ಸ್ವದೇಶಿ ಯಾ ವಿದೇಶಿ—ನಿಮ್ಮನ್ನು ದೇವರು ಸ್ವಾಗತಿಸುತ್ತಾನೆ!
“ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ . . . ಭೂಮಂಡಲದಲ್ಲೆಲ್ಲಾ ವಾಸಮಾಡಿಸಿದನು.”—ಅ.ಕೃತ್ಯಗಳು 17:26.
1. ವಿದೇಶೀಯ ಸಂಸ್ಕೃತಿಗಳ ಜನರನ್ನು ಸ್ವೀಕರಿಸುವ ವಿಷಯದಲ್ಲಿ ಇಂದು ಅನೇಕ ಸ್ಥಳಗಳಲ್ಲಿ ಯಾವ ಅಹಿತಕರ ಸ್ಥಿತಿಗತಿ ಅಸ್ತಿತ್ವದಲ್ಲಿದೆ?
ಅನೇಕ ದೇಶಗಳಲ್ಲಿ ವಿದೇಶೀಯರ, ವಲಸೆಗಾರರ ಮತ್ತು ನಿರಾಶ್ರಿತರ ಕುರಿತಾದ ವ್ಯಾಕುಲವು ಹೆಚ್ಚುತ್ತಾ ಬರುತ್ತಿದೆಯೆಂದು ವೃತ್ತಪತ್ರಿಕಾ ವರದಿಗಳು ಸೂಚಿಸುತ್ತವೆ. ಲಕ್ಷಾಂತರ ಜನರು ಏಶ್ಯಾ, ಆಫ್ರಿಕಾ, ಯೂರೋಪ್ ಮತ್ತು ಅಮೆರಿಕಗಳ ಭಾಗಗಳಿಂದ ಹೊರಟುಬರಲು ಕಾತರದಿಂದಿದ್ದಾರೆ. ಪ್ರಾಯಶಃ ಜಜ್ಜುವ ದಾರಿದ್ರ್ಯ, ಒಳಯುದ್ಧ, ಅಥವಾ ಹಿಂಸೆಯಿಂದ ಪರಿಹಾರವನ್ನು ಅವರು ಹುಡುಕುತ್ತಿರಬಹುದು. ಆದರೆ ಅವರು ಬೇರೆ ಕಡೆಗಳಲ್ಲಿ ಸ್ವಾಗತಿಸಲ್ಪಡುತ್ತಾರೋ? ಟೈಮ್ ಪತ್ರಿಕೆಯು ಹೇಳಿದ್ದು: “ಯೂರೋಪಿನ ಕುಲಸಂಬಂಧದ ಕಲಬೆರಿಕೆಯು ಬದಲಾಗಲು ತೊಡಗುವಾಗ, ಪರದೇಶೀಯ ಸಂಸ್ಕೃತಿಗಳಿಗೆ ತಾವು ಒಮ್ಮೆ ನೆನಸಿದಷ್ಟು ಸಹಿಷ್ಣುತರಲ್ಲವೆಂದು ಕೆಲವು ದೇಶಗಳು ಕಂಡುಕೊಳ್ಳುತ್ತವೆ.” “ಬೇಡವಾದ” 1,80,00,000 ನಿರಾಶ್ರಿತರ ಕುರಿತು ಟೈಮ್ ಹೇಳಿದ್ದು: “ಸ್ಥಿರತೆಯ ರಾಷ್ಟ್ರಗಳಿಗೆ ಅವರು ನೀಡುವ ಪಂಥಾಹ್ವಾನವು ದಾಟಿಹೋಗಲಾರದು.”
2, 3. (ಎ) ಸ್ವೀಕರಣೀಯತೆಯ ಸಂಬಂಧದಲ್ಲಿ ಬೈಬಲ್ ಯಾವ ಚೈತನ್ಯಕರ ಆಶ್ವಾಸನೆಯನ್ನು ಕೊಡುತ್ತದೆ? (ಬಿ) ಜನರೊಂದಿಗೆ ದೇವರ ವ್ಯವಹಾರದ ಕುರಿತು ಶಾಸ್ತ್ರವಚನವು ಏನು ಹೇಳುತ್ತದೋ ಅದನ್ನು ಪರೀಕ್ಷಿಸುವ ಮೂಲಕ ನಾವು ಪ್ರಯೋಜನ ಪಡೆಯಬಲ್ಲೆವೇಕೆ?
2 ಈ ಸಂಬಂಧದಲ್ಲಿ ಏನೇ ವಿಕಾಸಗೊಳ್ಳಲಿ, ದೇವರು ಪ್ರತಿಯೊಂದು ರಾಷ್ಟ್ರದ ಜನರನ್ನು—ವ್ಯಕ್ತಿಯು ಸದ್ವೇಶ-ಜನಿತ ನಾಗರಿಕನಾಗಿರಲಿ, ವಲಸೆಗಾರನಾಗಿರಲಿ ಅಥವಾ ನಿರಾಶ್ರಿತನಾಗಿರಲಿ—ಸ್ವಾಗತಿಸುತ್ತಾನೆ. (ಅ.ಕೃತ್ಯಗಳು 10:34, 35) ‘ಆದರೂ,’ ಕೆಲವರನ್ನಬಹುದು, ‘ನೀವು ಹಾಗೆ ಹೇಳಲು ಹೇಗೆ ಸಾಧ್ಯ? ದೇವರು ಬೇರೆಯವರನ್ನೆಲ್ಲಾ ಬಿಟ್ಟು ಕೇವಲ ಪುರಾತನ ಇಸ್ರಾಯೇಲ್ಯರನ್ನು ಮಾತ್ರವೇ ತನ್ನ ಜನರಾಗಿ ಆರಿಸಿಕೊಂಡನಲ್ಲವೇ?’
3 ಒಳ್ಳೇದು, ದೇವರು ಆ ಪುರಾತನ ಜನರೊಂದಿಗೆ ಹೇಗೆ ವ್ಯವಹರಿಸಿದನ್ದೆಂದು ನಾವು ನೋಡೋಣ. ಇಂದು ಸತ್ಯಾರಾಧಕರಿಗೆ ಯಾವ ಸುಯೋಗಗಳು ದೊರೆಯುತ್ತವೆ ಎಂಬದಕ್ಕೆ ಸಂಬಂಧಪಟ್ಟ ಕೆಲವು ಪ್ರವಾದನೆಗಳನ್ನು ಸಹ ನಾವು ಪರಿಶೀಲಿಸಬಹುದು. ಈ ಪ್ರವಾದನಾ ಸಮಾಚಾರವನ್ನು ಪುನರ್ವಿಮರ್ಶಿಸುವುದರಿಂದ ನಿಮಗೆ ಅತ್ಯಂತ ಉತ್ತೇಜನೀಯವಾಗಿ ತೋರಬಹುದಾದ ಒಂದು ಪೂರ್ಣ ತಿಳುವಳಿಕೆಯನ್ನು ಬೆಳಕಿಗೆ ತರಬಹುದು. ಮಹಾ ಸಂಕಟವನ್ನು ಹಿಂಬಾಲಿಸಿ ದೇವರು “ಸಕಲ ಜನಾಂಗ, ಕುಲ, ಭಾಷೆ ಮತ್ತು ಪ್ರಜೆಗಳೊಂದಿಗೆ” ವೈಯಕ್ತಿಕವಾಗಿ ಹೇಗೆ ವ್ಯವಹರಿಸಬಹುದೆಂಬ ಸೂಚನೆಯನ್ನು ಸಹ ಅದು ಕೊಡುತ್ತದೆ.—ಪ್ರಕಟನೆ 7:9, 14-17.
‘ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗುವದು’
4. ರಾಷ್ಟ್ರೀಯತೆಯ ಸಮಸ್ಯೆಯು ವಿಕಾಸಗೊಂಡದ್ದು ಹೇಗೆ, ಆದರೆ ದೇವರು ಯಾವ ಹೆಜ್ಜೆಗಳನ್ನು ತಕ್ಕೊಂಡನು?
