ಬೈಬಲು ನಿಜವಾಗಿಯೂ ಏನಾಗಿದೆಯೊ ಅದಕ್ಕಾಗಿ ಅದನ್ನು ಸ್ವೀಕರಿಸಿರಿ
“ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸುತ್ತಿ ಮಾಡುತ್ತೇವೆ. ಅದು ನಿಜವಾಗಿ ದೇವರ ವಾಕ್ಯವೇ; ಅದು ನಂಬುವವರಾದ ನಿಮ್ಮೊಳಗೆ ಬಲವಾಗಿ ಕೆಲಸನಡಿಸುತ್ತದೆ.”—1 ಥೆಸಲೊನೀಕ 2:13.
1. ಬೈಬಲಿನಲ್ಲಿನ ಯಾವ ಬಗೆಯ ಮಾಹಿತಿಯು ಆ ಪುಸ್ತಕವನ್ನು ನಿಜವಾಗಿಯೂ ಎದ್ದುಕಾಣುವಂತಹ ಪುಸ್ತಕವನ್ನಾಗಿ ಮಾಡುತ್ತದೆ?
ಪವಿತ್ರ ಬೈಬಲು, ಲೋಕದಲ್ಲಿ ಅತ್ಯಂತ ವಿಸ್ತಾರವಾಗಿ ಭಾಷಾಂತರಿಸಲ್ಪಟ್ಟ ಮತ್ತು ವ್ಯಾಪಕವಾಗಿ ಹಂಚಲ್ಪಟ್ಟ ಪುಸ್ತಕ. ಸಾಹಿತ್ಯದ ಮಹಾನ್ ಕೃತಿಗಳಲ್ಲಿ ಅದು ಒಂದೆಂದು ಸುಲಭವಾಗಿ ಅಂಗೀಕರಿಸಲ್ಪಡುತ್ತದೆ. ಆದರೆ ಹೆಚ್ಚು ಪ್ರಾಮುಖ್ಯವಾಗಿ, ಜೀವನದಲ್ಲಿ ಅವರ ವೃತ್ತಿ ಅಥವಾ ಸ್ಥಾನವು ಏನೇ ಆಗಿರಲಿ, ಪ್ರತಿಯೊಂದು ಕುಲ ಮತ್ತು ಪ್ರತಿಯೊಂದು ರಾಷ್ಟ್ರದ ಜನರಿಗೆ ಅಗತ್ಯವಾಗಿ ಬೇಕಾಗಿರುವ ಮಾರ್ಗದರ್ಶನವನ್ನು ಬೈಬಲ್ ಒದಗಿಸುತ್ತದೆ. (ಪ್ರಕಟನೆ 14:6, 7) ಮನಸ್ಸನ್ನೂ ಹೃದಯವನ್ನೂ ತೃಪ್ತಿಗೊಳಿಸುವ ಒಂದು ವಿಧದಲ್ಲಿ, ಬೈಬಲು ಇಂತಹ ಪ್ರಶ್ನೆಗಳನ್ನು ಉತ್ತರಿಸುತ್ತದೆ: ಮಾನವ ಜೀವಿತದ ಉದ್ದೇಶವೇನು? (ಆದಿಕಾಂಡ 1:28; ಪ್ರಕಟನೆ 4:11) ಮಾನವಜಾತಿಯ ಸರಕಾರಗಳು ಬಾಳುವ ಶಾಂತಿ ಮತ್ತು ಭದ್ರತೆಯನ್ನು ತರಲು ಅಶಕ್ತವಾಗಿರುವುದು ಏಕೆ? (ಯೆರೆಮೀಯ 10:23; ಪ್ರಕಟನೆ 13:1, 2) ಜನರು ಸಾಯುವುದೇಕೆ? (ಆದಿಕಾಂಡ 2:15-17; 3:1-6; ರೋಮಾಪುರ 5:12) ಈ ತೊಂದರೆಯುಕ್ತ ಲೋಕದ ಮಧ್ಯದಲ್ಲಿ, ಜೀವನದ ಸಮಸ್ಯೆಗಳನ್ನು ನಾವು ಯಶಸ್ವಿಕರವಾಗಿ ಹೇಗೆ ನಿಭಾಯಿಸಬಲ್ಲೆವು? (ಕೀರ್ತನೆ 119:105; ಜ್ಞಾನೋಕ್ತಿ 3:5, 6) ಭವಿಷ್ಯವು ನಮಗಾಗಿ ಏನನ್ನು ಕಾದಿರಿಸಿದೆ?—ದಾನಿಯೇಲ 2:44; ಪ್ರಕಟನೆ 21:3-5.
2. ನಮ್ಮ ಪ್ರಶ್ನೆಗಳಿಗೆ ಬೈಬಲು ಸಂಪೂರ್ಣವಾಗಿ ನಂಬಲರ್ಹವಾದ ಉತ್ತರಗಳನ್ನು ಒದಗಿಸುವುದು ಏಕೆ?
2 ಇಂತಹ ಪ್ರಶ್ನೆಗಳನ್ನು ಬೈಬಲ್ ಅಧಿಕಾರಯುಕ್ತವಾಗಿ ಏಕೆ ಉತ್ತರಿಸುತ್ತದೆ? ಏಕೆಂದರೆ ಅದು ದೇವರ ವಾಕ್ಯ. ಬರೆಸಲು ಆತನು ಮಾನವರನ್ನು ಬಳಸಿದನು, ಆದರೆ 2 ತಿಮೊಥೆಯ 3:16 ರಲ್ಲಿ ಸ್ಪಷ್ಟವಾಗಿಗಿ ತಿಳಿಸಲಾದಂತೆ, ‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾದದ್ದು.’ ಅದು ಮಾನವ ಘಟನೆಗಳ ವ್ಯಕ್ತಿಗತ ಅರ್ಥವಿವರಣೆಯ ಉತ್ಪನ್ನವಲ್ಲ. “ಯಾಕಂದರೆ ಯಾವ ಪ್ರವಾದನೆಯೂ [ಬರಲಿರುವ ಸಂಗತಿಗಳ ಘೋಷಣೆಗಳು, ದೈವಿಕ ಆಜ್ಞೆಗಳು, ಬೈಬಲಿನ ನೈತಿಕ ಮಟ್ಟವು] ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.”—2 ಪೇತ್ರ 1:21.
3. (ಎ) ವಿಭಿನ್ನ ದೇಶಗಳಲ್ಲಿನ ಜನರಿಂದ ಬೈಬಲು ಎಷ್ಟು ಅಮೂಲ್ಯವಾಗಿ ಎಣಿಸಲ್ಪಟ್ಟಿದೆ ಎಂಬುದನ್ನು ತೋರಿಸುವ ಉದಾಹರಣೆಗಳನ್ನು ಕೊಡಿರಿ. (ಬಿ) ಶಾಸ್ತ್ರಗಳನ್ನು ಓದುವ ಸಲುವಾಗಿ ವ್ಯಕ್ತಿಗಳು ತಮ್ಮ ಜೀವಿತಗಳನ್ನು ಅಪಾಯಕ್ಕೆ ಈಡುಮಾಡಲು ಸಿದ್ಧರಾಗಿದ್ದರು ಏಕೆ?
