ಕುರಿಗಳಿಗೂ ಆಡುಗಳಿಗೂ ಭವಿಷ್ಯವೇನು?
“ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆ” ಮಾಡುವನು.—ಮತ್ತಾಯ 25:32.
1, 2. ಕುರಿಗಳ ಮತ್ತು ಆಡುಗಳ ದೃಷ್ಟಾಂತವು ನಮ್ಮಲ್ಲಿ ಆಸಕ್ತಿಯನ್ನು ಏಕೆ ಹುಟ್ಟಿಸಬೇಕು?
ಯೇಸು ಕ್ರಿಸ್ತನು ನಿಶ್ಚಯವಾಗಿಯೂ ಭೂಮಿಯ ಮೇಲಿನ ಅತ್ಯಂತ ಮಹಾನ್ ಬೋಧಕನಾಗಿದ್ದನು. (ಯೋಹಾನ 7:46) ಅವನ ಕಲಿಸುವ ವಿಧಾನಗಳಲ್ಲಿ ಒಂದು, ದೃಷ್ಟಾಂತಗಳ ಅಥವಾ ವಿವರಣೆಗಳ ಉಪಯೋಗವೇ ಆಗಿತ್ತು. (ಮತ್ತಾಯ 13:34, 35) ಇವು ಸರಳವಾಗಿದ್ದರೂ ಆಳವಾದ ಆತ್ಮಿಕ ಮತ್ತು ಪ್ರವಾದನಾ ಸತ್ಯಗಳನ್ನು ತಿಳಿಯಪಡಿಸುವುದರಲ್ಲಿ ಬಲಾಢ್ಯವಾಗಿದ್ದವು.
2 ಕುರಿಗಳ ಮತ್ತು ಆಡುಗಳ ದೃಷ್ಟಾಂತದಲ್ಲಿ, ಯೇಸು ಒಂದು ವಿಶೇಷ ಸ್ಥಾನದಲ್ಲಿ ತಾನು ಕ್ರಿಯೆಗೈಯುವ ಒಂದು ಸಮಯವನ್ನು ಸೂಚಿಸಿದನು: “ಮನುಷ್ಯಕುಮಾರನು ತನ್ನ ಮಹಿಮೆಯಿಂದ . . . ಬರುವಾಗ . . .” (ಮತ್ತಾಯ 25:31) ಇದು ನಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಬೇಕು, ಏಕೆಂದರೆ “ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆಯೇನು?” ಎಂಬ ಪ್ರಶ್ನೆಗೆ ತನ್ನ ಉತ್ತರವನ್ನು ಯೇಸು ಸಮಾಪ್ತಿಗೊಳಿಸುವ ದೃಷ್ಟಾಂತ ಇದಾಗಿದೆ. (ಮತ್ತಾಯ 24:3, NW) ಇದು ನಮಗೆ ಯಾವ ಅರ್ಥದಲ್ಲಿದೆ?
3. ತನ್ನ ಭಾಷಣದ ಮೊದಲಲ್ಲಿ, ಮಹಾ ಸಂಕಟವು ಆರಂಭಗೊಂಡ ಕೂಡಲೇ, ಏನು ವಿಕಸನಗೊಳ್ಳುವುದೆಂದು ಯೇಸು ಹೇಳಿದನು?
3 ಆ ಮಹಾ ಸಂಕಟವು ಆರಂಭವಾದ “ಕೂಡಲೆ” ಯೇಸು ಗಮನಾರ್ಹವಾದ ವಿಕಸನಗಳನ್ನು, ನಾವು ಕಾಯುವ ವಿಕಸನಗಳನ್ನು ಮುಂತಿಳಿಸಿದನು. “ಮನುಷ್ಯಕುಮಾರನನ್ನು ಸೂಚಿಸುವ ಗುರುತು” ಆಗ ತೋರಿಬರುವುದೆಂದು ಅವನು ಹೇಳಿದನು. ಇದು “ಭೂಲೋಕದಲ್ಲಿರುವ ಎಲ್ಲಾ ಕುಲ”ದವರ ಮೇಲೆ ಮಹತ್ತಾದ ಪರಿಣಾಮವನ್ನು ಬೀರುವುದು. ಅವರು “ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವುದನ್ನು ಕಾಣುವರು.” ಮನುಷ್ಯಕುಮಾರನ ಕೂಡ, ‘ಅವನ ದೂತರು’ ಇರುವರು. (ಮತ್ತಾಯ 24:21, 29-31)a ಕುರಿಗಳ ಮತ್ತು ಆಡುಗಳ ದೃಷ್ಟಾಂತದ ವಿಷಯದಲ್ಲೇನು? ಆಧುನಿಕ ಬೈಬಲುಗಳು ಇದನ್ನು 25ನೆಯ ಅಧ್ಯಾಯದಲ್ಲಿ ಹಾಕುವುದಾದರೂ, ಅದು ಯೇಸುವಿನ ಉತ್ತರದ, ಅವನ ಮಹಿಮೆಯ ಬರೋಣದ ಹೆಚ್ಚಿನ ವಿವರಣೆಗಳನ್ನು ಕೊಡುವ ಮತ್ತು “ಎಲ್ಲಾ ದೇಶಗಳ ಜನರ” ಮೇಲೆ ಅವನ ನ್ಯಾಯತೀರಿಸುವಿಕೆಯ ಮೇಲೆ ಕೇಂದ್ರೀಕರಿಸುವ, ಭಾಗವಾಗಿದೆ.—ಮತ್ತಾಯ 25:32.
ದೃಷ್ಟಾಂತದಲ್ಲಿರುವ ವ್ಯಕ್ತಿಗಳು
4. ಕುರಿಗಳ ಮತ್ತು ಆಡುಗಳ ದೃಷ್ಟಾಂತವು ಯೇಸುವಿನ ಕುರಿತು ಆರಂಭಿಕವಾಗಿ ಏನನ್ನುತ್ತದೆ, ಮತ್ತು ಯಾರು ಕೂಡ ದೃಶ್ಯದೊಳಗಡೆ ಬರುತ್ತಾರೆ?
4 “ಮನುಷ್ಯಕುಮಾರನು . . . ಬರುವಾಗ” ಎಂದು ಹೇಳುವ ಮೂಲಕ ಯೇಸುವು ದೃಷ್ಟಾಂತವನ್ನು ಪ್ರಾರಂಭಿಸುತ್ತಾನೆ. “ಮನುಷ್ಯಕುಮಾರನು” ಯಾರೆಂದು ನೀವು ತಿಳಿದಿರುವುದು ಸಂಭವನೀಯ. ಸುವಾರ್ತಾ ಲೇಖಕರು ಆ ಪದವಿನ್ಯಾಸವನ್ನು ಅನೇಕ ವೇಳೆ ಯೇಸುವಿಗೆ ಅನ್ವಯಿಸಿದರು. “ಮನುಷ್ಯಕುಮಾರನಂತಿರುವವನು” ‘ದೊರೆತನವನ್ನೂ ಘನತೆಯನ್ನೂ ರಾಜ್ಯವನ್ನೂ’ ಪಡೆಯಲಿಕ್ಕಾಗಿ ಮಹಾವೃದ್ಧನನ್ನು ಸಮೀಪಿಸುವುದರ ಕುರಿತು ದಾನಿಯೇಲನ ದರ್ಶನವನ್ನು ನಿಸ್ಸಂಶಯವಾಗಿ ಮನಸ್ಸಿನಲ್ಲಿಟ್ಟವನಾಗಿ, ಯೇಸು ತಾನೇ ಹಾಗೆ ಅನ್ವಯಿಸಿಕೊಂಡನು. (ದಾನಿಯೇಲ 7:13, 14; ಮತ್ತಾಯ 26:63, 64; ಮಾರ್ಕ 14:61, 62) ಈ ದೃಷ್ಟಾಂತದಲ್ಲಿ ಯೇಸು ಪ್ರಧಾನನಾಗಿರುವುದಾದರೂ, ಅವನು ಒಬ್ಬನಾಗಿರುವುದಿಲ್ಲ. ಈ ಭಾಷಣದ ಮೊದಲಲ್ಲಿ, ಮತ್ತಾಯ 24:30, 31ರಲ್ಲಿ ಉಲ್ಲೇಖಿಸಿರುವಂತೆ, ಮನುಷ್ಯಕುಮಾರನು ‘ಬಲ ಮತ್ತು ಬಹು ಮಹಿಮೆ’ಯಿಂದ ಬರುವಾಗ, ಅವನ ದೂತರು ಒಂದು ಮಹತ್ವದ ಪಾತ್ರವನ್ನು ವಹಿಸುವರೆಂದು ಅವನು ಹೇಳಿದನು. ಅದೇ ರೀತಿಯಲ್ಲಿ ಕುರಿಗಳ ಮತ್ತು ಆಡುಗಳ ದೃಷ್ಟಾಂತವು ಯೇಸು ತೀರ್ಪು ಕೊಡಲು ‘ತನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಳ್ಳುವಾಗ’ ದೇವದೂತರು ಅವನೊಂದಿಗಿದ್ದರೆಂದು ತೋರಿಸುತ್ತದೆ. (ಹೋಲಿಸಿ ಮತ್ತಾಯ 16:27.) ಆದರೆ ನ್ಯಾಯಾಧೀಶನೂ ದೇವದೂತರೂ ಸ್ವರ್ಗದಲ್ಲಿರುವುದರಿಂದ, ಆ ದೃಷ್ಟಾಂತದಲ್ಲಿ ಮಾನವರನ್ನು ಚರ್ಚಿಸಲಾಗಿದೆಯೆ?
