‘ಅವರು ಪುನರುತ್ಥಾನದಲ್ಲಿ ಏಳುವರು ಎಂದು ನಮಗೆ ತಿಳಿದದೆ’
ಸರ್ವಶಕ್ತನಾದ ದೇವರು ಮಾನವ ಕುಲಕ್ಕೆ ಜೀವವನ್ನು ಕೊಟ್ಟನು. ಸತ್ತ ಜನರಿಗೂ ಅದನ್ನು ಪುನ: ಕೊಡಲು ಅವನು ಶಕ್ತನು. ಆತನಿಂದಲೇ ಜೀವ ಮತ್ತು ಮರಣದ ಸಮಾಚಾರದ ಅತ್ಯಂತ ನಂಬಲರ್ಹ ಉಗಮವೂಂದು ನಮಗಿದೆ. ಹಿಬ್ರೂ ಮತ್ತು ಗ್ರೀಕ್ ಶಾಸ್ತ್ರಗ್ರಂಥಗಳೆಂಬ ಎರಡು ಭಾಗಗಳು ಕೂಡಿರುವ ಬೈಬಲೇ ಅದು. ಅಧಿಕಾಂಶ ಸತ್ತವರು ಪುನ: ಹಿಂದೆ ಬರಸಾಧ್ಯವಿದೆ ಮತ್ತು ಬರಲಿದ್ದಾರೆಂಬ ನಿಜಸಂಗತಿಯು ಅದರಲ್ಲಿ ಅಡಕವಾಗಿದೆ.—ಯೋಹಾನ 5:28, 29.
ಉದಾಹರಣೆಗಾಗಿ, ಯೇಸುಕ್ರಿಸ್ತನಿಗೆ ಚಿರ ಪರಿಚಿತನಾಗಿದ್ದ ಬೇಥಾನ್ಯದ ಲಾಜರನ ಚಾರಿತ್ರಿಕ ವೃತ್ತಾಂತವನ್ನು ಗಮನಿಸಿರಿ. ಲಾಜರನು ಅಸ್ವಸ್ಥನಾಗಿದ್ದನು ಮತ್ತು ಅನಂತರ ಸತ್ತನು. ತದನಂತರ ಲಾಜರನ ಸೋದರಿ ಮಾರ್ಥಳಿಗೆ ಯೇಸುವಂದದ್ದು: “ನಿನ್ನ (ಮೃತ) ತಮ್ಮನು ಎದ್ದು ಬರುವನು” ಎಂದಾಗ ಅವಳು ಉತ್ತರಿಸಿದ್ದು: “ಸತ್ತವರಿಗೆ ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು.” (ಯೋಹಾನ 11:23, 24) ಹೌದು, ಅವಳಿಗೆ ಗೊತ್ತಿತ್ತು. ನಂಬಲರ್ಹ ಸಮಾಚಾರದ ಆಧಾರದ ಮೇಲೆ ಅವರ ಪ್ರಿಯ ತಮ್ಮ ಲಾಜರನು “ಕಡೇ ದಿನದಲ್ಲಿ” ಎದ್ದುಬರುವನೆಂಬದರಲ್ಲಿ ಅವಳಿಗೇನೂ ಸಂದೇಹವಿರಲಿಲ್ಲ.
ನೀವು ಯೋಹಾನ 11ನೇ ಅಧ್ಯಾಯದಲ್ಲಿ ಈ ಐತಿಹಾಸಿಕ ದಾಖಲೆಯನ್ನು ಓದುತ್ತಿರುವಾಗ, ಆಗೇನು ಸಂಭವಿಸಿತೆಂಬ ವಿವರವನ್ನು ಕಾಣುವಿರಿ. ಲಾಜರನು ಸತ್ತು ನಾಲ್ಕು ದಿನಗಳಾಗಿದ್ದರೂ, ಯೇಸು ಅವನನ್ನು ಪುನ: ಜೀವಂತ ಮಾಡಿದನು. ಸತ್ತವರನ್ನು “ಕಡೇ ದಿನದಲ್ಲಿ” ಎಬ್ಬಿಸುವೆನೆಂಬ ತನ್ನ ವಚನವನ್ನು ದೇವರು ನೆರವೇರಿಸ ಶಕ್ತನೆಂಬದಕ್ಕೆ ಆ ಪುನರುತ್ಥಾನ ಒಂದು ರುಜುವಾತು. ಆದರೆ ಲಾಜರನನ್ನು ಪುನ: ಎಲ್ಲಿ ನೋಡಲು ಮಾರ್ಥಳು ನಿರೀಕ್ಷಿಸಿದ್ದಳು? ಬರಲಿರುವ ಪುನರುತ್ಥಾನವು ಎಲ್ಲಿ ನಡಿಯುವದೆಂದು ಇತರ ನಂಬಿಗಸ್ತ ಯೆಹೂದ್ಯರು ಊಹಿಸಿದ್ದರು?
