ದೇವರ ವಾಕ್ಯದ ತಿರುಗುವ್ಯಾಪಾರಿಗಳಲ್ಲ
“ನಾವು ನಮ್ಮ ಶುಶ್ರೂಷೆಯನ್ನು ಹಣಕ್ಕಾಗಿ ಮಾರುತ್ತಿದ್ದೆವು.” ಈ ಮಾತುಗಳು ಅಮೆರಿಕನ್ ಟೆಲಿವಿಷನ್ ಸೌವಾರ್ತಿಕರ ಪರೀಕ್ಷಣಾ ವರದಿಯಲ್ಲಿ, 1991 ರ ಕೊನೆಗೆ ಸಾಕ್ಷತ್ದರ್ಶನ ಮಾಡಲ್ಪಟ್ಟ ಒಬ್ಬ ಹಿಂದಿನ “ಟೆಲಿಫೋನ್ ಪ್ರಾರ್ಥನಾ ಪಾದ್ರಿ” ಯದ್ದಾಗಿವೆ.
ಈ ಕಾರ್ಯಕ್ರಮವು ಅಮೆರಿಕದ ಮೂರು ಟೆಲಿವಿಷನ್ ಸುವಾರ್ತೋಪದೇಶಿಗಳ ಶುಶ್ರೂಷೆಗಳ ಮೇಲೆ ಕೇಂದ್ರೀಕರಿಸಿತ್ತು. ಕೇವಲ ಈ ಮೂವರು ಪ್ರತಿ ವರ್ಷ ಹತ್ತಾರು ಮಿಲಿಯ ಡಾಲರುಗಳನ್ನು ಜನರಿಂದ ಸುಲಿಯುತ್ತಿದ್ದಾರೆಂದು ಅದು ಹೊರಗೆಡವಿತು. ಒಂದು “ಶುಶ್ರೂಷೆ” ಯು “ದಾನ-ಪ್ರವರ್ಧನಾ ಕಾರ್ಯಕುಶಲತೆಯ ಕಾರ್ಖಾನೆ” ಎಂಬದಾಗಿ ವರ್ಣಿಸಲ್ಪಟ್ಟಿತ್ತು. ಅನೇಕ ವಂಚನೆಗಳಲ್ಲಿ ಅವರೆಲ್ಲರೂ ಸಿಕ್ಕಿಬಿದ್ದರು. ಇದು ನಿಮ್ಮನ್ನು ದಿಗಿಲುತಪ್ಪಿಸುತ್ತದೋ?
ಧರ್ಮವು ಪರಿಶೋಧನೆಯ ಕೆಳಗಿದೆ
ಟೆಲಿವಿಷನ್ ಸೌವಾರ್ತಿಕತೆ ಮಾತ್ರವಲ್ಲದೆ ಸಂಪ್ರದಾಯ ಬದ್ಧ, ಮಧ್ಯಮ ವರ್ಗದ ಧರ್ಮಗಳು ಸಹ ಸರಕಾರಗಳಿಂದ, ಖಾಸಗೀ ಪಹರೆ ಏಜೆನ್ಸಿಗಳಿಂದ ಮತ್ತು ಜನ ಸಾಮಾನ್ಯರಿಂದಲೂ ಎಚ್ಚರಿಕೆಯ ನಿಗಾವಣೆಗೆ ಗುರಿಯಾಗಿವೆ. ಕೆಲವು ಸಂದರ್ಭಗಳಲ್ಲಿ, ರಾಜಕೀಯ ಅಭಿರುಚಿಗಳಿಗೆ ಧಾರ್ಮಿಕವಾಗಿ ಹಣಒದಗಿಸಿದ ಚರ್ಚ್ ಸ್ಟಾಕ್ ಸರ್ಟಿಫಿಕೇಟ್ಗಳು ಮತ್ತು ದೊಡ್ಡ ಸಂಬಳ ಪಡೆಯುವ ವೈದಿಕರ ಆಡಂಬರದ ಜೀವನಕ್ರಮವು ಔಚಿತ್ಯದ ಪ್ರಶ್ನೆಗಳನ್ನು ಎಬ್ಬಿಸಿಯದೆ.
ಕೆಲವು ಧಾರ್ಮಿಕ ಮುಖಂಡರು, ಸುಮಾರು 2,000 ವರ್ಷಗಳ ಹಿಂದೆ ಅಪೊಸ್ತಲ ಪೌಲನಿಂದ ಕೊಡಲ್ಪಟ್ಟ ಕ್ರೈಸ್ತ ಶುಶ್ರೂಷೆಯ ಉದಾತ್ತ ವರ್ಣನೆಗೆ ಹೇಗೆ ಹೊಂದಿಕೆಯಾಗಿದ್ದಾರೆ? ಅವನು ಬರೆದದ್ದು: “ದೇವರ ವಾಕ್ಯವನ್ನು ಕಲಬೆರಿಕೆಮಾಡುವವರಾದ [ದೇವರ ವಾಕ್ಯದ ತಿರುಗುವ್ಯಾಪಾರಿಗಳಾದ, NW] ಹೆಚ್ಚು ಪಾಲಿನ ಜನರ ಹಾಗಿರದೆ ನಿಷ್ಕಪಟಿಗಳಾಗಿ ದೇವರಿಂದ ಉಪದೇಶಹೊಂದಿದವರಿಗೆ ತಕ್ಕ ಹಾಗೆ ಕ್ರಿಸ್ತನ ಅನ್ಯೋನ್ಯತೆಯಲ್ಲಿದ್ದು ದೇವರ ಸಮಕ್ಷಮದಲ್ಲಿಯೇ ಮಾತಾಡುತ್ತೇವೆ.” (2 ಕೊರಿಂಥ 2:17) ಆ ವರ್ಣನೆಗೆ ಇಂದು ಯಾರು ಹೊಂದಿಕೆಯಾಗಿದ್ದಾರೆ?
ವಿಷಯಗಳ ಬೆಲೆಕಟ್ಟಲು ನಿಮಗೆ ಸಹಾಯಕವಾಗಿ, ಪೌಲ ಮತ್ತು ಅವನ ಸಂಗಡಿಗರ ಕ್ರೈಸ್ತ ಶುಶ್ರೂಷೆಗೆ ಹೇಗೆ ಹಣಒದಗಿಸಲ್ಪಟ್ಟಿತ್ತು ಎಂಬದರ ಕಡೆಗೆ ನಾವು ನಿಕಟ ಗಮನವನ್ನಿಡೋಣ. ಆತನ ದಿನಗಳ ಇತರರಿಗಿಂತ ಅದು ಹೇಗೆ ಬೇರೆಯಾಗಿತ್ತು?
