-
1 ಅರಸು 8:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಯೆಹೋವ ಕೊಟ್ಟ ಮಾತನ್ನ ನಿಜ ಮಾಡಿದ್ದಾನೆ. ಯೆಹೋವ ಮಾತು ಕೊಟ್ಟ ಹಾಗೆ ನನ್ನ ಅಪ್ಪ ದಾವೀದನ ಸ್ಥಾನದಲ್ಲಿ ನಾನು ರಾಜ ಆದೆ. ಇಸ್ರಾಯೇಲ್ ಸಿಂಹಾಸನದ ಮೇಲೆ ಕೂತ್ಕೊಂಡೆ. ಅಷ್ಟೇ ಅಲ್ಲ ಇಸ್ರಾಯೇಲ್ ದೇವರಾದ ಯೆಹೋವನ ಹೆಸ್ರಿಗಾಗಿ ಆಲಯ ಕಟ್ಟಿದೆ.+
-
-
1 ಪೂರ್ವಕಾಲವೃತ್ತಾಂತ 17:11-14ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ನೀನು ಸತ್ತು, ನಿನ್ನ ಪೂರ್ವಜರ ತರ ತೀರಿಹೋದಾಗ ನಿನ್ನ ನಂತ್ರದ ಸಂತಾನವನ್ನ ಅಂದ್ರೆ ನಿನ್ನ ಗಂಡು ಮಕ್ಕಳಲ್ಲಿ ಒಬ್ಬನನ್ನ ಮೇಲೇರಿಸ್ತೀನಿ.+ ನಾನು ಅವನ ರಾಜ್ಯಾಧಿಕಾರವನ್ನ ದೃಢಪಡಿಸ್ತೀನಿ.+ 12 ಅವನೇ ನನಗಾಗಿ ಮನೆ ಕಟ್ತಾನೆ.+ ಅವನ ಸಿಂಹಾಸನವನ್ನ ನಾನು ಶಾಶ್ವತವಾಗಿ ಇರೋ ಹಾಗೆ ಮಾಡ್ತೀನಿ.+ 13 ನಾನು ಅವನಿಗೆ ತಂದೆ ಆಗ್ತೀನಿ, ಅವನು ನನಗೆ ಮಗನಾಗ್ತಾನೆ.+ ನಿನಗಿಂತ ಮುಂಚೆ ಇದ್ದ ವ್ಯಕ್ತಿ ಕಡೆಗೆ ನನಗಿದ್ದ ಶಾಶ್ವತ ಪ್ರೀತಿಯನ್ನ ತೆಗೆದುಬಿಟ್ಟೆ.+ ಆದ್ರೆ ನಿನ್ನ ಮಗನ ವಿಷ್ಯದಲ್ಲಿ ಹಾಗೆ ಮಾಡಲ್ಲ.+ 14 ಅವನು ನನ್ನ ಆಲಯದಲ್ಲಿ, ನನ್ನ ರಾಜ್ಯದಲ್ಲಿ ಯಾವಾಗ್ಲೂ ಇರೋ ಹಾಗೆ ಮಾಡ್ತೀನಿ.+ ಅವನ ಸಿಂಹಾಸನ ಶಾಶ್ವತವಾಗಿ ಇರುತ್ತೆ.”’”+
-
-
ಕೀರ್ತನೆ 132:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಯೆಹೋವ ದಾವೀದನಿಗೆ ಮಾತುಕೊಟ್ಟಿದ್ದಾನೆ.
ಆ ಮಾತನ್ನ ಆತನು ನಿಜವಾಗ್ಲೂ ವಾಪಸ್ ತಗೊಳಲ್ಲ,
“ನಾನು ನನ್ನ ಸಿಂಹಾಸನದ ಮೇಲೆ
ನಿನ್ನ ಸಂತತಿಯವರಲ್ಲಿ ಒಬ್ಬನನ್ನ ಕೂರಿಸ್ತೀನಿ.+
-