4 ಜಲಪ್ರಲಯದ ಅನಂತರ, ಮಾನವ ಕುಟುಂಬದ ಎಲ್ಲರು ನೋಹನ ಸ್ವಂತ ಕುಟುಂಬದವರೇ ಆಗಿದ್ದರು ಮತ್ತು ಎಲ್ಲರೂ ಸತ್ಯಾರಾಧಕರಾಗಿದ್ದರು. ಆದರೆ ಆ ಐಕ್ಯತೆಯು ಬೇಗನೇ ಬದಲಾಯಿತು. ಕೊಂಚ ಸಮಯದೊಳಗೆ ಕೆಲವರು ದೇವರ ಚಿತ್ತವನ್ನು ದುರ್ಲಕ್ಷಿಸಿ ಒಂದು ಬುರುಜನ್ನು ಕಟ್ಟಲು ತೊಡಗಿದರು. ಇದು ಮಾನವ ಕುಲವನ್ನು ವಿವಿಧ ಭಾಷಾಗುಂಪುಗಳಾಗಿ ಒಡೆಯುವುದಕ್ಕೆ ನಡಿಸಿತು, ಅವರು ಚದರಿಹೋದ ಜನರು ಮತ್ತು ಜನಾಂಗಗಳಾಗಿ ಪರಿಣಮಿಸಿದರು. (ಆದಿಕಾಂಡ 11:1-9) ಆದರೂ ಸತ್ಯಾರಾಧನೆಯು ಅಬ್ರಹಾಮನಿಗೆ ನಡಿಸಿದ ಸಂತತಿಯಲ್ಲಿ ಮುಂದುವರಿಯುತ್ತಾ ಹೋಯಿತು. ದೇವರು ನಂಬಿಗಸ್ತ ಅಬ್ರಹಾಮನನ್ನು ಆಶೀರ್ವದಿಸಿದನು ಮತ್ತು ಅವನ ಸಂತಾನವು ಒಂದು ದೊಡ್ಡ ಜನಾಂಗವಾಗುವುದೆಂದು ವಾಗ್ದಾನಿಸಿದನು. (ಆದಿಕಾಂಡ 12:1-3) ಅದೇ ಜನಾಂಗವು ಪುರಾತನ ಇಸ್ರಾಯೇಲ್ ಆಗಿತ್ತು.
5. ಅಬ್ರಹಾಮನೊಂದಿಗೆ ದೇವರ ವ್ಯವಹಾರಗಳಿಂದ ನಾವೆಲ್ಲರೂ ಧೈರ್ಯಹೊಂದಬಲ್ಲೆವೇಕೆ?
5 ಆದರೂ ಯೆಹೋವನು ಇಸ್ರಾಯೇಲ್ಯೇತರ ಜನರನ್ನು ಬಿಟ್ಟುಬಿಡಲಿಲ್ಲ, ಯಾಕಂದರೆ ಅವನ ಉದ್ದೇಶವು ಮಾನವ ಕುಲದವರೆಲ್ಲರನ್ನು ಆವರಿಸಲು ವಿಸ್ತರಿಸಲ್ಪಟ್ಟಿತ್ತು. ನಾವಿದನ್ನು ಅಬ್ರಹಾಮನಿಗೆ ದೇವರು ಏನನ್ನು ವಾಗ್ದಾನಿಸಿದನೋ ಅದರಿಂದ ಸ್ಪಷ್ಟವಾಗಿಗಿ ಕಾಣಬಹುದು: “ನೀನು ನನ್ನ ಮಾತನ್ನು ಕೇಳಿದರ್ದಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:18) ಆದರೂ ಶತಮಾನಗಳ ವರೆಗೆ, ದೇವರು ಇಸ್ರಾಯೇಲಿಗೆ ಒಂದು ಜನಾಂಗಿಕ ನಿಯಮಶಾಸ್ತ್ರವನ್ನು ಕೊಟ್ಟ ಮೂಲಕ, ಆತನ ಆಲಯದಲ್ಲಿ ಯಜ್ಞಗಳನ್ನು ಅರ್ಪಿಸಲು ಯಾಜಕರನ್ನು ಏರ್ಪಡಿಸಿದ ಮೂಲಕ ಮತ್ತು ನಿವಾಸಕ್ಕಾಗಿ ವಾಗ್ದಾನ ದೇಶವನ್ನು ಒದಗಿಸಿದ ಮೂಲಕ ಅದರೊಂದಿಗೆ ಒಂದು ವಿಶೇಷ ರೀತಿಯಲ್ಲಿ ವ್ಯವಹರಿಸಿದನು.
6. ಇಸ್ರಾಯೇಲಿನೊಂದಿಗೆ ದೇವರ ಏರ್ಪಾಡುಗಳು ಹೇಗೆ ಎಲ್ಲರಿಗೆ ಪ್ರಯೋಜನಕಾರಿಯಾಗುವವು?
6 ಇಸ್ರಾಯೇಲ್ಯರಿಗೆ ದೇವರು ಕೊಟ್ಟ ನಿಯಮವು, ಮಾನವ ಪಾಪದ ನಿವಾರಣೆಗಾಗಿ ಒಂದೇ ಬಾರಿ ಮತ್ತು ಎಲ್ಲರಿಗಾಗಿ ಒಂದು ಪರಿಪೂರ್ಣ ಯಜ್ಞವು ಅರ್ಪಿಸಲ್ಪಡುವ ಅಗತ್ಯವನ್ನು ತೋರಿಸುತ್ತಾ, ಮಾನವ ಪಾಪಪೂರ್ಣತೆಯನ್ನು ಸ್ಪಷ್ಟಪಡಿಸಿದ್ದರಲ್ಲಿ ಅದು ಎಲ್ಲಾ ಜನಾಂಗಗಳ ಜನರಿಗೂ ಒಳ್ಳೆಯ ನಿಯಮವಾಗಿತ್ತು. (ಗಲಾತ್ಯ 3:19; ಇಬ್ರಿಯ 7:26-28; 9:9; 10:1-12) ಆದರೂ, ಯಾರ ಮೂಲಕವಾಗಿ ಜನಾಗಗಳೆಲ್ಲವೂ ಆಶೀರ್ವದಿಸಲ್ಪಡಲಿದ್ದವೋ—ಆ ಅಬ್ರಹಾಮನ ಸಂತಾನವು—ಬರುವುದಕ್ಕೆ ಮತ್ತು ಆ ಯೋಗ್ಯತೆಗಳನ್ನು ಮುಟ್ಟುವುದಕ್ಕೆ ಅಲ್ಲಿದ್ದ ಆಶ್ವಾಸನೆಯಾದರೂ ಏನು? ಇಸ್ರಾಯೇಲ್ಯರ ನಿಯಮವು ಇಲ್ಲಿ ಸಹ ಸಹಾಯ ನೀಡಿತ್ತು. ಅದು ಕಾನಾನ್ಯರೊಂದಿಗೆ ವಿವಾಹಸಂಬಂಧವನ್ನು ನಿಷೇಧಿಸಿತ್ತು, ಅವರು ಮಕ್ಕಳನ್ನು ಸಜೀವವಾಗಿ ಸುಡುವುದೇ ಮುಂತಾದ ಅನೈತಿಕ ಪದ್ಧತಿ ಮತ್ತು ಸಂಸ್ಕಾರಗಳಿಗೆ ಕುಪ್ರಸಿದ್ಧರಾಗಿದ್ದರು. (ಯಾಜಕಕಾಂಡ 18:6-24; 20:2, 3; ಧರ್ಮೋಪದೇಶಕಾಂಡ 12:29-31. 18:9-12) ಅವರನ್ನು ಮತ್ತು ಅವರ ಪದ್ಧತಿಗಳನ್ನು ನಿರ್ಮೂಲಗೊಳಿಸಬೇಕೆಂದು ದೇವರು ಆಜ್ಞಾಪಿಸಿದ್ದನು. ಅದು ವಾಗ್ದತ್ತ ಸಂತಾನವನ್ನು ಭ್ರಷ್ಟಗೊಳ್ಳದಂತೆ ಕಾಪಾಡುವುದರಿಂದ ಎಲ್ಲರಿಗೆ, ಅನ್ಯ ನಿವಾಸಿಗಳಿಗೆ ಸಹ, ದೀರ್ಘಕಾಲದ ಪ್ರಯೋಜನಕ್ಕಾಗಿತ್ತು.—ಯಾಜಕಕಾಂಡ 18:24-28; ಧರ್ಮೋಪದೇಶಕಾಂಡ 7:1-5; 9:5; 20:15-18.