‘ಹಿಂದಿರುಗದ ದೇಶ’
ಭೂಮಿಯು ಮನುಷ್ಯನ ನೈಸರ್ಗಿಕ ನೆಲೆಯಾಗಿರುವಂತೆ ದೇವರು ಆರಿಸಿದನು. ಕೀರ್ತನೆಗಾರನು ಅದನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾನೆ: “ಪರಲೋಕವು ಯೆಹೋವನದ್ದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿ.ದ್ದಾನೆ.” (ಕೀರ್ತನೆ 115:16) ಆದಾಮ ಮತ್ತು ಹವ್ವರು ದೇವರಿಗೆ ನಂಬಿಗಸ್ತರಾಗಿ ಉಳಿದಿದ್ದರೆ, ಭೂಮಿಯನ್ನು ಬಿಟ್ಟು ಬೇರೆಲ್ಲಿಯೋ ನಿತ್ಯಜೀವವನ್ನು ಪಡೆಯುತ್ತಿದ್ದರೆಂದು ಪವಿತ್ರಶಾಸ್ತ್ರ ಎಲ್ಲಿಯೂ ಸೂಚಿಸುವುದಿಲ್ಲ. ವಾಸ್ತವದಲ್ಲಿ, ಅವರು ದೇವರಿಗೆ ಅವಿಧೇಯತೆಯ ಪಥದಲ್ಲಿ ಬೀಳುವ ಮುಂಚೆ, ಪ್ರಥಮ ಮಾನವ ದಂಪತಿಗಳು ಆನಂದಿಸಿದ ಪರದೈಸದಲ್ಲಿ ಅಂದರೆ ಇದೇ ಭೂಮಿಯಲ್ಲಿ ಆ “ಜೀವ ವೃಕ್ಷವು” ಇತ್ತಲ್ಲವೇ? (ಆದಿಕಾಂಡ 2:9; 3:22) ಇದಕ್ಕೆ ವ್ಯತಿರಿಕ್ತವಾಗಿ ಯಾವುದೇ ಸಮಾಚಾರವು ಅಲ್ಲಿರದರ್ದಿಂದ, ಏದೆನ್ ತೋಟದ ಹೊರಗೆ ಅವನ ನಂಬಿಗಸ್ತ ಸೇವಕರು (ಆದಾಮನ ದೇವಭೀರು ಪುತ್ರ ಹೇಬೆಲನಿಂದ ಹಿಡಿದು) ಅವಶ್ಯಕತೆಯ ಕಾರಣ, ಮಾನವನಿಗೆ ತಿಳಿದಿರುವ ಒಂದೇ ಮನೆ—ಯಾದ ಈ ಭೂಮಿಯೊಂದಿಗೆ ಪುನರುತ್ಥಾನವನ್ನು ಜತೆಗೂಡಿಸುವರು.
‘ಈಗ ನಿಲ್ಲಿ,’ ಎಂದು ಬೈಬಲಿನ ಪರಿಚಯವಿರುವ ಕೆಲವರು ಅಡ್ಡಿ ಎಬ್ಬಿಸುತ್ತಾ, ‘ಯೋಬ 16ನೇ ಅಧ್ಯಾಯ 22ನೇ ವಚನದಲ್ಲಿ ಯೋಬನು ತಾನು ‘ಹಿಂದಿರುಗದ ದಾರಿ’ ‘ಹಿಡಿದು’ ದೂರ ಹೋಗುವನೆಂದು ಹೇಳಲಿಲ್ಲವೋ? ಎನ್ನಬಹುದು. ಮತ್ತು ಯೋಬ 7:9 ರಲ್ಲಿ, “ಪಾತಾಳಕ್ಕೆ (ಶಿಯೋಲ್) ಹೋದವನು ತಿರಿಗಿ ಬರುವುದಿಲ್ಲ” ಮತ್ತು 10ನೇ ವಚನದಲ್ಲಿ ಯೋಬನು ಕೂಡಿಸುತ್ತಾ, “ಅವನು ಪುನ: ತನ್ನ ಮನೆಗೆ ಸೇರುವದಿಲ್ಲ, ಇನ್ನು ಮೇಲೆ ಅವನ ನಿವಾಸವು ಅವನನ್ನು ತಿಳಿಯುವುದಿಲ್ಲ” ಎಂದು ಹೇಳಿಲ್ಲವೇ ಎನ್ನುತ್ತಾರೆ.
ಆದುದರಿಂದ, ಕೆಲವು ವಿದ್ವಾಂಸರು ವಾದಿಸುವಂತೆ, ಈ ವಚನಗಳು ಮತ್ತು ತದ್ರೀತಿಯ ಹೇಳಿಕೆಗಳು, ಯೋಬನು ಮರಣವನ್ನು ‘ಹಿಂದಿರುಗದ ದೇಶ’ ವಾಗಿ ನೋಡಿದ್ದನೆಂದು ತೋರಿಸುತ್ತವೋ? ಇಂತಹ ಹೇಳಿಕೆಗಳು ಯೋಬನು ಒಂದು ಭಾವೀ ಪುನರುತ್ಥಾನದಲ್ಲಿ ನಂಬಿಕೆ ಇಡಲ್ಲಿಲ್ಲವೆಂದು ಅರ್ಥೈಸುತ್ತವೋ?ಉತ್ತರಕ್ಕಾಗಿ, ಈ ಮಾತುಗಳನ್ನು ಅದರ ನಾವದರ ಹಿನ್ನೆಲೆಯೊಟ್ಟಿಗೆ ತೆಗೆದುಕೊಳ್ಳಬೇಕು ಮತ್ತು ಈ ವಿಷಯದ ಮೇಲೆ ಯೋಬನು ತಿಳಿಸಿದ ಇನ್ನಿತರ ವಿಚಾರಗಳೊಂದಿಗೆ ತುಲನೆ ಮಾಡಬೇಕು.
