“ನಿನ್ನ ಸಾನ್ನಿಧ್ಯದ ಸೂಚನೆ ಏನಾಗಿರುವುದು?”
“ಇವು ಯಾವಾಗ ಆಗುವುವು, ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನಾಗಿರುವುದು?”—ಮತ್ತಾಯ 24:3, NW.
1, 2. ಜನರು ಭವಿಷ್ಯತ್ತಿನಲ್ಲಿ ಆಸಕ್ತರಾಗಿದ್ದಾರೆಂದು ಯಾವುದು ತೋರಿಸುತ್ತದೆ?
ಹೆಚ್ಚಿನ ಜನರು ಭವಿಷ್ಯದಲ್ಲಿ ಆಸಕ್ತರಾಗಿದ್ದಾರೆ. ನೀವು ಆಸಕ್ತರೋ? ಭವಿಷ್ಯತ್ತಿನ ಧಕ್ಕೆ (ಫ್ಯೂಚರ್ ಷಾಕ್) ಎಂಬ ತನ್ನ ಪುಸ್ತಕದಲ್ಲಿ, ಪ್ರೊಫೆಸರ್ ಆಲ್ವಿನ್ ಟಾಫ್ಲರ್ “ಭವಿಷ್ಯದ ಅಧ್ಯಯನಗಳಿಗೆ ಮೀಸಲಾದ ಸಂಘಟನೆಗಳ ದಿಢೀರ್ ಸಂಖ್ಯಾಭಿವೃದ್ಧಿಯನ್ನು” ಗಮನಿಸಿದರು. ಅವರು ಕೂಡಿಸಿದ್ದು: ‘ಭವಿಷ್ಯಾಭಿಮುಖವಾಗಿರುವ ಚಿಂತನ ಸಮಿತಿಗಳ ರಚನೆಯನ್ನು; ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಜರ್ಮನಿ, ಮತ್ತು ಅಮೆರಿಕದಲ್ಲಿ ಭವಿಷ್ಯತಾ ವಾದಿ ನಿಯತಕಾಲಿಕ ಪತ್ರಿಕೆಗಳ ಗೋಚರಿಸುವಿಕೆಯನ್ನು; ಕಾಲಜ್ಞಾನದಲ್ಲಿ ವಿಶ್ವವಿದ್ಯಾಲಯ ಪಾಠಮಾಲಿಕೆಗಳ ಹಬ್ಬುವಿಕೆಯನ್ನು ನಾವು ನೋಡಿದ್ದೇವೆ.’ ಟಾಫ್ಲರ್ ಕೊನೆಗೊಳಿಸಿದ್ದು: “ನಿಶ್ಚಯವಾಗಿಯೂ, ಯಾವುದೇ ಸಂಪೂರ್ಣವಾದ ಅರ್ಥದಲ್ಲಿ ಭವಿಷ್ಯವನ್ನು ಯಾರೊಬ್ಬನೂ ‘ತಿಳಿಯಲು’ ಸಾಧ್ಯವಿಲ್ಲ.”
2 ಬರಲಿರುವ ವಿಷಯಗಳ ಸೂಚನೆಗಳು (ಸೈನ್ಸ್ ಆಫ್ ಥಿಂಗ್ಸ್ ಟು ಕಮ್) ಎಂಬ ಪುಸ್ತಕ ಹೇಳುವುದು: “ಹಸ್ತಸಾಮುದ್ರಿಕ, ಮಣಿವೀಕ್ಷಣ, ಜ್ಯೋತಿಶ್ಶಾಸ್ತ್ರ, ಇಸ್ಪೀಟೆಲೆಯ ವೀಕ್ಷಣ, ಇ ಜಿನ್, ಇವೆಲ್ಲವು ನಮ್ಮ ನಿರ್ದಿಷ್ಟ ಭವಿಷ್ಯ ಏನಾಗಿರಬಹುದು ಎಂಬ ತುಸು ಕಲ್ಪನೆಯನ್ನು ನಮಗೆ ಕೊಡುವುದಕ್ಕೆ ಇರುವ ಹೆಚ್ಚು ಕಡಮೆ ಜಟಿಲವಾದ ತಂತ್ರಗಳಾಗಿರುತ್ತವೆ.” ಆದರೆ ಅಂತಹ ಮಾನವ ಕ್ರಮವಿಧಾನಗಳಿಗೆ ತೆರಳುವ ಬದಲು, ರುಜುವಾತುಗೊಳಿಸಲ್ಪಟ್ಟ ಉಗಮಕ್ಕೆ—ಯೆಹೋವನೆಡೆಗೆ ನೋಡುವುದಾದರೆ ಒಳಿತನ್ನು ಮಾಡುತ್ತೇವೆ.
3. ಭವಿಷ್ಯದ ಜ್ಞಾನಕ್ಕಾಗಿ ದೇವರೆಡೆಗೆ ನೋಡುವುದು ಯಾಕೆ ಯುಕ್ತವಾಗಿದೆ?
3 ಆ ಸತ್ಯ ದೇವರು ನುಡಿದದ್ದು: “ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ.” (ಯೆಶಾಯ 14:24, 27; 42:9) ಹೌದು, ಅನೇಕ ವೇಳೆ ಮಾನವರನ್ನು ಪ್ರವಾದನಾ ವದನಕರಾಗಿ ಬಳಸಿಕೊಂಡು, ಏನು ಸಂಭವಿಸಲಿದೆ ಎಂಬದರ ಕುರಿತು ಮಾನವಕುಲಕ್ಕೆ ಸಲಹೆ ಕೊಡಲು ಯೆಹೋವನು ಶಕ್ತನಾಗಿದ್ದಾನೆ. ಈ ಪ್ರವಾದಿಗಳಲ್ಲೊಬ್ಬನು ಬರೆದದ್ದು: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.”—ಆಮೋಸ 3:7, 8; 2 ಪೇತ್ರ 1:20, 21.
4, 5. (ಎ) ಭವಿಷ್ಯತ್ತಿನ ಸಂಬಂಧದಲ್ಲಿ ಯೇಸು ಏಕೆ ಸಹಾಯವಾಗಿರಬಲ್ಲನು? (ಬಿ) ಅವನ ಅಪೊಸ್ತಲರು ಯಾವ ಸಂಯುಕ್ತ ಕೇಳಿಕೆಯನ್ನು ಮಾಡಿದರು?
4 ಯೇಸು ಕ್ರಿಸ್ತನು ದೇವರ ಅಗ್ರಗಣ್ಯ ಪ್ರವಾದಿಯಾಗಿದ್ದನು. (ಇಬ್ರಿಯ 1:1, 2) ಈಗ ನಮ್ಮ ಸುತ್ತಲೂ ಸಂಭವಿಸುತ್ತಿರುವ ಸಂಗತಿಗಳನ್ನು ಮುಂತಿಳಿಸುವ ಯೇಸುವಿನ ಪ್ರಧಾನ ಪ್ರವಾದನೆಗಳಲ್ಲೊಂದರ ಮೇಲೆ ನಾವು ಗಮನ ಕೇಂದ್ರೀಕರಿಸೋಣ. ಸದ್ಯದ ದುಷ್ಟ ವ್ಯವಸ್ಥೆಯ ಅಂತ್ಯಗೊಳ್ಳುವಾಗ ಮತ್ತು ಅದನ್ನು ಭೂಪ್ರಮೋದವನದಿಂದ ದೇವರು ಸ್ಥಾನಪಲ್ಲಟಮಾಡುವಾಗ, ಬೇಗನೆ ಏನು ಸಂಭವಿಸಲಿದೆ ಎಂಬದರ ಒಳನೋಟವನ್ನು ಸಹ ಈ ಪ್ರವಾದನೆ ನಮಗೆ ನೀಡುತ್ತದೆ.
5 ತಾನೊಬ್ಬ ಪ್ರವಾದಿಯೆಂದು ಯೇಸು ರುಜುಪಡಿಸಿದ್ದನು. (ಮಾರ್ಕ 6:4; ಲೂಕ 13:33; 24:19; ಯೋಹಾನ 4:19; 6:14; 9:17) ಹೀಗೆ, ಅವನು ಯೆರೂಸಲೇಮ್ಗೆ ಎತ್ತರದಲ್ಲಿದ್ದ ಆಲಿವ್ ಬೆಟ್ಟದ ಮೇಲೆ ಕೂತಿದ್ದಾಗ ಅವನೊಂದಿಗೆ ಕುಳಿತಿದ್ದ ಅಪೊಸ್ತಲರು ಭವಿಷ್ಯದ ಕುರಿತು ಅವನನ್ನು ಏಕೆ ಕೇಳಿದ್ದರೆಂಬದನ್ನು ಗ್ರಹಿಸ ಸಾಧ್ಯವಿದೆ: “ಈ ಸಂಗತಿಗಳು ಯಾವಾಗ ಆಗುವುವು, ಮತ್ತು ನಿನ್ನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆ ಏನಾಗಿರುವುದು?”—ಮತ್ತಾಯ 24:3, NW; ಮಾರ್ಕ 13:4.
6. ಮತ್ತಾಯ 24, ಮಾರ್ಕ 13, ಮತ್ತು ಲೂಕ 21ರ ನಡುವಣ ಸಂಬಂಧವೇನು, ಮತ್ತು ಯಾವ ಪ್ರಶ್ನೆಯು ನಮ್ಮನ್ನು ತೀವ್ರಾಸಕಿಗ್ತೊಳಿಸಬೇಕು?
6 ಅವರ ಪ್ರಶ್ನೆಯನ್ನು ಮತ್ತು ಯೇಸುವಿನ ಉತ್ತರವನ್ನು ನೀವು ಮತ್ತಾಯ ಅಧ್ಯಾಯ 24, ಮಾರ್ಕ ಅಧ್ಯಾಯ 13, ಮತ್ತು ಲೂಕ ಅಧ್ಯಾಯ 21 ರಲ್ಲಿa ಕಂಡುಕೊಳ್ಳುವಿರಿ. ಅನೇಕ ಸಂಬಂಧಗಳಲ್ಲಿ, ಈ ವರದಿಗಳು ಒಂದಕ್ಕೊಂದು ಪೂರಕವಾಗಿವೆ, ಆದರೆ ಅವುಗಳು ತದ್ರೂಪವಾದವುಗಳಲ್ಲ. ಉದಾಹರಣೆಗೆ, ಕೇವಲ ಲೂಕನು ಮಾತ್ರ ‘ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳ’ ನ್ನು ತಿಳಿಸುತ್ತಾನೆ. (ಲೂಕ 21:10, 11; ಮತ್ತಾಯ 24:7; ಮಾರ್ಕ 13:8) ತಾತ್ವಿಕವಾಗಿ, ನಾವು ಕೇಳಬೇಕು, ಯೇಸು ಮುಂತಿಳಿಸುತ್ತಿದ್ದದ್ದು ಆತನನ್ನು ಆಲೈಸುತ್ತಿದ್ದವರ ಜೀವಮಾನದೊಳಗೆ ನಡೆಯುವ ಘಟನೆಗಳನ್ನು ಮಾತ್ರವೋ, ಅಥವಾ ನಮ್ಮ ಸಮಯವನ್ನು ಮತ್ತು ನಮಗಾಗಿ ಇರುವ ಭವಿಷ್ಯವನ್ನೂ ಆತನು ಒಳಗೂಡಿಸಿದ್ದನೋ?