ಮೊದಲನೆಯ ಶತಕದ ಸಂಚಾರೀ ಸಾರುವವರು
ಒಬ್ಬ ಸಂಚಾರೀ ಸಾರುವವನೋಪಾದಿ, ಪೌಲನು ಅಸದೃಶನಾಗಿರಲಿಲ್ಲ. ಆ ದಿನದಲ್ಲಿ ಧರ್ಮ ಮತ್ತು ತತ್ವಜ್ಞಾನದ ಮೇಲೆ ತಮ್ಮ ನೋಟಗಳನ್ನು ಪ್ರವರ್ಧಿಸಲು ಅನೇಕರು ಸಂಚಾರವನ್ನು ಕೈಕೊಂಡಿದ್ದರು. “ದೆವ್ವಬಿಡಿಸುವವರೆನಿಸಿಕೊಂಡು ದೇಶ ಸಂಚಾರಿಗಳಾದ ಯೆಹೂದ್ಯರಿದ್ದರು” ಎಂದು ಬೈಬಲ್ ಲೇಖಕನಾದ ಲೂಕನು ಹೇಳಿದ್ದಾನೆ. (ಆ. ಕೃತ್ಯಗಳು 19:13) ಫರಿಸಾಯರನ್ನು ಯೇಸು ಕ್ರಿಸ್ತನು ಖಂಡಿಸಿದಾಗ, ಅವನು ಕೂಡಿಸಿದ್ದು: “ನೀವು ಒಬ್ಬನನ್ನು ನಿಮ್ಮ ಮತದಲ್ಲಿ ಸೇರಿಸಿಕೊಳ್ಳುವದಕ್ಕಾಗಿ ಭೂಮಿಯನ್ನೂ ಸಮುದ್ರವನ್ನೂ ಸುತ್ತಿಕೊಂಡು ಬರುತ್ತೀರಿ.” (ಮತ್ತಾಯ 23:15) ಯೇಸು ತಾನೇ ಒಬ್ಬ ಸಂಚಾರೀ ಸೌವಾರ್ತಿಕನಾಗಿದ್ದನು. ಯೂದಾಯ ಮತ್ತು ಸಮಾರ್ಯದಲ್ಲಿ ಮಾತ್ರವಲ್ಲ “ಭೂಲೋಕದ ಕಟ್ಟಕಡೆಯ ವರೆಗೂ” ಸಾರುವ ಮೂಲಕ ಆತನನ್ನು ಅನುಕರಿಸುವಂತೆ ಆತನು ತನ್ನ ಅಪೊಸ್ತಲರನ್ನು ಮತ್ತು ಶಿಷ್ಯರನ್ನು ತರಬೇತು ಮಾಡಿದನು.—ಅ. ಕೃತ್ಯಗಳು 1:8.
ಅವರ ಸಂಚಾರಗಳಲ್ಲಿ, ಯೇಸುವಿನ ಹಿಂಬಾಲಕರು ಯೆಹೂದ್ಯೇತರ ಸಾರುವವರನ್ನು ಭೇಟಿಯಾದರು. ಏಥೆನ್ಸ್ನಲ್ಲಿ, ಎಪಿಕೂರಿಯನ್ ಮತ್ತು ಸ್ತೋಯಿಕ್ ತತ್ವಜ್ಞಾನಿಗಳೊಂದಿಗೆ ಪೌಲನು ವಾದಿಸಿದ್ದನು. (ಅ. ಕೃತ್ಯಗಳು 17:18) ರೋಮನ್ ಸಾಮ್ರಾಜ್ಯದಲ್ಲೆಲ್ಲೂ ಸಿನಿಕ ತ್ತತ್ವಾನುಯಾಯಿಗಳು ಉದ್ರೇಕ ಭಾಷಣಗಳ ಮೂಲಕ ತಮ್ಮ ಪಂಥವನ್ನು ಆಚರಿಸುತ್ತಿದ್ದರು. ಐಸಿಸ್ ಮತ್ತು ಸೆರಪಿಸ್ನ ಉಪಾಸಕರು, ಸ್ವತಂತ್ರ ಜನರಿಗಿರುವ ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆಯ ವಾಗ್ದಾನಗಳ ಮೂಲಕ, ಸ್ತ್ರೀಯರ ಮತ್ತು ದಾಸರ ಮೇಲೆ ತಮ್ಮ ಪ್ರಭಾವವನ್ನು ವಿಸ್ತರಿಸಿದ್ದರು. ಪ್ರಾಚ್ಯ ಫಲ-ಶಕ್ತಿ ಪಂಥಗಳು, ಗ್ರೀಕ್ ಮತ್ತು ರೋಮನ್ ಲೋಕದ ಹಲವಾರು ನಿಗೂಢ ಧರ್ಮಗಳಿಗೆ ಜಿಗಿಹಲಗೆಯನ್ನು ಒದಗಿಸಿಕೊಟ್ಟವು. ಪಾಪದಿಂದ ಪರಿಹಾರಹೊಂದುವ ಒಂದು ವಾಗ್ದಾನವು ಮತ್ತು ದೈವಿಕ ರಹಸ್ಯಗಳನ್ನು ಹಂಚುವ ಒಂದು ಅಪೇಕ್ಷೆಯು ಸುಳ್ಳು ದೇವರುಗಳಾದ ಡಿಮಿಟರ್, ಡೈಒಸಿಸಸ್, ಮತ್ತು ಸೈಬಿಲ್ರೆಡೆಗೆ ಅನುಯಾಯಿಗಳನ್ನು ಆಕರ್ಷಿಸಿತ್ತು.
ಖರ್ಚುಗಳು ನಿಭಾಯಿಸಲ್ಪಟ್ಟದ್ದು ಹೇಗೆ?
