ಯೆಶಾಯ
ವರ್ಷಗಳು ಉರುಳಿ ಹೋಗಲಿ,
ವಾರ್ಷಿಕ ಹಬ್ಬಗಳನ್ನ+ ಆಚರಿಸ್ತಾ ಇರಿ.
2 ಆದ್ರೆ ನಾನು ಅರೀಯೇಲಿನ ಮೇಲೆ ವಿಪತ್ತನ್ನ ತರ್ತಿನಿ,+
ಅಲ್ಲಿ ಗೋಳಾಟ ಮತ್ತು ಅಳು ಇರುತ್ತೆ,+
ಅದು ನನಗೆ ದೇವರ ಯಜ್ಞವೇದಿಯ ಅಗ್ನಿ ಕುಂಡದ ಹಾಗೆ ಆಗುತ್ತೆ.+
3 ನಾನು ನಿನ್ನ ಸುತ್ತ ಪಾಳೆಯ ಹೂಡ್ತೀನಿ,
ಬಲವಾದ ಮುಳ್ಳುಬೇಲಿಯಿಂದ ನಿನಗೆ ಮುತ್ತಿಗೆ ಹಾಕ್ತೀನಿ,
ನಿನ್ನ ವಿರುದ್ಧ ಮಣ್ಣುದಿಬ್ಬ ಕಟ್ತೀನಿ.+
ಮಾಟಮಂತ್ರ ಮಾಡುವವರ ಸ್ವರದ ಹಾಗೆ
ನಿನ್ನ ಸ್ವರ ನೆಲದಿಂದ ಬರುತ್ತೆ,+
ನಿನ್ನ ಮಾತುಗಳು ಧೂಳಿಂದ ಬರೋ ಪಿಸುಮಾತಿನ ತರ ಇರುತ್ತೆ.
5 ನಿನ್ನ ಶತ್ರುಗಳ* ದಂಡು ನುಣುಪಾದ ಧೂಳಿನ ತರ ಇರುತ್ತೆ,+
ಪ್ರಜೆಗಳನ್ನ ಹಿಂಸಿಸುವವರ ಗುಂಪು ಹಾರಿಹೋಗೋ ಹೊಟ್ಟಿನ ತರ ಇರುತ್ತೆ.+
ಇದೆಲ್ಲ ಒಂದೇ ಸಾರಿ, ತಟ್ಟನೇ ಆಗುತ್ತೆ.+
6 ಸೈನ್ಯಗಳ ದೇವರಾದ ಯೆಹೋವ ನಿನ್ನ ಕಡೆ ಗಮನ ಹರಿಸ್ತಾನೆ,
ಗುಡುಗಿಂದ, ಭೂಕಂಪದಿಂದ, ಮಹಾ ಶಬ್ದದಿಂದ,
ಚಂಡಮಾರುತದಿಂದ, ಬಿರುಗಾಳಿಯಿಂದ, ದಹಿಸೋ ಅಗ್ನಿಜ್ವಾಲೆಯಿಂದ ನಿನ್ನ ಕಡೆ ಗಮನ ಹರಿಸ್ತಾನೆ.”+
7 ಆಗ ಅರೀಯೇಲಿನ ವಿರುದ್ಧ ಯುದ್ಧ ಮಾಡೋ ಎಲ್ಲ ಜನಾಂಗಗಳ ಸಮೂಹ+
ಅಂದ್ರೆ, ಅದ್ರ ವಿರುದ್ಧ ಯುದ್ಧ ಮಾಡುವವರು,
ಅದ್ರ ಸುತ್ತ ಮುತ್ತಿಗೆಯ ಗೋಪುರಗಳನ್ನ ಕಟ್ಟುವವರು,
ಅದ್ರ ಮೇಲೆ ವಿಪತ್ತನ್ನ ತರುವವರು,
ಒಂದು ಕನಸಿನ ತರ, ರಾತ್ರಿಯ ಒಂದು ದರ್ಶನದ ತರ ಆಗ್ತಾರೆ.
