ಯೆಹೋಶುವ
1 ಯೆಹೋವ ದೇವರ ಸೇವಕನಾಗಿದ್ದ ಮೋಶೆ ತೀರಿಹೋದ ಮೇಲೆ ಅವನ ಸಹಾಯಕ+ ಮತ್ತು ನೂನನ ಮಗ ಯೆಹೋಶುವನಿಗೆ* ಯೆಹೋವ ಹೀಗೆ ಹೇಳಿದನು:+ 2 “ನನ್ನ ಸೇವಕ ಮೋಶೆ ತೀರಿಹೋದ.+ ನೀನು ಈ ಜನ್ರನ್ನೆಲ್ಲ ಕರ್ಕೊಂಡು ಯೋರ್ದನ್ ನದಿ ದಾಟು. ನಾನು ಇಸ್ರಾಯೇಲ್ ಜನ್ರಿಗೆ ಕೊಡಬೇಕಂತ ಇರೋ ದೇಶಕ್ಕೆ ಅವ್ರನ್ನ ಕರ್ಕೊಂಡು ಹೋಗು.+ 3 ನಾನು ಮೋಶೆಗೆ ಮಾತು ಕೊಟ್ಟ ಹಾಗೆ ನೀವು ಕಾಲಿಡೋ ಎಲ್ಲ ಜಾಗವನ್ನ ನಿಮಗೆ ಕೊಡ್ತೀನಿ.+ 4 ನಿಮ್ಮ ದೇಶ ಈ ಕಾಡಿಂದ* ಲೆಬನೋನಿನ ತನಕ, ಮಹಾನದಿ ಯೂಫ್ರೆಟಿಸ್ ತನಕ ಇರುತ್ತೆ. ಅಂದ್ರೆ ಹಿತ್ತಿಯರ+ ದೇಶ ನಿಮ್ಮ ದೇಶ ಆಗುತ್ತೆ. ಪಶ್ಚಿಮದಲ್ಲಿ ಮಹಾ ಸಮುದ್ರದ ತನಕ* ಎಲ್ಲ ನಿಮ್ದೇ.+ 5 ನೀನು ಬದುಕಿರೋ ತನಕ ಯಾರೂ ನಿನ್ನನ್ನ ಸೋಲಿಸಕ್ಕಾಗಲ್ಲ.+ ನಾನು ಮೋಶೆ ಜೊತೆ ಇದ್ದ ಹಾಗೆ ನಿನ್ನ ಜೊತೆನೂ ಇರ್ತಿನಿ.+ ನಿನ್ನ ಕೈಬಿಡಲ್ಲ, ನಿನ್ನನ್ನ ಬಿಟ್ಟುಹೋಗಲ್ಲ.+ 6 ಧೈರ್ಯವಾಗಿರು, ದೃಢವಾಗಿರು.+ ನಾನು ಇವ್ರ ತಾತ-ಮುತ್ತಾತರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶಕ್ಕೆ ಇವ್ರನ್ನ ನೀನೇ ಕರ್ಕೊಂಡು ಹೋಗ್ತೀಯ.+
7 ಧೈರ್ಯವಾಗಿರು, ದೃಢವಾಗಿರು. ನನ್ನ ಸೇವಕ ಮೋಶೆ ನಿನಗೆ ಕೊಟ್ಟ ನಿಯಮ ಪುಸ್ತಕಕ್ಕೆ ಗಮನಕೊಡು. ಅದ್ರಲ್ಲಿರೋ ತರ ನಡ್ಕೊ. ಅದ್ರಲ್ಲಿರೋ ಒಂದು ನಿಯಮವನ್ನ ಸಹ ಮೀರಬಾರದು.+ ಆಗ ನೀನು ಎಲ್ಲ ತೀರ್ಮಾನಗಳನ್ನ ವಿವೇಕದಿಂದ ಮಾಡ್ತೀಯ.+ 8 ನೀನು ಈ ನಿಯಮ ಪುಸ್ತಕದಲ್ಲಿ ಇರೋ ವಿಷ್ಯಗಳ ಬಗ್ಗೆ ಮಾತಾಡ್ತಾ ಇರಬೇಕು.+ ಅದ್ರಲ್ಲಿ ಇರೋದನ್ನೆಲ್ಲ ತಪ್ಪದೆ ಪಾಲಿಸೋಕೆ ಅದನ್ನ ಹಗಲುರಾತ್ರಿ ಓದಿ ಧ್ಯಾನಿಸು.*+ ಆಗ ನೀನು ವಿವೇಕದಿಂದ ನಡ್ಕೊಳ್ತೀಯ, ಒಳ್ಳೇ ತೀರ್ಮಾನಗಳನ್ನ ಮಾಡ್ತೀಯ.+ 9 ನಾನು ಈಗಾಗ್ಲೇ ಹೇಳಿದ ಹಾಗೆ ಧೈರ್ಯವಾಗಿರು, ದೃಢವಾಗಿರು, ಹೆದರಬೇಡ, ಕಳವಳಪಡಬೇಡ. ಯಾಕಂದ್ರೆ ನೀನೆಲ್ಲೇ ಹೋದ್ರೂ ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇರ್ತಾನೆ.”+
10 ಆಮೇಲೆ ಯೆಹೋಶುವ ಜನ್ರ ಅಧಿಕಾರಿಗಳಿಗೆ 11 “ಪಾಳೆಯದ ಎಲ್ಲ ಕಡೆಗೆ ಹೋಗಿ ಜನ್ರಿಗೆ ಹೀಗೆ ಹೇಳಿ: ‘ಆಹಾರ ಸಿದ್ಧ ಮಾಡ್ಕೊಳ್ಳಿ. ಯಾಕಂದ್ರೆ ಇನ್ನು ಮೂರು ದಿನದಲ್ಲಿ ನೀವು ಯೋರ್ದನ್ ನದಿ ದಾಟ್ತೀರ, ನಿಮ್ಮ ದೇವರಾದ ಯೆಹೋವ ನಿಮಗೆ ಕೊಡ್ತೀನಿ ಅಂದಿದ್ದ ದೇಶಕ್ಕೆ ಹೋಗಿ ಅದನ್ನ ವಶ ಮಾಡ್ಕೊಳ್ತಿರ”+ ಅಂತ ಆಜ್ಞೆ ಕೊಟ್ಟ.