ತನ್ನ ಬಾಧೆಯ ಕಾರಣಗಳೇನೆಂದು ಯೋಬನಿಗೆ ತಿಳಿದಿರಲಿಲ್ಲ. ಕೆಲವು ಸಮಯದ ತನಕ, ತನ್ನ ಸಂಕಟಕ್ಕೆ ದೇವರು ಜವಾಬ್ದಾರನೆಂದು ಅವನು ತಪ್ಪಾಗಿ ಗ್ರಹಿಸಿಕೊಂಡಿದ್ದನು. (ಯೋಬ 6:4; 7:17-20; 16:11-13) ಕುಂದಿತನಾಗಿ, ತನಗಿರುವ ತಕ್ಷಣದ ಬಿಡುಗಡೆಯ ಸ್ಥಳ ಸಮಾಧಿ ಮಾತ್ರ ಎಂದವನು ಭಾವಿಸಿದನು. (ಯೋಬ 7:21; 17:1; 3:11-13 ಹೋಲಿಸಿ.) ಅಲ್ಲಿ, ಅವನ ಸಮಕಾಲೀನರ ದೃಷ್ಟಿಕೋನದಿಂದ, ಅವನು ಕಾಣಲಿಕ್ಕಿರಲಿಲ್ಲ, ತನ್ನ ಮನೆಗೆ ಹಿಂದಿರುಗಲಿಕ್ಕಿರಲಿಲ್ಲ, ಅವನ ನಿವಾಸ ಅವನನ್ನು ತಿಳಿಯಲಿಕ್ಕಿರಲಿಲ್ಲ, ಮತ್ತು ದೇವರ ನೇಮಿತ ಸಮಯಕ್ಕೆ ಮುಂಚೆ ಹಿಂದಿರುಗುವ ಯಾ ಹಿಂದೆ ಬರುವ ಪ್ರತೀಕ್ಷೆಯಾಗಲಿ ಅವನಿಗಿರಲಿಲ್ಲ. ದೇವರ ಹಸ್ತಕ್ಷೇಪದ ಹೊರತು ಅವರಷ್ಟಕ್ಕೇ ಬಿಡಲ್ಪಟ್ಟಲ್ಲಿ, ಯೋಬನಾಗಲಿ ಆದಾಮನ ಸಂತತಿಯಲ್ಲಿ ಬೇರೆ ಯಾರೇ ಆಗಲಿ ಸತ್ತವರೊಳಗಿಂದ ಎದ್ದುಬರಲು ಶಕ್ತರಿರಲಿಲ್ಲ.a—ಯೋಬ 7:9, 10; 10:21; 14:12.
ಪುನರುತ್ಥಾನದಲ್ಲಿ ನಂಬಿಕೆ
ತಾನು ಅನುಭವಿಸುತ್ತಿದ್ದ ಅನಿಶ್ಚಿತತೆಗಳ ಕುರಿತು ಮತ್ತು ತನ್ನ ತತ್ಕ್ಷಣದ ಭವಿಷ್ಯದ ಮೇಲಣ ದು:ಖಕರ ಹೇಳಿಕೆಗಳ ಮೂಲಕ, ಅವನಿಗೆ ಪುನರುತ್ಥಾನದಲ್ಲಿ ನಂಬಿಕೆ ಇರಲಿಲ್ಲವೆಂದು ನಾವು ಅರ್ಥಮಾಡಬಾರದು. ಯೋಬ 14:13-15 ರಿಂದ, ಆತನು ಭಾವೀ ಪುನರುತ್ಥಾನವನ್ನು ಖಂಡಿತವಾಗಿಯೂ ನಂಬಿದ್ದನೆಂದು ಸ್ಪಷ್ಟವಾಗುತ್ತದೆ. ಆ ನುಡಿಗಳಲ್ಲಿ, ‘ಶಿಯೋಲಿನಲ್ಲಿ ಬಚ್ಚಿಡಲ್ಪಟ್ಟು’ ಮತ್ತು ದೇವರಿಂದ ‘ಕೊನೆಗೆ ನೆನಪಿಸಲ್ಪಡುವ’ ಆಶೆಯ ಕುರಿತು ಯೋಬನು ಮಾತಾಡಿದ್ದಾನೆ. ಅದಲ್ಲದೇ, ಯೋಬ 19:25-27 ರಲ್ಲಿ ಈ ನಂಬಿಗೆಯ ಮತ್ತು ಸಮಗ್ರತೆಯ ಮನುಷ್ಯನು ಒಬ್ಬ ‘ವಿಮೋಚಕನು’ ಇರುವುದರ ಮತ್ತು ನಂತರ ‘ದೇವರನ್ನು ಕಣ್ಣಾರೆ ಕಾಣುವ’ ಕುರಿತೂ ಮಾತಾಡಿದ್ದಾನೆ. ಹೌದು, ಯೋಬನು ಪುನರುತ್ಥಾನದಲ್ಲಿ ನಂಬಿದ್ದನು. ಹೌದು, ಯಾವ ರೀತಿ ಈ ಮುಂಚೆ ‘ಸತ್ತವರನ್ನು ಎಬ್ಬಿಸುವುದರಲ್ಲಿ’ ದೇವರಿಗಿರುವ ಶಕ್ತಿಯ ಕುರಿತು ಅಬ್ರಹಾಮನಿಗೆ ಮನವರಿಕೆ ಇತ್ತೋ, ತದ್ರೀತಿಯಲ್ಲಿ ದೇವರು ಸತ್ತವರನ್ನು ಪುನ: ಜೀವಕ್ಕೆ ತರಶಕ್ತನು ಮತ್ತು ತರುವನು ಎಂದವನು ನಂಬಿದ್ದನು.—ಇಬ್ರಿಯ 11:10, 16, 19, 35.