7. ದೇವರು ಅನ್ಯರನ್ನು ಸ್ವಾಗತಿಸಿದ್ದನೆಂಬದಕ್ಕೆ ಯಾವ ಆರಂಭದ ಸೂಚನೆಯು ಅಲ್ಲಿತ್ತು?
7 ನಿಯಮಶಾಸ್ತ್ರವು ಜಾರಿಯಲ್ಲಿದ್ದಾಗ ಮತ್ತು ದೇವರು ಇಸ್ರಾಯೇಲ್ಯರನ್ನು ಮೀಸಲಾದ ಜನಾಂಗವಾಗಿ ನೋಡಿದ್ದಾಗಲೂ, ಇಸ್ರಾಯೇಲ್ಯರಲ್ಲದವರಿಗೂ ಅವನು ಕರುಣೆಯನ್ನು ತೋರಿಸಿದ್ದನು. ಇದನ್ನು ಮಾಡುವ ಆತನ ಸಿದ್ಧಮನಸ್ಸು ಇಸ್ರಾಯೇಲ್ಯರು ಐಗುಪ್ತದ ಬಂಧಿವಾಸದಿಂದ ಹೊರಟುಬಂದು ತಮ್ಮ ಸ್ವಂತ ದೇಶದೆಡೆಗೆ ಮುನ್ನಡೆದಾಗ ಪ್ರದರ್ಶಿಸಲ್ಪಟ್ಟಿತ್ತು. “ಅವರೊಂದಿಗೆ ಬಹು ಮಂದಿ ಅನ್ಯರೂ ಹೊರಟು ಹೋದರು.” (ವಿಮೋಚನಕಾಂಡ 12:38) ಪ್ರೊಫೆಸರ್ ಸಿ. ಎಫ್. ಕೈಲ್ ಅವರನ್ನು, “ವಿದೇಶೀಯರ ಸಮೂಹ . . . ಕಲಬೆರಿಕೆಯ ಗುಂಪು, ವಿವಿಧ ದೇಶಗಳ ಜನರ ಒಂದು ಸಮುದಾಯ” ಎಂದು ಗುರುತಿಸುತ್ತಾರೆ. (ಯಾಜಕಕಾಂಡ 24:10; ಅರಣ್ಯಕಾಂಡ 11:4) ಸಂಭವನೀಯವಾಗಿ ಅವರಲ್ಲಿ ಹೆಚ್ಚಿನವರು ಸತ್ಯ ದೇವರನ್ನು ಸ್ವೀಕರಿಸಿದ್ದ ಐಗುಪ್ತ್ಯರಾಗಿದ್ದಿರಬೇಕು.
ವಿದೇಶೀಯರಿಗೆ ಸ್ವಾಗತ
8. ಗಿಬ್ಯೋನ್ಯರು ದೇವ ಜನರ ಮಧ್ಯೆ ಒಂದು ಸ್ಥಳವನ್ನು ಕಂಡುಕೊಂಡದ್ದು ಹೇಗೆ?
8 ವಾಗ್ದಾನ ದೇಶದಿಂದ ಕೀಳು ಜನಾಂಗದವರನ್ನು ತೆಗೆದುಬಿಡುವಂತೆ ದೇವರು ಕೊಟ್ಟ ಆಜ್ಞೆಯನ್ನು ಇಸ್ರಾಯೇಲ್ಯರು ನಿರ್ವಹಿಸಿದಾಗ, ಯೆರೂಸಲೇಮಿನ ಉತ್ತರಕ್ಕೆ ಜೀವಿಸುತ್ತಿದ್ದ ಗಿಬ್ಯೋನ್ಯರೆಂಬ ಒಂದು ಪರದೇಶಸ್ಥ ಗುಂಪನ್ನು ಆತನು ಕಾಪಾಡಿದ್ದನು. ಅವರು ವೇಷಮರೆಸಿದ ರಾಯಭಾರಿಗಳನ್ನು ಯೆಹೋಶುವನ ಬಳಿಗೆ ಶಾಂತಿಯನ್ನು ಕೋರಲು ಮತ್ತು ಗಳಿಸಲು ಕಳುಹಿಸಿದರು. ಅವರ ಹಂಚಿಕೆಯು ಬಯಲಾದಾಗ, ಯೆಹೋಶುವನು ಗಿಬ್ಯೋನ್ಯರನ್ನು “ಸಮೂಹಕ್ಕೋಸ್ಕರವೂ ಯೆಹೋವನ ಯಜ್ಞವೇದಿಗೋಸ್ಕರವೂ ಕಟ್ಟಿಗೆ ಒಡೆಯುವವರನ್ನಾಗಿಯೂ ನೀರು ತರುವವರನ್ನಾಗಿಯೂ” ನೇಮಿಸಿದನು. (ಯೆಹೋಶುವ 9:3-27) ಇಂದು ಅನೇಕ ವಲಸೆಗಾರರು ಸಹ ಒಂದು ಹೊಸ ಜನರ ಭಾಗವಾಗುವುದಕ್ಕೋಸ್ಕರ ವಿನೀತ ಸೇವಾ ಸ್ಥಾನಗಳನ್ನು ಸ್ವೀಕರಿಸುತ್ತಾರೆ.
9. ಇಸ್ರಾಯೇಲಿನಲ್ಲಿದ್ದ ವಿದೇಶೀಯರ ಸಂಬಂಧದಲ್ಲಿ ರಹಾಬ್ ಮತ್ತು ಅವಳ ಕುಟುಂಬದ ಮಾದರಿಯು ಹೇಗೆ ಉತ್ತೇಜನಕವಾಗಿದೆ?
9 ಆಗಿನ ಕಾಲದಲ್ಲಿ ದೇವರು ಕೇವಲ ವಿದೇಶೀಯರ ಗುಂಪುಗಳನ್ನಲ್ಲ, ಒಂಟಿಯಾಗಿದ್ದ ವ್ಯಕ್ತಿಗಳನ್ನು ಸಹ ಸ್ವಾಗತಿಸಿದ್ದನೆಂದು ತಿಳಿಯುವುದು ನಿಮ್ಮನ್ನು ಪ್ರೋತ್ಸಾಹಿಸಬಹುದು. ಇಂದು ಕೆಲವು ರಾಷ್ಟ್ರಗಳು ಸಾಮಾಜಿಕ ದರ್ಜೆ, ಉದ್ಯಮದಲ್ಲಿ ಹಣಹಾಕುವ ಸಾಮರ್ಥ್ಯ ಮತ್ತು ಉಚ್ಛಶಿಕ್ಷಣ ಇರುವ ವಲಸೆಗಾರರನ್ನು ಮಾತ್ರವೇ ಸ್ವಾಗತಿಸುತ್ತಾರೆ. ಆದರೆ ಯೆಹೋವನು ಹಾಗಲ್ಲ, ಗಿಬ್ಯೋನ್ಯರೊಂದಿಗೆ ನಡೆದ ಘಟನಾವಳಿಗೆ ತುಸು ಮುಂಚೆ ನಡೆದ ಒಂದು ಘಟನೆಯಲ್ಲಿ ನಾವಿದನ್ನು ನೋಡುತ್ತೇವೆ. ಇದು ಖಂಡಿತವಾಗಿಯೂ ಉಚ್ಛ ಸಾಮಾಜಿಕ ದರ್ಜೆಯಿರದ ಒಬ್ಬಾಕೆ ಕಾನಾನ್ಯಳ ಸಂಬಂಧದಲ್ಲಿತ್ತು. ಬೈಬಲ್ ಆಕೆಯನ್ನು “ರಹಾಬಳೆಂಬ ಸೂಳೆ” ಎಂದು ಕರೆಯುತ್ತದೆ. ಸತ್ಯ ದೇವರಲ್ಲಿ ಆಕೆಯ ನಂಬಿಕೆಯಿಂದಾಗಿ, ಅವಳೂ ಅವಳ ಮನೆಯವರೂ ಯೆರಿಕೋ ಶಹರವು ಬಿದ್ದಾಗ ರಕ್ಷಿಸಲ್ಪಟ್ಟರು. ರಹಾಬಳು ವಿದೇಶೀಯಳಾಗಿದ್ದರೂ ಇಸ್ರಾಯೇಲ್ಯರು ಅವಳನ್ನು ಸ್ವೀಕರಿಸಿದರು. ಆಕೆ ನಮ್ಮ ಅನುಕರಣೆಗೆ ಪಾತ್ರಳಾಗಿರುವ ನಂಬಿಕೆಯ ಒಂದು ಮಾದರಿಯಾಗಿದ್ದಳು. (ಇಬ್ರಿಯ 11:30, 31, 39, 40; ಯೆಹೋಶುವ 2:1-21; 6:1-25) ಆಕೆ ಮೆಸ್ಸೀಯನ ಪೂರ್ವಜೆಯೂ ಆಗಿ ಪರಿಣಮಿಸಿದಳು.—ಮತ್ತಾಯ 1:5, 16.