3 ಬೈಬಲಿನ ಮೌಲ್ಯವನ್ನು ಗಣ್ಯಮಾಡುತ್ತಾ, ಅನೇಕ ಜನರು ಅದನ್ನು ಪಡೆಯಲು ಮತ್ತು ಓದಲು, ಸೆರೆಮನೆವಾಸಕ್ಕೆ, ಮರಣದ ಅಪಾಯಕ್ಕೆ ಕೂಡ ಸಿದ್ಧರಾಗಿದ್ದಾರೆ. ಕ್ಯಾತೊಲಿಕ್ ಸ್ಪೆಯಿನ್ನಲ್ಲಿ ಗತಿಸಿಹೋದ ವರ್ಷಗಳಲ್ಲಿ ಅದು ಸತ್ಯವಾಗಿತ್ತು. ಅಲ್ಲಿ, ಜನರು ತಮ್ಮ ಸ್ವಂತ ಭಾಷೆಯಲ್ಲಿ ಬೈಬಲನ್ನು ಓದುವುದಾದರೆ ತಮ್ಮ ಪ್ರಭಾವವು ಕುಗ್ಗುವುದೆಂದು ಪಾದ್ರಿವರ್ಗವು ಭಯಪಟ್ಟಿತು. ಇದು ಅಲ್ಪೇನಿಯದಲ್ಲಿಯೂ ಸತ್ಯವಾಗಿತ್ತು. ಅಲ್ಲಿ, ಎಲ್ಲ ಧಾರ್ಮಿಕ ಪ್ರಭಾವವನ್ನು ಅಂತ್ಯಗೊಳಿಸುವ ಸಲುವಾಗಿ ನಾಸ್ತಿಕ ಆಳಿಕೆಯ ಕೆಳಗೆ ತೀವ್ರವಾದ ಕ್ರಮಗಳು ಕಾರ್ಯರೂಪಕ್ಕೆ ತರಲ್ಪಟ್ಟವು. ಆದರೂ, ದೇವ ಭಯವುಳ್ಳ ವ್ಯಕ್ತಿಗಳು ಶಾಸ್ತ್ರವಚನಗಳ ಪ್ರತಿಗಳನ್ನು ಭದ್ರವಾಗಿಟ್ಟುಕೊಂಡರು, ಅವುಗಳನ್ನು ಓದಿದರು, ಮತ್ತು ಒಬ್ಬರು ಇನ್ನೊಬ್ಬರೊಂದಿಗೆ ಅವುಗಳನ್ನು ಹಂಚಿಕೊಂಡರು. II ನೆಯ ಲೋಕ ಯುದ್ಧದ ಸಮಯದಲ್ಲಿ, ಸಾಕ್ಸ್ನ್ಹಾಸನ್ ಶಿಬಿರಕೂಟದಲ್ಲಿ, ಬೈಬಲೊಂದನ್ನು ಎಚ್ಚರಿಕೆಯಿಂದ ಒಂದು ಸೆಲ್ಬಾಕ್ಲಿನಿಂದ ಇನ್ನೊಂದಕ್ಕೆ ದಾಟಿಸಲಾಯಿತು (ಇದು ನಿಷೇಧಿಸಲ್ಪಟ್ಟಿದ್ದರೂ), ಮತ್ತು ಯಾರ ವಶದಲ್ಲಿ ಅದಿತ್ತೊ, ಅವರು ಇತರರೊಂದಿಗೆ ಹಂಚಿಕೊಳ್ಳಲು ಕೆಲವು ಭಾಗಗಳನ್ನು ಬಾಯಿಪಾಠಮಾಡಿಕೊಂಡರು. 1950 ಗಳಲ್ಲಿ, ಆಗ ಕಮ್ಯೂನಿಸ್ಟ್ ಪೂರ್ವ ಜರ್ಮನಿಯಾಗಿದ್ದ ರಾಷ್ಟ್ರದಲ್ಲಿ, ತಮ್ಮ ನಂಬಿಕೆಯ ಕಾರಣ ಸೆರೆಯಲ್ಲಿದ್ದ ಯೆಹೋವನ ಸಾಕ್ಷಿಗಳು, ರಾತ್ರಿಯಲ್ಲಿ ಓದಲಿಕ್ಕಾಗಿ ಒಬ್ಬ ಕೈದಿಯಿಂದ ಇನ್ನೊಬ್ಬನಿಗೆ ಬೈಬಲಿನ ಸಣ್ಣ ಭಾಗಗಳನ್ನು ವರ್ಗಾಯಿಸಿದಾಗ, ದೀರ್ಘ ಸಮಯದ ಏಕಾಂತ ಬಂಧನದ ಅಪಾಯಕ್ಕೆ ಸಿದ್ಧರಾಗಿರಬೇಕಿತ್ತು. ಅವರು ಅದನ್ನು ಏಕೆ ಮಾಡಿದರು? ಏಕೆಂದರೆ, ಬೈಬಲು ದೇವರ ವಾಕ್ಯವೆಂಬುದನ್ನು ಅವರು ಗ್ರಹಿಸಿದರು, ಮತ್ತು “ಮನುಷ್ಯರು ಆಹಾರಮಾತ್ರದಿಂದಲ್ಲ” ಆದರೆ “ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆ” ಎಂಬುದು ಅವರಿಗೆ ಗೊತ್ತಿತ್ತು. (ಧರ್ಮೋಪದೇಶಕಾಂಡ 8:3) ಬೈಬಲಿನಲ್ಲಿ ದಾಖಲಿಸಲ್ಪಟ್ಟ ಈ ಅಭಿವ್ಯಕ್ತಿಗಳು, ನಂಬಲಸಾಧ್ಯವಾದ ಕ್ರೌರ್ಯಕ್ಕೆ ಅವರನ್ನು ಒಳಪಡಿಸಿದಾಗಲೂ, ಆತ್ಮಿಕವಾಗಿ ಜೀವಂತರಾಗಿ ಉಳಿಯುವಂತೆ ಆ ಸಾಕ್ಷಿಗಳನ್ನು ಶಕ್ತರನ್ನಾಗಿ ಮಾಡಿದವು.
4. ಬೈಬಲಿಗೆ ನಮ್ಮ ಜೀವಿತಗಳಲ್ಲಿ ಯಾವ ಸ್ಥಾನವಿರಬೇಕು?
4 ಬೈಬಲು ಕೇವಲ ಸಂದರ್ಭೋಚಿತವಾದ ಪರಾಮರ್ಶೆಗಾಗಿ ಕಪಾಟಿನಲ್ಲಿ ಇಡಬೇಕಾದ ಒಂದು ಪುಸ್ತಕವಲ್ಲ, ಇಲ್ಲವೆ ಆರಾಧನೆಗಾಗಿ ಜೊತೆ ವಿಶ್ವಾಸಿಗಳು ನೆರೆದು ಬರುವಾಗ ಮಾತ್ರ ಉಪಯೋಗಿಸಬೇಕಾದ ಪುಸ್ತಕವೂ ಅದಾಗಿರುವುದಿಲ್ಲ. ನಮ್ಮನ್ನು ಎದುರುಗೊಳ್ಳುವ ಸನ್ನಿವೇಶಗಳ ಮೇಲೆ ಬೆಳಕನ್ನು ಬೀರಲು ಮತ್ತು ನಡೆಯಬೇಕಾದ ಸರಿಯಾದ ಮಾರ್ಗವನ್ನು ನಮಗೆ ತೋರಿಸಲು ಅದನ್ನು ಪ್ರತಿದಿನವೂ ಬಳಸತಕ್ಕದ್ದು.—ಕೀರ್ತನೆ 25:4, 5.
ಓದುವ ಮತ್ತು ಅರ್ಥಮಾಡಿಕೊಳ್ಳುವ ಉದ್ದೇಶವುಳ್ಳದ್ದು
5. (ಎ) ಸಾಧ್ಯವಿರುವಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರು ಏನನ್ನು ಪಡೆದಿರಬೇಕು? (ಬಿ) ಪ್ರಾಚೀನ ಇಸ್ರಾಯೇಲಿನಲ್ಲಿ, ಶಾಸ್ತ್ರಗಳಲ್ಲಿ ಏನಿತ್ತು ಎಂಬುದನ್ನು ಜನರು ಹೇಗೆ ಕಂಡುಹಿಡಿದರು? (ಸಿ) ಬೈಬಲ್ ಓದುವಿಕೆಯ ಕಡೆಗೆ ನಿಮ್ಮ ಮನೋಭಾವವನ್ನು ಕೀರ್ತನೆ 19:7-11 ಹೇಗೆ ಪ್ರಭಾವಿಸುತ್ತದೆ?