12 ಆಮೇಲೆ ಯೆಹೋಶುವ ರೂಬೇನ್ಯರಿಗೆ, ಗಾದ್ಯರಿಗೆ, ಮನಸ್ಸೆ ಕುಲದ ಅರ್ಧ ಜನ್ರಿಗೆ 13 “ಯೆಹೋವ ದೇವರ ಸೇವಕ ಮೋಶೆ ಹೇಳಿದ್ದನ್ನ ನೆನಪಿಸ್ಕೊಳ್ಳಿ:+ ‘ನಿಮ್ಮ ದೇವರಾದ ಯೆಹೋವ ನಿಮಗೆ ಈ ದೇಶ ಕೊಟ್ಟಿದ್ದಾನೆ, ನೆಮ್ಮದಿ ಸಿಗೋ ತರ ಮಾಡಿದ್ದಾನೆ. 14 ಮೋಶೆ ನಿಮಗೆ ಯೋರ್ದನಿನ ಈಕಡೆ*+ ಕೊಟ್ಟಿರೋ ದೇಶದಲ್ಲಿ ನಿಮ್ಮ ಹೆಂಡತಿ, ಮಕ್ಕಳು, ನಿಮ್ಮ ಪ್ರಾಣಿಗಳು ಇರಲಿ. ಆದ್ರೆ ಯುದ್ಧವೀರರಾಗಿರೋ+ ನೀವೆಲ್ಲ ಸೈನ್ಯ ಕಟ್ಕೊಂಡು ನಿಮ್ಮ ಸಹೋದರರಿಗಿಂತ ಮೊದ್ಲೇ ಈ ನದಿ ದಾಟಿ ಹೋಗಿ+ ಅವ್ರಿಗೆ ಸಹಾಯ ಮಾಡಿ. 15 ಯೆಹೋವ ನಿಮಗೆ ವಿಶ್ರಾಂತಿ ಕೊಟ್ಟ ಹಾಗೆ ನಿಮ್ಮ ಸಹೋದರರಿಗೂ ವಿಶ್ರಾಂತಿ ಕೊಡೋ ತನಕ, ನಿಮ್ಮ ದೇವರಾದ ಯೆಹೋವ ಅವ್ರಿಗೆ ಕೊಡೋ ದೇಶ ಸಿಗೋ ತನಕ ಅವ್ರಿಗೆ ಸಹಾಯ ಮಾಡಿ. ಆಮೇಲೆ ವಾಪಸ್ ಬಂದು ಯೋರ್ದನಿನ ಪೂರ್ವದಲ್ಲಿರೋ ದೇಶದಲ್ಲಿ ಅಂದ್ರೆ ಯೆಹೋವ ದೇವರ ಸೇವಕನಾದ ಮೋಶೆ ನಿಮಗೆ ಕೊಟ್ಟ ದೇಶದಲ್ಲಿ ಇರಿ’”+ ಅಂದ.
16 ಅವರು ಅದಕ್ಕೆ “ನೀನು ಹೇಳಿದ ಹಾಗೇ ಮಾಡ್ತೀವಿ, ಎಲ್ಲಿ ಕಳಿಸಿದ್ರೂ ಹೋಗ್ತೀವಿ.+ 17 ಮೋಶೆಯ ಮಾತು ಕೇಳಿದ ಹಾಗೆ ನಿನ್ನ ಮಾತೂ ಕೇಳ್ತೀವಿ. ನಿನ್ನ ದೇವರಾದ ಯೆಹೋವ ಮೋಶೆ ಜೊತೆ ಇದ್ದ ಹಾಗೆ ನಿನ್ನ ಜೊತೆನೂ ಇರಲಿ.+ 18 ಯಾರಾದ್ರೂ ನಿನ್ನ ಮಾತಿಗೆ ವಿರುದ್ಧ ಹೋದ್ರೆ, ನಿನ್ನ ಮಾತು ಕೇಳದಿದ್ರೆ ಅವ್ರಿಗೆ ಮರಣಶಿಕ್ಷೆ ಆಗ್ಲಿ.+ ನೀನು ಧೈರ್ಯವಾಗಿರು, ದೃಢವಾಗಿರು”+ ಅಂದ್ರು.