ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಮಾರ್ಚ್ 7-13
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 12–13
“ಅಹಂಕಾರದಿಂದ ಅವಮಾನ”
ಕಾವಲಿನಬುರುಜು00 8/1 ಪುಟ 13 ಪ್ಯಾರ 17
ದುರಭಿಮಾನದ ಪರಿಣಾಮ ಅವಮಾನವೇ!
ಮೇಲುನೋಟಕ್ಕೆ ಸೌಲನ ಕೃತ್ಯವು ನ್ಯಾಯಯುತವಾಗಿ ಕಂಡುಬರಬಹುದು. ಏಕೆಂದರೆ ದೇವಜನರಾಗಿದ್ದ ಇಸ್ರಾಯೇಲ್ಯರ ಮೇಲೆ ‘ಕೇಡು ಬಂದಿತ್ತು,’ ಅವರು “ಇಕ್ಕಟ್ಟಿನಲ್ಲಿದ್ದರು” ಮತ್ತು ತಮ್ಮ ಹತಾಶ ಸನ್ನಿವೇಶವನ್ನು ನೋಡಿ ಅವರು ಭಯದಿಂದ ನಡುಗುತ್ತಿದ್ದರು. (1 ಸಮುವೇಲ 13:6, 7) ಅಷ್ಟುಮಾತ್ರವಲ್ಲ, ಕೆಲವೊಮ್ಮೆ ಕೆಲವು ಸನ್ನಿವೇಶಗಳಲ್ಲಿ ಒಂದು ಕೆಲಸವನ್ನು ಮಾಡಲು ಮುನ್ನೆಜ್ಜೆಯಿಡುವುದು ನಿಜವಾಗಿಯೂ ತಪ್ಪಾಗಿರುವುದಿಲ್ಲ. ಆದರೂ, ಯೆಹೋವನು ನಮ್ಮ ಹೃದಯಗಳನ್ನು ಓದಬಲ್ಲನು ಮತ್ತು ನಮ್ಮ ಅಂತರಂಗದ ಉದ್ದೇಶಗಳನ್ನು ಗ್ರಹಿಸಬಲ್ಲನು ಎಂಬುದು ನಿಮಗೆ ನೆನಪಿರಲಿ. (1 ಸಮುವೇಲ 16:7) ಆದುದರಿಂದ, ಆತನು ಸೌಲನ ಮನಸ್ಸಿನಲ್ಲಿದ್ದ ಕೆಲವು ಭಾವನೆಗಳನ್ನು ನೇರವಾಗಿ ನೋಡಿದ್ದಿರಬಹುದು. ಆದರೆ ಈ ಬೈಬಲ್ ವೃತ್ತಾಂತದಲ್ಲಿ ಅವು ನೇರವಾಗಿ ತಿಳಿಸಲ್ಪಟ್ಟಿಲ್ಲ. ಉದಾಹರಣೆಗೆ, ಸೌಲನ ಅಸಹನೆಯು ಅಹಂಕಾರದಿಂದಲೇ ಉಂಟಾಗಿತ್ತು ಎಂಬುದನ್ನು ಯೆಹೋವನು ಗಮನಿಸಿದ್ದಿರಬಹುದು. ಏಕೆಂದರೆ, ಇಸ್ರಾಯೇಲ್ಯರ ಅರಸನಾಗಿರುವ ತಾನು, ವೃದ್ಧನೂ ಕಾಲಹರಣ ಮಾಡುವವನೂ ಆಗಿರುವಂತಹ ಒಬ್ಬ ವ್ಯಕ್ತಿಗೋಸ್ಕರ ಕಾಯಬೇಕಲ್ಲ ಎಂಬ ಅನಿಸಿಕೆಯೇ ಸೌಲನಿಗೆ ಕೋಪವನ್ನುಂಟುಮಾಡಿದ್ದಿರಬಹುದು! ಏನೇ ಇರಲಿ, ಸಮುವೇಲನು ತಡಮಾಡಿದ್ದರಿಂದ, ಆ ಕೆಲಸವನ್ನು ಪೂರೈಸುವ ಹಕ್ಕು ತನ್ನದೇ ಎಂಬ ಅನಿಸಿಕೆ ಸೌಲನಿಗಾಯಿತು. ಆದುದರಿಂದಲೇ ಅವನು ತನಗೆ ಕೊಡಲ್ಪಟ್ಟಿದ್ದ ಸುಸ್ಪಷ್ಟ ಸೂಚನೆಗಳನ್ನು ಧಿಕ್ಕರಿಸಿ, ಸಮುವೇಲನ ಕೆಲಸವನ್ನು ತಾನೇ ಮಾಡಿ ಮುಗಿಸಿದನು. ಇದರ ಫಲಿತಾಂಶವೇನು? ಸೌಲನು ಮುನ್ನೆಜ್ಜೆಯನ್ನು ತೆಗೆದುಕೊಂಡದ್ದಕ್ಕಾಗಿ ಸಮುವೇಲನು ಅವನನ್ನು ಹೊಗಳಲಿಲ್ಲ. ಅದಕ್ಕೆ ಬದಲಾಗಿ, ‘ನಿನ್ನ ಅರಸುತನವು ನಿಲ್ಲುವದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಹೋದಿ’ ಎಂದು ಹೇಳುತ್ತಾ ಸೌಲನನ್ನು ಖಂಡಿಸಿದನು. (1 ಸಮುವೇಲ 13:13, 14) ಹೀಗೆ, ಸೌಲನ ದುರಭಿಮಾನವು ಅವಮಾನಕ್ಕೆ ನಡಿಸಿತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಕಾವಲಿನಬುರುಜು07 7/1 ಪುಟ 20 ಪ್ಯಾರ 8
ನಿಮ್ಮ ವಿಧೇಯತೆ ಯೆಹೋವನಿಗೆ ಬಹುಮೂಲ್ಯ
ರಾಜ ಸೌಲನ ಕುರಿತಾದ ಬೈಬಲ್ ದಾಖಲೆಯು ವಿಧೇಯತೆಯು ಎಷ್ಟು ಮಹತ್ವದ್ದೆಂಬುದನ್ನು ಎತ್ತಿತೋರಿಸುತ್ತದೆ. ಸೌಲನು ಆರಂಭದಲ್ಲಿ ಒಬ್ಬ ವಿನಮ್ರ ರಾಜನಾಗಿದ್ದು, ‘ತನ್ನ ದೃಷ್ಟಿಯಲ್ಲೇ ಅಲ್ಪನಾಗಿದ್ದನು.’ ಆದರೆ ಕಾಲಾನಂತರ, ಅವನ ನಿರ್ಣಯಗಳನ್ನು ಅಹಂಕಾರ ಹಾಗೂ ತಪ್ಪಾದ ತರ್ಕವು ನಿಯಂತ್ರಿಸಲಾರಂಭಿಸಿತು. (1 ಸಮುವೇಲ 10:21, 22; 15:17) ಒಂದು ಸಂದರ್ಭದಲ್ಲಿ, ಸೌಲನು ಫಿಲಿಷ್ಟ್ಯರೊಂದಿಗೆ ಯುದ್ಧಮಾಡಲಿಕ್ಕಿತ್ತು. ಸಮುವೇಲನು, ತಾನು ಬಂದು ಯೆಹೋವನಿಗೆ ಯಜ್ಞಗಳನ್ನು ಅರ್ಪಿಸಿ ಹೆಚ್ಚಿನ ನಿರ್ದೇಶನವನ್ನು ಕೊಡುವವರೆಗೆ ಕಾಯಬೇಕೆಂದು ಅವನಿಗೆ ಹೇಳಿದ್ದನು. ಆದರೆ ಸಮುವೇಲನು ಹೇಳಿದ ಸಮಯಕ್ಕೆ ಸರಿಯಾಗಿ ತಲಪಲಿಲ್ಲ. ಆದುದರಿಂದ ಜನರು ಚದರಿಹೋಗಲಾರಂಭಿಸಿದರು. ಇದನ್ನು ನೋಡಿ ಸೌಲನು ತಾನಾಗಿಯೇ “ಸರ್ವಾಂಗಹೋಮವನ್ನು ಅರ್ಪಿಸಿದನು.” ಇದರಿಂದಾಗಿ ಯೆಹೋವನು ಸಿಟ್ಟುಗೊಂಡನು. ಕೊನೆಗೆ ಸಮುವೇಲನು ಬಂದು ತಲಪಿದಾಗ, ರಾಜನು ತನ್ನ ಅವಿಧೇಯತೆಗೆ ನೆವವನ್ನು ಕೊಡುತ್ತಾ, ಸಮುವೇಲನು ಬರಲು ತಡವಾದದ್ದರಿಂದ ಯೆಹೋವನಿಗೆ ಶಾಂತ್ಯರ್ಪಣೆ ಸಲ್ಲಿಸಲಿಕ್ಕಾಗಿ ತಾನು ಮುಂದೆ ಹೋಗಲೇಬೇಕಾಯಿತೆಂದು ಹೇಳಿದನು. ರಾಜ ಸೌಲನಿಗೆ, ಸಮುವೇಲನು ಬಂದು ಆ ಯಜ್ಞವನ್ನು ಅರ್ಪಿಸುವಂತೆ ಕಾಯಬೇಕೆಂದು ಕೊಡಲಾದ ನಿರ್ದೇಶನಕ್ಕೆ ವಿಧೇಯನಾಗುವುದಕ್ಕಿಂತಲೂ ಯಜ್ಞ ಅರ್ಪಿಸುವುದೇ ಹೆಚ್ಚು ಪ್ರಾಮುಖ್ಯವಾಗಿತ್ತು. ಆದರೆ ಸಮುವೇಲನು ಅವನಿಗಂದದ್ದು: “ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ.” ಅವನು ಯೆಹೋವನಿಗೆ ಅವಿಧೇಯನಾದ್ದರಿಂದ ತನ್ನ ರಾಜತ್ವವನ್ನು ಕಳೆದುಕೊಳ್ಳಬೇಕಾಯಿತು.—1 ಸಮುವೇಲ 10:8; 13: 5-13.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು11 7/15 ಪುಟ 14 ಪ್ಯಾರ 15
ಯೆಹೋವನ ಪ್ರೀತಿಪರ ಮಾರ್ಗದರ್ಶನವನ್ನು ಅನುಸರಿಸುತ್ತೀರೋ?
