ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
ಮಾರ್ಚ್ 6-12
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 1-4
“ನಿನ್ನನ್ನು ರಕ್ಷಿಸಲು ನಾನೇ ನಿನ್ನೊಂದಿಗಿರುವೆನು”
jr 88 ¶14-15
‘ನಾನು ದಣಿದವರಿಗೆ ಚೈತನ್ಯ ನೀಡುವೆನು’
ದಣಿದವರಿಗೆ ಚೈತನ್ಯ ನೀಡುವಿರೋ?
14 ಯೆರೆಮೀಯನಿಗೆ ಹೇಗೆ ಪ್ರೋತ್ಸಾಹ ಸಿಕ್ಕಿತು ಮತ್ತು ‘ಬಳಲಿದ’ ಇತರರಿಗೆ ಅವನು ಹೇಗೆ ಪ್ರೋತ್ಸಾಹ ಕೊಟ್ಟನು ಎಂಬುದನ್ನು ಗಮನಿಸೋಣ. (ಯೆರೆ. 31:25) ಯೆರೆಮೀಯನಿಗೆ ಪ್ರೋತ್ಸಾಹ ದೊರೆತದ್ದು ಮುಖ್ಯವಾಗಿ ಯೆಹೋವನಿಂದಲೇ. ನಿಮಗೆ ಯೆಹೋವನು ಹೀಗಂದಿದ್ದರೆ ನೀವೆಷ್ಟು ಬಲಪಡೆಯುತ್ತಿದ್ದಿರೆಂದು ಯೋಚಿಸಿ: “ಇಗೋ, ನಾನು ಈ ಹೊತ್ತು ನಿನ್ನನ್ನು . . . ಕೋಟೆಕೊತ್ತಲದ ಪಟ್ಟಣವನ್ನಾಗಿ ಸ್ಥಾಪಿಸಿದ್ದೇನೆ. ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ. ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.” (ಯೆರೆ. 1:18, 19) ಆದ್ದರಿಂದ ಯೆರೆಮೀಯನು ಯೆಹೋವನನ್ನು “ನನ್ನ ಬಲವಾದ ದುರ್ಗ . . . ಇಕ್ಕಟ್ಟಿನ ದಿನದಲ್ಲಿ ನನ್ನ ಆಶ್ರಯ” ಎಂದು ಕರೆದನು.—ಯೆರೆ. 16:19.
15 “ನಾನು ನಿನ್ನೊಂದಿಗಿರುವೆನು” ಎಂದು ಯೆಹೋವನು ಯೆರೆಮೀಯನಿಗೆ ಹೇಳಿದ ಮಾತು ಗಮನಾರ್ಹ. ಈ ಮಾತಿನಲ್ಲಿ ಪ್ರೋತ್ಸಾಹದ ಅಗತ್ಯ ಇರುವ ಯಾರಿಗಾದರೂ ಸಹಾಯ ನೀಡುವ ವಿಧವನ್ನು ನೀವು ಕಾಣಬಲ್ಲಿರಾ? ನಿಮ್ಮ ಕ್ರೈಸ್ತ ಸಹೋದರ ಸಹೋದರಿಗೆ ಅಥವಾ ಸಂಬಂಧಿಕನಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಗಮನಿಸುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ಹಾಕಬೇಕು. ಇದಕ್ಕೊಂದು ಉತ್ತಮ ವಿಧ ಯಾವುದೆಂದರೆ ಯೆಹೋವನು ಯೆರೆಮೀಯನಿಗೆ ಮಾಡಿದಂತೆ ಆ ಬಾಧಿತ ವ್ಯಕ್ತಿಯೊಂದಿಗೆ ನೀವಿರುವುದೇ. ಅವನ ಬಳಿಯಲ್ಲಿದ್ದು ಸೂಕ್ತ ವೇಳೆಯಲ್ಲಿ ಪ್ರೋತ್ಸಾಹದ ಕೆಲವು ಮಾತುಗಳನ್ನಾಡಬಹುದು. ಮಾತುಗಳ ಸುರಿಮಳೆಯಲ್ಲ, ಬದಲಾಗಿ ಆರಿಸಿಕೊಂಡ ಕೆಲವೇ ಮಾತುಗಳನ್ನಾಡಿದರೆ ಬಾಧಿತರಿಗೆ ಆಶ್ವಾಸನೆ ಮತ್ತು ಬಲ ಸಿಗುವುದು. ದೊಡ್ಡ ದೊಡ್ಡ ಪದಗಳನ್ನು ಬಳಸುವ ಅಗತ್ಯವಿಲ್ಲ. ನಿಮ್ಮ ಪರಿಗಣನೆ, ಕಾಳಜಿ ಮತ್ತು ಕ್ರೈಸ್ತ ಪ್ರೀತಿಯನ್ನು ತೋರಿಸುವ ಸರಳ ಮಾತುಗಳು ಸಾಕು. ಅವು ತುಂಬ ಸಾಂತ್ವನಕರ.—ಜ್ಞಾನೋಕ್ತಿ 25:11 ಓದಿ.
