ಗಲಾತ್ಯದವರಿಗೆ ಬರೆದ ಪತ್ರ
6 ಸಹೋದರರೇ, ಯಾರಾದ್ರೂ ಗೊತ್ತಿಲ್ದೆ ತಪ್ಪು ದಾರಿ ಹಿಡಿದಿದ್ರೆ ಎಲ್ಲ ಚೆನ್ನಾಗಿ ತಿಳ್ಕೊಂಡಿರೋ ಕ್ರೈಸ್ತರಾದ* ನೀವು ಮೃದುವಾಗಿ ಅವನನ್ನ ಮತ್ತೆ ಸರಿ ದಾರಿಗೆ ತರೋಕೆ ಪ್ರಯತ್ನಿಸಿ.+ ಅದೇ ಸಮಯದಲ್ಲಿ ನೀವೂ ಯಾವ ತಪ್ಪನ್ನೂ ಮಾಡದ ಹಾಗೆ+ ಹುಷಾರಾಗಿರಿ.+ 2 ಒಬ್ರು ಇನ್ನೊಬ್ರ ಭಾರಗಳನ್ನ ಯಾವಾಗ್ಲೂ ಹೊತ್ಕೊಳ್ಳಿ.+ ಹೀಗೆ ನೀವು ಕ್ರಿಸ್ತನ ನಿಯಮ ಪಾಲಿಸ್ತೀರ.+ 3 ಒಬ್ಬ ವ್ಯಕ್ತಿ ಏನೂ ಅಲ್ಲದಿದ್ರೂ ಅವನು ಮನಸ್ಸಲ್ಲಿ ‘ನಾನು ದೊಡ್ಡವನು’ ಅಂತ ನೆನಸಿದ್ರೆ+ ಅವನು ಅವನನ್ನೇ ಮೋಸ ಮಾಡ್ಕೊಳ್ತಿದ್ದಾನೆ. 4 ಆದ್ರೆ ಪ್ರತಿಯೊಬ್ಬನು ಅವನು ಮಾಡಿದ ಕೆಲಸವನ್ನ ಚೆನ್ನಾಗಿ ಪರೀಕ್ಷಿಸ್ಕೊಳ್ಳಲಿ.+ ಆಗ ಅವನು ಬೇರೆಯವ್ರ ಜೊತೆ ತನ್ನನ್ನ ಹೋಲಿಸ್ಕೊಳ್ಳೋ ಬದ್ಲು ತನ್ನ ಕೆಲಸದ ಬಗ್ಗೆ ಮಾತ್ರ ಖುಷಿಪಡ್ತಾನೆ.+ 5 ಯಾಕಂದ್ರೆ ಪ್ರತಿಯೊಬ್ಬನು ತನ್ನ ಹೊರೆಯನ್ನ* ತಾನೇ ಹೊತ್ಕೊಬೇಕು.+
6 ಅಷ್ಟೇ ಅಲ್ಲ, ದೇವರ ಮಾತಿನ ಬಗ್ಗೆ ಕಲಿತಾ ಇರುವವನು ಅದನ್ನ ಕಲಿಸ್ತಾ ಇರುವವ್ರ ಜೊತೆ ಎಲ್ಲ ಒಳ್ಳೇ ವಿಷ್ಯಗಳನ್ನ ಹಂಚ್ಕೊಳ್ಳಲಿ.+
7 ಮೋಸಹೋಗಬೇಡಿ,* ಯಾರೂ ದೇವರಿಗೆ ಮೋಸ ಮಾಡಕ್ಕಾಗಲ್ಲ.* ಯಾಕಂದ್ರೆ ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ.+ 8 ಪಾಪದ* ಆಸೆಗಳನ್ನ ಬಿತ್ತುವವನು ಪಾಪದ ಆಸೆಗಳಿಂದ ನಾಶವನ್ನ ಕೊಯ್ತಾನೆ, ಆದ್ರೆ ಪವಿತ್ರಶಕ್ತಿಯನ್ನ ಬಿತ್ತುವವನು ಪವಿತ್ರಶಕ್ತಿಯಿಂದ ಶಾಶ್ವತ ಜೀವವನ್ನ ಕೊಯ್ತಾನೆ.+ 9 ಹಾಗಾಗಿ ಒಳ್ಳೇದು ಮಾಡೋದನ್ನ ಬಿಡೋದು ಬೇಡ. ನಾವು ಸುಸ್ತಾಗದೆ ಇದ್ರೆ* ತಕ್ಕ ಸಮಯಕ್ಕೆ ಫಲ ಕೊಯ್ತೀವಿ.+ 10 ಹಾಗಾಗಿ ಅವಕಾಶ* ಇರುವಾಗೆಲ್ಲ ಎಲ್ರಿಗೂ ಒಳ್ಳೇದು ಮಾಡೋಣ, ಮುಖ್ಯವಾಗಿ ನಂಬಿಕೆಯಲ್ಲಿ ನಮ್ಮ ಸಂಬಂಧಿಕರಾದವ್ರಿಗೆ ಒಳ್ಳೇದು ಮಾಡೋಣ.
