ಪಾಠ 25
ದೇವರು ಮನುಷ್ಯರನ್ನ ಯಾಕೆ ಸೃಷ್ಟಿ ಮಾಡಿದನು?
‘ಮನುಷ್ಯ ಬದುಕೋದು ಸ್ವಲ್ಪ ದಿನ, ಅವನ ಬದುಕಿನ ದಾರಿಯಲ್ಲಿ ತೊಂದರೆಗಳು ಅನ್ನೋ ಮುಳ್ಳುಗಳೇ ಜಾಸ್ತಿ’ ಅಂತ ಬೈಬಲ್ ಹೇಳುತ್ತೆ. (ಯೋಬ 14:1) ನಾವು ಈ ತರ ಕಷ್ಟಪಟ್ಟು ಜೀವನ ಮಾಡಬೇಕು ಅಂತ ದೇವರು ಇಷ್ಟಪಡ್ತಾನಾ? ಇಲ್ಲ ಅಂದರೆ, ನಾವು ಹೇಗಿರಬೇಕು ಅಂತ ಆತನು ಇಷ್ಟಪಡ್ತಾನೆ? ಆತನು ಹೇಳಿದ ಮಾತು ಖಂಡಿತ ಆಗುತ್ತಾ? ಇದಕ್ಕೆ ಉತ್ತರ ನಾವು ಬೈಬಲ್ನಿಂದ ತಿಳಿದುಕೊಳ್ಳೋಣ.
1. ನಮ್ಮ ಜೀವನ ಹೇಗಿರಬೇಕು ಅಂತ ದೇವರ ಇಷ್ಟ?
ನಾವು ಖುಷಿಖುಷಿಯಾಗಿ ಇರಬೇಕು ಅಂತ ದೇವರ ಇಷ್ಟ. ಆತನು ಮೊದಲ ಮಾನವರಾದ ಆದಾಮ ಹವ್ವರನ್ನ ಸೃಷ್ಟಿ ಮಾಡಿ ಅವರನ್ನ ಸುಂದರವಾದ ಪರದೈಸಿನಲ್ಲಿ ಅಂದರೆ ಏದೆನ್ ತೋಟದಲ್ಲಿ ಇಟ್ಟನು. “ದೇವರು ಅವರನ್ನ ಆಶೀರ್ವದಿಸ್ತಾ ‘ನೀವು ತುಂಬ ಮಕ್ಕಳನ್ನ ಪಡೆದು ಜಾಸ್ತಿ ಜನ ಆಗಿ ಇಡೀ ಭೂಮಿ ತುಂಬಿಕೊಳ್ಳಿ. ಅದು ನಿಮ್ಮ ಅಧಿಕಾರದ ಕೆಳಗಿರಲಿ’” ಅಂತ ಹೇಳಿದನು. (ಆದಿಕಾಂಡ 1:28) ಅವರು ಮಕ್ಕಳನ್ನ ಪಡೆದುಕೊಳ್ಳಬೇಕು, ಇಡೀ ಭೂಮಿಯನ್ನ ಪರದೈಸಾಗಿ ಮಾಡಬೇಕು ಮತ್ತು ಪ್ರಾಣಿಗಳನ್ನ ನೋಡಿಕೊಳ್ಳಬೇಕು ಅನ್ನೋದು ಯೆಹೋವ ದೇವರ ಇಷ್ಟವಾಗಿತ್ತು. ಎಲ್ಲಾ ಜನರು ಆರೋಗ್ಯವಂತರಾಗಿ, ಖುಷಿ ಖುಷಿಯಾಗಿ ಶಾಶ್ವತವಾಗಿ ಇರಬೇಕು ಅನ್ನೋದು ಆತನ ಆಸೆ ಆಗಿತ್ತು.
ನಾವು ಕಷ್ಟಪಟ್ಟು ಜೀವನ ಮಾಡಬೇಕು ಅನ್ನೋದು ಆತನ ಇಷ್ಟವಾಗಿರಲಿಲ್ಲ.a ಆತನು ಮಾತು ಕೊಟ್ಟ ಹಾಗೆ ಮುಂದೆ ನಮಗೆ ಶಾಶ್ವತ ಜೀವನವನ್ನ ಕೊಡಲಿದ್ದಾನೆ. (ಯೆಶಾಯ 46:10, 11) ದೇವರು ಹೇಳಿದ ಪ್ರಕಾರ ಜೀವನ ಮಾಡೋರು ಶಾಶ್ವತವಾಗಿ ಇರಬೇಕು ಅನ್ನೋದು ದೇವರ ಆಸೆ. ಆ ಆಸೆ ನಿಜ ಆಗುತ್ತೆ.—ಪ್ರಕಟನೆ 21:3, 4 ಓದಿ.