ಮಾನವ ಅರಸನು ಯೆಹೋವನಿಗಿಂತ ಹೆಚ್ಚು ನೈಜನೂ ಹೆಚ್ಚು ಭರವಸಾರ್ಹನೂ ಆಗಿರಸಾಧ್ಯ ಎಂದು ಆ ಜನರು ನೆನಸಿದ್ದರೋ? ಹಾಗಿದ್ದಲ್ಲಿ ಅವರು ಅವಾಸ್ತವಿಕತೆಗಳನ್ನು ಹಿಂಬಾಲಿಸುತ್ತಿದ್ದರು! ಅಲ್ಲದೆ, ಸೈತಾನನು ಹುಟ್ಟುಹಾಕಿರುವ ಇತರ ತಪ್ಪುಕಲ್ಪನೆಗಳನ್ನು ಹಿಂಬಾಲಿಸುವ ಅಪಾಯದಲ್ಲಿದ್ದರು. ಮಾನವ ಅರಸರು ಅವರನ್ನು ಸುಲಭವಾಗಿಯೇ ವಿಗ್ರಹಾರಾಧನೆಗೆ ನಡೆಸುವ ಸಾಧ್ಯತೆಯಿತ್ತು. ವಿಗ್ರಹಾರಾಧಕರು, ಎಲ್ಲವನ್ನು ಸೃಷ್ಟಿಸಿದ ಅದೃಶ್ಯ ದೇವರಾದ ಯೆಹೋವನಿಗಿಂತ ಪ್ರಾಕೃತಿಕ ವಸ್ತುಗಳು ಅಂದರೆ ಮರ, ಕಲ್ಲುಗಳಿಂದ ಮಾಡಲ್ಪಟ್ಟ ದೇವರುಗಳು ಹೆಚ್ಚು ನೈಜವೂ ಹೆಚ್ಚು ಭರವಸಾರ್ಹವೂ ಎಂದು ನಂಬುತ್ತಾರೆ. ಆದರೆ ಅಪೊಸ್ತಲ ಪೌಲನು ಹೇಳುವಂತೆ ವಿಗ್ರಹಗಳು “ಏನೂ ಅಲ್ಲ.” (1 ಕೊರಿಂ. 8:4) ಅವು ನೋಡಲಾರವು, ಕೇಳಿಸಿಕೊಳ್ಳಲಾರವು, ಮಾತಾಡಲಾರವು ಮತ್ತು ಯಾವುದೇ ಕ್ರಿಯೆಗೈಯಲಾರವು. ನೀವು ಅವುಗಳನ್ನು ನೋಡಶಕ್ತರಿರಬಹುದು, ಮುಟ್ಟಶಕ್ತರಿರಬಹುದು. ಹಾಗೆಂದಮಾತ್ರಕ್ಕೆ ನೀವು ಅವುಗಳನ್ನು ಆರಾಧಿಸುವಲ್ಲಿ ನೀವು ಅವಾಸ್ತವಿಕತೆಗಳನ್ನು ಹಿಂಬಾಲಿಸುತ್ತಿದ್ದೀರಿ ಮತ್ತು ಅವು ಕೇವಲ ವಿಪತ್ತಿಗೆ ನಡೆಸುವವು.—ಕೀರ್ತ. 115:4-8.
ಮಾರ್ಚ್ 14-20
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 14-15
“ಬಲಿಗಿಂತ ಯೆಹೋವನ ಮಾತು ಕೇಳೋದೆ ಮುಖ್ಯ”
ಕಾವಲಿನಬುರುಜು07 7/1 ಪುಟ 19 ಪ್ಯಾರ 4
ನಿಮ್ಮ ವಿಧೇಯತೆ ಯೆಹೋವನಿಗೆ ಬಹುಮೂಲ್ಯ
ಯೆಹೋವನು ಸೃಷ್ಟಿಕರ್ತನಾಗಿರುವುದರಿಂದ ನಮ್ಮ ಬಳಿ ಭೌತಿಕವಾಗಿ ಇರುವಂಥದ್ದೆಲ್ಲವೂ ಆತನದ್ದೇ. ಹೀಗಿರುವುದರಿಂದ, ನಾವು ಆತನಿಗೆ ಕೊಡಲಿಕ್ಕೇನಾದರೂ ಉಳಿದಿದೆಯೋ? ಹೌದು. ತುಂಬ ಅಮೂಲ್ಯವಾದದ್ದೇನನ್ನೋ ಆತನಿಗೆ ಕೊಡಬಲ್ಲೆವು. ಅದೇನು? ಈ ಮುಂದಿನ ಬುದ್ಧಿವಾದದಿಂದ ನಾವು ಇದಕ್ಕೆ ಉತ್ತರವನ್ನು ಪಡೆಯಬಲ್ಲೆವು: “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು.” (ಜ್ಞಾನೋಕ್ತಿ 27:11) ನಾವು ದೇವರಿಗೆ ನಮ್ಮ ವಿಧೇಯತೆಯನ್ನು ಕೊಡಬಲ್ಲೆವು. ನಮ್ಮ ಪರಿಸ್ಥಿತಿಗಳು ಹಾಗೂ ಹಿನ್ನೆಲೆಗಳು ಭಿನ್ನಭಿನ್ನವಾಗಿದ್ದರೂ ನಾವು ವಿಧೇಯರಾಗಿರಬಲ್ಲೆವು. ಇದನ್ನು ಮಾಡುವ ಮೂಲಕ, ಕಷ್ಟಗಳ ಸಮಯದಲ್ಲಿ ಮಾನವರು ದೇವರಿಗೆ ನಿಷ್ಠರಾಗಿ ಉಳಿಯುವುದಿಲ್ಲವೆಂದು ಪಿಶಾಚನಾದ ಸೈತಾನನು ಹೇಳಿದ ದುಷ್ಟ ಮಾತಿಗೆ ನಮ್ಮಲ್ಲಿ ಪ್ರತಿಯೊಬ್ಬರೂ ಉತ್ತರಕೊಡಬಹುದು. ಇದು ನಮಗೆಂಥ ಸುಯೋಗ!
it-2-E ಪುಟ 521 ಪ್ಯಾರ 2
ವಿಧೇಯತೆ
ನಾವು ದೇವರ ಮಾತು ಕೇಳದಿದ್ದರೂ ಪರವಾಗಿಲ್ಲ, ಒಳ್ಳೇ ವಿಷಯಗಳನ್ನು ಮಾಡಿದ್ರೆ ಸಾಕು ಅಂತ ನೆನಸುವುದು ದೊಡ್ಡ ತಪ್ಪಾಗಿದೆ. ಇಂಥ ವ್ಯಕ್ತಿಯನ್ನು ಯೆಹೋವ ದೇವರು ಯಾವತ್ತೂ ಇಷ್ಟಪಡಲ್ಲ. ಸಮುವೇಲ, ರಾಜ ಸೌಲನಿಗೆ ಹೇಳಿದ್ದು: “ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.” (1ಸಮು 15:22) ನಾವು ವಿಧೇಯತೆ ತೋರಿಸದಿದ್ದರೆ ಯೆಹೋವನ ಮೇಲೆ ಮತ್ತು ಆತನ ಮಾತಿನ ಮೇಲೆ ನಂಬಿಕೆ ಇಲ್ಲ ಅಂತ ತೋರಿಸ್ತೀವಿ. ಹಾಗಾಗಿ ದೇವರ ಮಾತು ಕೇಳದ ವ್ಯಕ್ತಿಯನ್ನು, ಮೂರ್ತಿಪೂಜೆ ಅಥವಾ ಮಂತ್ರತಂತ್ರ ಮಾಡುವವರಿಗೆ ಹೋಲಿಸಲಾಗಿದೆ. (1ಸಮು 15:23; ರೋಮ 6:16) ವಿಧೇಯತೆ ತೋರಿಸೋಕಾಗಿ ಏನಾದರೂ ಮಾಡಬೇಕಲ್ಲಾ ಅಂತ ನೆನಸಿ ಅದನ್ನು ಮಾಡೋದರಿಂದ ಯಾವ ಪ್ರಯೋಜನನೂ ಇಲ್ಲ. ದೇವರು ಹೇಳಿದ ಹಾಗೇ ನಾವು ಮಾಡದಿದ್ದರೆ, ನಿರ್ದೇಶನಗಳನ್ನು ಕೊಡೋ ಯೆಹೋವನ ಮೇಲೆ ನಂಬಿಕೆ ಮತ್ತು ಗೌರವ ಇಲ್ಲ ಅಂತ ತೋರಿಸ್ತೀವಿ. (ಮತ್ತಾ 21:28-32)
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 493
ಕನಿಕರ
ದೇವರು ಕನಿಕರ ತೋರಿಸೋಕೆ ಇಷ್ಟಪಡದ ಜನರಿಗೆ ನಾವು ಕನಿಕರ ತೋರಿಸುವುದು ದೊಡ್ಡ ತಪ್ಪಾಗಿದೆ. ರಾಜ ಸೌಲನ ಉದಾಹರಣೆಯಿಂದ ನಾವು ಪಾಠ ಕಲಿಯಬಹುದು. ಅಮಾಲೇಕ್ಯರಿಗೆ ಕರುಣೆ ತೋರಿಸಬಾರದು ಅಂತ ಸೌಲನಿಗೆ ದೇವರು ನಿರ್ದೇಶನ ಕೊಟ್ಟಿದ್ದರು. ಯಾಕಂದ್ರೆ ಈಜಿಪ್ಟಿಂದ ಬರುತ್ತಿದ್ದಾಗ ಯಾವ್ದೇ ಕಾರಣಗಳಿಲ್ಲದೆ ಅವರು ಇಸ್ರಾಯೇಲ್ಯರನ್ನು ಆಕ್ರಮಿಸಿದರು. ಹಾಗಾಗಿ ಅವರನ್ನು ನಾಶಮಾಡ್ತೀನಿ ಅಂತ ದೇವರು ಹೇಳಿದ್ರು. ಈಗ ತಾನು ಹೇಳಿದ ಹಾಗೆ ಮಾಡುವ ಸಮಯ ಬಂದಿತ್ತು. ಆದ್ರೆ ಸೌಲ, ದೇವರ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸೋ ಬದಲು ಜನರ ಮಾತಿಗೆ ಬೆಲೆಕೊಟ್ಟ. ಅದಕ್ಕೇ ಯೆಹೋವನು ಅವನನ್ನು ರಾಜನ ಸ್ಥಾನದಿಂದ ತಳ್ಳಿಹಾಕಿದ. (1ಸಮು 15:2-24) ಹಾಗಾಗಿ ಸೌಲನಂತೆ ಆಗೋಕೆ ಬಯಸದಿರುವವರು ಅಥವಾ ದೇವರ ಇಷ್ಟ ಮಾಡೋಕೆ ಬಯಸುವವರು ಎರಡು ವಿಷಯಗಳನ್ನು ಮಾಡಬೇಕು. ಒಂದು, ಯೆಹೋವ ಹೇಳೋ ತರನೇ ಮಾಡೋದು ಸರಿಯಾದ ವಿಧ ಅಂತ ನಂಬಬೇಕು ಮತ್ತು ಒಪ್ಪಿಕೊಳ್ಳಬೇಕು. ಎರಡು, ಎಲ್ಲ ವಿಷಯಗಳಿಗಿಂತ ಮುಖ್ಯವಾಗಿ ಯೆಹೋವ ದೇವರಿಗೆ ನಿಷ್ಠೆ ತೋರಿಸಬೇಕು.