5. ಯೇಸುವಿನ “ಸಹೋದರರನ್ನು” ನಾವು ಹೇಗೆ ಗುರುತಿಸಬಲ್ಲೆವು?
5 ಆ ದೃಷ್ಟಾಂತದ ಕಡೆಗೆ ಒಂದು ನಸುನೋಟವು ನಾವು ಗುರುತಿಸಲವಶ್ಯವಾದ ಮೂರು ಗುಂಪುಗಳನ್ನು ತಿಳಿಯಪಡಿಸುತ್ತದೆ. ಕುರಿಗಳಿಗೆ ಮತ್ತು ಆಡುಗಳಿಗೆ ಸೇರಿಸಿ, ಮನುಷ್ಯಕುಮಾರನು, ಕುರಿಗಳ ಮತ್ತು ಆಡುಗಳ ಗುರುತಿಸುವಿಕೆಗೆ ಯಾವುದರ ಗುರುತಿಸುವಿಕೆ ಪ್ರಮುಖವಾಗಿದೆಯೊ ಆ ಮೂರನೆಯ ಗುಂಪೊಂದನ್ನು ಕೂಡಿಸುತ್ತಾನೆ. ಈ ಮೂರನೆಯ ಗುಂಪನ್ನು ಯೇಸು ತನ್ನ ಆತ್ಮಿಕ ಸಹೋದರರೆಂದು ಕರೆಯುತ್ತಾನೆ. (ಮತ್ತಾಯ 25:40, 45) ಅವರು ಸತ್ಯಾರಾಧಕರಾಗಿರಬೇಕು, ಏಕೆಂದರೆ ಯೇಸು ಹೇಳಿದ್ದು: “ನನ್ನ ತಂದೆಯ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು.” (ಮತ್ತಾಯ 12:50; ಯೋಹಾನ 20:17) ಹೆಚ್ಚು ಸಂಗತವಾಗಿ, ಪೌಲನು “ಅಬ್ರಹಾಮನ ಸಂತತಿಯ” ಭಾಗವಾಗಿರುವವರ ಮತ್ತು ದೇವರ ಪುತ್ರರಾಗಿರುವವರ ಕುರಿತು ಬರೆದನು. ಅವನು ಇವರನ್ನು ಯೇಸುವಿನ “ಸಹೋದರರು” ಮತ್ತು “ಪರಲೇಕಸ್ವಾಸ್ಥ್ಯಕ್ಕಾಗಿ . . . ಕರೆಯಲ್ಪಟ್ಟವ”ರು ಎಂದು ಕರೆದನು.—ಇಬ್ರಿಯ 2:9–3:1; ಗಲಾತ್ಯ 3:26, 29.
6. ಯೇಸುವಿನ ಸಹೋದರರಲ್ಲಿ “ಅಲ್ಪ”ರಾದವರು ಯಾರು?
6 ತನ್ನ ಸಹೋದರರಲ್ಲಿ “ಅಲ್ಪವಾದವರು” ಎಂದು ಯೇಸು ಹೇಳಿದ್ದೇಕೆ? ಅವನು ಈ ಮೊದಲು ಏನು ಹೇಳಿದ್ದನೊ, ಅದನ್ನು ಆ ಮಾತುಗಳು ಪ್ರತಿಧ್ವನಿಸುತ್ತವೆ. ಯೇಸುವಿಗಿಂತ ಮೊದಲಾಗಿ ಸತ್ತಿದ್ದ ಕಾರಣ ಭೂನಿರೀಕ್ಷೆಯಿದ್ದ ಸ್ನಾನಿಕ ಯೋಹಾನನನ್ನು ಸ್ವರ್ಗೀಯ ಜೀವವನ್ನು ಪಡೆಯುವವರಿಗೆ ಹೋಲಿಸುವಾಗ ಯೇಸು ಹೇಳಿದ್ದು: “ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವನು ಎದ್ದಿಲ್ಲ. ಆದರೂ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” (ಮತ್ತಾಯ 11:11) ಸ್ವರ್ಗಕ್ಕೆ ಹೋಗಲಿದ್ದ ಕೆಲವರು ಅಪೊಸ್ತಲರಂತೆ ಪ್ರಮುಖರಾಗಿದ್ದಿರಬಹುದು, ಮತ್ತು ಇತರರು ಅಷ್ಟು ಪ್ರಮುಖರಾಗಿದ್ದಿರಲಿಕ್ಕಿಲವ್ಲಾದರೂ ಅವರೆಲ್ಲರೂ ಯೇಸುವಿನ ಆತ್ಮಿಕ ಸಹೋದರರಾಗಿದ್ದರು. (ಲೂಕ 16:10; 1 ಕೊರಿಂಥ 15:9; ಎಫೆಸ 3:8; ಇಬ್ರಿಯ 8:11) ಹೀಗೆ ಭೂಮಿಯಲ್ಲಿ ಕೆಲವರು ಅಲ್ಪರಾಗಿ ತೋರಿದ್ದರೂ, ಅವರು ಅವನ ಸಹೋದರರಾಗಿದ್ದರು ಮತ್ತು ಅವರನ್ನು ಅಂತೆಯೇ ಉಪಚರಿಸಬೇಕಾಗಿತ್ತು.
ಕುರಿಗಳು ಮತ್ತು ಆಡುಗಳು ಯಾರು?
7, 8. ಯೇಸುವು ಕುರಿಗಳ ಕುರಿತು ಏನು ಹೇಳಿದನು, ಈ ಕಾರಣದಿಂದ ನಾವು ಅವರ ಕುರಿತು ಏನು ತೀರ್ಮಾನಿಸಬಲ್ಲೆವು?
7 ಕುರಿಗಳ ನ್ಯಾಯವಿಚಾರಣೆಯ ಕುರಿತು ನಾವು ಓದುವುದು: “ಆಗ ಅರಸ [ಯೇಸು]ನು ತನ್ನ ಬಲಗಡೆಯಲ್ಲಿರುವವರಿಗೆ—ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ. ನಾನು ಹಸಿದಿದ್ದೆನು, ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ ಎಂದು ಹೇಳುವನು. ಅದಕ್ಕೆ ನೀತಿವಂತರು—ಸ್ವಾಮೀ, ಯಾವಾಗ ನೀನು ಹಸಿದದ್ದನ್ನು ಕಂಡು ನಿನಗೆ ಊಟಕ್ಕೆ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವದಕ್ಕೆ ಕೊಟ್ಟೆವು? ಯಾವಾಗ ನೀನು ಪರದೇಶಿಯಾಗಿರುವದನ್ನು ಕಂಡು ಸೇರಿಸಿಕೊಂಡೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವದಕ್ಕೆ ಕೊಟ್ಟೆವು? ಯಾವಾಗ ನೀನು ರೋಗದಲ್ಲಿ ಬಿದ್ದದ್ದನ್ನು ಅಥವಾ ಸೆರೆಮನೆಯಲ್ಲಿ ಇದ್ದದ್ದನ್ನು ಕಂಡು ನಿನ್ನನ್ನು ನೋಡುವದಕ್ಕೆ ಬಂದೆವು ಎಂದು ಉತ್ತರವಾಗಿ ಹೇಳುವರು. ಅದಕ್ಕೆ ಅರಸನು—ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು.” (ಓರೆಅಕ್ಷರಗಳು ನಮ್ಮವು.)—ಮತ್ತಾಯ 25:34-40.
