ಯೇಸುವಿನ ಪ್ರೀತಿಗೆ ನೀವು ಪ್ರತಿಕ್ರಿಯಿಸುವಿರೋ?
“ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯ ಮಾಡುತ್ತದೆ.”—2 ಕೊರಿಂಥ 5:14.
1. ಯೇಸುವಿನ ಪ್ರೀತಿಯನ್ನು ಹೇಗೆ ವರ್ಣಿಸಬಹುದು?
ನಿಜವಾಗಿಯೂ ಯೇಸುವಿನ ಪ್ರೀತಿ ಅದೆಷ್ಟು ಆಶ್ಚರ್ಯಕರವು! ಯಾವುದರ ಮೂಲಕ ಮಾತ್ರವೇ ನಾವು ನಿತ್ಯಜೀವವನ್ನು ಪಡೆಯಬಹುದೋ ಆ ವಿಮೋಚನಾ ಈಡನ್ನು ಆತನು ಒದಗಿಸಿಕೊಟ್ಟಾಗ ಅನುಭವಿಸಿದ ಅವರ್ಣನೀಯ ಯಾತನೆಯನ್ನು ನಾವು ಗಮನಿಸುವಾಗ, ನಿಶ್ಚಯವಾಗಿಯೂ ನಮ್ಮ ಹೃದಯಗಳು ಆತನಿಗಾಗಿ ಗಣ್ಯತೆಯಲ್ಲಿ ಪ್ರೇರಿಸಲ್ಪಡುವುವು. ಯೆಹೋವ ದೇವರು ಮತ್ತು ಯೇಸು ತಾನೇ ಮೊದಲ ಹೆಜ್ಜೆ ಇಟ್ಟವರು. ನಾವಿನ್ನೂ ಪಾಪಿಗಳಾಗಿದ್ದಾಗಲೇ, ಅವರು ಮೊದಲಾಗಿ ನಮ್ಮನ್ನು ಪ್ರೀತಿಸಿದರು. (ರೋಮಾಪುರ 5:6-8; 1 ಯೋಹಾನ 4:9-11) “ಕ್ರಿಸ್ತನ ಪ್ರೀತಿಯನ್ನು” ಗ್ರಹಿಸುವುದು, “ಜ್ಞಾನಕ್ಕೆ ಮೀರಿದ್ದು” ಎಂದು ಅಪೊಸ್ತಲ ಪೌಲನು ಬರೆದಿದ್ದಾನೆ. (ಎಫೆಸ 3:19) ಯೇಸುವಿನ ಪ್ರೀತಿಯು ಕೇವಲ ಪಾಂಡಿತ್ಯದ ತಲೇ ಜ್ಞಾನಕ್ಕಿಂತ ಎಷ್ಟೋ ಮಿಗಿಲಾದದ್ದು. ಮಾನವರಿಂದ ಎಂದೂ ಕಾಣಲ್ಪಟ್ಟ ಅಥವಾ ಅನುಭವಿಸಿರುವ ಯಾವುದೇ ವಿಷಯಕ್ಕಿಂತ ಅದು ಅತೀತವಾಗಿದೆ.
2. ನಮ್ಮನ್ನು ಪ್ರೀತಿಸುವುದರಿಂದ ಯೇಸುವನ್ನು ಏನು ತಡೆಯಲಾರದು?
2 ರೋಮಿನ ಕ್ರೈಸ್ತರಿಗೆ ಬರೆಯುತ್ತಾ, ಪೌಲನು ಕೇಳಿದ್ದು: “ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಅನ್ನವಿಲ್ಲದಿರುವುದೋ ವಸ್ತ್ರವಿಲ್ಲದಿರುವುದೋ ಗಂಡಾಂತರವೂ ಖಡ್ಗವೋ?” ಅಂಥ ಯಾವುವೂ ನಮ್ಮನ್ನು ಪ್ರೀತಿಸುವುದರಿಂದ ಕ್ರಿಸ್ತನನ್ನು ತಡೆಯಲಾರವು. “ನನಗೆ ನಿಶ್ಚಯ ಉಂಟು,” ಪೌಲನು ಮುಂದರಿಸುತ್ತಾ ಅಂದದ್ದು, “ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವು.”—ರೋಮಾಪುರ 8:35-39.
3. ಯೇಸು ಮತ್ತು ಆತನ ತಂದೆ ನಮ್ಮನ್ನು ತ್ಯಜಿಸುವಂತೆ ಏನು ಮಾತ್ರವೇ ಕಾರಣವಾಗಬಲ್ಲದು?
3 ನಿಮಗಾಗಿ ಯೆಹೋವ ದೇವರ ಮತ್ತು ಯೇಸುವಿನ ಪ್ರೀತಿಯು ಅಷ್ಟು ಪ್ರಬಲವಾಗಿರುತ್ತದೆ. ನಿಮ್ಮನ್ನು ಪ್ರೀತಿಸುವುದರಿಂದ ಅವರನ್ನು ತಡೆಯಬಲ್ಲ ಒಂದೇ ಒಂದು ವಿಷಯವು ಅಲ್ಲಿದೆ, ಅದ್ಯಾವುದಂದರೆ ಅವರೇನನ್ನು ಕೇಳುತ್ತಾರೋ ಅದನ್ನು ಮಾಡಲು ನಿರಾಕರಿಸುವ ಮೂಲಕ ಅವರ ಪ್ರೀತಿಯನ್ನು ನೀವು ಬುದ್ಧಿಪೂರ್ವಕವಾಗಿ ತಿರಸ್ಕರಿಸುವುದೇ. ದೇವರ ಒಬ್ಬ ಪ್ರವಾದಿಯು ಒಮ್ಮೆ ಯೂದಾಯದ ಒಬ್ಬ ಅರಸನಿಗೆ ವಿವರಿಸಿದ್ದು: “ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.” (2 ಪೂರ್ವಕಾಲ 15:2) ಯೆಹೋವ ದೇವರು ಮತ್ತು ಅವನು ಮಗನಾದ ಯೇಸು ಕ್ರಿಸ್ತನಂಥ ಆಶ್ಚರ್ಯಕರ, ಕರುಣಾಪೂರ್ಣ ಸ್ನೇಹಿತರಿಂದ ದೂರ ತೊಲಗಲು ನಮ್ಮಲ್ಲಿ ಯಾವನು ಬಯಸ್ಯಾನು?
ಯೇಸುವಿನ ಪ್ರೀತಿಗೆ ಯೋಗ್ಯ ಪ್ರತಿಕ್ರಿಯೆ
4, 5. (ಎ) ನಮಗಾಗಿ ಯೇಸುವಿನ ಪ್ರೀತಿಯು ಜೊತೆಮಾನವರೊಂದಿಗಿನ ನಮ್ಮ ಸಂಬಂಧಗಳನ್ನು ಹೇಗೆ ಪ್ರಭಾವಿಸಬೇಕು? (ಬಿ) ನಮಗಾಗಿ ಯೇಸುವಿನ ಪ್ರೀತಿಯ ಕಾರಣ ಬೇರೆ ಯಾರನ್ನು ಸಹ ಪ್ರೀತಿಸಲು ನಾವು ಪ್ರೇರಿಸಲ್ಪಡಬೇಕು?