ಆದರೂ, ಪ್ರಯಾಣವು ಹೆಚ್ಚು ಖರ್ಚಿನದ್ದಾಗಿತ್ತು. ಸರಕುಸಾಗಣೆಯ ಸುಂಕ, ಮತ್ತು ಸಮುದ್ರಯಾನದ ಖರ್ಚುಗಳಲ್ಲದೆ ಸಂಚಾರಿಗಳಿಗೆ ಊಟ, ವಸತಿ, ಕಟ್ಟಿಗೆ, ವಸ್ತ್ರ ಮತ್ತು ಔಷಧೋಪಚಾರ ಬೇಕಾಗಿತ್ತು. ಸಾರುವವರು, ಬೋಧಕರು, ತತ್ವಜ್ಞಾನಿಗಳು ಮತ್ತು ಯೋಗಿಗಳು ಈ ಆವಶ್ಯಕತೆಗಳನ್ನು ಐದು ಮುಖ್ಯ ವಿಧಾನಗಳಲ್ಲಿ ಪೂರೈಸಿಕೊಂಡರು. ಅವರು (1) ವೇತನಕ್ಕಾಗಿ ಕಲಿಸಿದರು; (2) ಅಲ್ಪ ವೃತ್ತಿಗಳನ್ನು ಮತ್ತು ಕಸಬುಗಳನ್ನು ನಡಿಸುವ ಉದ್ಯೋಗವನ್ನು ತಕ್ಕೊಂಡರು; (3) ಅತಿಥಿ ಸತ್ಕಾರಗಳನ್ನು ಮತ್ತು ಸ್ವಇಷ್ಟದ ಕಾಣಿಕೆಗಳನ್ನು ಸ್ವೀಕರಿಸಿದರು; (4) ಧನಿಕ ಆಶ್ರಯದಾತರಿಗೆ ತಮ್ಮನ್ನು ಸೇರಿಸಿಕೊಂಡರು, ಹೆಚ್ಚಾಗಿ ಅವರ ಬೋಧಕರಾಗಿದ್ದುಕೊಂಡು; ಮತ್ತು (5) ಭಿಕ್ಷೆ ಬೇಡಿದರು. ನಿರಾಕರಣೆಗಳಿಗೆ ತನ್ನನ್ನು ಸಿದ್ಧಪಡಿಸಿಕೊಳ್ಳಲು ಪ್ರಖ್ಯಾತ ಭಿಕ್ಷು ಸಿನಿಕನಾದ ಡೈಒಜಿನಿಸ್ ಭಿಕ್ಷಕ್ಕಾಗಿ ನಿರ್ಜೀವ ಮೂರ್ತಿಗಳನ್ನೂ ಬೇಡಿದ್ದನು.
ಕ್ರೈಸ್ತ ಶುಶ್ರೂಷಕರೆಂದು ಹೇಳಿಕೊಂಡಿದ್ದ, ಆದರೆ ಕೆಲವು ಗ್ರೀಕ್ ತತ್ವಜ್ಞಾನಿಗಳಂತೆ ಧನಿಕರ ಸ್ನೇಹವನ್ನು ಬೆಳಸಿಕೊಂಡು ಬಡವರಿಂದ ಕದ್ದುಕೊಂಡ ನಿರ್ದಿಷ್ಟ ಸಾರುವವರ ಕುರಿತು ಪೌಲನಿಗೆ ತಿಳಿದಿತ್ತು. ಕೊರಿಂಥದ ಸಭೆಯನ್ನು ಅವನು ಗದರಿಸುತ್ತಾ ಅಂದದ್ದು: “ಒಬ್ಬನು ನಿಮ್ಮನ್ನು ತನಗೆ ವಶಮಾಡಿಕೊಂಡರೂ ಒಬ್ಬನು ನಿಮ್ಮನ್ನು ನುಂಗಿಬಿಟ್ಟರೂ . . . ನೀವು ಸಹಿಸಿಕೊಳ್ಳುತ್ತೀರಲ್ಲಾ.” (2 ಕೊರಿಂಥ 11:20) ಯೇಸು ಕ್ರಿಸ್ತನು ಎಂದೂ ಏನನ್ನೂ ಬಾಚಿಕೊಳ್ಳಲಿಲ್ಲ, ಪೌಲನು ಮತ್ತು ಅವನ ಜೊತೆ ಕೆಲಸಗಾರರೂ ಹಾಗೆ ಮಾಡಲಿಲ್ಲ. ಆದರೆ ಕೊರಿಂಥದ ಅತ್ಯಾಶೆಯ ಸೌವಾರ್ತಿಕರು “ಸುಳ್ಳು ಅಪೊಸ್ತಲರೂ ಮೋಸಗಾರರಾದ ಕೆಲಸಗಾರರೂ” ಆಗಿದ್ದು, ಸೈತಾನನ ಶುಶ್ರೂಷಕರಾಗಿದ್ದರು.—2 ಕೊರಿಂಥ 11:13-15.
ತನ್ನ ಶಿಷ್ಯರಿಗೆ ಯೇಸುವಿನ ಉಪದೇಶಗಳು ಸಂಬಳಕ್ಕಾಗಿ ಕಲಿಸುವುದನ್ನು ಪ್ರತಿಬಂಧಿಸಿದ್ದವು. “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ,” ಎಂದವನು ಬೋಧಿಸಿದನು. (ಮತ್ತಾಯ 10:8) ಭಿಕ್ಷೆ ಬೇಡುವುದು ಸಾಮಾನ್ಯವಾಗಿದ್ದರೂ, ಅದನ್ನು ಆ ಕಾಲದಲ್ಲಿ ತಿರಸ್ಕಾರದಿಂದ ಕಾಣಲಾಗುತ್ತಿತ್ತು. ತನ್ನ ದೃಷ್ಟಾಂತಗಳಲ್ಲೊಂದರಲ್ಲಿ ಯೇಸು ಒಬ್ಬ ನಿರ್ದಿಷ್ಟ ಮನೆವಾರ್ತೆಯವನನ್ನು, “ಭಿಕ್ಷಾ ಬೇಡುವದಕ್ಕೆ ನನಗೆ ನಾಚಿಕೆಯಾಗುತ್ತದೆ” ಎಂದು ಹೇಳುವವನಾಗಿ ಚಿತ್ರಿಸಿದ್ದಾನೆ. (ಲೂಕ 16:3) ಆದಕಾರಣ, ಬೈಬಲ್ ವೃತ್ತಾಂತದಲ್ಲಿ ಎಂದೂ ಯೇಸುವಿನ ನಂಬಿಗಸ್ತ ಹಿಂಬಾಲಕರು ಹಣವನ್ನಾಗಲಿ ಸೊತ್ತನ್ನಾಗಲಿ ಬೇಡುವುದನ್ನು ನಾವು ಕಾಣುವುದಿಲ್ಲ. ಅವರು ಈ ಸೂತ್ರದಿಂದ ಜೀವಿಸಿದರು: “ಕೆಲಸಮಾಡಲೊಲ್ಲದವನು ಊಟಮಾಡಬಾರದು.”—2 ಥೆಸಲೊನೀಕ 3:10.
