ಒಂದನೇ ಸಮುವೇಲ
2 ಆಮೇಲೆ ಹನ್ನ ದೇವ್ರಿಗೆ ಹೀಗೆ ಪ್ರಾರ್ಥನೆ ಮಾಡಿದಳು:
ನನ್ನ ಶತ್ರುಗಳ ವಿರುದ್ಧ ಧೈರ್ಯದಿಂದ ಮಾತಾಡ್ತೀನಿ,
ಯಾಕಂದ್ರೆ ನಿನ್ನ ರಕ್ಷಣಾ ಕಾರ್ಯಗಳಂದ್ರೆ ನನಗಿಷ್ಟ.
2 ಯೆಹೋವನೇ ನಿನ್ನಷ್ಟು ಪವಿತ್ರ ಯಾರೂ ಇಲ್ಲ,
ನಿನ್ನ ತರ ಯಾರೂ ಇಲ್ಲ,+
ನಮ್ಮ ದೇವರಷ್ಟು ಗಟ್ಟಿಯಾಗಿ ನಿಂತಿರೋ ಬಂಡೆ ಯಾವುದೂ ಇಲ್ಲ.+
3 ಅಹಂಕಾರದಿಂದ ಮಾತಾಡ್ತಾ ಇರಬೇಡಿ,
ನಿಮ್ಮ ಬಾಯಿಂದ ಸೊಕ್ಕಿನ ಒಂದು ಮಾತೂ ಬರಬಾರದು,
ಆತನು ಮನುಷ್ಯನ ಕೆಲಸಗಳನ್ನ ಸರಿಯಾಗಿ ತೂಗಿ ನೋಡ್ತಾನೆ.
4 ವೀರರ ಬಿಲ್ಲುಗಳು ಚೂರು ಚೂರಾಗುತ್ತೆ,
ಆದ್ರೆ ಬಲಹೀನರಿಗೆ ಬಲ ಸಿಗುತ್ತೆ.+
5 ಹೊಟ್ಟೆ ತುಂಬಾ ಊಟ ಮಾಡ್ತಿದ್ದವರು ಆಹಾರಕ್ಕಾಗಿ ಕೂಲಿ ಮಾಡ್ಲೇಬೇಕು,
ಆದ್ರೆ ಹಸಿವಿಂದ ಇರೋವ್ರಿಗೆ ಹಸಿವು ಇರಲ್ಲ.+
8 ಆತನು ದೀನನನ್ನ ಧೂಳಿಂದ ಎಬ್ಬಿಸಿ,
ಬಡವನನ್ನ ಬೂದಿಯ ರಾಶಿಯಿಂದ* ಎತ್ತಿ,+
ಪ್ರಧಾನರ ಜೊತೆ ಅವರು ಕೂತ್ಕೊಳ್ಳೋ ತರ ಮಾಡಿ,
ಅವ್ರಿಗೆ ಗೌರವದ ಕುರ್ಚಿ ಕೊಡ್ತಾನೆ.
ಭೂಮಿಯ ಆಧಾರಕಂಬಗಳು ಯೆಹೋವನಿಗೆ ಸೇರಿವೆ,+
ಆತನು ಅವುಗಳ ಮೇಲೆ ಫಲವತ್ತಾದ ನೆಲ ಸ್ಥಾಪಿಸಿದ್ದಾನೆ.