4 ನಿಮಗಾಗಿ ಯೇಸು ತೋರಿಸಿದ ಅಪಾರವಾದ ಪ್ರೀತಿಯಿಂದ ನೀವು ಹೇಗೆ ಪ್ರಭಾವಿಸಲ್ಪಡುತ್ತೀರಿ? ನೀವು ಹೇಗೆ ಪ್ರಭಾವಿಸಲ್ಪಡಬೇಕು? ಒಳ್ಳೇದು, ಅವನ ಪ್ರೀತಿಯ ಪ್ರದರ್ಶನೆಯು ಜೊತೆ ಮಾನವರೊಂದಿಗಿನ ನಮ್ಮ ಸಂಬಂಧಗಳನ್ನು ಹೇಗೆ ಪ್ರಭಾವಿಸಬೇಕೆಂದು ಯೇಸು ತೋರಿಸಿದನು. ಅಪೊಸ್ತಲರ ಕಾಲುಗಳನ್ನು ತೊಳೆದ ಮೂಲಕ ದೀನತೆಯಿಂದ ಅವರ ಸೇವೆ ಮಾಡಿದ ನಂತರ, ಯೇಸು ಅಂದದ್ದು: “ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹಾ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.” ಅವನು ಮತ್ತೂ ಅಂದದ್ದು: “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ.” (ಯೋಹಾನ 13:15, 34) ಅವನ ಶಿಷ್ಯರು ಕಲಿತುಕೊಂಡರು ಮತ್ತು ಅವನು ಮಾಡಿದಂತೆ ಮಾಡಲು ಯತ್ನೈಸುವಂತೆ ಪ್ರೇರೇಪಿಸಲ್ಪಟ್ಟರು. “ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದು ಬಂದಿದೆ,” ಎಂದು ಬರೆದನು ಅಪೊಸ್ತಲ ಯೋಹಾನನು, “ಆದುದರಿಂದ ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.”—1 ಯೋಹಾನ 3:16.
5 ಆದರೂ, ಜೊತೆ ಮಾನವರ ಹಿತಾಸಕ್ತಿಗಳನ್ನು ಪ್ರೀತಿಸಲು ಮತ್ತು ಸೇವಿಸಲು ಮಾತ್ರವೇ ನಾವು ಪ್ರೇರಿಸಲ್ಪಟ್ಟದ್ದಾದರೆ, ಯೇಸುವಿನ ಜೀವನ ಮತ್ತು ಶುಶ್ರೂಷೆಯ ಗುರಿಯನ್ನು ತಪ್ಪುವವರಾಗುವೆವು. ಯೇಸುವಿನ ಪ್ರೀತಿಗೆ ಪ್ರತಿಯಾಗಿ ಆತನನ್ನು ಪ್ರೀತಿಸುವಂತೆ ಮತ್ತು ವಿಶೇಷವಾಗಿ ಆತನಿಗೆ ತಿಳಿದಿರುವ ಎಲ್ಲವನ್ನು ಆತನಿಗೆ ಕಲಿಸಿದ ಆತನ ತಂದೆಯನ್ನು ಸಹ ನೀವು ಪ್ರೀತಿಸುವಂತೆ ಮಾಡಬಾರದೇ? ನೀವು ಕ್ರಿಸ್ತನ ಪ್ರೀತಿಗೆ ಪ್ರತಿಕ್ರಿಯಿಸುವಿರೋ ಮತ್ತು ಆತನು ಮಾಡಿದಂತೆ ಆತನ ತಂದೆಯ ಸೇವೆಯನ್ನು ಮಾಡುವಿರೋ?—ಎಫೆಸ 5:1, 2; 1 ಪೇತ್ರ 1:8, 9.
6. ಯೇಸುವಿನ ಪ್ರೀತಿಯಿಂದಾಗಿ ಅಪೊಸ್ತಲ ಪೌಲನು ಹೇಗೆ ಪ್ರಭಾವಿಸಲ್ಪಟ್ಟನು?
6 ಅನಂತರ ಪೌಲನಾಗಿ ಪರಿಚಿತನಾಗಿದ್ದ ಸೌಲನ ಸಂಗತಿಯನ್ನು ಪರಿಗಣಿಸಿರಿ. ಒಂದು ಸಮಯದಲ್ಲಿ ಅವನು “ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ,” ಯೇಸುವನ್ನು ಅವನು ಹಿಂಸಿಸುತ್ತಿದ್ದನು. (ಅಪೊಸ್ತಲರ ಕೃತ್ಯಗಳು 9:1-5; ಮತ್ತಾಯ 25:37-40) ಪೌಲನು ಯೇಸುವನ್ನು ನಿಜವಾಗಿ ತಿಳಿದಾಗ, ಕ್ಷಮೆಯನ್ನು ಹೊಂದಲು ಎಷ್ಟು ಕೃತಜ್ಞನಾಗಿದ್ದನೆಂದರೆ, ಯೇಸುವಿನ ಪರವಾಗಿ ಕಷ್ಟಗಳನ್ನು ಅನುಭವಿಸಲು ಮನಸ್ಸುಳ್ಳವನಾದನು ಮಾತ್ರವಲ್ಲ ಆತನಿಗಾಗಿ ಸಾಯಲು ಸಹ ಸಿದ್ಧನಾದನು. “ಕ್ರಿಸ್ತನೊಂದಿಗೆ ಕಂಭಕ್ಕೆ ಹಾಕಿಸಿಕೊಂಡವನಾಗಿದ್ದೇನೆ,” ಎಂದು ಬರೆದನವನು. “ಇನ್ನು ಜೀವಿಸುವವನು ನಾನಲ್ಲ. . . . ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗಂದರೆ ದೇವ ಕುಮಾರನ ಮೇಲಣ ನಂಬಿಕೆಯಲ್ಲಿಯೇ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.”—ಗಲಾತ್ಯ 2:20.
7. ಯೇಸುವಿನ ಪ್ರೀತಿಯು ನಮ್ಮನ್ನು ಏನು ಮಾಡುವಂತೆ ಒತ್ತಾಯಪಡಿಸಬೇಕು?
7 ನಮಗಾಗಿ ಯೇಸುವಿನ ಪ್ರೀತಿಯು ನಮ್ಮ ಜೀವನದಲ್ಲಿ ಎಂಥ ಒತ್ತಾಯ ಮಾಡುವ ಶಕ್ತಿಯಾಗಿರಬೇಕು! ‘ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸುವಂತೆ,’ “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯ ಮಾಡುತ್ತದೆ” ಎಂದು ಪೌಲನು ಕೊರಿಂಥದವರಿಗೆ ಬರೆದನು. (2 ಕೊರಿಂಥ 5:14, 15) ನಮ್ಮ ಪರವಾಗಿ ತನ್ನ ಜೀವವನ್ನು ಕೊಟ್ಟದ್ದಕ್ಕಾಗಿ ಕೃತಜ್ಞತೆಯು ಆತನು ನಮ್ಮನ್ನು ಕೇಳುವ ಯಾವುದನ್ನಾದರೂ ಮಾಡುವಂತೆ ನಮ್ಮನ್ನು ಪ್ರೇರೇಪಿಸಬೇಕು, ನಿಶ್ಚಯ. ಈ ರೀತಿಯಲ್ಲಿ ಮಾತ್ರವೇ ನಾವಾತನನ್ನು ನಿಜವಾಗಿ ಪ್ರೀತಿಸುತ್ತೇವೆಂದು ರುಜುಪಡಿಸಬಲ್ಲೆವು. “ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವಿರಿ,” ಎಂದನು ಯೇಸು. “ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಕೊಂಡು ನಡೆಯುವವನೇ ನನ್ನನ್ನು ಪ್ರೀತಿಸುವವನು.”—ಯೋಹಾನ 14:15, 21; 1 ಯೋಹಾನ 2:3-5ಕ್ಕೆ ಹೋಲಿಸಿರಿ.
8. ಯೇಸುವಿನ ಪ್ರೀತಿಯು ಅನೇಕ ದುಷ್ಕರ್ಮಿಗಳ ಜೀವಿತವನ್ನು ಹೇಗೆ ಪ್ರಭಾವಿಸಿತ್ತು?