ಎರಡು ವಿಧಾನಗಳಲ್ಲಿ ತಮ್ಮ ಅಗತ್ಯತೆಗಳನ್ನು ನೋಡಿಕೊಳ್ಳುವಂತೆ ಯೇಸು ತನ್ನ ಶಿಷ್ಯರನ್ನು ಉತ್ತೇಜಿಸಿದನು. ಮೊದಲನೆಯದಾಗಿ, ಪೌಲನಂದಂತೆ, ಅವರು “ಸುವಾರ್ತೆಯಿಂದಲೇ ಜೀವನ ಮಾಡುವ” ಶಕ್ಯತೆ ಇತ್ತು. ಹೇಗೆ? ಇಷ್ಟಪೂರ್ವಕವಾಗಿ ಕೊಡಲ್ಪಟ್ಟ ಆದರಾತಿಥ್ಯವನ್ನು ಸ್ವೀಕರಿಸುವ ಮೂಲಕ. (1 ಕೊರಿಂಥ 9:14; ಲೂಕ 10:7) ಎರಡನೆಯದಾಗಿ, ಭೌತಿಕವಾಗಿ ತಾವೇ ತಮಗಾಗಿ ಒದಗಿಸಿಕೊಳ್ಳುವ ಮೂಲಕ.—ಲೂಕ 22:36.
ಪೌಲನಿಂದ ಅನ್ವಯಿಸಲ್ಪಟ್ಟ ಸೂತ್ರಗಳು
ಮೇಲಿನ ಸೂತ್ರಗಳನ್ನು ಪೌಲನು ಹೇಗೆ ಅನ್ವಯಿಸಿಕೊಂಡನು? ಒಳ್ಳೇದು, ಅಪೊಸ್ತಲನ ಎರಡನೆಯ ಮಿಷನೆರಿ ಸಂಚಾರದ ಕುರಿತು ಲೂಕನು ಬರೆದದ್ದು: “ನಾವು ತ್ರೋವದಿಂದ ಸಮುದ್ರ ಪ್ರಯಾಣಮಾಡಿ ಸಮೊಥ್ರಾಕೆಗೆ ಬಂದು ಮರುದಿನ ನಯಾಪೊಲಿಗೆ ಸೇರಿ ಅಲ್ಲಿಂದ ಫಿಲಿಪ್ಪಿಗೆ ಮುಟ್ಟಿದೆವು. ಫಿಲಿಪ್ಪಿ ಎಂಬದು ಮಕೆದೋನ್ಯದಲ್ಲಿ ಪ್ರಧಾನ ಪಟ್ಟಣ . . . ಆಗಿದೆ. ಈ ಪಟ್ಟಣದಲ್ಲಿ ನಾವು ಕೆಲವು ದಿವಸ ಇದ್ದೆವು.” ಪ್ರಯಾಣ, ಆಹಾರ, ಮತ್ತು ವಸತಿಯ ಏರ್ಪಾಡೆಲವ್ಲನ್ನು ಅವರು ವೈಯಕ್ತಿಕವಾಗಿ ನಿಭಾಯಿಸಿಕೊಂಡರು.—ಅ. ಕೃತ್ಯಗಳು 16:11, 12.
ಕೊನೆಗೆ, ಲುದ್ಯಳೆಂಬ ಒಬ್ಬ ಸ್ತ್ರೀಯು, “ಪೌಲನು ಹೇಳಿದ ಮಾತುಗಳಿಗೆ ಲಕ್ಷ್ಯಕೊಟ್ಟು . . . ಆಕೆಯೂ ಆಕೆಯ ಮನೆಯವರೂ ದೀಕ್ಷಾಸ್ನಾನ ಮಾಡಿಕೊಂಡ ಮೇಲೆ ಆಕೆ—ನಾನು ಕರ್ತನನ್ನು ನಂಬಿದವಳೆಂದು ನಿಶ್ಚಯಿಸಿಕೊಂಡಿದ್ದರೆ ನನ್ನ ಮನೆಯಲ್ಲಿ ಬಂದು ಇರ್ರಿ ಎಂದು ಬೇಡಿಕೊಂಡು ನಮ್ಮನ್ನು ಬಲವಂತ ಮಾಡಿದಳು.” (ಅ. ಕೃತ್ಯಗಳು 16:13-15) ಪ್ರಾಯಶಃ ಕಡಿಮೆಪಕ್ಷ ಅಂಶಿಕವಾಗಿ ಲುದ್ಯಳ ಆದರಾತಿಥ್ಯದ ಕಾರಣ, ಫಿಲಿಪ್ಪಿಯ ಜೊತೆ ವಿಶ್ವಾಸಿಗಳಿಗೆ ಪೌಲನು ಹೀಗೆ ಬರೆಯ ಶಕ್ತನಾದನು: “ನಾನು ನಿಮಗೋಸ್ಕರ ದೇವರನ್ನು ಬೇಡಿಕೊಳ್ಳುವ ಎಲ್ಲಾ ಸಮಯಗಳಲ್ಲಿಯೂ ಸಂತೋಷದಿಂದಲೇ ಬೇಡುವವನಾಗಿದ್ದೇನೆ. ನಾನು ನಿಮ್ಮನ್ನು ನೆನಸಿಕೊಳ್ಳುವಾಗೆಲ್ಲಾ ನೀವು ಮೊದಲಿನಿಂದ ಇಂದಿನ ವರೆಗೂ ಸುವಾರ್ತಾಪ್ರಚಾರದಲ್ಲಿ ಸಹಕಾರಿಗಳಾಗಿದ್ದೀರೆಂದು ನನ್ನ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇನೆ.”—ಫಿಲಿಪ್ಪಿ 1:3-5.