ಅಪೊಸ್ತಲರು ತಿಳಿಯ ಬಯಸಿದ್ದರು
7. ಅಪೊಸ್ತಲರು ವಿಶಿಷ್ಟವಾಗಿ ಯಾವುದರ ಕುರಿತು ಕೇಳಿದರು, ಆದರೆ ಯೇಸುವಿನ ಉತ್ತರದ ವ್ಯಾಪ್ತಿಯು ಎಷ್ಟಾಗಿತ್ತು?
7 ಆತನು ಕೊಲ್ಲಲ್ಪಡುವ ಕೆಲವೇ ದಿನಗಳ ಮುಂಚಿತವಾಗಿ, ಯೆಹೂದ್ಯರ ರಾಜಧಾನಿಯಾದ ಯೆರೂಸಲೇಮನ್ನು ದೇವರು ತೊರೆದಿದ್ದಾನೆ ಎಂದು ಯೇಸುವು ಘೋಷಿಸಿದನು. ಆ ಪಟ್ಟಣವು ಮತ್ತು ಅದರ ಭವ್ಯವಾದ ದೇವಾಲಯವು ನಾಶವಾಗಲಿಕ್ಕಿತ್ತು. ಆಗ ಅಪೊಸ್ತಲರಲ್ಲಿ ಕೆಲವರು ‘ಯೇಸುವಿನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ ಒಂದು ಸೂಚನೆಗಾಗಿ ಕೇಳಿದರು. (ಮತ್ತಾಯ 23:37–24:3) ಯೆಹೂದಿ ವ್ಯವಸ್ಥೆ ಮತ್ತು ಯೆರೂಸಲೇಮಿನ ಕುರಿತು ಅವರು ಮುಖ್ಯವಾಗಿ ಯೋಚಿಸುತ್ತಿದ್ದರು ಎಂಬುದು ನಿಸ್ಸಂಶಯ, ಯಾಕಂದರೆ ಮುಂದಕ್ಕೆ ಏನು ಇದೆ ಎಂಬುದರ ವ್ಯಾಪ್ತಿಯನ್ನು ಅವರು ಗ್ರಹಿಸಿರಲಿಲ್ಲ. ಆದರೆ ಅವರಿಗೆ ಉತ್ತರಿಸುವಲ್ಲಿ ಯೇಸು, ಆ ತನಕ ಮತ್ತು ರೋಮನರು ಯೆರೂಸಲೇಮನ್ನು ನಾಶಮಾಡಿದ ಸಾ.ಶ. 70 ನ್ನೂ ಒಳಗೂಡಿಸಿ ಏನು ಸಂಭವಿಸಿತ್ತೋ ಆ ಸಮಯಕ್ಕಿಂತ ಬಹಳಷ್ಟು ಮುಂದಕ್ಕೆ ನೋಡಿದ್ದನು.—ಲೂಕ 19:11; ಅ. ಕೃತ್ಯಗಳು 1:6, 7.
8. ಯೇಸು ಮುಂತಿಳಿಸಿದ ಕೆಲವು ವಿಕಸನಗಳು ಯಾವುವಾಗಿದ್ದವು?
8 ಮೂರು ಸುವಾರ್ತಾ ದಾಖಲೆಗಳಲ್ಲಿ ನೀವು ಓದಶಕ್ತರಾಗಿರುವಂತೆ, ಜನಾಂಗಗಳು ಜನಾಂಗಗಳ ವಿರುದ್ಧ, ರಾಜ್ಯಗಳು ರಾಜ್ಯಗಳ ವಿರುದ್ಧ ಏಳುವುದರ, ಬರಗಳ, ಭೂಕಂಪಗಳ, ಭಯಭರಿತ ದೃಶ್ಯಗಳ, ಮತ್ತು ಆಕಾಶಸ್ಥ ಸೂಚನೆಗಳ ಕುರಿತು ಯೇಸುವು ಮಾತಾಡಿದನು. ಯೇಸು ಆ ಸೂಚನೆಯನ್ನು ಕೊಡುವ (ಸಾ.ಶ. 33) ಮತ್ತು ಯೆರೂಸಲೇಮಿನ ನಿರ್ಜನತೆ (ಸಾ.ಶ. 66-70) ಯ ನಡುವಣ ವರುಷಗಳಲ್ಲಿ, ಸುಳ್ಳು ಪ್ರವಾದಿಗಳು ಮತ್ತು ಸುಳ್ಳು ಕ್ರಿಸ್ತರು ಏಳಲಿದ್ದರು. ಯೆಹೂದ್ಯರು ಯೇಸುವಿನ ಸಂದೇಶವನ್ನು ಸಾರುತ್ತಿರುವ ಕ್ರೈಸ್ತರನ್ನು ಹಿಂಸಿಸಲಿಕ್ಕಿದ್ದರು.
9. ಸಾ.ಶ. ಒಂದನೆಯ ಶತಮಾನದಲ್ಲಿ ಯೇಸುವಿನ ಪ್ರವಾದನೆಯು ನೆರವೇರಿಕೆಯನ್ನು ಕಂಡುಕೊಂಡದ್ದು ಹೇಗೆ?
9 ಸೂಚನೆಯ ಈ ಲಕ್ಷಣಗಳು, ಇತಿಹಾಸಕಾರ ಫ್ಲೇವಿಯಸ್ ಜೊಸೀಫಸ್ನೂ ದೃಢೀಕರಿಸುವಂತೆ, ಕಾರ್ಯತಃ ಸಂಭವಿಸಿದವು. ರೋಮನರು ಆಕ್ರಮಣಗೈಯುವುದಕ್ಕಿಂತ ಮೊದಲೇ, ಸುಳ್ಳು ಮೆಸ್ಸೀಯರು ದಂಗೆಯನ್ನು ಪ್ರಚೋದಿಸಿದ್ದರು ಎಂದು ಅವನು ಬರೆಯುತ್ತಾನೆ. ಯೂದಾಯದಲ್ಲಿ ಮತ್ತು ಇತರೆಡೆಗಳಲ್ಲಿ ಭೀಕರವಾದ ಭೂಕಂಪಗಳು ಆದವು. ರೋಮನ್ ಸಾಮ್ರಾಜ್ಯದ ಅನೇಕ ಭಾಗಗಳಲ್ಲಿ ಯುದ್ಧಗಳು ಸ್ಫೋಟಿಸಿದವು. ಅಲ್ಲಿ ಮಹತ್ತಾದ ಬರಗಾಲಗಳು ಇದ್ದವೋ? ನಿಶ್ಚಯವಾಗಿಯೂ ಹೌದು. (ಹೋಲಿಸಿ ಅ. ಕೃತ್ಯಗಳು 11:27-30.) ರಾಜ್ಯ ಸಾರುವಿಕೆಯ ಕಾರ್ಯದ ಕುರಿತೇನು? ಸಾ.ಶ. 60 ಅಥವಾ ಸಾ.ಶ. 61ರೊಳಗೆ, ಕೊಲೊಸ್ಸೆಯರ ಪುಸ್ತಕವು ಬರೆಯಲ್ಪಟ್ಟಾಗ, ದೇವರ ರಾಜ್ಯದ “ಸುವಾರ್ತೆಯಿಂದ ಉಂಟಾದ ನಿರೀಕ್ಷೆ”ಯು ಆಫ್ರಿಕ, ಏಶಿಯಾ, ಮತ್ತು ಯೂರೋಪಿನಲ್ಲಿ ವ್ಯಾಪಕವಾಗಿ ಕೇಳಲ್ಪಟ್ಟಿತ್ತು.b—ಕೊಲೊಸ್ಸೆ 1:23.
“ತದನಂತರ” ಅಂತ್ಯವು
10. ಗ್ರೀಕ್ ಪದವಾದ ಟೊ’ಟೆ ಯನ್ನು ನಾವು ಯಾಕೆ ಗಮನಕ್ಕೆ ತಕ್ಕೊಳ್ಳಬೇಕು, ಮತ್ತು ಅದರ ತಾತ್ಪರ್ಯವೇನು?
10 ಆತನ ಪ್ರವಾದನೆಯ ಕೆಲವು ಭಾಗಗಳಲ್ಲಿ, ಯೇಸುವು ಘಟನೆಗಳನ್ನು ಕ್ರಮಾನುಗತಿಯಲ್ಲಿ ಸಂಭವಿಸುತ್ತಿರುವಂತೆ ಸಾದರಪಡಿಸಿದನು. ಅವನಂದದ್ದು: “ರಾಜ್ಯದ ಈ ಸುವಾರ್ತೆಯು . . . ಸಾರಲ್ಪಡುವುದು . . . ಆಗ (ತದನಂತರ, NW) ಅಂತ್ಯವು ಬರುವುದು.” ಇಂಗ್ಲಿಷ್ನಲ್ಲಿ ಬೈಬಲುಗಳು “then” (ತದನಂತರ) ಎಂಬದನ್ನು “ಆದಕಾರಣ” (“therefore”) ಯಾ “ಆದರೆ” (“but”) ಎಂಬ ಸರಳ ಅರ್ಥದೊಂದಿಗೆ ಆಗಿಂದಾಗ್ಗೆ ಬಳಸುತ್ತವೆ. (ಮಾರ್ಕ 4:15, 17; 13:23) ಆದರೂ, ಮತ್ತಾಯ 24:14 ರಲ್ಲಿ “ತದನಂತರ” (then) ಎಂಬುದು ಗ್ರೀಕ್ ಕ್ರಿಯಾ ವಿಶೇಷಣ ಟೊ’ಟೆಯ ಮೇಲೆ ಆಧಾರಿತವಾಗಿದೆ.c ಗ್ರೀಕ್ ತಜ್ಞರು ವಿವರಿಸುವುದೇನಂದರೆ ಟೊ’ಟೆ “ಸಮಯದ ಒಂದು ನಿರ್ದೇಶಕ ಕ್ರಿಯಾ ವಿಶೇಷಣ” ಆಗಿದ್ದು, “ಸಮಯದಲ್ಲಿ ಅದನ್ನು ಹಿಂಬಾಲಿಸಿ ಬರುವುದನ್ನು ಪ್ರಸ್ತಾಪಿಸಲು” ಯಾ “ತರುವಾಯದ ಒಂದು ಘಟನೆಯನ್ನು ಪ್ರಸ್ತಾಪಿಸಲು” ಬಳಸಲಾಗಿದೆ. ಯೇಸುವು ಹೀಗೆ ರಾಜ್ಯದ ಸಾರುವಿಕೆ ಇರುವುದನ್ನು ಮುಂತಿಳಿಸಿದನು ಮತ್ತು ತದನಂತರ (ಯಾ, ‘ಅದಾದ ಮೇಲೆ’ ಯಾ ‘ತರುವಾಯ’) “ಅಂತ್ಯವು” ಬರುವುದು. ಯಾವ ಅಂತ್ಯ?
