ಎರಡನೇ ಅರಸು
1 ಅಹಾಬ ಸತ್ತ ಮೇಲೆ ಮೋವಾಬ್ಯರು+ ಇಸ್ರಾಯೇಲ್ಯರ ವಿರುದ್ಧ ತಿರುಗಿಬಿದ್ರು.
2 ಒಂದಿನ ಅಹಜ್ಯ ಸಮಾರ್ಯದಲ್ಲಿದ್ದ ತನ್ನ ಮನೆಯ ಚಾವಣಿಯ ಜಾಲರಿ ಒಳಗಿಂದ ಕೆಳಗೆ ಬಿದ್ದು ಗಾಯ ಮಾಡ್ಕೊಂಡ. ಆಗ ಅವನು ತನ್ನ ಸಂದೇಶವಾಹಕರಿಗೆ “ಹಾಸಿಗೆ ಹಿಡಿದಿರೋ ನಾನು ವಾಸಿ ಆಗ್ತೀನಾ ಅಂತ ಎಕ್ರೋನಿನ+ ದೇವರಾಗಿರೋ ಬಾಳ್ಜೆಬೂಬನ ಹತ್ರ ಹೋಗಿ ಕೇಳ್ಕೊಂಡು ಬನ್ನಿ”+ ಅಂತ ಹೇಳಿ ಕಳಿಸಿದ. 3 ಆಗ ಯೆಹೋವನ ದೂತ ತಿಷ್ಬೀಯನಾದ ಎಲೀಯನಿಗೆ*+ ಹೀಗಂದ: “ಎದ್ದೇಳು, ಹೋಗಿ ಸಮಾರ್ಯದ ರಾಜ ಕಳಿಸಿದ ಸಂದೇಶವಾಹಕರನ್ನ ಭೇಟಿಮಾಡು. ಅವ್ರಿಗೆ ಹೀಗೆ ಹೇಳು: ‘ಇಸ್ರಾಯೇಲಲ್ಲಿ ಬೇರೆ ದೇವರಿಲ್ಲ ಅಂತ ಎಕ್ರೋನಿನ ದೇವರಾದ ಬಾಳ್ಜೆಬೂಬನ ಹತ್ರ ಕೇಳೋಕೆ ಹೋಗ್ತಿದ್ದೀರಾ?+ 4 ಹಾಗಾಗಿ ಯೆಹೋವ ರಾಜನಿಗೆ ಹೀಗೆ ಹೇಳಿದ್ದಾನೆ: “ನೀನು ಮಲಗಿರೋ ಹಾಸಿಗೆಯಿಂದ ಏಳೋದೇ ಇಲ್ಲ. ನೀನು ಖಂಡಿತ ಸಾಯ್ತೀಯ.”’” ಇದಾದ್ಮೇಲೆ ಎಲೀಯ ಅಲ್ಲಿಂದ ಹೋದ.
5 ಆಗ ಸಂದೇಶವಾಹಕರು ರಾಜನ ಹತ್ರ ವಾಪಸ್ ಬಂದ್ರು. ತಕ್ಷಣ ರಾಜ ಅವ್ರಿಗೆ “ಯಾಕೆ ನೀವು ವಾಪಸ್ ಬಂದ್ರಿ?” ಅಂತ ಕೇಳಿದ. 6 ಅದಕ್ಕೆ ಅವರು “ಒಬ್ಬ ಮನುಷ್ಯ ನಮ್ಮನ್ನ ಭೇಟಿಮಾಡಿ ಹೀಗಂದ: ‘ನಿಮ್ಮನ್ನ ಕಳಿಸಿದ ರಾಜನ ಹತ್ರ ವಾಪಸ್ ಹೋಗಿ ಅವನಿಗೆ ಹೀಗೆ ಹೇಳಿ “ಯೆಹೋವ ಹೀಗೆ ಹೇಳ್ತಾನೆ: ‘ಇಸ್ರಾಯೇಲಲ್ಲಿ ಬೇರೆ ದೇವರಿಲ್ಲ ಅಂತ ನೀನು ಎಕ್ರೋನಿನ ದೇವರಾದ ಬಾಳ್ಜೆಬೂಬನ ಹತ್ರ ಕೇಳೋಕೆ ಕಳಿಸ್ಕೊಟ್ಟಿದ್ಯಾ? ಹಾಗಾಗಿ ನೀನು ಮಲಗಿರೋ ಈ ಹಾಸಿಗೆಯಿಂದ ಏಳೋದೇ ಇಲ್ಲ. ಖಂಡಿತ ಸಾಯ್ತೀಯ.’”’”+ 7 ಅದಕ್ಕೆ ರಾಜ ಅವ್ರಿಗೆ “ನಿಮ್ಮನ್ನ ಭೇಟಿಮಾಡಿ ಈ ಮಾತುಗಳನ್ನಾಡಿದ ಮನುಷ್ಯ ನೋಡೋಕೆ ಹೇಗಿದ್ದ?” ಅಂತ ಕೇಳಿದ. 8 ಅದಕ್ಕೆ ಅವರು “ಆ ಮನುಷ್ಯ ಕೂದಲಿಂದ ಮಾಡಿದ ಉಡುಪನ್ನ ಹಾಕಿದ್ದ.+ ಸೊಂಟಕ್ಕೆ ಚರ್ಮದ ಸೊಂಟಪಟ್ಟಿ ಕಟ್ಕೊಂಡಿದ್ದ”+ ಅಂದ್ರು. ತಕ್ಷಣ ರಾಜ “ಖಂಡಿತ ಅವನು ತಿಷ್ಬೀಯನಾದ ಎಲೀಯನೇ” ಅಂದ.