5 ನಮ್ಮ ದಿನದಲ್ಲಿ, ಬೈಬಲಿನ ಪ್ರತಿಗಳು ಹೆಚ್ಚಿನ ದೇಶಗಳಲ್ಲಿ ಸುಲಭವಾಗಿ ದೊರೆಯುತ್ತವೆ, ಮತ್ತು ಒಂದು ಪ್ರತಿಯನ್ನು ಪಡೆದುಕೊಳ್ಳುವಂತೆ ನಾವು ಕಾವಲಿನಬುರುಜು ವಿನ ಪ್ರತಿಯೊಬ್ಬ ಓದುಗನನ್ನು ಪ್ರೇರೇಪಿಸುತ್ತೇವೆ. ಬೈಬಲು ಬರೆಯಲ್ಪಡುತ್ತಿದ್ದ ಸಮಯದಲ್ಲಿ, ಮುದ್ರಣಾಲಯಗಳು ಇರಲಿಲ್ಲ. ಸಾಮಾನ್ಯವಾಗಿ ಜನರಲ್ಲಿ ವೈಯಕ್ತಿಕ ಪ್ರತಿಗಳು ಇರಲಿಲ್ಲ. ಆದರೆ ಯಾವ ವಿಷಯವು ಬರೆಯಲ್ಪಟ್ಟಿತ್ತೊ ಅದನ್ನು ಕೇಳುವಂತೆ ಯೆಹೋವನು ತನ್ನ ಸೇವಕರಿಗಾಗಿ ಏರ್ಪಾಡುಗಳನ್ನು ಮಾಡಿದನು. ಹೀಗೆ, ವಿಮೋಚನಕಾಂಡ 24:7 ವರದಿಸುವುದು, ಯೆಹೋವನು ನಿರ್ದೇಶಿಸಿದ್ದನ್ನು ಮೋಶೆಯು ಬರೆದ ತರುವಾಯ, ಅವನು “ನಿಬಂಧನ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು.” ಸೀನಾಯಿ ಪರ್ವತದ ಬಳಿಯಲ್ಲಿ ಅತಿಲೌಕಿಕ ಪ್ರದರ್ಶನಗಳಿಗೆ ಪ್ರೇಕ್ಷಕರಾಗಿದ್ದ ಕಾರಣ, ಮೋಶೆಯು ಅವರಿಗೆ ಓದಿ ತಿಳಿಸಿದ ವಿಷಯವು ದೇವರಿಂದ ಬಂದ ವಿಷಯವಾಗಿತ್ತೆಂದು ಮತ್ತು ಈ ಮಾಹಿತಿಯನ್ನು ಅವರು ಅರಿಯಬೇಕಿತ್ತೆಂದು ಅವರು ಗ್ರಹಿಸಿದರು. (ವಿಮೋಚನಕಾಂಡ 19:9, 16-19; 20:22) ದೇವರ ವಾಕ್ಯದಲ್ಲಿ ಏನು ದಾಖಲಾಗಿದೆ ಎಂಬುದನ್ನು ನಾವು ಸಹ ತಿಳಿಯಬೇಕಾಗಿದೆ.—ಕೀರ್ತನೆ 19:7-11.
6. (ಎ) ಇಸ್ರಾಯೇಲ್ ಜನಾಂಗವು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು, ಮೋಶೆಯು ಏನು ಮಾಡಿದನು? (ಬಿ) ನಾವು ಮೋಶೆಯ ಉದಾಹರಣೆಯನ್ನು ಹೇಗೆ ಅನುಕರಿಸಬಹುದು?
6 ಅರಣ್ಯದಲ್ಲಿ ತಮ್ಮ ಅಲೆಮಾರಿ ಜೀವನವನ್ನು ಬಿಡುತ್ತಾ, ಹೀಗೆ ವಾಗ್ದತ್ತ ದೇಶವನ್ನು ಪ್ರವೇಶಿಸಲಿಕ್ಕಾಗಿ ಯೋರ್ದಾನ್ ನದಿಯನ್ನು ದಾಟಲು ಇಸ್ರಾಯೇಲ್ ಜನಾಂಗವು ಸಿದ್ಧಗೊಂಡಂತೆ, ಯೆಹೋವನ ಧರ್ಮಶಾಸ್ತ್ರವನ್ನು ಮತ್ತು ತಮ್ಮೊಂದಿಗಿನ ಆತನ ವ್ಯವಹಾರಗಳನ್ನು ಪುನರ್ವಿಮರ್ಶಿಸುವುದು ಅವರಿಗೆ ಸೂಕ್ತವಾಗಿತ್ತು. ದೇವರ ಆತ್ಮದಿಂದ ಪ್ರಚೋದಿಸಲ್ಪಟ್ಟು, ಮೋಶೆಯು ಅವರೊಂದಿಗೆ ಧರ್ಮಶಾಸ್ತ್ರವನ್ನು ಪುನರ್ವಿಮರ್ಶಿಸಿದನು. ಧರ್ಮಶಾಸ್ತ್ರದ ವಿವರಗಳ ಕುರಿತು ಅವನು ಅವರಿಗೆ ಜ್ಞಾಪಕ ಹುಟ್ಟಿಸಿದನು, ಮತ್ತು ಯೆಹೋವನೊಂದಿಗಿನ ಅವರ ಸಂಬಂಧವನ್ನು ಪ್ರಭಾವಿಸಬೇಕಿದ್ದ ಆಧಾರ ತತ್ವಗಳನ್ನು ಮತ್ತು ಮನೋಭಾವಗಳನ್ನು ಸಹ ಅವನು ಎತ್ತಿತೋರಿಸಿದನು. (ಧರ್ಮೋಪದೇಶಕಾಂಡ 4:9, 35; 7:7, 8; 8:10-14; 10:12, 13) ನಾವು ಇಂದು ಹೊಸ ನೇಮಕಗಳನ್ನು ವಹಿಸಿಕೊಂಡಂತೆ ಅಥವಾ ಜೀವನದಲ್ಲಿ ಹೊಸ ಸನ್ನಿವೇಶಗಳನ್ನು ಎದುರಿಸಿದಂತೆ, ನಾವು ಏನನ್ನು ಮಾಡುತ್ತಿದ್ದೇವೊ ಅದನ್ನು ಶಾಸ್ತ್ರಗಳ ಸಲಹೆಯು ಹೇಗೆ ಪ್ರಭಾವಿಸಬೇಕೆಂದು ಪರಿಗಣಿಸುವುದು ನಮಗೆ ಪ್ರಯೋಜನಕರವಾಗಿರುವುದು.
7. ಇಸ್ರಾಯೇಲ್ಯರು ಯೊರ್ದನ್ ನದಿಯನ್ನು ದಾಟಿದ ಕೊಂಚ ಸಮಯದ ಬಳಿಕ, ಅವರ ಮನಸ್ಸುಗಳು ಮತ್ತು ಹೃದಯಗಳ ಮೇಲೆ ಯೆಹೋವನ ಧರ್ಮಶಾಸ್ತ್ರವನ್ನು ಅಚೊತ್ಚಲ್ತು ಏನು ಮಾಡಲಾಯಿತು?
7 ಯೊರ್ದನ್ ನದಿಯನ್ನು ಇಸ್ರಾಯೇಲ್ ದಾಟಿದ ಕೊಂಚ ಹೊತ್ತಿನಲ್ಲೆ, ಮೋಶೆಯ ಮೂಲಕ ಯೆಹೋವನು ಅವರಿಗೆ ಏನನ್ನು ಹೇಳಿದ್ದನೊ, ಅದನ್ನು ಪುನರ್ವಿಮರ್ಶಿಸಲು ಜನರು ಪುನಃ ನೆರೆದುಬಂದರು. ಜನಾಂಗವು ಯೆರೂಸಲೇಮಿನಿಂದ ಸುಮಾರು 50 ಕಿಲೊಮೀಟರುಗಳು ಉತ್ತರದಲ್ಲಿ ಕೂಡಿಬಂತು. ಗೋತ್ರಗಳ ಅರ್ಧ ಜನರು ಏಬಾಲ್ ಬೆಟ್ಟದ ಮುಂದೆ ಮತ್ತು ಅರ್ಧ ಜನರು ಗೆರಿಜ್ಜೀಮ್ ಬೆಟ್ಟದ ಮುಂದೆ ಇದ್ದರು. ಅಲ್ಲಿ ಯೆಹೋಶುವನು “ಧರ್ಮಶಾಸ್ತ್ರದ ಎಲ್ಲಾ ಆಶೀರ್ವಾದಶಾಪವಾಕ್ಯಗಳನ್ನು ಆ ಗ್ರಂಥದಲ್ಲಿ ಇದ್ದ ಹಾಗೆಯೇ ಓದಿದನು.” ಹೀಗೆ, ಅನ್ಯದೇಶಸ್ಥರೊಂದಿಗೆ, ಗಂಡಸರು, ಹೆಂಗಸರು, ಮತ್ತು ಚಿಕ್ಕವರು, ಯೆಹೋವನ ಅಸಮ್ಮತಿಯಲ್ಲಿ ಫಲಿಸಬಹುದಾದ ನಡತೆಯನ್ನಾಳುವ ನಿಯಮಗಳ ಮತ್ತು ಅವರು ಯೆಹೋವನಿಗೆ ವಿಧೇಯರಾಗುವಲ್ಲಿ ಅವರು ಪಡೆಯಲಿಕ್ಕಿದ್ದ ಆಶೀರ್ವಾದಗಳ ಕುರಿತು ಸಮಯೋಚಿತವಾದ ಪುನರ್ಹೇಳಿಕೆಯನ್ನು ಕೇಳಿಸಿಕೊಂಡರು. (ಯೆಹೋಶುವ 8:34, 35) ಯೆಹೋವನ ದೃಷ್ಟಿಕೋನದಲ್ಲಿ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬುದನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿಗಿ ಇಡುವ ಅಗತ್ಯವಿತ್ತು. ಇನ್ನೂ ಹೆಚ್ಚಾಗಿ, ಇಂದು ನಮ್ಮಲ್ಲಿ ಪ್ರತಿಯೊಬ್ಬರು ಮಾಡುವಂತೆ, ಒಳ್ಳೆಯದರ ಕಡೆಗೆ ಪ್ರೀತಿಯನ್ನು ಮತ್ತು ಕೆಟ್ಟದರ ಕಡೆಗೆ ದ್ವೇಷವನ್ನು ತಮ್ಮ ಹೃದಯಗಳ ಮೇಲೆ ಅವರು ಕೆತ್ತಬೇಕಿತ್ತು.—ಕೀರ್ತನೆ 97:10; 119:103, 104; ಆಮೋಸ 5:15.
