ಯೇಸುವಿಗೆ ದೇವರಲ್ಲಿ ನಂಬಿಕೆ ಇದ್ದಿರಬಹುದಿತ್ತೊ?
ತ್ರೆಯೈಕ್ಯವಾದದ ಉಭಯ ಸಂಕಟ
“ಯೇಸುವಿಗೆ ನಂಬಿಕೆ ಇದ್ದಿರಲು ಹೇಗೆ ಸಾಧ್ಯ? ಅವನು ದೇವರಾಗಿದ್ದಾನೆ; ಇನ್ನೊಬ್ಬರ ಮೇಲೆ ಆತುಕೊಳ್ಳದೆಯೇ ಅವನು ಎಲ್ಲವನ್ನು ತಿಳಿದುಕೊಳ್ಳುತ್ತಾನೆ ಮತ್ತು ನೋಡುತ್ತಾನೆ. ನಂಬಿಕೆಯೆಂದರೆ ನಿಕರವಾಗಿ ಇನ್ನೊಬ್ಬರ ಮೇಲೆ ಆತುಕೊಳ್ಳುವುದು ಮತ್ತು ಕಾಣದೆ ಇರುವಂಥದ್ದನ್ನು ಅಂಗೀಕರಿಸುವುದು ಆಗಿದೆ; ಹೀಗೆ ದೇವರಾದ ಯೇಸುವಿಗೆ ನಂಬಿಕೆ ಇದ್ದಿರಬಹುದಾದ ವಿಷಯವು ಅಸಂಭವವಾಗಿದೆ.”
ಫ್ರೆಂಚ್ ದೇವತಾಶಾಸ್ತ್ರಜ್ಞನಾದ ಜಾಕ್ ಗೀಯೆ ಎಂಬವರಿಗನುಸಾರ, ಕ್ಯಾತೊಲಿಕ್ ಧರ್ಮದಲ್ಲಿ ಅದು ಪ್ರಧಾನವಾದ ಅಭಿಪ್ರಾಯವಾಗಿದೆ. ಈ ವಿವರಣೆಯು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೊ? ಕ್ರೈಸ್ತರಿಗೆ ಎಲ್ಲ ವಿಷಯಗಳಲ್ಲಿ ಯೇಸು ಮಾದರಿಯಾಗಿರುವುದರಿಂದ, ನಂಬಿಕೆಯ ವಿಷಯದಲ್ಲೂ ಅವನು ಮಾದರಿಯಾಗಿರಬೇಕೆಂದು ನೀವು ನೆನಸಿರಬಹುದು. ನೀವು ಹಾಗೆ ನೆನಸಿರುವಲ್ಲಿ, ಕ್ರೈಸ್ತಪ್ರಪಂಚದ ತ್ರಯೈಕ್ಯ ಸಿದ್ಧಾಂತವನ್ನು ನೀವು ಪರಿಗಣಿಸಿಲ್ಲ.
ತ್ರಯೈಕ್ಯವನ್ನು “ಕ್ರೈಸ್ತ ನಂಬಿಕೆ ಮತ್ತು ಜೀವನದ ಮುಖ್ಯ ರಹಸ್ಯ” ದೋಪಾದಿ ನಂಬುವ ಕ್ಯಾತೊಲಿಕ್, ಪ್ರಾಟೆಸ್ಟಂಟ್, ಮತ್ತು ಆರ್ತೋಡಾಕ್ಸ್ ದೇವತಾಶಾಸ್ತ್ರಜ್ಞರಿಗೆ, ಯೇಸುವಿನ ನಂಬಿಕೆಯ ಪ್ರಶ್ನೆಯು ನಿಜವಾಗಿಯೂ ಒಂದು ಗೂಢಪ್ರಶ್ನೆಯಾಗಿದೆ.a ಹಾಗಿದ್ದರೂ, ಎಲ್ಲರೂ ಯೇಸುವಿನ ನಂಬಿಕೆಯನ್ನು ಅಲ್ಲಗಳೆಯುವುದಿಲ್ಲ. ತ್ರಯೈಕ್ಯ ತತ್ವದ ಸಂಬಂಧದಲ್ಲಿ ಅದೊಂದು “ವಿರೋಧೋಕ್ತಿ” ಆಗಿದೆ ಎಂದು ಗೀಯೆ ಅಂಗೀಕರಿಸುವುದಾದರೂ, “ಯೇಸುವಿಗೆ ನಂಬಿಕೆಯಿತ್ತು ಎಂಬುದನ್ನು ಗ್ರಹಿಸದೆ ಇರಲು ಸಾಧ್ಯವಿಲ್ಲ” ಎಂದು ಜಾಕ್ ಗೀಯೆ ದೃಢಪಡಿಸುತ್ತಾನೆ.