ಯಾಕಂದ್ರೆ ಒಬ್ಬ ಮನುಷ್ಯ ತನ್ನ ಸ್ವಂತ ಶಕ್ತಿಯಿಂದ ಜಯಶಾಲಿ ಆಗಲ್ಲ.+
10 ಯೆಹೋವ ತನ್ನ ವಿರುದ್ಧ ಹೋರಾಡೋ ವ್ಯಕ್ತಿಗಳನ್ನ ನಾಶ ಮಾಡ್ತಾನೆ,*+
ಆತನು ಅವ್ರ ಮೇಲೆ ತನ್ನ ಕೋಪ ತೋರಿಸುವಾಗ ಆಕಾಶದಿಂದ ಗುಡುಗ್ತಾನೆ.+
11 ಆಮೇಲೆ ಎಲ್ಕಾನ ರಾಮದಲ್ಲಿದ್ದ ತನ್ನ ಮನೆಗೆ ಹೋದ. ಹುಡುಗ ಪುರೋಹಿತ ಏಲಿಯ ಕೈಕೆಳಗಿದ್ದು ಯೆಹೋವನ ಸೇವಕನಾದ.+
12 ಏಲಿಯ ಮಕ್ಕಳು ಕೆಟ್ಟವರಾಗಿದ್ರು.+ ಯೆಹೋವನ ಮೇಲೆ ಗೌರವ ಇರಲಿಲ್ಲ. 13 ಪುರೋಹಿತರಿಗೆ ನ್ಯಾಯವಾಗಿ ಸಿಗಬೇಕಾಗಿದ್ದ ಪಾಲನ್ನ ಅವರು ಜನ್ರಿಂದ ತಗೊಳ್ಳೋ ವಿಷ್ಯದಲ್ಲಿ ತಪ್ಪಾಗಿ ನಡ್ಕೊಂಡ್ರು.+ ಯಾರಾದ್ರೂ ಬಲಿ ಅರ್ಪಿಸೋಕೆ ಬಂದ್ರೆ ಪುರೋಹಿತನ ಸೇವಕ ಮೂರು ಮುಳ್ಳುಗಳಿರೋ ಕವಲುಗೋಲು ಹಿಡ್ಕೊಂಡು ಬರ್ತಿದ್ದ. ಮಾಂಸ ಇನ್ನೂ ಬೇಯ್ತಾ ಇರುವಾಗ್ಲೇ, 14 ಬೋಗುಣಿಯಲ್ಲೋ ಎರಡು ಹಿಡಿಯ ಅಡುಗೆ ಪಾತ್ರೆಯಲ್ಲೋ ಕಡಾಯಿಯಲ್ಲೋ ಅಥವಾ ಒಂದು ಹಿಡಿಯ ಅಡುಗೆ ಪಾತ್ರೆಯಲ್ಲೋ ಮೂರು ಮುಳ್ಳುಗಳಿರೋ ಕವಲುಗೋಲನ್ನ ಚುಚ್ತಿದ್ದ. ಹೀಗೆ ಯಾವುದು ಸಿಗ್ತಿತ್ತೋ ಅದನ್ನ ಪುರೋಹಿತ ತಗೊಳ್ತಿದ್ದ. ಶೀಲೋಗೆ ಬರ್ತಿದ್ದ ಎಲ್ಲ ಇಸ್ರಾಯೇಲ್ಯರಿಗೆ ಏಲಿಯ ಮಕ್ಕಳು, ಅವ್ರ ಸೇವಕರು ಹೀಗೇ ಮಾಡ್ತಿದ್ರು. 15 ಬಲಿ ಕೊಡೋಕೆ ಬಂದಿರೋ ವ್ಯಕ್ತಿ ಅದ್ರ ಕೊಬ್ಬನ್ನ ಅರ್ಪಿಸೋ ಮುಂಚೆನೇ+ ಪುರೋಹಿತನ ಸೇವಕ ಬಂದು “ಪುರೋಹಿತನಿಗೆ ಸುಡೋಕೆ ಮಾಂಸ ಕೊಡು. ಬೇಯಿಸಿದ ಮಾಂಸವನ್ನ ಅವನು ನಿನ್ನಿಂದ ತಗೊಳ್ಳಲ್ಲ. ಹಸಿ ಮಾಂಸ ಮಾತ್ರ ತಗೊಳ್ತಾನೆ” ಅಂತಿದ್ದ. 16 ಆ ವ್ಯಕ್ತಿ ಸೇವಕನಿಗೆ “ಮೊದ್ಲು ಅವರು ಕೊಬ್ಬನ್ನ ಬಲಿಯಾಗಿ ಕೊಡ್ಲಿ.+ ಆಮೇಲೆ ನಿನಗೆ ಇಷ್ಟವಾದದ್ದನ್ನ ತಗೊ” ಅಂತ ಹೇಳಿದ್ರೆ ಸೇವಕ “ಇಲ್ಲ, ಈಗ್ಲೇ ಕೊಡು. ಕೊಡದಿದ್ರೆ ನಾನೇ ನಿನ್ನ ಕೈಯಿಂದ ಕಿತ್ಕೊಳ್ತೀನಿ!” ಅಂತಿದ್ದ. 17 ಹೀಗೆ ಅವರು ಯೆಹೋವನ ಬಲಿಗೆ ಗೌರವ ಕೊಡ್ತಾ ಇರಲಿಲ್ಲ. ಸೇವಕರ ಈ ಪಾಪ ಯೆಹೋವನ ಮುಂದೆ ದೊಡ್ಡ ತಪ್ಪು ಆಗಿತ್ತು.+