ಮಾರ್ಚ್ 13-19
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 5-7
“ದೇವರ ಚಿತ್ತ ಮಾಡುವುದನ್ನು ನಿಲ್ಲಿಸಿದರು”
w88 4/1 11-12 ¶7-8
ದೇವರ ನ್ಯಾಯತೀರ್ಪಿನ ಬಗ್ಗೆ ಪ್ರವಾದಿಸಿದ ಯೆರೆಮೀಯ
7 “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ” ಎಂದು ಯೆಹೋವನು ಎಚ್ಚರಿಸಿದನು. (ಯೆರೆಮೀಯ 1:19) ಈ ಪ್ರವಾದಿಯ ವಿರುದ್ಧವಾಗಿ ಯೆಹೂದ್ಯರು ಮತ್ತು ಅವರ ಅಧಿಪತಿಗಳು ಯುದ್ಧಮಾಡಲು ಬಯಸಿದ್ದೇಕೆ? ಏಕೆಂದರೆ ಅವನ ಸಂದೇಶವು ಅವರ ಸ್ವಸಂತುಷ್ಟಿ ಮತ್ತು ತಪ್ಪು ಆರಾಧನಾ ಪದ್ಧತಿಗಳನ್ನು ಖಂಡಿಸಿದರಿಂದಲೇ. ಯೆರೆಮೀಯನು ನೇರವಾಗಿ ಅವರ ತಪ್ಪುಗಳನ್ನು ಬಯಲುಮಾಡಿದನು: “ಅಯ್ಯೋ, ಯೆಹೋವನ ಮಾತು ಅವರಿಗೆ ತಿರಸ್ಕಾರ. ಅದರಲ್ಲಿ ಅವರಿಗೆ ಆನಂದವೇ ಇಲ್ಲ . . . ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರು ಬಾಚಿಕೊಳ್ಳುತ್ತಲೇ ಇದ್ದಾರೆ; ಪ್ರವಾದಿಗಳು ಮೊದಲಾಗಿ ಯಾಜಕರವರೆಗೆ (ನೈತಿಕತೆ, ಧರ್ಮಬೋಧೆಯನ್ನು ಕಲಿಸಬೇಕಾದವರು) ಸಕಲರು ಮೋಸಮಾಡುತ್ತಾರೆ.”—ಯೆರೆಮೀಯ 6:10, 13.
8 ಅವರು ಯಜ್ಞಹೋಮಗಳನ್ನು ಮಾಡುವಂತೆ ಜನರಿಗೆ ಹೇಳುತ್ತಿದ್ದರು ನಿಜ. ಆದರೆ ಅದು ಸತ್ಯಾರಾಧನೆಯ ವಿಧಿರೂಪದ ಆಚರಣೆ, ಭಕ್ತಿಪೂರ್ವಕವಾದ ಆರಾಧನೆಯಲ್ಲ. ಹೊರತೋರಿಕೆಯ ಸಂಸ್ಕಾರ ವಿಧಿಗಳು ಅವರಿಗೆ ಮುಖ್ಯವಾಗಿದ್ದವೇ ಹೊರತು ನೀತಿಯ ನಡವಳಿಕೆಗಳಲ್ಲ. ಈ ರೀತಿಯ ನಡವಳಿಕೆಯಿಂದ ಅವರಿಗೇನೂ ಅಪಾಯವಾಗದು ಎಂಬ ಸುಳ್ಳು ಭರವಸೆಯನ್ನು ಯೆಹೂದಿ ಧರ್ಮ ಮುಖಂಡರು ಜನರಿಗೆ ನೀಡುತ್ತಿದ್ದರು. “ಮೇಲಾಗದಿದ್ದರೂ ಮೇಲು ಮೇಲು ಎಂದು ಹೇಳಿ” ಜನರನ್ನು ಸಮಜಾಯಿಸುತ್ತಿದ್ದರು. (ಯೆರೆ. 6:14, 8:11) ಹೌದು, ದೇವರೊಂದಿಗೆ ತಮಗೆ ಒಳ್ಳೇ ಸಂಬಂಧವಿದೆ, ಶಾಂತಿಯಿಂದ ಇದ್ದೇವೆ ಎಂದು ಹೇಳುತ್ತಾ ಜನರನ್ನು ಮೋಸಗೊಳಿಸುತ್ತಿದ್ದರು. ತಾವು ಯೆಹೋವನ ರಕ್ಷಣೆ ಪಡೆದ ಜನರು, ಪವಿತ್ರನಗರವೂ ಪವಿತ್ರ ಆಲಯವೂ ತಮಗಿದೆ, ಏನೂ ಆತಂಕ ಪಡುವ ಅಗತ್ಯವಿಲ್ಲ ಎಂದವರು ಭಾವಿಸಿದ್ದರು. ಆದರೆ ಸನ್ನಿವೇಶವನ್ನು ಯೆಹೋವನು ಪರಿಗಣಿಸಿದ್ದು ಹೇಗೆ?