8 ಯೇಸುವಿನ ಗೌರವದ ಮತ್ತು ಅನುಗ್ರಹದ ಬಲಪಕ್ಕದಲ್ಲಿರಲು ಅರ್ಹರೆಂದು ನ್ಯಾಯವಿಧಿಸಲ್ಪಡುವ ಕುರಿಗಳು ಮಾನವರ ಒಂದು ವರ್ಗವನ್ನು ಪ್ರತಿನಿಧಿಸುತ್ತಾರೆಂಬುದು ವ್ಯಕ್ತ. (ಎಫೆಸ 1:20; ಇಬ್ರಿಯ 1:3) ಅವರು ಏನು ಮಾಡಿದರು ಮತ್ತು ಯಾವಾಗ? ಅವರು ತನಗೆ ದಯೆಯಿಂದ, ಗೌರವದಿಂದ ಮತ್ತು ಉದಾರಭಾವದಿಂದ ಆಹಾರ, ಪಾನ ಮತ್ತು ಬಟ್ಟೆಯನ್ನು ಕೊಟ್ಟರೆಂದೂ, ತಾನು ಅಸ್ವಸ್ಥನಾಗಿದ್ದಾಗ ಅಥವಾ ಸೆರೆಮನೆಯಲ್ಲಿದ್ದಾಗ ಸಹಾಯಮಾಡಿದರೆಂದೂ ಯೇಸು ಹೇಳುತ್ತಾನೆ. ತಾವು ಯೇಸುವಿಗೆ ಹಾಗೆ ವ್ಯಕ್ತಿಪರವಾಗಿ ಮಾಡಿಲ್ಲವೆಂದು ಕುರಿಗಳು ಹೇಳುವಾಗ, ಅವರು ತನ್ನ ಆತ್ಮಿಕ ಸಹೋದರರನ್ನು, ಅಭಿಷಿಕ್ತ ಕ್ರೈಸ್ತರಲ್ಲಿ ಉಳಿದವರನ್ನು ಬೆಂಬಲಿಸಿದರೆಂದೂ, ಆ ಅರ್ಥದಲ್ಲಿ ಅದನ್ನು ತನಗೂ ಮಾಡಿದರೆಂದೂ ಅವನು ತೋರಿಸಿಕೊಟ್ಟನು.
9. ಆ ದೃಷ್ಟಾಂತವು ಸಾವಿರ ವರ್ಷದಾಳಿಕೆಯಲ್ಲಿ ಏಕೆ ಅನ್ವಯಿಸುವುದಿಲ್ಲ?
9 ಆ ದೃಷ್ಟಾಂತವು ಸಾವಿರ ವರ್ಷದಾಳಿಕೆಯ ಸಮಯಕ್ಕೆ ಅನ್ವಯಿಸುವುದಿಲ್ಲ, ಏಕೆಂದರೆ ಆಗ ಅಭಿಷಿಕ್ತರು ಹಸಿವೆ, ಬಾಯಾರಿಕೆ, ರೋಗ ಅಥವಾ ಸೆರೆಮನೆಯಲ್ಲಿ ಕಷ್ಟಪಡುವ ಮಾನವರಾಗಿರುವುದಿಲ್ಲ. ಆದರೂ, ಅವರಲ್ಲಿ ಅನೇಕರು ಈ ವಿಷಯಗಳ ವ್ಯವಸ್ಥೆಯ ಅಂತ್ಯದಲ್ಲಿ ಇಂತಹವುಗಳನ್ನು ಅನುಭವಿಸಿರುತ್ತಾರೆಂಬುದು ನಿಜ. ಸೈತಾನನು ಭೂಮಿಗೆ ದೊಬ್ಬಲ್ಪಟ್ಟಂದಿನಿಂದ, ಅವನು ಈ ಉಳಿಕೆಯವರನ್ನು ತನ್ನ ಕೋಪದ ವಿಶೇಷ ಗುರಿಯನ್ನಾಗಿ ಮಾಡಿ, ಅವರ ಮೇಲೆ ಅಪಹಾಸ್ಯ, ಯಾತನೆ ಮತ್ತು ಮರಣವನ್ನು ತಂದಿದ್ದಾನೆ.—ಪ್ರಕಟನೆ 12:17.
10, 11. (ಎ) ಕುರಿಗಳಲ್ಲಿ, ಯೇಸುವಿನ ಸಹೋದರರಿಗೆ ಒಂದು ದಯಾವರ್ತನೆಯನ್ನು ಮಾಡುತ್ತಿರುವ ಪ್ರತಿಯೊಬ್ಬರು ಸೇರಿರುತ್ತಾರೆ ಎಂದು ಯೋಚಿಸುವುದು ಏಕೆ ನ್ಯಾಯಸಮ್ಮತವಲ್ಲ? (ಬಿ) ಕುರಿಗಳು ತಕ್ಕದಾಗಿ ಯಾರನ್ನು ಪ್ರತಿನಿಧಿಸುತ್ತಾರೆ?
10 ತನ್ನ ಸಹೋದರರಲ್ಲಿ ಒಬ್ಬನಿಗೆ ಒಂದು ತುಂಡು ರೊಟ್ಟಿಯನ್ನೋ ಒಂದು ಲೋಟ ನೀರನ್ನೋ ಕೊಡುವಂತಹ ಒಂದು ಅಲ್ಪ ಉಪಕಾರವನ್ನು ಮಾಡುವ ಪ್ರತಿಯೊಬ್ಬನು, ಈ ಕುರಿಗಳಲ್ಲಿ ಒಬ್ಬನಾಗುವ ಅರ್ಹತೆಯನ್ನು ಪಡೆಯುತ್ತಾನೆಂದು ಯೇಸು ಹೇಳುತ್ತಿದ್ದಾನೊ? ಇಂತಹ ದಯೆಗಳನ್ನು ತೋರಿಸುವುದು ಮಾನವ ದಯೆಯನ್ನು ಪ್ರತಿಬಿಂಬಿಸಬಹುದೆಂದು ಒಪ್ಪಿಕೊಂಡರೂ, ನಿಜವಾಗಿ, ಈ ದೃಷ್ಟಾಂತದ ಕುರಿಗಳ ಸಂಬಂಧದಲ್ಲಿ ಇನ್ನೂ ಹೆಚ್ಚು ವಿಷಯಗಳು ಒಳಗೊಂಡಿವೆಯೆಂದು ಕಂಡುಬರುತ್ತದೆ. ಉದಾಹರಣೆಗೆ, ತನ್ನ ಸಹೋದರರಲ್ಲಿ ಒಬ್ಬನಿಗೆ ದಯೆಯಿಂದ ವರ್ತಿಸಿದ ನಾಸ್ತಿಕರನ್ನೋ ವೈದಿಕರನ್ನೋ ಸೂಚಿಸಿ ಯೇಸು ಖಂಡಿತವಾಗಿಯೂ ಮಾತಾಡಲಿಲ್ಲ. ವೈದೃಶ್ಯವಾಗಿ, ಯೇಸುವು ಕುರಿಗಳನ್ನು ಎರಡು ಬಾರಿ, “ನೀತಿವಂತರು” ಎಂದು ಕರೆದನು. (ಮತ್ತಾಯ 25:37, 46) ಆದುದರಿಂದ, ಕುರಿಗಳು ಒಂದು ಸಮಯಾವಧಿಯಲ್ಲಿ ಕ್ರಿಸ್ತನ ಸಹೋದರರ ಸಹಾಯಕ್ಕೆ ಬಂದವರು—ಕ್ರಿಯಾಶೀಲರಾಗಿ ಬೆಂಬಲಿಸಿದವರು—ಮತ್ತು ದೇವರ ಮುಂದೆ ನೀತಿಯ ನೆಲೆಯನ್ನು ಪಡೆಯುವಷ್ಟರ ಮಟ್ಟಿಗೆ ನಂಬಿಕೆಯನ್ನು ಬಳಸಿದವರಾಗಿರಲೇಬೇಕು.
