ನಮ್ಮ ವಾಚಕರಿಂದ
ಸಂಭಾಷಣೆ “ಸಂಭಾಷಣೆಯು ಒಂದು ಕಲೆ,” ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. (ಎಪ್ರಿಲ್ 8, 1995) ಬಹು ದೀರ್ಘ ಸಮಯದಿಂದ ನಾಚಿಕೆ ಸ್ವಭಾವದೊಂದಿಗೆ ನಾನು ಹೋರಾಡುತ್ತಿದ್ದೇನೆ. ಆದರೆ ಈ ಕ್ಲೇಶವನ್ನು ಹೊಂದಿರುವವಳು ಕೇವಲ ನಾನೊಬ್ಬಳೇ ಆಗಿಲ್ಲವೆಂಬುದನ್ನು ನಾನು ಈಗ ಗ್ರಹಿಸುತ್ತೇನೆ. ನಿಮ್ಮ ಸಲಹೆಗಳನ್ನು ನಾನು ಉತ್ತಮ ಉಪಯೋಗಕ್ಕೆ ಹಾಕುವೆ.
ಎ. ಎಲ್., ಅಮೆರಿಕ
ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿನ ಲೇಖನಗಳನ್ನು ಓದಬೇಕೆಂಬ ನಿಮ್ಮ ಸಲಹೆಯು ನಿಜವಾಗಿಯೂ ಪರಿಣಾಮಕಾರಿಯಾಗಿದೆ. ನೀವು ಹಾಗೆ ಮಾಡುವಾಗ ಮಾತಾಡಲಿಕ್ಕೆ ಎಷ್ಟೊಂದು ವಿಷಯವಿದೆ ಎಂಬುದರ ಕುರಿತು ನೀವು ಆಶ್ಚರ್ಯಗೊಳ್ಳುವಿರಿ!
ವಿ. ಎಮ್. ಜೆ., ಅಮೆರಿಕ
ಅವಿವಾಹಿತ ಸ್ಥಿತಿ “ಬೈಬಲಿನ ದೃಷ್ಟಿಕೋನ: ಅವಿವಾಹಿತ ಸ್ಥಿತಿಯು ಒಂದು ವರವಾಗಿರುವಾಗ,” ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. (ಫೆಬ್ರವರಿ 8, 1995) ನಾನು ಜೀವಿಸುತ್ತಿರುವಲ್ಲಿ, ವಿವಾಹವು ಒಂದು ಮಹತ್ವದ ವಿಷಯವಾಗಿದೆ; ಕ್ರೈಸ್ತ ಸಹೋದರಸಹೋದರಿಯರು ಅದರೆಡೆಗೆ ನಿಮ್ಮನ್ನು ತಳ್ಳುತ್ತಾರೆ. ನಾನು 30 ವರ್ಷ ಪ್ರಾಯದವಳಾಗುವಷ್ಟರ ವರೆಗೆ ವಿವಾಹದ ಕುರಿತು ಎಂದೂ ಅಷ್ಟೊಂದು ಯೋಚಿಸಿರಲಿಲ್ಲ. ಅನಂತರ ಸಂಗಾತಿಯೊಬ್ಬನ ಅಗತ್ಯವಿರುವ ಅನಿಸಿಕೆಯು ನನಗೆ ಪ್ರಾರಂಭವಾಯಿತು. ಇನ್ನು ಮುಂದೆ ತಾಳಿಕೊಳ್ಳಲಸಾಧ್ಯ ಎಂಬ ಅನಿಸಿಕೆ ನನಗಾದ ಸಮಯದಲ್ಲಿ ಈ ಲೇಖನವನ್ನು ಒದಗಿಸಿದ್ದಕ್ಕಾಗಿ ಯೆಹೋವನಿಗೆ ನಾನು ಆಭಾರಿಯಾಗಿದ್ದೇನೆ.
ಇ. ಎಮ್. ಎ., ಅಮೆರಿಕ
ಸ್ವಮಗ್ನತೆ “ಸ್ವಮಗ್ನತೆ (ಆಟಿಸಮ್)—ಒಗಟಾಗಿರುವ ವ್ಯಾಧಿಯೊಂದರ ಕಷ್ಟಗಳನ್ನು ನಿಭಾಯಿಸುವುದು,” ಎಂಬ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರ. (ಫೆಬ್ರವರಿ 8, 1995) ಅಂತಿಮವಾಗಿ, ನನ್ನ ಮಗಳನ್ನು ಬಾಧಿಸುವ ಅಸ್ವಸ್ಥತೆಯ ಕುರಿತು ಅರ್ಥಮಾಡಿಕೊಳ್ಳಬಲ್ಲೆ ಮತ್ತು ಅವಳ ಬೆಳೆಸುವಿಕೆಯಲ್ಲಿ ನಾನು ಮಾಡಿದ ಯಾವುದೋ ವಿಷಯದ ಫಲಿತಾಂಶವು ಅದಾಗಿರಲಿಲವ್ಲೆಂಬುದನ್ನು ಅರಿಯಬಲ್ಲೆ. ಯೆಹೋವನಿಗೆ ನನ್ನ ಸೇವೆಯು, ಅವಳ ಪರಿಸ್ಥಿತಿಯೊಂದಿಗೆ ವ್ಯವಹರಿಸಲು ನನಗೆ ಬಲವನ್ನು ನೀಡುತ್ತದೆ.