8 ಯೇಸುವಿನ ಆಜ್ಞೆಗಳನ್ನು ಕಲಿತ ಮೇಲೆ ಪ್ರಾಚೀನ ಕೊರಿಂಥದಲ್ಲಿನ ಜಾರರು, ವ್ಯಭಿಚಾರಿಗಳು, ಸಲಿಂಗಿಕಾಮಿಗಳು, ಕಳ್ಳರು, ಕುಡುಕರು ಮತ್ತು ಸುಲುಕೊಳ್ಳುವವರು ಆ ದುರಭ್ಯಾಸಗಳನ್ನು ವರ್ಜಿಸುವ ಮೂಲಕ ಕ್ರಿಸ್ತನ ಪ್ರೀತಿಗೆ ಪ್ರತಿಕ್ರಿಯೆ ತೋರಿಸಿದರು. ಪೌಲನು ಅವರ ಕುರಿತು ಬರೆದದ್ದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತೊಳೆದು ಕೊಂಡಿರಿ, . . . ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.” (1 ಕೊರಿಂಥ 6:9-11) ತದ್ರೀತಿಯಲ್ಲಿ, ಕ್ರಿಸ್ತನ ಪ್ರೀತಿಯು ಇಂದು ಅನೇಕರನ್ನು ತಮ್ಮ ಜೀವಿತದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವಂತೆ ಒತ್ತಾಯ ಮಾಡಿದೆ. “ತನ್ನ ಬೋಧನೆಗಳ ಪ್ರತಿಪಾದಕರನ್ನು ಸಜ್ಜನರಾಗಿ ಮಾಡುವುದರಲ್ಲಿ ಕ್ರೈಸ್ತತ್ವದ ನಿಜ ವಿಜಯವು ತೋರಿಬಂದಿದೆ,” ಎಂದು ಬರೆದನು ಚರಿತ್ರೆಗಾರ ಜಾನ್ ಲಾರ್ಡ್. “ಅವರ ಅದೂಷ್ಯ ಜೀವನಕ್ಕೆ, ನಿಂದಾತೀತ ನೀತಿಶೀಲತೆಗೆ, ಅವರ ಸಭ್ಯ ಪೌರತ್ವಕ್ಕೆ ಮತ್ತು ಅವರ ಕ್ರಿಸ್ತೀಯ ಸದ್ಗುಣಗಳಿಗೆ ನಮ್ಮಲ್ಲಿ ಸಾಕ್ಷ್ಯಗಳಿವೆ.” ಯೇಸುವಿನ ಬೋಧನೆಗಳು ಎಂಥ ವ್ಯತ್ಯಾಸವನ್ನು ಮಾಡಿದವು!
9. ಯೇಸುವಿನ ಮಾತನ್ನು ಕೇಳುವುದರಲ್ಲಿ ಏನು ಒಳಗೂಡಿರುತ್ತದೆ?
9 ನಿಶ್ಚಯವಾಗಿಯೂ ಯೇಸು ಕ್ರಿಸ್ತನ ಜೀವನ ಮತ್ತು ಶುಶ್ರೂಷೆಗಿಂತ ಹೆಚ್ಚು ಮಹತ್ವವುಳ್ಳ ಬೇರೆ ಯಾವುದೇ ಅಧ್ಯಯನವು ಇಂದು ಒಬ್ಬ ವ್ಯಕ್ತಿಯಿಂದ ನಡಿಸಲ್ಪಡ ಸಾಧ್ಯವಿಲ್ಲ. “ಯೇಸುವಿನ ಮೇಲೆ ತತ್ಪರ ದೃಷ್ಟಿಯಿಡಿರಿ” ಎಂದು ಉತ್ತೇಜಿಸುತ್ತಾನೆ ಅಪೊಸ್ತಲ ಪೌಲನು, “ಆತನನ್ನು ನಿಕಟವಾಗಿ ಮನಸ್ಸಿಗೆ ತನ್ನಿರಿ.” (ಇಬ್ರಿಯ 12:2, 3, NW) ಯೇಸುವಿನ ರೂಪಾಂತರದ ಸಮಯದಲ್ಲಿ ದೇವರು ತಾನೇ ತನ್ನ ಮಗನ ಕುರಿತಾಗಿ, “ಈತನ ಮಾತನ್ನು ಕೇಳಿರಿ” ಎಂದು ಆಜ್ಞಾಪಿಸಿರುತ್ತಾನೆ. (ಮತ್ತಾಯ 17:5) ಯೇಸುವಿನ ಮಾತನ್ನು ಕೇಳಿರಿ ಎಂದರೆ ಆತನಿಗೆ ಬರೇ ಕಿವಿಗೊಡುವುದಕ್ಕಿಂತ ಹೆಚ್ಚಿನದ್ದು ಸೇರಿದೆ ಎಂಬದನ್ನು ಮಾತ್ರ ಒತ್ತಿಹೇಳಬೇಕು. ಹೌದು, ಅದರ ಅರ್ಥ ಆತನ ಉಪದೇಶಗಳನ್ನು ಪಾಲಿಸುವುದು, ಆತನು ಅದನ್ನು ಮಾಡಿದ ರೀತಿಯಲ್ಲಿ ಮಾಡುವ ಮೂಲಕ ಆತನನ್ನು ನಕಲು ಮಾಡುವುದಾಗಿದೆ. ಆತನನ್ನು ನಮ್ಮ ನಮೂನೆಯಾಗಿ ಆರಿಸಿಕೊಳ್ಳುವ ಮೂಲಕ, ಆತನ ಹೆಜ್ಜೆಜಾಡೆಯನ್ನು ನಿಕಟವಾಗಿ ಅನುಸರಿಸುವ ಮೂಲಕ, ನಾವು ಯೇಸುವಿನ ಪ್ರೀತಿಗೆ ಪ್ರತಿಕ್ರಿಯೆಯನ್ನು ತೋರಿಸುವೆವು.
ನಾವು ಮಾಡುವಂತೆ ಯೇಸು ಬಯಸುವ ವಿಷಯ
10. ಯೇಸು ಯಾರನ್ನು ತರಬೇತುಗೊಳಿಸಿದನು ಮತ್ತು ಯಾವ ಉದ್ದೇಶಕ್ಕಾಗಿ?
10 ದೇವರಿಂದ ಯೇಸುವಿಗೆ ಕೊಡಲ್ಪಟ್ಟ ಆಜ್ಞೆಯು ಆತನ ತಂದೆಯ ರಾಜ್ಯದ ಕುರಿತು ಸಾರುವುದೇ ಆಗಿತ್ತು, ಮತ್ತು ಅವನು ತನ್ನ ಹಿಂಬಾಲಕರಿಗೆ ಅದೇ ಕೆಲಸವನ್ನು ಮಾಡುವಂತೆ ತರಬೇತನ್ನು ಕೊಟ್ಟನು. “ನಾವು ಬೇರೆ ಎಲ್ಲಿಗಾದರೂ ಹೋಗೋಣ,” ಎಂದನಾತನು ತನ್ನ ಮೊದಲನೆಯ ಶಿಷ್ಯರಿಗೆ, “ಅಲಿಯ್ಲೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ.” (ಮಾರ್ಕ 1:38; ಲೂಕ 4:43) ತರುವಾಯ, ಹನ್ನೆರಡು ಅಪೊಸ್ತಲರನ್ನು ಪೂರ್ತಿಯಾಗಿ ತರಬೇತುಗೊಳಿಸಿದ ಮೇಲೆ, ಯೇಸು ಅವರಿಗೆ ಸೂಚನೆಕೊಟ್ಟದ್ದು: “ಪರಲೋಕ ರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ.” (ಮತ್ತಾಯ 10:7) ಕೆಲವು ತಿಂಗಳುಗಳ ತರುವಾಯ, ಬೇರೆ 70 ಮಂದಿಯನ್ನು ತರಬೇತು ಮಾಡಿದ ಮೇಲೆ, ಈ ಅನುಜ್ಞೆಯೊಂದಿಗೆ ಅವರನ್ನು ಕಳುಹಿಸಿದನು: “ಅವರಿಗೆ—ದೇವರ ರಾಜ್ಯ ನಿಮ್ಮ ಸಮೀಪಕ್ಕೆ ಬಂದಿದೆ ಎಂದು ಹೇಳಿರಿ.” (ಲೂಕ 10:9) ತನ್ನ ಹಿಂಬಾಲಕರು ಸಾರುವವರೂ ಕಲಿಸುವವರೂ ಆಗಿರಬೇಕೆಂದು ಯೇಸು ಬಯಸಿದ್ದನೆಂಬದು ಸ್ಪಷ್ಟ.