ಮಾರ್ಚ್ 21-27
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 16- 17
“ಯುದ್ಧ ಯೆಹೋವನದ್ದಾಗಿದೆ”
ಕಾವಲಿನಬುರುಜು16.4 ಪುಟ 11 ಪ್ಯಾರ 2-3
“ಯುದ್ಧಫಲವು ಯೆಹೋವನ ಕೈಯಲ್ಲಿದೆ”
ಸಿಂಹ ಮತ್ತು ಕರಡಿಗೆ ಏನಾಯಿತೆಂಬುದನ್ನು ಹೇಳುವ ಮೂಲಕ ದಾವೀದ ಸೌಲನಿಗೆ ಧೈರ್ಯ ತುಂಬಿದನು. ಇಲ್ಲಿ ದಾವೀದನು ಜಂಬ ಕೊಚ್ಚಿಕೊಳ್ಳುತ್ತಿದ್ದನಾ? ಇಲ್ಲ. ಆ ಕ್ರೂರ ಪ್ರಾಣಿಗಳನ್ನು ಹೇಗೆ ಸೋಲಿಸಿದನೆಂದು ದಾವೀದನಿಗೆ ತಿಳಿದಿತ್ತು. ಅವನು ಹೇಳಿದ್ದು: ‘ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಂದ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಯಿಂದಲೂ ತಪ್ಪಿಸುವನು.’ ಇದನ್ನು ಕೇಳಿದ ಸೌಲನು ದಾವೀದನಿಗೆ, “ಹೋಗು, ಯೆಹೋವನು ನಿನ್ನ ಸಂಗಡ ಇರಲಿ” ಎಂದು ಹೇಳಿದನು.—1 ಸಮುವೇಲ 17:37.
ದಾವೀದನಿಗಿದ್ದಂಥ ನಂಬಿಕೆ ನಿಮಗೂ ಇರಬೇಕು ಅಂತ ಇಷ್ಟ ಇದೆಯಾ? ದಾವೀದನಿಗೆ ದೇವರ ಮೇಲೆ ಇದ್ದದ್ದು ಕುರುಡು ನಂಬಿಕೆ ಅಲ್ಲ, ನಿಜವಾದ ನಂಬಿಕೆ. ಅದಕ್ಕೆ ಕಾರಣ ಜ್ಞಾನ ಮತ್ತು ಅನುಭವ. ಯೆಹೋವನು ಪ್ರೀತಿಯ ಸಂರಕ್ಷಕ ಮತ್ತು ಮಾತು ತಪ್ಪದವನು ಎಂದು ದಾವೀದನು ಅನುಭವದಿಂದ ತಿಳಿದಿದ್ದನು. ದಾವೀದನಿಗೆ ಇದ್ದಂಥ ನಂಬಿಕೆಯನ್ನು ನಾವು ಬೆಳೆಸಿಕೊಳ್ಳಬೇಕಾದರೆ ಬೈಬಲಿನಿಂದ ಯೆಹೋವ ದೇವರ ಬಗ್ಗೆ ನಾವು ಕಲಿಯುತ್ತಿರಬೇಕು. ಕಲಿತಂತೆ ನಾವು ನಡೆದುಕೊಳ್ಳುವಾಗ ದಾವೀದನಂತೆ ಒಳ್ಳೇ ಅನುಭವಗಳನ್ನು ಪಡೆಯುತ್ತೇವೆ ಮತ್ತು ಅವು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತವೆ.—ಇಬ್ರಿಯ 11:1.
“ಯುದ್ಧಫಲವು ಯೆಹೋವನ ಕೈಯಲ್ಲಿದೆ”
ಆಗ ದಾವೀದನು ಹೇಳಿದ ನಂಬಿಕೆಯ ಮಾತುಗಳು ಇಂದಿಗೂ ಪ್ರಸಿದ್ಧವಾಗಿವೆ. ಯುವ ದಾವೀದನು ಗೊಲ್ಯಾತನ ಮುಂದೆ ಜೋರಾಗಿ ಹೇಳಿದಂಥ ಆ ಮಾತುಗಳನ್ನು ಸ್ವಲ್ಪ ಊಹಿಸಿಕೊಳ್ಳಿ: “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ.” ಮಾನವರು ಮತ್ತು ಅವರ ಆಯುಧಗಳು ದೇವರ ಮುಂದೆ ಏನೂ ಅಲ್ಲ ಎಂದು ದಾವೀದನಿಗೆ ತಿಳಿದಿತ್ತು. ಗೊಲ್ಯಾತ ಯೆಹೋವ ದೇವರಿಗೆ ಅಗೌರವ ತೋರಿಸಿರುವುದರಿಂದ ಅದಕ್ಕೆ ತಕ್ಕ ಉತ್ತರವನ್ನು ಯೆಹೋವನೇ ನೀಡುವನೆಂದು ದಾವೀದನು ನಂಬಿದ್ದನು. ಅದಕ್ಕಾಗಿಯೇ “ಯುದ್ಧಫಲವು ಯೆಹೋವನ ಕೈಯಲ್ಲಿದೆ” ಎಂದವನು ಹೇಳಿದನು.—1 ಸಮುವೇಲ 17:45-47.
ಗೊಲ್ಯಾತನು ತುಂಬಾ ಬಲಾಢ್ಯ ಮತ್ತು ದೈತ್ಯ ಪುರುಷ ಅಂತ ದಾವೀದನಿಗೆ ಚೆನ್ನಾಗಿ ಗೊತ್ತಿತ್ತು. ಇದನ್ನು ನೋಡಿ ಭಯಪಡಲಿಲ್ಲ. ಸೌಲ ಮತ್ತವನ ಸೈನ್ಯದವರು ಮಾಡಿದ ತಪ್ಪನ್ನು ದಾವೀದ ಮಾಡಲಿಲ್ಲ. ತನ್ನನ್ನು ಗೊಲ್ಯಾತನೊಂದಿಗೆ ಹೋಲಿಸಿಕೊಳ್ಳಲಿಲ್ಲ. ಬದಲಿಗೆ ಗೊಲ್ಯಾತನನ್ನು ಯೆಹೋವ ದೇವರೊಂದಿಗೆ ಹೋಲಿಸಿದ. ಒಂಭತ್ತುವರೆ ಅಡಿ (2.9 ಮೀಟರ್) ಎತ್ತರ ಇದ್ದ ಗೊಲ್ಯಾತನು ಬೇರೆಯವರಿಗೆ ಹೋಲಿಸಿದರೆ ತುಂಬಾ ದೈತ್ಯನಾಗಿ ಕಾಣಬಹುದು, ಆದರೆ ವಿಶ್ವದ ಮಹೋನ್ನತ ದೇವರಿಗೆ ಹೋಲಿಸಿದರೆ ಅವನು ಲೆಕ್ಕಕ್ಕೇ ಇರಲಿಲ್ಲ.
ಕಾವಲಿನಬುರುಜು16.4 ಪುಟ 12 ಪ್ಯಾರ 4
“ಯುದ್ಧಫಲವು ಯೆಹೋವನ ಕೈಯಲ್ಲಿದೆ”
ಇಂದು ದೇವರ ಸೇವಕರು ಯುದ್ಧ ಮಾಡುವುದಿಲ್ಲ ನಿಜ. ಅದೆಲ್ಲಾ ಹಿಂದಿನ ಕಾಲಕ್ಕೇ ಮುಗಿದು ಹೋಯಿತು. (ಮತ್ತಾಯ 26:52) ಆದರೂ ದಾವೀದನ ನಂಬಿಕೆಯನ್ನು ನಾವು ಅನುಕರಿಸಬಹುದು. ದಾವೀದನಂತೆ ನಮಗೆ ಯೆಹೋವ ದೇವರು ನೈಜನಾಗಿರಬೇಕು. ನಮ್ಮ ಆರಾಧನೆಗೆ ಆತನೊಬ್ಬನೇ ಅರ್ಹನಾಗಿದ್ದಾನೆ. ಕೆಲವೊಮ್ಮೆ ನಮಗೆ ಬರುವ ಸಮಸ್ಯೆಗಳು ಬೆಟ್ಟದಂತಿವೆ ಅಂತ ಅನಿಸಬಹುದು, ಆದ್ರೆ ಅವು ಯೆಹೋವನಿಗೆ ಸಮಸ್ಯೆಗಳೇ ಅಲ್ಲ. ಯೆಹೋವನನ್ನು ದೇವರೆಂದು ಸ್ವೀಕರಿಸಿ ದಾವೀದನಂತೆ ಆತನಲ್ಲಿ ನಂಬಿಕೆ ಇಟ್ಟರೆ ಯಾವುದೇ ಸವಾಲುಗಳು, ಸಮಸ್ಯೆಗಳು ಬಂದರೂ ಜಯಿಸುತ್ತೇವೆ. ಕಾರಣ, ಯೆಹೋವನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ!