“ಸತ್ಯ ದೇವರು ಮತ್ತು ಸತ್ಯ ಮನುಷ್ಯನಂತೆ, . . . ಕ್ರಿಸ್ತನು ಸ್ವತಃ ತನ್ನಲ್ಲಿ ನಂಬಿಕೆಯನ್ನು ಇಡಲು ಸಾಧ್ಯವಿಲ್ಲ,” ಎಂದು ಹೇಳುವುದರಲ್ಲಿ ಫ್ರೆಂಚ್ ಪಾದ್ರಿ ಜಾನ್ ಗಾಲೊ, ಮತ್ತು ಅವನಂತೆ ದೇವತಾಶಾಸ್ತ್ರಜ್ಞರಲ್ಲಿ ಹೆಚ್ಚಿನವರು ಮುಚ್ಚುಮರೆಯಿಲ್ಲದವರಾಗಿದ್ದಾರೆ. “ನಂಬಿಕೆ ಇನ್ನೊಬ್ಬರನ್ನು ನಂಬುವುದರಲ್ಲಿದೆ, ಸ್ವತಃ ಒಬ್ಬನನ್ನು ನಂಬುವುದರಲ್ಲಿ ಇರುವುದಿಲ್ಲ,” ಎಂದು ಲಾ ಚಿವಿಲ್ಟಾ ಕ್ಯಾಟೊಲಿಕಾ ಎಂಬ ಪತ್ರಿಕೆ ಗಮನಿಸುತ್ತದೆ. ಹಾಗಾದರೆ, ಯೇಸುವಿನ ನಂಬಿಕೆಯನ್ನು ಗುರುತಿಸುವುದರಲ್ಲಿರುವ ತಡೆಯು, ತ್ರಯೈಕ್ಯದ ಸಿದ್ಧಾಂತವಾಗಿದೆ, ಯಾಕೆಂದರೆ ಎರಡೂ ಸಂಕಲ್ಪಗಳು ಸ್ಪಷ್ಟವಾಗಿಗಿ ಪರಸ್ಪರ ವಿರುದ್ಧವಾಗಿವೆ.
“ಸುವಾರ್ತೆಗಳು ಯೇಸುವಿನ ನಂಬಿಕೆಯ ಕುರಿತು ಮಾತಾಡುವುದೇ ಇಲ್ಲ,” ಎಂದು ದೇವತಾಶಾಸ್ತ್ರಜ್ಞರು ಹೇಳುತ್ತಾರೆ. ಕಾರ್ಯತಃ, ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಉಪಯೋಗಿಸಲಾದ ಪಿಸಿಯ್ಟೊ (ನಂಬು, ನಂಬಿಕೆಯನ್ನು ಹೊಂದಿರು) ಮತ್ತು ಪಿಸಿಸ್ಟ್ (ನಂಬಿಕೆ) ಎಂಬ ಪದಗಳು, ಯೇಸುವಿಗೆ ತನ್ನ ಸ್ವರ್ಗೀಯ ತಂದೆಯಲ್ಲಿದ್ದ ನಂಬಿಕೆಗಿಂತ ಸಾಮಾನ್ಯವಾಗಿ ಶಿಷ್ಯರಿಗೆ ದೇವರಲ್ಲಿ ಯಾ ಕ್ರಿಸ್ತನಲ್ಲಿದ್ದ ನಂಬಿಕೆಯನ್ನು ಸೂಚಿಸುತ್ತವೆ. ಹೀಗೆ ದೇವರ ಮಗನಿಗೆ ನಂಬಿಕೆ ಇರಲಿಲ್ಲವೆಂದು ನಾವು ತೀರ್ಮಾನಿಸಬೇಕೊ? ಅವನು ಮಾಡಿದ ಮತ್ತು ಹೇಳಿದ ವಿಷಯದಿಂದ ನಾವು ಏನನ್ನು ತಿಳಿದುಕೊಳ್ಳಬಲ್ಲೆವು? ಶಾಸ್ತ್ರಗಳು ಏನನ್ನು ಹೇಳುತ್ತವೆ?
ನಂಬಿಕೆಯಿಲ್ಲದ ಪ್ರಾರ್ಥನೆಗಳೊ?