10. ಇಸ್ರಾಯೇಲಿನಲ್ಲಿದ್ದ ವಿದೇಶೀಯರ ಸ್ವೀಕಾರಾರ್ಹತೆಯು ಯಾವದರ ಮೇಲೆ ಹೊಂದಿಕೊಂಡಿತ್ತು?
10 ಇಸ್ರಾಯೇಲ್ಯೇತರರು ಸತ್ಯ ದೇವರನ್ನು ಮೆಚ್ಚಿಸಲು ಅವರು ಮಾಡುವ ಪ್ರಯತ್ನಗಳಿಗೆ ಹೊಂದಿಕೆಯಲ್ಲಿ ವಾಗ್ದಾನ ದೇಶದೊಳಗೆ ಸ್ವೀಕರಿಸಲ್ಪಟ್ಟಿದ್ದರು. ಯೆಹೋವನನ್ನು ಸೇವಿಸದವರೊಂದಿಗೆ, ವಿಶೇಷವಾಗಿ ಧಾರ್ಮಿಕವಾಗಿ, ಸಹಭಾಗಿಗಳಾಗದಂತೆ ಇಸ್ರಾಯೇಲ್ಯರಿಗೆ ಹೇಳಲ್ಪಟ್ಟಿತ್ತು. (ಯೆಹೋಶುವ 23:6, 7, 12, 13; 1 ಅರಸು 11:1-8; ಜ್ಞಾನೋಕ್ತಿ 6:23-28) ಆದರೂ ಅನೇಕ ಇಸ್ರಾಯೇಲ್ಯೇತರ ನಿವಾಸಿಗಳು ಮೂಲಭೂತ ನಿಯಮಗಳಿಗೆ ವಿಧೇಯರಾಗಿದ್ದರು. ಇತರರು ಸುನ್ನತಿ ಮಾಡಿಕೊಂಡು ಯೆಹೂದಿ ಮತಾಂತರಿಗಳೂ ಆದರು, ಮತ್ತು ಯೆಹೋವನು ಅವರನ್ನು ತನ್ನ ಸಭೆಯ ಸದಸ್ಯರಾಗಿ ಪೂರ್ಣವಾಗಿ ಸ್ವಾಗತಿಸಿದನು.—ಯಾಜಕಕಾಂಡ 20:2; 24:22; ಅರಣ್ಯಕಾಂಡ 15:14-16; ಅ.ಕೃತ್ಯಗಳು 8:27.a
11, 12. (ಎ) ವಿದೇಶೀಯ ಆರಾಧಕರನ್ನು ಇಸ್ರಾಯೇಲ್ಯರು ಹೇಗೆ ಸತ್ಕರಿಸಬೇಕಿತ್ತು? (ಬಿ) ಯೆಹೋವನ ಮಾದರಿಯನ್ನು ಅನುಸರಿಸುವುದರಲ್ಲಿ ನಾವು ಸುಧಾರಣೆಮಾಡುವ ಅಗತ್ಯವಿರಬಹುದೇಕೆ?
11 ವಿದೇಶೀಯ ಆರಾಧಕರ ಕಡೆಗೆ ತನ್ನ ಮನೋಭಾವವನ್ನು ಅನುಕರಿಸುವಂತೆ ದೇವರು ಇಸ್ರಾಯೇಲ್ಯರಿಗೆ ಮಾರ್ಗದರ್ಶಿಸಿದ್ದನು: “ನಿಮ್ಮ ದೇಶದಲ್ಲಿ ಇಳುಕೊಂಡಿರುವ ಪರದೇಶದವರಿಗೆ ಅನ್ಯಾಯವೇನೂ ಮಾಡಬಾರದು. ಅವರು ನಿಮಗೆ ಸ್ವದೇಶದವರಂತೆಯೇ ಇರಬೇಕು. ಅವರನು ನಿಮ್ಮಂತೆಯೇ ಪ್ರೀತಿಸಬೇಕು. ಐಗುಪ್ತದೇಶದಲ್ಲಿ ನೀವೂ ಅನ್ಯರಾಗಿದೀರ್ದಲ್ಲವೇ?” (ಯಾಜಕಕಾಂಡ 19:33, 34; ಧರ್ಮೋಪದೇಶಕಾಂಡ 1:16; 10:12-19) ನಾವು ನಿಯಮಶಾಸ್ತ್ರದ ಕೆಳಗೆ ಇರದಿದ್ದರೂ ಇದು ನಮಗೊಂದು ಪಾಠವನ್ನು ಒದಗಿಸುತ್ತದೆ. ಇನ್ನೊಂದು ಜಾತಿ, ಜನಾಂಗ ಅಥವಾ ಸಂಸ್ಕೃತಿಯವರ ಕಡೆಗೆ ದುರಭಿಪ್ರಾಯ ಮತ್ತು ದ್ವೇಷಕ್ಕೆ ಎಡೆಗೊಡುವುದು ಬಹು ಸುಲಭ. ಆದ್ದರಿಂದ ನಾವು ನಮ್ಮನ್ನು ಹೀಗೆ ಕೇಳಿಕೊಳ್ಳುವುದು ಒಳ್ಳೆಯದು: ‘ಯೆಹೋವನ ಮಾದರಿಯನ್ನು ಅನುಸರಿಸುತ್ತಾ ನಾನು ಅಂಥ ದುರಭಿಪ್ರಾಯಗಳನ್ನು ನನ್ನಿಂದ ತೊಡೆದುಹಾಕಲು ಪ್ರಯತ್ನಿಸುತ್ತಿದ್ದೇನೋ?’
12 ದೇವರ ಸ್ವೀಕಾರದ ದೃಶ್ಯ ರುಜುವಾತು ಇಸ್ರಾಯೇಲ್ಯರಿಗಿತ್ತು. ರಾಜ ಸೊಲೊಮೋನನು ಪ್ರಾರ್ಥಿಸಿದ್ದು: “ಒಬ್ಬ ಪರದೇಶಿಯು ನಿನ್ನ ನಾಮಕ್ಕೋಸ್ಕರ ದೂರದೇಶದಿಂದ ಬಂದು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವದಾದರೆ ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿದ್ದನ್ನು ಅನುಗ್ರಹಿಸು. ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮ ಮಹತ್ತನ್ನು ತಿಳಿದು . . . ನಿನ್ನಲ್ಲಿ ಭಯಭಕ್ತಿಯುಳ್ಳವರಾಗುವರು.”—1 ಅರಸು 8:41-43; 2 ಪೂರ್ವಕಾಲ 6:32, 33.
13. ಇಸ್ರಾಯೇಲಿನೊಂದಿಗೆ ತನ್ನ ವ್ಯವಹಾರವನ್ನು ಬದಲಾಯಿಸಲು ದೇವರು ಒದಗಿಸುವಿಕೆಯನ್ನು ಮಾಡಿದ್ದೇಕೆ?