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 871-872
ಸೌಲ
ಯೆಹೋವನ ಪವಿತ್ರ ಶಕ್ತಿ ಸೌಲನನ್ನು ಬಿಟ್ಟುಹೋದಾಗ ಅವನಲ್ಲಿದ್ದ ಕೆಟ್ಟ ಮನಸ್ಥಿತಿ ಹೊರಗೆ ಬಂತು. ಇದ್ರಿಂದ ಅವನ ಮನಶ್ಶಾಂತಿ ಹಾಳಾಯಿತು ಮತ್ತು ಅವನು ತಪ್ಪಾಗಿ ಯೋಚಿಸಿ ತನಗನಿಸಿದಂತೆ ನಿರ್ಧಾರಗಳನ್ನು ಮಾಡಿದ. ಅವನು ಯೆಹೋವನ ಮಾತು ಕೇಳದೇ ಇದ್ದಿದ್ದರಿಂದ ತನ್ನ ಮನಸ್ಸಲ್ಲಿ ಬರೀ ತಪ್ಪಾದ ಯೋಚನೆಗಳೇ ಇದೆ ಅಂತ ತೋರಿಸಿದ. ಅವನಲ್ಲಿದ್ದ ಇಂಥ ಯೋಚನೆಗಳನ್ನು ಸರಿಪಡಿಸೋಕೆ ಈಗ ಯೆಹೋವನ ಪವಿತ್ರ ಶಕ್ತಿ ಅವನಿಗೆ ಸಹಾಯ ಮಾಡಲಿಲ್ಲ. ಯಾಕಂದ್ರೆ, “ಸೌಲನ ಕೆಟ್ಟ ಮನಸ್ಥಿತಿ ಅವನನ್ನ ಭಯಪಡಿಸೋ ತರ ಯೆಹೋವ ಅನುಮತಿಸಿದನು.”—1 ಸಮು16:14,15.
ಮಾರ್ಚ್ 28–ಏಪ್ರಿಲ್ 3
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 18–19
“ಯಶಸ್ವಿ ಗಳಿಸಿದಾಗ ದೀನರಾಗಿರಿ”
ಕಾವಲಿನಬುರುಜು04 4/1 ಪುಟ 15 ಪ್ಯಾರ 4
ಜೀವನದ ಬದಲಾಗುತ್ತಿರುವ ಸನ್ನಿವೇಶಗಳನ್ನು ನಿಭಾಯಿಸುವಾಗ ದೇವರಾತ್ಮದ ಮೇಲೆ ಆತುಕೊಳ್ಳಿರಿ
ಈ ಕುರುಬ ಹುಡುಗನು ಬೇಗನೇ ತನ್ನ ದೇಶದಲ್ಲಿ ಪ್ರಸಿದ್ಧನಾಗಲಿದ್ದನು. ರಾಜನ ಸೇವೆಮಾಡುತ್ತಾ ಸಂಗೀತ ನುಡಿಸುವಂತೆ ಅವನನ್ನು ಕರೆಯಲಾಯಿತು. ಅನುಭವಸ್ಥ ಇಸ್ರಾಯೇಲ್ ಯೋಧರೂ ಯಾರಿಗೆ ಎದುರಾಗಿ ಬರಲು ಭಯಪಟ್ಟರೊ ಆ ದೈತ್ಯ ಯುದ್ಧವೀರ ಗೊಲ್ಯಾತನನ್ನೇ ದಾವೀದನು ಸಂಹರಿಸಿದನು. ದಾವೀದನು ಸೇನಾಪತಿಯಾಗಿ ಮಾಡಲ್ಪಟ್ಟಾಗ, ಅವನು ಫಿಲಿಷ್ಟಿಯರ ಮೇಲೆ ಯುದ್ಧಹೂಡಿ ಜಯಶಾಲಿಯಾದನು. ಜನರು ಅವನನ್ನು ತುಂಬ ಇಷ್ಟಪಟ್ಟರು. ಅವರು ಅವನನ್ನು ಹೊಗಳುತ್ತ ಗೀತೆಗಳನ್ನು ರಚಿಸಿದರು. ಇದಕ್ಕೆ ಮುಂಚಿತವಾಗಿ, ಸೌಲ ರಾಜನ ಸಲಹೆಗಾರನೊಬ್ಬನು ಯುವ ದಾವೀದನು ಕಿನ್ನರಿಯನ್ನು “ಚೆನ್ನಾಗಿ ಬಾರಿಸಬಲ್ಲವನು” ಎಂದು ಮಾತ್ರವಲ್ಲ, “ಪರಾಕ್ರಮಶಾಲಿಯೂ ರಣಶೂರನೂ ವಾಕ್ಚತುರನೂ ಸುಂದರನೂ” ಎಂದೂ ವರ್ಣಿಸಿದ್ದನು.—1 ಸಮುವೇಲ 16:18; 17:23, 24, 45-51; 18:5-7.
ಕಾವಲಿನಬುರುಜು18.01 ಪುಟ 28 ಪ್ಯಾರ 6-7
ಜನರ ಮಧ್ಯೆ ಇರುವ ವ್ಯತ್ಯಾಸವನ್ನು ನೋಡಿ
ಕೆಲವರು ತಮಗೆ ಸೌಂದರ್ಯ, ಪ್ರಖ್ಯಾತಿ, ಸಂಗೀತ ಕಲೆ, ಕಟ್ಟುಮಸ್ತಿನ ದೇಹ ಅಥವಾ ಒಳ್ಳೇ ಸ್ಥಾನಮಾನ ಇರುವುದರಿಂದ ಅಹಂಕಾರಿಗಳು ಆಗಿಬಿಡುತ್ತಾರೆ. ದಾವೀದನಿಗೆ ಇದೆಲ್ಲ ಇತ್ತಾದರೂ ಜೀವಮಾನವಿಡೀ ದೀನನಾಗಿದ್ದನು. ಉದಾಹರಣೆಗೆ, ಗೊಲ್ಯಾತನನ್ನು ಕೊಂದ ಮೇಲೆ ಅವನಿಗೆ ರಾಜ ಸೌಲನು ತನ್ನ ಮಗಳನ್ನು ಮದುವೆ ಮಾಡಿಕೊಡುತ್ತೇನೆಂದು ಹೇಳಿದನು. ಅದಕ್ಕೆ ದಾವೀದನು “ಅರಸನ ಅಳಿಯನಾಗುವದಕ್ಕೆ ನಾನೆಷ್ಟರವನು? ಇಸ್ರಾಯೇಲ್ಯರಲ್ಲಿ ನನ್ನ ಕುಲವೂ ಕುಟುಂಬವೂ ಎಷ್ಟರವು” ಎಂದನು. (1 ಸಮು. 18:18) ದೀನತೆ ತೋರಿಸಲು ಅವನಿಗೆ ಯಾವುದು ಸಹಾಯ ಮಾಡಿತು? ಯೆಹೋವನು ದೀನನಾಗಿದ್ದು ತನಗೆ ಗಮನ ಕೊಟ್ಟದ್ದರಿಂದಲೇ ತನ್ನಲ್ಲಿ ಒಳ್ಳೇ ಗುಣಗಳು, ಸಾಮರ್ಥ್ಯಗಳು ಬಂದವು ಮತ್ತು ದೊಡ್ಡ ಸುಯೋಗಗಳು ಸಿಕ್ಕಿದವು ಎಂದು ದಾವೀದನಿಗೆ ಅನಿಸಿತು. (ಕೀರ್ತ. 113:5-8) ತನ್ನಲ್ಲಿರುವ ಪ್ರತಿಯೊಂದನ್ನೂ ಯೆಹೋವನೇ ಕೊಟ್ಟಿರುವುದು ಎಂದು ಅವನು ಅರ್ಥಮಾಡಿಕೊಂಡನು.—1 ಕೊರಿಂಥ 4:7 ನ್ನು ಹೋಲಿಸಿ.
7 ಇಂದು ಯೆಹೋವನ ಜನರು ದಾವೀದನಂತೆ ದೀನರಾಗಿರಲು ಶ್ರಮಿಸುತ್ತಾರೆ. ಸರ್ವೋನ್ನತನಾದ ಯೆಹೋವನೇ “ದೀನತೆ” ತೋರಿಸುತ್ತಾನೆ ಎನ್ನುವ ವಿಷಯ ನಮ್ಮ ಮನಸ್ಪರ್ಶಿಸುತ್ತದೆ. (ಕೀರ್ತ. 18:35, ನೂತನ ಲೋಕ ಭಾಷಾಂತರ) ಆದ್ದರಿಂದ “ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ” ಎಂಬ ಬುದ್ಧಿವಾದವನ್ನು ಪಾಲಿಸಲು ಬಯಸುತ್ತೇವೆ. (ಕೊಲೊ. 3:12) ಪ್ರೀತಿ “ಜಂಬಕೊಚ್ಚಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ” ಎಂದೂ ನಮಗೆ ಗೊತ್ತು. (1 ಕೊರಿಂ. 13:4) ನಾವು ದೀನರಾಗಿರುವುದನ್ನು ಜನರು ನೋಡುವಾಗ ಯೆಹೋವನ ಬಗ್ಗೆ ತಿಳಿದುಕೊಳ್ಳಲು ಮನಸ್ಸುಮಾಡುತ್ತಾರೆ. ಸತ್ಯದಲ್ಲಿಲ್ಲದ ಗಂಡನೊಬ್ಬ ಪತ್ನಿಯ ಒಳ್ಳೇ ನಡತೆ ನೋಡಿ ಯೆಹೋವನ ಕಡೆ ಆಕರ್ಷಿತನಾಗುವಂತೆಯೇ ಜನರು ನಮ್ಮ ದೀನತೆ ನೋಡಿ ದೇವರ ಕಡೆಗೆ ಆಕರ್ಷಿತರಾಗಬಹುದು.—1 ಪೇತ್ರ 3:1, 2.