ಯೇಸು ಪ್ರಾರ್ಥನೆಯ ಮನುಷ್ಯನಾಗಿದ್ದನು. ಪ್ರತಿಯೊಂದು ಸಂದರ್ಭದಲ್ಲಿ ಅವನು ಪ್ರಾರ್ಥಿಸಿದನು—ಅವನು ದೀಕ್ಷಾಸ್ನಾನ ಪಡೆದಾಗ (ಲೂಕ 3:21); ತನ್ನ 12 ಅಪೊಸ್ತಲರನ್ನು ಆರಿಸುವ ಮುಂಚೆ ಇಡೀ ರಾತ್ರಿ (ಲೂಕ 6:12, 13); ಮತ್ತು ಅಪೊಸ್ತಲರಾದ ಪೇತ್ರ, ಯೋಹಾನ, ಮತ್ತು ಯಾಕೋಬರೊಂದಿಗೆ ಇರುವಾಗ ಪರ್ವತದ ಮೇಲೆ ತನ್ನ ಅದ್ಭುತಕರ ರೂಪಾಂತರದ ಮುಂಚೆ. (ಲೂಕ 9:28, 29) ಶಿಷ್ಯರಲ್ಲಿ ಒಬ್ಬನು ಅವನನ್ನು “ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು” ಎಂದು ಕೇಳಿದಾಗ, ಅವನು ಪ್ರಾರ್ಥನೆ ಮಾಡುತ್ತಿದ್ದನು, ಆದುದರಿಂದ ಅವನು ಅವರಿಗೆ ಕರ್ತನ ಪ್ರಾರ್ಥನೆಯನ್ನು (“ನಮ್ಮ ತಂದೆಯೆ”) ಕಲಿಸಿದನು. (ಲೂಕ 11:1-4; ಮತ್ತಾಯ 6:9-13) ಅವನು ಒಂಟಿಯಾಗಿ ಮತ್ತು ದೀರ್ಘವಾಗಿ ಬೆಳಗ್ಗೆ ಬೇಗನೆ (ಮಾರ್ಕ 1:35-39); ಸಂಜೆಯ ಸಮಯದಲ್ಲಿ, ಪರ್ವತದ ಮೇಲೆ, ತನ್ನ ಶಿಷ್ಯರನ್ನು ಕಳುಹಿಸಿದ ಮೇಲೆ (ಮಾರ್ಕ 6:45, 46); ತನ್ನ ಶಿಷ್ಯರೊಟ್ಟಿಗೆ ಮತ್ತು ತನ್ನ ಶಿಷ್ಯರಿಗಾಗಿ ಪ್ರಾರ್ಥಿಸಿದನು. (ಲೂಕ 22:32; ಯೋಹಾನ 17:1-26) ಹೌದು, ಪ್ರಾರ್ಥನೆ ಯೇಸುವಿನ ಜೀವನದ ಒಂದು ಪ್ರಾಮುಖ್ಯವಾದ ಭಾಗವಾಗಿತ್ತು.
ಅದ್ಭುತಕಾರ್ಯಗಳನ್ನು ಮಾಡುವ ಮೊದಲು ಅವನು ಪ್ರಾರ್ಥಿಸಿದನು, ಉದಾಹರಣೆಗೆ, ತನ್ನ ಮಿತ್ರನಾದ ಲಾಜರನನ್ನು ಪುನರುತ್ಥಾನಗೊಳಿಸುವ ಮುಂಚೆ: “ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನ್ನನ್ನು ಕೊಂಡಾಡುತ್ತೇನೆ; ನೀನು ಯಾವಾಗಲೂ ನನ್ನ ಪ್ರಾರ್ಥನೆಯನ್ನು ಕೇಳುವವನಾಗಿದ್ದೀ ಎಂದು ನನಗೆ ಗೊತ್ತೇ ಇದೆ; ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿ ಎಂದು ಸುತ್ತಲು ನಿಂತಿರುವ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದೆ.” (ಯೋಹಾನ 11:41, 42) ಆ ಪ್ರಾರ್ಥನೆಯನ್ನು ತನ್ನ ತಂದೆ ಉತ್ತರಿಸುವನೆಂಬ ಅವನ ನಿಶ್ಚಿತತೆಯು, ಅವನ ನಂಬಿಕೆಯ ಬಲವನ್ನು ಸೂಚಿಸುತ್ತದೆ. ದೇವರಿಗೆ ಪ್ರಾರ್ಥನೆ ಮತ್ತು ಆತನಲ್ಲಿ ನಂಬಿಕೆ ಎಂಬ ವಿಷಯದ ನಡುವೆ ಇರುವ ಜೋಡಣೆಯು, ಕ್ರಿಸ್ತನು ತನ್ನ ಶಿಷ್ಯರಿಗೆ ಹೇಳಿದ ವಿಷಯದಲ್ಲಿ ವ್ಯಕ್ತವಾಗಿದೆ: “ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ.”—ಮಾರ್ಕ 11:24.
ಯೇಸುವಿಗೆ ನಂಬಿಕೆ ಇರದಿದ್ದಲ್ಲಿ, ಅವನೇಕೆ ದೇವರಿಗೆ ಪ್ರಾರ್ಥನೆ ಮಾಡಿದನು? ಯೇಸು ಅದೇ ಸಮಯದಲ್ಲಿ ಮನುಷ್ಯನೂ ದೇವರೂ ಆಗಿದ್ದನೆಂಬ ಕ್ರೈಸ್ತಪ್ರಪಂಚದ ಅಶಾಸ್ತ್ರೀಯ ಬೋಧನೆಯಾದ ತ್ರಯೈಕ್ಯವು, ಬೈಬಲಿನ ಸಂದೇಶವನ್ನು ಅಸೃಷ್ಟಗೊಳಿಸುತ್ತದೆ. ಬೈಬಲಿನ ಸರಳತೆ ಮತ್ತು ಶಕ್ತಿಯನ್ನು ಅರ್ಥಮಾಡಿಕೊಳ್ಳುವುದರಿಂದ ಅದು ಜನರನ್ನು ತಡೆಯುತ್ತದೆ. ಮನುಷ್ಯನಾದ ಯೇಸು ಯಾರಿಗೆ ಮೊರೆಯಿಟ್ಟನು? ಸ್ವತಃ ತನಗೊ? ಅವನು ದೇವರಾಗಿದ್ದನೆಂಬುದು ಅವನಿಗೆ ತಿಳಿದಿರಲಿಲ್ಲವೊ? ಅವನು ದೇವರಾಗಿದ್ದು, ಅದನ್ನು ಅರಿತಿದ್ದರೆ, ಅವನೇಕೆ ಪ್ರಾರ್ಥಿಸಿದನು?
