೆ.+
ಯಾರೆಲ್ಲ ನಿನ್ನ ಜೊತೆ ಜಗಳ ಆಡ್ತಾರೋ ಅವರು ಹೇಳಹೆಸರಿಲ್ಲದ ಹಾಗೆ ನಾಶವಾಗಿ ಹೋಗ್ತಾರೆ.+
12 ನಿನ್ನ ವಿರುದ್ಧ ಹೋರಾಡಿದವರನ್ನ ನೀನು ಹುಡುಕಿದ್ರೂ ಅವರು ನಿನಗೆ ಸಿಗಲ್ಲ,
ನಿನ್ನ ಜೊತೆ ಯುದ್ಧ ಮಾಡಿದವರು ಅಸ್ತಿತ್ವದಲ್ಲೇ ಇಲ್ಲದ ಹಾಗೆ ಅಳಿದುಹೋಗ್ತಾರೆ.+
13 ಯಾಕಂದ್ರೆ ನಾನು, ನಿನ್ನ ದೇವರಾದ ಯೆಹೋವ, ನಿನ್ನ ಬಲಗೈಯನ್ನ ಹಿಡ್ಕೊಂಡಿದ್ದೀನಿ,
‘ಹೆದರಬೇಡ, ನಾನು ನಿನಗೆ ಸಹಾಯ ಮಾಡ್ತೀನಿ’ ಅಂತ ನಾನೇ ನಿನಗೆ ಹೇಳ್ತಿದ್ದೀನಿ.+
14 ಯಾಕೋಬನೇ, ಕ್ರಿಮಿ ತರ ನೀನು ಬಲಹೀನ ಆಗಿದ್ರೂ ಭಯಪಡಬೇಡ.+
ಇಸ್ರಾಯೇಲ್ಯರೇ ನಾನು ನಿನಗೆ ಸಹಾಯಮಾಡ್ತೀನಿ” ಅಂತ ನಿಮ್ಮನ್ನ ಬಿಡಿಸಿದವನೂ+ ಇಸ್ರಾಯೇಲ್ಯರ ಪವಿತ್ರ ದೇವರೂ ಆದ ಯೆಹೋವ ಹೇಳ್ತಿದ್ದಾನೆ.
15 “ನೋಡು! ನಾನು ನಿನ್ನನ್ನ ಕಣದಲ್ಲಿ ಉಪಯೋಗಿಸೋ ಮರದ ಬಂಡಿ ತರ ಮಾಡಿದ್ದೀನಿ,+
ಹೊಸದಾದ ಹಲ್ಲಿರೋ ಒಂದು ಒಕ್ಕುವ ಸಾಧನವನ್ನಾಗಿ ಮಾಡಿದ್ದೀನಿ.
ನೀನು ಪರ್ವತಗಳನ್ನ ತುಳಿದು ಅವುಗಳನ್ನ ಪುಡಿಪುಡಿ ಮಾಡ್ತೀಯ,
ಬೆಟ್ಟಗಳನ್ನ ಹೊಟ್ಟಿನ ತರ ಮಾಡ್ತೀಯ.
17 “ಕಷ್ಟದಲ್ಲಿರುವವರು ಮತ್ತು ಬಡವರು ನೀರಿಗಾಗಿ ಹುಡುಕ್ತಿದ್ದಾರೆ. ಆದ್ರೆ ಎಲ್ಲೂ ನೀರಿಲ್ಲ.
ಬಾಯಾರಿಕೆಯಿಂದ ಅವ್ರ ನಾಲಿಗೆ ಒಣಗಿಹೋಗಿದೆ.+
ಯೆಹೋವನಾದ ನಾನು ಅವ್ರಿಗೆ ಉತ್ರ ಕೊಡ್ತೀನಿ.+
ಇಸ್ರಾಯೇಲಿನ ದೇವರಾದ ನಾನು ಅವ್ರನ್ನ ತೊರೆದುಬಿಡಲ್ಲ.+
ಕಾಡನ್ನ ಆಪುಹುಲ್ಲಿರೋ ಕೆರೆಗಳನ್ನಾಗಿ ಬದಲಾಯಿಸ್ತೀನಿ,
ಬರಡು ಭೂಮಿಯನ್ನ ನೀರಿನ ಬುಗ್ಗೆಗಳನ್ನಾಗಿ ಮಾರ್ಪಡಿಸ್ತೀನಿ.+
20 ಆಗ ಎಲ್ಲ ಜನ್ರು ಇದು ಯೆಹೋವನ ಕೈಯಿಂದಾನೇ ಆಯ್ತು ಅಂತ,
ಇಸ್ರಾಯೇಲ್ಯರ ಪವಿತ್ರ ದೇವರು ಇದನ್ನ ಸೃಷ್ಟಿಮಾಡಿದ ಅಂತ ನೋಡಿ ತಿಳ್ಕೊಳ್ತಾರೆ.