ಜನರು ಈ ಸಂಚಾರೀ ಕ್ರೈಸ್ತ ಕೆಲಸಗಾರರನ್ನು ಸ್ವಾಗತಿಸುವ ಹಲವಾರು ಸಂದರ್ಭಗಳ ಕುರಿತು ಲೂಕನು ತಿಳಿಸುತ್ತಾನೆ. (ಆ. ಕೃತ್ಯಗಳು 16:33, 34; 17:7; 21:7, 8, 16; 28:2, 7, 10, 14) ಪೌಲನು ತನ್ನ ಪ್ರೇರಿತ ಪತ್ರಿಕೆಗಳಲ್ಲಿ, ತನಗೆ ದೊರೆತ ಆತಿಥ್ಯ ಮತ್ತು ಕಾಣಿಕೆಗಳನ್ನು ಅಂಗೀಕರಿಸಿದ್ದನು ಮತ್ತು ಅದಕ್ಕಾಗಿ ಉಪಕಾರ ಹೇಳಿದ್ದನು. (ರೋಮಾಪುರ 16:23; 2 ಕೊರಿಂಥ 11:9; ಗಲಾತ್ಯ 4:13, 14; ಫಿಲಿಪ್ಪಿ 4:15-18) ಆದಾಗ್ಯೂ, ಅವನಾಗಲಿ ಅವನ ಸಹವಾಸಿಗಳಾಗಲಿ ತಮಗೆ ಕಾಣಿಕೆಗಳು ಮತ್ತು ಆರ್ಥಿಕ ಬೆಂಬಲಗಳು ಕೊಡಲ್ಪಡಬೇಕೆಂಬ ಗುಪ್ತಸೂಚನೆಯನ್ನು ಕೊಟ್ಟಿರಲಿಲ್ಲ. ಈ ಉತ್ತಮ ಗುಣವು ಅವರ ಸಂಚಾರ ಮೇಲ್ವಿಚಾರಕರ ನಡುವೆ ಇನ್ನೂ ಕಂಡುಬರುತ್ತದೆಂದು ಯೆಹೋವನ ಸಾಕ್ಷಿಗಳು ಹೇಳಬಲ್ಲರು.
ಆದರಾತಿಥ್ಯದ ಆಶ್ರಿತರಲ್ಲ
ಪೌಲನು ಆದರಾತಿಥ್ಯದ ಆಶ್ರಿತನಾಗಿರಲಿಲ್ಲ. ಕಷ್ಟದ ಕೆಲಸ ಮತ್ತು ದೀರ್ಘ ತಾಸುಗಳನ್ನು ಆವಶ್ಯಪಡಿಸಿದ್ದ, ಆದರೆ ಕಡಿಮೆ ವೇತನವನ್ನಿತ್ತ ಒಂದು ಕಸಬನ್ನು ಅವನು ಕಲಿತಿದ್ದನು. ಕೊರಿಂಥದಲ್ಲಿ ಅಪೊಸ್ತಲನು ಮಿಷನೆರಿಯಾಗಿ ಬಂದಾಗ, “ಅಕ್ವಿಲನೆಂಬ ಒಬ್ಬ ಯೆಹೂದ್ಯನನ್ನು ಅಲ್ಲಿ ಕಂಡನು. . . . ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲಳ್ಲೂ . . . ಅಲ್ಲಿಗೆ ಬಂದಿದ್ದರು. ಪೌಲನು ಅವರ ಮನೆಗೆ ಹೋಗಿ ತಾನೂ ಅವರೂ ಒಂದೇ ಕಸಬಿನವರಾಗಿದದ್ದರಿಂದ ಅವರಲ್ಲಿದ್ದು ಅವರೊಂದಿಗೆ ಕೆಲಸ ಮಾಡುತ್ತಿದ್ದನು; ಗುಡಾರ ಮಾಡುವದು ಅವರ ಕಸಬಾಗಿತ್ತು.”—ಅ. ಕೃತ್ಯಗಳು 18:1-3.
ತದನಂತರ, ಎಫೆಸದಲ್ಲಿ, ಪೌಲನಿನ್ನೂ ಪರಿಶ್ರಮಪಟ್ಟು ಕೆಲಸಮಾಡಿದ್ದನು. (ಹೋಲಿಸಿರಿ ಅ. ಕೃತ್ಯಗಳು 20:34; 1 ಕೊರಿಂಥ 4:11, 12.) ಅವನು ತನ್ನ ಸ್ವಂತ ಊರಿನ ಕ್ಷೇತ್ರದ ಒರಟಾದ ಆಡುಗೂದಲಿನ ಗುಡಾರ-ಸರಕಾದ ಕೆಲೆಕ್ಯೂಮ್ನೊಂದಿಗೆ ಕೆಲಸಮಾಡುವುದರಲ್ಲಿ ತಜ್ಞನಾಗಿದ್ದಿರಬಹುದು. ಪೌಲನು ಒಂದು ಸ್ಟೂಲಿನ ಮೇಲೆ ಕೂತು, ತನ್ನ ಕೆಲಸದ ಬೆಂಚಿನ ಮೇಲೆ ಬಾಗುತ್ತಾ, ರಾತ್ರಿ ಬಹಳ ಹೊತ್ತಿನ ತನಕ ಕತ್ತರಿಸುತ್ತಾ ಹೊಲಿಯುತ್ತಾ ಇರುವುದನ್ನು ನಾವು ಊಹಿಸಿಕೊಳ್ಳಬಹುದು. ಕೆಲಸದಂಗಡಿಯಲ್ಲಿ ಗದ್ದಲ ಕಡಿಮೆಯಾಗಿದ್ದಿರಬಹುದಾದರ್ದಿಂದ, ಮಾತಾಡುತ್ತಾ ದುಡಿಯುವುದು ಸುಲಭವಾಗಿದ್ದಿರಬಹುದು, ಮತ್ತು ಅಂಗಡಿಯ ಮಾಲಿಕನಿಗೆ, ಅವನ ಕೆಲಸಗಾರರಿಗೆ, ದಾಸರಿಗೆ, ಗಿರಾಕಿಗಳಿಗೆ, ಮತ್ತು ಸ್ನೇಹಿತರಿಗೆ ಸಾಕ್ಷಿಕೊಡುವ ಸಂದರ್ಭವು ಪೌಲನಿಗೆ ಸಿಕ್ಕಿರಬಹುದು.—ಹೋಲಿಸಿರಿ 1 ಥೆಸಲೋನಿಕ 2:9.