13 ಯೆಹೋವನು ಇಸ್ರಾಯೇಲ್ ಜನಾಂಗವನ್ನು ತನ್ನ ಜನರಾಗಿ ಇನ್ನೂ ಉಪಯೋಗಿಸುತ್ತಿದ್ದಾಗ ಮತ್ತು ಹೀಗೆ ಮೆಸ್ಸೀಯನು ಬರಲಿದ್ದ ವಂಶವನ್ನು ಕಾಪಾಡುತ್ತಿದ್ದಾಗ, ಗಮನಾರ್ಹ ಬದಲಾವಣೆಗಳನ್ನು ದೇವರು ಮುಂತಿಳಿಸಿದನು. ಇದಕ್ಕೆ ಮುಂಚೆ, ಇಸ್ರಾಯೇಲ್ಯರು ನಿಯಮದೊಡಂಬಡಿಕೆಯ ಕೆಳಗೆ ಇರಲು ಒಪ್ಪಿದ್ದಾಗ, ಅವರು “ಒಂದು ಯಾಜಕ ರಾಜ್ಯ ಮತ್ತು ಪರಿಶುದ್ಧ ಜನಾಂಗ” ಕ್ಕೆ ಮೂಲವಾಗಿರ ಸಾಧ್ಯವಾಗುವಂತೆ ದೇವರು ಅನುಗ್ರಹಿಸಿದ್ದನು. (ವಿಮೋಚನಕಾಂಡ 19:5, 6) ಆದರೆ ಇಸ್ರಾಯೇಲು ಶತಮಾನಗಳ ತನಕ ಅಪನಂಬಿಗಸ್ತಿಕೆಯನ್ನು ತೋರಿಸಿತು. ಆದುದರಿಂದ ಯಾವುದರ ಕೆಳಗೆ “ಇಸ್ರಾಯೇಲ್ ವಂಶದವರ” ಅಪರಾಧ ಮತ್ತು ಪಾಪಗಳು ಕ್ಷಮಿಸಲ್ಪಡಲಿದ್ದವೋ ಆ ಒಂದು ಹೊಸ ಒಡಬಂಡಿಕೆಯನ್ನು ಮಾಡಿಕೊಳ್ಳುವೆನೆಂದು ಯೆಹೋವನು ಮುಂತಿಳಿಸಿದನು. (ಯೆರೆಮೀಯ 31:33, 34) ಅ ಹೊಸ ಒಡಂಬಡಿಕೆಯು, ಯಾರ ಯಜ್ಞವು ನಿಜವಾಗಿಯೂ ಅನೇಕರನ್ನು ಪಾಪದಿಂದ ಬಿಡಿಸಿ ಶುದ್ಧ ಮಾಡಲಿಕ್ಕಿತ್ತೋ ಆ ಮೆಸ್ಸೀಯನಿಗಾಗಿ ಕಾಯುತ್ತಿತ್ತು.—ಯೆಶಾಯ 53:5-7, 10-12.
ಇಸ್ರಾಯೇಲ್ಯರು ಪರಲೋಕದಲ್ಲಿ
14. ಯಾವ ಹೊಸ “ಇಸ್ರಾಯೇಲ್” ನ್ನು ಯೆಹೋವನು ಸ್ವೀಕರಿಸಿದನು ಮತ್ತು ಹೇಗೆ?
14 ಇವೆಲ್ಲವೂ ಹೇಗೆ ನಿರ್ವಹಿಸಲ್ಪಟ್ಟವೆಂದು ತಿಳಿಯಲು ಕ್ರೈಸ್ತ ಗ್ರೀಕ್ ಶಾಸ್ತ್ರವು ನಮಗೆ ಸಹಾಯ ಮಾಡುತ್ತದೆ. ಯಾರ ಮರಣವು ನಿಯಮಶಾಸ್ತ್ರವನ್ನು ನೆರವೇರಿಸಿ, ಪೂರ್ಣ ಪಾಪ ಕ್ಷಮೆಗಾಗಿ ಆಧಾರವನ್ನು ಒದಗಿಸಿತೋ ಆ ಯೇಸುವೇ ಮೆಸ್ಸೀಯನಾಗಿದ್ದನು. ಆ ಪ್ರಯೋಜನವನ್ನು ಹೊಂದಲು ಒಬ್ಬನು ದೈಹಿಕ ಸುನ್ನತಿಯನ್ನು ಪಡೆದ ಒಬ್ಬ ಯೆಹೂದ್ಯನಾಗಿರುವ ಅಗತ್ಯವಿರಲಿಲ್ಲ. ಇಲ್ಲ. ಹೊಸ ಒಡಂಬಡಿಕೆಯಲ್ಲಿ, “ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ,” ಎಂದು ಅಪೊಸ್ತಲ ಪೌಲನು ಬರೆದ್ದಿದ್ದಾನೆ. (ರೋಮಾಪುರ 2:28, 29; 7:6) ಯೇಸುವಿನ ಯಜ್ಞದಲ್ಲಿ ನಂಬಿಕೆಯಿಟ್ಟವರು ಪಾಪ ಕ್ಷಮೆಯನ್ನು ಹೊಂದಿದರು, ಮತ್ತು ದೇವರು ಅವರನ್ನು “ದೇವರ ಇಸ್ರಾಯೇಲು” ಎಂದು ಕರೆಯಲ್ಪಡುವ ಒಂದು ಆತ್ಮಿಕ ಜನಾಂಗದಲ್ಲಿ ಕೂಡಿರುವ ‘ಆತ್ಮ ಸಂಬಂಧದ ಯೆಹೂದ್ಯ’ ರಾಗಿ ಸ್ವೀಕಾರ ಮಾಡಿರುವನು.—ಗಲಾತ್ಯ 6:16.
15. ಆತ್ಮಿಕ ಇಸ್ರಾಯೇಲಿನ ಭಾಗವಾಗುವುದರಲ್ಲಿ ಮಾಂಸಿಕ ಕುಲಸಂಬಂಧವು ಮುಖ್ಯವಲ್ಲವೇಕೆ?
15 ಹೌದು, ಆತ್ಮಿಕ ಇಸ್ರಾಯೇಲಿನೊಳಗೆ ಸ್ವೀಕರಿಸಲ್ಪಡುವುದು ಒಂದು ನಿರ್ದಿಷ್ಟ ಜನಾಂಗಿಕ ಅಥವಾ ಕುಲಸಂಬಂಧದ ಹಿನ್ನೆಲೆಯ ಮೇಲೆ ಆಧಾರಿಸಿರಲಿಲ್ಲ. ಯೇಸುವಿನ ಅಪೊಸ್ತಲರಂಥ ಕೆಲವರು ಮಾಂಸಿಕ ಯೆಹೂದ್ಯರಾಗಿದ್ದರು. ರೋಮನ್ ಸೇನಾಧಿಕಾರಿಯಾಗಿದ್ದ ಕೊರ್ನೇಲ್ಯನಂಥ ಇತರರು ಸುನ್ನತಿಯಾಗದ ಅನ್ಯರಾಗಿದ್ದರು. (ಅ.ಕೃತ್ಯಗಳು 10:34, 35, 44-48) ಅತ್ಮಿಕ ಇಸ್ರಾಯೇಲಿನ ಕುರಿತು ಪೌಲನು ಸರಿಯಾಗಿಯೇ ಹೇಳಿದ್ದು: “ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿಕೊಂಡವರು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ; ಮ್ಲೇಚ್ಛ ಹೂಣ ಎಂಬ ಹೆಸರುಗಳಿಲ್ಲ; ಆಳು ಒಡೆಯ ಎಂಬ ಭೇದವಿಲ್ಲ.” (ಕೊಲೊಸ್ಸೆ 3:11) ದೇವರ ಆತ್ಮದಿಂದ ಅಭಿಷಿಕ್ತರಾದವರು “ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸಕ್ವೀಯ ಪ್ರಜೆಯೂ” ಆಗಿ ಪರಿಣಮಿಸಿದರು.—1 ಪೇತ್ರ 2:9; ವಿಮೋಚನಕಾಂಡ 19:5, 6 ಕ್ಕೆ ಹೋಲಿಸಿ.
16, 17. (ಎ) ದೇವರ ಉದ್ದೇಶದಲ್ಲಿ ಆತ್ಮಿಕ ಇಸ್ರಾಯೇಲ್ಯರಿಗೆ ಯಾವ ಪಾತ್ರವಿದೆ? (ಬಿ) ದೇವರ ಇಸ್ರಾಯೇಲ್ ಆಗಿರದೆ ಇರುವವರನ್ನು ಗಮನಿಸುವುದು ಏಕೆ ಯುಕ್ತವಾಗಿದೆ?