11. ಯೆರೂಸಲೇಮಿನ ನಾಶನಕ್ಕೆ ನೇರವಾಗಿ ಜೋಡಿಸಲ್ಪಟ್ಟ ಘಟನೆಗಳ ಮೇಲೆ ಯೇಸು ಕೇಂದ್ರೀಕರಿಸಿದ್ದು ಹೇಗೆ?
11 ಯೇಸುವಿನ ಪ್ರವಾದನೆಯ ಒಂದು ನೆರವೇರಿಕೆಯನ್ನು ಯೆಹೂದ್ಯ ವ್ಯವಸ್ಥೆಯ ಅಂತ್ಯಕ್ಕೆ ನಡಿಸುವ ಘಟನೆಗಳಲ್ಲಿ ಕಾಣ ಸಾಧ್ಯವಿದೆ. ಯೇಸುವು ಮುಂತಿಳಿಸಿದ ಯುದ್ಧಗಳು, ಭೂಕಂಪಗಳು, ಬರಗಳೇ ಮುಂತಾದವುಗಳು, ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಲ್ಲಿ ಸಂಭವಿಸಿದವು. ಆದರೂ, ಮತ್ತಾಯ 24:15, ಮಾರ್ಕ 13:14, ಮತ್ತು ಲೂಕ 21:20 ರೊಂದಿಗೆ ಆರಂಭಿಸಿ, ನಾಶನವು ಬಾಗಲಲ್ಲೇ ಅತಿ ಸಮೀಪ ಇದ್ದಾಗ, ನಾಶನದ ಸನ್ನಿಹಿತಕ್ಕೆ ನೇರವಾಗಿ ಜೋಡಿಸಲ್ಪಟ್ಟ ಘಟನೆಗಳನ್ನು ನಾವು ಓದುತ್ತೇವೆ.—ತಖ್ತೆಯಲ್ಲಿ ಏಕ ಚುಕ್ಕೆಹಾಕಿದ ಗೀಟನ್ನು ಗಮನಿಸಿರಿ.
12. ಮತ್ತಾಯ 24:15 ರ ನೆರವೇರಿಕೆಯಲ್ಲಿ ರೋಮನ್ ಸೇನೆಗಳು ಹೇಗೆ ಒಳಗೂಡಿದ್ದವು?
12 ಸಾ.ಶ. 66ರಲ್ಲಿ ಯೆಹೂದ್ಯ ದಂಗೆಯೊಂದಕ್ಕೆ ಪ್ರತಿವರ್ತಿಸುತ್ತಾ, ಸೆಸಿಯ್ಟಸ್ ಗ್ಯಾಲ್ಲಸ್ನ ಕೈಕೆಳಗೆ ರೋಮನರು ಯೆರೂಸಲೇಮಿನ ವಿರುದ್ಧವಾಗಿ ದಂಡೆತ್ತಿಬಂದು, ಯೆಹೂದ್ಯರಿಂದ ಪವಿತ್ರವೆಂದೆಣಿಸಲ್ಪಡುತ್ತಿದ್ದ ಈ ಪಟ್ಟಣಕ್ಕೆ ಮುತ್ತಿಗೆ ಹಾಕಿದರು. (ಮತ್ತಾಯ 5:35) ಯೆಹೂದ್ಯರ ಪ್ರತಿಧಾಳಿಗಳ ನಡುವೆಯೂ, ರೋಮನರು ಪಟ್ಟಣದೊಳಗೆ ಬಲಾತ್ಕಾರದಿಂದ ನುಗ್ಗಿದರು. ಹೀಗೆ ಮತ್ತಾಯ 24:15 ಮತ್ತು ಮಾರ್ಕ 13:14 ರಲ್ಲಿನ ಯೇಸುವಿನ ಮುಂತಿಳಿಸುವಿಕೆಗೆ ಸತ್ಯವಾಗಿಯೇ, ಅವರು “ಪವಿತ್ರಸ್ಥಾನದಲ್ಲಿ ನಿಲ್ಲುವದನ್ನು” ಪ್ರಾರಂಭಿಸಿದರು. ತದನಂತರ ಅಲ್ಲಿ ಒಂದು ಆಶ್ಚರ್ಯಗೊಳಿಸುವ ವಿಕಸನವುಂಟಾಯಿತು. ರೋಮನರು ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದರೂ, ಅನಿರೀಕ್ಷಿತವಾಗಿ ಅವರದನ್ನು ಹಿಂದೆಗೆದರು. ಕ್ರೈಸ್ತರು ಆ ಕೂಡಲೆ ಯೇಸುವಿನ ಪ್ರವಾದನೆಯ ನೆರವೇರಿಕೆಯನ್ನು ಅರಿತುಕೊಂಡರು, ಮತ್ತು ಹಿಂದೆಗೆಯುವಿಕೆಯು ಅವರನ್ನು ಯೂದಾಯದಿಂದ ಯೊರ್ದನ್ನಿನ ಆಚೇಪಕ್ಕದ ಬೆಟ್ಟಗಳಿಗೆ ಪಲಾಯನ ಮಾಡಲು ಸಮಯವನ್ನೊದಗಿಸಿತು. ಅವರು ಹಾಗೆಯೇ ಮಾಡಿದರೆಂದು ಇತಿಹಾಸವು ಹೇಳುತ್ತದೆ.
13. ಪಲಾಯನಗೈಯಲು ಯೇಸು ಕೊಟ್ಟ ಎಚ್ಚರಿಕೆಯನ್ನು ಪಾಲಿಸಲು ಕ್ರೈಸ್ತರು ಶಕ್ತರಾದದೇಕ್ದೆ?
13 ಆದರೆ ರೋಮನರು ಯೆರೂಸಲೇಮಿನ ಸುತ್ತಲಿನಿಂದ ಮುತ್ತಿಗೆಯನ್ನು ಹಿಂದೆಗೆದರು ಎಂದಾದರೆ, ಯಾವನಿಗಾದರೂ ಪಲಾಯನ ಮಾಡುವ ಅಗತ್ಯವೇಕಿತ್ತು? ಏನು ಸಂಭವಿಸಿತೋ ಅದು ‘ಯೆರೂಸಲೇಮ್ ಹಾಳಾಗುವ ಕಾಲ ಸಮೀಪವಾಗಿ’ ತ್ತೆಂಬದನ್ನು ರುಜುಪಡಿಸಿತೆಂದು ಯೇಸುವಿನ ಮಾತುಗಳು ತೋರಿಸಿದವು. (ಲೂಕ 21:20) ಹೌದು, ಹಾಳುಗೆಡಹುವಿಕೆಯೇ. ‘ಅಂಥ ಸಂಕಟವು ಮೊದಲಿನಿಂದ ಇಂದಿನವರೆಗೂ ಆಗಲಿಲ್ಲ, ಇನ್ನು ಮೇಲೆಯೂ ಆಗುವದಿಲ್ಲ’ ಎಂದು ಆತನು ಮುಂತಿಳಿಸಿದ್ದನು. ಸುಮಾರು ಮೂರುವರೆ ವರ್ಷಗಳ ಅನಂತರ, ಸಾ.ಶ. 70 ರಲ್ಲಿ, ಜನರಲ್ ಟೈಟಸ್ನ ಕೈಕೆಳಗೆ ರೋಮನ್ ಸೇನೆಯಿಂದ ಯೆರೂಸಲೇಮ್ ಕಾರ್ಯತಃ “ಮಹಾ ಸಂಕಟ” ವನ್ನು ಅನುಭವಿಸಿತು. (ಮತ್ತಾಯ 24:21; ಮಾರ್ಕ 13:19) ಆದರೂ, ಈ ಸಂಕಟವನ್ನು ಈ ಮುಂಚೆ ಯಾ ಇದರ ನಂತರದ ಯಾವುದೇ ಸಂಕಟಕ್ಕಿಂತ ಮಹತ್ತರದ್ದೆಂದು ಯೇಸುವು ವರ್ಣಿಸಿದ್ದು ಯಾಕೆ?
14. ಸಾ.ಶ. 70 ರಲ್ಲಿ ಯೆರೂಸಲೇಮಿಗೆ ಏನು ಸಂಭವಿಸಿತೋ ಅದು, ಹಿಂದೆಂದೂ ಆಗಲಿಲ್ಲ ಇನ್ನು ಮೇಲೆಯೂ ಆಗದಿರುವಂಥ “ಮಹಾ ಸಂಕಟ” ವಾಗಿ ನಾವು ಹೇಳಬಲ್ಲೆವೇಕೆ?