8 ಹೌದು, ಆಗಿನ ಪರಿಸ್ಥಿತಿ ಹೇಗಿರುತ್ತಂದ್ರೆ,
ಹಸಿದವನು ತಾನು ತಿಂತಿದ್ದೀನಿ ಅಂತ ಕನಸು ಕಂಡು
ನಿದ್ದೆಯಿಂದ ಎದ್ದ ಮೇಲೆ ಹಸಿವಿಂದ ಇದ್ದ ಹಾಗಿರುತ್ತೆ,
ಬಾಯಾರಿದ ವ್ಯಕ್ತಿ ತಾನು ಕುಡಿತಿದ್ದೀನಿ ಅಂತ ಕನಸು ಕಂಡು,
ಎದ್ದ ಮೇಲೆ ಸುಸ್ತಾಗಿ ಬಾಯಾರಿಕೆಯಿಂದ ಇದ್ದ ಹಾಗಿರುತ್ತೆ.
ಚೀಯೋನ್ ಬೆಟ್ಟದ ವಿರುದ್ಧ ಯುದ್ಧ ಮಾಡೋ
ಜನಾಂಗಗಳ ಸಮೂಹಗಳ ವಿಷ್ಯದಲ್ಲೂ ಹೀಗೇ ಆಗುತ್ತೆ.+
ಅವರು ಮತ್ತಲ್ಲಿದ್ದಾರೆ, ಆದ್ರೆ ದ್ರಾಕ್ಷಾಮದ್ಯದಿಂದಲ್ಲ,
ಅವರು ತೂರಾಡ್ತಿದ್ದಾರೆ, ಆದ್ರೆ ಮದ್ಯದಿಂದಲ್ಲ.
10 ಯೆಹೋವ ನಿಮಗೆ ಗಾಢನಿದ್ರೆ ತಂದಿದ್ದಾನೆ,+
ನಿಮ್ಮ ಕಣ್ಣುಗಳಾಗಿರೋ ಪ್ರವಾದಿಗಳನ್ನ ಕುರುಡರನ್ನಾಗಿ ಮಾಡಿದ್ದಾನೆ,+
ನಿಮ್ಮ ತಲೆಗಳಾಗಿರೋ ದರ್ಶಿಗಳಿಗೆ ಮುಸುಕು ಹಾಕಿದ್ದಾನೆ.+
11 ನಿಮಗೆ ಪ್ರತಿಯೊಂದು ದರ್ಶನ ಮುದ್ರೆಹಾಕಿದ ಪುಸ್ತಕದ ಮಾತುಗಳ ತರ ಇರುತ್ತೆ.+ ಅದನ್ನ ಓದೋಕೆ ಆಗೋನಿಗೆ ಕೊಟ್ಟು “ದಯವಿಟ್ಟು, ಇದನ್ನ ಜೋರಾಗಿ ಓದು” ಅಂತ ಹೇಳಿದ್ರೆ ಅವನು “ನನಗೆ ಓದೋಕಾಗಲ್ಲ. ಯಾಕಂದ್ರೆ ಇದಕ್ಕೆ ಮುದ್ರೆಹಾಕಿದೆ” ಅಂತಾನೆ. 12 ಅದನ್ನ ಓದುಬರಹ ಗೊತ್ತಿಲ್ಲದವನಿಗೆ ಕೊಟ್ಟು “ದಯವಿಟ್ಟು, ಇದನ್ನ ಓದು” ಅಂದ್ರೆ ಅವನು “ನನಗೆ ಓದುಬರಹ ಗೊತ್ತೇ ಇಲ್ಲ” ಅಂತಾನೆ.
