ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, ಮಸ್ಕಿಲ್.* ದಾವೀದ ಅಹೀಮೆಲೆಕನ+ ಮನೆಗೆ ಬಂದಿದ್ದಾನಂತ ಎದೋಮ್ಯನಾದ ದೋಯೇಗ ಸೌಲನಿಗೆ ಹೇಳಿದ. ಆಗ ದಾವೀದ ಈ ಕೀರ್ತನೆ ರಚಿಸಿದ.
52 ದುಷ್ಟನೇ, ನೀನು ನಿನ್ನ ಕೆಟ್ಟ ಕೆಲಸಗಳ ಬಗ್ಗೆ ಯಾಕೆ ಕೊಚ್ಕೊಳ್ತೀಯ?+
ದೇವರ ಶಾಶ್ವತ ಪ್ರೀತಿ ಇಡೀ ದಿನ ಇರುತ್ತೆ ಅಂತ ನಿಂಗೆ ಗೊತ್ತಿಲ್ವಾ?+
3 ನೀನು ಒಳ್ಳೇದಕ್ಕಿಂತ ಕೆಟ್ಟದ್ದನ್ನೇ ಜಾಸ್ತಿ ಪ್ರೀತಿಸ್ತೀಯ,
ಸತ್ಯಕ್ಕಿಂತ ಸುಳ್ಳನ್ನೇ ಜಾಸ್ತಿ ಹೇಳ್ತೀಯ. (ಸೆಲಾ)
4 ಮೋಸದ ನಾಲಿಗೆಯೇ!
ಹಾನಿ ಮಾಡೋ ಮಾತೇ ನಿನಗೆ ತುಂಬ ಇಷ್ಟ.
5 ಹಾಗಾಗಿ ದೇವರು ನಿನ್ನನ್ನ ಯಾವತ್ತೂ ಮೇಲೆ ಏಳದ ಹಾಗೆ ಕೆಳಗೆ ಬೀಳಿಸ್ತಾನೆ,+
ಆತನು ನಿನ್ನನ್ನ ಸರಕ್ಕಂತ ಎಳೆದು ನಿನ್ನ ಡೇರೆಯಿಂದ ನಿನ್ನನ್ನ ಕಿತ್ತು ಎಸೀತಾನೆ,+
7 “ಈ ಮನುಷ್ಯನನ್ನ ನೋಡಿ, ಇವನು ದೇವ್ರನ್ನ ತನ್ನ ಆಶ್ರಯವಾಗಿ* ಮಾಡ್ಕೊಳ್ಳಿಲ್ಲ,+
ತನ್ನ ಸಿರಿಸಂಪತ್ತನ್ನೇ ನಂಬ್ಕೊಂಡಿದ್ದ,+
ಕೆಟ್ಟ ಯೋಜನೆಗಳನ್ನೇ* ಆಸರೆಯಾಗಿ ಮಾಡ್ಕೊಂಡಿದ್ದ.”