14 ಯೆರೂಸಲೇಮ್ ಸಾ.ಶ.ಪೂ. 607 ರಲ್ಲಿ ಬಬಿಲೋನ್ಯರಿಂದ ವಿಧ್ವಂಸಗೊಳಿಸಲ್ಪಟ್ಟಿತ್ತು, ಮತ್ತು ನಮ್ಮ ಪ್ರಚಲಿತ ಶತಮಾನದಲ್ಲಿ ಆ ಪಟ್ಟಣವು ಭೀಕರ ಹೋರಾಟವನ್ನು ಕಂಡಿರುತ್ತದೆ. ಆದರೂ, ಸಾ.ಶ. 70 ರಲ್ಲಿ ಏನು ಸಂಭವಿಸಿತೋ ಅದು ಅಸದೃಶ್ಯವಾಗಿ ಒಂದು ಮಹಾ ಸಂಕಟವಾಗಿತ್ತು. ಸುಮಾರು ಐದು ತಿಂಗಳುಗಳ ಕದನದಲ್ಲಿ, ಟೈಟಸನ ಯೋಧರು ಯೆಹೂದ್ಯರನ್ನು ಸೋಲಿಸಿದರು. ಅವರು ಸುಮಾರು 11,00,000 ಮಂದಿಯನ್ನು ಕೊಂದರು ಮತ್ತು ಸುಮಾರು 1,00,000 ಮಂದಿಯನ್ನು ಬಂದಿವಾಸಕ್ಕೆ ಒಯ್ದರು. ಅಷ್ಟಲ್ಲದೆ, ರೋಮನರು ಯೆರೂಸಲೇಮನ್ನು ಧ್ವಂಸಗೊಳಿಸಿದರು. ಇದು ಆಲಯದ ಮೇಲೆ ಕೇಂದ್ರಿತವಾಗಿದ್ದ, ಮುಂಚಿನ ಒಪ್ಪಲ್ಪಟ್ಟ ಆರಾಧನೆಯ ಯೆಹೂದ್ಯ ವ್ಯವಸ್ಥೆಯ ಶಾಶ್ವತವಾಗಿ ಕೊನೆಗೊಂಡದನ್ನು ರುಜುಪಡಿಸಿತು. (ಇಬ್ರಿಯ 1:2) ಹೌದು, ಸಾ.ಶ. 70ರ ಫಟನೆಗಳನ್ನು ‘ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೆ [ಆ ನಗರದ, ರಾಷ್ಟ್ರದ, ಮತ್ತು ವ್ಯವಸ್ಥೆಯ ಮೇಲೆ] ಆಗಲಿಲ್ಲ, ಇನ್ನು ಮೇಲೆಯೂ ಆಗುವುದಿಲ್ಲ’ ಎಂದು ಯುಕ್ತವಾಗಿಯೇ ಪರಿಗಣಿಸ ಸಾಧ್ಯವಿದೆ.—ಮತ್ತಾಯ 24:21.d
ಪ್ರವಾದಿಸಲ್ಪಟ್ಟ ಪ್ರಕಾರ, ಹೆಚ್ಚು ಹಿಂಬಾಲಿಸಲಿಕ್ಕಿತ್ತು
15. (ಎ) ಯೆರೂಸಲೇಮಿನ ಮೇಲಣ ಸಂಕಟದ ಅನಂತರ ಯಾವ ರೀತಿಯ ವಿಕಸನಗಳು ಬರಲಿವೆಯೆಂದು ಯೇಸು ಮುಂತಿಳಿಸಿದನು? (ಬಿ) ಮತ್ತಾಯ 24:23-28ರ ನೋಟದಲ್ಲಿ, ಯೇಸುವಿನ ಪ್ರವಾದನೆಯ ನೆರವೇರಿಕೆಯ ಕುರಿತು ನಾವೇನನ್ನು ತೀರ್ಮಾನಿಸಬೇಕು?
15 ಆದರೂ, ಯೇಸು ತನ್ನ ಕಾಲಜ್ಞಾನವನ್ನು ಒಂದನೆಯ ಶತಕದಲ್ಲಿನ ಸಂಕಟಕ್ಕೆ ಸೀಮಿತಗೊಳಿಸಲಿಲ್ಲ. ಮತ್ತಾಯ 24:23 ಮತ್ತು ಮಾರ್ಕ 13:21 ರಲ್ಲಿ ಟೊ’ಟೆ ಯಾ “ತದನಂತರ” ಎಂಬ ಪದದ ಉಪಯೋಗದಿಂದ ಸೂಚಿಸಲ್ಪಟ್ಟ ಪ್ರಕಾರ, ಆ ಸಂಕಟವನ್ನು ಹಿಂಬಾಲಿಸಿ ಬಹಳಷ್ಟು ಬರಲಿಕ್ಕಿತ್ತು ಎಂದು ಬೈಬಲ್ ತೋರಿಸುತ್ತದೆ. ಸಾ.ಶ. 70 ನ್ನು ಹಿಂಬಾಲಿಸುವ ಅವಧಿಯಲ್ಲಿ ಏನು ವಿಕಸನಗೊಳ್ಳಲಿತ್ತು? ಯೆಹೂದ್ಯ ವ್ಯವಸ್ಥೆಯ ಮೇಲಿನ ಸಂಕಟದ ನಂತರ, ಇನ್ನಷ್ಟು ಹೆಚ್ಚು ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಗೋಚರಿಸಲಿದ್ದರು. (ಮಾರ್ಕ 13:6 ನ್ನು 13:21-23 ರೊಂದಿಗೆ ಹೋಲಿಸಿರಿ.) ಸಾ.ಶ. 70 ರಲ್ಲಿ ಯೆರೂಸಲೇಮಿನ ನಾಶನದಂದಿನಿಂದ ಗತಿಸಿದ ಶತಮಾನಗಳಲ್ಲಿ ಅಂಥ ವ್ಯಕ್ತಿಗಳು ಎದ್ದಿರುವರು ಎಂದು ಇತಿಹಾಸವು ದೃಢೀಕರಿಸುತ್ತದೆ, ಆದರೂ ಕ್ರಿಸ್ತನ “ಸಾನ್ನಿಧ್ಯ” ಕ್ಕಾಗಿ ಎದುರು ನೋಡುತ್ತಲಿದ್ದ ಮತ್ತು ತೀವ್ರ ಆತ್ಮಿಕ ದೃಷ್ಟಿಯಿದ್ದ ಜನರನ್ನು ಅವರು ಮೋಸಗೊಳಿಸಲಿಲ್ಲ. (ಮತ್ತಾಯ 24:27, 28) ಆದಾಗ್ಯೂ, ಸಾ.ಶ. 70ರ ಮಹಾ ಸಂಕಟದ ನಂತರದ ಈ ಬೆಳವಣಿಗೆಗಳು, ಕೇವಲ ಒಂದು ಆರಂಭಿಕ ನೆರವೇರಿಕೆಯಾಗಿದ್ದ ಆ ಸಂಕಟಕ್ಕಿಂತಲೂ ಮುಂದಕ್ಕೆ ಯೇಸುವು ನೋಡಿದ್ದನು ಎಂಬುದಕ್ಕೆ ಒಂದು ನಿರ್ದೇಶಕವನ್ನು ಒದಗಿಸುತ್ತವೆ.
16. ಲೂಕ 21:24 ಯೇಸುವಿನ ಪ್ರವಾದನೆಗೆ ಯಾವ ವೈಶಿಷ್ಟ್ಯವನ್ನು ಕೂಡಿಸುತ್ತದೆ, ಮತ್ತು ಇದು ಯಾವ ಭಾವಾರ್ಥವನ್ನು ಹೊಂದಿದೆ?
16 ನಾವು ಮತ್ತಾಯ 24:15-28 ಮತ್ತು ಮಾರ್ಕ 13:14-23 ನ್ನು ಲೂಕ 21:20-24 ರೊಂದಿಗೆ ಹೋಲಿಸುವುದಾದರೆ, ಯೆರೂಸಲೇಮಿನ ನಾಶನವನ್ನು ದಾಟಿ ಬಹಳಷ್ಟು ಮುಂದಕ್ಕೆ ಯೇಸುವಿನ ಭವಿಷ್ಯದ್ವಾಣಿಯು ಚಾಚಿತ್ತು ಎಂಬುದಕ್ಕೆ ಎರಡನೆಯ ನಿರ್ದೇಶಕವನ್ನು ನಾವು ಕಂಡುಕೊಳ್ಳುತ್ತೇವೆ. ಕೇವಲ ಲೂಕನು ಮಾತ್ರ ಅಂಟುರೋಗಗಳ ಕುರಿತು ತಿಳಿಸಿದ್ದನೆಂಬದನ್ನು ಜ್ಞಾಪಿಸಿಕೊಳ್ಳಿರಿ. ತದ್ರೀತಿ, ಅವನೊಬ್ಬನೇ ಈ ಭಾಗವನ್ನು ಯೇಸುವಿನ ಮಾತುಗಳಿಂದ ಕೊನೆಗೊಳಿಸಿದನು: “ಅನ್ಯಜನಾಂಗಗಳ ನೇಮಿತ ಸಮಯವು [“ಅನ್ಯಜನಗಳ ಕಾಲ,” ಕಿಂಗ್ ಜೇಮ್ಸ್ ವರ್ಷನ್] ಪೂರೈಸಲ್ಪಡುವ ತನಕ ಅನ್ಯಜನಾಂಗಗಳಿಂದ ಯೆರೂಸಲೇಮ್ ತುಳಿದಾಡಲ್ಪಡುವುದು.”e (ಲೂಕ 21:24, NW) ಬಬಿಲೋನ್ಯರು ಸಾ.ಶ.ಪೂ. 607 ರಲ್ಲಿ ಯೆಹೂದ್ಯರ ಕೊನೆಯ ಅರಸನನ್ನು ಉಚ್ಚಾಟಿಸಿದ್ದರು ಮತ್ತು ಅದರ ನಂತರ, ದೇವರ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಯೆರೂಸಲೇಮ್ ತುಳಿಯಲ್ಪಟ್ಟಿತು. (2 ಅರಸು 25:1-26; 1 ಪೂರ್ವಕಾಲವೃತ್ತಾಂತ 29:23; ಯೆಹೆಜ್ಕೇಲ 21:25-27) ಲೂಕ 21:24ರಲ್ಲಿ, ಒಂದು ರಾಜ್ಯವನ್ನು ಪುನಃ ಸ್ಥಾಪಿಸುವ ದೇವರ ಸಮಯ ಬರುವ ತನಕ ಈ ಪರಿಸ್ಥಿತಿಯು ಭವಿಷ್ಯದಲ್ಲಿ ಮುಂದರಿಯಲಿರುವುದು ಎಂದು ಯೇಸು ಸೂಚಿಸಿದನು.
17. ಯೇಸುವಿನ ಪ್ರವಾದನೆಯು ದೂರದ ಭವಿಷ್ಯತ್ತಿಗೆ ತಲಪಲಿಕ್ಕಿತ್ತೆಂದು ಯಾವ ಮೂರನೆಯ ನಿರ್ದೇಶಕವು ನಮಗಿದೆ?
17 ಯೇಸುವು ಸಹ ಒಂದು ದೂರದ ಮುಂದಣ ನೆರವೇರಿಕೆಗೆ ಸೂಚಿಸುತ್ತಿದನ್ದೆಂಬದಕ್ಕೆ ಇಲ್ಲಿ ಮೂರನೆಯ ನಿರ್ದೇಶಕವು ಇದೆ: ಶಾಸ್ತ್ರವಚನಗಳಿಗನುಸಾರ ಮೆಸ್ಸೀಯನು ಸಾಯಲಿದ್ದನು ಮತ್ತು ಪುನರುತ್ಥಾನವಾಗಲಿಕ್ಕಿದ್ದನು. ಅದಾದ ನಂತರ, ತಂದೆಯು ಅವನನ್ನು ದೊರೆತನ ಮಾಡಲು ಕಳುಹಿಸುವ ತನಕ ಅವನು ದೇವರ ಬಲಗಡೆಯಲ್ಲಿ ಕೂತುಕೊಳ್ಳಲಿದ್ದನು. (ಕೀರ್ತನೆ 110:1, 2) ತನ್ನ ತಂದೆಯ ಬಲಗಡೆಯಲ್ಲಿ ಕೂತುಕೊಳ್ಳಲಿಕ್ಕಿರುವ ವಿಷಯಕ್ಕೆ ಯೇಸು ಪರೋಕ್ಷವಾಗಿ ಸೂಚಿಸಿದ್ದನು. (ಮಾರ್ಕ 14:62) ಅರಸನಾಗುವ ಮತ್ತು ದೇವರ ಸಂಹಾರಕನಾಗುವ ಸಮಯವನ್ನು ಎದುರುನೋಡುತ್ತಾ ಪುನರುತಿತ್ಥ ಯೇಸುವು ಯೆಹೋವನ ಬಲಗಡೆಯಲ್ಲಿ ಕೂತಿದ್ದನೆಂಬದನ್ನು ಅಪೊಸ್ತಲ ಪೌಲನು ದೃಢೀಕರಿಸಿದ್ದಾನೆ.—ರೋಮಾಪುರ 8:34; ಕೊಲೊಸ್ಸೆ 3:1; ಇಬ್ರಿಯ 10:12, 13.