ತನ್ನ ಭೂಜೀವಿತದ ಕೊನೆಯ ದಿನದಂದು ಮಾಡಲಾದ ಯೇಸುವಿನ ಪ್ರಾರ್ಥನೆಗಳು, ತನ್ನ ಸ್ವರ್ಗೀಯ ತಂದೆಯಲ್ಲಿ ಅವನಿಗಿದ್ದ ದೃಢವಾದ ನಂಬಿಕೆಯ ಇನ್ನೂ ಆಳವಾದ ಒಳನೋಟವನ್ನು ನಮಗೆ ಕೊಡುತ್ತವೆ. ನಿರೀಕ್ಷೆ ಮತ್ತು ಭರವಸೆಯುಳ್ಳ ಹಾರೈಕೆಯನ್ನು ಪ್ರದರ್ಶಿಸುತ್ತಾ, ಅವನು ವಿನಂತಿಸಿಕೊಂಡದ್ದು: “ಈಗ ತಂದೆಯೇ, ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆಪಡಿಸು; ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು.”—ಯೋಹಾನ 17:5.
ತನ್ನ ಅತ್ಯಂತ ಕಷ್ಟಕರ ಪರೀಕ್ಷೆಗಳು ಮತ್ತು ಮರಣವು ಆಸನ್ನವಾಗಿವೆ ಎಂದು ಅರಿಯುತ್ತಾ, ಎಣ್ಣೇ ಮರಗಳ ಗುಡ್ಡದ ಮೇಲೆ ಗೆತ್ಸೇಮನೆ ತೋಟದಲ್ಲಿ ಅವನಿದ್ದ ರಾತ್ರಿ, ಅವನು “ದುಃಖಪಟ್ಟು ಮನಗುಂದಿದವನಾದನು,” ಮತ್ತು ಅವನಂದದ್ದು: “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ.” (ಮತ್ತಾಯ 26:36-38) ಆಮೇಲೆ ಅವನು ಮೊಣಕಾಲೂರಿ ಪ್ರಾರ್ಥಿಸಿದ್ದು: “ತಂದೆಯೇ, ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ.” ಆಗ “ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸಿದನು.” ದೇವರು ಅವನ ಪ್ರಾರ್ಥನೆಯನ್ನು ಆಲಿಸಿದನು. ಅವನ ಭಾವನೆಗಳ ತೀಕ್ಷೈತೆ ಮತ್ತು ಪರೀಕ್ಷೆಯ ತೀವ್ರತೆಯಿಂದ, “ಆತನ ಬೆವರು ಭೂಮಿಗೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳೋಪಾದಿಯಲ್ಲಿತ್ತು.”—ಲೂಕ 22:42-44.
ಯೇಸುವಿನ ಕಷ್ಟಾನುಭವಗಳು, ಬಲಪಡಿಸಿಕೊಳ್ಳಲಿಕ್ಕಾಗಿದ್ದ ಅವನ ಅಗತ್ಯ, ಮತ್ತು ಅವನ ಮೊರೆಗಳು ಏನನ್ನು ಸೂಚಿಸುತ್ತವೆ? “ಒಂದು ಸಂಗತಿಯು ನಿಶ್ಚಿತವಾಗಿದೆ,” ಎಂದು ಜಾಕ್ ಗೀಯೆ ಬರೆಯುತ್ತಾರೆ, “ಯೇಸು ಪ್ರಾರ್ಥಿಸಿದನು, ಮತ್ತು ಪ್ರಾರ್ಥನೆಯು ಅವನ ಜೀವಿತದ ಮತ್ತು ಅವನ ಕ್ರಿಯೆಗಳ ಆವಶ್ಯಕವಾದ ಭಾಗವಾಗಿದೆ. ಮನುಷ್ಯರಂತೆ ಅವನು ಪ್ರಾರ್ಥಿಸಿದನು, ಮತ್ತು ಮನುಷ್ಯರ ಪರವಾಗಿ ಅವನು ಪ್ರಾರ್ಥಿಸಿದನು. ಮನುಷ್ಯರ ಪ್ರಾರ್ಥನೆಗಳು ನಂಬಿಕೆಯಿಲ್ಲದೆ ಕಲ್ಪನಾತೀತವಾಗಿವೆ. ಯೇಸುವಿನ ಪ್ರಾರ್ಥನೆಗಳು ನಂಬಿಕೆಯಿಲ್ಲದೆ ಭಾವ್ಯವಾಗಿರುವವೊ?”