ಮಿಷನೆರಿಯಾದ ಪೌಲನು ತನ್ನ ಶುಶ್ರೂಷೆಯಿಂದ ಹಣಗಳಿಸಲು ಅಥವಾ ತಾನು ದೇವರ ವಾಕ್ಯದಿಂದ ಜೀವನೋಪಾಯ ನಡಿಸುತ್ತಿದ್ದೇನೆಂಬ ಅಭಿಪ್ರಾಯವನ್ನು ಕೊಡಲು ನಿರಾಕರಿಸಿದ್ದನು. ಅವನು ಥೆಸಲೊನೀಕದವರಿಗೆ ಹೇಳಿದ್ದು: “ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ; ನಾವು ನಿಮ್ಮಲ್ಲಿ ಅಕ್ರಮವಾಗಿ ನಡೆಯಲಿಲ್ಲ; ನಾವು ಹಣಕೊಡದೆ ಯಾರ ಬಳಿಯಲ್ಲೂ ಊಟಮಾಡಲಿಲ್ಲ; ನಿಮ್ಮಲ್ಲಿ ಒಬ್ಬರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿಕೊಂಡೆವು. ನಿಮ್ಮಿಂದ ಪೋಷಣೆ ಹೊಂದುವದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, ನೀವು ನಮ್ಮನ್ನು ಅನುಸರಿಸುವದಕ್ಕಾಗಿ ನಿಮಗೆ ಮಾದರಿಯಾಗಿರೋಣವೆಂದೇ ಮಾಡಿದೆವು.”—2 ಥೆಸಲೊನೀಕ 3:7-9.
ಇಪ್ಪತ್ತನೆಯ ಶತಮಾನದ ಅನುಕರಣೆಗಾರರು
ಈ ದಿನಗಳ ತನಕವೂ ಯೆಹೋವನ ಸಾಕ್ಷಿಗಳು ಪೌಲನ ಉತ್ತಮ ಮಾದರಿಯನ್ನು ಅನುಸರಿಸುತ್ತಾರೆ. ಹಿರಿಯರು ಮತ್ತು ಶುಶ್ರೂಷಾ ಸೇವಕರು ತಾವು ಸೇವೆಮಾಡುವ ಸಭೆಗಳಿಂದ ಒಂದು ವೇತನವನ್ನಾಗಲಿ ಒಂದು ಭತೆಯ್ತನ್ನು ಕೂಡ ಪಡೆಯುವುದಿಲ್ಲ. ಬದಲಿಗೆ ಅವರಲ್ಲಿ ಹೆಚ್ಚಿನವರು ಉದ್ಯೋಗವನ್ನು ನಡಿಸುವ ಮೂಲಕ ತಮ್ಮ ಕುಟುಂಬಗಳಿಗಾಗಿ, ಬೇರೆ ಪ್ರತಿಯೊಬ್ಬರಂತೆ ತಾವೇ ಒದಗಿಸುತ್ತಾರೆ. ಪೂರ್ಣ ಸಮಯದ ಪಯನೀಯರ್ ಸೌವಾರ್ತಿಕರು ಸಹ, ಅವರಲ್ಲಿ ಹೆಚ್ಚಿನವರು ತಮ್ಮ ಮೂಲಭೂತ ಆವಶ್ಯಕತೆಗಳನ್ನು ಪೂರೈಸಲು ಸಾಕಾಗುವಷ್ಟು ಮಾತ್ರವೇ ದುಡಿಯುತ್ತಾ, ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ, ಸುವಾರ್ತೆಯು ವಿರಳವಾಗಿ ತಲಪಲ್ಪಡುವ ದೂರದ ಕ್ಷೇತ್ರಗಳಲ್ಲಿ ಸಾರಲು ಪ್ರತಿ ವರ್ಷ ಕೆಲವು ಸಾಕ್ಷಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಪ್ರಯಾಣಮಾಡುತ್ತಾರೆ. ಸ್ಥಳೀಕ ಕುಟುಂಬಗಳು ಊಟ ಮತ್ತು ವಸತಿಗಳನ್ನು ಪಾಲುಗಾರರಾಗುವಂತೆ ಅವರನ್ನು ಆಮಂತ್ರಿಸಿದಲ್ಲಿ, ಅವರದನ್ನು ಗಣ್ಯಮಾಡುತ್ತಾರೆ ಆದರೆ ಅಂಥ ಆದರಾತಿಥ್ಯವನ್ನು ದುರುಪಯೋಗ ಪಡಿಸುವುದಿಲ್ಲ.
ಯೆಹೋವನ ಸಾಕ್ಷಿಗಳಿಂದ ನಡಿಸಲ್ಪಡುವ ಎಲ್ಲಾ ಸಾರುವಿಕೆ ಮತ್ತು ಕಲಿಸುವಿಕೆಯು ಇಷ್ಟಪೂರ್ವಕವಾದದ್ದು, ಮತ್ತು ಅವರು ತಮ್ಮ ಶುಶ್ರೂಷೆಗಾಗಿ ಎಂದೂ ಹಣ ಕೇಳುವುದಿಲ್ಲ. ಆದರೂ, ಅವರ ಲೋಕವ್ಯಾಪಕ ಸಾರುವ ಕಾರ್ಯಕ್ಕಾಗಿ ಉದಾತ್ತ ದಾನಗಳು ಸ್ವೀಕರಿಸಲ್ಪಡುತ್ತವೆ ಮತ್ತು ಆ ಉದ್ದೇಶಕ್ಕಾಗಿ ವಾಚ್ ಟವರ್ ಸೊಸೈಟಿಗೆ ದಾಟಿಸಲ್ಪಡುತ್ತವೆ. (ಮತ್ತಾಯ 24:14) ಸಾಕ್ಷಿಗಳ ಶುಶ್ರೂಷೆಯು ಪ್ರತಿಯೊಂದು ವಿಧಾನದಲ್ಲೂ ವ್ಯಾಪಾರ ಸಂಬಂಧದಲ್ಲ. ಪೌಲನಂತೆ ಅವರಲ್ಲಿ ಪ್ರತಿಯೊಬ್ಬರು ಸತ್ಯತೆಯಿಂದ ಹೀಗೆ ಹೇಳಬಲ್ಲರು: “ಸುವಾರ್ತೆಯನ್ನು ನಿಮಗೆ ಉಚಿತಾರ್ಥವಾಗಿ ನಾನು ಸಂತೋಷದಿಂದ ಸಾರಿದ್ದೇನೆ.” (2 ಕೊರಿಂಥ 11:7, NW) ಯೆಹೋವನ ಸಾಕ್ಷಿಗಳು “ದೇವರ ವಾಕ್ಯದ ತಿರುಗುವ್ಯಾಪಾರಿಗಳಲ್ಲ.”