18, 19. ಸುವಾರ್ತೆಗಳಲ್ಲಿನ ಸರಿಹೋಲುವ ಪ್ರವಾದನೆಯೊಂದಿಗೆ ಪ್ರಕಟನೆ 6:2-8ಕ್ಕೆ ಯಾವ ಸಂಬಂಧವಿದೆ?
18 ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ಯೇಸುವಿನ ಪ್ರವಾದನೆಯು ಮೊದಲನೆಯ ಶತಮಾನವನ್ನು ದಾಟಿ ಅನ್ವಯಿಸುತ್ತದೆ ಎಂಬುದಕ್ಕೆ ನಾಲ್ಕನೆಯ ಮತ್ತು ನಿರ್ಣಾಯಕ ನಿರ್ದೇಶಕಕ್ಕಾಗಿ, ನಾವು ಪ್ರಕಟನೆ ಅಧ್ಯಾಯ 6 ಕ್ಕೆ ತೆರಳಬಲ್ಲೆವು. ಸಾ.ಶ. 70ರ ದಶಕಗಳ ಅನಂತರ ಬರೆಯುತ್ತಾ, ಅಪೊಸ್ತಲ ಯೋಹಾನನು ಕ್ರಿಯಾಶೀಲ ಕುದುರೆ ಸವಾರರ ನಿರ್ಬಂಧಕ ದೃಶ್ಯವೊಂದನ್ನು ವರ್ಣಿಸಿದನು. (ಪ್ರಕಟನೆ 6:2-8) “ಕರ್ತನ ದಿನ” ವಾದ—ಆತನ ಸಾನ್ನಿಧ್ಯದ ದಿನದೊಳಗಿನ ಈ ಪ್ರವಾದನಾ ನೋಟವು, ನಮ್ಮ 20 ನೆಯ ಶತಮಾನವನ್ನು ಒಂದು ಗಮನಾರ್ಹ ಯುದ್ಧೋದ್ಯಮದ (ವಚನ 4), ವ್ಯಾಪಕವಾದ ಬರಗಳ (ವಚನ 5 ಮತ್ತು 6), ಮತ್ತು “ಮಾರಕ ಅಂಟುರೋಗ”ದ (ವಚನ 8) ಸಮಯವಾಗಿ ಗುರುತಿಸುತ್ತದೆ. ಸ್ಪಷ್ಟವಾಗಿಗಿ ಇದು, ಸುವಾರ್ತೆಗಳಲ್ಲಿ ಯೇಸುವು ಏನನ್ನು ಹೇಳಿದನೋ ಅದಕ್ಕೆ ಸರಿಹೋಲಿಕೆಯಾಗುತ್ತದೆ ಮತ್ತು ಈ ‘ಕರ್ತನ ದಿನ’ ದಲ್ಲಿ ಆತನ ಪ್ರವಾದನೆಗೆ ಒಂದು ಮಹತ್ತಾದ ನೆರವೇರಿಕೆಯಿದೆ ಎಂಬದನ್ನು ರುಜುಪಡಿಸುತ್ತದೆ.—ಪ್ರಕಟನೆ 1:10.
19 ಮತ್ತಾಯ 24:7-14 ಮತ್ತು ಪ್ರಕಟನೆ 6:2-8 ರಲ್ಲಿ ಮುಂತಿಳಿಸಿದ ಸಂಘಟಿತ ಸೂಚನೆಯು 1914 ರಲ್ಲಿ ಮೊದಲನೆಯ ಲೋಕ ಯುದ್ಧವು ಸ್ಫೋಟಿಸಿದಂದಿನಿಂದ ಗೋಚರವಾಗಿದೆ ಎಂದು ತಿಳಿವಳಿಕೆ ಹೊಂದಿದ ಜನರು ಅಂಗೀಕರಿಸುತ್ತಾರೆ. ಕ್ರೂರ ಯುದ್ಧಗಳಿಂದ, ವಿಧ್ವಂಸಕತೆಯ ಭೂಕಂಪಗಳಿಂದ, ದಾರುಣವಾದ ಬರಗಳಿಂದ, ಮತ್ತು ವ್ಯಾಪಕವಾದ ರೋಗಗಳಿಂದ ರುಜುಗೊಳಿಸಲ್ಪಟ್ಟಂತೆ, ಯೇಸುವಿನ ಪ್ರವಾದನೆಯು ಈಗ ಅದರ ಎರಡನೆಯ ಮತ್ತು ಮಹತ್ತರವಾದ ನೆರವೇರಿಕೆಯನ್ನು ಹೊಂದುತ್ತಿದೆ ಎಂದು ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ಪ್ರಚುರಿಸಿದ್ದಾರೆ. ಈ ಕೊನೆಯ ವಿಷಯದ ಮೇಲೆ, ಯು.ಎಸ್.ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ (ಜುಲೈ 27, 1992) ಹೇಳಿದ್ದು: “ಏಯ್ಡ್ಸ್ ಅಂಟುರೋಗವು . . . ಇಂದು ಲಕ್ಷಾಂತರ ಮಂದಿ ಆಹುತಿಗಳನ್ನು ಮರಣಕ್ಕೆ ಕೊಂಡೊಯ್ಯುತ್ತಿದೆ . . . ಮತ್ತು ಬಲುಬೇಗನೆ ಇತಿಹಾಸದಲ್ಲೇ ಅತ್ಯಂತ ದುಬಾರಿಯ ಮತ್ತು ವಿಪತ್ಕಾರಕ ವ್ಯಾಧಿಯೂ ಆಗಬಹುದು. ಕಪ್ಪು ಮರಣ (ಉಗ್ರ ಪೇಗ್ಲು ವ್ಯಾಧಿ) 14 ನೆಯ ಶತಮಾನದಲ್ಲಿ ಸುಮಾರು 2 ಕೋಟಿ, 50 ಲಕ್ಷ ಪೀಡಿತ ಜನರನ್ನು ಕೊಂದಿತು. ಏಯ್ಡ್ಸ್ಗೆ ಕಾರಣವಾಗಿರುವ ಸೋಂಕಾಣು ಏಚ್ಐವಿ (HIV) ಯನ್ನು ಇಸವಿ 2000 ದೊಳಗೆ 3 ಕೋಟಿಯಿಂದ 11 ಕೋಟಿ ಜನರು ಪಡೆಯಲಿದ್ದಾರೆ, ಇಂದು ಅದರ ಸಂಖ್ಯೆ ಸುಮಾರು 1 ಕೋಟಿ 20 ಲಕ್ಷದಷ್ಟಿದೆ. ವಾಸಿಚಿಕಿತ್ಸೆಯ ಗೈರುಹಾಜರಿಯಲ್ಲಿ, ಏಚ್ಐವಿ ಸೋಂಕಿನ ಎಲ್ಲರು ನಿಶ್ಚಿತ ಮರಣವನ್ನು ಎದುರಿಸುವರು.”
20. ಮತ್ತಾಯ 24:4-22ರ ಆರಂಭದ ನೆರವೇರಿಕೆಯು ಯಾವುದನ್ನು ಆವರಿಸುವುದು, ಮತ್ತು ಬೇರೆ ಯಾವ ನೆರವೇರಿಕೆಯು ಸ್ಪಷ್ಟವಾಗಿಗಿದೆ?
20 ಹೀಗಿರಲಾಗಿ, ಅಪೊಸ್ತಲರ ಕೇಳಿಕೆಯನ್ನು ಯೇಸುವು ಹೇಗೆ ಉತ್ತರಿಸಿದನೆಂಬುದರ ಕುರಿತು ನಾವೇನು ತೀರ್ಮಾನಿಸಬೇಕು? ಯೆರೂಸಲೇಮಿನ ನಾಶನಕ್ಕೆ ನಡಿಸುವ ಮತ್ತು ನಾಶನವನ್ನು ಒಳಗೂಡಿದ ವಿಷಯಗಳನ್ನು ಅವನ ಪ್ರವಾದನೆಯು ನಿಖರವಾಗಿ ಮುಂತಿಳಿಸಿತ್ತು, ಮತ್ತು ಸಾ.ಶ. 70ನ್ನು ಹಿಂಬಾಲಿಸಿ ಬರಲಿದ್ದ ಕೆಲವು ಸಂಗತಿಗಳನ್ನು ಅದು ತಿಳಿಸಿತು. ಆದರೆ ಇವುಗಳಲ್ಲಿ ಹೆಚ್ಚಿನವು ಭವಿಷ್ಯತ್ತಿನಲ್ಲಿ ಒಂದು ದ್ವಿತೀಯ ಮತ್ತು ಮಹತ್ತರವಾದ ನೆರವೇರಿಕೆಯನ್ನು ಪಡೆಯಲಿಕ್ಕಿದ್ದು, ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ತರುವ ಒಂದು ಮಹಾ ಸಂಕಟಕ್ಕೆ ನಡಿಸಲಿವೆ. ಇದರ ಅರ್ಥವೇನಂದರೆ ಮತ್ತಾಯ 24:4-22 ರ ಯೇಸುವಿನ ಭವಿಷ್ಯದ್ವಾಣಿಯು ಮತ್ತು ಮಾರ್ಕ ಮತ್ತು ಲೂಕರ ಸಮಾನಾಂತರ ದಾಖಲೆಗಳು, ಸಾ.ಶ. 33 ರಿಂದ ಸಾ.ಶ. 70ರ ಸಂಕಟದ ತನಕ ನೆರವೇರಿದವು. ಆದರೂ, ಅವೇ ವಚನಗಳಿಗೆ, ಭವಿಷ್ಯತ್ತಿನಲ್ಲಿ ಮಹಾ ಸಂಕಟವೊಂದರ ಸಹಿತವಾಗಿ, ಒಂದು ದ್ವಿತೀಯ ನೆರವೇರಿಕೆಯೂ ಇರುವುದು. ಈ ಮಹತ್ತಾದ ನೆರವೇರಿಕೆಯು ನಮ್ಮೊಂದಿಗೆ ಇದೆ; ನಾವದನ್ನು ದಿನಂಪ್ರತಿ ನೋಡಬಲ್ಲೆವು.f
ಯಾವುದಕ್ಕೆ ನಡಿಸುತ್ತದೆ?