9 ಆಮೇಲೆ ರಾಜ 50 ಜನ್ರ ಮುಖ್ಯಸ್ಥನನ್ನ ಮತ್ತು ಅವನ ಕೆಳಗಿದ್ದ 50 ಗಂಡಸ್ರನ್ನ ಎಲೀಯನ ಹತ್ರ ಕಳಿಸಿದ. ಆ ಮುಖ್ಯಸ್ಥ ಎಲೀಯನ ಹತ್ರ ಬಂದಾಗ ಎಲೀಯ ಬೆಟ್ಟದ ಮೇಲೆ ಕೂತಿದ್ದ. ಅವನು ಎಲೀಯನಿಗೆ “ಸತ್ಯದೇವರ ಮನುಷ್ಯನೇ,+ ರಾಜ ಹೇಳ್ತಿದ್ದಾನೆ ‘ಕೆಳಗಿಳಿದು ಬಾ’” ಅಂದ. 10 ಆಗ ಎಲೀಯ ಆ 50 ಜನ್ರ ಮುಖ್ಯಸ್ಥನಿಗೆ “ನಾನು ದೇವರ ಮನುಷ್ಯನಾಗಿದ್ರೆ ಆಕಾಶದಿಂದ ಬೆಂಕಿ ಬಂದು+ ನಿನ್ನನ್ನ ಮತ್ತು ನಿನ್ನ 50 ಗಂಡಸ್ರನ್ನ ಸುಟ್ಟುಬಿಡಲಿ” ಅಂದ. ಆಗ ಆಕಾಶದಿಂದ ಬೆಂಕಿ ಬಂದು ಅವನನ್ನ ಮತ್ತು ಅವನ 50 ಗಂಡಸ್ರನ್ನ ಸುಟ್ಟುಬಿಡ್ತು.
11 ಆಮೇಲೆ ರಾಜ ಮತ್ತೊಬ್ಬ 50 ಜನ್ರ ಮುಖ್ಯಸ್ಥನನ್ನ ಮತ್ತು ಅವನ ಕೆಳಗಿದ್ದ 50 ಗಂಡಸ್ರನ್ನ ಎಲೀಯನ ಹತ್ರ ಕಳಿಸಿದ. ಆ ಮುಖ್ಯಸ್ಥ ಎಲೀಯನಿಗೆ “ಸತ್ಯದೇವರ ಮನುಷ್ಯನೇ, ರಾಜ ಹೇಳ್ತಿದ್ದಾನೆ, ‘ಬೇಗ ಕೆಳಗಿಳಿದು ಬಾ’” ಅಂದ. 12 ಆಗ ಎಲೀಯ “ನಾನು ಸತ್ಯದೇವರ ಮನುಷ್ಯನಾಗಿದ್ರೆ ಆಕಾಶದಿಂದ ಬೆಂಕಿ ಬಂದು ನಿನ್ನನ್ನ ಮತ್ತು ನಿನ್ನ 50 ಗಂಡಸ್ರನ್ನ ಸುಟ್ಟುಬಿಡಲಿ” ಅಂದ. ಆಗ ಆಕಾಶದಿಂದ ಬೆಂಕಿ ಬಂದು ಅವನನ್ನ ಮತ್ತು ಅವನ 50 ಗಂಡಸ್ರನ್ನ ಸುಟ್ಟುಬಿಡ್ತು.