w88 4/1 12 ¶9-10
ದೇವರ ನ್ಯಾಯತೀರ್ಪಿನ ಬಗ್ಗೆ ಪ್ರವಾದಿಸಿದ ಯೆರೆಮೀಯ
9 ದೇವಾಲಯಕ್ಕೆ ಬರುವ ಸಕಲ ಆರಾಧಕರಿಗೆ ಕಾಣುವಂತೆ ಅದರ ದ್ವಾರಗಳಲ್ಲಿ ನಿಂತು ತನ್ನ ಸಂದೇಶ ನೀಡುವಂತೆ ಯೆಹೋವನು ಯೆರೆಮೀಯನಿಗೆ ಆಜ್ಞಾಪಿಸಿದನು. ಅವರಿಗೆ ಅವನು ಹೀಗೆ ಹೇಳಬೇಕಿತ್ತು: “ಯೆಹೋವನ ಆಲಯ, ಯೆಹೋವನ ಆಲಯ, ಯೆಹೋವನ ಆಲಯ ಎಂಬ (ಅವರ ನಿಷ್ಪ್ರಯೋಜನವಾದ) ಸುಳ್ಳು ಮಾತುಗಳ ಮೇಲೆ ಭರವಸವಿಡಬೇಡಿರಿ.” ಆ ಯೆಹೂದ್ಯರು ಆಲಯದಲ್ಲಿ ಹಾಗೆಂದು ಜಂಭದಿಂದ ನುಡಿದದ್ದು, ನೋಡುವವರಾಗಿ ನಡೆದದ್ದರಿಂದಲೇ, ನಂಬುವವರಾಗಿ ಅಲ್ಲ. “ಆಕಾಶವು ನನಗೆ ಸಿಂಹಾಸನ, ಭೂಮಿಯು ನನಗೆ ಪಾದಪೀಠ. ನೀವು ನನಗೆ ಇನ್ನೆಂಥ ಮನೆಯನ್ನು ಕಟ್ಟಿಕೊಡುವಿರಿ?” ಎಂಬ ಯೆಹೋವನ ಎಚ್ಚರಿಕೆಯ ಮಾತುಗಳನ್ನು ಅವರು ಆವಾಗಲೇ ಮರೆತುಬಿಟ್ಟಿದ್ದರು. ಯೆಹೋವನು ಈ ಅಪಾರ ವಿಶ್ವದ ಪರಮಾಧಿಕಾರಿ. ಅವರ ಆಲಯವು ಎಷ್ಟೇ ಭವ್ಯಭವನವಾಗಿದ್ದರೂ ಅದು ಆತನ ನಿವಾಸಕ್ಕೆ ಖಂಡಿತ ಸಾಲದು!—ಯೆರೆಮೀಯ 7:1-8; ಯೆಶಾಯ 66:1.
10 ಮನಚುಚ್ಚುವ ಈ ಗದರಿಕೆಯನ್ನು ಯೆರೆಮೀಯನು ಬಹಿರಂಗವಾಗಿ ಕೊಡುತ್ತಾ ಹೋದನು: “ನೀವು ಕಳುವು ಕೊಲೆ ಹಾದರಗಳನ್ನು ಮಾಡಿ ಸುಳ್ಳು ಸಾಕ್ಷಿಹೇಳಿ ಬಾಳನಿಗೆ ಹೋಮವನ್ನು ಅರ್ಪಿಸಿ ಕಂಡುಕೇಳದ ಅನ್ಯ ದೇವತೆಗಳನ್ನು ಹಿಂಬಾಲಿಸಿದ ಮೇಲೆ . . . ನಮಗೆ ಪರಿಹಾರವಾಯಿತು ಎಂದು ಹೇಳಿ ಈ ಎಲ್ಲ ಅಸಹ್ಯಕಾರ್ಯಗಳನ್ನು ಇನ್ನೂ ನಡಿಸುವದಕ್ಕೆ ಅವಕಾಶ ಮಾಡಿಕೊಳ್ಳುವಿರೋ?” ‘ದೇವರಾದುಕೊಂಡ’ ಜನರಾಗಿದ್ದ ಯೆಹೂದ್ಯರು ತಾವು ಆಲಯದಲ್ಲಿ ಯಜ್ಞಹೋಮಗಳನ್ನಷ್ಟೇ ಅರ್ಪಿಸಿದರೆ ಸಾಕೆಂದು ನೆನಸಿದರು. ಏನೇ ದುಷ್ಕೃತ್ಯಗಳನ್ನು ನಡಿಸಿದರೂ ದೇವರದನ್ನು ಸಹಿಸಿಕೊಳ್ಳುವನೆಂದು ಭಾವಿಸಿದ್ದರು. ತನಗಿರುವ ಒಂದೇ ಮಗುವನ್ನು ಶಿಕ್ಷಿಸದೆ ಮುದ್ದಿಸಿ ಕೆಡಿಸುವ ಭಾವಾತಿರೇಕದ ತಂದೆಯಂತೆ ಯೆಹೋವನಿದ್ದಾನೆ ಎಂದವರು ಭಾವಿಸಿದ್ದಾದರೆ ಹಠಾತ್ತನೆ ಒಂದು ಉಗ್ರ ಎಚ್ಚರಿಕೆಗೆ ಗುರಿಯಾಗಲಿದ್ದರು.—ಯೆರೆಮೀಯ 7:9, 10; ವಿಮೋಚನಕಾಂಡ 19:5, 6.