11. (ಎ) ಯಾವ ರೀತಿಯಲ್ಲಿ ಯೇಸುವಿನ ಶಿಷ್ಯರು ಆತನು ಮಾಡಿದ್ದಕ್ಕಿಂತ ಮಹತ್ತಾದ ಕ್ರಿಯೆಗಳನ್ನು ಮಾಡುವರು? (ಬಿ) ಯೇಸು ಕೊಲ್ಲಲ್ಪಟ್ಟ ಬಳಿಕ ಆತನ ಶಿಷ್ಯರಿಗೆ ಏನು ಸಂಭವಿಸಿತು?
11 ಈ ಕೆಲಸಕ್ಕಾಗಿ ತನ್ನ ಶಿಷ್ಯರನ್ನು ತರಬೇತುಗೊಳಿಸುವುದನ್ನು ಯೇಸು ಮುಂದುವರಿಸಿದನು. ತನ್ನ ಮರಣಕ್ಕೆ ಮುಂಚಿನ ಕೊನೆಯ ಸಂಜೆಯಲ್ಲಿ, ಆತನು ಅವರನ್ನು ಈ ಮಾತುಗಳಿಂದ ಪ್ರೋತ್ಸಾಹಿಸಿದನು: “ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು.” (ಯೋಹಾನ 14:12) ಅವನ ಹಿಂಬಾಲಕರ ಕ್ರಿಯೆಗಳು ಅವನಿಗಿಂತ ಮಹತ್ತಾದವುಗಳಾಗಿರುವುವು ಯಾಕಂದರೆ ಅವರ ಶುಶ್ರೂಷೆಯಲ್ಲಿ ಅವರು ಎಷ್ಟೋ ಹೆಚ್ಚು ವಿಸ್ತಾರವಾದ ಕ್ಷೇತ್ರದಲ್ಲಿ ಮತ್ತು ಬಹಳ ಹೆಚ್ಚು ಕಾಲಾವಧಿಯ ತನಕ ಎಷ್ಟೋ ಹೆಚ್ಚು ಜನರನ್ನು ತಲಪಲಿಕ್ಕಿದ್ದರು. ಆದರೂ, ಯೇಸು ಕೊಲ್ಲಲ್ಪಟ್ಟ ನಂತರ, ಆತನ ಶಿಷ್ಯರು ಭಯದಿಂದ ನಿಶೇತ್ಚನಗೊಂಡರು. ಅವರು ಅಡಗಿ ಕೂತರು ಮತ್ತು ಅವರು ಮಾಡುವಂತೆ ಆತನು ತರಬೇತುಗೊಳಿಸಿದ್ದ ಕೆಲಸವನ್ನು ಅವರು ಮಾಡಲಿಲ್ಲ. ಕೆಲವರು ತಮ್ಮ ಮೀನುಗಾರಿಕೆಯ ಕಸುಬಿಗೂ ಹಿಂತಿರುಗಿದರು. ಆದರೂ, ಒಂದು ಮರೆಯಲಾಗದ ರೀತಿಯಲ್ಲಿ, ಈ ಏಳು ಮಂದಿಗೆ ತಾನು ಅವರಿಂದ ಹಾಗೂ ತನ್ನೆಲ್ಲಾ ಹಿಂಬಾಲಕರಿಂದ ಏನನ್ನು ಮಾಡುವಂತೆ ಅಪೇಕ್ಷಿಸಿದ್ದನೋ ಅದರ ಮಹತ್ವವನ್ನು ಆತನು ಒತ್ತಿಹೇಳಿದನು.
12. (ಎ) ಗಲಿಲಾಯ ಸಮುದ್ರದಲ್ಲಿ ಯಾವ ಅದ್ಭುತವನ್ನು ಯೇಸು ನಡಿಸಿದನು? (ಬಿ) “ಇವುಗಳಿಗಿಂತ ಹೆಚ್ಚಾಗಿ” ನನ್ನ ಮೇಲೆ ಪ್ರೀತಿ ಇಟ್ಟಿದ್ದಿಯೋ ಎಂದು ಪೇತ್ರನನ್ನು ಕೇಳಿದಾಗ ಯೇಸು ಯಾವ ಅರ್ಥ ಮಾಡಿದ್ದನು?
12 ಯೇಸು ಒಬ್ಬ ಮನುಷ್ಯನ ಶರೀರವನ್ನು ಧರಿಸಿಕೊಂಡು ಗಲಿಲಾಯ ಸಮುದ್ರದ ಸಮೀಪ ಗೋಚರಿಸಿದನು. ಆ ಏಳು ಮಂದಿ ಅಪೊಸ್ತಲರು ಹೊರಗೆ ದೋಣಿಯಲಿದ್ದರು ಮತ್ತು ಇಡೀ ರಾತ್ರಿ ಅವರಿಗೆ ಒಂದೂ ಮೀನೂ ಸಿಕ್ಕಿರಲಿಲ್ಲ. ಯೇಸು ದಡದಿಂದ ಅವರನ್ನು ಕರೆದನು: “ನೀವು ದೋಣಿಯ ಬಲಗಡೆಯಲ್ಲಿ ಬಲೆ ಬೀಸಿದರೆ ನಿಮಗೆ ಸಿಕ್ಕುವುದು.” ಬಲೆಯು ತುಂಬಿ ಹರಿದು ಹೋಗುವ ತನಕ ಅದ್ಭುತಕರವಾಗಿ ಮೀನಿನಿಂದ ತುಂಬಿದಾಗ, ದಡದಲಿದ್ಲವ್ದನು ಯೇಸುವೆಂದು ದೋಣಿಯಲ್ಲಿದ್ದವರಿಗೆ ಗೊತ್ತಾಯಿತು, ಮತ್ತು ಅವರು ಆತನಿದ್ದಲ್ಲಿಗೆ ಧಾವಿಸಿ ಬಂದರು. ಅವರಿಗೆ ಬೆಳಗಿನ ಉಪಹಾರವನ್ನು ಕೊಟ್ಟ ಮೇಲೆ ಯೇಸು, ಸಿಕ್ಕಿದ್ದ ಆ ಮೀನಿನ ರಾಶಿಯ ಕಡೆಗೋ ಎಂಬಂತೆ ನೋಡುತ್ತಾ, ಪೇತ್ರನನ್ನು ಕೇಳಿದ್ದು: “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ (ಇವುಗಳಿಗಿಂತ, NW) ಹೆಚ್ಚಾಗಿ ನನ್ನ ಮೇಲೆ ಪ್ರೀತಿ ಇಟ್ಟಿದ್ದಿಯೋ?” (ಯೋಹಾನ 21:1-15) ನೀನು ಮಾಡುವಂತೆ ನಾನು ನಿನ್ನನ್ನು ತಯಾರಿಸಿದ್ದ ಆ ಸಾರುವ ಕೆಲಸಕ್ಕಿಂತ ಈ ಮೀನುಗಾರಿಕೆಯ ಕಸುಬಿಗೆ ನೀನು ಹೆಚ್ಚು ಅಂಟಿಕೊಂಡಿರುವಿಯೋ? ಎಂಬರ್ಥದಲ್ಲಿ ಯೇಸು ಹಾಗಂದನೆಂಬದು ನಿಸ್ಸಂಶಯ.