ಎಮ್. ಏಚ್., ಸ್ವಿಟ್ಸರ್ಲೆಂಡ್
ಪೂರ್ವಜರಿಂದ ಬಂದ ಒಂದು ಶಾಪ ಅಥವಾ ಗತ ಕಾರ್ಯಗಳಿಗಾಗಿ ಶಿಕ್ಷೆಯಂಥ ಅನೇಕ ಮೂಢನಂಬಿಕೆಯ ಕಾರಣಗಳು, ಸ್ವಮಗ್ನತೆಗೆ ಅಧ್ಯಾರೋಪಿಸಲ್ಪಟ್ಟಿವೆ. ನೀವು ಏನು ಬರೆದಿದ್ದೀರೋ, ಅದು ಈ ಅವ್ಯವಸತ್ಥೆಯ ಉತ್ತಮ ತಿಳಿವಳಿಕೆಯನ್ನು ರೂಪಿಸಲು ಸಹಾಯ ಮಾಡುವುದು. ಇಂಥ ಶೈಕ್ಷಣಿಕ ಲೇಖನಗಳಿಗಾಗಿ ನಿಮಗೆ ಉಪಕಾರ.
ಎಮ್. ಏ., ನೈಜೀರಿಯಾ
ಆರ್ಕಿಡ್ಗಳು ನಾನೊಬ್ಬ ಆರ್ಕಿಡ್ ಪ್ರೇಮಿ! ವಾಸ್ತವದಲ್ಲಿ, ನನ್ನ ತೋಟದಲ್ಲಿ ಆರ್ಕಿಡ್ಗಳನ್ನು ಮತ್ತು ಅವುಗಳ ಒಂದು ಛಾಯಚಿತ್ರ ಸಂಗ್ರಹವನ್ನು ನಾನು ಹೊಂದಿದ್ದೇನೆ. “ಯೂರೋಪಿನಲ್ಲಿ ಆರ್ಕಿಡ್ಗಳ ಅನ್ವೇಷಣೆಯಲ್ಲಿ,” ಎಂಬ ಲೇಖನವನ್ನು ಪ್ರಕಾಶಿಸಿದ್ದಕ್ಕಾಗಿ ನಿಮಗೆ ಉಪಕಾರ. (ಫೆಬ್ರವರಿ 8, 1995) ಈ ವಿಷಯದ ಮೇಲೆ ನೀವು ಪ್ರಕಟಿಸುವ ಕೊನೆಯ ಲೇಖನವು ಇದಾಗಿರುವುದಿಲ್ಲವೆಂಬುದಾಗಿ ನಾನು ಆಶಿಸುತ್ತೇನೆ.
ಆರ್. ಎಮ್., ಫಿಲಿಪ್ಪೀನ್ಸ್
ಸುರಕ್ಷಿತ ಚಾಲನೆ ನಾನು 40ರ ನಡುಭಾಗದಲ್ಲಿದ್ದೇನೆ ಮತ್ತು ಅಪಸ್ಮಾರದ ಕಾರಣ ವಾಹನ ಚಲಾಯಿಸಲು ನನಗೆ ಎಂದೂ ಅನುಮತಿಯಿದ್ದಿಲ್ಲ. ಮಿದುಳು ಶಸ್ತ್ರಚಿಕಿತ್ಸೆಯ ಅನಂತರ, ಒಂದು ಚಾಲಕ ಲೈಸೆನ್ಸಿಗಾಗಿ ಅರ್ಜಿಹಾಕಲು ನನ್ನ ನರತಜ್ಞರಿಂದ ನಾನು ಅನುಮತಿ ಪಡೆದೆ. “ನೀವು ಒಬ್ಬ ಸುರಕ್ಷಿತ ಚಾಲಕರೋ?” (ಫೆಬ್ರವರಿ 8, 1995) ಎಂಬ ಲೇಖನವು, ಚಾಲನೆ ಮಾಡುವಾಗ ಸರಿಯಾದ ಮನೋಭಾವನೆಯನ್ನು ಹೊಂದಿರುವ ಪ್ರಾಮುಖ್ಯವನ್ನು ಗಣ್ಯಮಾಡಲು ನನಗೆ ಸಹಾಯ ಮಾಡಿತು. ಅದು ನಾನು ನನ್ನ ಲೈಸೆನ್ಸನ್ನು ಪಡೆದ ಕೂಡಲೇ ಬಂತು!