2. ಜೀವನದಲ್ಲಿ ಖುಷಿ ಮತ್ತು ತೃಪ್ತಿ ಇರಬೇಕಂದ್ರೆ ಏನು ಮಾಡಬೇಕು?
ಮನುಷ್ಯರಿಗೆ “ದೇವರ ಮಾರ್ಗದರ್ಶನ” ಬೇಕೇ ಬೇಕು. ಯೆಹೋವ ದೇವರು ನಮ್ಮನ್ನ ಸೃಷ್ಟಿಸಿದಾಗಲೇ ಆ ಬಯಕೆಯನ್ನ ನಮ್ಮಲ್ಲಿ ಇಟ್ಟಿದ್ದಾನೆ. ಹಾಗಾಗಿ ಆತನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಆತನನ್ನ ಆರಾಧಿಸಬೇಕು ಅನ್ನೋ ಬಯಕೆ ನಮ್ಮಲ್ಲಿದೆ. (ಮತ್ತಾಯ 5:3-6 ಓದಿ.) ನಾವು ಆತನ ಜೊತೆ ಆಪ್ತ ಸ್ನೇಹವನ್ನ ಬೆಳೆಸಿಕೊಳ್ಳಬೇಕು, “ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರೀಲೇ ನಡಿಬೇಕು, ಆತನನ್ನ ಪ್ರೀತಿಸಬೇಕು, ಪೂರ್ಣ ಹೃದಯದಿಂದ” ಸೇವೆ ಮಾಡಬೇಕು ಅಂತ ಯೆಹೋವ ದೇವರು ಇಷ್ಟಪಡುತ್ತಾನೆ. (ಧರ್ಮೋಪದೇಶಕಾಂಡ 10:12; ಕೀರ್ತನೆ 25:14) ನಾವು ಹೀಗೆ ಮಾಡುವಾಗ ನಮಗೆ ಎಷ್ಟೇ ಕಷ್ಟ ಇದ್ದರೂ ಖುಷಿ ಖುಷಿಯಾಗಿ ಇರಬಹುದು. ಜೀವನಕ್ಕೆ ಒಂದು ಅರ್ಥನೂ ಇರುತ್ತೆ.
ಹೆಚ್ಚನ್ನ ತಿಳಿಯೋಣ
ಯೆಹೋವನು ಪ್ರೀತಿಯಿಂದ ಭೂಮಿಯನ್ನ ಹೇಗೆ ಸೃಷ್ಟಿ ಮಾಡಿದ್ದಾನೆ ಅನ್ನೋದರ ಬಗ್ಗೆ ಕಲಿಯಿರಿ. ನಮ್ಮ ಜೀವನ ಹೇಗಿರಬೇಕು ಅಂತ ದೇವರ ಇಷ್ಟವಾಗಿತ್ತು ಅನ್ನೋದನ್ನೂ ತಿಳಿಯಿರಿ.
3. ಮನುಷ್ಯರು ಯಾವಾಗಲೂ ಖುಷಿಯಾಗಿ ಜೀವಿಸಬೇಕು ಅನ್ನೋದು ದೇವರ ಇಷ್ಟ
ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ದೇವರು ಯಾಕೆ ಈ ಸುಂದರ ಭೂಮಿಯನ್ನ ಸೃಷ್ಟಿ ಮಾಡಿದ್ದಾನೆ?
ಪ್ರಸಂಗಿ 3:11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವ ದೇವರ ಇಷ್ಟವೇನು?
4. ಯೆಹೋವನು ಹೇಳಿದಂತೆ ಖಂಡಿತ ನಡೆಯುತ್ತೆ
ಕೀರ್ತನೆ 37:11, 29 ಮತ್ತು ಯೆಶಾಯ 55:11 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವನು ಹೇಳಿದಂತೆ ಖಂಡಿತ ಆಗುತ್ತೆ ಅಂತ ನಮಗೆ ಹೇಗೆ ಗೊತ್ತು?
5. ಯೆಹೋವನನ್ನು ಆರಾಧಿಸಿದರೆ ನಮ್ಮ ಜೀವನ ಖುಷಿ ಖುಷಿಯಾಗಿ ಇರುತ್ತೆ
ನಮ್ಮ ಜೀವನಕ್ಕೆ ಒಂದು ಉದ್ದೇಶ ಇದೆ ಅಂತ ತಿಳಿದುಕೊಂಡರೆ ನಾವು ಸಂತೋಷವಾಗಿ ಇರುತ್ತೇವೆ. ವಿಡಿಯೋ ನೋಡಿ, ನಂತರ ಪ್ರಶ್ನೆಯನ್ನ ಚರ್ಚಿಸಿ.