18 ಸಮುವೇಲ ಚಿಕ್ಕ ಹುಡುಗನಾಗಿದ್ರೂ ನಾರಿನಿಂದ ಮಾಡಿದ ಏಫೋದನ್ನ ತೊಟ್ಕೊಂಡು*+ ಯೆಹೋವನ ಸೇವೆ ಮಾಡ್ತಿದ್ದ.+ 19 ಪ್ರತಿ ವರ್ಷ ಅವನ ತಾಯಿ ಅವನಿಗಾಗಿ ತೋಳಿಲ್ಲದ ಚಿಕ್ಕ ಅಂಗಿ ಹೊಲಿತಿದ್ದಳು. ಅವಳು ವಾರ್ಷಿಕ ಬಲಿ ಅರ್ಪಿಸೋಕೆ ಗಂಡನ ಜೊತೆ ದೇವಾಲಯಕ್ಕೆ ಬರುವಾಗ ಅದನ್ನ ತರ್ತಿದ್ದಳು.+ 20 ಏಲಿ ಎಲ್ಕಾನನನ್ನ, ಅವನ ಹೆಂಡತಿಯನ್ನ ಆಶೀರ್ವದಿಸಿ ಎಲ್ಕಾನನಿಗೆ “ನೀನು ಯೆಹೋವನಿಗೆ ಒಪ್ಪಿಸಿದ ಈ ಮಗನ ಬದ್ಲು ಯೆಹೋವ ನಿನಗೆ ಈ ನಿನ್ನ ಹೆಂಡತಿಯಿಂದ ಇನ್ನೊಂದು ಮಗು ಕೊಡ್ಲಿ”+ ಅಂದ. ಆಮೇಲೆ ಅವರು ಮನೆಗೆ ವಾಪಸ್ ಹೋದ್ರು. 21 ಯೆಹೋವ ಹನ್ನಳ ಕಡೆ ಗಮನಹರಿಸಿದನು. ಅವಳು ಗರ್ಭಿಣಿ ಆದಳು.+ ಅವಳಿಗೆ ಮೂರು ಗಂಡು ಮಕ್ಕಳು, ಇಬ್ರು ಹೆಣ್ಣು ಮಕ್ಕಳು ಹುಟ್ಟಿದ್ರು. ಬಾಲಕ ಸಮುವೇಲ ಯೆಹೋವನ ಸನ್ನಿಧಿಯಲ್ಲೇ ಬೆಳಿತಾ ಬಂದ.+
22 ಏಲಿಗೆ ತುಂಬ ವಯಸ್ಸಾಗಿತ್ತು. ಅವನ ಮಕ್ಕಳು ಇಸ್ರಾಯೇಲ್ಯರ ಜೊತೆ ನಡ್ಕೊಳ್ತಿದ್ದ ರೀತಿ ಬಗ್ಗೆ,+ ದೇವದರ್ಶನದ ಡೇರೆಯ ಬಾಗಿಲಲ್ಲಿ ಸೇವೆ ಮಾಡ್ತಿದ್ದ ಸ್ತ್ರೀಯರ ಜೊತೆ ಇಡ್ತಿದ್ದ ಲೈಂಗಿಕ ಸಂಬಂಧದ ಬಗ್ಗೆ+ ಅವನು ಕೇಳಿಸ್ಕೊಂಡಿದ್ದ. 23 ಏಲಿ ತನ್ನ ಮಕ್ಕಳಿಗೆ “ನೀವ್ಯಾಕೆ ಇಂಥ ಕೆಲಸ ಮಾಡ್ತಿದ್ದೀರಾ? ಎಲ್ರಿಂದ ನಿಮ್ಮ ಬಗ್ಗೆ ಕೆಟ್ಟದ್ದನ್ನೇ ಕೇಳಿಸ್ಕೊಳ್ತಾ ಇದ್ದೀನಿ. 24 ನನ್ನ ಮಕ್ಕಳೇ, ಹಾಗೆ ಮಾಡಬೇಡಿ. ಯೆಹೋವನ ಜನ್ರ ಮಧ್ಯ ನಿಮ್ಮ ಬಗ್ಗೆ ಹಬ್ಬುತ್ತಿರೋ ವಿಷ್ಯಗಳು ಒಳ್ಳೇ ವಿಷ್ಯಗಳಲ್ಲ. 25 ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ವಿರುದ್ಧ ಪಾಪ ಮಾಡಿದ್ರೆ ಅವನಿಗಾಗಿ ಯಾರಾದ್ರೂ ಯೆಹೋವನಿಗೆ ಪ್ರಾರ್ಥನೆ ಮಾಡಬಹುದು.