8. ಇಸ್ರಾಯೇಲಿನಲ್ಲಿ ನಿರ್ದಿಷ್ಟವಾದ ಜನಾಂಗೀಯ ಸಮ್ಮೇಳನಗಳಲ್ಲಿ ದೇವರ ವಾಕ್ಯದ ನಿಯತ ಕಾಲಿಕ ಓದುವಿಕೆಯ ಪ್ರಯೋಜನವು ಏನಾಗಿತ್ತು?
8 ಆ ಐತಿಹಾಸಿಕ ಸಂದರ್ಭಗಳಲ್ಲಿ ಧರ್ಮಶಾಸ್ತ್ರದ ಓದುವಿಕೆಗಳೊಂದಿಗೆ, ದೇವರ ವಾಕ್ಯದ ಕ್ರಮವಾದ ಓದುವಿಕೆಗಾಗಿ ಒಂದು ಒದಗಿಸುವಿಕೆಯು ಧರ್ಮೋಪದೇಶಕಾಂಡ 31:10-12 ರಲ್ಲಿ ರೇಖಿಸಲಾಗಿತ್ತು. ಪ್ರತಿ ಏಳನೆಯ ವರ್ಷ ಇಡೀ ಜನಾಂಗವು ದೇವರ ವಾಕ್ಯದ ಓದುವಿಕೆಯನ್ನು ಕೇಳಲು ಸೇರಬೇಕಿತ್ತು. ಇದು ಅವರಿಗೆ ಆತ್ಮಿಕ ಆಹಾರವನ್ನು ಒದಗಿಸಿತು. ಇದು ಸಂತತಿಯ ಕುರಿತಾದ ವಾಗ್ದಾನಗಳನ್ನು ಅವರ ಮನಸ್ಸು ಮತ್ತು ಹೃದಯಗಳಲ್ಲಿ ಸಜೀವವಾಗಿ ಇಟ್ಟಿತು ಮತ್ತು ಹೀಗೆ ನಂಬಿಗಸ್ತರನ್ನು ಮೆಸ್ಸೀಯನ ಕಡೆಗೆ ನಿರ್ದೇಶಿಸಲು ಕಾರ್ಯನಡಿಸಿತು. ಇಸ್ರಾಯೇಲ್ ಅರಣ್ಯದಲಿದ್ಲಾಗ್ದ ಆತ್ಮಿಕ ಉಣಿಸುವಿಕೆಗಾಗಿ ಸ್ಥಾಪಿಸಲಾಗಿದ್ದ ಏರ್ಪಾಡುಗಳು, ಅವರು ವಾಗ್ದತ್ತ ದೇಶವನ್ನು ಪ್ರವೇಶಿಸಿದ ತರುವಾಯ ಕೊನೆಗೊಳ್ಳಲಿಲ್ಲ. (1 ಕೊರಿಂಥ 10:3, 4) ಬದಲಿಗೆ, ಪ್ರವಾದಿಗಳ ಇನ್ನೂ ಹೆಚ್ಚಿನ ಪ್ರಕಟನೆಗಳನ್ನು ಸೇರಿಸುವ ಮೂಲಕ ದೇವರ ವಾಕ್ಯವು ಪುಷ್ಟಿಗೊಳಿಸಲ್ಪಟ್ಟಿತು.
9. (ಎ) ಇಸ್ರಾಯೇಲ್ಯರು ದೊಡ್ಡ ಗುಂಪುಗಳಾಗಿ ಕೂಡಿಬಂದಾಗ ಮಾತ್ರ ಶಾಸ್ತ್ರಗಳನ್ನು ಓದಿದರೊ? ವಿವರಿಸಿರಿ. (ಬಿ) ಒಂದೊಂದು ಕುಟುಂಬಗಳೊಳಗೆ ಶಾಸ್ತ್ರಗಳಲ್ಲಿ ಉಪದೇಶವು ಹೇಗೆ ಕೊಡಲ್ಪಟ್ಟಿತು, ಮತ್ತು ಯಾವ ಉದ್ದೇಶದಿಂದ?
9 ಜನರು ದೊಡ್ಡ ಗುಂಪಾಗಿ ಕೂಡಿಬಂದ ಆ ಸಮಯಗಳಿಗೆ ಮಾತ್ರ ದೇವರ ವಾಕ್ಯದ ಸಲಹೆಯ ಪುನರ್ವಿಮರ್ಶೆಯು ನಿರ್ಬಂಧಿಸಲ್ಪಡುವಂತಿರಲಿಲ್ಲ. ದೇವರ ವಾಕ್ಯದ ಭಾಗಗಳನ್ನು ಮತ್ತು ಅದರಲ್ಲಿ ಒಳಗೊಂಡಿರುವ ತತ್ವಗಳನ್ನು ಪ್ರತಿ ದಿನವೂ ಚರ್ಚಿಸಬೇಕಾಗಿತ್ತು. (ಧರ್ಮೋಪದೇಶಕಾಂಡ 6:4-9) ಇಂದು ಹೆಚ್ಚಿನ ಸ್ಥಳಗಳಲ್ಲಿ, ಯುವ ಜನರಿಗೆ ಬೈಬಲಿನ ವೈಯಕ್ತಿಕ ಪ್ರತಿಯನ್ನು ಪಡೆದುಕೊಳ್ಳಲು ಸಾಧ್ಯವಿದೆ, ಮತ್ತು ಹಾಗೆ ಮಾಡುವುದು ಅವರಿಗೆ ಬಹಳ ಪ್ರಯೋಜನಕರ. ಆದರೆ ಪ್ರಾಚೀನ ಇಸ್ರಾಯೇಲಿನಲ್ಲಿ ವಿಷಯವು ಹಾಗಿರಲಿಲ್ಲ. ಹಿಂದೆ, ದೇವರ ವಾಕ್ಯದಿಂದ ಹೆತ್ತವರು ಉಪದೇಶವನ್ನು ನೀಡಿದಾಗ, ಅವರು ವೈಯಕ್ತಿಕವಾಗಿ ಬರೆದಿಟ್ಟಿರಬಹುದಾದ ಯಾವುದೆ ಚಿಕ್ಕ ಎತ್ತಿಕೆಗಳಿಂದ, ತಾವು ಬಾಯಿಪಾಠಮಾಡಿದ್ದ ಸಂಗತಿಗಳ ಮೇಲೆ ಮತ್ತು ತಮ್ಮ ಹೃದಯಗಳಲ್ಲಿ ತಾವು ಇಟ್ಟುಕೊಂಡಿದ್ದ ಸತ್ಯಗಳ ಮೇಲೆ ಆತುಕೊಳ್ಳಬೇಕಿತ್ತು. ಅಡಿಗಡಿಗೆಯ ಪುನರಾವೃತ್ತಿಯಿಂದ, ಯೆಹೋವನಿಗಾಗಿ ಮತ್ತು ಆತನ ಮಾರ್ಗಗಳಿಗಾಗಿ ಪ್ರೀತಿಯನ್ನು ತಮ್ಮ ಮಕ್ಕಳಲ್ಲಿ ಬೆಳೆಸಲು ಅವರು ಪ್ರಯತ್ನಿಸುತ್ತಿದ್ದರು. ಉದ್ದೇಶವು ಕೇವಲ ಜ್ಞಾನದಿಂದ ತುಂಬಿರುವ ಒಂದು ತಲೆಯನ್ನು ಪಡೆದಿರುವುದು ಆಗಿರಲಿಲ್ಲ, ಆದರೆ ಯೆಹೋವನಿಗಾಗಿ ಮತ್ತು ಆತನ ವಾಕ್ಯಕ್ಕಾಗಿ ಪ್ರೀತಿಯನ್ನು ಪ್ರದರ್ಶಿಸುವಂತಹ ರೀತಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನು ಜೀವಿಸುವಂತೆ ಸಹಾಯ ಮಾಡುವುದಾಗಿತ್ತು.—ಧರ್ಮೋಪದೇಶಕಾಂಡ 11:18, 19, 22, 23.