jr 21 ¶12
“ಕಟ್ಟಕಡೆಯ ದಿನಗಳಲ್ಲಿ” ಸೇವೆ ಮಾಡುವುದು
12 ಯೆರೆಮೀಯನು ಆಲಯಕ್ಕೆ ಹೋಗಿ ಯೆಹೂದದ ಜನರ ದುಷ್ಟತನವನ್ನು ಬಲವಾಗಿ ಖಂಡಿಸುವಂತೆ ಯೆಹೋವನು ಹೇಳಿದ್ದು ರಾಜ ಯೆಹೋಯಾಕೀಮನ ಆಳಿಕೆಯ ಆರಂಭದಲ್ಲಿ. ಯೆಹೋವನ ಆಲಯವು ತಮ್ಮನ್ನು ರಕ್ಷಿಸಲಿರುವ ರಕ್ಷೆಯೆಂದು ಅವರೆಣಿಸಿದ್ದರು. ಆದರೆ ಅವರು ‘ಕಳುವು ಕೊಲೆ ಹಾದರಗಳನ್ನು . . . ಸುಳ್ಳುಸಾಕ್ಷಿ . . . ಬಾಳನಿಗೆ ಹೋಮ . . . ಅನ್ಯದೇವತೆಗಳನ್ನು ಹಿಂಬಾಲಿಸುವದನ್ನು’ ತೊರೆದುಬಿಡದಿದ್ದರೆ ಯೆಹೋವನು ತನ್ನ ಆಲಯವನ್ನೇ ತೊರೆದುಬಿಡಲಿದ್ದನು. ಅಲ್ಲಿ ಆರಾಧಿಸುತ್ತಿದ್ದ ಕಪಟ ಆರಾಧಕರನ್ನೂ ಅದೇ ರೀತಿ ತೊರೆದುಬಿಡುವನು. ಹೇಗೆ ಮಹಾಯಾಜಕ ಏಲಿಯ ಸಮಯದಲ್ಲಿ ಶಿಲೋವಿನ ಗುಡಾರವನ್ನು ಆತನು ತ್ಯಜಿಸಿಬಿಟ್ಟನೊ ಹಾಗೆಯೇ. ಆಗ ಯೆಹೂದ ದೇಶವು “ಹಾಳೇ ಹಾಳಾಗುವದು.” (ಯೆರೆ. 7:1-15, 34, 26:1-6) ಈ ಸಂದೇಶವನ್ನು ನೀಡಲಿಕ್ಕೆ ಯೆರೆಮೀಯನಿಗೆ ಎಷ್ಟು ಧೈರ್ಯ ಬೇಕಿತ್ತೆಂದು ಯೋಚಿಸಿರಿ! ಅವನದನ್ನು ಬಹಿರಂಗವಾಗಿ ಗಣ್ಯರ ಮುಂದೆ ಪ್ರತಿಷ್ಠಿತ ಜನರ ಮುಂದೆ ನೀಡಿದ್ದಿರಬೇಕು. ಇಂದು ಸಹ ರಸ್ತೆ ಬದಿಯ ಸೇವೆಯಲ್ಲಿ ಅಥವಾ ಧನಿಕರಿಗೆ, ಅಧಿಕಾರಿಗಳಿಗೆ ಸಾಕ್ಷಿಕೊಡುವಾಗ ಕೆಲವು ಸಹೋದರ ಸಹೋದರಿಯರಿಗೆ ಧೈರ್ಯದ ಅವಶ್ಯಕತೆಯ ಅರಿವಾಗಿದೆ. ಆದರೂ ನಮಗೆ ಈ ಭರವಸೆಯಿದೆ ಏನಂದರೆ ಯೆರೆಮೀಯನಿಗೆ ಕೊಟ್ಟಂತೆ ದೇವರು ಖಂಡಿತ ಸಹಾಯ, ಬೆಂಬಲ ಕೊಡುವನು.—ಇಬ್ರಿಯ. 10:39; 13:6.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w88 4/1 13 ¶15
ದೇವರ ನ್ಯಾಯತೀರ್ಪಿನ ಬಗ್ಗೆ ಪ್ರವಾದಿಸಿದ ಯೆರೆಮೀಯ
ಯೆಹೂದದ ಅಪನಂಬಿಕೆಗೆ ತಕ್ಕ ಶಿಕ್ಷೆ
15 ಕ್ರಿ.ಪೂ. ಸುಮಾರು 632ರೊಳಗೆ ಅಶ್ಶೂರವು ಕಸ್ದೀಯರ ಮತ್ತು ಮೇದ್ಯಯರ ವಶವಾಗಿತ್ತು. ಯೆಹೂದದ ದಕ್ಷಿಣಕ್ಕಿದ್ದ ಈಜಿಪ್ಟ್ ಚಿಕ್ಕ ಲೋಕಶಕ್ತಿಯಾಗಿ ಪರಿಗಣಿಸಲ್ಪಟ್ಟಿತ್ತು. ಯೆಹೂದಕ್ಕೆ ನಿಜ ಬೆದರಿಕೆಯು ಉತ್ತರ ದಿಕ್ಕಿನಿಂದ ಬರಲಿದ್ದ ಆಕ್ರಮಣದಿಂದಲೇ. ಈ ಕೆಟ್ಟ ವಾರ್ತೆಯನ್ನು ಜೊತೆ ಯೆಹೂದ್ಯರಿಗೆ ಯೆರೆಮೀಯನು ಕೊಡಲೇಬೇಕಿತ್ತು: “ಆಹಾ, ಬಡಗಲಿಂದ ಒಂದು ಜನಾಂಗ ಬರಲಿದೆ . . . ಅವರು ಕ್ರೂರರು, ನಿಷ್ಕರುಣಿಗಳು . . . ಚೀಯೋನ್ ನಗರಿಯೇ, ಆ ಸೈನ್ಯವು ಶೂರನಂತೆ ನಿನ್ನ ಮೇಲೆ ಯುದ್ಧಸನ್ನದ್ಧವಾಗಿದೆ.” ಆ ಸಮಯದಲ್ಲಿ ಪ್ರಾಬಲ್ಯಕ್ಕೆ ಬರುತ್ತಿದ್ದ ಲೋಕಶಕ್ತಿಯೇ ಬಾಬೆಲ್ ಸಾಮ್ರಾಜ್ಯ. ಅಪನಂಬಿಕೆಯ ಯೆಹೂದವನ್ನು ಶಿಕ್ಷಿಸಲಿಕ್ಕಾಗಿ ದೇವರು ಬಳಸಲಿದ್ದ ಸಾಧನ ಅದೇ.—ಯೆರೆಮೀಯ 6:22, 23, 25:8, 9.