[ಪುಟ 27 ರಲ್ಲಿರುವ ಚೌಕ]
ಕೆಲವರು ರಾಜ್ಯ-ಸಾರುವಿಕೆಯ ಕಾರ್ಯಕ್ಕೆ ದಾನ ನೀಡುವ ವಿಧ
▫ ಲೋಕವ್ಯಾಪಕ ಕಾರ್ಯಕ್ಕಾಗಿ ಕಾಣಿಕೆಗಳು: ಅನೇಕರು ಒಂದು ಮೊಬಲಗನ್ನು ಬದಿಗಿಟ್ಟು ಅಥವಾ ಆಯವ್ಯಯ ಪಟ್ಟಿಮಾಡಿ, ಈ ಗುರುತುಪಟ್ಟಿಯ ಕಾಣಿಕೆ ಪೆಟ್ಟಿಗೆಗಳಿಗೆ ಹಾಕುತ್ತಾರೆ. “ಸೊಸೈಟಿಯ ಲೋಕವ್ಯಾಪಕ ಕಾರ್ಯಕ್ಕೋಸ್ಕರ ಕಾಣಿಕೆಗಳು—ಮತ್ತಾಯ 24:14.” ಪ್ರತಿ ತಿಂಗಳು ಸಭೆಗಳು ಈ ಮೊಬಲಗನ್ನು ವಾಚ್ ಟವರ್ ಸೊಸೈಟಿಯ ಅತಿ ಸಮೀಪದ ಬ್ರಾಂಚ್ ಆಫೀಸಿಗೆ ಕಳುಹಿಸುತ್ತವೆ.
▫ ಕೊಡುಗೆಗಳು: ಸ್ವ-ಇಷ್ಟದಿಂದ ಮಾಡುವ ಹಣದಾನಗಳನ್ನು ನೇರವಾಗಿ, Watch Tower Bible and Tract Society of India, H-58 Old Khandala Road, Lonavla 410 401, Mah., ಇವರಿಗೆ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಕಳುಹಿಸಬಹುದು. ಆಭರಣಗಳನ್ನು ಮತ್ತು ಇತರ ಬೆಲೆಯುಳ್ಳ ವಸ್ತುಗಳನ್ನೂ ದಾನ ಕೊಡಬಹುದು. ಇಂಥ ದಾನಗಳೊಂದಿಗೆ, ಇದು ನೇರವಾಗಿ ಮಾಡಿರುವ ದಾನ ಎಂದು ಹೇಳುವ ಒಂದು ಚಿಕ್ಕ ಪತ್ರ ಜತೆಗೂಡಿರಬೇಕು.
▫ ಷರತ್ತು-ದಾನದ ಏರ್ಪಾಡು: ವಾಚ್ ಟವರ್ ಸೊಸೈಟಿಗೆ ದಾನಿಯ ಮರಣದ ತನಕ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಹಣವನ್ನೂ ಕೊಡಬಹುದು, ದಾನಿಗೆ ಒಂದುವೇಳೆ ವೈಯಕ್ತಿಕ ಅಗತ್ಯಬಿದ್ದರೆ ಅದನ್ನು ಅವನಿಗೆ ಹಿಂದೆಕೊಡುವ ಷರತ್ತಿನೊಂದಿಗೆ.
▫ ವಿಮೆ: ಜೀವವಿಮಾ ಪಾಲಿಸಿ ಅಥವಾ ನಿವೃತ್ತಿ⁄ಪೆನ್ಶನ್ ಯೋಜನೆಯಲ್ಲಿ ವಾಚ್ ಟವರ್ ಸೊಸೈಟಿಯನ್ನು ಫಲಾನುಭವಿಯಾಗಿ ಹೆಸರಿಸಬಹುದು. ಇಂಥ ಯಾವುದೇ ಏರ್ಪಾಡನ್ನು ಸೊಸೈಟಿಗೆ ತಿಳಿಸತಕ್ಕದ್ದು.
▫ ಬ್ಯಾಂಕ್ ಖಾತೆಗಳು: ಬ್ಯಾಂಕ್ ಖಾತೆಗಳು, ಡಿಪಾಸಿಟ್ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು ಸ್ಥಳೀಕ ಬ್ಯಾಂಕ್ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್ ಟವರ್ ಸೊಸೈಟಿ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣ ಹೊಂದುವಲ್ಲಿ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು. ಇಂಥ ಯಾವುದೇ ಏರ್ಪಾಡುಗಳನ್ನು ಸೊಸೈಟಿಗೆ ತಿಳಿಸಬೇಕು.
▫ ಸ್ಟಾಕ್ಸ್ ಮತ್ತು ಬಾಂಡ್ಸ್: ಸ್ಟಾಕ್ಸ್ ಮತ್ತು ಬಾಂಡ್ಸ್ಗಳನ್ನು ನೇರವಾದ ಒಂದು ಕೊಡುಗೆಯಾಗಿ ಇಲ್ಲವೇ ಆದಾಯವು ದಾನಿಗೆ ಸಲ್ಲುತ್ತಾ ಇರುವಂಥ ಒಂದು ಏರ್ಪಾಡಿನೊಂದಿಗೆ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು.
▫ ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ದಾನವಾಗಿ ಅಥವಾ ದಾನಿಯು ಅವನ⁄ಅವಳ ಜೀವಮಾನಕಾಲ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್ ಟವರ್ ಸೊಸೈಟಿಗೆ ದಾನಮಾಡಬಹುದು. ಒಬ್ಬನು ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರ ಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸಬೇಕು.
▫ ಉಯಿಲುಗಳು ಮತ್ತು ಟ್ರಸ್ಟ್ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾ-ಪತ್ರಗಳ ಮೂಲಕವಾಗಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ ಇವರಿಗೆ ಬಿಟ್ಟುಬಿಡಬಹುದು ಅಥವಾ ಸೊಸೈಟಿಯನ್ನು ಒಂದು ಟ್ರಸ್ಟ್ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಒಂದು ಧಾರ್ಮಿಕ ಸಂಸ್ಥೆಗೆ ಪ್ರಯೋಜನಕಾರಿಯಾದ ಒಂದು ಟ್ರಸ್ಟ್ ನಿರ್ದಿಷ್ಟ ತೆರಿಗೆ ಸವಲತ್ತನ್ನು ಒದಗಿಸಬಲ್ಲದು. ಉಯಿಲಿನ ಅಥವಾ ಟ್ರಸ್ಟಿನ ಒಪ್ಪಿಗೆ ಪತ್ರದ ನಕಲುಪ್ರತಿಯನ್ನು ಸೊಸೈಟಿಗೆ ಕಳುಹಿಸಬೇಕು.