ನಮ್ಮೀ ಆಧುನಿಕ ಸಮಯಗಳ ತನಕವೂ, ಯೆಹೂದ್ಯರು ಭೂಮಿಯ ಮೇಲೆ ಜೀವಿಸುವ ಒಂದು ಭಾವೀ ಪುನರುತ್ಥಾನವನ್ನು ನಂಬಿದ್ದಾರೆ. ಎನ್ಸೈಕ್ಲೊಪೀಡಿಯ ಜುಡೈಕಾ (1971) ಹೇಳುವುದು: “ಕಟ್ಟಕಡೆಗೆ ಸತ್ತವರು ತಮ್ಮ ದೇಹದಲ್ಲಿ ಪುನ: ಜೀವಿತರಾಗಿ ಬರುವರು ಮತ್ತು ಭೂಮಿಯ ಮೇಲೆ ಪುನ: ಜೀವಿಸುವರು ಎಂಬ ವಿಶ್ವಾಸವು” ಯೆಹೂದ್ಯ ಮತಸ್ಥರ “ಒಂದು ಪ್ರಮುಖ ನಂಬಿಕೆ” ಯಾಗಿದೆ. ಎನ್ಸೈಕ್ಲೊಪೀಡಿಯ ಮುಂದರಿಸಿದ್ದು: “ಈ ಕಲ್ಪನೆಯನ್ನು ಎಷ್ಟೊಂದು ಗಂಭೀರವಾಗಿ ಮತ್ತು ಅಕ್ಷರಶ:ವಾಗಿ ತಕ್ಕೊಳ್ಳಲಾಗುತ್ತದೆಂದರೆ, ಧರ್ಮಭೀರು ಯೆಹೂದ್ಯರು ತಮ್ಮ ಹೂಣಿಡುವಿಕೆಯಲ್ಲಿ ಹಾಕಲ್ಪಡುವ ವಸ್ತ್ರಗಳು, ಸಕಲ ಅವಯವಗಳ ಪೂರ್ತಿಹೂಳುವಿಕೆ, ಮತ್ತು ಇಸ್ರೇಲಿನಲ್ಲಿ ಹೂಣಲ್ಪಡುವ ವಿಷಯದಲ್ಲಿ ಹೆಚ್ಚಾಗಿ ಚಿಂತಿತರಿರುತ್ತಾರೆ.”
ಆಸಕ್ತಿಕರವಾಗಿಯೇ, ಪುನರುತ್ಥಾನದಲ್ಲಿ ದೇವರು ಸತ್ತಮಾನವರ ಕೊಳೆತ ದೇಹಗಳನ್ನು ಪುನ: ಸೇರಿಸುತ್ತಾನೆಂದು ಬೈಬಲು ಹೇಳುವುದಿಲ್ಲ. ದೀರ್ಘಕಾಲದಿಂದ ಸತ್ತವರ ಕಣಗಳು ಅಂದಿನಿಂದ ಕಾರ್ಯಥಾ ಭೂಮಿಯಲ್ಲೆಲ್ಲಾ ಹರಡಿವೆ, ಫಲಿತಾಂಶವಾಗಿ, ಸಸ್ಯ ಮತ್ತು ಪಶು ಜೀವಿಗಳಲ್ಲಿ ಸಂಯೋಜಿತವಾಗಿ—ಹೌದು, ತದನಂತರ ಸತ್ತ ಮಾನವರೊಳಗೂ ಸೇರಿ ಹೋಗಿರಬಹುದು. ಪುನರುತ್ಥಾನದಲ್ಲಿ ಒಬ್ಬನಿಗಿಂತ ಹೆಚ್ಚು ವ್ಯಕ್ತಿಗಳನ್ನೆಬ್ಬಿಸಲು ಅವೇ ಕಣಗಳನ್ನುಪಯೋಗಿಸಲಾಗದೆಂಬದು ಸುವ್ಯಕ್ತ. ಬದಲಾಗಿ, ಯಾವುದೇ ಅಂಗಾಂಗಗಳು ತಪ್ಪದೇ ಯಾ ಮರಣದ ಮೊದಲು ಇದ್ದ ಯಾವ ನ್ಯೂನತೆಗಳಿಲ್ಲದೇ, ದೇವರು ತನಗೆ ತೋಚುವ ಪ್ರಕಾರ ತಕ್ಕದಾದ ಯೋಗ್ಯ ದೇಹಗಳೊಂದಿಗೆ ಮಾನವರನ್ನು ಪುನ: ಜೀವಿತಕ್ಕೆ ತರುವನು.—1 ಕೊರಿಂಥ 15:35-38 ಹೋಲಿಸಿ.