13 ಯೆಹೋವ ಹೀಗಂತಾನೆ “ಈ ಜನ ನನ್ನ ಹತ್ರ ಬರಬೇಕಂತ ಬರೀ ಬಾಯಿಮಾತಲ್ಲಿ ಹೇಳ್ತಿದ್ದಾರೆ,
ಕೇವಲ ತುಟಿಗಳಿಂದ ನನ್ನನ್ನ ಗೌರವಿಸ್ತಾರೆ,+
ಆದ್ರೆ ಅದನ್ನ ಮನಸಾರೆ ಮಾಡಲ್ಲ,
ನನ್ನ ಭಯವಿದೆ ಅಂತ ಹೇಳ್ಕೊಳ್ತಾರೆ,
ಆದ್ರೆ ಮನುಷ್ಯರ ಆಜ್ಞೆಗಳ ಪ್ರಕಾರನೇ ನಡಿತಾರೆ.+
ಅವ್ರ ಬುದ್ಧಿವಂತರ ಬುದ್ಧಿ ಹಾಳಾಗಿ ಹೋಗುತ್ತೆ,
ಅವ್ರ ವಿವೇಕಿಗಳ ವಿವೇಚನೆ ಮಾಯವಾಗಿ ಹೋಗುತ್ತೆ.”+
15 ತಮ್ಮ ಯೋಜನೆಗಳನ್ನ* ಯೆಹೋವನಿಂದನೇ ರಹಸ್ಯವಾಗಿಡೋಕೆ ಶತಪ್ರಯತ್ನ ಮಾಡುವವರ ಗತಿಯನ್ನ ಏನು ಹೇಳಲಿ.+
ಅವರು ಕತ್ತಲಲ್ಲಿ ತಮ್ಮ ಕೆಲಸಗಳನ್ನ ಮಾಡ್ತಾ
“ನಮ್ಮನ್ನ ಯಾರು ನೋಡ್ತಾರೆ?
ನಾವು ಏನ್ ಮಾಡ್ತೀವಿ ಅಂತ ಯಾರಿಗೆ ಗೊತ್ತಾಗುತ್ತೆ?” ಅಂತ ಮಾತಾಡ್ಕೊಳ್ತಾರೆ.+
16 ನೀವು ವಿಷ್ಯಗಳನ್ನ ತಿರುಚಿ ಮಾತಾಡ್ತೀರ!
ಕುಂಬಾರನನ್ನೂ ಮಣ್ಣನ್ನೂ ಒಂದೇ ರೀತಿ ನೋಡಬೇಕಾ?+
ಕುಂಬಾರ ಮಾಡಿದ ಪಾತ್ರೆ ಕುಂಬಾರನನ್ನ ನೋಡಿ
“ಇವನು ನನ್ನನ್ನ ಮಾಡಿಲ್ಲ” ಅಂತ ಹೇಳಕ್ಕಾಗುತ್ತಾ?+
ರೂಪಿಸಿದ ಒಂದು ವಸ್ತು ತನ್ನನ್ನ ರೂಪಿಸಿದವನನ್ನ ನೋಡಿ
“ಇವನಿಗೆ ಏನೂ ಗೊತ್ತಿಲ್ಲ” ಅಂತ ಹೇಳುತ್ತಾ?+
17 ಇನ್ನು ಸ್ವಲ್ಪ ಸಮಯದಲ್ಲೇ ಲೆಬನೋನ್ ಒಂದು ಹಣ್ಣಿನ ತೋಟವಾಗುತ್ತೆ,+
ಆ ಹಣ್ಣಿನ ತೋಟವನ್ನ ಒಂದು ಕಾಡಿನ ತರ ಎಣಿಸಲಾಗುತ್ತೆ.+
18 ಆ ದಿನ, ಕಿವುಡರು ಆ ಪುಸ್ತಕದಲ್ಲಿರೋ ಮಾತುಗಳನ್ನ ಆಲಿಸ್ತಾರೆ,
