ಇಬ್ರಿಯರಿಗೆ ಬರೆದ ಪತ್ರ
4 ಈಗ್ಲೂ ದೇವರ ಜೊತೆ ವಿಶ್ರಾಂತಿ ಪಡಿಯೋಕೆ ಆಗುತ್ತೆ ಅಂತ ಆತನು ಮಾತುಕೊಟ್ಟಿದ್ದಾನೆ. ಅದಕ್ಕೇ ನಮ್ಮಲ್ಲಿ ಯಾರೂ ಆ ವಿಶ್ರಾಂತಿ ಪಡಿಯೋ ಯೋಗ್ಯತೆ ಕಳ್ಕೊಳ್ಳದ ಹಾಗೆ ಎಚ್ಚರವಾಗಿ ಇರೋಣ.+ 2 ಇಸ್ರಾಯೇಲ್ಯರು ಸಿಹಿಸುದ್ದಿ ಕೇಳಿಸ್ಕೊಂಡ ಹಾಗೆ ನಾವೂ ಸಿಹಿಸುದ್ದಿ ಕೇಳಿಸ್ಕೊಂಡಿದ್ದೀವಿ.+ ಆದ್ರೆ ಅದ್ರಿಂದ ಅವ್ರಿಗೆ ಏನೂ ಪ್ರಯೋಜನ ಆಗಲಿಲ್ಲ. ಯಾಕಂದ್ರೆ ವಿಧೇಯತೆ ತೋರಿಸಿದವ್ರಿಗೆ ಇದ್ದ ಆ ಬಲವಾದ ನಂಬಿಕೆ ಅವ್ರಿಗೆ ಇರಲಿಲ್ಲ. 3 ನಾವು ನಂಬಿಕೆ ಇಟ್ಟಿರೋದ್ರಿಂದ ದೇವರ ಜೊತೆ ವಿಶ್ರಾಂತಿ ಪಡಿತೀವಿ. ಆದ್ರೆ ಅವ್ರ ವಿಷ್ಯದಲ್ಲಿ ಆತನು “‘ಅವರು ನನ್ನ ಜೊತೆ ವಿಶ್ರಾಂತಿ ಪಡಿಯಲ್ಲ’+ ಅಂತ ನಾನು ಸಿಟ್ಟಿಂದ ಆಣೆ ಮಾಡ್ದೆ” ಅಂದನು. ಆತನು ತನ್ನ ಎಲ್ಲಾ ಕೆಲಸ ಮುಗಿಸಿ ಲೋಕ ಸೃಷ್ಟಿಯಾದಾಗಿಂದ ವಿಶ್ರಾಂತಿ ಪಡೀತಾ ಇದ್ರೂ ಹಾಗೆ ಹೇಳಿದನು.+ 4 ಆತನು ಏಳನೇ ದಿನದ ಬಗ್ಗೆ ಒಂದು ವಚನದಲ್ಲಿ “ದೇವರು ತನ್ನೆಲ್ಲ ಕೆಲಸ ಮುಗಿಸಿ ಏಳನೇ ದಿನ ವಿಶ್ರಮಿಸಿದನು” ಅಂತ ಹೇಳಿದ್ದಾನೆ.+ 5 ಇನ್ನೊಂದು ವಚನದಲ್ಲಿ “ಅವರು ನನ್ನ ಜೊತೆ ವಿಶ್ರಾಂತಿ ಪಡಿಯಲ್ಲ” ಅಂತ ಹೇಳಿದ್ದಾನೆ.+
6 ಮೊದ್ಲು ಸಿಹಿಸುದ್ದಿ ಕೇಳಿಸ್ಕೊಂಡವರು ಅದನ್ನ ಪಾಲಿಸದೇ ಇದ್ದಿದ್ರಿಂದ ಆ ವಿಶ್ರಾಂತಿ ಪಡಿಲಿಲ್ಲ. ಆದ್ರೆ ಆ ವಿಶ್ರಾಂತಿ ಪಡಿಯೋಕೆ ಕೆಲವ್ರಿಗೆ ಇನ್ನೂ ಅವಕಾಶ ಇದೆ.+ 7 ಅದಕ್ಕೇ ದೇವರು ತುಂಬ ಸಮಯ ಆದ್ಮೇಲೆ ದಾವೀದನ ಕೀರ್ತನೆಯಲ್ಲಿ “ಇವತ್ತು ನೀವು ನನ್ನ ಮಾತಿಗೆ ಗಮನ ಕೊಡುವಾಗ ನಿಮ್ಮ ಹೃದಯ ಕಲ್ಲು ಮಾಡ್ಕೊಬೇಡಿ” ಅಂತ ಹೇಳಿದನು. ಇದನ್ನ ಈಗಾಗ್ಲೇ ಈ ಪತ್ರದಲ್ಲಿ ತಿಳಿಸಿದ್ದೀನಿ. ಅಲ್ಲಿ ಆತನು “ಇವತ್ತು” ಅಂತ ಹೇಳಿ ಒಂದು ದಿನನ ಮತ್ತೆ ಗುರುತಿಸಿದ.