ಸಭಾಮಂದಿರಗಳಲ್ಲಿ ಶಾಸ್ತ್ರದ ಓದುವಿಕೆ
10, 11. ಸಭಾಮಂದಿರಗಳಲ್ಲಿ ಶಾಸ್ತ್ರದ ಓದುವಿಕೆಯ ಯಾವ ಕಾರ್ಯಕ್ರಮವು ಅನುಸರಿಸಲ್ಪಟ್ಟಿತು, ಮತ್ತು ಈ ಸಂದರ್ಭಗಳನ್ನು ಯೇಸು ಹೇಗೆ ವೀಕ್ಷಿಸಿದನು?
10 ಬಾಬೆಲಿಗೆ ಯೆಹೂದ್ಯರು ಗಡೀಪಾರು ಮಾಡಲ್ಪಟ್ಟ ಸ್ವಲ್ಪ ಸಮಯದ ತರುವಾಯ, ಸಭಾಮಂದಿರಗಳು ಆರಾಧನೆಯ ಸ್ಥಳಗಳಾಗಿ ಸ್ಥಾಪಿಸಲ್ಪಟ್ಟವು. ಈ ಕೂಟದ ಸ್ಥಳಗಳಲ್ಲಿ ದೇವರ ವಾಕ್ಯವು ಓದಲ್ಪಡುವ ಮತ್ತು ಚರ್ಚಿಸಲ್ಪಡುವ ಸಲುವಾಗಿ, ಶಾಸ್ತ್ರಗಳ ಹೆಚ್ಚಿನ ಪ್ರತಿಗಳನ್ನು ಮಾಡಲಾಯಿತು. ಇದು, ಹೀಬ್ರು ಶಾಸ್ತ್ರಗಳ ಕೆಲವು ಭಾಗಗಳಿರುವ ಸುಮಾರು 6,000 ಪ್ರಾಚೀನ ಲಿಖಿತ ಪ್ರತಿಗಳ ಉಳಿಯುವಿಕೆಯ ಕಾರಣಗಳಲ್ಲಿ ಒಂದಾಗಿತ್ತು.
11 ಸಭಾಮಂದಿರದ ಆರಾಧನೆಯ ಒಂದು ಪ್ರಮುಖ ಭಾಗವು, ಆಧುನಿಕ ದಿನದ ಬೈಬಲುಗಳ ಪ್ರಥಮ ಐದು ಪುಸ್ತಕಗಳಿಗೆ ಸಮಾನವಾದ ಟೋರಾದ ಓದುವಿಕೆಯಾಗಿತ್ತು. ಸಾ.ಶ. ಪ್ರಥಮ ಶತಮಾನದಲ್ಲಿ ಪ್ರತಿಯೊಂದು ಸಬ್ಬತ್ ದಿನದಂದು ಅಂತಹ ಓದುವಿಕೆಯನ್ನು ಮಾಡಲಾಗುತ್ತಿತ್ತು ಎಂದು ಅ. ಕೃತ್ಯಗಳು 15:21 ವರದಿಸುತ್ತದೆ, ಮತ್ತು ಮಿಷ್ನಾ ತೋರಿಸುವುದೇನೆಂದರೆ, ಎರಡನೆಯ ಶತಮಾನದೊಳಗಾಗಿ, ವಾರದ ಎರಡನೆಯ ಮತ್ತು ಐದನೆಯ ದಿನಗಳಂದೂ ಟೋರಾದ ಓದುವಿಕೆ ಇರುತ್ತಿತ್ತು. ಹಲವಾರು ವ್ಯಕ್ತಿಗಳು ಒಬ್ಬರಾದ ಮೇಲೆ ಒಬ್ಬರಂತೆ, ನೇಮಿತ ಭಾಗಗಳನ್ನು ಓದುವುದರಲ್ಲಿ ಭಾಗವಹಿಸಿದರು. ಬಾಬೆಲಿನಲ್ಲಿ ಜೀವಿಸುತ್ತಿದ್ದ ಯೆಹೂದ್ಯರ ರೂಢಿಯು, ವರ್ಷಕ್ಕೊಮ್ಮೆ ಇಡೀ ಟೋರಾವನ್ನು ಓದುವುದಾಗಿತ್ತು; ಪ್ಯಾಲಸ್ಟೀನ್ನಲ್ಲಿನ ರೂಢಿಯು, ಓದುವಿಕೆಯನ್ನು ಮೂರು ವರ್ಷಗಳ ಅವಧಿಗೆ ವಿಸ್ತರಿಸುವುದಾಗಿತ್ತು. ಪ್ರವಾದಿಗಳಿಂದ ಒಂದು ಭಾಗವನ್ನು ಸಹ ಓದಿ ವಿವರಿಸಲಾಗುತ್ತಿತ್ತು. ತಾನು ಜೀವಿಸಿದ ಸ್ಥಳದಲ್ಲಿ ಸಬ್ಬತ್ ದಿನದ ಬೈಬಲ್ ಓದುವಿಕೆಯ ಕಾರ್ಯಕ್ರಮಗಳಿಗೆ ಉಪಸ್ಥಿತನಾಗಿರುವುದು ಯೇಸುವಿನ ವಾಡಿಕೆಯಾಗಿತ್ತು.—ಲೂಕ 4:16-21.
ವೈಯಕ್ತಿಕ ಪ್ರತಿಕ್ರಿಯೆ ಮತ್ತು ಅನ್ವಯ
12. (ಎ) ಮೋಶೆಯು ಧರ್ಮಶಾಸ್ತ್ರವನ್ನು ಜನರಿಗೆ ಓದಿ ಹೇಳಿದಾಗ, ಜನರು ಹೇಗೆ ಪ್ರಯೋಜನ ಪಡೆದರು? (ಬಿ) ಜನರು ಹೇಗೆ ಪ್ರತಿಕ್ರಿಯಿಸಿದರು?
12 ಪ್ರೇರಿತ ಶಾಸ್ತ್ರಗಳ ಓದುವಿಕೆ ಕೇವಲ ಒಂದು ಬಾಹ್ಯನಿಷ್ಠೆಯ ಉದ್ದೇಶವನ್ನು ಹೊಂದಿರಲಿಲ್ಲ. ಕೇವಲ ಜನರ ಕುತೂಹಲವನ್ನು ತೃಪ್ತಿಗೊಳಿಸಲು ಅದು ಮಾಡಲ್ಪಡಲಿಲ್ಲ. ಸೀನಾಯಿ ಬೆಟ್ಟದ ಎದುರಿನಲ್ಲಿದ್ದ ಬಯಲಿನಲ್ಲಿ ಇಸ್ರಾಯೇಲ್ಯರಿಗೆ “ನಿಬಂಧನದ ಗ್ರಂಥವನ್ನು” ಮೋಶೆ ಓದಿದಾಗ, ದೇವರ ಕಡೆಗಿರುವ ತಮ್ಮ ಜವಾಬ್ದಾರಿಗಳನ್ನು ಅವರು ತಿಳಿದುಕೊಳ್ಳುವ ಮತ್ತು ಅವುಗಳನ್ನು ನೆರವೇರಿಸುವ ಸಲುವಾಗಿ ಅವನು ಹಾಗೆ ಮಾಡಿದನು. ಅವರು ಹಾಗೆ ಮಾಡುವರೊ? ಓದುವಿಕೆಯು ಪ್ರತಿಕ್ರಿಯೆಯೊಂದನ್ನು ಕೇಳಿಕೊಂಡಿತು. ಜನರು ಅದನ್ನು ಗ್ರಹಿಸಿದರು, ಮತ್ತು ಹೀಗೆ ಹೇಳುತ್ತಾ ಅವರು ಮಾತಾಡಿದ್ದು: “ಯೆಹೋವನ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ವಿಧೇಯರಾಗುವೆವು.”—ವಿಮೋಚನಕಾಂಡ 24:7; ಹೋಲಿಸಿ ವಿಮೋಚನಕಾಂಡ 19:8; 24:3.
13. ಅವಿಧೇಯತೆಗಾಗಿ ಶಾಪಗಳನ್ನು ಯೆಹೋಶುವನು ಓದಿದಾಗ, ಜನರು ಏನು ಮಾಡಬೇಕಿತ್ತು, ಯಾವ ಉದ್ದೇಶದಿಂದ?