13. ಅವನ ಹಿಂಬಾಲಕರು ಅವನ ಪ್ರೀತಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬ ವಿಷಯದಲ್ಲಿ ಯೇಸು ಅವರನ್ನು ಪ್ರಬಲವಾಗಿ ಪ್ರಭಾವಿಸಿದ್ದು ಹೇಗೆ?
13 ಪೇತ್ರನು ಪ್ರತಿಕ್ರಿಯಿಸಿದ್ದು: “ಹೌದು, ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದೇನ್ದೆಂಬದನ್ನು ನೀನೇ ಬಲ್ಲೆ.” ಯೇಸು ಉತ್ತರಿಸಿದ್ದು: “ನನ್ನ ಕುರಿಗಳನ್ನು ಮೇಯಿಸು.” ಎರಡನೆಯ ಸಾರಿ ಯೇಸು ಕೇಳಿದ್ದು: “ಯೋಹಾನನ ಮಗನಾದ ಸೀಮೋನನೇ, ನನ್ನ ಮೇಲೆ ಪ್ರೀತಿ ಇಟ್ಟಿದ್ದಿಯೋ?” ನಿಸ್ಸಂಶಯವಾಗಿ ಹೆಚ್ಚು ದೃಢತೆಯಿಂದ ಪೇತ್ರನು ಪ್ರತಿಕ್ರಿಯಿಸಿದ್ದು: “ಹೌದು, ಸ್ವಾಮೀ, ನಿನ್ನ ಮೇಲೆ ಮಮತೆ ಇಟ್ಟಿದೇನ್ದೆಂಬದನ್ನು ನೀನೇ ಬಲ್ಲೆ.” ಪುನಃ ಯೇಸು ಆಜ್ಞಾಪಿಸಿದ್ದು: “ನನ್ನ ಕುರಿಗಳನ್ನು ಕಾಯಿ.” ಮೂರನೆಯ ಸಾರಿ ಯೇಸು ಕೇಳಿದ್ದು: “ಯೋಹಾನನ ಮಗನಾದ ಸೀಮೋನನೇ, ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಅಷ್ಟರೊಳಗೆ ಪೇತ್ರನು ನಿಜವಾಗಿ ದುಃಖಿತನಾದನು. ಕೇವಲ ಮೂರು ದಿನಗಳ ಮುಂಚಿತವಾಗಿ ಅವನು ಯೇಸುವನ್ನು ಅರಿಯೆನೆಂದು ಮೂರು ಬಾರಿ ಅಲ್ಲಗಳೆದಿದ್ದನಾದ್ದರಿಂದ ತನ್ನ ನಿಷ್ಠೆಯನ್ನು ಯೇಸು ಸಂದೇಹಿಸಿದನೋ ಎಂಬ ಯೋಚನೆ ಅವನಿಗೆ ಬಂದಿರಬೇಕು. ಆದುದರಿಂದ ಮೂರನೆಯ ಸಾರಿ, ಪ್ರಾಯಶಃ ಬೇಡಿಕೊಳ್ಳುವ ಸರ್ವದಲ್ಲಿ, ಪೇತ್ರನು ಪ್ರತಿಕ್ರಿಯಿಸಿದ್ದಿರಬೇಕು. “ಸ್ವಾಮೀ, ನೀನು ಎಲ್ಲಾ ಬಲ್ಲೆ; ನಿನ್ನ ಮೇಲೆ ನಾನು ಮಮತೆ ಇಟ್ಟಿದೇನ್ದೆಂಬದು ನಿನಗೆ ತಿಳಿದದೆ.” ಯೇಸು ಸರಳವಾಗಿ ಉತ್ತರಿಸಿದ್ದು: “ನನ್ನ ಕುರಿಗಳನ್ನು ಮೇಯಿಸು.” (ಯೋಹಾನ 21:15-17) ಯೇಸು ಪೇತ್ರನಿಂದ ಮತ್ತು ಅವನ ಜೊತೆಗಾರರಿಂದ ಏನು ಬಯಸಿದ್ದನೆಂಬ ವಿಷಯದಲ್ಲಿ ಏನಾದರೂ ಸಂದೇಹ ಇರಬಲ್ಲದೋ? ಎಷ್ಟು ಪ್ರಬಲವಾದ ರೀತಿಯಲ್ಲಿ ಆತನು ಅವರನ್ನು ಪ್ರಭಾವಿಸಿದನು—ಹಾಗೂ ಇಂದು ಆತನ ಶಿಷ್ಯನಾಗುವ ಯಾವನನ್ನೂ—ಅವರು ಆತನನ್ನು ಪ್ರೀತಿಸುವುದಾದರೆ ಮತ್ತು ಆತನ ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಭಾಗವಹಿಸುವುದಾದರೆ ಆತನು ಪ್ರಭಾವಿಸುವನು!
14. ಶಿಷ್ಯರು ತನ್ನ ಪ್ರೀತಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂದು ಬೇರೆ ಸಂದರ್ಭಗಳಲ್ಲಿ ಯೇಸು ತೋರಿಸಿದ್ದು ಹೇಗೆ?
14 ಸಮುದ್ರ ದಡದ ಆ ಸಂಭಾಷಣೆಯ ನಂತರ ಕೆಲವು ದಿನಗಳಲ್ಲಿ, ಗಲಿಲಾಯದ ಬೆಟ್ಟಗಳಲ್ಲಿ ಯೇಸು ಕಾಣಿಸಿಕೊಂಡನು ಮತ್ತು ಸುಮಾರು 500 ಮಂದಿ ಕೂಡಿದ್ದ ಒಂದು ಸಂತೋಷದ ಸಮ್ಮೇಲನಕ್ಕೆ ಬೋಧಿಸಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವುದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20; 1 ಕೊರಿಂಥ 15:6) ಅದರ ಕುರಿತು ಯೋಚಿಸಿರಿ! ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಎಲ್ಲರೂ ಅದೇ ಆಜ್ಞೆಯನ್ನು ಪಡೆದರು. ಮತ್ತೂ ಅನಂತರ, ಪರಲೋಕಕ್ಕೆ ಏರಿಹೋಗುವ ತುಸು ಮುಂಚೆ, ಯೇಸು ತನ್ನ ಶಿಷ್ಯರಿಗೆ ಅಂದದ್ದು: “. . . ನೀವು ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.” (ಅಪೊಸ್ತಲರ ಕೃತ್ಯಗಳು 1:8) ಈ ಎಲ್ಲಾ ಉಪದೇಶವನ್ನು ಕೊಟ್ಟ ಮೇಲೆ, ವರ್ಷಾನಂತರ ಪೇತ್ರನು ಹೀಗಂದದರಲ್ಲೇನೂ ಆಶ್ಚರ್ಯವಿಲ್ಲ: “ಜನರಿಗೆ ಸಾರುವಂತೆ ಮತ್ತು ಒಂದು ಪೂರ್ತಿಯಾದ ಸಾಕ್ಷಿಯನ್ನು ಕೊಡುವಂತೆ [ಯೇಸು] ನಮಗೆ ಅಪ್ಪಣೆ ಕೊಟ್ಟನು.”—ಅಪೊಸ್ತಲರ ಕೃತ್ಯಗಳು 10:42, NW.