ತನ್ನ ಮರಣದ ಮುಂಚೆ ಯಾತನಾ ಕಂಭದ ಮೇಲೆ ತೂಗಾಡುತ್ತಾ, ದಾವೀದನ ಒಂದು ಕೀರ್ತನೆಯನ್ನು ನಮೂದಿಸುತ್ತಾ, ಯೇಸು ಗಟ್ಟಿಯಾದ ಧ್ವನಿಯಿಂದ ಕೂಗಿದನು. ಆಮೇಲೆ, ಕೊನೆಯ ಮೊರೆಯನ್ನು ಅವನು ನಂಬಿಕೆಯಲ್ಲಿ, ಗಟ್ಟಿಯಾದ ಧ್ವನಿಯಿಂದ ಕೂಗಿಹೇಳಿದ್ದು: “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ.” (ಲೂಕ 23:46; ಮತ್ತಾಯ 27:46) ವಿವಿಧಪಂಗಡಗಳು ಸೇರಿ ಮಾಡಿದ ಒಂದು ಇಟ್ಯಾಲಿಯನ್ ಭಾಷಾಂತರವಾದ, ಪಾರೊಲಾ ಡೆಲ್ ಸೀನ್ಯೋರೆ, ಯೇಸು ತಂದೆಗೆ ‘ತನ್ನ ಜೀವವನ್ನು ಒಪ್ಪಿಸಿದನು’ ಎಂದು ಹೇಳುತ್ತದೆ.
ಜಾಕ್ ಗೀಯೆ ಹೇಳುವುದು: “ಇಸ್ರಾಯೇಲಿನ ಕೀರ್ತನೆಗಳನ್ನು ನಮೂದಿಸುತ್ತಾ ತನ್ನ ತಂದೆಗೆ ಕೂಗಿಕೊಳ್ಳುವ ಶಿಲುಬೆಗೇರಿಸಿದ ಕ್ರಿಸ್ತನ ಕುರಿತು ನಮಗೆ ತಿಳಿಸುವ ಮೂಲಕ, ಸುವಾರ್ತಾ ಬರಹಗಾರರು ನಮಗೆ ಮನಗಾಣಿಸುವ ವಿಷಯವೇನೆಂದರೆ, ಆ ಕೂಗು, ಏಕಜಾತ ಪುತ್ರನ ಕೂಗು, ಸಂಪೂರ್ಣ ಯಾತನೆಯ ಆ ಕೂಗು, ಸಂಪೂರ್ಣ ಭರವಸೆಯ ಕೂಗು, ನಂಬಿಕೆಯ ಕೂಗಾಗಿದೆ, ನಂಬಿಕೆಯಲ್ಲಿ ಒಂದು ಮರಣದ ಕೂಗಾಗಿದೆ.”
ನಂಬಿಕೆಯ ಈ ಸ್ಪಷ್ಟವಾಗಿದ ಮತ್ತು ನಾಟಕೀಯ ಪ್ರಮಾಣದಿಂದ ಎದುರುಗೊಂಡಿರುವ ಕೆಲವು ದೇವತಾಶಾಸ್ತ್ರಜ್ಞರು, ನಂಬಿಕೆ ಮತ್ತು “ಭರವಸೆ”ಯ ನಡುವೆ ವ್ಯತ್ಯಾಸವನ್ನು ಉಂಟುಮಾಡಲು ಪ್ರಯತ್ನಿಸುತ್ತಾರೆ. ಆದರೆ, ಇಂತಹ ಒಂದು ವ್ಯತ್ಯಾಸವು, ಶಾಸ್ತ್ರಗಳ ಮೇಲೆ ಆಧಾರಿತವಾಗಿಲ್ಲ.
ಯೇಸು ತಾಳಿಕೊಂಡ ತೀಕ್ಷೈವಾದ ಪರೀಕ್ಷೆಗಳು ಅವನ ನಂಬಿಕೆಯ ಕುರಿತು ನಿಕರವಾಗಿ ಏನನ್ನು ಪ್ರಕಟಿಸುತ್ತವೆ?
“ನಮ್ಮ ನಂಬಿಕೆಯನ್ನು ಪೂರ್ಣಗೊಳಿಸುವವನು” ಪರಿಪೂರ್ಣಗೊಳಿಸಲ್ಪಟ್ಟದ್ದು
ಇಬ್ರಿಯರಿಗೆ ಬರೆದ ತನ್ನ ಪತ್ರದ 11 ನೆಯ ಅಧ್ಯಾಯದಲ್ಲಿ, ಕ್ರೈಸ್ತಪೂರ್ವ ಸಮಯಗಳ ನಂಬಿಗಸ್ತ ಪುರುಷರ ಮತ್ತು ಸ್ತ್ರೀಯರ ಮಹಾ ಮೇಘಗಣವನ್ನು ಅಪೊಸ್ತಲ ಪೌಲನು ಉಲ್ಲೇಖಿಸುತ್ತಾನೆ. ನಂಬಿಕೆಯ ಅತ್ಯಂತ ಮಹಾನ್ ಮತ್ತು ಪರಿಪೂರ್ಣ ಮಾದರಿಯನ್ನು ಸೂಚಿಸುತ್ತಾ, ಅವನು ಕೊನೆಗೊಳಿಸುತ್ತಾನೆ: “ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ (ಪೂರ್ಣಗೊಳಿಸುವವನು, NW) ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು . . . ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು . . . ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು.”—ಇಬ್ರಿಯ 12:1-3.
