ಕೀರ್ತನೆ
ದಾವೀದನ ಕೀರ್ತನೆ.
א [ಆಲೆಫ್]
25 ಯೆಹೋವನೇ, ನಾನು ನಿನ್ನ ಕಡೆ ತಿರುಗಿಕೊಳ್ತೀನಿ.
ב [ಬೆತ್]
ನನ್ನ ಕಷ್ಟಗಳನ್ನ ನೋಡಿ ನನ್ನ ಶತ್ರುಗಳು ಖುಷಿಪಡೋಕೆ ಬಿಡಬೇಡ.+
ג [ಗಿಮೆಲ್]
3 ನಿನ್ನಲ್ಲಿ ನಿರೀಕ್ಷೆ ಇಡೋರಿಗೆ ಯಾವತ್ತೂ ಅವಮಾನ ಆಗಲ್ಲ,+
ಆದ್ರೆ ಕಾರಣ ಇಲ್ಲದೆ ನಿನಗೆ ಮೋಸ ಮಾಡೋರಿಗೆ ಅವಮಾನ ಕಟ್ಟಿಟ್ಟ ಬುತ್ತಿ.*+
ד [ಡಾಲತ್]
ה [ಹೆ]
5 ನಿನ್ನ ಸತ್ಯದ ದಾರಿಯಲ್ಲಿ ನನ್ನನ್ನ ನಡೆಸು, ಅದನ್ನ ನನಗೆ ಕಲಿಸು.+
ಯಾಕಂದ್ರೆ ನೀನೇ ನನ್ನ ರಕ್ಷಣೆಯ ದೇವರು.
ו [ವಾವ್]
ದಿನವಿಡೀ ನಾನು ನಿನ್ನಲ್ಲೇ ನಿರೀಕ್ಷೆ ಇಟ್ಟಿದ್ದೀನಿ.
ז [ಜಯಿನ್]
6 ಯೆಹೋವನೇ, ನೀನು ಯಾವಾಗ್ಲೂ* ತೋರಿಸ್ತಾ ಬಂದಿರೋ+
ನಿನ್ನ ಕರುಣೆಯನ್ನ, ನಿನ್ನ ಶಾಶ್ವತ ಪ್ರೀತಿಯನ್ನ ನೆನಪಿಸ್ಕೊ.+
ח [ಹೆತ್]
7 ಯೆಹೋವನೇ, ನೀನು ಒಳ್ಳೆಯವನಾಗಿರೋದ್ರಿಂದ,+
ಶಾಶ್ವತ ಪ್ರೀತಿ ತೋರಿಸೋದ್ರಿಂದ ನನ್ನನ್ನ ನೆನಪಿಸ್ಕೊ,+
ನಾನು ಮಾಡಿದ ಪಾಪಗಳನ್ನ, ನನ್ನ ಅಪರಾಧಗಳನ್ನ ನೆನಪಿಸ್ಕೊಬೇಡ.
ט [ಟೆತ್]
8 ಯೆಹೋವ ಒಳ್ಳೆಯವನು, ನೀತಿವಂತ.+
ಹಾಗಾಗಿ ಆತನು ಪಾಪಿಗಳಿಗೆ ಬದುಕೋ ದಾರಿಯನ್ನ ಹೇಳಿಕೊಡ್ತಾನೆ.+
י [ಯೋದ್]
כ [ಕಾಫ್]
10 ದೇವರು ಹೇಳಿದ್ದನ್ನ+ ಜನರು ಮಾಡೋವಾಗ, ಆತನ ಒಪ್ಪಂದವನ್ನ+ ಪಾಲಿಸೋವಾಗ,
ಯೆಹೋವ ತನ್ನ ಶಾಶ್ವತ ಪ್ರೀತಿಯನ್ನ ಅವರಿಗೆ ತೋರಿಸ್ತಾನೆ ಮತ್ತು ನಂಬಿಗಸ್ತನಾಗಿ ಇರ್ತಾನೆ.
ל [ಲಾಮೆದ್]
11 ಯೆಹೋವನೇ, ನನ್ನ ತಪ್ಪು ಎಷ್ಟೇ ದೊಡ್ಡದಾಗಿದ್ರೂ,
ನಿನ್ನ ಹೆಸರಿಗೋಸ್ಕರ ಅದನ್ನ ಕ್ಷಮಿಸಿಬಿಡು.+
מ [ಮೆಮ್]
נ [ನೂನ್]
ס [ಸಾಮೆಕ್]
14 ಯೆಹೋವನಲ್ಲಿ ಭಯಭಕ್ತಿ ಇರೋರಿಗೆ ಮಾತ್ರ ಆತನ ಆಪ್ತ ಸ್ನೇಹ ಸಿಗುತ್ತೆ,+
ಅಂಥವರಿಗೆ ಆತನು ತನ್ನ ಒಪ್ಪಂದದ ಬಗ್ಗೆ ಕಲಿಸ್ತಾನೆ.+
ע [ಅಯಿನ್]
פ [ಪೇ]
16 ನಿನ್ನ ಮುಖವನ್ನ ನನ್ನ ಕಡೆಗೆ ತಿರುಗಿಸಿ ಸ್ವಲ್ಪ ಕೃಪೆ ತೋರಿಸು,
ಯಾಕಂದ್ರೆ ನಾನು ಏಕಾಂಗಿ ಆಗಿದ್ದೀನಿ, ಯಾವ ಸಹಾಯನೂ ನನಗಿಲ್ಲ.
צ [ಸಾದೆ]
17 ನನ್ನ ಮನಸ್ಸಲ್ಲಿ ಚಿಂತೆ ಜಾಸ್ತಿ ಆಗ್ತಾನೇ ಇದೆ,+
ನನ್ನ ಸಂಕಟಗಳಿಂದ ನನ್ನನ್ನ ಬಿಡಿಸು.
ר [ರೆಶ್]
19 ನನಗೆ ಎಷ್ಟೊಂದು ಶತ್ರುಗಳಿದ್ದಾರೆ ಅಂತ ನೋಡು,
ಅವರು ನನ್ನನ್ನ ಎಷ್ಟು ಕ್ರೂರವಾಗಿ ದ್ವೇಷಿಸ್ತಾರೆ ಅಂತ ನೋಡು.
ש [ಶಿನ್]
20 ನನ್ನ ಪ್ರಾಣನ ಕಾದುಕಾಪಾಡು.+
ನಾನು ನಿನ್ನಲ್ಲಿ ಆಶ್ರಯ ಪಡ್ಕೊಂಡಿರೋದ್ರಿಂದ ನನಗೆ ಅವಮಾನ ಆಗದ ಹಾಗೆ ನೋಡ್ಕೊ.
ת [ಟಾವ್]
21 ನನ್ನ ನಿಯತ್ತು, ನನ್ನ ಪ್ರಾಮಾಣಿಕತೆ ನನ್ನನ್ನ ಕಾಪಾಡಲಿ.+
ಯಾಕಂದ್ರೆ ನನ್ನ ನಿರೀಕ್ಷೆ ನಿನ್ನಲ್ಲೇ.+
22 ದೇವರೇ, ಇಸ್ರಾಯೇಲನನ್ನು ಅವನ ಎಲ್ಲ ಕಷ್ಟಗಳಿಂದ ಕಾಪಾಡು.