11 ಗತಶತಮಾನಗಳಲ್ಲಿ, ಅಬ್ರಹಾಮನಂತಹ ಅನೇಕರು ಒಂದು ನೀತಿಯ ನೆಲೆಯನ್ನು ಅನುಭವಿಸಿದ್ದಾರೆ. (ಯಾಕೋಬ 2:21-23) ದೇವರ ರಾಜ್ಯದಡಿಯ ಪ್ರಮೋದವನದಲ್ಲಿ ಜೀವವನ್ನು ಬಾಧ್ಯವಾಗಿ ಪಡೆಯುವ “ಬೇರೆ ಕುರಿಗಳ” ಮಧ್ಯೆ ನೋಹ, ಅಬ್ರಹಾಮ ಮತ್ತು ಇತರ ನಂಬಿಗಸ್ತರು ಒಳಗೂಡಿದ್ದಾರೆ. ಇತ್ತೀಚಿನ ಸಮಯಗಳಲ್ಲಿ ಹೆಚ್ಚು ಲಕ್ಷಾಂತರ ಜನರು ಬೇರೆ ಕುರಿಗಳಾಗಿ ಸತ್ಯಾರಾಧನೆಯನ್ನು ಸಮರ್ಥಿಸಿ ಅಭಿಷಿಕ್ತರೊಂದಿಗೆ “ಒಂದೇ ಹಿಂಡು” ಆಗಿದ್ದಾರೆ. (ಯೋಹಾನ 10:16; ಪ್ರಕಟನೆ 7:9) ಭೌಮಿಕ ನಿರೀಕ್ಷೆಗಳಿರುವ ಇವರು ಯೇಸುವಿನ ಸಹೋದರರನ್ನು ರಾಜ್ಯದ ರಾಯಭಾರಿಗಳಾಗಿ ಗುರುತಿಸುತ್ತಾರೆ ಮತ್ತು ಈ ಕಾರಣ ಅವರಿಗೆ ಅಕ್ಷರಾರ್ಥವಾಗಿಯೂ ಆತ್ಮಿಕವಾಗಿಯೂ ಸಹಾಯ ನೀಡಿದ್ದಾರೆ. ಬೇರೆ ಕುರಿಗಳು ಭೂಮಿಯ ಮೇಲಿರುವ ತನ್ನ ಸಹೋದರರಿಗೆ ಮಾಡಿದ್ದನ್ನು ಯೇಸು ತನಗೆ ಮಾಡಿದ್ದಾಗಿ ಎಣಿಸುತ್ತಾನೆ. ಅವನು ಜನಾಂಗಗಳಿಗೆ ನ್ಯಾಯತೀರಿಸಲು ಬರುವಾಗ ಜೀವದಿಂದಿರುವ ಇಂಥವರು ಕುರಿಗಳಾಗಿ ನ್ಯಾಯವಿಧಿಸಲ್ಪಡುವರು.
12. ತಾವು ಯೇಸುವಿಗೆ ದಯೆಗಳನ್ನು ಹೇಗೆ ಮಾಡಿದ್ದೇವೆಂದು ಕುರಿಗಳು ಏಕೆ ಕೇಳಬಹುದು?
12 ಬೇರೆ ಕುರಿಗಳು ಈಗ ಅಭಿಷಿಕ್ತರೊಂದಿಗೆ ಸುವಾರ್ತೆಯನ್ನು ಸಾರುತ್ತ ಅವರಿಗೆ ಸಹಾಯ ಮಾಡುತ್ತಿರುವುದಾದರೆ, ಅವರು, “ಸ್ವಾಮೀ, ಯಾವಾಗ ನೀನು ಹಸಿದದ್ದನ್ನು ಕಂಡು ನಿನಗೆ ಊಟಕ್ಕೆ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವದಕ್ಕೆ ಕೊಟ್ಟೆವು?” ಎಂದು ಕೇಳುವುದೇಕೆ? (ಮತ್ತಾಯ 25:37) ಇದಕ್ಕೆ ವಿವಿಧ ಕಾರಣಗಳಿರಸಾಧ್ಯವಿದೆ. ಇದೊಂದು ದೃಷ್ಟಾಂತ. ಇದರ ಮೂಲಕ ಯೇಸು ತನ್ನ ಆತ್ಮಿಕ ಸಹೋದರರಿಗೆ ಆಳವಾದ ಚಿಂತೆಯನ್ನು ತೋರಿಸುತ್ತಾನೆ; ಅವನು ಅವರೊಂದಿಗೆ ಕನಿಕರಪಡುತ್ತಾನೆ; ಅವರೊಂದಿಗೆ ಕಷ್ಟಾನುಭವಿಸುತ್ತಾನೆ. ಯೇಸು ಈ ಮೊದಲು, “ನಿಮ್ಮನ್ನು ಸೇರಿಸಿಕೊಳ್ಳುವವನು ನನ್ನನ್ನು ಸೇರಿಸಿಕೊಳ್ಳುವವನಾಗಿದ್ದಾನೆ; ನನ್ನನ್ನು ಸೇರಿಸಿಕೊಳ್ಳುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಳ್ಳುವವನಾಗಿದ್ದಾನೆ” ಎಂದು ಹೇಳಿದ್ದನು. (ಮತ್ತಾಯ 10:40) ಈ ದೃಷ್ಟಾಂತದಲ್ಲಿ, ಯೇಸು ಆ ಮೂಲಸೂತ್ರವನ್ನು ವಿಸ್ತರಿಸಿ, ತನ್ನ ಸಹೋದರರಿಗೆ ಏನು ಮಾಡಲಾಗುತ್ತದೊ ಅದು (ಒಳ್ಳೆಯದಾಗಲಿ ಕೆಟ್ಟದ್ದಾಗಲಿ) ಸ್ವರ್ಗಕ್ಕೂ ಮುಟ್ಟುತ್ತದೆಂದು ತೋರಿಸುತ್ತಾನೆ; ಅದು ಸ್ವರ್ಗದಲ್ಲಿ ಅವನಿಗೇ ಮಾಡಲ್ಪಟ್ಟಿದೆಯೋ ಎಂಬಂತಿದೆ. ಅಲ್ಲದೆ, ಯೇಸುವು ಇಲ್ಲಿ ನ್ಯಾಯವಿಧಿಸುವುದರಲ್ಲಿ ಯೆಹೋವನ ಮಟ್ಟವನ್ನು ಒತ್ತಿಹೇಳಿ, ದೇವರ ತೀರ್ಪು ಅನುಕೂಲಕರವಾಗಿರಲಿ, ಖಂಡನಾತ್ಮಕವಾಗಿರಲಿ, ಅದು ಕ್ರಮಬದ್ಧವೆಂದೂ ನ್ಯಾಯಸಮ್ಮತವೆಂದೂ ಸ್ಪಷ್ಟಪಡಿಸಿದನು. ಆಡುಗಳು, ‘ನಾವು ನಿನ್ನನ್ನು ಪ್ರತ್ಯಕ್ಷವಾಗಿ ನೋಡಿರುತ್ತಿದ್ದರೆ,’ ಎಂಬ ನೆವವನ್ನು ನೀಡಸಾಧ್ಯವಿಲ್ಲ.
13. ಆಡುಸದೃಶರು ಯೇಸುವನ್ನು “ಸ್ವಾಮೀ” ಎಂದು ಏಕೆ ಸಂಬೋಧಿಸಬಹುದು?
13 ಈ ದೃಷ್ಟಾಂತದಲ್ಲಿ ತೋರಿಸಲ್ಪಟ್ಟಿರುವ ತೀರ್ಪು ಯಾವಾಗ ವಿಧಿಸಲ್ಪಡುತ್ತದೆಂಬುದನ್ನು ನಾವು ಒಮ್ಮೆ ಮಾನ್ಯಮಾಡುವುದಾದರೆ, ಆಡುಗಳು ಯಾರೆಂಬುದರ ಹೆಚ್ಚು ಸ್ಪಷ್ಟವಾಗಿದ ನೋಟವನ್ನು ನಾವು ಪಡೆಯುತ್ತೇವೆ. ಇದರ ನೆರವೇರಿಕೆಯು, “ಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ . . . ಬರುವದನ್ನು ಕಾಣುವ” ಆ ಸಮಯದಲ್ಲಾಗುವುದು. (ಓರೆಅಕ್ಷರಗಳು ನಮ್ಮವು.) (ಮತ್ತಾಯ 24:29, 30) ಅರಸನ ಸಹೋದರರನ್ನು ಅವಮಾನದಿಂದ ಉಪಚರಿಸಿರುವ, ಮಹಾ ಬಾಬೆಲಿನ ಮೇಲೆ ಬಂದ ಸಂಕಟವನ್ನು ಪಾರಾದವರು ಈಗ ನ್ಯಾಯಾಧೀಶನನ್ನು, ತಮ್ಮ ಜೀವವನ್ನು ಉಳಿಸಿಕೊಳ್ಳುವ ನಿರೀಕ್ಷಣೆಯಿಂದ “ಸ್ವಾಮೀ” ಎಂದು ಹತಾಶೆಯಿಂದ ಸಂಬೋಧಿಸಬಹುದು.—ಮತ್ತಾಯ 7:22, 23; ಹೋಲಿಸಿ ಪ್ರಕಟನೆ 6:15-17.