16 ದೇವರ ಉದ್ದೇಶದಲ್ಲಿ ಈ ಆತ್ಮಿಕ ಇಸ್ರಾಯೇಲ್ಯರಿಗೆ ಯಾವ ಭವಿಷ್ಯತ್ತು ಇರುತ್ತದೆ? ಯೇಸು ಉತ್ತರಿಸಿದ್ದು: “ಚಿಕ್ಕ ಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.” (ಲೂಕ 12:32) “ಪರಲೋಕದ ಸಂಸ್ಥಾನದವರಾದ” ಅಭಿಷಿಕ್ತರು ಕುರಿಮರಿಯೊಂದಿಗೆ ಆತನ ರಾಜ್ಯದಾಳಿಕೆಯಲ್ಲಿ ಸಹಬಾಧ್ಯರಾಗಿ ಇರುವರು. (ಫಿಲಿಪ್ಪಿ 3:20; ಯೋಹಾನ 14:2, 3; ಪ್ರಕಟನೆ 5:9, 10) ಇವರು ‘ಇಸ್ರಾಯೇಲ್ಯ ಕುಲದವರಲ್ಲಿ ಮುದ್ರೆಹಾಕಿಸಿಕೊಂಡವರು’ ಮತ್ತು “ಮನುಷ್ಯರೊಳಗಿಂದ ಸಕ್ವೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮ ಫಲ” ವಾದವರು ಎಂದು ಬೈಬಲ್ ಸೂಚಿಸುತ್ತದೆ. ಅವರ ಸಂಖ್ಯೆ 1,44,000 ಆಗಿದೆ. ಆದರೂ, ಈ ಸಂಖ್ಯೆಯ ಮುದ್ರೆಒತ್ತಿಸಿಯಾದ ವೃತ್ತಾಂತವನ್ನು ಕೊಟ್ಟಾದ ಮೇಲೆ, “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ . . . ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದ” ಬೇರೊಂದು ಪ್ರತ್ಯೇಕ ಗುಂಪನ್ನು ಯೋಹಾನನು ಪರಿಚಯಪಡಿಸುತ್ತಾನೆ.—ಪ್ರಕಟನೆ 7:4, 9; 14:1-4.
17 ಕೆಲವರು ಯೋಚಿಸಬಹುದು: ‘ಆ ಮಹಾ ಸಮೂಹದವರಂತೆ ಮಹಾ ಸಂಕಟವನ್ನು ಪಾರಾಗಬಹುದಾದ, ಆದರೆ ಆತ್ಮಿಕ ಇಸ್ರಾಯೇಲ್ಯರ ಭಾಗವಾಗಿರದ ಬೇರೆ ಲಕ್ಷಾಂತರ ಜನರ ಕುರಿತೇನು? ಆತ್ಮಿಕ ಇಸ್ರಾಯೇಲ್ಯರಾಗಿ ಉಳಿದಿರುವ ಕೆಲವೇ ಉಳಿಕೆಯವರ ಸಂಬಂಧದಲ್ಲಿ ಇಂದು ಅವರಿಗಿರುವ ಪಾತ್ರವೇನು?’b
ಪ್ರವಾದನೆಯಲ್ಲಿ ವಿದೇಶೀಯರು
18. ಇಸ್ರಾಯೇಲ್ಯರನ್ನು ಬಬಿಲೋನ್ಯ ಸೆರೆವಾಸದಿಂದ ಹಿಂತಿರುಗುವಂತೆ ನಡಿಸಿದ್ದು ಯಾವುದು?
18 ಇಸ್ರಾಯೇಲ್ಯರು ನಿಯಮದೊಡಂಬಡಿಕೆಯ ಕೆಳಗಿದ್ದರೂ ಅದಕ್ಕೆ ಅಪನಂಬಿಗಸ್ತರಾಗಿದ್ದ ಆ ಸಮಯಕ್ಕೆ ಹಿಂತಿರುಗುವಲ್ಲಿ, ಬಬಿಲೋನ್ಯರು ಇಸ್ರಾಯೇಲನ್ನು ಹಾಳುಗೆಡವುವಂತೆ ದೇವರು ನಿರ್ಧರಿಸಿದ್ದನ್ನು ನಾವು ಕಾಣುತ್ತೇವೆ. ಸಾ.ಶ.ಪೂ. 607 ರಲ್ಲಿ ಇಸ್ರಾಯೇಲು 70 ವರ್ಷಗಳ ಬಂಧಿವಾಸಕ್ಕೆ ಒಯ್ಯಲ್ಪಟ್ಟಿತು. ಅನಂತರ ದೇವರು ಆ ಜನಾಂಗವನ್ನು ವಿಮೋಚಿಸಿದನು. ಗವರ್ನರ್ ಜೆರುಬ್ಬಾಬೆಲನ ನಾಯಕತ್ವದ ಕೆಳಗೆ ಹುಟ್ಟು ಇಸ್ರಾಯೇಲ್ಯರಲ್ಲಿ ಉಳಿಕೆಯವರು ತಮ್ಮ ಸ್ವದೇಶಕ್ಕೆ ಹಿಂತಿರುಗಿದರು. ಬಾಬೆಲನ್ನು ದೊಬ್ಬಿಹಾಕಿದ ಮೇದ್ಯ ಮತ್ತು ಪಾರಸಿಯ ಅರಸರು, ಹಿಂದಿರುಗಿದ ಸೆರೆವಾಸಿಗಳಿಗೆ ಆಹಾರ ಸಾಮಗ್ರಿಗಳ ನೆರವನ್ನೂ ಕೊಟ್ಟರು. ಯೆಶಾಯನ ಪುಸ್ತಕವು ಈ ವಿಕಸನಗಳನ್ನು ಮುಂತಿಳಿಸಿತ್ತು. (ಯೆಶಾಯ 1:1-9; 3:1-26; 14:1-5; 44:21-28; 47:1-4) ಮತ್ತು ಎಜ್ರನು ಆ ಹಿಂತಿರುಗುವಿಕೆಯ ಚಾರಿತ್ರಿಕ ವಿವರಗಳನ್ನು ನಮಗೆ ನೀಡುತ್ತಾನೆ.—ಎಜ್ರ 1:1-11; 2:1, 2.
19. ಇಸ್ರಾಯೇಲ್ಯರ ಹಿಂತಿರುಗುವಿಕೆಯ ಸಂಬಂಧದಲ್ಲಿ, ವಿದೇಶೀಯರು ಒಳಗೂಡುವರೆಂಬದಕ್ಕೆ ಅಲ್ಲಿ ಯಾವ ಪ್ರವಾದನಾ ಸೂಚನೆಯು ಇತ್ತು?
19 ಆದರೂ, ದೇವ ಜನರ ವಿಮೋಚನೆ ಮತ್ತು ಹಿಂತಿರುಗುವಿಕೆಯನ್ನು ಮುಂತಿಳಿಸಿದ್ದರಲ್ಲಿ, ಯೆಶಾಯನು ಈ ಆಶ್ಚರ್ಯಕಾರಿ ಪ್ರವಾದನೆಯನ್ನು ನುಡಿದನು: “ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು; ಅರಸರು ನಿನ್ನಲಿನ್ಲ ಉದಯ ಪ್ರಕಾಶಕ್ಕೆ ಬರುವರು.” (ಯೆಶಾಯ 59:20; 60:3) ಸೊಲೊಮೋನನ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಇದರ ಅರ್ಥವು ವ್ಯಕ್ತಿಪರ ವಿದೇಶೀಯರಿಗಿಂತಲೂ ಹೆಚ್ಚು ಮಂದಿ ಸ್ವಾಗತಾರ್ಹರಾಗಿದ್ದರು ಎಂಬದೇ. ಯೆಶಾಯನು ಆ ನಿಲುವಿನಲ್ಲಿ ಒಂದು ಅಸಾಮಾನ್ಯ ಬದಲಾವಣೆಗೆ ಕೈತೋರಿಸುತ್ತಿದ್ದನು. “ಜನಾಂಗಗಳು” ಇಸ್ರಾಯೇಲ್ ಕುಲದವರೊಂದಿಗೆ ಸೇವೆ ಮಾಡಲಿದ್ದರು: “ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಕಟ್ಟುವರು, ಅವರ ಅರಸರು ನಿಮ್ಮನ್ನು ಸೇವಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದು ಬಿಟ್ಟು ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ.”—ಯೆಶಾಯ 60:10.