ಪುನ: ಜೀವಿತಕ್ಕೆ ತರಲ್ಪಟ್ಟವರು, ಪುನರುತ್ಥಾನಗೊಂಡ ತಮ್ಮ ಮಿತ್ರರಿಂದ ಮತ್ತು ಸಂಬಂಧಿಕರಿಂದ ಗುರುತಿಸಲ್ಪಡುವರೋ? ಅದು ತರ್ಕಬದ್ಧವಾಗಿ ತೋರುತ್ತದೆ, ಯಾಕೆಂದರೆ ಎಬ್ಬಿಸಲ್ಪಟ್ಟ ಸತ್ತವರನ್ನು ನಾವು ಗುರುತಿಸದಿದ್ದರೆ ಮತ್ತು ಅವರು ನಮ್ಮನ್ನು ಗುರುತಿಸದಿದ್ದರೆ, ನಮ್ಮ ಸತ್ತ ಪ್ರಿಯಜನರು ನಿಜವಾಗಿ ಎದ್ದಿದ್ದಾರೆಂದು ನಮಗೆ ತಿಳಿಯುವುದು ಹೇಗೆ? ಲಾಜರನ ದೇಹವು ಕೊಳೆತಿದ್ದರೂ, ಯೇಸು ಅವನನ್ನು ಪುನರುತ್ಥಾನ ಮಾಡಿದಾಗ, ಅವನ ಸಂಬಂಧಿಕರಿಂದ ಮತ್ತು ಪರಿಚಿತರಿಂದ ಅವನು ಗುರುತಿಸಲ್ಪಟ್ಟನು. ಈ ರೀತಿ, ಭೂಜೀವಿತಕ್ಕಾಗಿ ಪುನರುತ್ಥಾನದಲ್ಲಿ ನಾವು ಒಬ್ಬರನ್ನೊಬ್ಬರು ನೋಡುವಂತೆ ಮತ್ತು ತಿಳಿಯುವಂತೆ ಯೆಹೋವ ದೇವರು ಪ್ರೀತಿಯಿಂದ ಮಾಡುವನೆಂದು ನಾವೂ ನಿರೀಕ್ಷಿಸಬಹುದು.
ಕೊಂಚಮಂದಿಗೆ ಒಂದು ಸ್ವರ್ಗೀಯ ನಿರೀಕ್ಷೆ
ನಾವೀಗಲೇ ನೋಡಿದಂತೆ, ಭೂಮಿಯು ಮಾನವನ ದೇವರಿತ್ತ ಮನೆಯಾಗಿದೆ. ಆದರೂ, ಮಾನವಕುಲದಿಂದ ಆರಿಸಲ್ಪಟ್ಟ ಒಂದು ಸಂಖ್ಯೆಯವರು ತನ್ನೊಂದಿಗೆ ಪರಲೋಕದಲ್ಲಿ ಒಂದು ನಿರ್ಲಯವಾದ, ಆತ್ಮಿಕ ಅಮರ ಜೀವಿತಕ್ಕೆ ಎಬ್ಬಿಸಲ್ಪಡುವರೆಂಬ ಪ್ರತೀಕ್ಷೆಯ ಮೇಲೆ ಯೇಸು ಕ್ರಿಸ್ತನು ಬೆಳಕನ್ನು ಚೆಲ್ಲಿದ್ದಾನೆ. (2 ತಿಮೋಥಿ 1:10) ಸ್ವರ್ಗೀಯ ಜೀವಿತಕ್ಕೆ “ಪ್ರತಿಷ್ಟಿಸಿದ ಜೀವವುಳ್ಳ ಹೊಸದಾರಿಯನ್ನು” ಯೇಸು ಉದ್ಗಾಟಿಸಿದ ನಂತರ ಸ್ವಲ್ಪ ಸಮಯ, ಎಲ್ಲಾ ಕ್ರೈಸ್ತರು ಆ ನಿರೀಕ್ಷೆಯಲ್ಲಿ ಪಾಲಿಗರಾಗಲು ಆಮಂತ್ರಿಸಲ್ಪಟ್ಟರು. (ಇಬ್ರಿಯ 9:24; 10:19, 20) ಕಟ್ಟಕಡೆಗೆ ಎಷ್ಟು ಮಂದಿ ಆ ಬಹುಮಾನವನ್ನು ಪಡೆಯಲಿದ್ದರು? ‘ಬೇಗನೇ ಸಂಭವಿಸಬೇಕಾದ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ ಯೇಸು ದೇವರಿಂದ ಹೊಂದಿದ’ ಪ್ರೇರಿತ ‘ಪ್ರಕಟನೆ’ ಯು ಈ ಸಂಖ್ಯೆಯನ್ನು 144,000 ವೆಂದು ನಮೂದಿಸಿದೆ, ಇವರು “ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟವರು.”—ಪ್ರಕಟನೆ 1:1; 7:4-8; 14:1, 3.