15. ಯಾವ ವಿಷಯದ ಕುರಿತು ಅಲ್ಲಿ ಯಾವ ಸಂದೇಹವೂ ಇರುವುದಿಲ್ಲ?
15 ಯೇಸುವಿನ ಪ್ರೀತಿಗೆ ನಾವು ಹೇಗೆ ಪ್ರತಿಕ್ರಿಯೆ ತೋರಿಸಬೇಕೆಂಬ ವಿಷಯದಲ್ಲಿ ಯಾವ ಸಂದೇಹವೂ ಇರಲಾರದು. ಅವನು ತನ್ನ ಅಪೊಸ್ತಲರಿಗೆ ಹೇಳಿದ ಪ್ರಕಾರ: “ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. . . . ನಾನು ನಿಮಗೆ ಕೊಟ್ಟ ಆಜೆಗ್ಞಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು.” (ಯೋಹಾನ 15:10-14) ಪ್ರಶ್ನೆಯೇನಂದರೆ, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗವಹಿಸಲು, ಆತನು ಕೊಟ್ಟ ಆಜೆಗ್ಞೆ ವಿಧೇಯರಾಗುವ ಮೂಲಕ ಯೇಸುವಿನ ಪ್ರೀತಿಗೆ ನೀವು ಗಣ್ಯತೆಯನ್ನು ತೋರಿಸುವಿರೋ? ಒಂದುವೇಳೆ ಹಲವಾರು ಕಾರಣಗಳಿಂದಾಗಿ ಇದು ನಿಮಗೆ ಸುಲಭವಾಗಿರಲಿಕ್ಕಿಲ್ಲ, ನಿಜ. ಆದರೆ ಯೇಸುವಿಗೆ ಸಹ ಅದು ಸುಲಭವಾಗಿರಲಿಲ್ಲ. ಅವನಿಗಾಗಿ ಒಳಗೂಡಿದ್ದ ಬದಲಾವಣೆಗಳನ್ನು ಗಮನಿಸಿರಿ.
ಯೇಸುವಿನ ಮಾದರಿಯನ್ನು ಅನುಸರಿಸಿರಿ
16. ಯಾವ ಆಶ್ಚರ್ಯಕರ ಮಾದರಿಯನ್ನು ಯೇಸು ಒದಗಿಸಿದನು?
16 ದೇವರ ಏಕ-ಜಾತ ಪುತ್ರನು ಎಲ್ಲಾ ದೇವದೂತರಿಗಿಂತ ಶ್ರೇಷ್ಠವಾದ ಸ್ವರ್ಗೀಯ ಮಹಿಮೆಯ ಒಂದು ಪ್ರಧಾನ ಸ್ಥಾನವನ್ನು ಆನಂದಿಸಿದ್ದನು. ಆತನು ನಿಶ್ಚಯವಾಗಿಯೂ ಐಶ್ವರ್ಯವಂತನಾಗಿದ್ದನು! ಆದರೂ ಆತನು ಸಿದ್ಧಮನಸ್ಸಿನಿಂದ ತನ್ನನ್ನು ಬರಿದು ಮಾಡಿಕೊಂಡನು, ಬಡ ಕುಟುಂಬದ ಸದಸ್ಯನಾಗಿ ಜನಿಸಿದನು, ರೋಗಿಗಳೂ ಮರ್ತ್ಯರೂ ಆಗಿದ್ದ ಮಾನವರ ಪರಿಸರದಲ್ಲಿ ಬೆಳೆದನು. ಅಪೊಸ್ತಲ ಪೌಲನು ವಿವರಿಸಿದ ಪ್ರಕಾರ, ಅವನಿದನ್ನು ಮಾಡಿದ್ದು ನಮ್ಮ ಪರವಾಗಿ: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮಗೆ ಗೊತ್ತಾಗಿದೆಯಲ್ಲಾ; ಆತನು ಐಶ್ವರ್ಯವಂತನಾಗಿದ್ದು ತಾನು ಬಡತನದಲ್ಲಿ ಸೇರುವುದರಿಂದ ನೀವು ಐಶ್ವರ್ಯವಂತರಾಗಬೇಕೆಂದು ನಿಮಗೋಸ್ಕರ ಬಡವನಾದನು.” (2 ಕೊರಿಂಥ 8:9; ಫಿಲಿಪ್ಪಿ 2:5-8) ಎಂಥಾ ಆದರ್ಶ ಮಾದರಿ! ಪ್ರೀತಿಯ ಎಂಥಾ ಮಹಾ ಪ್ರದರ್ಶನೆ! ಯಾರೊಬ್ಬನೂ ಇಷ್ಟು ತ್ಯಾಗವನ್ನು ಮಾಡಿರುವುದಿಲ್ಲ ಅಥವಾ ಬೇರೆಯವರಿಗಾಗಿ ಅಷ್ಟು ಹೆಚ್ಚನ್ನು ಅನುಭವಿಸಿರುವುದಿಲ್ಲ. ಮತ್ತು ಯಾರೊಬ್ಬನೂ ಇಷ್ಟು ಮಹತ್ತಾದ ಐಶ್ಚರ್ಯಗಳನ್ನು, ಹೌದು, ಪರಿಪೂರ್ಣತೆಯಲ್ಲಿ ನಿತ್ಯಜೀವವನ್ನು ಆನಂದಿಸಲು ಬೇರೆಯವರನ್ನು ಶಕ್ತರನ್ನಾಗಿ ಮಾಡಿರಲಿಲ್ಲ!
17. ನಮ್ಮ ಮುಂದೆ ಯಾವ ಮಾರ್ಗಕ್ರಮವು ಇಡಲ್ಪಟ್ಟಿದೆ ಮತ್ತು ಅದನ್ನು ಪಾಲಿಸುವುದರ ಫಲಿತಾಂಶವೇನಾಗಲಿದೆ?
17 ನಾವು ಯೇಸುವಿನ ಮಾದರಿಯನ್ನು ಹಿಂಬಾಲಿಸಬಲ್ಲೆವು ಮತ್ತು ಇತರರಿಗೆ ಇದೇ ರೀತಿಯ ಪ್ರಯೋಜನವಾಗಿರಬಲ್ಲೆವು. ತನ್ನ ಹಿಂಬಾಲಕರಾಗುವಂತೆ ಯೇಸು ಪದೇ ಪದೇ ಜನರನ್ನು ಹುರಿದುಂಬಿಸಿದನು. (ಮಾರ್ಕ 2:14; ಲೂಕ 9:59; 18:22) ವಾಸ್ತವವಾಗಿ, ಪೇತ್ರನು ಬರೆದದ್ದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನು ಅನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಆತನಂತೆ ಆತನ ತಂದೆಯನ್ನು ಸೇವಿಸುವರೇ ಕ್ರಿಸ್ತನ ಪ್ರೀತಿಗಾಗಿ ಕಷ್ಟವನ್ನು ತಾಳುವಷ್ಟರ ಮಟ್ಟಿನ ಪ್ರತಿಕ್ರಿಯೆಯನ್ನು ನೀವು ತೋರಿಸುವಿರೋ? ಅಂಥ ಮಾರ್ಗಕ್ರಮವು ಬೇರೆಯವರಿಗಾಗಿ ಎಷ್ಟು ಪ್ರಯೋಜನಕಾರಿಯಾಗಬಲ್ಲದು! ಯೇಸುವಿನ ಮಾದರಿಯನ್ನು ಅನುಸರಿಸುವ ಮೂಲಕ, ಅವನು ತನ್ನ ತಂದೆಯಿಂದ ಪಡೆದ ಬೋಧನೆಗಳನ್ನು ಪೂರ್ತಿಯಾಗಿ ಅನ್ವಯಿಸುವ ಮೂಲಕ, “ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.”—1 ತಿಮೊಥಿ 4:16.