ಈ ವಚನವು “ಯೇಸುವಿನ ವೈಯಕ್ತಿಕ ನಂಬಿಕೆ”ಯ ಕುರಿತಲ್ಲ, ಆದರೆ, “ನಂಬಿಕೆಯನ್ನು ಆರಂಭಿಸುವವನು ಯಾ ಸ್ಥಾಪಕ” ನಂತೆ ಅವನ ಪಾತ್ರದ ಕುರಿತು ಮಾತಾಡುತ್ತದೆ ಎಂದು ದೇವತಾಶಾಸ್ತ್ರಜ್ಞರಲ್ಲಿ ಹೆಚ್ಚಿನವರು ಹೇಳುತ್ತಾರೆ. ಈ ಪದಗುಚ್ಛದಲ್ಲಿ ಕಂಡುಬರುವ ಗ್ರೀಕ್ ಪದವಾದ ಟೆಲಿಒಟಸ್, ಪೂರೈಸುವವನನ್ನು, ಯಾವುದೊ ವಿಷಯವನ್ನು ಪೂರೈಸುವ ಯಾ ಪೂರ್ಣಗೊಳಿಸುವವನನ್ನು ಸೂಚಿಸುತ್ತದೆ. “ಪೂರ್ಣಗೊಳಿಸುವವ” ನೋಪಾದಿ, ಯೇಸು ನಂಬಿಕೆಯನ್ನು ಪೂರ್ಣಗೊಳಿಸಿದ್ದು ಹೇಗೆಂದರೆ, ಭೂಮಿಗೆ ಅವನ ಬರುವಿಕೆಯು ಬೈಬಲ್ ಪ್ರವಾದನೆಗಳನ್ನು ನೆರವೇರಿಸಿತು ಮತ್ತು ಹೀಗೆ ನಂಬಿಕೆಗಾಗಿ ಅಧಿಕ ಸ್ಥಿರವಾದ ಅಡಿಪಾಯವನ್ನು ಸ್ಥಾಪಿಸಿತು. ಆದರೆ ಅವನಿಗೆ ನಂಬಿಕೆಯಿರಲಿಲ್ಲವೆಂದು ಇದು ಅರ್ಥೈಸುತ್ತದೊ?
ಪುಟ 15 ರಲ್ಲಿರುವ ರೇಖಾಚೌಕದಲ್ಲಿ ನೀವು ನೋಡಸಾಧ್ಯವಿರುವಂಥ ಇಬ್ರಿಯರಿಗೆ ಬರೆದ ಪತ್ರದಿಂದ ತೆಗೆಯಲ್ಪಟ್ಟ ಉದ್ಧೃತ ಭಾಗಗಳು ಯಾವುದೇ ಸಂಶಯವನ್ನು ಬಿಡುವುದಿಲ್ಲ. ಯೇಸು ತನ್ನ ಕಷ್ಟಾನುಭಗಳಿಂದ ಮತ್ತು ತನ್ನ ವಿಧೇಯತೆಯಿಂದ ಪರಿಪೂರ್ಣಗೊಳಿಸಲ್ಪಟ್ಟನು. ಈಗಾಗಲೇ ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದರೂ, ಅವನ ಅನುಭವಗಳು ಅವನನ್ನು ಎಲ್ಲ ವಿಷಯಗಳಲ್ಲಿ—ನಂಬಿಕೆಯಲ್ಲಿಯೂ ಸಹ—ಪರಿಪೂರ್ಣನಾಗಿಯೂ ಸಮಗ್ರನಾಗಿಯೂ ಮಾಡಿದವು, ಇದರಿಂದ ಸತ್ಯ ಕ್ರೈಸ್ತರ ರಕ್ಷಣೆಗಾಗಿ ಅವನು ಮಹಾ ಯಾಜಕನಂತೆ ಪೂರ್ಣವಾಗಿ ಅರ್ಹನಾಗಲು ಸಾಧ್ಯವಿತ್ತು. “ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ” ತನ್ನ ತಂದೆಗೆ ಅವನು ಮೊರೆಯಿಟ್ಟನು, ದೇವರಿಗೆ ಅವನು “ನಂಬಿಗಸ್ತ” ನಾಗಿದ್ದನು, ಮತ್ತು ಅವನಿಗೆ “ದಿವ್ಯ ಭಯ” ವಿತ್ತು. (ಇಬ್ರಿಯ 3:1, 2; 5:7-9, NW) ಅವನು “ಸರ್ವ ವಿಷಯಗಳಲ್ಲಿ” ನಿಕರವಾಗಿ “ನಮ್ಮ ಹಾಗೆ ಶೋಧನೆಗೆ ಗುರಿಯಾದನು” ಎಂದು ಇಬ್ರಿಯ 4:15 ಹೇಳುತ್ತದೆ, ಅಂದರೆ, “ನಾನಾವಿಧವಾದ ಕಷ್ಟ” ಗಳನ್ನು ಅನುಭವಿಸುವ ಯಾವುದೇ ನಂಬಿಗಸ್ತ ಕ್ರೈಸ್ತನ ನಂಬಿಕೆಯಂತೆಯೆ. (ಯಾಕೋಬ 1:2, 3) ಯೇಸುವನ್ನು ಅವನ ಶಿಷ್ಯರ “ಹಾಗೆ” ಅವನ ನಂಬಿಕೆಯಲ್ಲಿ ಅವರಿಗಾಗುವಂತೆ ಪರೀಕ್ಷಿಸದೆ ಪರೀಕೆಗ್ಷೊಳಪಡಿಸಸಾಧ್ಯವಿದೆಯೆಂದು ನಂಬುವುದು ನ್ಯಾಯಸಮ್ಮತವೊ?