13 ತದನಂತರ, ಯೆಹೋಶುವನು ಜನಾಂಗಕ್ಕೆ ವಾಗ್ದತ್ತ ಆಶೀರ್ವಾದಗಳನ್ನು ಮತ್ತು ಶಾಪಗಳು, ಅಥವಾ ಶಾಪೋಕ್ತಿಗಳನ್ನು ಓದಿದಾಗ, ಪ್ರತಿಕ್ರಿಯೆಯೊಂದು ಕೇಳಿಕೊಳ್ಳಲ್ಪಟ್ಟಿತು. ಪ್ರತಿಯೊಂದು ಶಾಪೋಕ್ತಿಗಳ ಬಳಿಕ, ಸೂಚನೆಯು ಕೊಡಲ್ಪಟ್ಟಿತು: “ಜನರೆಲ್ಲರೂ—ಹೌದು (“ಆಮೆನ್” NW) ಅನ್ನಬೇಕು.” (ಧರ್ಮೋಪದೇಶಕಾಂಡ 27:4-26) ಹೀಗೆ, ಪ್ರತಿಯೊಂದು ಅಂಶವು ಪರಿಗಣಿಸಲ್ಪಟ್ಟಂತೆ, ಉದ್ಧರಿಸಲ್ಪಟ್ಟ ತಪ್ಪುಗಳ ಬಗ್ಗೆ ಯೆಹೋವನ ಖಂಡನೆಯೊಂದಿಗೆ ತಮ್ಮ ಸಮ್ಮತಿಯನ್ನು ಅವರು ವ್ಯಕ್ತಪಡಿಸಿದರೆಂದು ದಾಖಲು ಮಾಡಲಾಗಿದೆ. ಇಡೀ ಜನಾಂಗವು ಅದರ ಸಮ್ಮತಿಯನ್ನು ಆರ್ಭಟಿಸಿದಾಗ ಅದು ಎಂತಹ ಭಾವೋತ್ಪಾದಕ ಘಟನೆಯಾಗಿದ್ದಿರಬೇಕು!
14. ನೆಹೆಮೀಯನ ದಿನಗಳಲ್ಲಿ, ಧರ್ಮಶಾಸ್ತ್ರದ ಸಾರ್ವಜನಿಕ ಓದುವಿಕೆಯು ವಿಶೇಷವಾಗಿ ಪ್ರಯೋಜನಕರವಾಗಿ ಪರಿಣಮಿಸಿದ್ದು ಏಕೆ?
14 ನೆಹೆಮೀಯನ ದಿನಗಳಲ್ಲಿ, ಧರ್ಮಶಾಸ್ತ್ರವನ್ನು ಕೇಳಲು ಎಲ್ಲ ಜನರು ಯೆರೂಸಲೇಮಿನಲ್ಲಿ ಕೂಡಿಬಂದಾಗ, ಅಲ್ಲಿ ಬರೆಯಲ್ಪಟ್ಟಿದ್ದ ಉಪದೇಶಗಳನ್ನು ತಾವು ಪೂರ್ಣವಾಗಿ ನೆರವೇರಿಸುತ್ತಿರಲಿಲ್ಲವೆಂದು ಅವರು ಕಂಡುಕೊಂಡರು. ಆ ಸಂದರ್ಭದಲ್ಲಿ ತಾವು ಕಲಿತಿದ್ದ ವಿಷಯಗಳನ್ನು ಅವರು ಒಡನೆಯೇ ಅನ್ವಯಿಸಿದರು. ಫಲಿತಾಂಶವು ಏನಾಗಿತ್ತು? “ಬಹು ಸಂತೋಷಪಟ್ಟರು.” (ನೆಹೆಮೀಯ 8:13-17) ಹಬ್ಬದ ಸಮಯದಲ್ಲಿ ಒಂದು ವಾರ ದೈನಿಕ ಬೈಬಲ್ ಓದುವಿಕೆಯ ತರುವಾಯ, ಇನ್ನೂ ಹೆಚ್ಚಿನ ವಿಷಯಗಳ ಅಗತ್ಯವಿದೆ ಎಂದು ಅವರು ಮನಗಂಡರು. ಅಬ್ರಹಾಮನ ದಿನಗಳಿಂದ ತನ್ನ ಜನರೊಂದಿಗಿನ ಯೆಹೋವನ ವ್ಯವಹಾರಗಳ ಇತಿಹಾಸವನ್ನು ಅವರು ಪ್ರಾರ್ಥನಾಪೂರ್ವಕವಾಗಿ ಪುನರ್ವಿಮರ್ಶಿಸಿದರು. ಇದೆಲ್ಲವು ಧರ್ಮಶಾಸ್ತ್ರದ ಆವಶ್ಯಕತೆಗಳಿಗೆ ಸರಿಹೊಂದುವ, ವಿದೇಶೀಯರೊಂದಿಗೆ ಅಂತರ್ವಿವಾಹವಾಗುವುದರಿಂದ ತಡೆಯುವ, ಮತ್ತು ದೇವಾಲಯ ಹಾಗೂ ಅದರ ಸೇವೆಯನ್ನು ಕಾಪಾಡಿಕೊಂಡು ಹೋಗಲು ಕರ್ತವ್ಯಗಳನ್ನು ಸ್ವೀಕರಿಸುವ ಪ್ರಮಾಣವನ್ನು ತೆಗೆದುಕೊಳ್ಳುವಂತೆ ಅವರನ್ನು ಪ್ರಚೋದಿಸಿತು.—ನೆಹೆಮೀಯ, ಅಧ್ಯಾಯಗಳು 8-10.
15. ಕುಟುಂಬಗಳೊಳಗೆ ದೇವರ ವಾಕ್ಯದಲ್ಲಿನ ಉಪದೇಶವು ಬರಿಯ ಔಪಚಾರಿಕ ವಿಷಯವಾಗಿರಬಾರದೆಂದು ಧರ್ಮೋಪದೇಶಕಾಂಡ 6:6-9 ರಲ್ಲಿರುವ ಸೂಚನೆಗಳು ಹೇಗೆ ತೋರಿಸುತ್ತವೆ?
15 ತದ್ರೀತಿಯಲ್ಲಿ, ಕುಟುಂಬದೊಳಗೆ, ಶಾಸ್ತ್ರಗಳನ್ನು ಕಲಿಸುವುದು ಬರಿಯ ಬಾಹ್ಯನಿಷ್ಟೆಯಾಗಿರುವ ಉದ್ದೇಶವನ್ನು ಹೊಂದಿರಲಿಲ್ಲ. ಧರ್ಮೋಪದೇಶಕಾಂಡ 6:6-9 ರಲ್ಲಿ ಈಗಾಗಲೆ ಸಾಂಕೇತಿಕ ಮಾತಿನಲ್ಲಿ ನೋಡಿರುವಂತೆ, ಜನರು ‘ದೇವರ ಮಾತುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು’ ಎಂದು ಹೇಳಲ್ಪಟ್ಟರು, ಹೀಗೆ ಉದಾಹರಣೆ ಮತ್ತು ಕ್ರಿಯೆಯ ಮೂಲಕ ಯೆಹೋವನ ಮಾರ್ಗಗಳಿಗೆ ತಮ್ಮ ಪ್ರೀತಿಯನ್ನು ಅವರು ಪ್ರದರ್ಶಿಸಬೇಕಿತ್ತು. ದೇವರ ಮಾತುಗಳನ್ನು ಅವರು ‘ಹಣೆಗೆ ಕಟ್ಟಿಕೊಳ್ಳುವ ಪಟ್ಟಿಯಂತೆ ಕಟ್ಟಿಕೊಳ್ಳಬೇಕಿತ್ತು,’ ಹೀಗೆ ಶಾಸ್ತ್ರಗಳಲ್ಲಿ ಒಂದುಗೂಡಿರುವ ತತ್ವಗಳನ್ನು ಸತತವಾಗಿ ದೃಷ್ಟಿಯಲ್ಲಿಡುತ್ತಾ, ಅವುಗಳನ್ನು ತಮ್ಮ ನಿರ್ಧಾರಗಳಿಗೆ ಆಧಾರದೋಪಾದಿ ಉಪಯೋಗಿಸಬೇಕಿತ್ತು. (ವಿಮೋಚನಕಾಂಡ 13:9, 14-16 ರಲ್ಲಿ ಬಳಸಿರುವ ಭಾಷೆಯನ್ನು ಹೋಲಿಸಿ.) ಅವರು ‘ಇವುಗಳನ್ನು ತಮ್ಮ ಮನೆಬಾಗಲಿನ ನಿಲುವು ಪಟ್ಟಿಗಳಲಿಯ್ಲೂ ತಲೆಬಾಗಲುಗಳ ಮೇಲೆಯೂ ಬರೆಯಬೇಕಿತ್ತು,’ ಹೀಗೆ ತಮ್ಮ ಮನೆಗಳನ್ನು ಮತ್ತು ತಮ್ಮ ಸಮುದಾಯಗಳನ್ನು, ದೇವರ ವಾಕ್ಯವು ಗೌರವಿಸಲ್ಪಡುವ ಮತ್ತು ಅನ್ವಯಿಸಲ್ಪಡುವ ಸ್ಥಳಗಳಾಗಿ ಗುರುತಿಸಬೇಕಿತ್ತು. ಬೇರೆ ಮಾತುಗಳಲ್ಲಿ, ಅವರ ಜೀವಿತಗಳು, ಅವರು ಯೆಹೋವನ ನೀತಿಯ ಆಜ್ಞೆಗಳನ್ನು ಪ್ರೀತಿಸಿದರು ಮತ್ತು ಅನ್ವಯಿಸಿದರು ಎಂಬ ಹೇರಳವಾದ ಪ್ರಮಾಣವನ್ನು ಕೊಡಬೇಕಿತ್ತು. ಅದು ಎಷ್ಟು ಪ್ರಯೋಜನಕರವಾಗಿರಸಾಧ್ಯವಿತ್ತು! ನಮ್ಮ ಮನೆವಾರ್ತೆಗಳ ಪ್ರತಿನಿತ್ಯದ ಜೀವಿತದಲ್ಲಿ ದೇವರ ವಾಕ್ಯಕ್ಕೆ ಆ ರೀತಿಯ ಪ್ರಧಾನತೆ ಇದೆಯೊ? ವಿಷಾದಕರವಾಗಿ, ಯೆಹೂದ್ಯರು ಶಾಸ್ತ್ರವಚನವಿರುವ ಪೆಟ್ಟಿಗೆಗಳನ್ನು ಅವುಗಳು ರಕ್ಷೆಗಳೊ ಎಂಬಂತೆ ಅವುಗಳನ್ನು ಕಟ್ಟಿಕೊಳ್ಳುತ್ತಾ, ಇದೆಲ್ಲವನ್ನು ಬರಿಯ ಔಪಚಾರಿಕ ವಿಷಯವಾಗಿ ಮಾರ್ಪಡಿಸಿದರು. ಅವರ ಆರಾಧನೆಯು ಹೃದಯದಿಂದ ಬರುವುದು ನಿಂತುಹೋಯಿತು ಮತ್ತು ಯೆಹೋವನಿಂದ ತಿರಸ್ಕರಿಸಲ್ಪಟ್ಟರು.—ಯೆಶಾಯ 29:13, 14; ಮತ್ತಾಯ 15:7-9.