18. (ಎ) ಜನರ ಕಡೆಗೆ ತನ್ನ ಮನೋಭಾವದ ಸಂಬಂಧದಲ್ಲಿ ಯೇಸು ಯಾವ ಮಾದರಿಯನ್ನಿಟ್ಟನು? (ಬಿ) ಯೇಸುವಿನ ವ್ಯಕ್ತಿತ್ವದ ಕಡೆಗೆ ಜನರು ಹೇಗೆ ಪ್ರತಿಕ್ರಿಯೆ ತೋರಿಸಿದರು?
18 ಜನರಿಗೆ ಅತ್ಯಂತ ಹೆಚ್ಚಿನ ಸಹಾಯವನ್ನು ಕೊಡುವುದಕ್ಕೆ, ಯೇಸುವಿಗೆ ಇತರರ ಕಡೆಗಿದ್ದಂಥ ಅನಿಸಿಕೆ ನಮಗೂ ಇರಬೇಕು. ಅವನ ಕುರಿತು ಒಂದು ಪ್ರವಾದನೆ ಅಂದದ್ದು: “ದೀನರ ಮತ್ತು ದರಿದ್ರರ ಮೇಲೆ ಅವನು ಕರುಣೆಯುಳ್ಳವನಾಗುವನು.” (ಕೀರ್ತನೆ 72:13) ಯೇಸು ಯಾರಿಗೆ ಬೋಧಿಸಿದನೋ ಅವರ ಕಡೆಗೆ “ಪ್ರೀತಿ” ತೋರಿಸಿದ್ದನು ಮತ್ತು ಅವರಿಗೆ ನಿಜವಾಗಿ ಸಹಾಯ ಮಾಡಲು ಬಯಸಿದ್ದನು ಎಂದು ಅವನ ಹಿಂಬಾಲಕರು ಗಮನಿಸ ಶಕ್ತರಾಗಿದ್ದರು. (ಮಾರ್ಕ 1:40-42; 10:21) “ಜನರ ಗುಂಪುಗಳನ್ನು ನೋಡಿ,” ಬೈಬಲು ಅನ್ನುವುದು, “ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲಾ ಎಂದು ಅವರ ಮೇಲೆ ಅವನು ಕನಿಕರಪಟ್ಟನು.” (ಮತ್ತಾಯ 9:36) ಘೋರ ಪಾಪಿಗಳು ಸಹ ಅವನ ಪ್ರೀತಿಯನ್ನು ಅನುಭವಿಸಿದರು ಮತ್ತು ಆತನ ಕಡೆಗೆ ಸೆಳೆಯಲ್ಪಟ್ಟರು. ಅವನ ದ್ವನಿಯ ನಾದ, ವರ್ತನೆ ಮತ್ತು ಕಲಿಸುವ ವಿಧಾನವು ಅವರನ್ನು ಹಾಯಾಗಿರಿಸುತ್ತಿತ್ತು. ಫಲಿತಾಂಶವಾಗಿ, ಹೇಸಲ್ಪಟ್ಟಿದ್ದ ಸುಂಕದವರು ಮತ್ತು ವೇಶ್ಯೆಗಳು ಸಹಾ ಆತನನ್ನು ಹುಡುಕುತ್ತಾ ಬಂದಿದ್ದರು.—ಮತ್ತಾಯ 9:9-13; ಲೂಕ 7:36-38; 19:1-10.
19. ಪೌಲನು ಯೇಸುವನ್ನು ಅನುಕರಿಸಿದ್ದು ಹೇಗೆ, ಮತ್ತು ನಾವು ಸಹ ಅದನ್ನು ಮಾಡುವುದರಿಂದ ಯಾವ ಫಲಿತಾಂಶ ದೊರೆಯುವುದು?
19 ಯೇಸುವಿನ ಪ್ರಥಮ-ಶತಕದ ಶಿಷ್ಯರು ಆತನ ಪ್ರೀತಿಯುಳ್ಳ ಮಾದರಿಯನ್ನು ನಕಲು ಮಾಡಿದ್ದರು. ಪೌಲನು ತನ್ನ ಶುಶ್ರೂಷೆಗೆ ಒಳಗಾಗಿದ್ದ ಕೆಲವರಿಗೆ ಬರೆದದ್ದು: “ತಾಯಿ ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡಕೊಂಡಿದ್ದೆವು. . . . ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ಧಿ ಹೇಳುತ್ತಾ ಸಂತೈಸುತ್ತಾ ಸಾಕ್ಷಿಕೊಡುತ್ತಾ ಇದ್ದೆವು.” (1 ಥೆಸಲೊನೀಕ 2:7-11) ಪ್ರೀತಿಯುಳ್ಳ ಹೆತ್ತವರು ತಮ್ಮ ಪ್ರಿಯ ಮಕ್ಕಳ ಕಡೆಗಿಡುವ ಅದೇ ನಿಜವಾದ ಹಿತಚಿಂತನೆಯ ಭಾವವು ನಿಮ್ಮ ಕ್ಷೇತ್ರದಲ್ಲಿರುವವರ ಕಡೆಗೆ ನಿಮಗಿದೆಯೇ? ಅಂಥ ಚಿಂತೆಯನ್ನು ನಿಮ್ಮ ದ್ವನಿಯ ನಾದದಲ್ಲಿ, ನಿಮ್ಮ ಮುಖಚರ್ಯೆಯಲ್ಲಿ ಮತ್ತು ನಿಮ್ಮ ಕ್ರಿಯೆಯಲ್ಲಿ ಪ್ರದರ್ಶಿಸುವಿಕೆಯು ರಾಜ್ಯ ಸಂದೇಶವನ್ನು ಕುರಿಸದೃಶರಿಗೆ ಆಕರ್ಷಣೀಯವಾಗಿ ಮಾಡುವುದು.
20, 21. ಯೇಸುವಿನ ಪ್ರೀತಿಯ ಮಾದರಿಯನ್ನು ಅನುಸರಿಸಿದ ಜನರ ಕೆಲವು ಆಧುನಿಕ-ದಿನದ ಉದಾಹರಣೆಗಳು ಯಾವುವು?
20 ಸ್ಪೈನ್ನಲ್ಲಿ ಒಂದು ಚಳಿಯ ದಿನ ಇಬ್ಬರು ಸಾಕ್ಷಿಗಳು ಕಂಕುಳುಗೋಲಿನಲ್ಲಿದ್ದ ಒಬ್ಬ ವೃದ್ಧೆ ಸ್ತ್ರೀಯನ್ನು ಭೇಟಿಯಾದರು, ಉರಿಸುವ ಕಟ್ಟಿಗೆ ಮುಗಿದು ಹೋಗಿದ್ದರಿಂದ ಅವಳ ಮನೆಯಲ್ಲಿ ಗಡ್ಡೆಕಟ್ಟುವಷ್ಟು ಚಳಿಯಿತ್ತು. ಮಗನು ಕೆಲಸದಿಂದ ಬಂದು ಹೆಚ್ಚು ಕಟ್ಟಿಗೆ ಒಡೆದು ಕೊಡಲು ಆಕೆ ಕಾಯುತ್ತಿದ್ದಳು. ಸಾಕ್ಷಿಗಳು ಕಟ್ಟಿಗೆ ಒಡೆದು ಕೊಟ್ಟರು, ಮತ್ತು ಅವಳಿಗೆ ಓದಲು ಕೆಲವು ಪತ್ರಿಕೆಗಳನ್ನೂ ಬಿಟ್ಟುಹೋದರು. ಮಗನು ಹಿಂತಿರುಗಿದಾಗ, ತನ್ನ ತಾಯಿಗೆ ಸಾಕ್ಷಿಗಳಿಂದ ದೊರೆತ ಪ್ರೀತಿಯ ಗಮನದಿಂದಾಗಿ ಎಷ್ಟು ಪ್ರಭಾವಿತನಾದನೆಂದರೆ ಅವನು ಆ ಸಾಹಿತ್ಯವನ್ನು ಓದಿದನು, ಬೈಬಲನ್ನು ಅಭ್ಯಾಸಿಸ ಪ್ರಾರಂಭಿಸಿದನು, ದೀಕ್ಷಾಸ್ನಾನ ಪಡೆದನು ಮತ್ತು ಬೇಗನೇ ಪಯನೀಯರ ಶುಶ್ರೂಷೆಗಿಳಿದನು.