ಜಿ. ಎಸ್., ಅಮೆರಿಕ
ಅಕ್ಷಮ್ಯ ಪಾಪ “ಯುವ ಜನರು ಪ್ರಶ್ನಿಸುವುದು . . . ನಾನು ಅಕ್ಷಮ್ಯ ಪಾಪವನ್ನು ಮಾಡಿದ್ದೇನೊ?” (ನವಂಬರ 8, 1994) ಎಂಬ ಲೇಖನಕ್ಕಾಗಿ ನಿಮಗೆ ಉಪಕಾರ. ಅದನ್ನು ನಾನು ಓದುವಾಗ ನನ್ನ ಕಣ್ಣುಗಳಲ್ಲಿ ಕಣ್ಣೀರು ಬಂತು, ಏಕೆಂದರೆ ಹಸ್ತಮೈಥುನದ ಈ ಅಶುದ್ಧ ಹವ್ಯಾಸದಿಂದ ನಾನು ಕೂಡ ಕಷ್ಟಪಡುತ್ತಿದ್ದೇನೆ. ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ, ಒಬ್ಬ ಹಿರಿಯನೊಂದಿಗೆ ಮಾತಾಡುವ ಧೈರ್ಯವನ್ನು ಹೊಂದಿದ್ದ, ಮಾರ್ಕೋ ಮತ್ತು ಆಲ್ಬರ್ಟೋರ ಉದಾಹರಣೆಗಳನ್ನು ನಾನು ಅನುಸರಿಸಿದೆ. ಇದು ನನಗೆ ಅತ್ಯಧಿಕವಾಗಿ ಸಹಾಯವನ್ನಿತಿತ್ತು.
ಏ. ಎಮ್. ಸಿ., ಬ್ರೆಸಿಲ್
ಒಬ್ಬ ಯುವ ಕ್ರೈಸ್ತನು ಹೊಂದಿರಬಹುದಾದ ಅತಿ ಕಠಿನವಾದ ಹೋರಾಟಗಳಲ್ಲಿ ಹಸ್ತಮೈಥುನವು ಒಂದಾಗಿದೆ. ಅನೇಕವೇಳೆ ಅತಿ ಸಂಕಟಕರವಾದ ಮತ್ತು ಎದೆಗುಂದಿದ ಅನಿಸಿಕೆ ನನಗಾಗಿದೆ. ಈ ಹೋರಾಟವನ್ನು ಜಯಿಸಲು, ಹೆಣಗಾಡುತ್ತಾ ಇರುವಂತೆ ನನಗೆ ಈ ಲೇಖನವು ಉತ್ತೇಜಿಸಿತು.
ಎಫ್. ಜಿ. ಎಮ್., ಮೆಕ್ಸಿಕೊ
ನಾನು ವಿವಾಹವಾಗಬೇಕೆಂದು ಆಶಿಸುತ್ತಿದ್ದ ಒಬ್ಬ ಯುವ ಪುರುಷನೊಂದಿಗೆ ಸಡಿಲು ನಡತೆಯಲ್ಲಿ ನಾನು ಒಳಗೊಂಡೆ; ಇದು ನಮ್ಮ ಸಂಬಂಧವನ್ನು ನಾಶಗೊಳಿಸಿತು. ನಾನು ತೀರ ಖಿನ್ನಳಾದೆ ಮತ್ತು ಅನೇಕ ಶೋಚನೀಯ ಹಗಲೂ ರಾತ್ರಿಗಳನ್ನೂ ಕಳೆದೆ. ನಿಜವಾಗಿಯೂ ನಾನು ಕ್ಷಮಿಸಲ್ಪಡಲಾರೆನೆಂದು ನಾನು ಭಾವಿಸಿದ್ದೆ. ಈ ಲೇಖನಗಳನ್ನು ಓದುವುದು ಯೆಹೋವನಲ್ಲಿ ಮತ್ತು ಕ್ಷಮಿಸಿ ಮರೆತುಬಿಡುವ ಆತನ ಸಾಮರ್ಥ್ಯದಲ್ಲಿ ನನ್ನ ನಂಬಿಕೆಯನ್ನು ಪುನಃಸ್ಥಾಪಿಸಿದವು.
ಎಲ್. ಸಿ., ಆಸ್ಟ್ರೇಲಿಯಾ