14. ಯೇಸುವು ಕುರಿಗಳಿಗೂ ಆಡುಗಳಿಗೂ ಯಾವ ಆಧಾರದ ಮೇರೆಗೆ ತೀರ್ಪುಕೊಡುವನು?
14 ಹಾಗಿದ್ದರೂ, ಯೇಸುವಿನ ತೀರ್ಪು, ಹಿಂದಿನ ಚರ್ಚ್ಹೋಕರ, ನಾಸ್ತಿಕರ ಅಥವಾ ಇತರರ ಈ ದುರ್ಘಟ ವಾದದ ಮೇಲೆ ಹೊಂದಿಕೊಂಡಿರದು. (2 ಥೆಸಲೊನೀಕ 1:8) ಬದಲಿಗೆ, ನ್ಯಾಯಾಧೀಶನು ಜನರ ಹೃದಯ ಪರಿಸ್ಥಿತಿ ಮತ್ತು ಗತವರ್ತನೆಗಳು “[ತನ್ನ ಸಹೋದರರಲ್ಲಿ] ಕೇವಲ ಅಲ್ಪನಾದವನೊಬ್ಬನಿಗೆ” ಹೇಗೆ ತೋರಿಸಲ್ಪಟ್ಟವೆಂದು ಪುನರ್ವಿಮರ್ಶಿಸುವನು. ಭೂಮಿಯ ಮೇಲಿರುವ ಅಭಿಷಿಕ್ತರ ಸಂಖ್ಯೆಯು ಕಡಮೆಯಾಗುತ್ತಿದೆ ಎಂಬುದು ಗ್ರಾಹ್ಯ. ಆದರೂ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳ”ನ್ನು ರಚಿಸುವ ಅಭಿಷಿಕ್ತರು ಆತ್ಮಿಕಾಹಾರ ಮತ್ತು ಮಾರ್ಗದರ್ಶನೆಯನ್ನು ಒದಗಿಸುವುದನ್ನು ಮುಂದುವರಿಸುತ್ತಿರುವಷ್ಟರ ವರೆಗೆ, ಭಾವೀ ಕುರಿಗಳಿಗೆ, ‘ಸಕಲ ಜನಾಂಗ ಕುಲ ಪ್ರಜೆಗಳಿಂದ ಬಂದಿರುವ ಮಹಾ ಸಮೂಹ’ವು ಮಾಡಿರುವಂತೆ, ಆಳು ವರ್ಗಕ್ಕೆ ಒಳ್ಳೆಯದನ್ನು ಮಾಡುವ ಒಂದು ಸಂದರ್ಭವಿದೆ.—ಪ್ರಕಟನೆ 7:9, 14.
15. (ಎ) ಅನೇಕರು ತಾವು ಆಡುಗಳಂತೆ ಇದ್ದೇವೆಂದು ಹೇಗೆ ತೋರಿಸಿದ್ದಾರೆ? (ಬಿ) ಒಬ್ಬನು ಕುರಿಯೋ ಆಡೋ ಆಗಿದ್ದಾನೆಂದು ಹೇಳುವುದರಿಂದ ನಾವು ದೂರವಿರಬೇಕೇಕೆ?
15 ಕ್ರಿಸ್ತನ ಸಹೋದರರು ಮತ್ತು ಅವರೊಂದಿಗೆ ಒಂದೇ ಹಿಂಡಾಗಿ ಐಕ್ಯರಾಗಿರುವ ಲಕ್ಷಾಂತರ ಬೇರೆ ಕುರಿಗಳನ್ನು ಹೇಗೆ ಉಪಚರಿಸಲಾಗಿದೆ? ಅನೇಕರು ಕ್ರಿಸ್ತನ ಪ್ರತಿನಿಧಿಗಳ ಮೇಲೆ ವ್ಯಕ್ತಿಪರವಾಗಿ ದುರಾಕ್ರಮಣ ಮಾಡಿಲ್ಲದಿರಬಹುದಾದರೂ ಅವರು ಅವನ ಜನರನ್ನು ಪ್ರೀತಿಯಿಂದ ಉಪಚರಿಸಿರುವುದೂ ಇಲ್ಲ. ದುಷ್ಟ ಲೋಕವನ್ನು ಇಷ್ಟಪಡುತ್ತ ಆಡು ಸದೃಶರು ರಾಜ್ಯ ಸಂದೇಶವನ್ನು, ಪ್ರತ್ಯಕ್ಷವಾಗಿ ಕೇಳಲಿ, ಪರೋಕ್ಷವಾಗಿ ಕೇಳಲಿ, ತಳ್ಳಿಬಿಡುತ್ತಾರೆ. (1 ಯೋಹಾನ 2:15-17) ಅಂತಿಮ ವಿಶ್ಲೇಷಣೆಯಲ್ಲಿ, ತೀರ್ಪನ್ನು ವಿಧಿಸಲಿಕ್ಕಾಗಿ ನೇಮಿಸಲ್ಪಟ್ಟಿರುವವನು ಯೇಸುವೆಂಬುದು ನಿಶ್ಚಯ. ಕುರಿಗಳು ಯಾರು, ಆಡುಗಳು ಯಾರು ಎಂಬುದನ್ನು ನಿರ್ಣಯಿಸುವುದು ನಮಗೆ ಬಿಡಲ್ಪಟ್ಟಿರುವುದಿಲ್ಲ.—ಮಾರ್ಕ 2:8; ಲೂಕ 5:22; ಯೋಹಾನ 2:24, 25; ರೋಮಾಪುರ 14:10-12; 1 ಕೊರಿಂಥ 4:5.
ಪ್ರತಿಯೊಂದು ಗುಂಪಿಗೆ ಭವಿಷ್ಯವೇನು?
16, 17. ಕುರಿಗಳಿಗೆ ಯಾವ ಭವಿಷ್ಯತ್ತಿರುವುದು?
16 ಕುರಿಗಳಿಗೆ ಯೇಸು ತನ್ನ ನ್ಯಾಯತೀರ್ಪನ್ನು ಕೊಟ್ಟನು: “ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ.” ಎಂತಹ ಹೃದಯೋಲ್ಲಾಸದ ಆಮಂತ್ರಣ—“ಬನ್ನಿರಿ”! ಯಾವುದಕ್ಕೆ? ಸಾರಾಂಶವಾಗಿ ವ್ಯಕ್ತಪಡಿಸಿದಂತೆ, ನಿತ್ಯಜೀವಕ್ಕೆ: “ನೀತಿವಂತರು ನಿತ್ಯಜೀವಕ್ಕೆ ಹೋಗುವರು.”—ಮತ್ತಾಯ 25:34, 46, NW.
17 ತಲಾಂತುಗಳ ದೃಷ್ಟಾಂತದಲ್ಲಿ, ತನ್ನೊಂದಿಗೆ ಸ್ವರ್ಗದಲ್ಲಿ ಆಳಲಿರುವವರಿಂದ ಏನು ಕೇಳಿಕೊಳ್ಳಲ್ಪಡುತ್ತದೆಂದು ಯೇಸು ತೋರಿಸಿದನು. ಆದರೆ ಈ ದೃಷ್ಟಾಂತದಲ್ಲಿ ರಾಜ್ಯದ ಪ್ರಜೆಗಳಿಂದ ಏನು ನಿರೀಕ್ಷಿಸಲ್ಪಡುತ್ತದೆಂದು ಅವನು ತೋರಿಸುತ್ತಾನೆ. (ಮತ್ತಾಯ 25:14-23) ಸಂಗತವಾಗಿ, ಯೇಸುವಿನ ಸಹೋದರರಿಗಾಗಿರುವ ಅವರ ಪೂರ್ಣಹೃದಯದ ಬೆಂಬಲದ ಕಾರಣ, ಕುರಿಗಳು ಅವನ ರಾಜ್ಯದ ಭೂಕ್ಷೇತ್ರದಲ್ಲಿ ಒಂದು ಸ್ಥಳವನ್ನು ಬಾಧ್ಯತೆಯಾಗಿ ಹೊಂದುವರು. ಅವರು ಭೂಪ್ರಮೋದವನದ ಮೇಲೆ ಜೀವವನ್ನು ಅನುಭವಿಸುವರು. ಇದು ವಿಮೋಚನಾಯೋಗ್ಯ ಮಾನವರಿಗೆ ದೇವರು “ಲೋಕಾದಿಯಿಂದ” ತಯಾರಿಸಲ್ಪಟ್ಟ ಪ್ರತೀಕ್ಷೆಯಾಗಿರುವುದು.—ಲೂಕ 11:50, 51.