ಮೇಲ್ವಿಚಾರಣೆಯ ಸ್ಥಾನಗಳಲ್ಲಿರುವವರ ಜವಾಬ್ದಾರಿ
16. ಶಾಸ್ತ್ರದ ಕ್ರಮವಾದ ಓದುವಿಕೆಯು ಯೆಹೋಶುವನಿಗೆ ಪ್ರಾಮುಖ್ಯವಾಗಿತ್ತು ಏಕೆ?
16 ಶಾಸ್ತ್ರದ ಓದುವಿಕೆಯ ವಿಷಯದಲ್ಲಿ, ಯಾರು ಜನಾಂಗದ ಮೇಲ್ವಿಚಾರಕರಾಗಿದ್ದರೊ ಅವರ ಕಡೆಗೆ ವಿಶೇಷ ಗಮನವು ನಿರ್ದೇಶಿಸಲ್ಪಟ್ಟಿತು. ಯೆಹೋಶುವನಿಗೆ ಯೆಹೋವನು ಹೇಳಿದ್ದು: “ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನೆಡೆಯುವದರಲ್ಲಿ ಸ್ಥಿರಚಿತ್ತನಾಗಿರು.” ಆ ಜವಾಬ್ದಾರಿಯನ್ನು ಪೂರೈಸುವ ದೃಷ್ಟಿಯಿಂದ, ಅವನಿಗೆ ಹೀಗೆ ಹೇಳಲಾಯಿತು: “ಹಗಲಿರುಳು ಅದನ್ನು ಧ್ಯಾನಿಸು . . . ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.” (ಯೆಹೋಶುವ 1:7, 8) ಇಂದು ಯಾವುದೇ ಕ್ರೈಸ್ತ ಮೇಲ್ವಿಚಾರಕನ ವಿಷಯದಲ್ಲಿ ಸತ್ಯವಾಗಿರುವಂತೆಯೇ, ಶಾಸ್ತ್ರಗಳ ಕ್ರಮವಾದ ಓದುವಿಕೆಯು, ಯೆಹೋವನು ತನ್ನ ಜನರಿಗೆ ಕೊಟ್ಟಂತಹ ನಿರ್ದಿಷ್ಟ ಆಜ್ಞೆಗಳನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿಗಿ ಇಟ್ಟುಕೊಳ್ಳುವಂತೆ ಯೆಹೋಶುವನಿಗೆ ಸಹಾಯ ಮಾಡಲಿತ್ತು. ವಿಭಿನ್ನ ಪರಿಸ್ಥಿಗಳಲ್ಲಿ ಯೆಹೋವನು ತನ್ನ ಸೇವಕರೊಂದಿಗೆ ಹೇಗೆ ವ್ಯವಹರಿಸಿದನ್ದೆಂದು ಸಹ ಯೆಹೋಶುವನು ತಿಳಿಯಬೇಕಿತ್ತು. ದೇವರ ಉದ್ದೇಶದ ಹೇಳಿಕೆಗಳನ್ನು ಅವನು ಓದಿದಂತೆ, ಆ ಉದ್ದೇಶದ ಸಂಬಂಧದಲ್ಲಿ ತನ್ನ ಸ್ವಂತ ಜವಾಬ್ದಾರಿಯ ಕುರಿತು ಯೋಚಿಸುವುದು ಅವನಿಗೆ ಪ್ರಾಮುಖ್ಯವಾಗಿತ್ತು.
17. (ಎ) ಯೆಹೋವನು ಹೇಳಿದಂತಹ ವಿಧದಲ್ಲಿ ಶಾಸ್ತ್ರದ ಓದುವಿಕೆಯಿಂದ ರಾಜರು ಪ್ರಯೋಜನ ಪಡೆಯಬೇಕಾಗಿದ್ದರೆ, ತಮ್ಮ ಓದುವಿಕೆಯೊಂದಿಗೆ ಯಾವುದರ ಅಗತ್ಯವಿತ್ತು? (ಬಿ) ಕ್ರಮವಾದ ಬೈಬಲ್ ಓದುವಿಕೆ ಮತ್ತು ಮನನವು ಕ್ರೈಸ್ತ ಹಿರಿಯರಿಗೆ ಬಹಳ ಪ್ರಾಮುಖ್ಯವಾಗಿದೆ ಏಕೆ?