* ಆದ್ರೆ ಒಬ್ಬ ಮನುಷ್ಯ ಯೆಹೋವನ ವಿರುದ್ಧನೇ ಪಾಪ ಮಾಡಿದ್ರೆ+ ಅವನಿಗಾಗಿ ಯಾರು ತಾನೇ ಪ್ರಾರ್ಥಿಸ್ತಾರೆ?” ಅಂತಿದ್ದ. ಆದ್ರೂ ಅವರು ತಮ್ಮ ಅಪ್ಪನ ಮಾತು ಕೇಳಲಿಲ್ಲ. ಯೆಹೋವ ಅವ್ರನ್ನ ಸಾಯಿಸೋಕೆ ತೀರ್ಮಾನ ಮಾಡಿದನು.+ 26 ಅದೇ ಸಮಯದಲ್ಲಿ ಸಮುವೇಲ ಬೆಳೆದು ದೊಡ್ಡವನಾಗುತ್ತಾ ಯೆಹೋವನ ಮತ್ತು ಜನ್ರ ಮೆಚ್ಚಿಗೆ ಪಡ್ಕೊಂಡ.+
27 ದೇವರ ಮನುಷ್ಯನೊಬ್ಬ ಏಲಿ ಹತ್ರ ಬಂದು ಹೀಗಂದ: “ಯೆಹೋವ ಹೀಗೆ ಹೇಳ್ತಾನೆ ‘ನಿನ್ನ ತಂದೆಯ ಮನೆಯವರು ಈಜಿಪ್ಟಲ್ಲಿ ಫರೋಹನಿಗೆ ದಾಸರಾಗಿದ್ದಾಗ ನಾನು ಯಾರಂತ ಅವ್ರಿಗೆ ಸ್ಪಷ್ಟವಾಗಿ ಗೊತ್ತಿರಲಿಲ್ವಾ?+ 28 ಇಸ್ರಾಯೇಲಿನ ಎಲ್ಲ ಕುಲಗಳಿಂದ ನಾನು ನಿನ್ನ ಪೂರ್ವಜನನ್ನ ಪುರೋಹಿತ ಸೇವೆಗೆ ಆರಿಸ್ಕೊಂಡಿದ್ದೆ.+ ಅವನು ನನ್ನ ಯಜ್ಞವೇದಿ+ ತನಕ ಹೋಗಿ ಬಲಿ ಕೊಡ್ತಿದ್ದ. ಧೂಪ ಹಾಕ್ತಿದ್ದ.* ನನ್ನ ಮುಂದೆ ಏಫೋದನ್ನ ಹಾಕಿ ನಿಂತ್ಕೊಳ್ತಿದ್ದ. ಹಾಗಾಗಿ ಇಸ್ರಾಯೇಲ್ಯರು* ಬೆಂಕಿ ಮೂಲಕ ಕೊಡ್ತಿದ್ದ ಬಲಿಗಳ ಪಾಲನ್ನ ನಾನು ನಿನ್ನ ಪೂರ್ವಜನಿಗೆ, ಅವನ ವಂಶದವ್ರಿಗೆ ಕೊಡ್ತಿದ್ದೆ.+ 29 ನಾನು ವಾಸಿಸೋ ಸ್ಥಳದಲ್ಲಿ ಅರ್ಪಿಸಬೇಕು ಅಂತ ಹೇಳಿರೋ ನನ್ನ ಬಲಿಗಳಿಗೆ, ಅರ್ಪಣೆಗಳಿಗೆ ನೀವು ಗೌರವ ಕೊಡಲ್ವಾ?*+ ನನ್ನ ಜನ್ರಾಗಿರೋ ಇಸ್ರಾಯೇಲ್ಯರು ಅರ್ಪಿಸೋ ಪ್ರತಿ ಬಲಿಗಳಲ್ಲಿ ಉತ್ತಮ ಪಾಲನ್ನ ತಿಂದು ಕೊಬ್ಬಿರೋ ನಿನಗೆ, ನನಗಿಂತ ನಿನ್ನ ಮಕ್ಕಳೇ ಹೆಚ್ಚಾಗಿದ್ದಾರಾ?+