ಮಾರ್ಚ್ 20-26
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 8-11
“ಯೆಹೋವನ ಮಾರ್ಗದರ್ಶನವೇ ಯಶಸ್ಸಿನ ದಾರಿ”
it-1 555
ಸೌತೆಕಾಯಿ
ಪ್ರಾಣಿಗಳನ್ನು ಬೆಚ್ಚಿ ಬೀಳಿಸಲಿಕ್ಕಾಗಿ ಬೆಳೆಯ ಹೊಲಗಳಲ್ಲಿ ಕಂಬಗಳನ್ನು, ನಿಲುಗಂಬಗಳನ್ನು ಅಥವಾ ಇತರ ಸಲಕರಣೆಗಳನ್ನೂ ಇರಿಸಲಾಗುತ್ತಿತ್ತು. ಇಂಥ ಮೂಕ, ನಿರ್ಜೀವ ವಸ್ತುಗಳನ್ನು ಪ್ರವಾದಿ ಯೆರೆಮೀಯನು ವಿಗ್ರಹಾರಾಧಕ ಜನಾಂಗಗಳು ಮಾಡಿರುವ ವಿಗ್ರಹಗಳಿಗೆ ಹೋಲಿಸುತ್ತಾ ಅವು “ಸೌತೆಯ ತೋಟದ ಬೆದರುಗಂಬದಂತಿವೆ” ಎಂದು ಹೇಳಿದ್ದಾನೆ.—ಯೆರೆ 10:5.
ಮಾರ್ಚ್ 27–ಏಪ್ರಿಲ್ 2
ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 12-16
“ಇಸ್ರಾಯೇಲ್ಯರು ಯೆಹೋವನನ್ನು ಮರೆತುಬಿಟ್ಟರು”
jr 51 ¶17
ವಂಚಕ ಹೃದಯ ನಿಮ್ಮಲ್ಲಿ ಬರದಂತೆ ಜಾಗ್ರತೆವಹಿಸಿ
17 ಯೆರೆಮೀಯನ ನೇಮಕದಲ್ಲಿ ದೇವರ ಮಾರ್ಗದರ್ಶನಕ್ಕೆ ವಿಧೇಯತೆ ತೋರಿಸುವುದು ಸೇರಿತ್ತು. ನೀವು ಯೆರೆಮೀಯನಾಗಿದ್ದರೆ ಕೊಡಲಾದ ಇಂಥ ಯಾವುದೇ ಮಾರ್ಗದರ್ಶನವನ್ನು ಸ್ವೀಕರಿಸುತ್ತಿದ್ದಿರಾ? ಒಮ್ಮೆ ಯೆಹೋವನು ಯೆರೆಮೀಯನಿಗೆ: ‘ನಾರಿನ ನಡುಕಟ್ಟನ್ನು ಕೊಂಡುಕೊಂಡು ಅದನ್ನು ಸೊಂಟಕ್ಕೆ ಬಿಗಿದುಕೋ’ ಎಂದನು. ಬಳಿಕ ಯೂಫ್ರೇಟೀಸ್ಗೆ ಪ್ರಯಾಣ ಮಾಡುವಂತೆ ಆಜ್ಞಾಪಿಸಿದನು. ನಿಮ್ಮ ಭೂಪಟದ ಮೇಲೆ ಕಣ್ಣಾಡಿಸಿರಿ. ಅಲ್ಲಿಗೆ ಹೋಗಲು ಸುಮಾರು 300 ಮೈಲು (500 ಕಿ.ಮೀ.) ಪ್ರಯಾಣಿಸಬೇಕೆಂದು ನಿಮಗೆ ತಿಳಿಯುವುದು. ಆ ಸ್ಥಳವನ್ನು ತಲುಪಿದಾಗ ಯೆರೆಮೀಯನು ಆ ನಡುಕಟ್ಟನ್ನು ಒಂದು ಬಂಡೆಯ ಸಂದಿನೊಳಗೆ ಬಚ್ಚಿಡಬೇಕಿತ್ತು. ಬಳಿಕ ಪುನಃ ಪ್ರಯಾಣಿಸಿ ಯೆರೂಸಲೇಮಿಗೆ ಹಿಂದೆ ಬರಬೇಕಿತ್ತು. ತರುವಾಯ ಪುನಃ ಆ ನಡುಕಟ್ಟನ್ನು ತರುವಂತೆ ದೇವರು ಅವನಿಗೆ ಹೇಳುತ್ತಾನೆ. (ಯೆರೆಮೀಯ 13:1-9 ಓದಿ) ಒಟ್ಟಿನಲ್ಲಿ ಯೆರೆಮೀಯನು ಸುಮಾರು 1200 ಮೈಲು (1900 ಕಿ.ಮೀ.) ಪ್ರಯಾಣ ಮಾಡಿದ್ದಿರಬೇಕು. ಅವನು ಅಷ್ಟು ದೂರ ಹಲವಾರು ತಿಂಗಳು ಕಾಲ್ನಡೆಯಾಗಿ ಪ್ರಯಾಣಿಸಿದ್ದನೆಂದು ಬೈಬಲ್ ಟೀಕಾಕಾರರು ನಂಬುವುದೇ ಇಲ್ಲ. (ಎಜ್ರ 7:9) ಆದರೂ ದೇವರು ಹೇಳಿದ್ದು ಅದನ್ನೇ ಮತ್ತು ಅದನ್ನೇ ಯೆರೆಮೀಯನು ಮಾಡಿದನು.