ಗಮನಕೊಟ್ಟು ಅರ್ಥಮಾಡ್ಕೊಳ್ತಾರೆ.”+
21 “ನಿಮ್ಮ ಮೊಕದ್ದಮೆಯನ್ನ ಪ್ರಸ್ತುತಪಡಿಸಿ” ಅಂತ ಯೆಹೋವ ಹೇಳ್ತಿದ್ದಾನೆ.
“ನಿಮ್ಮ ವಾದವಿವಾದಗಳನ್ನ ಮಂಡಿಸಿ” ಅಂತ ಯಾಕೋಬನ ರಾಜ ಹೇಳ್ತಿದ್ದಾನೆ.
22 “ಆಧಾರಗಳನ್ನ ಕೊಡಿ, ಮುಂದೆ ಆಗಲಿರೋ ವಿಷ್ಯಗಳನ್ನ ನಮಗೆ ಹೇಳಿ.
ಅಥವಾ ಮುಂದೆ ಆಗಲಿರೋ ವಿಷ್ಯಗಳ ಬಗ್ಗೆ ಹೇಳಿ.+
ಹೌದು, ಒಳ್ಳೇದೋ ಕೆಟ್ಟದೋ ಏನಾದ್ರೊಂದು ಮಾಡಿ.
ಆಗ ನಾವು ಅದನ್ನ ನೋಡಿ ಆಶ್ಚರ್ಯಪಡ್ತೀವಿ.+
ನಿಮ್ಮನ್ನ ಆರಾಧಿಸೋಕೆ ಆಯ್ಕೆ ಮಾಡುವವರು ಮೂರ್ಖರು.+
ಅವನು ಜೇಡಿಮಣ್ಣನ್ನ ತುಳಿಯೋ ಹಾಗೆ ಅಧಿಪತಿಗಳನ್ನ* ತುಳಿದುಹಾಕ್ತಾನೆ,+
ಕುಂಬಾರ ಜೇಡಿಮಣ್ಣನ್ನ ತುಳಿಯೋ ತರ ಅವನು ಅವ್ರನ್ನ ತುಳಿತಾನೆ.
26 ನಾವು ತಿಳ್ಕೊಳ್ಳೋ ಹಾಗೆ, ಆರಂಭದಿಂದ ಇದ್ರ ಬಗ್ಗೆ ಹೇಳಿದವರು ಯಾರು?
‘ಆತನು ಹೇಳಿದ್ದು ಸರಿ’ ಅಂತ ನಾವು ಹೇಳೋ ಹಾಗೆ ಪ್ರಾಚೀನ ಕಾಲದಲ್ಲೇ ಅದನ್ನ ಹೇಳಿದವರು ಯಾರು?+
ನಿಜಕ್ಕೂ, ಯಾರೂ ಅದರ ಬಗ್ಗೆ ಸಾರಲಿಲ್ಲ!
ಯಾರೂ ಅದ್ರ ಬಗ್ಗೆ ಹೇಳಲಿಲ್ಲ!
ನಿಮ್ಮಿಂದ ಯಾರೂ ಏನೂ ಕೇಳಿಸ್ಕೊಳ್ಳಲಿಲ್ಲ!”+
27 “ಏನೆಲ್ಲ ಆಗುತ್ತೆ ನೋಡು!” ಅಂತ ಚೀಯೋನಿಗೆ ಮೊಟ್ಟಮೊದಲು ಹೇಳಿದವನು ನಾನೇ.+
ಅಷ್ಟೇ ಅಲ್ಲ ಈ ಸಿಹಿಸುದ್ದಿಯನ್ನ ಯೆರೂಸಲೇಮಿಗೆ ಹೇಳೋಕೆ ಒಬ್ಬನನ್ನ ಕಳಿಸ್ತೀನಿ.+
28 ನಾನು ನೋಡ್ತಾ ಇದ್ದೆ, ಆದ್ರೆ ಅಲ್ಲಿ ಯಾರೂ ಇರಲಿಲ್ಲ,
ಸಲಹೆಯನ್ನ ಕೊಡೋಕೆ ಅವ್ರಲ್ಲಿ ಒಬ್ಬನೂ ಇರಲಿಲ್ಲ.
ಉತ್ರ ಕೊಡು ಅಂತ ನಾನು ಅವ್ರನ್ನ ಕೇಳ್ತಾ ಇದ್ದೆ.
29 ನೋಡು! ಅವ್ರೆಲ್ಲ ಒಂದು ಭ್ರಮೆ ತರ ಇದ್ದಾರೆ.*
ಅವ್ರ ಕೆಲಸಗಳೆಲ್ಲ ಪೊಳ್ಳು.
ಅವರು ಅಚ್ಚಲ್ಲಿ ಹೊಯ್ದು ಮಾಡಿದ ಲೋಹದ ಮೂರ್ತಿಗಳು ಗಾಳಿ ತರ ಇವೆ, ವ್ಯರ್ಥವಾಗಿವೆ.+