21, 22. ಅಧಿಕ ವಿಕಸನಗಳು ಬರಲಿದ್ದವೆಂಬ ಪ್ರವಾದನಾ ನಿರ್ದೇಶಕವನ್ನು ನಾವೆಲ್ಲಿ ಕಾಣುತ್ತೇವೆ?
21 ಸುಳ್ಳು ಪ್ರವಾದಿಗಳು ‘ಅನ್ಯಜನಾಂಗಗಳ ನೇಮಿತ ಸಮಯಗಳು ಪೂರೈಸುವ’ ಮುಂಚಿನ ದೀರ್ಘ ಸಮಯಾವಧಿಯಲ್ಲಿ ಮೋಸಕರ ಸೂಚನೆಗಳನ್ನು ನಡಿಸುವುದನ್ನು ತಿಳಿಸುವುದರೊಂದಿಗೆ ಯೇಸು ತನ್ನ ಪ್ರವಾದನೆಯನ್ನು ಕೊನೆಗೊಳಿಸಲಿಲ್ಲ. (ಲೂಕ 21:24; ಮತ್ತಾಯ 24:23-26; ಮಾರ್ಕ 13:21-23) ಭೂವ್ಯಾಪಕವಾಗಿ ಅವಲೋಕಿಸಲ್ಪಡುವ, ಸಂಭವಿಸಲಿರುವ ಇತರ ಬೆರಗುಗೊಳಿಸುವ ಸಂಗತಿಗಳ ಕುರಿತು ತಿಳಿಸುವುದನ್ನು ಅವನು ಮುಂದರಿಸಿದನು. ಇವು ಮನುಷ್ಯಕುಮಾರನು ಬಲದಿಂದಲೂ ಮಹಿಮೆಯಿಂದಲೂ ಬರುವುದರೊಂದಿಗೆ ಜೊತೆಗೂಡಿಸಲ್ಪಡಲಿದ್ದವು. ಮಾರ್ಕ 13:24-27 ಆತನ ಮುಂದುವರಿದ ಪ್ರವಾದನೆಯ ಪ್ರತಿನಿಧಿರೂಪವಾಗಿದೆ:
22 “ಇದಲ್ಲದೆ ಆ ದಿನಗಳಲ್ಲಿ ಆ ಸಂಕಟ ತೀರಿದ ಮೇಲೆ ಸೂರ್ಯನು ಕತ್ತಲಾಗಿ ಹೋಗುವನು; ಚಂದ್ರನು ಬೆಳಕುಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಉದುರುತ್ತಿರುವವು; ಆಕಾಶದಲ್ಲಿರುವ ಶಕ್ತಿಗಳು ಕದಲುವವು. ಆಗ ಮನುಷ್ಯಕುಮಾರನು ಬಹುಬಲದಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವದನ್ನು ಕಾಣುವರು. ಮತ್ತು ಆತನು ತನ್ನ ದೂತರನ್ನು ಕಳುಹಿಸಿ ತಾನು ಆದುಕೊಂಡವರನ್ನು ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವನು.”
23. ಮತ್ತಾಯ 24:29-31ರ ನೆರವೇರಿಕೆಗಾಗಿ ಸಾ.ಶ. ಒಂದನೆಯ ಶತಮಾನದ ಅನಂತರ ದೀರ್ಘ ಸಮಯಕ್ಕೆ ನಾವೇಕೆ ನೋಡಬಲ್ಲೆವು?
23 ಪುನರುತಿತ್ಥ ಯೇಸು ಕ್ರಿಸ್ತನಾಗಿರುವ ಮನುಷ್ಯಕುಮಾರನು ಸಾ.ಶ. 70ರ ಯೆಹೂದ್ಯ ವ್ಯವಸ್ಥೆಯ ನಾಶನವನ್ನು ಹಿಂಬಾಲಿಸಿ, ಆ ಪ್ರೇಕ್ಷಣೀಯ ವಿಧಾನದಲ್ಲಿ ಬರಲಿಲ್ಲ. ಮತ್ತಾಯ ಅಧ್ಯಾಯ 24:30 ಗಮನಿಸುವಂತೆ, ಲೋಕದ ಎಲ್ಲಾ ಜನಾಂಗಗಳು ಅವನನ್ನು ತಿಳಿದುಕೊಳ್ಳಲಿಲ್ಲ ಖಂಡಿತ, ಅಥವಾ ಸ್ವರ್ಗೀಯ ದೇವದೂತರು ಆಗ ಇಡೀ ಭೂಮಿಯಿಂದ ಅಭಿಷಿಕ್ತ ಕ್ರೈಸ್ತರೆಲ್ಲರನ್ನು ಒಟ್ಟುಗೂಡಿಸಿದ್ದೂ ಇಲ್ಲ. ಹಾಗಾದರೆ, ಯೇಸುವಿನ ಆಶ್ಚರ್ಯಕರ ಪ್ರವಾದನೆಯ ಈ ಹೆಚ್ಚಿನ ಭಾಗವು ಯಾವಾಗ ನೆರವೇರಲ್ಪಡಲಿದೆ? ನಮ್ಮ ಸುತ್ತಮುತ್ತಲೂ ಈಗ ನಡೆಯುತ್ತಿರುವ ಘಟನೆಗಳಲ್ಲಿ ಅದು ನೆರವೇರಿಕೆಯನ್ನು ಕಾಣುತ್ತಿದೆಯೇ, ಇಲ್ಲವೇ, ನಿಜವಾಗಿ, ಸಮೀಪ ಭವಿಷ್ಯದಲ್ಲಿ ನಾವು ನಿರೀಕ್ಷಿಸಬಹುದಾದ ಸಂಗತಿಗಳ ದೈವಿಕ ಒಳನೋಟವನ್ನು ಅದು ನಮಗೆ ನೀಡುತ್ತಿದೆಯೇ? ನಾವು ಖಂಡಿತವಾಗಿ ಅದನ್ನು ತಿಳಿಯಲು ಬಯಸತಕ್ಕದ್ದು ಯಾಕಂದರೆ ಲೂಕನು ಯೇಸುವಿನ ಪ್ರಬೋಧನೆಯನ್ನು ದಾಖಲಿಸಿದ್ದು: “ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ.”—ಲೂಕ 21:28.
[ಅಧ್ಯಯನ ಪ್ರಶ್ನೆಗಳು]
a ಈ ಅಧ್ಯಾಯಗಳ ಭಾಗಗಳನ್ನು 14 ಮತ್ತು 15 ನೆಯ ಪುಟಗಳಲ್ಲಿರುವ ತಖ್ತೆಯಲ್ಲಿ ನೋಡಬಹುದಾಗಿದೆ; ಚುಕ್ಕೆ ಹಾಕಿದ ಗೀಟುಗಳು ಸಮಾಂತರ ವಿಭಾಗಗಳನ್ನು ಗುರುತಿಸುತ್ತವೆ.
b ಈ ಘಟನೆಗಳ ಐತಿಹಾಸಿಕ ಉದಾಹರಣೆಗಳಿಗಾಗಿ, ಜನವರಿ 15, 1970 ರ ದ ವಾಚ್ಟವರ್, ಪುಟಗಳು 43-5 ನೋಡಿರಿ.
c ಟೊ’ಟೆ ಮತ್ತಾಯ (ಅಧ್ಯಾಯ 24 ರಲ್ಲಿ 9 ಸಲ) ದಲ್ಲಿ 80 ಕ್ಕಿಂತಲೂ ಹೆಚ್ಚು ಸಾರಿ ಮತ್ತು ಲೂಕ ಪುಸ್ತಕದಲ್ಲಿ 15 ಸಲ ಗೋಚರಿಸುತ್ತದೆ. ಮಾರ್ಕನು ಟೊ’ಟೆ ಯನ್ನು ಆರು ಸಲ ಮಾತ್ರ ಬಳಸಿದನು, ಆದರೆ ಅವುಗಳಲ್ಲಿ ನಾಲ್ಕು “ಆ ಸೂಚನೆ” ಯನ್ನು ಒಳಗೊಂಡಿರುತ್ತವೆ.
d ಬ್ರಿಟಿಷ್ ಗ್ರಂಥಕರ್ತ ಮ್ಯಾಥ್ಯೂ ಹೆನ್ರಿ ಹೇಳಿಕೆಯನ್ನಿತ್ತದ್ದು: “ಕಸೀಯ್ದರಿಂದ ಯೆರೂಸಲೇಮಿನ ನಾಶನವು ಅತಿ ಉಗ್ರತೆಯದ್ದಾಗಿತ್ತು, ಆದರೆ ಇದು ಅದನ್ನೂ ಮೀರಿತ್ತು. ಇದು ಯೆಹೂದ್ಯರೆಲ್ಲರ . . . ಒಂದು ವಿಶ್ವವ್ಯಾಪಕ ಹತ್ಯಕ್ಕೆ ಬೆದರಿಕೆಹಾಕಿತು.”
e ಲೂಕ 21:24ರ ಅನಂತರ ಲೂಕನ ವೃತ್ತಾಂತದಲ್ಲಿ ಒತ್ತಿನಲ್ಲಿ ಒಂದು ಬದಲಾವಣೆಯನ್ನು ಅನೇಕರು ಕಾಣುತ್ತಾರೆ. ಡಾ. ಲಿಯನ್ ಮೋರಿಸ್ ಗಮನಿಸುವುದು: “ಯೇಸು ಅನ್ಯಜನಗಳ ಕಾಲಗಳ ಕುರಿತು ಮಾತಾಡಲು ತೊಡಗುತ್ತಾನೆ. . . . ಹೆಚ್ಚಿನ ವಿದ್ವಾಂಸರ ಅಭಿಪ್ರಾಯದಲ್ಲಿ ಗಮನವು ಈಗ ಮನುಷ್ಯ ಕುಮಾರನ ಬರೋಣದೆಡೆಗೆ ಚಲಿಸುತ್ತದೆ.” ಪ್ರೊಫೆಸರ್ ಆರ್. ಗಿನ್ಸ್ ಬರೆಯುವುದು: “ಮನುಷ್ಯ ಕುಮಾರನ ಬರೋಣ—(ಮತ್ತಾ. 24:29-31; ಮಾರ್ಕ 13:24-27). ‘ಅನ್ಯಜನಗಳ ಕಾಲಗಳ’ದ ತಿಳಿಸುವಿಕೆಯು ಈ ಮುಖ್ಯ ವಿಷಯಕ್ಕೆ ಒಂದು ಪೀಠಿಕೆಯನ್ನು ಒದಗಿಸುತ್ತದೆ; [ಲೂಕನ] ನಿರೂಪಣೆಯು ಈಗ ಯೆರೂಸಲೇಮಿನ ಧ್ವಂಸದ ಆಚೇಕಡೆ ಮುಂದಣ ಭವಿಷ್ಯಕ್ಕೆ ಒಯ್ಯಲ್ಪಟ್ಟಿದೆ.”