ಸ್ವರ್ಗೀಯ ಜೀವಿತಕ್ಕೆ “ಭೂಮಿಯಿಂದ ಕೊಂಡುಕೊಳ್ಳಲ್ಪಟ್ಟ” ಇವರ ಸಂಖ್ಯೆಯು ಅಷ್ಟೊಂದು ಚಿಕ್ಕದಾಗಿರುವುದೇಕೆ? ಈ ಸೀಮಿತ ಸಂಖ್ಯೆಯ ಕಾರಣವನ್ನು ಅದೇ ಪ್ರಕಟನೆ ಪುಸ್ತಕವು ನಮಗೆ ಕೊಡುತ್ತದೆ. ನಾವು ಅಧ್ಯಾಯ 20, ವಚನ 5 ಮತ್ತು 6 ರಲ್ಲಿ ಓದುವದು: “ಇದೇ ಪ್ರಥಮ ಪುನರುತ್ಥಾನವು. ಪ್ರಥಮ ಪುನರುತ್ಥಾನದಲ್ಲಿ ಸೇರಿರುವನು ಧನ್ಯನೂ ಪರಿಶುದ್ಧನೂ ಆಗಿದ್ದಾನೆ. ಇಂಥವರ ಮೇಲೆ ಎರಡನೆಯ ಮರಣಕ್ಕೆ ಅಧಿಕಾರವಿಲ್ಲ; ಆದರೆ ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.”—ಪ್ರಕಟನೆ 5:9, 10 ನ್ನೂ ನೋಡಿ.
ಅರಸನ ಐಹಿಕ ಪ್ರಜೆಗಳು
ನಿಸ್ಸಂದೇಹವಾಗಿ, ಎಲ್ಲಾ ಮಾನವರು ರಾಜರಾಗಿಯೂ ಯಾಜಕರಾಗಿಯೂ ಆಳುವದಿಲ್ಲ, ಯಾಕಂದರೆ ಎಲ್ಲರೂ ರಾಜರಾಗುವುದಾದರೆ, ಅವರು ಆಳುವುದಾದರೂ ಯಾರ ಮೇಲೆ? ಬದಲಾಗಿ, ವಿಶೇಷವಾಗಿ ಆರಿಸಲ್ಪಟ್ಟ ಈ ಗುಂಪು, ಯೇಸುವಿನ ನಂಬಿಗಸ್ತ ಅಪೋಸ್ತಲರ ಸುತ್ತಲೂ ಕಟ್ಟಲ್ಪಟ್ಟು, ಪ್ರಕಟನೆ 7ನೇ ಅಧ್ಯಾಯದ 9-17 ವಚನಗಳು ವರ್ಣಿಸಿರುವ “ಮಹಾ ಸಮೂಹ” ದವರಿಂದ ಅಂಶಿಕವಾಗಿ ನಿವಾಸಿಸಲ್ಪಡುವ ಭೂಮಿಯ ಮೇಲೆ ಆಡಳಿತ ನಡಸುವರು. ಇವರಲ್ಲಿ ಲಕ್ಷಾಂತರ ಮಂದಿ ಈ ಭೂಮಿಯ ಅನೀತಿಯೆಲ್ಲವನ್ನು ಶುದ್ಧೀಕರಿಸುವ “ಸರ್ವಶಕ್ತನಾದ ದೇವರ ಮಹಾದಿನದ ಯುದ್ಧದ” ಶೀರ್ಘಾಗಮನಕ್ಕಾಗಿ ಮುನ್ನೋಡುತ್ತಿದ್ದಾರೆ. ದೇವರ ಅಪಾತ್ರ ಕೃಪೆಯಿಂದಾಗಿ ಅವರು ಎಂದೂ ಸಾಯದೇ ಪಾರಾಗಿ ಉಳಿಯುವರು.—ಪ್ರಕಟನೆ 16:14; 21:14; ಜ್ಞಾನೋಕ್ತಿ 2:21, 22.
‘ಆದರೆ ನನ್ನ ಪ್ರಿಯ ಜನರಂತೆ ಸತ್ತಿರುವವರ ಕುರಿತಾಗಿ ಏನು?’ ಎಂದು ನೀವು ಕೇಳಬಹುದು. ಯೇಸು ಸ್ವತ: ಮಾರ್ಥಳಿಗೆ ಹೇಳಿದ್ದು ಏನಂದರೆ ಇತರರು ‘ಸತ್ತರೂ ಕೂಡ ಬದುಕುವರು’ ಎಂಬದಾಗಿ. (ಯೋಹಾನ 11:25) ಅದು ಒಂದು ಐಹಿಕ ಪುನರುತ್ಥಾನದಲ್ಲಿ. ಸ್ವರ್ಗದಲ್ಲಿ ತನ್ನ 144,000 ಸಹರಾಜರೂ ಯಾಜಕರೂ ಆದವರೊಂದಿಗೆ ಕ್ರಿಸ್ತನ ಆಳಿಕೆಯ ಸಮಯದಲ್ಲಿ, ದೇವರು ಮೆಚ್ಚಿಕೆಯಿಂದ ಯಾರನ್ನು ನೆನಪಿಸುತ್ತಾನೋ ಆ ಮಿಲ್ಯಾಂತರ ಸತ್ತವರು ಎಬ್ಬಿಸಲ್ಪಡುವರು ಮತ್ತು ಯೆಹೋವನ ನಿಜಾರಾಧನೆಯನ್ನು ಕಲಿಯಲು ಅವರಿಗೆ ಪೂರ್ಣ ಅವಕಾಶವು ಕೊಡಲ್ಪಡುವುದು. ನಂಬಿಗಸ್ತರಾಗಿರುವುದಾದರೆ, ಭೂವ್ಯಾಪಕ ಪರದೈಸದ ಮೇಲೆ ನಿತ್ಯಜೀವದ ಬಹುಮಾನವನ್ನು ಅವರು ಸಂಪಾದಿಸುವರು. ಅದು ಮಾರ್ಥಳು ಅವಳ ತಮ್ಮನಾದ ಲಾಜರನು ಪುನ: ಜೀವಿತನಾಗುವನೆಂದು ಯೇಸುವಿನೊಂದಿಗೆ ಸಹಮತ ವಕ್ತಪಡಿಸಿದ “ಕಡೇದಿನ” ದಲ್ಲಿ.—ಯೋಹಾನ 5:28, 29; ಲೂಕ 23:43.