18, 19. (ಎ) ಯೇಸುವು ಆಡುಗಳಿಗೆ ಯಾವ ತೀರ್ಪನ್ನು ವಿಧಿಸುವನು? (ಬಿ) ಆಡುಗಳು ನಿತ್ಯಬಾಧೆಯನ್ನು ಎದುರಿಸುವುದಿಲ್ಲವೆಂದು ನಮಗೆ ಹೇಗೆ ಖಾತರಿಯಿರಬಲ್ಲದು?
18 ಆಡುಗಳಿಗೆ ವಿಧಿಸಿದ ತೀರ್ಪು ಎಷ್ಟು ವೈದೃಶ್ಯ! “ಆ ಮೇಲೆ ಆತನು ಎಡಗಡೆಯಲ್ಲಿರುವವರಿಗೆ—ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. ನಾನು ಹಸಿದಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಡಲಿಲ್ಲ; ಪರದೇಶಿಯಾಗಿದ್ದೆನು, ನೀವು ನನ್ನನ್ನು ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗದ್ದೆನು, ನೀವು ನನಗೆ ಉಡುವದಕ್ಕೆ ಕೊಡಲಿಲ್ಲ; ರೋಗದಲ್ಲಿ ಬಿದ್ದಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವದಕ್ಕೆ ಬರಲಿಲ್ಲವೆಂದು ಹೇಳುವನು. ಅದಕ್ಕೆ ಅವರು ಸಹ—ಸ್ವಾಮೀ, ಯಾವಾಗ ನೀನು ಹಸಿದದ್ದನ್ನೂ ನೀನು ಬಾಯಾರಿದ್ದನ್ನೂ ನೀನು ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ರೋಗದಲ್ಲಿ ಬಿದ್ದದ್ದನ್ನೂ ಸೆರೆಮನೆಯಲ್ಲಿದ್ದದ್ದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು? ಅನ್ನುವರು. ಆಗ ಆತನು—ನೀವು ಈ ಕೇವಲ ಅಲ್ಪವಾದವರಲ್ಲಿ ಒಬ್ಬನಿಗೆ ಏನೇನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು.”—ಮತ್ತಾಯ 25:41-45.
19 ಇದರ ಅರ್ಥವು ಆಡು ಸದೃಶರ ಅಮರವಾದ ಪ್ರಾಣಗಳು ನಿತ್ಯಅಗ್ನಿಯಲ್ಲಿ ಬಾಧೆಪಡುವುವೆಂದಲ್ಲವೆಂದು ಬೈಬಲ್ ವಿದ್ಯಾರ್ಥಿಗಳಿಗೆ ತಿಳಿದಿದೆ. ಇಲ್ಲ, ಏಕೆಂದರೆ ಮಾನವರೇ ಪ್ರಾಣಗಳು ಆಗಿದ್ದಾರೆ; ಅವರಲ್ಲಿ ಅಮರವಾದ ಪ್ರಾಣಗಳು ಇರುವುದಿಲ್ಲ. (ಆದಿಕಾಂಡ 2:7; ಪ್ರಸಂಗಿ 9:5, 10; ಯೆಹೆಜ್ಕೇಲ 18:4) ಆಡುಗಳನ್ನು “ನಿತ್ಯ ಬೆಂಕಿ”ಗೆ ದಂಡಿಸುವಾಗ, ನ್ಯಾಯಾಧೀಶನು ಯಾವುದು ಪಿಶಾಚನ ಮತ್ತು ಅವನ ದೆವ್ವಗಳ ಶಾಶ್ವತ ಅಂತ್ಯವಾಗಿ ಸಹ ಇದೆಯೊ, ಅಂತಹ ಭಾವೀ ನಿರೀಕ್ಷಾರಹಿತ ನಾಶವನ್ನು ಅರ್ಥೈಸುತ್ತಾನೆ. (ಪ್ರಕಟನೆ 20:10, 14) ಹೀಗೆ ಯೆಹೋವನ ನ್ಯಾಯಾಧೀಶನು ಪರಸ್ಪರ ವಿರುದ್ಧವಾದ ನ್ಯಾಯತೀರ್ಪನ್ನು ಕೊಡುತ್ತಾನೆ. ಕುರಿಗಳಿಗೆ, “ಬನ್ನಿರಿ” ಎಂದೂ, ಆಡುಗಳಿಗೆ, “ನನ್ನನ್ನು ಬಿಟ್ಟು . . . ಹೋಗಿರಿ” ಎಂದೂ ಅವನು ಹೇಳುತ್ತಾನೆ. ಕುರಿಗಳು “ನಿತ್ಯಜೀವವನ್ನು” ಬಾಧ್ಯತೆಯಾಗಿ ಪಡೆಯುವರು. ಆಡುಗಳು, “ನಿತ್ಯ ಛೇದನ” ವನ್ನು ಪಡೆಯುವರು.—ಮತ್ತಾಯ 25:46, NW.b
ಇದು ನಮಗೆ ಏನನ್ನು ಅರ್ಥೈಸುತ್ತದೆ?
20, 21. (ಎ) ಕ್ರೈಸ್ತರಿಗೆ ಯಾವ ಪ್ರಮುಖ ಕೆಲಸವನ್ನು ಮಾಡಲಿಕ್ಕಿದೆ? (ಬಿ) ಈಗ ಯಾವ ವಿಭಾಗಿಸುವಿಕೆಯು ನಡೆಯುತ್ತಾ ಇದೆ? (ಸಿ) ಕುರಿಗಳ ಮತ್ತು ಆಡುಗಳ ದೃಷ್ಟಾಂತವು ನೆರವೇರತೊಡಗುವಾಗ ಪರಿಸ್ಥಿತಿಯು ಹೇಗಿರುವುದು?
20 ತನ್ನ ಸಾನ್ನಿಧ್ಯ ಮತ್ತು ವ್ಯವಸ್ಥೆಯ ಅಂತ್ಯದ ಸೂಚನೆಯ ಕುರಿತ ಯೇಸುವಿನ ಉತ್ತರವನ್ನು ಕೇಳಿದ ನಾಲ್ವರು ಅಪೊಸ್ತಲರಿಗೆ ಪರಿಗಣಿಸಲು ಅನೇಕ ವಿಷಯಗಳಿದ್ದವು. ಅವರು ಎಚ್ಚರವಾಗಿದ್ದು ಕಾಯುತ್ತಿರುವ ಅವಶ್ಯವಿತ್ತು. (ಮತ್ತಾಯ 24:42) ಮಾರ್ಕ 13:10ರಲ್ಲಿ ಹೇಳಲಾಗಿರುವ ಸಾಕ್ಷಿನೀಡುವ ಕಾರ್ಯವನ್ನೂ ಅವರು ಮಾಡಬೇಕಾಗಿತ್ತು. ಇಂದು ಯೆಹೋವನ ಸಾಕ್ಷಿಗಳು ಆ ಕೆಲಸದಲ್ಲಿ ಚಟುವಟಿಕೆಯಿಂದ ಭಾಗವಹಿಸುತ್ತಿದ್ದಾರೆ.