f ಪ್ರೊಫೆಸರ್ ವಾಲರ್ಟ್ ಎಲ್. ಲೆಫೆಲ್ಡ್ ಬರೆಯುವುದು: “ಯೇಸುವಿನ ಭವಿಷ್ಯದ್ವಾಣಿಗಳು ಎರಡು ಹಂತಗಳನ್ನು ಸಂಘಟಿಸಿವೆಯೆಂದು ಊಹಿಸಲು ಖಂಡಿತ ಶಕ್ಯವಾಗಿದೆ: (1) ಆಲಯವನ್ನು ಒಳಗೂಡಿರುವ ಸಾ.ಶ. 70ರ ಘಟನೆಗಳು ಮತ್ತು (2) ಹೆಚ್ಚು ಭವಿಷ್ಯದ್ದರ್ಶನ ಪರಿಭಾಷೆಗಳಲ್ಲಿ ವರ್ಣಿಸಲಾದ, ದೂರದ ಭವಿಷ್ಯದಲ್ಲಿ ನಡೆಯಲಿರುವವುಗಳು.” ಜೆ.ಆರ್. ಡೆಮೆಲೊ ಇವರಿಂದ ಪ್ರಕಟವಾದ ವ್ಯಾಖ್ಯಾನವು ಅನ್ನುವುದು: “ಈ ಮಹಾ ಉಪನ್ಯಾಸದ ಅಧಿಕ ಗಂಭೀರ ಕಷ್ಟಗಳಲ್ಲಿ ಹೆಚ್ಚಿನವು ಮಾಯವಾಗುವುದು ಯಾವಾಗವೆಂದರೆ, ನಮ್ಮ ಕರ್ತನು ಅದರಲ್ಲಿ ಒಂದು ಘಟನೆಗಲ್ಲ, ಎರಡಕ್ಕೆ ನಿರ್ದೇಶಿಸಿದ್ದಾನೆ ಮತ್ತು ಮೊದಲನೆಯದು ಎರಡನೆಯದರ ಮುನ್ಸೂಚಕವಾಗಿದೆ ಎಂಬದನ್ನು ಅರಿತುಕೊಂಡಾಗಲೇ. . . . ‘ಅನ್ಯಜನಗಳ ಕಾಲಗಳ’ ಕುರಿತು ಮಾತಾಡುವ [ಲೂಕ] 21:24 ವಿಶೇಷವಾಗಿ, . . . ಯೆರೂಸಲೇಮಿನ ಪತನ ಮತ್ತು ಲೋಕದ ಅಂತ್ಯದ ನಡುವೆ ಒಂದು ಅನಿರ್ದಿಷ್ಟ ವಿರಾಮಕಾಲವನ್ನು ಇಡುತ್ತದೆ.”
ಜ್ಞಾಪಕಕ್ಕೆ ತರುತ್ತೀರೊ?
▫ ಮತ್ತಾಯ 24:3 ರಲ್ಲಿನ ಪ್ರಶ್ನೆಗೆ ಯೇಸುವಿನ ಉತ್ತರವು ಸಾ.ಶ. 70ರ ತನಕ ನಡಿಸುವ ಯಾವ ನೆರವೇರಿಕೆಯನ್ನು ಪಡೆಯಿತು?
▫ ಯೇಸುವಿನ ಪ್ರವಾದನೆಯನ್ನು ತಿಳಿದುಕೊಳ್ಳಲು ಟೊ’ಟೆ ಪದ ಪ್ರಯೋಗವು ನಮಗೆ ಹೇಗೆ ಸಹಾಯಮಾಡುತ್ತದೆ?
▫ ಹಿಂದೆಂದೂ ಆಗದಂಥ “ಮಹಾ ಸಂಕಟ”ವು ಒಂದನೆಯ ಶತಕದಲ್ಲಾದದ್ದು ಯಾವ ಅರ್ಥದಲ್ಲಿ?
▫ ಇಂದು ನಮ್ಮನ್ನು ಒಳಗೂಡಿಸುವ ಯೇಸುವಿನ ಪ್ರವಾದನೆಯ ಯಾವ ಎರಡು ಅಸದೃಶ್ಯ ವೈಶಿಷ್ಟ್ಯಗಳಿಗೆ ಲೂಕನು ನಿರ್ದೇಶಿಸುತ್ತಾನೆ?
▫ ಮತ್ತಾಯ 24:4-22ರ ಪ್ರವಾದನೆಯ ಒಂದು ದ್ವಿತೀಯ ಮತ್ತು ಮಹತ್ತರವಾದ ನೆರವೇರಿಕೆಗೆ ಯಾವ ಸೂಚನೆ ನಿರ್ದೇಶಿಸುತ್ತದೆ?
[Chart on page 14, 15]
“ಯೇಸು ಅವರಿಗೆ ಉತ್ತರವಾಗಿ ಹೇಳಿದ್ದೇನಂದರೆ—ಯಾರಾದರೂ ನಿಮ್ಮನ್ನು ಮೋಸಗೊಳಿಸಾರು ನೋಡಿಕೊಳ್ಳಿರಿ. ಯಾಕಂದರೆ ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡು—ನಾನು ಕ್ರಿಸ್ತನು, ನಾನು ಕ್ರಿಸ್ತನು ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು. ಇದಲ್ಲದೆ ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳಬೇಕಾಗಿರುವದು. ಕಳವಳಪಡದಂತೆ ನೋಡಿಕೊಳ್ಳಿರಿ; ಯಾಕಂದರೆ ಹಾಗಾಗುವದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.
“ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು; ಇವೆಲ್ಲಾ [ನೂತನ ಕಾಲವು ಹುಟ್ಟುವ] ಪ್ರಸವವೇದನೆಯ ಪ್ರಾರಂಭ.
“ಆಗ (ತದನಂತರ, NW) ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆ ಮಾಡುವರು. ಆಗ (ತದನಂತರ, NW) ಅನೇಕರು ಹಿಂಜರಿದು ಒಬ್ಬರನ್ನೊಬ್ಬರು ಹಿಡುಕೊಡುವರು: ಒಬ್ಬರ ಮೇಲೊಬ್ಬರು ದ್ವೇಷಮಾಡುವರು. ಬಹುಮಂದಿ ಸುಳ್ಳು ಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು. ಇದಲ್ಲದೆ ಅಧರ್ಮವು ಹೆಚ್ಚಾಗುವದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿ ಹೋಗುವದು. ಆದರೆ ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು. ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ (ತದನಂತರ, NW) ಅಂತ್ಯವು ಬರುವದು.
------------------------------------------------------------------
“ಆದದರಿಂದ ಪ್ರವಾದಿಯಾದ ದಾನಿಯೇಲನು ಹೇಳಿದಂಥ ಹಾಳುಮಾಡುವ ಅಸಹ್ಯ ವಸ್ತುವು ಪವಿತ್ರಸ್ಥಾನದಲ್ಲಿ ನಿಂತಿರುವದನ್ನು ನೀವು ಕಾಣುವಾಗ (ತದನಂತರ, NW) (ಇದನ್ನು ಓದುವವನು ತಿಳುಕೊಳ್ಳಲಿ) ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿರುವದನ್ನು ತೆಗೆದುಕೊಳ್ಳುವದಕ್ಕೆ ಇಳಿಯದೆ, ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂದಿರುಗಿ ಬಾರದೆ ಓಡಿಹೋಗಲಿ. ಆದರೆ ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ. ಆಗ (ತದನಂತರ, NW) ಮಹಾ ಸಂಕಟವು ಉಂಟಾಗುವದರಿಂದ ನಿಮ್ಮ ಪಲಾಯನವು ಚಳಿಗಾಲದಲ್ಲಿಯಾಗಲಿ ಸಬ್ಬತ್ದಿನದಲ್ಲಿಯಾಗಲಿ ಆಗಬಾರದೆಂದು ಪ್ರಾರ್ಥನೆಮಾಡಿರಿ. ಅಂಥ ಸಂಕಟವು ಲೋಕ ಹುಟ್ಟಿದ್ದು ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ; ಇನ್ನು ಮೇಲೆಯೂ ಆಗುವದಿಲ್ಲ. [ಕರ್ತನು] ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡುವನು.
------------------------------------------------------------------
“ಆಗ [ತದನಂತರ, NW] ಯಾರಾದರೂ ನಿಮಗೆ—ಇಗೋ, ಕ್ರಿಸ್ತನು ಇಲ್ಲಿದ್ದಾನೆ, ಅಗೋ, ಅಲ್ಲಿದ್ದಾನೆ ಎಂದು ಹೇಳಿದರೆ ನಂಬಬೇಡಿರಿ. ಸುಳ್ಳು ಕ್ರಿಸ್ತರೂ ಸುಳ್ಳು ಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರಾದುಕೊಂಡವರನ್ನು ಸಹ ಮೋಸಗೊಳಿಸುವದಕ್ಕೋಸ್ಕರ ದೊಡ್ಡ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು. ಇಗೋ ನಿಮಗೆ ಮುಂದಾಗಿ ಹೇಳಿದ್ದೇನೆ. ಆದಕಾರಣ ಯಾರಾದರೂ ನಿಮಗೆ—ಅಗೋ ಕ್ರಿಸ್ತನು ಇದ್ದಾನೆಂದು ಹೇಳಿದರೆ ಹೊರಟುಹೋಗಬೇಡಿರಿ; ಇಗೋ ಕೋಣೆಗಳಲ್ಲಿದ್ದಾನೆಂದು ಹೇಳಿದರೆ ನಂಬಬೇಡಿರಿ. ಹೇಗೆ ಮಿಂಚು ಮೂಡಣದಲ್ಲಿ ಹುಟ್ಟಿ ಪಡುವಣದ ವರೆಗೂ ಕಾಣಿಸುತ್ತದೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆ [ಸಾನ್ನಿಧ್ಯ, NW] ಇರುವದು. ಹೆಣ ಬಿದ್ದಲ್ಲಿ ಹದ್ದುಗಳು ಕೂಡುವವು.
------------------------------------------------------------------
------------------------------------------------------------------
“ಆ ದಿನಗಳ ಸಂಕಟವು ತೀರಿದಕೂಡಲೆ ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕುಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು. ಆಗ [ತದನಂತರ, NW] ಮನುಷ್ಯ ಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು. ಆಗ [ತದನಂತರ, NW] ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು, ಮತ್ತು ಮನುಷ್ಯ ಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಆಕಾಶದ ಮೇಘಗಳ ಮೇಲೆ ಬರುವದನ್ನು ಕಾಣುವರು. ಮತ್ತು ಆತನು ತುತೂರಿಯ ಮಹಾ ಶಬ್ದದಿಂದ ತನ್ನ ದೂತರನ್ನು ಕಳುಹಿಸುವನು. ಅವರು ಆತನು ಆದುಕೊಂಡವರನ್ನು ಆಕಾಶದ ಒಂದ ಕಡೆಯಿಂದ ಮತ್ತೊಂದು ಕಡೆಯ ವರೆಗೂ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವರು.”