ಯೇಸುವಿನ ಸಮಗ್ರ ನಂಬಿಕೆಗೆ ಬಿನ್ನಹಗಳು, ವಿಧೇಯತೆ, ಕಷ್ಟಾನುಭವ, ಪರೀಕ್ಷೆಗಳು, ನಂಬಿಗಸ್ತಿಕೆ, ಮತ್ತು ದಿವ್ಯ ಭಯ ಸಾಕ್ಷ್ಯ ಕೊಡುತ್ತವೆ. ತನ್ನ ಸ್ವಂತ ನಂಬಿಕೆಯಲ್ಲಿ ಪರಿಪೂರ್ಣನಾಗಿ ಮಾಡಲ್ಪಟ್ಟ ಅನಂತರವೆ, ಅವನು “ನಮ್ಮ ನಂಬಿಕೆಯನ್ನು ಪೂರ್ಣಗೊಳಿಸುವವ” ನಾದನೆಂದು ಇದು ಸೂಚಿಸುತ್ತದೆ. ಸ್ಪಷ್ಟವಾಗಿಗಿ, ತ್ರಯೈಕ್ಯದ ತತ್ವವು ವಾದಿಸುವಂತೆ, ಅವನು ಮಗನಾದ ದೇವರಾಗಿರಲಿಲ್ಲ.—1 ಯೋಹಾನ 5:5.
ಅವನು ದೇವರ ವಾಕ್ಯವನ್ನು ನಂಬಿಲಿಲ್ಲವೆ?
ಯೇಸು “ದೇವರ ವಾಕ್ಯ ಮತ್ತು ಅದರ ಸಂದೇಶದಲ್ಲಿ ನಂಬಲು ಸಾಧ್ಯವಿಲ್ಲ” ಯಾಕೆಂದರೆ “ದೇವರ ವಾಕ್ಯದೋಪಾದಿ, ಅವನು ಆ ವಾಕ್ಯವನ್ನು ಕೇವಲ ಘೋಷಿಸ ಬಲ್ಲನು” ಎಂದು ಹೇಳುವ ವಿಪರೀತ ವೀಕ್ಷಣೆಗೆ ಅವರು ಬರುವಂತೆ, ದೇವತಾಶಾಸ್ತ್ರಜ್ಞರ ಯೋಚನೆಯನ್ನು ತ್ರಯೈಕ್ಯದ ತತ್ವವು ಕಟ್ಟುಪಾಡಿಗೊಳಪಡಿಸುತ್ತದೆ.—ಆಂಜೆಲೊ ಅಮಾಟೊ, ಜೇಜು ಇಲ್ ಸೀನ್ಯೋರೆ, ಚರ್ಚಿನ ಮಂಜೂರಾತಿಯೊಂದಿಗೆ.
ಆದರೂ, ಶಾಸ್ತ್ರಗಳಿಗೆ ಯೇಸುವಿನ ಸತತವಾದ ಉಲ್ಲೇಖಗಳು ನಿಜವಾಗಿಯೂ ಏನನ್ನು ತೋರಿಸುತ್ತವೆ? ಅವನು ಶೋಧಿಸಲ್ಪಟ್ಟಾಗ, ಅವನು ಶಾಸ್ತ್ರಗಳಿಂದ ಮೂರು ಬಾರಿ ನಮೂದಿಸಿದನು. ಯೇಸು ದೇವರನ್ನು ಮಾತ್ರ ಆರಾಧಿಸಿದನೆಂದು ಅವನ ಮೂರನೆಯ ಉತ್ತರವು ಸೈತಾನನಿಗೆ ಹೇಳಿತು. (ಮತ್ತಾಯ 4:4, 7, 10) ಹಲವಾರು ಸಂದರ್ಭಗಳಲ್ಲಿ, ಅವುಗಳ ನೆರವೇರಿಕೆಯಲ್ಲಿ ನಂಬಿಕೆಯನ್ನು ತೋರಿಸುತ್ತಾ, ತನಗೇ ಅನ್ವಯಿಸಿದಂತಹ ಪ್ರವಾದನೆಗಳನ್ನು ಯೇಸು ಉಲ್ಲೇಖಿಸಿದನು. (ಮಾರ್ಕ 14:21, 27; ಲೂಕ 18:31-33; 22:37; ಹೋಲಿಸಿ ಲೂಕ 9:22; 24:44-46.) ಈ ಪರಿಶೀಲನೆಯಿಂದ ನಾವು ತೀರ್ಮಾನಿಸಬೇಕಾದದ್ದು ಏನೆಂದರೆ, ತನ್ನ ತಂದೆಯ ಮೂಲಕ ಪ್ರೇರಿತವಾದ ಶಾಸ್ತ್ರಗಳನ್ನು ಯೇಸು ಬಲ್ಲವನಾಗಿದ್ದನು, ನಂಬಿಕೆಯಿಂದ ಅವುಗಳನ್ನು ಆಚರಿಸಿದನು, ಮತ್ತು ತನ್ನ ಪರೀಕ್ಷೆಗಳನ್ನು, ಕಷ್ಟಾನುಭವವನ್ನು, ಮರಣ, ಮತ್ತು ಪುನರುತ್ಥಾನವನ್ನು ಮುಂತಿಳಿಸಿದ ಪ್ರವಾದನೆಗಳ ನೆರವೇರಿಕೆಯಲ್ಲಿ ಅವನಿಗೆ ಸಂಪೂರ್ಣ ಭರವಸೆಯಿತ್ತು.