+ 8 ಒಂದುವೇಳೆ ಅವ್ರನ್ನ ಯೆಹೋಶುವ+ ವಿಶ್ರಾಂತಿ ಸ್ಥಳಕ್ಕೆ ಕರ್ಕೊಂಡು ಹೋಗಿದ್ರೆ ಸ್ವಲ್ಪ ಸಮಯ ಆದ್ಮೇಲೆ ದೇವರು ಇನ್ನೊಂದು ದಿನದ ಬಗ್ಗೆ ಹೇಳ್ತಿರಲಿಲ್ಲ. 9 ಹಾಗಾಗಿ ಸಬ್ಬತ್ ದಿನದ ತರ ದೇವರ ಜನ್ರಿಗೆ ಒಂದು ವಿಶ್ರಾಂತಿ ದಿನ ಇನ್ನೂ ಇದೆ.+ 10 ದೇವರು ತನ್ನ ಎಲ್ಲಾ ಕೆಲಸ ಮುಗಿಸಿ ವಿಶ್ರಮಿಸಿದ ತರ ಆತನ ಜೊತೆ ವಿಶ್ರಾಂತಿ ಪಡೆದವನೂ ತನ್ನೆಲ್ಲಾ ಕೆಲಸ ಮುಗಿಸಿ ವಿಶ್ರಾಂತಿ ಪಡಿದಿದ್ದಾನೆ.+
11 ಹಾಗಾಗಿ ಆ ವಿಶ್ರಾಂತಿ ಪಡಿಯೋಕೆ ನಾವು ನಮ್ಮಿಂದ ಆಗೋದನ್ನೆಲ್ಲ ಮಾಡೋಣ. ಆಗ ಪದೇ ಪದೇ ಮಾತು ಕೇಳದಿದ್ದ ಅವ್ರ ದಾರಿಯನ್ನ ನಮ್ಮಲ್ಲಿ ಯಾರೂ ಹಿಡಿಯಲ್ಲ.+ 12 ಪವಿತ್ರ ಗ್ರಂಥಕ್ಕೆ* ಜೀವ ಇದೆ, ತುಂಬಾ ಶಕ್ತಿ ಇದೆ.+ ಅದು, ಎರಡೂ ಕಡೆ ಚೂಪಾಗಿರೋ ಕತ್ತಿಗಿಂತ ಚೂಪಾಗಿದೆ.+ ಅದು ಮನುಷ್ಯನ ಒಳಗೆ ಎಷ್ಟು ಆಳಕ್ಕೆ ಹೋಗುತ್ತೆ ಅಂದ್ರೆ ಅವನು ಒಳಗೆ ಹೇಗಿದ್ದಾನೆ, ಹೊರಗೆ ಹೇಗಿದ್ದಾನೆ ಅಂತ ತೋರಿಸ್ಕೊಡುತ್ತೆ, ಅವನ ಮೂಳೆ* ಮತ್ತು ಅದ್ರೊಳಗಿರೋ ಮಜ್ಜೆ ಒಳಗೂ ತೂರಿಹೋಗುತ್ತೆ. ಅವನ ಹೃದಯದ ಆಲೋಚನೆ ಉದ್ದೇಶಗಳನ್ನ ಬಯಲು ಮಾಡೋ ಸಾಮರ್ಥ್ಯ ಅದಕ್ಕಿದೆ. 13 ಆತನ ದೃಷ್ಟಿಗೆ ಮರೆಯಾದ ಸೃಷ್ಟಿ ಒಂದೂ ಇಲ್ಲ.+ ಆತನ ಕಣ್ಣಿಗೆ ಎಲ್ಲ ಬಯಲಾಗಿದೆ, ಎಲ್ಲವನ್ನೂ ಆತನು ನೋಡ್ತಾನೆ. ನಾವು ಲೆಕ್ಕ ಕೊಡಬೇಕಾಗಿರೋದು ಆತನಿಗೇ.+
14 ನಮ್ಮ ಶ್ರೇಷ್ಠ ಮಹಾ ಪುರೋಹಿತ ಅಂದ್ರೆ ದೇವರ ಮಗನಾದ ಯೇಸು ಸ್ವರ್ಗಕ್ಕೆ ಹೋಗಿರೋದ್ರಿಂದ+ ಆತನ ಮೇಲೆ ನಮಗಿರೋ ನಂಬಿಕೆ ಬಗ್ಗೆ ತಿಳಿಸ್ತಾ ಇರೋಣ.+ 15 ನಮ್ಮ ಮಹಾ ಪುರೋಹಿತನಿಗೆ ನಮ್ಮ ಬಲಹೀನತೆಗಳನ್ನ ಅರ್ಥ ಮಾಡ್ಕೊಳ್ಳೋಕೆ* ಆಗುತ್ತೆ.+ ಯಾಕಂದ್ರೆ ನಮ್ಮ ಹಾಗೆ ಆತನಿಗೆ ಎಲ್ಲ ತರದ ಕಷ್ಟಗಳು ಬಂತು. ಆದ್ರೆ ಪಾಪ ಮಾಡಲಿಲ್ಲ.+ 16 ಹಾಗಾಗಿ ಅಪಾರ ಕೃಪೆ ತೋರಿಸೋ ದೇವರ ಸಿಂಹಾಸನದ ಹತ್ರ ನಾವು ಹೋಗಿ ಯಾವ ಹಿಂಜರಿಕೆನೂ ಇಲ್ದೆ ಮಾತಾಡೋಣ.+ ಆಗ ನಮಗೆ ಸಹಾಯ ಬೇಕಿದ್ದಾಗ ಆತನು ಕರುಣೆ, ಅಪಾರ ಕೃಪೆ ತೋರಿಸ್ತಾನೆ.