21 ಆಸ್ಟ್ರೇಲಿಯದಲ್ಲಿ ಒಬ್ಬ ಮನುಷ್ಯ ಮತ್ತು ಅವನ ಹೆಂಡತಿ ತಮ್ಮ ಕುಟುಂಬವನ್ನು ಉಣಿಸಲು ಹಣವಿಲ್ಲವೆಂದು ಸಂದರ್ಶಿಸಿದ ಸಾಕ್ಷಿಗಳಿಗೆ ತಿಳಿಸಿದರು. ಸಾಕ್ಷಿ ದಂಪತಿಗಳು ಹೋಗಿ ಆಹಾರ ಪದಾರ್ಥಗಳನ್ನು ತಂದುಕೊಟ್ಟರು, ಮಕ್ಕಳಿಗಾಗಿ ಸಿಹಿತಿಂಡಿಯನ್ನೂ ತಂದರು. ತಾವೆಷ್ಟು ನಿರಾಶೆಗೊಂಡಿದ್ದರೆಂದರೆ ಆತ್ಮಹತ್ಯೆಯನ್ನೂ ಯೋಚಿಸುತ್ತಿದ್ದೇವೆಂದು ಹೇಳಿ, ಆ ಹೆತ್ತವರು ಮನಮುರಿದು ಅತರ್ತು. ಇಬ್ಬರೂ ಅಭ್ಯಾಸ ಮಾಡಲಾರಂಭಿಸಿದರು, ಪತ್ನಿಗೆ ಇತ್ತೀಚೆಗೆ ದೀಕ್ಷಾಸ್ನಾನವಾಯಿತು. ಯೆಹೋವನ ಸಾಕ್ಷಿಗಳ ವಿರುದ್ಧ ದುರಭಿಪ್ರಾಯವಿದ್ದ ಅಮೆರಿಕದ ಒಬ್ಬಾಕೆ ಮಹಿಳೆ ಸಾಕ್ಷಿಗಳಲ್ಲಿ ಒಬ್ಬಳನ್ನು ಭೇಟಿಯಾದ ಬಳಿಕ ಹೀಗಂದಳು: “ನಾವು ಯಾವ ವಿಷಯವಾಗಿ ಮಾತಾಡಿದೆವೆಂದು ನನಗೆ ನಿಜವಾಗಿ ನೆನಪಿಲ್ಲ, ಆದರೆ ಆಕೆ ನನಗೆ ತೋರಿಸಿದ ದಯೆ, ಅತಿಥಿ ಸತ್ಕಾರ ಮತ್ತು ದೀನತೆಯು ನನಗೆ ಚೆನ್ನಾಗಿ ನೆನಪಿದೆ. ವ್ಯಕ್ತಿಯೋಪಾದಿ ನಾನು ಆಕೆಯ ಕಡೆಗೆ ನಿಜವಾಗಿ ಸೆಳೆಯಲ್ಪಟ್ಟೆನು, ಮತ್ತು ಈ ದಿನದ ತನಕವೂ ಅವಳ ಸ್ನೇಹವನ್ನು ನೆಚ್ಚುತ್ತೇನೆ.”
22. ಯೇಸುವಿನ ಜೀವನವನ್ನು ಪರೀಕ್ಷಿಸಿದ ನಂತರ, ಅವನ ಕುರಿತು ನಮ್ಮ ತೀರ್ಮಾನವೇನು?
22 ಯೇಸು ಮಾಡಿದಂಥ ಕೆಲಸವನ್ನು ಆತನು ಮಾಡಿದ ರೀತಿಯಲ್ಲಿ ಮಾಡುವ ಮೂಲಕ ನಾವಾತನ ಪ್ರೀತಿಗೆ ಪ್ರತಿಕ್ರಿಯೆ ತೋರಿಸುವಾಗ, ಎಂಥಾ ಆಶ್ಚರ್ಯಕರ ಆಶೀರ್ವಾದಗಳನ್ನು ನಾವು ಆನಂದಿಸಬಲ್ಲೆವು! ಯೇಸುವಿನ ಮಹತ್ತು ಸುಸ್ಪಷ್ಟ ಮತ್ತು ಅತೀತ. ರೋಮನ್ ಗವರ್ನರ್ ಪೊಂತ್ಯ ಪಿಲಾತನ ಆ ಮಾತುಗಳನ್ನು ನಾವು ಪ್ರತಿದ್ವನಿಸಲು ಪ್ರೇರಿಸಲ್ಪಡುತ್ತೇವೆ: “ಇಗೋ, ಮನುಷ್ಯನು!” ನಿಶ್ಚಯವಾಗಿಯೂ ಹೌದು, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನಾದ “ಮನುಷ್ಯನು” ಅವನು.—ಯೋಹಾನ 19:5. (w92 2/15)
ನೀವು ಹೇಗೆ ಉತ್ತರಿಸುವಿರಿ?
▫ ಯೇಸುವಿನ ಪ್ರೀತಿಯು ಎಷ್ಟು ಮಹತ್ತಾಗಿದೆ?
▫ ಯೇಸುವಿನ ಪ್ರೀತಿಯು ಯಾರನ್ನು ಪ್ರೀತಿಸುವಂತೆ ನಮ್ಮನ್ನು ನಡಿಸಬೇಕು, ಮತ್ತು ಅವನ ಪ್ರೀತಿ ನಮ್ಮನ್ನು ಏನು ಮಾಡುವಂತೆ ಒತ್ತಾಯ ಮಾಡುತ್ತದೆ?
▫ ಯಾವ ಕೆಲಸವನ್ನು ನಾವು ಮಾಡುವಂತೆ ಯೇಸು ಬಯಸುತ್ತಾನೆ?
▫ ಯೇಸು ಎಷ್ಟು ಐಶ್ವರ್ಯವಂತನಾಗಿದ್ದನು, ಮತ್ತು ಅವನು ಬಡವನಾದದ್ದು ಏಕೆ?
▫ ಜನರಿಗೆ ಆತನು ಶುಶ್ರೂಷೆ ನಡಿಸಿದ ರೀತಿಯಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬೇಕು?
[ಪುಟ 15 ರಲ್ಲಿರುವ ಚಿತ್ರ]
ಪ್ರೀತಿಯನ್ನು ತೋರಿಸುವ ಮಾದರಿಯನ್ನು ಯೇಸು ಇಟ್ಟನು
[ಪುಟ 17 ರಲ್ಲಿರುವ ಚಿತ್ರ]
ತನ್ನ ಶಿಷ್ಯರು ತನಗೆ ಪ್ರೀತಿ ತೋರಿಸುವ ವಿಧವನ್ನು ಯೇಸು ಪ್ರಭಾವಯುಕ್ತವಾಗಿ ತೋರಿಸಿಕೊಟ್ಟನು