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 695-696
ಪ್ರವಾದಿ
ಪ್ರವಾದಿಗಳ ‘ಮೇಲೆ ಪವಿತ್ರ ಶಕ್ತಿ ಬಂದಾಗ’ ಅವರು ಪ್ರವಾದಿಗಳ ತರ ಮಾತಾಡ್ತಾರೆ. (ಯೆಹೆ 11:4, 5; ಮೀಕ 3:8) ಈ ಪವಿತ್ರ ಶಕ್ತಿ ಮಾತಾಡೋಕೆ ಅಷ್ಟೇ ಅಲ್ಲ ಕೆಲವೊಂದು ವಿಷಯಗಳನ್ನು ಅಸಾಮಾನ್ಯವಾಗಿ ಅಥವಾ ವಿಶೇಷವಾಗಿ ಮಾಡುವಂತೆ ಪ್ರೇರೇಪಿಸುತ್ತೆ. ಹಾಗಾಗಿ ಕೆಲವರ ಬಗ್ಗೆ ಬೈಬಲಲ್ಲಿ ಹೀಗೆ ಹೇಳುತ್ತೆ: “ಅವರು ಸಹ ಪ್ರವಾದಿಗಳ ತರ ನಡ್ಕೊಳ್ಳೋಕೆ ಶುರು ಮಾಡಿದ್ರು” (1ಸಮು 10:6-11; 19:20-24; ಯೆರೆ 29:24-32; ಈ ವಚನಗಳನ್ನು ಹೋಲಿಸಿ: ಅಕಾ 2:4, 12-17; 6:15; 7:55) ಸೌಲ ‘ಪ್ರವಾದಿ ತರ ನಡ್ಕೊಂಡಾಗ’ ತನ್ನ ಬಟ್ಟೆಯನ್ನು ಬಿಚ್ಚಿ “ಇಡೀ ಹಗಲು, ರಾತ್ರಿ ಬೆತ್ತಲೆಯಾಗಿ ಬಿದ್ಕೊಂಡಿದ್ದ.” (1ಸಮು 19:18–20:1) ಹಾಗಂತ, ಪ್ರವಾದಿಗಳು ಯಾವಾಗಲೂ ಈ ತರ ಮಾಡ್ತಾರೆ ಅಂತಲ್ಲ. ಅದಕ್ಕೆ ಬದಲು, ಪ್ರವಾದಿಗಳ ಬಗ್ಗೆ ಹೇಳುವಾಗ ಅವರು ಬಟ್ಟೆ ಹಾಕಿಕೊಂಡಿದ್ದರ ಬಗ್ಗೆ ಬೈಬಲ್ ತಿಳಿಸುತ್ತೆ. ಹಾಗಾದ್ರೆ ಸೌಲ ಬೆತ್ತಲೆಯಾಗಿದ್ದಕ್ಕೆ ಕಾರಣ ಏನು? ಅದರ ಬಗ್ಗೆ ಬೈಬಲ್ ಏನೂ ಹೇಳಲ್ಲ. ಆದ್ರೆ ಅವನು ಹಾಗೆ ಮಾಡಿದ್ದಕ್ಕೆ ಕೆಲವು ಕಾರಣಗಳಿರಬಹುದು. ಒಂದು, ರಾಜವಸ್ತ್ರಗಳಿಲ್ಲದೆ ಅವನೊಬ್ಬ ವಿಶೇಷ ವ್ಯಕ್ತಿಯಲ್ಲ ಬದಲಿಗೆ ಸಾಮಾನ್ಯ ಮನುಷ್ಯ ಅಂತ ತಿಳಿಸೋಕೆ ಆಗಿರಬಹುದು. ಎರಡು, ಯೆಹೋವ ದೇವರ ಅಧಿಕಾರ ಮತ್ತು ಶಕ್ತಿಯ ಮುಂದೆ ಅವನು ಏನೂ ಅಲ್ಲ ಅಂತ ಅದು ತೋರಿಸಿಕೊಡ್ತು.ಅಷ್ಟೇ ಅಲ್ಲ, ಯೆಹೋವ ತನಗನಿಸಿದ ಹಾಗೆ ಅವನನ್ನು ಹೇಗೆ ಬೇಕಾದ್ರೂ ಉಪಯೋಗಿಸಬಹುದು ಅಂತ ತೋರಿಸ್ತು.
ಏಪ್ರಿಲ್ 4-10
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 20–22
“ಒಳ್ಳೇ ಸ್ನೇಹಿತರಾಗೋದು ಹೇಗೆ?”
ಕಾವಲಿನಬುರುಜು19.11 ಪುಟ 7 ಪ್ಯಾರ 18
ಅಂತ್ಯ ಬರುವುದಕ್ಕೂ ಮುಂಚೆ ಆಪ್ತ ಸ್ನೇಹ ಬೆಳೆಸಿಕೊಳ್ಳಿ
ಇಂದು ಸಹ ನಮ್ಮ ಸಹೋದರ ಸಹೋದರಿಯರು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ, ಅನೇಕರು ನೈಸರ್ಗಿಕ ವಿಪತ್ತುಗಳಿಂದ ಮತ್ತು ಮನುಷ್ಯರಿಂದಾಗಿರುವ ಹಾನಿಗಳಿಂದ ಬಳಲಿ ಬೆಂಡಾಗಿದ್ದಾರೆ. ಆ ರೀತಿ ಸಂಭವಿಸಿದಾಗ ನಮ್ಮಲ್ಲಿ ಕೆಲವರು ಅಂಥ ಸಹೋದರ-ಸಹೋದರಿಯರನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದಾರೆ. ಇನ್ನು ಕೆಲವರು ಹಣ ಸಹಾಯ ಮಾಡಿದ್ದಾರೆ. ನಮ್ಮಿಂದ ಇಂಥ ಸಹಾಯ ಮಾಡಲಿಕ್ಕಾಗದಿದ್ದರೂ ನಾವೆಲ್ಲರೂ ಆ ನಮ್ಮ ಸಹೋದರ ಸಹೋದರಿಯರಿಗೋಸ್ಕರ ಯೆಹೋವನಲ್ಲಿ ಪ್ರಾರ್ಥಿಸಬಹುದು. ನಮ್ಮ ಒಬ್ಬ ಸಹೋದರ ಅಥವಾ ಸಹೋದರಿ ಬೇಜಾರಲ್ಲಿದ್ದಾರೆ ಎಂದು ಗೊತ್ತಾದಾಗ ನಾವೇನು ಮಾಡಬೇಕು ಅಥವಾ ಹೇಳಬೇಕು ಎಂದು ಗೊತ್ತಾಗದೇ ಇರಬಹುದು. ಆದರೆ ನಾವೆಲ್ಲರೂ ಸಹಾಯ ಮಾಡಕ್ಕಾಗುತ್ತೆ. ಉದಾಹರಣೆಗೆ, ನಾವು ಅವರ ಜೊತೆ ಸಮಯ ಕಳೆಯಬಹುದು. ಅವರು ಮಾತಾಡುವಾಗ ದಯೆಯಿಂದ ಕೇಳಿಸಿಕೊಳ್ಳಬಹುದು. ನಮಗೆ ತುಂಬ ಇಷ್ಟವಾದ ಸಾಂತ್ವನ ನೀಡುವಂಥ ವಚನಗಳನ್ನು ಅವರಿಗೆ ತೋರಿಸಬಹುದು. (ಯೆಶಾ. 50:4) ನಿಮ್ಮ ಸ್ನೇಹಿತರಿಗೆ ಸಹಾಯ ಬೇಕಿದ್ದಾಗ ನೀವು ಅವರ ಜೊತೆ ಇರುವುದೇ ತುಂಬ ಮುಖ್ಯ.—ಜ್ಞಾನೋಕ್ತಿ 17:17 ಓದಿ.
ಕಾವಲಿನಬುರುಜು08 2/15 ಪುಟ 8 ಪ್ಯಾರ 7
ಯೆಹೋವನ ಮಾರ್ಗಗಳಲ್ಲಿ ನಡೆಯಿರಿ
ನಾವು ಭರವಸಾರ್ಹ ಸ್ನೇಹಿತರಾಗಿರುವಂತೆ ದೇವರು ಅಪೇಕ್ಷಿಸುತ್ತಾನೆ. (ಜ್ಞಾನೋ. 17:17) ರಾಜ ಸೌಲನ ಮಗನಾದ ಯೋನಾತಾನನು ದಾವೀದನ ಸ್ನೇಹಿತನಾದನು. ದಾವೀದನು ಗೊಲ್ಯಾತನನ್ನು ಕೊಂದಿದ್ದಾನೆಂದು ಯೋನಾತಾನನಿಗೆ ತಿಳಿದುಬಂದಾಗ, ಅವನ “ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು [ದಾವೀದನನ್ನು] ತನ್ನ ಪ್ರಾಣದಂತೆಯೇ ಪ್ರೀತಿಸ ತೊಡಗಿದನು.” (1 ಸಮು. 18:1, 3) ಸೌಲನು ದಾವೀದನನ್ನು ಕೊಲ್ಲಲು ಹೊರಟಾಗ, ಯೋನಾತಾನನು ಅವನನ್ನು ಎಚ್ಚರಿಸಿದನು ಸಹ. ದಾವೀದನು ಓಡಿಹೋದ ಬಳಿಕ, ಯೋನಾತಾನನು ಅವನನ್ನು ಸಂಧಿಸಿ, ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡನು. ದಾವೀದನ ಕುರಿತಾಗಿ ಒಮ್ಮೆ ಯೋನಾತಾನನು ಸೌಲನೊಂದಿಗೆ ಮಾತಾಡಿದಾಗ ತನ್ನ ಜೀವವನ್ನೇ ಕಳೆದುಕೊಳ್ಳುವುದರಲ್ಲಿದ್ದನು. ಆದರೂ ಆ ಇಬ್ಬರು ಮಿತ್ರರು ಪುನಃ ಭೇಟಿಯಾಗಿ ತಮ್ಮ ಸ್ನೇಹದ ಬಂಧವನ್ನು ಬಲಪಡಿಸಿದರು. (1 ಸಮು. 20:24-41) ಅವರು ಕೊನೆ ಬಾರಿ ಭೇಟಿಯಾದಾಗ, ಯೋನಾತಾನನು ದಾವೀದನನ್ನು ‘ದೇವರಲ್ಲಿ ಬಲಪಡಿಸಿದನು.’—1 ಸಮು. 23:16-18.