ಖಾತರಿಗಳ ಮೇಲೆ ಆಧರಿತ ನಿರೀಕ್ಷೆ
ಬೈಬಲಿನಲ್ಲಿ ದಾಖಲೆಯಾಗಿರುವ ಪುನರುತ್ಥಾನಗಳು ಪವಿತ್ರ ಶಾಸ್ತ್ರದಲ್ಲಿ ತಿಳಿಸಿದ ಪುನರುತ್ಥಾನ ನಿರೀಕ್ಷೆಯ ದೃಢ ಖಾತರಿಗಳೂ ನಮೂನೆಗಳೂ ಆಗಿವೆ. ಈ ದಾಖಲೆಗಳು ಕೈಸ್ತಪೂರ್ವ ಸಮಯಗಳಲ್ಲಿ ಪ್ರವಾದಿಗಳಾದ ಎಲೀಯ ಮತ್ತು ಎಲೀಷರಿಂದ, ದೇವರ ಕುಮಾರನಿಂದ (ಲಾಜರನದ್ದೂ ಸೇರಿ), ಅಪೋಸ್ತಲರಾದ ಪೇತ್ರ ಮತ್ತು ಪೌಲರಿಂದ ಭೂಮಿಯಲ್ಲಿ ನಡಿಸಲ್ಪಟ್ಟ ಪುನರುತ್ಥಾನಗಳನ್ನು ಮತ್ತು ವಿಶೇಷವಾಗಿ ಯೆಹೋವ ದೇವರು ತನ್ನ ಪುತ್ರನನ್ನು ಪುನರುತ್ಥಾನ ಮಾಡಿದ್ದನ್ನು ತಿಳಿಸುತ್ತವೆ. ಅಂತಹ ವರದಿಗಳನ್ನು ನಿಮ್ಮ ಬೈಬಲಿನಲ್ಲಿ: 1 ಅರಸು 17:17-24; 2 ಅರಸು 4:32-37; ಮತ್ತಾಯ 28:1-10; ಲೂಕ 7:11-17; 8:40-56; ಯೋಹಾನ 11:38-44; ಅಪೋ. 9:36-42; 10:38-42; 20:7-12 ರಲ್ಲಿ ಓದಬಲ್ಲಿರಿ.b
ಅಷ್ಟು ಪ್ರಭಲವಾಗಿ ದಾಖಲೆಯಾಗಿರುವ ಪುನರುತ್ಥಾನ ನಿರೀಕ್ಷೆಯ ಆಧಾರದ ಮೇಲೆ, ಪೌಲನು ಅಥೇನ್ಯದವರಿಗೆ, “ದೇವರು . . . ನಿಷ್ಕರ್ಶೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯ ವಿಚಾರಣೆ ಮಾಡುವದಕ್ಕೆ ಒಂದುದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ” ಎಂಬ ಆಶ್ವಾಸನೆ ಕೊಡಶಕ್ತನಾದನು.—ಅಪೋ. 17:30, 31.
ಹೌದು, ಯೇಸುವಿನ ಪುನರುತ್ಥಾನವು, ಪುನರುತ್ಥಾನದ ನಿರೀಕ್ಷೆಯನ್ನು ಮೂಲ್ಯತೆಯದ್ದಾಗಿ ಮಾಡಿದ ಪರಮ ಖಾತರಿಯು. ಆದ್ದರಿಂದ ಯೆಹೋವ ದೇವರ ಶಕ್ತಿ ಮತ್ತು ಪ್ರೀತಿಯಲ್ಲಿ ಸಮಗ್ರವಾಗಿ ಭರವಸವಿಡಲು ನಮಗೂ ಒಂದು ದೃಢವಾದ ಆಧಾರವಿದೆ. ‘ಕಡೆಯ ದಿನದಲ್ಲಿ ಸತ್ತವರು ಪುನರುತ್ಥಾನದಲ್ಲಿ ಏಳುವರೆಂದು ನಮಗೆ ತಿಳಿದದೆ ಎಂದು ನಾವೂ ಮಾರ್ಥಳು ತಿಳಿಸಿದ ಆ ದೃಢ ಭರವಸವನ್ನು ವ್ಯಕ್ತಪಡಿಸಬಲ್ಲೆವು!