13 ಆಗ ರಾಜ ಮೂರನೇ ಸಲ 50 ಜನ್ರ ಮುಖ್ಯಸ್ಥನನ್ನ ಮತ್ತು ಅವನ ಕೆಳಗಿದ್ದ 50 ಗಂಡಸ್ರನ್ನ ಎಲೀಯನ ಹತ್ರ ಕಳಿಸಿದ. ಆದ್ರೆ ಆ ಮೂರನೇ ಮುಖ್ಯಸ್ಥ ಎಲೀಯನ ಮುಂದೆ ಬಂದು ಮಂಡಿಯೂರಿ ದಯೆ ತೋರಿಸು ಅಂತ ಬೇಡ್ಕೊಳ್ತಾ ಹೀಗಂದ: “ಸತ್ಯದೇವರ ಮನುಷ್ಯನೇ, ದಯವಿಟ್ಟು ನನ್ನ ಮತ್ತು ನನ್ನ ಈ 50 ಗಂಡಸ್ರ ಜೀವವನ್ನ ಅಮೂಲ್ಯವಾಗಿ ನೋಡು. 14 ಈಗಾಗ್ಲೇ ಬೆಂಕಿ ಆಕಾಶದಿಂದ ಬಂದು ಈ ಮುಂಚೆ ಬಂದಿದ್ದ ಇಬ್ರು ಮುಖ್ಯಸ್ಥರನ್ನ ಮತ್ತು ಅವ್ರ ಕೆಳಗಿದ್ದ 50 ಗಂಡಸ್ರನ್ನ ಸುಟ್ಟುಬಿಟ್ಟಿದೆ. ಆದ್ರೆ ಈಗ ನನ್ನ ಮೇಲೆ ಕರುಣೆ ತೋರಿಸಿ ನನ್ನನ್ನ ಬದುಕೋಕೆ ಬಿಡು” ಅಂದ.
15 ಅದಕ್ಕೆ ಯೆಹೋವನ ದೂತ ಎಲೀಯನಿಗೆ “ಅವನ ಜೊತೆ ಹೋಗು. ಅವನಿಗೆ ಹೆದರಬೇಡ” ಅಂದ. ಹಾಗಾಗಿ ಎಲೀಯ ಎದ್ದು ಅವನ ಜೊತೆ ರಾಜನ ಹತ್ರ ಹೋದ. 16 ಆಮೇಲೆ ಎಲೀಯ ರಾಜನಿಗೆ “ಯೆಹೋವ ಹೀಗೆ ಹೇಳ್ತಾನೆ: ‘ಇಸ್ರಾಯೇಲಲ್ಲಿ ದೇವರಿಲ್ಲ+ ಅಂತ ನೀನು ಎಕ್ರೋನಿನ+ ದೇವರಾದ ಬಾಳ್ಜೆಬೂಬನ ಹತ್ರ ಕೇಳೋಕೆ ಕಳಿಸ್ಕೊಟ್ಯಾ? ನೀನ್ಯಾಕೆ ಇಸ್ರಾಯೇಲ್ ದೇವರನ್ನ ಕೇಳಲಿಲ್ಲ? ಹಾಗಾಗಿ ನೀನು ಮಲಗಿರೋ ಈ ಹಾಸಿಗೆಯಿಂದ ಏಳೋದೇ ಇಲ್ಲ. ಸತ್ತೇ ಸಾಯ್ತಿಯ’” ಅಂದ. 17 ಎಲೀಯನ ಮೂಲಕ ಯೆಹೋವ ಹೇಳಿದ ಹಾಗೇ ರಾಜ ಅಹಜ್ಯ ತೀರಿಹೋದ. ರಾಜನಿಗೆ ಮಗನಿಲ್ಲದ ಕಾರಣ ಯೆಹೋರಾಮ*+ ರಾಜನಾದ. ಅವನು ಯೆಹೂದದ ರಾಜನಾದ ಯೆಹೋಷಾಫಾಟನ ಮಗ ಯೆಹೋರಾಮನ+ ಆಳ್ವಿಕೆಯ ಎರಡನೇ ವರ್ಷದಲ್ಲಿ ರಾಜನಾದ.
18 ಅಹಜ್ಯನ+ ಉಳಿದ ಜೀವನಚರಿತ್ರೆ ಮತ್ತು ಅವನು ಮಾಡಿದ ವಿಷ್ಯಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.