ಇಂಥ ವಿಷಯಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, Watch Tower Bible and Tract Society of India, H-58 Old Khandala Road, Lonavla 410 401, Mah., ಇವರಿಗೆ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ.
[ಪುಟ 29 ರಲ್ಲಿರುವ ಚೌಕ]
ಆಕೆ ಸಹಾಯಮಾಡಲು ಬಯಸಿದಳು
ಹನ್ನೊಂದು ವರ್ಷ ಪ್ರಾಯದ ಟಿಫಾನಿ, ಅಮೆರಿಕದ ಬ್ಯಾಟನ್ ರೂಜ್, ಲೂಸ್ಯಿಯಾನದಲ್ಲಿ ಒಬ್ಬ ಶಾಲಾ ಬಾಲಕಿಯಾಗಿದ್ದಳು. ಇತ್ತೀಚೆಗೆ, ಈ ಎಳೆಯ ಯೆಹೋವನ ಸಾಕ್ಷಿಯು “ಅಮೆರಿಕದಲ್ಲಿ ಶಿಕ್ಷಣ” ಎಂಬ ಮುಖ್ಯ ವಿಷಯದ ಮೇಲೆ ಒಂದು ಪ್ರಬಂಧವನ್ನು ತಯಾರಿಸಿದಳು. ಫಲಿತಾಂಶವಾಗಿ, ಅವಳ ಸಾಕ್ಷಿ ಹೆತ್ತವರು ಶಾಲಾ ಪ್ರಿನ್ಸಿಪಲ್ರಿಂದ ಈ ಪತ್ರವನ್ನು ಪಡೆದರು:
“ಅಮೆರಿಕನ್ ಎಡ್ಯುಕೇಷನ್ ವಾರದಲ್ಲಿ, ಪ್ರತಿ ಗ್ರೇಡ್ನ ಒಂದು ಎದ್ದುಕಾಣುವ ಪ್ರಬಂಧವು ಇಂಟರ್ಕಾಂ ಮೂಲಕ ಓದಲ್ಪಡುತ್ತದೆ. ಈ ಬೆಳಿಗ್ಗೆ ಟಿಫಾನಿಯ ಪ್ರಬಂಧವನ್ನು ಉಪಯೋಗಿಸುವ ಸಂತೋಷವು ನನ್ನದಾಯಿತು. ಆಕೆ ನಿಜವಾಗಿಯೂ ಒಬ್ಬ ಗಮನಾರ್ಹ ಎಳೆಯ ಮಹಿಳೆಯಾಗಿದ್ದಾಳೆ. ಅವಳು ಸಮಚಿತ್ತಳೂ, ಆತ್ಮ-ವಿಶ್ವಾಸವುಳ್ಳವಳೂ, ಮೇಧಾವಿಯೂ, ವಿನಯಶೀಲೆಯೂ ಆಗಿರುತ್ತಾಳೆ. ಈ ಅನೇಕ ಗುಣಲಕ್ಷಣಗಳುಳ್ಳ ಆರನೆಯ ಗ್ರೇಡ್ನ ಒಬ್ಬಾಕೆಯನ್ನು ನಾನು ಕಂಡದ್ದು ಅತಿ ವಿರಳ. ಟಿಫಾನಿ ನಮ್ಮ ಶಾಲೆಗೆ ಉಪಯುಕ್ತಳಾಗಿದ್ದಾಳೆ.”
ಟಿಫಾನಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದಳು. ಆಕೆ ತದನಂತರ ವಾಚ್ ಟವರ್ ಸೊಸೈಟಿಗೆ ಬರೆಯುತ್ತಾ, ಅಂದದ್ದು: “ಪ್ರಾಯಶ; ನಾನು ಆ ಸ್ಪರ್ಧೆಯನ್ನು ಜಯಿಸಿದ್ದು, ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಟ್ ವರ್ಕ್ ಪ್ರಕಾಶನದ ಕಾರಣದಿಂದ ಮಾತ್ರವೇ. . . . ಶಿಕ್ಷಣದ ಕುರಿತಾದ ಅಧ್ಯಾಯಗಳನ್ನು ನಾನು ಉಪಯೋಗಿಸಿದೆನು. . . . ಈ ಉಪಯುಕ್ತ ಮತ್ತು ಪ್ರೇರೇಪಕ ಪುಸ್ತಕವನ್ನು ಪ್ರಕಾಶಿಸಿದಕ್ಕಾಗಿ ನಿಮಗೆ ತುಂಬಾ ಉಪಕಾರ. ನನ್ನ ಗೆದ್ದ ಪ್ರಬಂಧಕ್ಕಾಗಿ, ನಾನು ಏಳು ಡಾಲರುಗಳನ್ನು ಗಳಿಸಿದೆನು. ಈ ಏಳು ಡಾಲರುಗಳನ್ನು ಮತ್ತು ಇನ್ನು 13 ನ್ನು, ಒಟ್ಟಿಗೆ 20 ಡಾಲರುಗಳನ್ನು ನಾನು ಲೋಕವ್ಯಾಪಕ ಸಾರುವ ಕಾರ್ಯಕ್ಕಾಗಿ ಕಾಣಿಕೆಯಾಗಿ ಕೊಡುತ್ತೇನೆ. . . . ನಾನು ದೊಡ್ಡವಳಾದಾಗ, ಬೆತೆಲ್ ಸೇವೆಗಾಗಿ ವಾಲಂಟಿಯರಳಾಗಲು ಸಹ ನಿರೀಕ್ಷಿಸುತ್ತೇನೆ.”
[ಪುಟ 26 ರಲ್ಲಿರುವ ಚಿತ್ರ]
ಕೆಲವೊಮ್ಮೆ ಪೌಲನು ತನ್ನ ಜೀವನೋಪಾಯವನ್ನು, ಗುಡಾರ ಮಾಡುವ ಮೂಲಕ ಸಂಪಾದಿಸಿದನು