20, 21. (ಎ) ಸೆರೆವಾಸದಿಂದ ಇಸ್ರಾಯೇಲ್ಯರ ಹಿಂತಿರುಗುವಿಕೆಗೆ ಆಧುನಿಕ ಕಾಲದಲ್ಲಿ ನಾವು ಯಾವ ಅನುರೂಪತೆಯನ್ನು ಕಾಣುತ್ತೇವೆ? (ಬಿ) ಆತ್ಮಿಕ ಇಸ್ರಾಯೇಲ್ಯರಿಗೆ ಅನಂತರ ‘ಗಂಡು ಮತ್ತು ಹೆಣ್ಣು ಮಕ್ಕಳು’ ಕೂಡಿಸಲ್ಪಟ್ಟದ್ದು ಹೇಗೆ?
20 ಇಸ್ರಾಯೇಲ್ಯರು ಸೆರೆಯೊಳಗೆ ಹೋದದ್ದು ಮತ್ತು ಹಿಂತಿರುಗಿದ್ದು ಆಧುನಿಕ ಸಮಯದಲ್ಲಿ ಆತ್ಮಿಕ ಇಸ್ರಾಯೇಲ್ಯರಲ್ಲಿ ಅನೇಕ ವಿಧಗಳಲ್ಲಿ ಒಂದು ಅನುರೂಪತೆಯನ್ನು ಕಂಡಿದೆ. 1 ನೆಯ ಲೋಕ ಯುದ್ಧಕ್ಕೆ ಮುಂಚೆ ಅಭಿಷಿಕ್ತ ಕ್ರೈಸ್ತರ ಉಳಿಕೆಯವರು ದೇವರ ಚಿತ್ತದೊಂದಿಗೆ ಪೂರಾ ರೀತಿಯಲ್ಲಿ ಹೊಂದಿಕೆಯಲ್ಲಿರಲಿಲ್ಲ. ಕ್ರೈಸ್ತ ಪ್ರಪಂಚದ ಚರ್ಚುಗಳಿಂದ ಮುಂದುವರಿಸಿ ತಂದಿದ್ದ ಕೆಲವು ನೋಟಗಳನ್ನು ಮತ್ತು ಪದ್ಧತಿಗಳನ್ನು ಅವರು ಹಿಡಿದುಕೊಂಡಿದ್ದರು. ಅನಂತರ, ಯುದ್ಧ-ಕಾಲದ ಉನ್ಮಾದದಲ್ಲಿ ಮತ್ತು ಅಂಶಿಕವಾಗಿ ವೈದಿಕರ ಚಿತಾವಣೆಯಿಂದಾಗಿ, ಆತ್ಮಿಕ ಇಸ್ರಾಯೇಲ್ಯ ಉಳಿಕೆಯವರಲ್ಲಿ ಮುಖ್ಯಸ್ಥರು ಅನ್ಯಾಯವಾಗಿ ಸೆರೆಮನೆಗೆ ಹಾಕಲ್ಪಟ್ಟರು. ಯುದ್ಧಾನಂತರ ಸಾ.ಶ. 1919 ರಲ್ಲಿ, ಅಕ್ಷರಾರ್ಥಕ ಸೆರೆಮನೆಯಲ್ಲಿದ್ದ ಆ ಅಭಿಷಿಕ್ತ ಜನರು ಬಿಡುಗಡೆ ಹೊಂದಿದರು ಮತ್ತು ದೋಷವಿಮುಕ್ತರಾದರು. ಇದು ರುಜುವಾತನ್ನಿತಿತ್ತು ಏನಂದರೆ ದೇವಜನರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಸೆರೆವಾಸದಿಂದ ಮುಕ್ತರಾದರು ಎಂಬದಾಗಿ. ಆತನ ಜನರು ಒಂದು ಆತ್ಮಿಕ ಪರದೈಸವನ್ನು ಕಟ್ಟಲು ಮತ್ತು ಅದರಲ್ಲಿ ನಿವಾಸಿಸಲು ಮುಂದುವರಿದರು.—ಯೆಶಾಯ 35:1-7; 65:13, 14.
21 ಇದು ಯೆಶಾಯನ ವರ್ಣನೆಯಲ್ಲಿ ಸೂಚಿಸಲ್ಪಟ್ಟಿತ್ತು: “ನಿನ್ನ ಮಕ್ಕಳೆಲ್ಲಾ ಗುಂಪುಕೂಡಿ ನಿನ್ನ ಬಳಿಗೆ ಸೇರುತ್ತಿದ್ದಾರೆ. ಗಂಡು ಮಕ್ಕಳು ದೂರದಿಂದ ಸಮೀಪಿಸುತ್ತಾರೆ, ಹೆಣ್ಣು ಮಕ್ಕಳು ಕಂಕುಳಿನಲ್ಲಿ ಕುಳಿತು ಬರುತ್ತಾರೆ. ನೀನು ನೋಡಿ ಕಳೆಗೊಳ್ಳುವಿ, ನಿನ್ನ ಹೃದಯವು ಅದರುತ್ತಾ ಉಬ್ಬುವದು; ಏಕಂದರೆ ಸಮುದ್ರವ್ಯಾಪಾರ ಸಮೃದ್ಧಯು ನಿನ್ನ ಕಡೆಗೆ ತಿರುಗುವದು, ಜನಾಂಗಗಳ ಐಶ್ವರ್ಯವು ನಿನಗೆ ದೊರೆಯುವದು.” (ಯೆಶಾಯ 60:4, 5) ಹಿಂಬಾಲಿಸಿದ ದಶಮಾನಗಳಲ್ಲಿ, ಆತ್ಮಿಕ ಇಸ್ರಾಯೇಲಿನ ಕೊನೆಯ ಸ್ಥಾನಗಳನ್ನು ತುಂಬಿಸಲು ಆತ್ಮಾಭಿಷೇಕವನ್ನು ಹೊಂದಿದ್ದ ‘ಗಂಡು ಮತ್ತು ಹೆಣ್ಣು ಮಕ್ಕಳು’ ಒಳಬರುವುದನ್ನು ಮುಂದುವರಿಸಿದರು.
22. “ವಿದೇಶೀಯರು” ಆತ್ಮಿಕ ಇಸ್ರಾಯೇಲ್ಯರೊಂದಿಗೆ ಕೆಲಸಮಾಡುವವರಾದದ್ದು ಹೇಗೆ?
22 ‘ವಿದೇಶೀಯರು ನಿಮ್ಮ ಪೌಳಿಗೋಡೆಗಳನ್ನು ಕಟ್ಟುವರು,’ ಇದರ ವಿಷಯದಲ್ಲೇನು? ಇದು ಸಹ ನಮ್ಮ ಸಮಯದಲ್ಲಿ ಸಂಭವಿಸಿಯದೆ. 1,44,000 ಮಂದಿಗಾಗಿ ಕರೆಯು ಮುಗಿಯುತ್ತಾ ಬಂದಾಗ, ಎಲ್ಲಾ ಜನಾಂಗಗಳಿಂದ ಬಂದ ಒಂದು ಮಹಾ ಸಮೂಹವು ಆತ್ಮಿಕ ಇಸ್ರಾಯೇಲಿನೊಂದಿಗೆ ಆರಾಧಿಸಲು ಒಟ್ಟುಗೂಡ ತೊಡಗಿದರು. ಈ ಹೊಸಬರಿಗೆ ಒಂದು ಪರದೈಸ ಭೂಮಿಯಲ್ಲಿ ನಿತ್ಯಜೀವವನ್ನು ಪಡೆಯುವ ಬೈಬಲಾಧಾರಿತ ನಿರೀಕ್ಷೆಯು ಇದೆ. ಅವರ ನಂಬಿಗಸ್ತ ಸೇವೆಯ ಕಟ್ಟಕಡೆಯ ಸ್ಥಳವು ಬೇರೆಯಾಗಿರಲಿದ್ದರೂ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಅಭಿಷಿಕ್ತ ಉಳಿಕೆಯವರಿಗೆ ಸಹಾಯ ಮಾಡಲು ಅವರು ಸಂತೋಷಪಟ್ಟರು.—ಮತ್ತಾಯ 24:14.