ಕಾವಲಿನಬುರುಜು09 10/15 ಪುಟ 19 ಪ್ಯಾರ 11
ಪ್ರೀತಿರಹಿತ ಜಗತ್ತಿನಲ್ಲಿ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು
ನಿಷ್ಠರಾಗಿರಿ. ಸೊಲೊಮೋನನು ಬರೆದದ್ದು: “ಒಬ್ಬ ನಿಜ ಒಡನಾಡಿಯು ಯಾವಾಗಲೂ ಪ್ರೀತಿಸುತ್ತಾನೆ, ಮತ್ತು ಸಂಕಟದ ಸಮಯದಲ್ಲಿ ಸಹಾಯ ಮಾಡಲಿಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ.” (ಜ್ಞಾನೋ. 17:17, NW) ಆ ಮಾತುಗಳನ್ನು ಬರೆಯುವಾಗ ಸೊಲೊಮೋನನಿಗೆ, ಯೋನಾತಾನನೊಂದಿಗೆ ತನ್ನ ತಂದೆಯಾದ ದಾವೀದನಿಗಿದ್ದ ಸ್ನೇಹ ಮನಸ್ಸಿನಲ್ಲಿದ್ದಿರಬಹುದು. (1 ಸಮು. 18:1) ರಾಜ ಸೌಲನಿಗೆ ತನ್ನ ಮಗನಾದ ಯೋನಾತಾನನು ಇಸ್ರಾಯೇಲ್ ರಾಜ್ಯದ ಸಿಂಹಾಸನವೇರಬೇಕೆಂಬ ಆಸೆಯಿತ್ತು. ಆದರೆ ಯೋನಾತಾನನು, ಆ ಸುಯೋಗಕ್ಕಾಗಿ ಯೆಹೋವನು ದಾವೀದನನ್ನು ಆಯ್ಕೆಮಾಡಿದ್ದಾನೆಂಬ ವಾಸ್ತವಾಂಶವನ್ನು ಒಪ್ಪಿಕೊಂಡಿದ್ದನು. ಆದುದರಿಂದ ಅವನು ಸೌಲನಂತೆ ದಾವೀದನ ಬಗ್ಗೆ ಹೊಟ್ಟೆಕಿಚ್ಚುಪಡಲಿಲ್ಲ. ದಾವೀದನಿಗೆ ಸಿಗುತ್ತಿದ್ದ ಹೊಗಳಿಕೆಯಿಂದ ಅವನು ಮುನಿಸಿಕೊಳ್ಳಲಿಲ್ಲ. ಅಲ್ಲದೇ, ಸೌಲನು ದಾವೀದನ ಬಗ್ಗೆ ಹಬ್ಬಿಸಿದ ಸುಳ್ಳು ವದಂತಿಯನ್ನು ಅವನು ನಂಬಿಬಿಡಲೂ ಇಲ್ಲ. (1 ಸಮು. 20:24-34) ನಾವು ಯೋನಾತಾನನಂತೆ ಇದ್ದೇವೋ? ನಮ್ಮ ಸ್ನೇಹಿತರಿಗೆ ಸುಯೋಗಗಳು ಸಿಗುವಾಗ ಸಂತೋಷಪಡುತ್ತೇವೋ? ಕಷ್ಟಗಳು ಬಂದಾಗ, ಅವರನ್ನು ಸಂತೈಸಿ, ಬೆಂಬಲಿಸುತ್ತೇವೋ? ಒಬ್ಬ ಸ್ನೇಹಿತನ ಬಗ್ಗೆ ಹಾನಿಕರ ಹರಟೆಮಾತು ನಮ್ಮ ಕಿವಿಗೆ ಬಿದ್ದರೆ ಅದನ್ನು ಕೂಡಲೇ ನಂಬಿಬಿಡುತ್ತೇವೋ? ಇಲ್ಲವೇ, ಯೋನಾತಾನನಂತೆ ನಮ್ಮ ಸ್ನೇಹಿತನನ್ನು ನಿಷ್ಠೆಯಿಂದ ಸಮರ್ಥಿಸುತ್ತೇವೋ?
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು05 3/15 ಪುಟ 24 ಪ್ಯಾರ 4
ಒಂದನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು
21:12, 13. ಜೀವನದಲ್ಲಿ ಎದುರಾಗುವ ಕಷ್ಟಕರ ಸನ್ನಿವೇಶಗಳೊಂದಿಗೆ ವ್ಯವಹರಿಸಲು ನಮ್ಮ ಆಲೋಚನಾ ಸಾಮರ್ಥ್ಯಗಳನ್ನೂ ಕೌಶಲಗಳನ್ನೂ ಉಪಯೋಗಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆ. ಆತನು ನಮಗೆ ತನ್ನ ಪ್ರೇರಿತ ವಾಕ್ಯವನ್ನು ಕೊಟ್ಟಿದ್ದಾನೆ; ಇದು ನಾವು ಜಾಣತನ, ತಿಳುವಳಿಕೆ ಮತ್ತು ಬುದ್ಧಿಯನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತದೆ. (ಜ್ಞಾನೋಕ್ತಿ 1:4) ಮತ್ತು ನೇಮಿತ ಕ್ರೈಸ್ತ ಹಿರಿಯರ ಸಹಾಯವೂ ನಮಗಿದೆ.
ಏಪ್ರಿಲ್ 18-24
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 23-24
“ಯೆಹೋವನಿಗಾಗಿ ತಾಳ್ಮೆಯಿಂದ ಕಾಯಿರಿ”
ಕಾವಲಿನಬುರುಜು04 4/1 ಪುಟ 16 ಪ್ಯಾರ 8
ಜೀವನದ ಬದಲಾಗುತ್ತಿರುವ ಸನ್ನಿವೇಶಗಳನ್ನು ನಿಭಾಯಿಸುವಾಗ ದೇವರಾತ್ಮದ ಮೇಲೆ ಆತುಕೊಳ್ಳಿರಿ
ಆದರೆ ಸೌಲನಿಗೆ ಹಾನಿ ಬಗೆಯಲು ದಾವೀದನು ನಿರಾಕರಿಸಿದನು. ನಂಬಿಕೆ ಮತ್ತು ತಾಳ್ಮೆಯನ್ನು ತೋರಿಸುತ್ತ ಅವನು ವಿಷಯಗಳನ್ನು ಯೆಹೋವನ ಕೈಯಲ್ಲಿ ಬಿಡಲು ತೃಪ್ತನಾಗಿದ್ದನು. ಅರಸನು ಗುಹೆ ಬಿಟ್ಟುಹೋದ ಮೇಲೆ ದಾವೀದನು ಅವನನ್ನು ಕೂಗಿ ಹೇಳಿದ್ದು: “ಯೆಹೋವನೇ ನಮ್ಮ ಉಭಯರ ವ್ಯಾಜ್ಯವನ್ನು ತೀರಿಸಲಿ; ಆತನೇ ನನಗೋಸ್ಕರ ನಿನಗೆ ಮುಯ್ಯಿಸಲ್ಲಿಸಲಿ; ನಾನಂತೂ ನಿನಗೆ ವಿರೋಧವಾಗಿ ಕೈಯೆತ್ತುವದಿಲ್ಲ.” (1 ಸಮುವೇಲ 24:12) ಸೌಲನು ದೋಷಿಯೆಂದು ದಾವೀದನಿಗೆ ತಿಳಿದಿದ್ದರೂ, ಅವನು ಮುಯ್ಯಿ ತೀರಿಸಲೂ ಇಲ್ಲ, ಸೌಲನನ್ನು ಬೈಯುತ್ತಾ ಮಾತಾಡಲೂ ಇಲ್ಲ ಇಲ್ಲವೆ ಅವನ ಬಗ್ಗೆ ನಿಂದಿಸಿ ಇತರರೊಂದಿಗೆ ಮಾತಾಡಿದ್ದೂ ಇಲ್ಲ. ಇತರ ಅನೇಕ ಸಂದರ್ಭಗಳಲ್ಲಿಯೂ ತಾನೇ ಸೇಡು ತೀರಿಸುವ ವಿಷಯದಲ್ಲಿ ದಾವೀದನು ತನ್ನನ್ನು ನಿಯಂತ್ರಿಸಿಕೊಂಡನು. ಇದಕ್ಕೆ ಬದಲಾಗಿ, ಯೆಹೋವನೇ ವಿಷಯವನ್ನು ಸರಿಪಡಿಸುವಂತೆ ಆತನ ಮೇಲೆ ಆತುಕೊಂಡನು.—1 ಸಮುವೇಲ 25:32-34; 26:10, 11.
ನಿಮ್ಮ ಸನ್ನಿವೇಶಗಳು ನಿಮ್ಮ ಜೀವನವನ್ನು ನಿಯಂತ್ರಿಸುತ್ತವೋ?
ಮೂರನೆಯ ಪಾಠವೇನೆಂದರೆ, ನಮ್ಮ ಸನ್ನಿವೇಶಗಳನ್ನು ಬದಲಾಯಿಸಲಿಕ್ಕಾಗಿ ಅಶಾಸ್ತ್ರೀಯವಾದ ಮಾಧ್ಯಮವನ್ನು ಉಪಯೋಗಿಸುವುದಕ್ಕೆ ಬದಲಾಗಿ ನಾವು ಯೆಹೋವನ ಮೇಲೆ ಆತುಕೊಳ್ಳಬೇಕು. ಶಿಷ್ಯನಾದ ಯಾಕೋಬನು ಬರೆದುದು: “ತಾಳ್ಮೆಯು ಸಿದ್ಧಿಗೆ ಬರಲಿ; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.” (ಯಾಕೋಬ 1:4) ನಮ್ಮ ಪರೀಕ್ಷೆಯನ್ನು ಅತಿ ಬೇಗನೆ ಕೊನೆಗೊಳಿಸಲಿಕ್ಕಾಗಿ ಅಶಾಸ್ತ್ರೀಯವಾದ ಮಾಧ್ಯಮವನ್ನು ಅವಲಂಬಿಸದೆ, ಅದು ಕೊನೆಗೊಳ್ಳುವ ವರೆಗೂ ತಾಳಿಕೊಳ್ಳುವ ಮೂಲಕ ತಾಳ್ಮೆಯು ‘ಸಿದ್ಧಿಗೆ ಬರುವಂತೆ’ ಬಿಡಬೇಕು. ಆಗ ನಮ್ಮ ನಂಬಿಕೆಯು ಪರೀಕ್ಷಿಸಲ್ಪಡುತ್ತದೆ ಮತ್ತು ಪರಿಷ್ಕರಿಸಲ್ಪಡುತ್ತದೆ ಹಾಗೂ ಅದರ ಸಂರಕ್ಷಣಾತ್ಮಕ ಬಲವು ಸುವ್ಯಕ್ತವಾಗುತ್ತದೆ. ಯೋಸೇಫ ಹಾಗೂ ದಾವೀದರಿಗೆ ಈ ರೀತಿಯ ತಾಳ್ಮೆಯಿತ್ತು. ಅವರು ಯೆಹೋವನ ಅಪ್ರಸನ್ನತೆಗೆ ಗುರಿಪಡಿಸಬಹುದಾದಂಥ ರೀತಿಯ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಲಿಲ್ಲ. ಅದಕ್ಕೆ ಬದಲಾಗಿ, ತಮ್ಮ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ತಮ್ಮಿಂದಾದಷ್ಟು ಮಟ್ಟಿಗೆ ಪ್ರಯತ್ನಿಸಿದರು. ಅವರು ಯೆಹೋವನ ಮೇಲೆ ಆತುಕೊಂಡರು, ಮತ್ತು ಹೀಗೆ ಮಾಡಿದ್ದಕ್ಕಾಗಿ ಅವರಿಗೆ ಎಷ್ಟು ಆಶೀರ್ವಾದಗಳು ಸುರಿಸಲ್ಪಟ್ಟವು! ತನ್ನ ಜನರನ್ನು ಬಿಡಿಸಲಿಕ್ಕಾಗಿ ಮತ್ತು ಮುನ್ನಡೆಸಲಿಕ್ಕಾಗಿ ಯೆಹೋವನು ಅವರಿಬ್ಬರನ್ನೂ ಉಪಯೋಗಿಸಿದನು.—ಆದಿಕಾಂಡ 41:39-41; 45:5; 2 ಸಮುವೇಲ 5:4, 5.