ಯೇಸು—ಅನುಕರಿಸಲಿಕ್ಕಾಗಿರುವ ನಂಬಿಕೆಯ ಮಾದರಿ
ತನ್ನ ತಂದೆಯ ಕಡೆಗೆ ನಿಷ್ಠೆಯನ್ನು ಕಾಪಾಡಿಕೊಳ್ಳುವ ಮತ್ತು ‘ಲೋಕವನ್ನು ಜಯಿಸುವ’ ಸಲುವಾಗಿ ಕೊನೆಯ ವರೆಗೆ ಯೇಸು ನಂಬಿಕೆಯ ಹೋರಾಟವನ್ನು ಹೋರಾಡಬೇಕಿತ್ತು. (ಯೋಹಾನ 16:33) ನಂಬಿಕೆಯಿಲ್ಲದೆ, ಅಂತಹ ಒಂದು ಜಯವನ್ನು ಗಳಿಸುವುದು ಅಸಾಧ್ಯವಾಗಿದೆ. (ಇಬ್ರಿಯ 11:6; 1 ಯೋಹಾನ 5:4) ವಿಜಯಶಾಲಿಯಾದ ನಂಬಿಕೆಯ ಕಾರಣದಿಂದ, ಅವನು ತನ್ನ ನಂಬಿಗಸ್ತ ಹಿಂಬಾಲಕರಿಗೆ ಒಂದು ಉದಾಹರಣೆಯಾಗಿದ್ದನು. ಅವನಿಗೆ ಖಂಡಿತವಾಗಿಯೂ ಸತ್ಯ ದೇವರಲ್ಲಿ ನಂಬಿಕೆಯಿತ್ತು.
[ಅಧ್ಯಯನ ಪ್ರಶ್ನೆಗಳು]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಮೂಲಕ ಪ್ರಕಾಶಿಸಲಾದ ನೀವು ತ್ರಯೈಕ್ಯವನ್ನು ನಂಬ ಬೇಕೋ? ಎಂಬ ಬ್ರೋಷರಿನಲ್ಲಿ, ತ್ರಯೈಕ್ಯದ ಬೋಧನೆಯ ನಿರಾಧಾರತೆಯ ಅಧಿಕ ವಿಸ್ತಾರವಾದ ಚರ್ಚೆಯನ್ನು ಕಂಡುಕೊಳ್ಳಸಾಧ್ಯವಿದೆ.
[ಪುಟ 15 ರಲ್ಲಿರುವ ಚೌಕ]
“ಪೂರ್ಣಗೊಳಿಸುವವನಾದ” ಯೇಸು, ಪರಿಪೂರ್ಣಗೊಳಿಸಲ್ಪಟ್ಟಿದ್ದು
ಇಬ್ರಿಯ 2:10: “ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ ಆತನು ಬಹು ಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾ ಕರ್ತನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು.”
ಇಬ್ರಿಯ 2:17, 18: “ಆದದರಿಂದ ಆತನು ಎಲ್ಲಾ ವಿಷಯಗಳಲ್ಲಿ ತನ್ನ ‘ಸಹೋದರರಿಗೆ’ ಸಮಾನನಾಗಬೇಕಾಗಿ ಬಂತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣಮಾಡುವದಕ್ಕಾಗಿ ದೇವರ ಕಾರ್ಯಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾ ಯಾಜಕನಾದನು. ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ.”
ಇಬ್ರಿಯ 3:2: “ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ ಯೇಸುವೂ ತನ್ನನ್ನು ನೇಮಿಸಿದಾತನಿಗೆ ನಂಬಿಗಸ್ತನಾಗಿದ್ದಾನೆ.”
ಇಬ್ರಿಯ 4:15: “ಯಾಕಂದರೆ ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ.”
ಇಬ್ರಿಯ 5:7-9: “ಕ್ರಿಸ್ತನು ತಾನು ಭೂಲೋಕದಲಿದ್ಲಾಗ್ದ ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು. ಹೀಗೆ ಆತನು ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. ಇದಲ್ಲದೆ ಆತನು ಸಿದ್ಧಿಗೆ ಬಂದು . . . ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು.”