jr 52 ¶18
ವಂಚಕ ಹೃದಯ ನಿಮ್ಮಲ್ಲಿ ಬರದಂತೆ ಜಾಗ್ರತೆವಹಿಸಿ
18 ಯೂದಾಯದ ಬೆಟ್ಟಗಳ ನಡುವೆ ಪ್ರವಾದಿ ಕಾಲ್ನಡಿಗೆಯಲ್ಲಿ ಹೋಗುತ್ತಿರುವುದನ್ನು ಚಿತ್ರಿಸಿಕೊಳ್ಳಿ. ಅವನು ತನ್ನ ಹಾದಿಹಿಡಿದು ಯೂಫ್ರೆಟೀಸಿನ ಕಡೆಗೆ ನಡೆಯುತ್ತಾ ಮರಳುಗಾಡನ್ನು ಪ್ರವೇಶಿಸುತ್ತಾನೆ. ಅವನು ಅಷ್ಟೆಲ್ಲ ಪ್ರಯಾಸ ಪಡುವುದು ಒಂದು ನಾರಿನ ನಡುಕಟ್ಟನ್ನು ಬಚ್ಚಿಡಲಿಕ್ಕಾಗಿ! ಅವನು ಈಗ ಮನೆಬಿಟ್ಟು ತುಂಬ ಸಮಯವಾಗಿದೆ. ಅದು ಅವನ ನೆರೆಯವರ ಕುತೂಹಲವನ್ನು ಎಬ್ಬಿಸಿರಬಹುದು. ಹಿಂದೆ ಬಂದಾಗ ಅವನ ಬಳಿ ನಾರಿನ ನಡುಕಟ್ಟು ಇರಲಿಲ್ಲ. ‘ಪುನಃ ಹೋಗಿ ಅದನ್ನು ತಾ’ ಎಂದು ದೇವರು ಆಜ್ಞಾಪಿಸುತ್ತಾನೆ. ಅದೀಗ ಕೊಳೆತುಹೋಗಿರಬಹುದಲ್ಲ. “ಯಾವ ಕೆಲಸಕ್ಕೂ ಬಾರದ್ದಾಗಿದೆ.” ಅವನು ಹೀಗೆ ನೆನಸಬಹುದಿತ್ತು: “ಇದು ತೀರ ಹೆಚ್ಚಾಯಿತು. ಇದರಲ್ಲಿ ಯಾವ ಅರ್ಥವೂ ಇಲ್ಲ.” ಆದರೆ ದೇವರಿಂದ ರೂಪಿಸಲ್ಪಟ್ಟಿದ್ದ ಯೆರೆಮೀಯನು ಹಾಗೆ ಪ್ರತಿಕ್ರಿಯಿಸಲಿಲ್ಲ. ಗುಣುಗುಟ್ಟಲಿಲ್ಲ. ದೇವರು ಹೇಳಿದಂತೆಯೇ ಮಾಡಿದನು!