21 ಆದರೆ ಕುರಿಗಳ ಮತ್ತು ಆಡುಗಳ ದೃಷ್ಟಾಂತದ ಈ ಹೊಸ ತಿಳಿವಳಿಕೆಯು ನಮಗೆ ಏನನ್ನು ಅರ್ಥೈಸುತ್ತದೆ? ಒಳ್ಳೆಯದು, ಜನರು ಆಗಲೇ ಪಕ್ಷವಹಿಸುತ್ತಿದ್ದಾರೆ. ಕೆಲವರು ‘ನಾಶಕ್ಕೆ ನಡಿಸುವ ವಿಶಾಲ ದಾರಿ’ಯಲ್ಲಿರುವಾಗ, ಇತರರು ‘ಜೀವಕ್ಕೆ ನಡಿಸುವ ಇಕ್ಕಟ್ಟಾದ ದಾರಿ’ಯಲ್ಲಿ ಉಳಿಯಲು ಪ್ರಯತ್ನಿಸುತ್ತಾರೆ. (ಮತ್ತಾಯ 7:13, 14) ಆದರೆ ಆ ದೃಷ್ಟಾಂತದಲ್ಲಿ ಚಿತ್ರಿಸಿರುವ ಕುರಿಗಳ ಮತ್ತು ಆಡುಗಳ ಮೇಲೆ ಯೇಸುವು ದಂಡನೆಯನ್ನು ವಿಧಿಸುವ ಸಮಯವು ಇನ್ನೂ ಮುಂದೆ ಇದೆ. ಮನುಷ್ಯಕುಮಾರನು ನ್ಯಾಯಾಧೀಶನ ಪಾತ್ರದಲ್ಲಿ ಬರುವಾಗ, ಅನೇಕ ಸತ್ಯ ಕ್ರೈಸ್ತರು—ವಾಸ್ತವವಾಗಿ, ಸಮರ್ಪಿತ ಕುರಿಗಳ “ಒಂದು ಮಹಾ ಸಮೂಹ”—“ಮಹಾ ಸಂಕಟ”ದ ಅಂತಿಮ ಭಾಗವನ್ನು ಪಾರಾಗಿ ಹೊಸ ಲೋಕಕ್ಕೆ ಹೋಗಲು ಅರ್ಹರಾಗಿರುವರೆಂದು ಅವನು ನಿರ್ಧರಿಸುವನು. ಆ ಪ್ರತೀಕ್ಷೆಯು ಈಗ ಒಂದು ಹರ್ಷದ ಉಗಮವಾಗಿರಬೇಕು. (ಪ್ರಕಟನೆ 7:9, 14) ಇನ್ನೊಂದು ಕಡೆಯಲ್ಲಿ, “ಎಲ್ಲಾ ದೇಶಗಳ” ಜನರಲ್ಲಿ ದೊಡ್ಡ ಸಂಖ್ಯೆಗಳು, ತಾವು ಜಗ್ಗದ ಆಡುಗಳಂತೆ ಇದ್ದೇವೆಂಬುದನ್ನು ತೋರಿಸಿಕೊಟ್ಟಿರುವರು. ಅವರು “ನಿತ್ಯ ಛೇದನಕ್ಕೆ ಅಗಲಿಹೋಗುವರು.” ಭೂಮಿಗೆ ಎಂತಹ ಒಂದು ಉಪಶಮನ!
22, 23. ಆ ದೃಷ್ಟಾಂತದ ನೆರವೇರಿಕೆಯು ಇನ್ನೂ ಭವಿಷ್ಯತ್ತಿನಲ್ಲಿರುವಾಗ, ಇಂದಿನ ನಮ್ಮ ಸಾರುವ ಕೆಲಸವು ಮಹತ್ವದ್ದೇಕೆ?
22 ಆ ದೃಷ್ಟಾಂತದಲ್ಲಿ ವರ್ಣಿಸಿರುವ ನ್ಯಾಯತೀರಿಸುವಿಕೆಯು ಸಮೀಪ ಭವಿಷ್ಯತ್ತಿನಲ್ಲಿರುವುದಾದರೂ, ಮಹತ್ವದ ಯಾವುದೋ ವಿಷಯವು ಈಗ ಸಹ ಸಂಭವಿಸುತ್ತಿದೆ. ಕ್ರೈಸ್ತರಾದ ನಾವು ಜನರ ಮಧ್ಯೆ ವಿಭಾಗವನ್ನುಂಟುಮಾಡುವ ಸುವಾರ್ತಾ ಘೋಷಣೆಯ ಜೀವರಕ್ಷಕ ಕೆಲಸದಲ್ಲಿ ತೊಡಗಿದ್ದೇವೆ. (ಮತ್ತಾಯ 10:32-39) ಪೌಲನು ಬರೆದುದು: “ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದೆಂದು ಬರೆದದೆ. ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?” (ರೋಮಾಪುರ 10:13, 14) ನಮ್ಮ ಸಾರ್ವಜನಿಕ ಶುಶ್ರೂಷೆಯು ದೇವರ ಹೆಸರು ಮತ್ತು ಆತನ ರಕ್ಷಣಾ ಸಂದೇಶದೊಂದಿಗೆ 230ಕ್ಕೂ ಹೆಚ್ಚಿನ ದೇಶಗಳ ಜನರನ್ನು ತಲಪುತ್ತಿದೆ. ಕ್ರಿಸ್ತನ ಅಭಿಷಿಕ್ತ ಸಹೋದರರು ಈ ಕೆಲಸದ ನುಗ್ಗುಮೊನೆಯಾಗಿ ಇನ್ನೂ ಇದ್ದಾರೆ. ಸುಮಾರು 50 ಲಕ್ಷ ಬೇರೆ ಕುರಿಗಳು ಈಗ ಅವರನ್ನು ಸೇರಿಕೊಂಡಿದ್ದಾರೆ. ಮತ್ತು ಯೇಸುವಿನ ಸಹೋದರರಿಂದ ಘೋಷಿಸಲ್ಪಡುವ ಸಂದೇಶಕ್ಕೆ ಜನರು ಭೂಗೋಳದಾದ್ಯಂತ ಪ್ರತಿವರ್ತಿಸುತ್ತಿದ್ದಾರೆ.
23 ನಾವು ಮನೆಯಿಂದ ಮನೆಗೆ ಅಥವಾ ಅನೌಪಚಾರಿಕವಾಗಿ ಸಾರುವಾಗ ಅನೇಕರು ನಮ್ಮ ಸಂದೇಶಕ್ಕೆ ಈಡಾಗುತ್ತಾರೆ. ಇತರರು ನಮಗೆ ಅಜ್ಞಾತವಾಗಿರುವ ವಿಧಗಳಲ್ಲಿ ಯೆಹೋವನ ಸಾಕ್ಷಿಗಳ ಮತ್ತು ಅವರು ಪ್ರತಿನಿಧಿಸುವ ವಿಷಯಗಳ ಕುರಿತು ಕಲಿಯಬಹುದು. ನ್ಯಾಯತೀರ್ಪಿನ ಸಮಯವು ಆಗಮಿಸುವಾಗ, ಯೇಸುವು ಸಮಾಜ ಜವಾಬ್ದಾರಿ ಮತ್ತು ಕುಟುಂಬ ಅರ್ಹತೆಯ ಕುರಿತು ಎಷ್ಟರ ಮಟ್ಟಿಗೆ ಪರಿಗಣಿಸುವನು? ನಮಗೆ ಹೇಳಸಾಧ್ಯವಿಲ್ಲ, ಮತ್ತು ಊಹಿಸುವುದು ವ್ಯರ್ಥ. (ಹೋಲಿಸಿ 1 ಕೊರಿಂಥ 7:14.) ಈಗ ಅನೇಕರು ದೇವಜನರಿಗೆ ಕಿವಿಗೊಡದೆ, ಅಪಹಾಸ್ಯ ಮಾಡುತ್ತಾರೆ ಅಥವಾ ಅವರನ್ನು ನೇರವಾಗಿ ಹಿಂಸಿಸುತ್ತಾರೆ. ಆದಕಾರಣ ಇದು ನಿರ್ಣಾಯಕ ಸಮಯ; ಇಂಥ ಜನರು, ಯೇಸುವು ಯಾರನ್ನು ಆಡುಗಳಾಗಿ ನ್ಯಾಯತೀರಿಸುವನೊ ಅಂಥವರಾಗಿ ಬೆಳೆಯುತ್ತರಬಹುದು.—ಮತ್ತಾಯ 10:22; ಯೋಹಾನ 15:20; 16:2, 3; ರೋಮಾಪುರ 2:5, 6.
24. (ಎ) ನಮ್ಮ ಸಾರುವಿಕೆಗೆ ವ್ಯಕ್ತಿಗಳು ಅನುಕೂಲಾತ್ಮಕವಾಗಿ ಪ್ರತಿವರ್ತಿಸುವುದು ಪ್ರಾಮುಖ್ಯವೇಕೆ? (ಬಿ) ಈ ಅಧ್ಯಯನವು ನಿಮ್ಮ ಶುಶ್ರೂಷೆಯ ಕಡೆಗೆ ಯಾವ ಮನೋಭಾವವಿರಬೇಕೆಂದು ನಿಮಗೆ ವ್ಯಕ್ತಿಪರವಾಗಿ ಸಹಾಯಮಾಡಿಯದೆ?