“ಸ್ತತವರ ಪುನರುತ್ಥಾನವೂಂದರ” ಕುರಿತು ಅವನ ಸಾಕ್ಷ್ಮವನ್ನು ಮಾರ್ಸ್ ಬೆಟ್ಟದ ಮೇಲೆ ಪೌಲನ ಸಭಿಕರು ಕೇಳಿದ ಮೇಲೆ ಅದು ಮೂರು ಗುಂಪುಗಳಾಗಿ ವಿಭಜಿತಗೊಂಡಿತು: “ಕೆಲವರು ಅಪಹಾಸ್ಯ ಮಾಡಿದರು, ಬೇರೆ ಕೆಲವರು- ನೀನು ಈ ವಿಷಯದಲ್ಲಿ ಹೇಳುವುದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಅಂದರು. . . . ಆದರೆ ಕೆಲವರು ಅವನನ್ನು ಅಂಟಿಕೊಂಡು ನಂಬಿದರು.—ಅಪೋ. 17:32-34.
ಪುನರುತ್ಥಾನದ ನಿರೀಕ್ಷೆಗೆ ನಿಮ್ಮ ಪ್ರತಿವರ್ತನೆಯೇನು? ಮಿಲ್ಯಾಂತರ, ಹೌದು, ಬಿಲ್ಯಾಂತರ ಜನರನ್ನು ಮೃತ್ಯುವಿನಿಂದ ಪುನರುತ್ಥಾನಗೊಳಿಸುವ ತನ್ನ ವಚನವನ್ನು ಯೆಹೋವನು ಪಾಲಿಸುತ್ತಾನೆ. ಅವರನ್ನು ಪುನ: ನೋಡಲು ಮತ್ತು ಅವರಿಂದ ನೋಡಲ್ಪಡಲು, ನೀವು ಅಲ್ಲಿರುವಿರೋ ಎಂಬದು ಹೆಚ್ಚಿನದಾಗಿ ನಿಮ್ಮ ಮೇಲೆ ಹೊಂದಿಕೊಂಡಿರುತ್ತದೆ. ನಿತ್ಯಜೀವವನ್ನು ಪಡೆಯಲು ದೇವರ ಅವಶ್ಯಕತೆಗಳನ್ನು ಕಲಿಯಲು ಮತ್ತು ಅದಕ್ಕನುಗುಣವಾಗಿ ಜೀವಿಸಲು ನೀವು ಬಯಸುವಿರೋ? ಸತ್ತವರಿಗಾಗಿರುವ ನಿರೀಕ್ಷೆಯ ಕುರಿತು ಮತ್ತು ಈ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ನೀವು ಪಾರಾಗಬಹುದಾದ ವಿಧದ ಕುರಿತು ಹೆಚ್ಚಿನ ಸಮಾಚಾರವನ್ನು ಯೆಹೋವನ ಸಾಕ್ಷಿಗಳು ನಿಮಗೆ ಒದಗಿಸಲು ಬಹಳ ಸಂತೋಷಿಸುವರು. (w89 6/15)
[ಅಧ್ಯಯನ ಪ್ರಶ್ನೆಗಳು]
a ಅದೇ ಧಾಟಿಯಲ್ಲಿ, ದೇವರ ಹಸ್ತಕ್ಷೇಪವು ಯಾವುದೇ ರೀತಿಯಲ್ಲಿ ಇಲ್ಲದಿರುವ ಸಮಯದಲ್ಲಿ ಇರಬಹುದಾದ ಸ್ಥಿತಿಯ ಕುರಿತು ಕೀರ್ತನೆಗಾರನು ಹೀಗೆ ಬರೆಯುತ್ತಾನೆ: “ಅವರು (ಇಸ್ರಾಯೇಲ್ಯರು) ಮಾಂಸಮಾತ್ರರೂ, ತಿರಿಗಿಬಾರದ ಶ್ವಾಸ (ಇಲ್ಲವೇ ದೇವರಿಂದ ಜೀವಶಕ್ತಿ) ಮಾತ್ರರು ಆಗಿದ್ದಾರೆಂಬದನ್ನು (ದೇವರು) ನೆನಪು ಮಾಡಿಕೊಳ್ಳುತ್ತಿದ್ದನು.—ಕೀರ್ತನೆ 78:39.
b ಬೈಬಲ್ ಸಮಯಗಳ ಪುನರುತ್ಥಾನಗಳ ಮತ್ತು ಯೇಸುವಿನ ಆಳಿಕ್ವೆಯ ಸಮಯದಲ್ಲಿ ಬರಲಿರುವ ಪುನರುತ್ಥಾನವೂಂದರ ಬೈಬಲ್ ವಾಗ್ದಾನದ ಸವಿವರ ಚರ್ಚೆಯನ್ನು ಯು ಕ್ಯಾನ್ ಲಿವ್ವ್ ಫಾರೆವರ್ ಇನ್ ಪಾರಡೈಸ್ ಆನ್ ಅರ್ಥ್ ಪುಸ್ತಕದಲ್ಲಿ ನೀವು ಕಾಣುವಿರಿ. 20ನೇ ಅಧ್ಯಾಯದ ಹೆಸರು “ಪುನರುತ್ಥಾನ—ಯಾರಿಗಾಗಿ ಮತ್ತು ಎಲ್ಲಿ?” ನಿಮ್ಮ ವಠಾರದಲ್ಲಿರುವ ಯೆಹೋವನ ಸಾಕ್ಷಿಗಳಿಂದ ಯಾ ಈ ಪತ್ರಿಕೆಯ ಎರಡನೇ ಪುಟದಲ್ಲಿ ಪಟ್ಟಿಮಾಡಿದ ಆಫೀಸುಗಳಿಂದ ಈ ಪುಸ್ತಕ ದೊರಕುತ್ತದೆ.