jr 52 ¶19-20
ವಂಚಕ ಹೃದಯ ನಿಮ್ಮಲ್ಲಿ ಬರದಂತೆ ಜಾಗ್ರತೆವಹಿಸಿ
19 ಎರಡನೇ ಬಾರಿ ಹೋಗಿಬಂದ ಮೇಲೆ ಮಾತ್ರವೇ ಅವನಿಗೆ ಯೆಹೋವನು ವಿಷಯವೇನೆಂದು ತಿಳಿಸಿದನು. ಯೆರೆಮೀಯನ ಕ್ರಿಯೆಗಳು ಒಂದು ಬಲವಾದ ಸಂದೇಶವನ್ನು ಕೊಡುವುದಕ್ಕೆ ಅವನನ್ನು ಸಿದ್ಧಮಾಡಿತು: “ನನ್ನ ಮಾತುಗಳನ್ನು ಕೇಳಲೊಲ್ಲದೆ ತಮ್ಮ ಹೃದಯದ ಹಟದಂತೆ ನಡೆದು ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸಿ ಪೂಜಿಸುತ್ತಿರುವ ಈ ದುಷ್ಟಜನರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು.” (ಯೆರೆ. 13:10) ಎಷ್ಟೊಂದು ಪರಿಣಾಮಕಾರಿ ವಿಧದಲ್ಲಿ ಯೆಹೋವನು ತನ್ನ ಜನರಿಗೆ ಪಾಠ ಕಲಿಸಿದನು! ಕ್ಷುಲ್ಲಕವೆಂದು ತೋರಿರಬಹುದಾದ ಆ ವಿಷಯಕ್ಕೆ ಯೆರೆಮೀಯನು ಮನಪೂರ್ವಕವಾಗಿ ವಿಧೇಯನಾದನು. ಜನರ ಹೃದಯವನ್ನು ಮುಟ್ಟಲು ದೇವರು ಮಾಡಿದ ಪ್ರಯತ್ನದಲ್ಲಿ ಪಾತ್ರವಹಿಸಿದನು.—ಯೆರೆ. 13:11.
20 ಇಂದು ಕ್ರೈಸ್ತರು ನೂರಾರು ಮೈಲು ನಡೆಯಬೇಕೆಂದು ದೇವರು ಹೇಳುವುದಿಲ್ಲ. ಆದರೂ ನಿಮ್ಮ ಕ್ರೈಸ್ತ ಜೀವನ ಶೈಲಿಯ ವಿಷಯದಲ್ಲೇನು? ಅದರ ಬಗ್ಗೆ ನೆರೆಯವರು, ಸಂಗಡಿಗರು ಕುತೂಹಲಪಡಬಹುದು, ತಬ್ಬಿಬ್ಬಾಗಬಹುದು, ಟೀಕಿಸಲೂಬಹುದು. ನೀವು ಧರಿಸುವ ಬಟ್ಟೆಗಳು, ನಿಮ್ಮ ಕೇಶಾಲಂಕಾರ, ಲೌಕಿಕ ಶಿಕ್ಷಣದ ಬಗ್ಗೆ ನಿಮ್ಮ ನೋಟ, ಕೆಲಸ, ಮದ್ಯಪಾನದ ಕುರಿತ ನಿಮ್ಮ ದೃಷ್ಟಿಕೋನ ಇವನ್ನು ಅವರು ಟೀಕಿಸಬಹುದು. ಆಗ ನೀವು ಯೆರೆಮೀಯನಂತೆ ದೇವರ ಮಾತನ್ನು ಪಾಲಿಸಲು ಸ್ಥಿರಚಿತ್ತದಿಂದ ಇರುವಿರಾ? ನಿಮ್ಮ ಹೃದಯವನ್ನು ದೇವರು ರೂಪಿಸುವಂತೆ ಬಿಟ್ಟುಕೊಟ್ಟಿದ್ದೀರಿ. ಆದ್ದರಿಂದ ನೀವು ಮಾಡುವ ಆಯ್ಕೆಗಳು ಒಳ್ಳೆಯ ಸಾಕ್ಷಿಕೊಡುವಂತೆ ನಡಿಸಬಹುದು. ದೇವರ ವಾಕ್ಯದಲ್ಲಿ ಕೊಡಲಾದ ಯೆಹೋವನ ಮಾರ್ಗದರ್ಶನಕ್ಕೆ ವಿಧೇಯರಾಗುವುದು ಮತ್ತು ನಂಬಿಗಸ್ತ ಆಳಿನ ಮಾರ್ಗದರ್ಶನವನ್ನು ಸ್ವೀಕರಿಸುವದು ನಮ್ಮ ಹಿತಕ್ಕಾಗಿಯೇ ಇದೆ. ವಂಚಕ ಹೃದಯದಿಂದ ನಡಿಸಲ್ಪಡಬೇಡಿರಿ. ಯೆರೆಮೀಯನಂತೆ ಇರಿ. ದೇವರಿಂದ ರೂಪಿಸಲ್ಪಡಲು ನಿರ್ಧಾರ ಮಾಡಿರಿ. ಆಗ ಆತನು ನಿಮ್ಮನ್ನು ಗೌರವಾರ್ಹ ಪಾತ್ರೆಯಾಗಿ ಮಾಡಿ ಸದಾಕಾಲ ಬಳಸುವನು.