17 ತನ್ನ ಜನರ ಮೇಲೆ ರಾಜನೋಪಾದಿ ಸೇವಿಸುವ ಯಾವನೇ ವ್ಯಕ್ತಿಯು, ತನ್ನ ರಾಜತನದ ಆರಂಭದಲ್ಲಿ, ಯಾಜಕರು ಇಟ್ಟುಕೊಳ್ಳುವ ಪ್ರತಿಯ ಮೇಲೆ ಆಧರಿಸಿ ದೇವರ ಧರ್ಮಶಾಸ್ತ್ರದ ಒಂದು ನಕಲನ್ನು ಮಾಡಿಕೊಳ್ಳಬೇಕೆಂದು ಯೆಹೋವನು ನಿರ್ದೇಶಿಸಿದನು. ಅನಂತರ ಅವನು “ತನ್ನ ಜೀವಮಾನದ ದಿನಗಳೆಲ್ಲಾ ಅದರಲ್ಲಿ ಓದಿಕೊಳ್ಳುತ್ತಾ ಇರಬೇಕು.” ಉದ್ದೇಶವು ಕೇವಲ ಅದರ ಒಳವಿಷಯಗಳನ್ನು ಬಾಯಿಪಾಠ ಮಾಡುವುದಾಗಿರಲಿಲ್ಲ. ಬದಲಿಗೆ, “ಮದದಿಂದ ತನ್ನ ಸ್ವದೇಶದವರನ್ನು ಹಿಯ್ಯಾಳಿಸದೆ” ಮತ್ತು “ತನ್ನ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ” ಇರಲು ಕಲಿಯುವುದು ಅದರ ಉದ್ದೇಶವಾಗಿತ್ತು. (ಧರ್ಮೋಪದೇಶಕಾಂಡ 17:18-20) ಅವನು ಏನನ್ನು ಓದುತ್ತಿದ್ದನೊ ಅದರ ಕುರಿತು ಆಳವಾಗಿ ಮನನ ಮಾಡುವುದನ್ನು ಇದು ಅವಶ್ಯಪಡಿಸಿತು. ಅದನ್ನು ಮಾಡಲು ಆಡಳಿತದ ಕರ್ತವ್ಯಗಳಲ್ಲಿ ಬಹಳ ಕಾರ್ಯಮಗ್ನರಾಗಿದ್ದೇವೆಂದು ಅರಸರಲ್ಲಿ ಕೆಲವರು ಯೋಚಿಸಿದರೆಂಬುದು ವ್ಯಕ್ತ, ಮತ್ತು ಅವರ ಅಸಡ್ಡೆಯ ಕಾರಣ ಇಡೀ ಜನಾಂಗವು ಕಷ್ಟಾನುಭವಿಸಿತು. ಕ್ರೈಸ್ತ ಸಭೆಯಲ್ಲಿರುವ ಹಿರಿಯರ ಪಾತ್ರವು ಖಂಡಿತವಾಗಿಯೂ ರಾಜರ ಪಾತ್ರವಾಗಿಲ್ಲ. ಆದರೂ, ರಾಜರ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ಹಿರಿಯರು ದೇವರ ವಾಕ್ಯವನ್ನು ಓದಿ ಮನನ ಮಾಡುವುದು ಪ್ರಾಮುಖ್ಯವಾಗಿದೆ. ಹಾಗೆ ಮಾಡುವುದು, ತಮ್ಮ ಪರಾಮರಿಕೆಗೆ ವಹಿಸಲ್ಪಟ್ಟವರ ಕಡೆಗೆ ಯೋಗ್ಯವಾದ ನೋಟವನ್ನು ಕಾಪಾಡುವಂತೆ ಅವರಿಗೆ ಸಹಾಯ ಮಾಡುವುದು. ದೇವರನ್ನು ನಿಜವಾಗಿಯೂ ಘನಪಡಿಸುವ ಮತ್ತು ಜೊತೆ ಕ್ರೈಸ್ತರನ್ನು ಆತ್ಮಿಕವಾಗಿ ಬಲಪಡಿಸುವ ವಿಧದಲ್ಲಿ, ಅವರು ಬೋಧಕರೋಪಾದಿ ತಮ್ಮ ಜವಾಬ್ದಾರಿಯನ್ನು ನೆರವೇರಿಸುವಂತೆಯೂ ಅದು ಸಹಾಯ ಮಾಡುವುದು.—ತೀತ 1:9; ಹೋಲಿಸಿ ಯೋಹಾನ 7:16-18; 1 ತಿಮೊಥೆಯ 1:6, 7ರ ವ್ಯತ್ಯಾಸ ತೋರಿಸಿರಿ.
18. ಬೈಬಲಿನ ಕ್ರಮವಾದ ಓದುವಿಕೆ ಮತ್ತು ಅಧ್ಯಯನವು ಅಪೊಸ್ತಲ ಪೌಲನಿಂದ ಸ್ಥಾಪಿಸಲ್ಪಟ್ಟ ಯಾವ ಮಾದರಿಯನ್ನು ಅನುಕರಿಸುವಂತೆ ನಮಗೆ ಸಹಾಯ ಮಾಡುವುದು?
18 ಪ್ರಥಮ ಶತಮಾನದ ಕ್ರೈಸ್ತ ಮೇಲ್ವಿಚಾರಕನಾದ ಅಪೊಸ್ತಲ ಪೌಲನು, ಪ್ರೇರಿತ ಶಾಸ್ತ್ರಗಳನ್ನು ಚೆನ್ನಾಗಿ ಬಲ್ಲ ಒಬ್ಬ ವ್ಯಕ್ತಿಯಾಗಿದ್ದನು. ಪ್ರಾಚೀನ ಥೆಸಲೊನೀಕದಲ್ಲಿದ್ದ ಜನರಿಗೆ ಅವನು ಸಾಕ್ಷಿನೀಡಿದಾಗ, ಅವರೊಂದಿಗೆ ಶಾಸ್ತ್ರಗಳಿಂದ ಪರಿಣಾಮಕಾರಿಯಾಗಿ ವಿವೇಚಿಸಲು ಮತ್ತು ಅರ್ಥವನ್ನು ತಿಳಿಯುವಂತೆ ಅವರಿಗೆ ಸಹಾಯ ಮಾಡಲು ಅವನು ಶಕ್ತನಾಗಿದ್ದನು. (ಅ. ಕೃತ್ಯಗಳು 17:1-4) ಪ್ರಾಮಾಣಿಕ ಕೇಳುಗರ ಹೃದಯಗಳನ್ನು ಅವನು ತಲಪಿದನು. ಹೀಗೆ, ಕೇಳಿದ ಅನೇಕರು ನಂಬುವವರಾದರು. (1 ಥೆಸಲೊನೀಕ 2:13) ಬೈಬಲ್ ಓದುವಿಕೆ ಮತ್ತು ಅಧ್ಯಯನದ ನಿಮ್ಮ ಕಾರ್ಯಕ್ರಮದ ಫಲಿತಾಂಶವಾಗಿ, ಶಾಸ್ತ್ರಗಳಿಂದ ಪರಿಣಾಮಕಾರಿಯಾಗಿ ವಿವೇಚಿಸಲು ನೀವು ಶಕ್ತರಾಗಿದ್ದೀರೊ? ಬೈಬಲ್ ಓದುವಿಕೆಯು ನಿಮ್ಮ ಜೀವಿತದಲ್ಲಿ ವಹಿಸಿರುವ ಸ್ಥಾನವು ಮತ್ತು ನೀವು ಅದನ್ನು ಮಾಡುವ ವಿಧಾನವು, ನಿಮ್ಮ ವಶದಲ್ಲಿ ದೇವರ ವಾಕ್ಯವನ್ನು ಪಡೆದಿರುವುದರ ಅರ್ಥವನ್ನು ನೀವು ನಿಜವಾಗಿಯೂ ಗಣ್ಯಮಾಡುತ್ತೀರಿ ಎಂಬ ಪ್ರಮಾಣವನ್ನು ಕೊಡುತ್ತದೊ? ಮುಂದಿನ ಲೇಖನದಲ್ಲಿ, ಯಾರ ವೇಳಾಪಟ್ಟಿಗಳು ಸಮಗ್ರವಾಗಿ ತುಂಬಿವೆಯೊ ಅವರಿಂದಲೂ ಈ ಪ್ರಶ್ನೆಗಳಿಗೆ ಒಂದು ನಕಾರಾತ್ಮಕ ಉತ್ತರವು ಹೇಗೆ ಕೊಡಲು ಸಾಧ್ಯ ಎಂಬುದನ್ನು ನಾವು ಪರಿಗಣಿಸೋಣ.
ನೀವು ಹೇಗೆ ಉತ್ತರಿಸುವಿರಿ?
▫ ಬೈಬಲನ್ನು ಓದುವ ಸಲುವಾಗಿ ಜನರು ಜೀವವನ್ನು ಮತ್ತು ಸ್ವಾತಂತ್ರ್ಯವನ್ನು ಅಪಾಯಕ್ಕೆ ಈಡುಮಾಡಲು ಸಿದ್ಧರಾಗಿದ್ದರು ಏಕೆ?
▫ ದೇವರ ವಾಕ್ಯವನ್ನು ಪ್ರಾಚೀನ ಇಸ್ರಾಯೇಲು ಕೇಳಿಸಿಕೊಳ್ಳುವಂತೆ ಮಾಡಲಾದ ಒದಗಿಸುವಿಕೆಗಳನ್ನು ಪುನರ್ವಿಮರ್ಶಿಸುವ ಮೂಲಕ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?
▫ ಬೈಬಲಿನಲ್ಲಿ ನಾವು ಓದುವ ವಿಷಯದೊಂದಿಗೆ ನಾವು ಏನು ಮಾಡಬೇಕು?
▫ ಬೈಬಲ್ ಓದುವಿಕೆ ಮತ್ತು ಮನನವು ವಿಶೇಷವಾಗಿ ಕ್ರೈಸ್ತ ಹಿರಿಯರಿಗೆ ಪ್ರಾಮುಖ್ಯವಾಗಿದೆ ಏಕೆ?
[ಪುಟ 9 ರಲ್ಲಿರುವ ಚಿತ್ರ]
ಯೆಹೋವನು ಯೆಹೋಶುವನಿಗೆ ಹೇಳಿದ್ದು: “ಹಗಲಿರುಳು ಅದನ್ನು ಧ್ಯಾನಿಸುತ್ತಾ” ಇರಬೇಕು