24 ಆದರೆ ಸಂತೋಷಕರವಾಗಿ, ಅನೇಕರು ಅನುಕೂಲಕರವಾಗಿ ಪ್ರತಿವರ್ತಿಸಿ, ದೇವರ ವಾಕ್ಯವನ್ನು ಅಭ್ಯಸಿಸಿ, ಯೆಹೋವನ ಸಾಕ್ಷಿಗಳಾಗುತ್ತಾರೆ. ಈಗ ಆಡು ಸದೃಶರಾಗಿ ತೋರುವ ಕೆಲವರು ಪರಿವರ್ತನೆ ಹೊಂದಿ ಕುರಿ ಸದೃಶರಾಗಬಹುದು. ಮುಖ್ಯವಿಷಯವೇನಂದರೆ, ಕ್ರಿಸ್ತನ ಸಹೋದರರಲ್ಲಿ ಉಳಿಕೆಯವರಿಗೆ ಪ್ರತಿವರ್ತನೆ ತೋರಿಸುತ್ತ ಅವರನ್ನು ಕ್ರಿಯಾಶೀಲರಾಗಿ ಬೆಂಬಲಿಸುವವರು, ಯೇಸು ತೀರ್ಪನ್ನು ವಿಧಿಸಲು, ಹತ್ತಿರದ ಭವಿಷ್ಯತ್ತಿನಲ್ಲಿ ತನ್ನ ಸಿಂಹಾಸನದಲ್ಲಿ ಕೂತುಕೊಳ್ಳುವಾಗ, ಅವನ ಬಲಗಡೆಯಲ್ಲಿ ಇಡಲ್ಪಡಲು ಅವರಿಗೆ ಆಧಾರವಿದೆಯೆಂಬುದಕ್ಕೆ ಈ ಮೂಲಕ ಈಗ ರುಜುವಾತನ್ನು ಕೊಡುತ್ತಿದ್ದಾರೆ. ಇವರು ಈಗಲೂ ಮುಂದಕ್ಕೂ ಆಶೀರ್ವದಿಸಲ್ಪಡುವರು. ಹೀಗೆ, ನಾವು ಕ್ರೈಸ್ತ ಶುಶ್ರೂಷೆಯಲ್ಲಿ ಹೆಚ್ಚು ಆಸಕ್ತಿಯ ಕ್ರಿಯೆಗೈಯಲು ಈ ದೃಷ್ಟಾಂತವು ನಮ್ಮನ್ನು ಹುರಿದುಂಬಿಸಬೇಕು. ಕಾಲವು ಮುಗಿಯುವ ಮೊದಲು, ರಾಜ್ಯದ ಸುವಾರ್ತೆಯನ್ನು ಘೋಷಿಸಲು ನಮಗೆ ಸಾಧ್ಯವಿರುವುದೆಲವ್ಲನ್ನು ಮಾಡಿ, ಆ ರೀತಿಯಲ್ಲಿ ಇತರರಿಗೆ ಪ್ರತಿವರ್ತನೆ ತೋರಿಸಲು ಸಂದರ್ಭವನ್ನು ಕೊಡಲು ನಾವು ಬಯಸಬೇಕು. ಆಗ ತೀರ್ಪನ್ನು—ಖಂಡನಾತ್ಮಕವಾಗಲಿ ಅನುಕೂಲಾತ್ಮಕವಾಗಲಿ—ವಿಧಿಸುವುದು ಯೇಸುವಿಗೆ ಬಿಡಲ್ಪಟ್ಟದ್ದಾಗಿದೆ.—ಮತ್ತಾಯ 25:46.
[ಅಧ್ಯಯನ ಪ್ರಶ್ನೆಗಳು]
b ಎಲ್ ಎವಾನ್ಹೆಲ್ಯೊ ಡಿ ಮಾಟಿಯೊ ಗಮನಿಸುವುದು: “ನಿತ್ಯಜೀವವು ನಿರ್ಣೀತ ಜೀವ; ಅದರ ವಿರುದ್ಧವು ನಿರ್ಣೀತ ಶಿಕ್ಷೆ. ಗ್ರೀಕ್ ನಾಮವಿಶೇಷಣವಾದ ಅಯೋನಿಯೋಸ್ ಮುಖ್ಯವಾಗಿ ಕಾಲಾವಧಿಯನ್ನಲ್ಲ, ಗುಣಮಟ್ಟವನ್ನು ಸೂಚಿಸುತ್ತದೆ. ನಿರ್ಣೀತ ಶಿಕ್ಷೆಯು ನಿತ್ಯ ಮರಣ.”—ನಿವೃತ್ತ ಪ್ರೊಫೆಸರ್ ಕಾನ್ವ್ ಮಾಟಿಯಾಸ್ (ಪಾಂಟಿಫಿಕಲ್ ಬಿಬ್ಲಿಕಲ್ ಇನ್ಸ್ಟಿಟ್ಯೂಟ್, ರೋಮ್) ಮತ್ತು ಪ್ರೊಫೆಸರ್ ಫರ್ನಾಂಡೊ ಕಾಮಾಚೊ (ತಿಯೊಲಾಜಿಕಲ್ ಸೆಂಟರ್, ಸೇವಿಲ್), ಮಡ್ರೀಡ್, ಸ್ಪೆಯ್ನ್, 1981.
ನಿಮಗೆ ಜ್ಞಾಪಕವಿದೆಯೇ?
◻ ಮತ್ತಾಯ 24:29-31 ಮತ್ತು ಮತ್ತಾಯ 25:31-33ರ ಯಾವ ಸಮಾಂತರಗಳು ಕುರಿಗಳ ಮತ್ತು ಆಡುಗಳ ದೃಷ್ಟಾಂತಕ್ಕೆ ಭಾವೀ ಅನ್ವಯವಿದೆಯೆಂದು ತೋರಿಸುತ್ತವೆ ಮತ್ತು ಅದು ಯಾವಾಗ ಸಂಭವಿಸುವುದು?
◻ ಯೇಸುವಿನ ಸಹೋದರರಲ್ಲಿ “ಅಲ್ಪರು” ಯಾರು?
◻ “ನೀತಿವಂತರು” ಎಂಬ ಪದವಿನ್ಯಾಸದ ಯೇಸುವಿನ ಉಪಯೋಗವು, ಇವರು ಯಾರನ್ನು ಪ್ರತಿನಿಧಿಸುತ್ತಾರೆ ಮತ್ತು ಯಾರನ್ನು ಪ್ರತಿನಿಧಿಸುವುದಿಲ್ಲವೆಂದು ಗುರುತಿಸಲು ನಮಗೆ ಹೇಗೆ ಸಹಾಯಮಾಡುತ್ತದೆ?
◻ ದೃಷ್ಟಾಂತವು ಭವಿಷ್ಯತ್ತಿನಲ್ಲಿ ನೆರವೇರುವುದಾದರೂ, ನಮ್ಮ ಸಾರುವಿಕೆಯು ಈಗ ಪ್ರಾಮುಖ್ಯವೂ ಜರೂರಿಯೂ ಆದದ್ದಾಗಿದೆ ಏಕೆ?
[ಪುಟ 24 ರಲ್ಲಿರುವ ಚೌಕ/ಚಿತ್ರಗಳು]
ಸಮಾಂತರಗಳನ್ನು ಗಮನಿಸಿರಿ
ಮತ್ತಾಯ 24:29-31 ಮತ್ತಾಯ 25:31-33
ಮಹಾ ಸಂಕಟವು ಆರಂಭಿಸಿದ ಮನುಷ್ಯಕುಮಾರನು ಬರುತ್ತಾನೆ
ತರುವಾಯ, ಮನುಷ್ಯಕುಮಾರನು ಬರುತ್ತಾನೆ
ಬಹು ಮಹಿಮೆಯಿಂದ ಬರುತ್ತಾನೆ ಮಹಿಮೆಯಿಂದ ಬಂದು
ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುತ್ತಾನೆ
ಅವನೊಂದಿಗೆ ದೇವದೂತರು ದೇವದೂತರು ಅವನೊಂದಿಗೆ
ಉಪಸ್ಥಿತರು ಕೂಡಿಬರುತ್ತಾರೆ
ಭೂಲೋಕದಲ್ಲಿರುವ ಎಲ್ಲಾ ಎಲ್ಲಾ ದೇಶಗಳ ಜನರು ಆತನ
ಕುಲದವರು ಮುಂದೆ ಕೂಡಿಸಲ್ಪಡುತ್ತಾರೆ;
ಅವನನ್ನು ಕಾಣುತ್ತಾರೆ ಆಡುಗಳಿಗೆ ಕೊನೆಗೆ ನ್ಯಾಯವಿಧಿಸಲ್ಪಡುತ್ತದೆ
(ಮಹಾ ಸಂಕಟವು ಅಂತ್ಯಗೊಳ್ಳುತ್ತದೆ)
[ಕೃಪೆ]
Garo Nalbandian