“ಯೇಸು ಅವರಿಗೆ ಹೇಳಿದ್ದೇನಂದರೆ—ಯಾರಾದರೂ ನಿಮ್ಮನ್ನು ಮೋಸಗೊಳಿಸಾರು ನೋಡಿಕೊಳ್ಳಿರಿ. ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡು—ನಾನು ಕ್ರಿಸ್ತನು, ನಾನು ಕ್ರಿಸ್ತನು ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು. ಇದಲ್ಲದೆ ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವದು ಅಗತ್ಯ; ಆದರೂ ಇದು ಇನ್ನೂ ಅಂತ್ಯಕಾಲವಲ್ಲ.
“ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಭೂಕಂಪಗಳು ಅಲ್ಲಲ್ಲಿ ಆಗುವವು; ಬರಗಳು ಬರುವವು; ಇವೆಲ್ಲಾ [ನೂತನ ಕಾಲವು ಹುಟ್ಟುವ] ಪ್ರಸವವೇದನೆಯ ಪ್ರಾರಂಭ.
“ಆದರೆ ನಿಮ್ಮ ವಿಷಯದಲ್ಲಿ ನೋಡಿಕೊಳ್ಳಿರಿ. ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಸಾಕ್ಷಿಗಳಾಗಿ ನಿಲ್ಲಿಸುವರು. ಹೀಗೆ ಅವರಿಗೆ ಸಾಕ್ಷಿಯಾಗುವದು. ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು. ನಿಮ್ಮನ್ನು ಹಿಡುಕೊಂಡುಹೋಗಿ ಒಪ್ಪಿಸುವಾಗ ಏನು ಹೇಳಬೇಕೆಂದು ಮುಂಚಿತವಾಗಿ ಚಿಂತೆಮಾಡಬೇಡಿರಿ; ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವಂಥ ಮಾತನ್ನೇ ಆಡಿರಿ; ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ. ಇದಲ್ಲದೆ ಅಣ್ಣನು ತಮ್ಮನನ್ನು ತಂದೆಯು ಮಗನನ್ನು ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ಮತ್ತು ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇವರೆಗೂ ತಾಳುವವನು ರಕ್ಷಣೆಹೊಂದುವನು.
------------------------------------------------------------------
“ಇದಲ್ಲದೆ ಹಾಳುಮಾಡುವ ಅಸಹ್ಯವಸ್ತುವು ನಿಲ್ಲಬಾರದು ಸ್ಥಳದಲ್ಲಿ ನಿಂತಿರುವದನ್ನು ನೀವು ಕಾಣುವಾಗ [ತದನಂತರ, NW] (ಇದನ್ನು ಓದುವವನು ತಿಳುಕೊಳ್ಳಲಿ) ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ. ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿಂದ ಏನಾದರೂ ತೆಗೆದುಕೊಳ್ಳುವದಕ್ಕೆ ಇಳಿಯದೆ ಒಳಕ್ಕೆ ಹೋಗದೆ ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವದಕ್ಕೆ ಹಿಂತಿರಿಗಿ ಬಾರದೆ ಓಡಿಹೋಗಲಿ. ಆದರೆ ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಆ ದಿವಸಗಳು ಸಂಕಟದಿವಸಗಳಾಗಿರುವದರಿಂದ ಇದೆಲ್ಲಾ ಚಳಿಗಾಲದಲ್ಲಿ ಆಗಬಾರದೆಂದು ಪ್ರಾರ್ಥನೆ ಮಾಡಿರಿ. ಅಂಥ ಸಂಕಟವು ದೇವರು ಮಾಡಿದ ಸೃಷ್ಟಿಮೊದಲುಗೊಂಡು ಇಂದಿನ ವರೆಗೂ ಆಗಲಿಲ್ಲ; ಇನ್ನು ಮೇಲೆಯೂ ಆಗುವದಿಲ್ಲ. ಕರ್ತನು ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡಿದ್ದಾನೆ.
------------------------------------------------------------------
“ಆಗ [ತದನಂತರ, NW] ಯಾರಾದರೂ ನಿಮಗೆ—ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ ಎಂದು ಹೇಳಿದರೆ ನಂಬಬೇಡಿರಿ; ಸುಳ್ಳು ಕ್ರಿಸ್ತರೂ ಸುಳ್ಳು ಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರಾದುಕೊಂಡವರನ್ನು ಮೋಸಗೊಳಿಸುವದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು. ನೀವಂತು ನೋಡಿಕೊಳ್ಳಿರಿ; ನಿಮಗೆ ಎಲ್ಲವನ್ನು ಮುಂದಾಗಿ ಹೇಳಿದ್ದೇನೆ.
------------------------------------------------------------------
------------------------------------------------------------------
“ಇದಲ್ಲದೆ ಆ ದಿನಗಳಲ್ಲಿ ಆ ಸಂಕಟ ತೀರಿದ ಮೇಲೆ ಸೂರ್ಯನು ಕತ್ತಲಾಗಿ ಹೋಗುವನು; ಚಂದ್ರನು ಬೆಳಕು ಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಉದುರುತ್ತಿರುವುವು. ಆಕಾಶದಲ್ಲಿರುವ ಶಕ್ತಿಗಳು ಕದಲುವವು. ಆಗ [ತದನಂತರ, NW] ಮನುಷ್ಯ ಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವದನ್ನು ಕಾಣುವರು. ಮತ್ತು [ತದನಂತರ, NW] ಆತನು ದೂತರನ್ನು ಕಳುಹಿಸಿ ತಾನು ಆದುಕೊಂಡವರನ್ನು ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೂ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವನು.”
“ಆತನು ಹೇಳಿದ್ದೇನಂದರೆ—ನೀವು ಮೋಸಹೋಗದಂತೆ ನೋಡಿಕೊಳ್ಳಿರಿ. ಯಾಕಂದರೆ ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡು ನಾನು ಕ್ರಿಸ್ತನು ನಾನು ಕ್ರಿಸ್ತನು ಎಂತಲೂ ಆ ಕಾಲ ಹತ್ತಿರವಾಯಿತು ಎಂತಲೂ ಹೇಳುವರು; ಅವರ ಹಿಂದೆ ಹೋಗಬೇಡಿರಿ. ಇದಲ್ಲದೆ ಯುದ್ಧಗಳೂ ಆಗುವದನ್ನು ನೀವು ಕೇಳುವಾಗ ದಿಗಿಲು ಪಡಬೇಡಿರಿ; ಯಾಕಂದರೆ ಇದೆಲ್ಲಾ ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು.
“ಆಗ [ತದನಂತರ, NW] ಆತನು ಅವರಿಗೆ ಹೇಳಿದ್ದೇನಂದರೆ—ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಮಹಾ ಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು; ಉತ್ಪಾತಗಳೂ ಆಕಾಶದಲ್ಲಿ ಮಹಾ ಸೂಚನೆಗಳೂ ತೋರುವವು.
“ಆದರೆ ಇವೆಲ್ಲಾ ನಡೆಯುವದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಗಳ ಅಧಿಕಾರಸ್ಥರ ವಶಕ್ಕೆ ಕೊಟ್ಟು ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ತೆಗೆದುಕೊಂಡುಹೋಗಿ ಹಿಂಸೆಪಡಿಸುವರು. ಇದು ಸಾಕ್ಷಿಹೇಳುವದಕ್ಕೆ ನಿಮಗೆ ಅನುಕೂಲವಾಗುವದು. ಆದದರಿಂದ ಏನು ಉತ್ತರಕೊಡಬೇಕೆಂಬ ವಿಷಯದಲ್ಲಿ ನಾವು ಮುಂದಾಗಿ ಯೋಚಿಸುವದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ. ಯಾಕಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರುನಿಲ್ಲುವದಕ್ಕೂ ಎದುರುಮಾತಾಡುವದಕ್ಕೂ ಆಗದಂಥ ಬಾಯನ್ನೂ ಬುದ್ಧಿಯನ್ನೂ ನಾನೇ ಕೊಡುತ್ತೇನೆ. ಆದರೆ ತಂದೆತಾಯಿಗಳೂ ಅಣತ್ಣಮ್ಮಂದಿರೂ ಬಂಧುಬಾಂಧವರೂ ಸ್ನೇಹಿತರೂ ನಿಮ್ಮನ್ನು ಒಪ್ಪಿಸಿಕೊಡುವರು; ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೂ ನಿಮ್ಮದೊಂದು ತಲೆಕೂದಲಾದರೂ ನಾಶವಾಗುವದಿಲ್ಲ. ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ.
------------------------------------------------------------------
“ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು [ತದನಂತರ, NW] ತಿಳುಕೊಳ್ಳಿರಿ. ಆಗ [ತದನಂತರ, NW] ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ. ಯಾಕಂದರೆ ಬರೆದಿರುವದೆಲ್ಲಾ ನೆರವೇರುವದಕ್ಕಾಗಿ ಅವು ದಂಡನೆಯ ದಿವಸಗಳಾಗಿವೆ. ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾ ವಿಪತ್ತೂ ಈ ಜನರಿಗೆ ಉಗ್ರದಂಡನೆಯೂ ಆಗುವವು. ಅವರು ಕತ್ತಿಯ ಬಾಯಿಗೆ ಬೀಳುವರು; ಅವರನ್ನು ಅನ್ಯದೇಶಗಳಿಗೆಲ್ಲಾ ಸೆರೆಹಿಡಿದುಕೊಂಡು ಹೋಗುವರು;
------------------------------------------------------------------
ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವದು.
------------------------------------------------------------------
------------------------------------------------------------------
“ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂಮಿಯ ಮೇಲೆ ಸಮದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. ಆಕಾಶದ ಶಕ್ತಿಗಳು ಕದಲುವದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು. ಆಗ [ತದನಂತರ, NW] ಮನುಷ್ಯಕುಮಾರನು ಬಲದಿಂದಲೂ ಬಹುಮಹಿಮೆಯಿಂದಲೂ ಮೇಘದಲ್ಲಿ ಬರುವದನ್ನು ಕಾಣುವರು. ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆ ಸಮೀಪವಾಗಿದೆ ಅಂದನು.”
[ಪುಟ 10 ರಲ್ಲಿರುವ ಚಿತ್ರ]
ಸಾ.ಶ. 70ರಲ್ಲಿನ ಸಂಕಟವು ಯೆರೂಸಲೇಮ್ ಮತ್ತು ಯೆಹೂದ್ಯ ವ್ಯವಸ್ಥೆಯೆಂದೂ ಅನುಭವಿಸಿದವುಗಳಲ್ಲಿ ಅತ್ಯಂತ ಮಹತ್ತಾದದ್ದಾಗಿತ್ತು