ಯೆಹೋವನ ಆಶೀರ್ವಾದದ ಬಗ್ಗೆ ತಿಳಿದುಕೊಂಡಾಗ ಟೆರೂಮಿಗೆ ಯಾಕೆ ಖುಷಿ ಆಯಿತು?
ಪ್ರಸಂಗಿ 12:13 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವನು ನಮಗಾಗಿ ತುಂಬ ವಿಷಯಗಳನ್ನ ಮಾಡಿದ್ದಾನೆ. ಅದಕ್ಕಾಗಿ ನಾವು ಆತನಿಗೆ ಹೇಗೆ ಕೃತಜ್ಞತೆ ತೋರಿಸಬಹುದು?
ಕೆಲವರು ಹೀಗೆ ಕೇಳಬಹುದು: “ಒಂದಲ್ಲ ಒಂದು ದಿನ ಸಾಯ್ತೀವಿ, ಹಾಗಾಗಿ ಇರೋಷ್ಟು ದಿನ ಮಜಾ ಮಾಡೋದ್ರಲ್ಲಿ ತಪ್ಪೇನಿದೆ?”
ನೀವೇನು ಹೇಳುತ್ತೀರಾ?
ನಾವೇನು ಕಲಿತ್ವಿ
ಇಡೀ ಭೂಮಿ ಸುಂದರ ತೋಟದಂತೆ ಆಗುವಾಗ ನಾವು ಅಲ್ಲಿ ಖುಷಿ ಖುಷಿಯಾಗಿ, ಶಾಶ್ವತವಾಗಿ ಬದುಕಬೇಕು ಅಂತ ಯೆಹೋವನು ಬಯಸುತ್ತಾನೆ. ನಾವು ಆತನನ್ನ ಪೂರ್ಣ ಹೃದಯದಿಂದ ಆರಾಧಿಸುವಾಗ ಈಗಲೂ ಮುಂದೆನೂ ಖುಷಿ ಖುಷಿಯಾಗಿ ಇರಬಹುದು.
ನೆನಪಿದೆಯಾ
ಆದಾಮ ಹವ್ವರ ಜೀವನ ಹೇಗಿರಬೇಕು ಅನ್ನೋದು ಯೆಹೋವನ ಆಸೆಯಾಗಿತ್ತು?
ಮಾನವರಿಗೆ ದೇವರು ಕೊಟ್ಟ ಮಾತು ಖಂಡಿತ ನೆರವೇರುತ್ತೆ ಅಂತ ಹೇಗೆ ಹೇಳಬಹುದು?
ಜೀವನದಲ್ಲಿ ಖುಷಿ ಮತ್ತು ತೃಪ್ತಿ ಇರಬೇಕಂದ್ರೆ ಏನು ಮಾಡಬೇಕು?
ಇದನ್ನೂ ನೋಡಿ
ಏದೆನ್ ತೋಟ ನಿಜವಾಗಲೂ ಇತ್ತು ಅನ್ನೋದಕ್ಕಿರುವ ಆಧಾರಗಳನ್ನ ನೋಡಿ.
“ಏದೆನ್ ತೋಟ ನಿಜವಾಗ್ಲೂ ಇತ್ತಾ ಅಥವಾ ಕಟ್ಟುಕಥೆನಾ? (ಕಾವಲಿನಬುರುಜು ಲೇಖನ)
ಭೂಮಿ ಶಾಶ್ವತವಾಗಿ ಇರುತ್ತೆ ಅಂತ ಹೇಗೆ ಹೇಳಬಹುದು ಅನ್ನೋದನ್ನ ತಿಳಿಯಿರಿ.
ಜೀವನದ ಉದ್ದೇಶ ಏನು ಅಂತ ಬೈಬಲ್ ಹೇಳುತ್ತೆ ಅನ್ನೋದರ ಬಗ್ಗೆ ತಿಳಿಯಿರಿ.
ಒಬ್ಬ ವ್ಯಕ್ತಿ ಹತ್ತಿರ ಎಲ್ಲಾ ಇದ್ದರೂ ಅವನಲ್ಲಿ ಏನೋ ಒಂದು ಕೊರತೆ ಇತ್ತು. ಆ ಕೊರತೆಯನ್ನ ಹೇಗೆ ನೀಗಿಸಿದ ಅನ್ನೋದರ ಬಗ್ಗೆ ತಿಳಿಯಿರಿ.
a ಯೆಹೋವನ ಆಸೆ ತರ ನಮ್ಮ ಜೀವನ ಈಗ ಯಾಕೆ ಇಲ್ಲ ಅನ್ನೋದನ್ನ ಮುಂದಿನ ಪಾಠದಲ್ಲಿ ತಿಳಿದುಕೊಳ್ಳಿ.