ಕತ್ತಲಿದ್ರೂ ಅಂಧಕಾರ ಇದ್ರೂ ಕುರುಡರಿಗೆ ಕಣ್ಣು ಕಾಣುತ್ತೆ.+
19 ಸೌಮ್ಯ ಸ್ವಭಾವದವರು ಯೆಹೋವನಿಂದಾಗಿ ಅತ್ಯಾನಂದಪಡ್ತಾರೆ,
ಬಡವರು ಇಸ್ರಾಯೇಲ್ಯರ ಪವಿತ್ರ ದೇವರಿಂದಾಗಿ ತುಂಬ ಹರ್ಷಿಸ್ತಾರೆ.+
20 ಯಾಕಂದ್ರೆ ಪ್ರಜೆಗಳನ್ನ ಹಿಂಸಿಸುವವನು ಇರೋದೇ ಇಲ್ಲ,
ಕೊಚ್ಚಿಕೊಳ್ಳುವವನು ಅಂತ್ಯ ಕಾಣ್ತಾನೆ,
ಹಾನಿ ಮಾಡೋಕೆ ತುದಿಗಾಲಲ್ಲಿ ನಿಂತಿರುವವರೆಲ್ಲ ನಾಶವಾಗಿ ಹೋಗ್ತಾರೆ,+
21 ಸುಳ್ಳು ಹೇಳಿ ಬೇರೆಯವರನ್ನ ಅಪರಾಧಿಗಳಾಗಿ ಮಾಡುವವರು,
ಪಟ್ಟಣದ ಬಾಗಿಲಲ್ಲಿ ನ್ಯಾಯದ ಪರವಾಗಿ ಮಾತಾಡುವವರಿಗೆ* ಪಾಶಗಳನ್ನ ಇಡುವವರು,+
ಅರ್ಥವಿಲ್ಲದೆ ವಾದಮಾಡ್ತಾ ನೀತಿವಂತನಿಗೆ ನ್ಯಾಯ ಸಿಗದ ಹಾಗೆ ಮಾಡುವವರು ಹೇಳಹೆಸ್ರಿಲ್ಲದ ಹಾಗೆ ಆಗ್ತಾರೆ.+
22 ಹಾಗಾಗಿ ಅಬ್ರಹಾಮನನ್ನ ಬಿಡಿಸಿದ ಯೆಹೋವ+ ಯಾಕೋಬನ ಮನೆತನಕ್ಕೆ ಹೀಗೆ ಹೇಳ್ತಿದ್ದಾನೆ
“ಇನ್ನು ಮೇಲೆ ಯಾಕೋಬ ನಾಚಿಕೆಗೆ ಗುರಿಯಾಗಲ್ಲ,
23 ಯಾಕಂದ್ರೆ ಆತನು ತನ್ನ ಕೈಕೆಲಸವಾಗಿರೋ ತನ್ನ ಮಕ್ಕಳನ್ನ ತನ್ನ ಮಧ್ಯ ನೋಡುವಾಗ,+
ಅವರು ನನ್ನ ಹೆಸ್ರನ್ನ ಗೌರವಿಸ್ತಾರೆ,
ಹೌದು ಯಾಕೋಬನ ಪವಿತ್ರ ದೇವ್ರನ್ನ ಗೌರವಿಸ್ತಾರೆ,
ಅವರು ಇಸ್ರಾಯೇಲಿನ ದೇವ್ರನ್ನ ವಿಸ್ಮಯದಿಂದ ಕಾಣ್ತಾರೆ.+
24 ಆಲೋಚನೆಯಲ್ಲಿ ತಪ್ಪುದಾರಿ ಹಿಡಿದಿರುವವರು ತಿಳುವಳಿಕೆಯನ್ನ ಸಂಪಾದಿಸ್ತಾರೆ,
ದೂರು ಹೇಳುವವರು ನಿರ್ದೇಶನವನ್ನ ಸ್ವೀಕರಿಸ್ತಾರೆ.”