ನಾವು ಸಹ ಅಶಾಸ್ತ್ರೀಯವಾದ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವಂತೆ ನಮ್ಮನ್ನು ಶೋಧನೆಗೊಳಪಡಿಸಸಾಧ್ಯವಿರುವ ಸನ್ನಿವೇಶಗಳನ್ನು ಎದುರಿಸಬಹುದು. ಉದಾಹರಣೆಗೆ, ಇಷ್ಟರ ತನಕ ಒಬ್ಬ ಯೋಗ್ಯ ವಿವಾಹ ಸಂಗಾತಿಯನ್ನು ಕಂಡುಕೊಳ್ಳದಿರುವ ಕಾರಣ ನೀವು ನಿರಾಶೆಗೊಂಡಿದ್ದೀರೋ? ಹಾಗಿರುವಲ್ಲಿ, “ಕರ್ತನಲ್ಲಿ ಮಾತ್ರ” ವಿವಾಹವಾಗುವಂತೆ ಯೆಹೋವನು ಕೊಟ್ಟಿರುವ ಆಜ್ಞೆಗೆ ಅವಿಧೇಯರಾಗಲು ಪ್ರಚೋದಿಸಲ್ಪಡುವ ಯಾವುದೇ ಶೋಧನೆಯಿಂದ ದೂರವಿರಿ. (1 ಕೊರಿಂಥ 7:39, NW) ನಿಮ್ಮ ವಿವಾಹದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದೀರೋ? ಪ್ರತ್ಯೇಕವಾಸ ಹಾಗೂ ವಿವಾಹ ವಿಚ್ಛೇದವನ್ನು ಅನುಮೋದಿಸುವ ಲೋಕದ ಆತ್ಮದ ಪ್ರಭಾವಕ್ಕೆ ಒಳಗಾಗುವುದಕ್ಕೆ ಬದಲಾಗಿ, ಒಂದುಗೂಡಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿರಿ. (ಮಲಾಕಿಯ 2:16; ಎಫೆಸ 5:21-33) ನಿಮ್ಮ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಕುಟುಂಬವನ್ನು ನೋಡಿಕೊಳ್ಳುವುದು ನಿಮಗೆ ಕಷ್ಟಕರವಾಗಿದೆಯೋ? ಯೆಹೋವನ ಮೇಲೆ ಆತುಕೊಳ್ಳುವುದು, ಪ್ರಶ್ನಾರ್ಥಕವಾದ ಅಥವಾ ಕಾನೂನಿಗೆ ವಿರುದ್ಧವಾದ ಚಟುವಟಿಕೆಗಳ ಮೂಲಕ ಹಣವನ್ನು ಸಂಪಾದಿಸಲು ಪ್ರಯತ್ನಿಸುವುದರಿಂದ ದೂರವಿರುವುದನ್ನು ಒಳಗೂಡಿದೆ. (ಕೀರ್ತನೆ 37:25; ಇಬ್ರಿಯ 13:18) ಹೌದು, ನಮ್ಮ ಸನ್ನಿವೇಶಗಳನ್ನು ಸದುಪಯೋಗಿಸಿಕೊಳ್ಳಲು ಮತ್ತು ಯೆಹೋವನಿಂದ ಪ್ರತಿಫಲವನ್ನು ಪಡೆದುಕೊಳ್ಳಲು ನಾವೆಲ್ಲರೂ ಬಹಳಷ್ಟು ಶ್ರಮಿಸಬೇಕಾಗಿದೆ. ನಾವು ಹೀಗೆ ಮಾಡುವಾಗ, ಸಂಪೂರ್ಣ ಪರಿಹಾರಕ್ಕಾಗಿ ಯೆಹೋವನ ಮೇಲೆ ಆತುಕೊಳ್ಳಲು ನಿರ್ಧರಿಸೋಣ.—ಮೀಕ 7:7.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು17.11 ಪುಟ 27 ಪ್ಯಾರ 11
ಯಾವುದೂ ನಿಮ್ಮಿಂದ ಬಹುಮಾನವನ್ನು ಕಸಿದುಕೊಳ್ಳದಿರಲಿ
ನಾವು ನಿಜವಾದ ಪ್ರೀತಿ ದಯೆ ತೋರಿಸಲು ಶ್ರಮಿಸುವುದಾದರೆ ನಮಗೆ ಹೊಟ್ಟೆಕಿಚ್ಚು ಆಗುವುದಿಲ್ಲ. “ಪ್ರೀತಿಯು ದೀರ್ಘ ಸಹನೆಯುಳ್ಳದ್ದೂ ದಯೆಯುಳ್ಳದ್ದೂ ಆಗಿದೆ. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ” ಎಂದು ದೇವರ ವಾಕ್ಯ ಹೇಳುತ್ತದೆ. (1 ಕೊರಿಂ. 13:4) ಹೊಟ್ಟೆಕಿಚ್ಚು ನಮ್ಮ ವ್ಯಕ್ತಿತ್ವದಲ್ಲಿ ಬೆರೆತುಹೋಗದಿರಲು ಯೆಹೋವನ ದೃಷ್ಟಿಕೋನದಿಂದ ವಿಷಯಗಳನ್ನು ನೋಡಬೇಕು. ನಮ್ಮ ಸಹೋದರ ಸಹೋದರಿಯರನ್ನು ಒಂದೇ ದೇಹ ಅಂದರೆ ಸಭೆಯ ಅಂಗಗಳಾಗಿ ನೋಡಬೇಕು. “ಒಂದು ಅಂಗಕ್ಕೆ ಮಹಿಮೆ ಉಂಟಾಗುವುದಾದರೆ ಬೇರೆಲ್ಲ ಅಂಗಗಳು ಅದರೊಂದಿಗೆ ಹರ್ಷಿಸುತ್ತವೆ” ಎಂದು ಬೈಬಲ್ ಹೇಳುತ್ತದೆ. (1 ಕೊರಿಂ. 12:16-18, 26) ನಮ್ಮ ಒಬ್ಬ ಸಹೋದರ ಅಥವಾ ಸಹೋದರಿಗೆ ಒಳ್ಳೇದಾದರೆ ಅದನ್ನು ನೋಡಿ ನಾವು ಹೊಟ್ಟೆಕಿಚ್ಚುಪಡಬಾರದು, ಸಂತೋಷಪಡಬೇಕು. ರಾಜ ಸೌಲನ ಮಗನಾದ ಯೋನಾತಾನನ ಒಳ್ಳೇ ಮಾದರಿಯನ್ನು ನೆನಪಿಸಿಕೊಳ್ಳಿ. ರಾಜನಾಗಬೇಕಿದ್ದ ಯೋನಾತಾನನ ಸ್ಥಾನಕ್ಕೆ ದಾವೀದ ಆಯ್ಕೆಯಾದಾಗ ಅವನು ಹೊಟ್ಟೆಕಿಚ್ಚುಪಡಲಿಲ್ಲ. ದಾವೀದನಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಿದನು. (1 ಸಮು. 23:16-18) ಅವನಂತೆ ನಾವು ಪ್ರೀತಿ ಮತ್ತು ದಯೆ ತೋರಿಸಬಹುದಲ್ಲವೇ?
ಏಪ್ರಿಲ್ 25–ಮೇ 1
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 25–26
“ಯೋಚಿಸದೆ ನಡ್ಕೊಳ್ತೀರಾ?”