11 ದೊಡ್ಡ ದೊಡ್ಡ ಅಕ್ಷರಗಳಲ್ಲಿ ನನ್ನ ಕೈಯಾರೆ ನಿಮಗೆ ಈ ಪತ್ರ ಬರಿತಾ ಇದ್ದೀನಿ ನೋಡಿ.
12 ಜನ್ರು ನಮ್ಮನ್ನ ನೋಡಿ ಮೆಚ್ಚಬೇಕು ಅಂತ ಇಷ್ಟಪಡುವವರು ಸುನ್ನತಿ ಮಾಡಿಸ್ಕೊಳ್ಳೋಕೆ ನಿಮ್ಮನ್ನ ಒತ್ತಾಯಿಸ್ತಾರೆ. ಕ್ರಿಸ್ತನಿಗೋಸ್ಕರ* ಹಿಂಸೆ ಅನುಭವಿಸಬಾರದು ಅನ್ನೋದೇ ಅವ್ರ ಉದ್ದೇಶ. 13 ಸುನ್ನತಿ ಮಾಡಿಸ್ಕೊಳ್ಳುವವ್ರೇ ನಿಯಮ ಪುಸ್ತಕ ಪಾಲಿಸಲ್ಲ,+ ನಿಮ್ಮ* ಬಗ್ಗೆ ಅವರು ಕೊಚ್ಕೊಬೇಕು ಅಂತಾನೇ ‘ಸುನ್ನತಿ ಮಾಡಿಸ್ಕೊಳ್ಳಿ’ ಅಂತ ಹೇಳ್ತಿದ್ದಾರೆ. 14 ಆದ್ರೆ ನಾನು, ಹಿಂಸಾ ಕಂಬದ* ಮೇಲೆ ಸತ್ತ ನಮ್ಮ ಪ್ರಭು ಯೇಸು ಕ್ರಿಸ್ತನ ಬಗ್ಗೆ ಬಿಟ್ಟು ಬೇರೆ ಯಾವುದ್ರ ಬಗ್ಗೆನೂ ಯಾವತ್ತೂ ಹೆಮ್ಮೆಪಡಲ್ಲ.+ ಆತನಿಂದಾಗಿ ನನ್ನ ದೃಷ್ಟಿಯಲ್ಲಿ ಈ ಲೋಕ ಸತ್ತುಹೋಗಿದೆ, ಈ ಲೋಕದ ದೃಷ್ಟಿಯಲ್ಲಿ ನಾನು ಸತ್ತುಹೋಗಿದ್ದೀನಿ.* 15 ಸುನ್ನತಿ ಆಗೋದು, ಆಗ್ದೆ ಇರೋದು ಮುಖ್ಯ ಅಲ್ಲ,+ ಹೊಸ ಸೃಷ್ಟಿ ಆಗಿರೋದೇ ಮುಖ್ಯ.+ 16 ಇದಕ್ಕೆ ತಕ್ಕ ಹಾಗೆ ನಡ್ಯೋ ಎಲ್ರಿಗೆ ಅಂದ್ರೆ ದೇವರ ಇಸ್ರಾಯೇಲ್ಯರಿಗೆ ಶಾಂತಿ, ಕರುಣೆ ಸಿಗ್ಲಿ.+
17 ಇನ್ಮುಂದೆ ಯಾರೂ ನನಗೆ ತೊಂದ್ರೆ ಕೊಡಬೇಡಿ. ಯಾಕಂದ್ರೆ ನಾನು ಯೇಸುಗೆ ದಾಸ ಅನ್ನೋದಕ್ಕೆ ನನ್ನ ಮೈಮೇಲೆ ಗುರುತುಗಳಿವೆ.+
18 ಸಹೋದರರೇ, ನೀವು ಒಳ್ಳೇ ಗುಣಗಳನ್ನ ತೋರಿಸುವಾಗ ನಮ್ಮ ಪ್ರಭು ಯೇಸು ಕ್ರಿಸ್ತ ನಿಮಗೆ ಅಪಾರ ಕೃಪೆ ತೋರಿಸ್ಲಿ. ಆಮೆನ್.