23. ಎಷ್ಟರ ಮಟ್ಟಿಗೆ “ವಿದೇಶೀಯರು” ಅಭಿಷಿಕ್ತರಿಗೆ ಸಹಾಯ ಮಾಡಿದ್ದಾರೆ?
23 ಯಾರು ‘ಸ್ವರ್ಗೀಯ ಸಂಸ್ಥಾನದವ’ ರಾಗಿದ್ದಾರೋ ಆ ಉಳಿಕೆಯವರೊಂದಿಗೆ ಇಂದು ಜತೆಗೂಡಿರುವ 40,00,000 ಕ್ಕಿಂತಲೂ ಹೆಚ್ಚು “ವಿದೇಶೀಯರು” ಯೆಹೋವನಿಗೆ ತಮ್ಮ ಭಕ್ತಿಯನ್ನು ರುಜುಪಡಿಸುತ್ತಿದ್ದಾರೆ. ಪುರುಷರೂ ಸ್ತ್ರೀಯರೂ, ಯುವಕರೂ ವೃದ್ಧರೂ ಆಗಿರುವ ಅವರಲ್ಲನೇಕರು ಪಯನೀಯರರಾಗಿ ಪೂರ್ಣ-ಸಮಯದ ಶುಶ್ರೂಷೆಯಲ್ಲಿ ಸೇವೆಮಾಡುತ್ತಿದ್ದಾರೆ. 66,000 ಕ್ಕಿಂತಲೂ ಮಿಕ್ಕಿದ ಹೆಚ್ಚಿನ ಸಭೆಗಳಲ್ಲಿ ಅಂಥ ವಿದೇಶೀಯರು ಹಿರಿಯರುಗಳಾಗಿ ಮತ್ತು ಶುಶ್ರೂಷಾ ಸೇವಕರುಗಳಾಗಿ ಜವಾಬ್ದಾರಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಯೆಶಾಯನ ಮಾತುಗಳ ಒಂದು ನೆರವೇರಿಕೆಯನ್ನು ಕಾಣುತ್ತಾ, ಉಳಿಕೆಯವರು ಹರ್ಷಿಸುತ್ತಾರೆ: “ಆಗ ವಿದೇಶೀಯರು ನಿಂತುಕೊಂಡು ನಿಮ್ಮ ಮಂದೆಗಳನ್ನು ಮೇಯಿಸುವರು, ಅನ್ಯರು ನಿಮಗೆ ಉಳುವವರೂ ತೋಟಗಾರರೂ ಆಗುವರು.”—ಯೆಶಾಯ 61:5.
24. ಪೂರ್ವದಲ್ಲಿ ಇಸ್ರಾಯೇಲ್ಯರೊಂದಿಗೆ ಮತ್ತು ಇತರರೊಂದಿಗೆ ದೇವರ ವ್ಯವಹಾರಗಳಿಂದ ನಾವು ಉತ್ತೇಜನ ಹೊಂದಬಲ್ಲೆವೇಕೆ?
24 ಹೀಗಿರಲಾಗಿ ಭೂಮಿಯ ಯಾವುದೇ ಜನಾಂಗದಲ್ಲಿ ನೀವೊಬ್ಬ ಸ್ವದೇಶಿ, ವಲಸೆಗಾರ, ಅಥವಾ ನಿರಾಶ್ರಿತರು ಆಗಿರ್ರಿ, ಸರ್ವಶಕ್ತನು ಹೃತ್ಪೂರ್ವಕವಾಗಿ ಸ್ವಾಗತಿಸುವ ಆತ್ಮಿಕ ವಿದೇಶೀಯರಾಗುವ ಒಂದು ಮಹಾ ಸಂದರ್ಭವು ನಿಮಗಿದೆ. ಆತನ ಸ್ವಾಗತದಲ್ಲಿ, ಈಗ ಮತ್ತು ನಿತ್ಯ ಭವಿಷ್ಯತ್ತಿನೊಳಗೂ ಆತನ ಸೇವೆಯಲ್ಲಿ ಸುಯೋಗಗಳನ್ನು ಆನಂದಿಸುವ ಶಕ್ಯತೆಯು ಸೇರಿರುತ್ತದೆ. (w92 4/15)
[ಅಧ್ಯಯನ ಪ್ರಶ್ನೆಗಳು]
a “ಪರದೇಶದವರು,” “ಅನ್ಯರು,” “ಇಳುಕೊಂಡಿರುವವರು,” “ಒಕ್ಕಲಿರುವವರು,” ಮತ್ತು “ವಿದೇಶೀಯರು” ಇವುಗಳ ನಡುವಣ ವ್ಯತ್ಯಾಸಗಳಿಗಾಗಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಪ್ರಕಾಶಿತ, ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಸಂಪುಟ 1, ಪುಟ 72-5, 849-51 ನೋಡಿರಿ.
b 1991 ರಲ್ಲಿ ಯೆಹೋವನ ಸಾಕ್ಷಿಗಳಿಂದ ನಡಿಸಲ್ಪಟ್ಟ ಕರ್ತನ ಸಂಜಾ ಭೋಜನದ ವಾರ್ಷಿಕ ಸ್ಮಾರಕಕ್ಕೆ 1,06,00,000 ಕ್ಕಿಂತಲೂ ಹೆಚ್ಚು ಮಂದಿ ಹಾಜರಿದ್ದರೂ, ಕೇವಲ 8,850 ಮಂದಿ ಮಾತ್ರ ಆತ್ಮಿಕ ಇಸ್ರಾಯೇಲ್ಯರ ಉಳಿಕೆಯವರೆಂದು ಪ್ರಕಟಪಡಿಸಿದರು.
ನೀವಿದನ್ನು ಗಮನಿಸಿದಿರೊ?
▫ ಎಲ್ಲಾ ಜನಾಂಗಗಳ ಜನರು ಆತನಿಂದ ಸ್ವೀಕರಿಸಲ್ಪಡುವರು ಎಂಬ ನಿರೀಕ್ಷೆಯನ್ನು ದೇವರು ನೀಡಿದ್ದು ಹೇಗೆ?
▫ ದೇವರ ವಿಶಿಷ್ಟ ಜನರಾದ ಇಸ್ರಾಯೇಲ್ಯರಿಗಿಂತ ಬೇರೆಯಾದ ಜನರೂ ದೇವರನ್ನು ಗೋಚರಿಸಬಲ್ಲರೆಂದು ಯಾವುದು ತೋರಿಸುತ್ತದೆ?
▫ ವಿದೇಶೀಯರು ತಮ್ಮನ್ನು ಇಸ್ರಾಯೇಲಿನೊಂದಿಗೆ ಸೇರಿಸಿಕೊಳ್ಳುವರೆಂದು ಪ್ರವಾದನೆಯಲ್ಲಿ ದೇವರು ಹೇಗೆ ಸೂಚಿಸಿದ್ದನು?
▫ ಬಾಬೆಲಿನ ಸೆರೆವಾಸದಿಂದ ಇಸ್ರಾಯೇಲ್ಯರ ಹಿಂತಿರುಗುವಿಕೆಗೆ ಯಾವುದು ಅನುರೂಪವಾಗಿತ್ತು ಮತ್ತು “ವಿದೇಶೀಯರು” ಅದರಲ್ಲಿ ಒಳಗೂಡಿದ್ದು ಹೇಗೆ?
[ಪುಟ 9 ರಲ್ಲಿರುವ ಚಿತ್ರ]
ಯೆಹೋವನನ್ನು ಆರಾಧಿಸಲು ಬರುವ ವಿದೇಶೀಯರ ಕುರಿತು ರಾಜ ಸೊಲೊಮೋನನು ಪ್ರಾರ್ಥಿಸಿದ್ದನು