ಅನುಕರಿಸಿ ಪುಟ 89-90 ಪ್ಯಾರ 10-12
ವಿವೇಚನೆಯಿಂದ ಕ್ರಿಯೆಗೈದಾಕೆ
ಶ್ರಮಜೀವಿಗಳಾದ ದಾವೀದನ ಸೈನಿಕರು ಆ ಕುರುಬರೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು? ಅವರಿಗೆ ಬೇಕಾದಾಗಲೆಲ್ಲ ಒಂದೊಂದು ಕುರಿಯನ್ನು ಹೇಳದೆ ಕೇಳದೆ ಸುಲಭವಾಗಿ ಎಗರಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ನಾಬಾಲನ ಹಿಂಡುಗಳಿಗೂ ಸೇವಕರಿಗೂ ಕಾವಲುಗೋಡೆಯಂತಿದ್ದರು. (1 ಸಮುವೇಲ 25:15, 16 ಓದಿ.) ಕುರಿಗಳು ಮತ್ತು ಕುರುಬರಿಗಿದ್ದ ಅಪಾಯಗಳು ಹಲವು. ತುಂಬ ಪರಭಕ್ಷಕ ಪ್ರಾಣಿಗಳಿದ್ದವು. ಅಲ್ಲದೆ, ಇಸ್ರಾಯೇಲಿನ ದಕ್ಷಿಣ ಗಡಿಯು ಹತ್ತಿರದಲ್ಲೇ ಇದ್ದದರಿಂದ ಪರದೇಶಿ ಸುಲಿಗೆಗಾರರೂ ಕಳ್ಳಕಾಕರೂ ಆಗಾಗ್ಗೆ ದಾಳಿಮಾಡುತ್ತಿದ್ದರು
11 ಆ ಅರಣ್ಯದಲ್ಲಿ ತನ್ನ ಅಷ್ಟೂ ಮಂದಿ ಸೈನಿಕರಿಗೆ ಆಹಾರ ಒದಗಿಸುವುದು ದಾವೀದನಿಗೆ ಕಷ್ಟವಾಗುತ್ತಿತ್ತು. ಆದುದರಿಂದ ಒಂದು ದಿನ ದಾವೀದನು ನಾಬಾಲನ ಬಳಿ ಸಹಾಯ ಕೇಳಲಿಕ್ಕಾಗಿ ಹತ್ತು ಮಂದಿ ದೂತರನ್ನು ಕಳುಹಿಸಿದನು. ಅದಕ್ಕಾಗಿ ಆರಿಸಿಕೊಂಡಿದ್ದ ಸಮಯವೂ ಸೂಕ್ತವಾಗಿತ್ತು. ಏಕೆಂದರೆ ಅದು ಕುರಿಗಳ ಉಣ್ಣೆ ಕತ್ತರಿಸುವ ಸಮಯ. ಇಂಥ ಸಮಯದಲ್ಲಿ ಹಬ್ಬದ ವಾತಾವರಣ, ರಸದೌತಣ, ಉದಾರವಾಗಿ ದಾನಧರ್ಮ ಕೊಡುವುದು ವಾಡಿಕೆ. ಏನು ಹೇಳಬೇಕೆನ್ನುವುದನ್ನು ಸಹ ದಾವೀದನು ಜಾಗ್ರತೆಯಿಂದ ಯೋಚಿಸಿ ಹೇಳಿ ಕಳುಹಿಸಿದನು. ನಾಬಾಲನನ್ನು ವಿನಯದಿಂದ ಸಂಬೋಧಿಸಿದ್ದನು. ತನಗಿಂತ ಹಿರಿಯನಾಗಿದ್ದ ನಾಬಾಲನ ವಯಸ್ಸಿಗೆ ಮರ್ಯಾದೆ ತೋರಿಸುತ್ತಾ ತನ್ನನ್ನು ‘ನಿನ್ನ ಮಗನಾದ ದಾವೀದ’ ಎಂದು ಸೂಚಿಸಿದ್ದನು. ದಾವೀದನ ಬಿನ್ನಹಕ್ಕೆ ನಾಬಾಲನ ಪ್ರತಿಕ್ರಿಯೆ ಏನಾಗಿತ್ತು?—1 ಸಮು. 25:5-8.
12 ಅವನು ಕೋಪದಿಂದ ಸಿಡಿದೆದ್ದ! ಈ ಅಧ್ಯಾಯದ ಆರಂಭದಲ್ಲಿ ತಿಳಿಸಲಾದ ಯುವ ಸೇವಕನು ತಾನು ನೋಡಿದ್ದನ್ನು ಅಬೀಗೈಲಳಿಗೆ ವರ್ಣಿಸುವಾಗ, “ದಣಿಯು ಬಂದವರ ಮೇಲೆ ಬಿದ್ದು ಬೈದನು” ಎಂದನು. ಜಿಪುಣ ನಾಬಾಲ ತನ್ನ ಬಳಿಯಿದ್ದ ರೊಟ್ಟಿ, ನೀರು, ಮಾಂಸವನ್ನು ಕಂಡಕಂಡವರಿಗೆಲ್ಲ ಕೊಡಲಾರೆ ಎಂದು ಗುಡುಗಿದ. ದಾವೀದ ಲೆಕ್ಕಕ್ಕೆ ಬಾರದವ, ಓಡಿಹೋದ ಸೇವಕ ಎಂದು ಅಣಕಿಸಿದ. ನಾಬಾಲನ ದೃಷ್ಟಿಕೋನ ದಾವೀದನನ್ನು ದ್ವೇಷಿಸುತ್ತಿದ್ದ ಸೌಲನಂತಿತ್ತು. ನಾಬಾಲನಿಗಾಗಲಿ ಸೌಲನಿಗಾಗಲಿ ದಾವೀದನ ಬಗ್ಗೆ ದೇವರಿಗಿದ್ದ ದೃಷ್ಟಿಕೋನ ಇರಲಿಲ್ಲ. ಯೆಹೋವನಿಗೆ ದಾವೀದ ತುಂಬ ಪ್ರಿಯನಾಗಿದ್ದನು. ಆತನ ದೃಷ್ಟಿಯಲ್ಲಿ ದಾವೀದನು ಬಂಡಾಯವೆದ್ದ ದಾಸನಾಗಿರಲಿಲ್ಲ, ಇಸ್ರಾಯೇಲಿನ ಭಾವೀ ಅರಸನಾಗಿದ್ದನು.—1 ಸಮು. 25:10, 11, 14.
ವಿವೇಚನೆಯಿಂದ ಕ್ರಿಯೆಗೈದಾಕೆ
ನಡೆದಂಥ ಅನ್ಯಾಯದ ಹೊಣೆಗಾರಿಕೆಯನ್ನು ಆಕೆ ತನ್ನ ಮೇಲೆ ತೆಗೆದುಕೊಂಡು ತನ್ನನ್ನು ಕ್ಷಮಿಸುವಂತೆ ದಾವೀದನಲ್ಲಿ ಕೇಳಿಕೊಂಡಳು. ತನ್ನ ಗಂಡ ಅವನ ಹೆಸರಿಗೆ ತಕ್ಕಂತೆ ಮೂರ್ಖನೆಂಬ ಸತ್ಯಾಂಶವನ್ನು ಒಪ್ಪಿಕೊಂಡಳು. ಹೀಗೆ ಅವಳು ಬಹುಶಃ ಪರೋಕ್ಷವಾಗಿ ಹೇಳಿದ್ದೇನೆಂದರೆ ಅಂಥ ವ್ಯಕ್ತಿಯನ್ನು ಶಿಕ್ಷಿಸುವುದು ದಾವೀದನ ಘನತೆಗೆ ಯೋಗ್ಯವಲ್ಲ ಎಂದು. ದಾವೀದನು ‘ಯೆಹೋವನ ಶತ್ರುಗಳೊಡನೆ ಯುದ್ಧಮಾಡುತ್ತಾನೆ’ ಎಂಬುದನ್ನು ಅಂಗೀಕರಿಸುವ ಮೂಲಕ ಯೆಹೋವನ ಪ್ರತಿನಿಧಿಯಾದ ಅವನಲ್ಲಿ ಭರವಸೆ ವ್ಯಕ್ತಪಡಿಸಿದಳು. ‘ಯೆಹೋವನು ನಿನ್ನನ್ನು ಇಸ್ರಾಯೇಲ್ ಪ್ರಭುವನ್ನಾಗಿ ಮಾಡುವನು’ ಎಂದು ಹೇಳುವ ಮೂಲಕ ದಾವೀದ ಮತ್ತು ಅವನ ರಾಜತ್ವದ ಬಗ್ಗೆ ಯೆಹೋವನು ಮಾಡಿದ ವಾಗ್ದಾನ ತನಗೆ ತಿಳಿದಿದೆಯೆಂದು ತೋರಿಸಿಕೊಟ್ಟಳು. ಅಷ್ಟು ಮಾತ್ರವಲ್ಲ ರಕ್ತಾಪರಾಧಕ್ಕಾಗಲಿ, ಮುಂದೆ “ಪಶ್ಚಾತ್ತಾಪ ಮನೋವ್ಯಥೆಗಳಿಗೆ” ಅಂದರೆ ಬಹುಶಃ ಚುಚ್ಚುವ ಮನಸ್ಸಾಕ್ಷಿಗಾಗಲಿ ಕಾರಣವಾಗಬಲ್ಲ ಕೃತ್ಯವೆಸಗದಂತೆ ದಾವೀದನನ್ನು ಕೇಳಿಕೊಂಡಳು. (1 ಸಮುವೇಲ 25:24-31 ಓದಿ.) ನಿಜಕ್ಕೂ ಮನಸ್ಪರ್ಶಿಸುವ ದಯಾಪೂರ್ಣ ಮಾತುಗಳವು!
ಬೈಬಲಿನಲ್ಲಿರುವ ರತ್ನಗಳು
ವಿವೇಚನೆಯಿಂದ ಕ್ರಿಯೆಗೈದಾಕೆ
ಇದರರ್ಥ ಅಬೀಗೈಲಳು ತನ್ನ ಗಂಡನ ಶಿರಸ್ಸುತನಕ್ಕೆ ಬೆಲೆಕೊಡಲಿಲ್ಲವೆಂದಾ? ಖಂಡಿತ ಹಾಗಲ್ಲ. ನಾಬಾಲನು ನೀಚತನದಿಂದ ವರ್ತಿಸಿದ್ದು ಯೆಹೋವನ ಅಭಿಷಿಕ್ತ ಸೇವಕನೊಂದಿಗೆ ಎಂದು ನೆನಪಿಡಿ. ಅದರಿಂದಾಗಿ ನಾಬಾಲನ ಮನೆಯಲ್ಲಿದ್ದ ಅನೇಕ ಅಮಾಯಕರು ಸಾಯಲಿಕ್ಕಿದ್ದರು. ಅಬೀಗೈಲಳು ಈಗ ಕೈಕಟ್ಟಿ ಕುಳಿತುಕೊಳ್ಳುತ್ತಿದ್ದಲ್ಲಿ ಗಂಡನ ತಪ್ಪಿನಲ್ಲಿ ಬಹುಶಃ ಆಕೆಯೂ ಭಾಗಿಯಾದಂತೆ ಆಗುತ್ತಿತ್ತು. ಆದ್ದರಿಂದ ಈ ಸಂದರ್ಭದಲ್ಲಿ ಆಕೆ ತನ್ನ ಗಂಡನಿಗಿಂತ ತನ್ನ ದೇವರಿಗೆ ಅಧೀನತೆ ತೋರಿಸಲು ಪ್ರಾಶಸ್ತ್ಯ ಕೊಡಲೇಬೇಕಿತ್ತು.