it-1 1121 ¶2
ಸೊಂಟ
ಸಮಸ್ತ ಇಸ್ರಾಯೇಲ್ ಮತ್ತು ಯೆಹೂದ ವಂಶಗಳು ತನ್ನ ಸೊಂಟಕ್ಕೆ ಬಿಗಿದ ನಡುಕಟ್ಟಿನಂತಿವೆ ಎಂದು ಯೆಹೋವನು ಹೇಳಿದನು. ಅವರು ತನಗೆ ಸ್ತುತಿಯನ್ನೂ ಮಹಿಮೆಯನ್ನೂ ತರುವಂತಾಗಲಿ ಎಂದು ಆತನು ಅವರನ್ನು ಆಪ್ತತೆಯಿಂದ ತನಗೆ ಗಟ್ಟಿಯಾಗಿ ಬಿಗಿದುಕೊಂಡಿದ್ದನು. (ಯೆರೆ. 13:11) ಯೇಸು ಕ್ರಿಸ್ತನು ಸಹ ಧರ್ಮದ ನಡುಕಟ್ಟನ್ನು, ನಂಬಿಗಸ್ತಿಕೆಯೆಂಬ ಸೊಂಟಪಟ್ಟಿಯನ್ನು ಧರಿಸಿದವನಾಗಿ ಆಳುವನು ಎಂದು ಪ್ರವಾದನಾ ರೂಪವಾಗಿ ಚಿತ್ರಿಸಲ್ಪಟ್ಟಿದ್ದಾನೆ. ಇದು, ಯೇಸು ಕ್ರಿಸ್ತನು ತನ್ನೆಲ್ಲ ಶಕ್ತಿಯಿಂದ ನೀತಿ ಮತ್ತು ನಂಬಿಗಸ್ತಿಕೆಗೆ ಬಿಡದೆ ಅಂಟಿಕೊಳ್ಳುವನೆಂಬುದನ್ನು ಸೂಚಿಸುತ್ತಿರಬಹುದು. ನಡುಪಟ್ಟಿ ಹೇಗೆ ಆಧಾರ ಕೊಡುತ್ತದೋ ಹಾಗೆ ನೀತಿನ್ಯಾಯಗಳ ನೈತಿಕ ಗುಣವು ಯೆಹೋವನ ನೇಮಿತ ನ್ಯಾಯಾಧಿಪತಿಯಾಗಿ ಕಾರ್ಯನಡಿಸಲು ಅವನಿಗೆ ಬಲವನ್ನು ಕೊಡುವದು.—ಯೆಶಾ 11:1, 5.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
jr 118 ¶11
“ಯೆಹೋವನು ಎಲ್ಲಿ” ಎಂದು ನೀವು ಪ್ರತಿದಿನ ಕೇಳುತ್ತಿದ್ದೀರೋ?
11 ದುಷ್ಟರು ಸಾಫಲ್ಯ ಪಡೆಯುವುದನ್ನು ಕಂಡಾಗ ಯೆರೆಮೀಯನನ್ನು ಒಂದು ಪ್ರಶ್ನೆ ಅತಿಯಾಗಿ ಪೀಡಿಸಿತು. (ಯೆರೆ. 12:1, 3 ಓದಿ) ಪ್ರವಾದಿಯು ಯೆಹೋವನ ನೀತಿಯನ್ನು ಪ್ರಶ್ನಿಸಿರಲಿಲ್ಲ. ಆದರೂ ತನ್ನ “ವ್ಯಾಜ್ಯ”ದ ಪ್ರಶ್ನೆಗೆ ಉತ್ತರವನ್ನು ಅಪೇಕ್ಷಿಸಿದನು. ಅವನ ಯಥಾರ್ಥ, ಸರಳ ಸ್ವಭಾವವು ದೇವರಲ್ಲಿ ಅವನಿಗಿದ್ದ ಆಪ್ತ ಬಂಧವನ್ನು ತೋರಿಸಿಕೊಟ್ಟಿತು. ಪ್ರೀತಿಯ ತಂದೆಯಲ್ಲಿ ಮಗುವಿಗಿರುವ ಮಮತೆಯ ಬಂಧದಂತೆ ಅದಿತ್ತು. ಯೆಹೂದ್ಯರಲ್ಲಿ ಅನೇಕರು ದುಷ್ಟರಾಗಿದ್ದರೂ ಏಕೆ ಸಫಲರಾಗುತ್ತಿದ್ದಾರೆ ಎಂಬುದು ಯೆರೆಮೀಯನಿಗೆ ತಿಳಿಯಲಿಲ್ಲ. ಅವನಿಗೆ ತೃಪ್ತಿಕರವಾದ ಉತ್ತರ ಸಿಕ್ಕಿತಾ? ಹೌದು, ದುಷ್ಟರನ್ನು ಕಿತ್ತುಹಾಕುವನೆಂಬ ಆಶ್ವಾಸನೆಯನ್ನು ಯೆಹೋವನು ಅವನಿಗಿತ್ತನು. (ಯೆರೆ. 12:14) ಸಂಭವಿಸುತ್ತಿರುವ ವಿಷಯಗಳನ್ನು ಯೆರೆಮೀಯನು ನೋಡಿದಾಗ ಅವನ್ನು ಪ್ರಾರ್ಥನೆಯಲ್ಲಿ ದೇವರ ಮುಂದಿಟ್ಟನು. ಯೆಹೋವನ ನೀತಿನ್ಯಾಯದಲ್ಲಿ ಅವನ ಭರವಸೆ ಆಳಗೊಂಡಿತು. ಫಲಿತಾಂಶವಾಗಿ ಅವನು ಪ್ರಾರ್ಥನೆಯಲ್ಲಿ ಹೆಚ್ಚೆಚ್ಚು ನಿರತನಾದನು. ತನ್ನ ಮನೋಭಾವನೆಗಳನ್ನು ತನ್ನ ತಂದೆಗೆ ತಿಳಿಯಪಡಿಸಿದನು.