30 ಹಾಗಾಗಿ ಇಸ್ರಾಯೇಲ್ ದೇವರಾದ ಯೆಹೋವ ಹೇಳೋದು ಏನಂದ್ರೆ, “ನಿನ್ನ ಮನೆಯವರು, ನಿನ್ನ ಪೂರ್ವಜರ ಮನೆಯವರು ನನ್ನ ಮುಂದೆ ಯಾವಾಗ್ಲೂ ಸೇವೆ ಮಾಡ್ತಾ ಇರ್ತಾರೆ ಅಂತ ನಾನು ಹೇಳಿದ್ದು ನಿಜ.”+ ಆದ್ರೆ ಯೆಹೋವ ಈಗ ಹೀಗೆ ಹೇಳ್ತಿದ್ದಾನೆ: “ಇನ್ನು ಮುಂದೆ ಹಾಗೆ ಆಗೋಕೆ ನಾನು ಬಿಡಲ್ಲ. ಯಾಕಂದ್ರೆ ನನಗೆ ಗೌರವ ಕೊಡುವವರಿಗೆ ನಾನೂ ಗೌರವ ಕೊಡ್ತೀನಿ.+ ನನ್ನನ್ನ ಬೇಡ ಅಂದವ್ರನ್ನ ನಾನೂ ಬೇಡ ಅಂತೀನಿ.” 31 ನೋಡು! ನಿನ್ನ ಮತ್ತು ನಿನ್ನ ತಂದೆಯ ಮನೆಯವ್ರ ಅಧಿಕಾರನ* ಕಿತ್ಕೊಳ್ಳೋ ದಿನಗಳು ದೂರ ಇಲ್ಲ. ಆಗ ನಿನ್ನ ಮನೇಲಿ ಯಾರೂ ವಯಸ್ಸಾಗೋ ತನಕ ಉಳಿಯಲ್ಲ.+ 32 ಇಸ್ರಾಯೇಲಲ್ಲಿ ಒಳ್ಳೇದೇ ನಡೀತಿದ್ರೂ ನನ್ನ ಗುಡಾರದಲ್ಲಿ ನೀನು ಒಬ್ಬ ಶತ್ರುವನ್ನ ನೋಡ್ತೀಯ.+ ಮುಂದೆ ಯಾವತ್ತೂ ನಿನ್ನ ಮನೇಲಿ ವಯಸ್ಸಾದವರು ಇರಲ್ಲ. 33 ಆದ್ರೆ ನಿನ್ನ ಕುಟುಂಬದಲ್ಲಿ ಯಾರನ್ನ ನನ್ನ ಯಜ್ಞವೇದಿಯ ಸೇವೆ ಮಾಡೋಕೆ ಬಿಡ್ತಿನೋ ಅವನು ಕೂಡ ನಿನ್ನ ಕಣ್ಣುಗಳನ್ನ ಮಂಜಾಗೋ ತರ ಮಾಡ್ತಾನೆ. ನಿನಗೆ ಕಷ್ಟ ತರ್ತಾನೆ. ನಿನ್ನ ಮನೆಯವ್ರಲ್ಲಿ ತುಂಬ ಜನ್ರು ಮನುಷ್ಯರ ಕತ್ತಿಯಿಂದ ಸಾಯ್ತಾರೆ.+ 34 ನಿನ್ನ ಇಬ್ರು ಗಂಡು ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸರಿಗೆ ಏನಾಗುತ್ತೋ ಅದು ನಿನಗೆ ಸೂಚನೆ ಆಗಿರುತ್ತೆ. ಅವರಿಬ್ರೂ ಒಂದೇ ದಿನದಲ್ಲಿ ಸತ್ತು ಹೋಗ್ತಾರೆ.+ 35 ಆಮೇಲೆ ನಾನು ನನಗೋಸ್ಕರ ಒಬ್ಬ ನಂಬಿಗಸ್ತ ಪುರೋಹಿತನನ್ನ ನೇಮಿಸ್ತೀನಿ.+ ಅವನು ನನ್ನ ಆಸೆ ಪ್ರಕಾರ ನಡ್ಕೊಳ್ತಾನೆ. ನಾನು ಅವನಿಗಾಗಿ ಶಾಶ್ವತವಾಗಿ ನಿಲ್ಲೋ ಒಂದು ಮನೆ ಕಟ್ಟಿ ಕೊಡ್ತೀನಿ. ಅವನು ನನ್ನ ಅಭಿಷಿಕ್ತನಿಗೆ ಪುರೋಹಿತನಾಗಿ ಸೇವೆ ಮಾಡ್ತಾನೆ. 36 ನಿನ್ನ ಮನೇಲಿ ಯಾರಾದ್ರೂ ಉಳಿದ್ರೆ ಅವನು ದುಡಿಮೆಗಾಗಿ, ಒಂದು ತುಂಡು ರೊಟ್ಟಿಗಾಗಿ ನನ್ನ ಈ ಪುರೋಹಿತನ ಹತ್ರ ಬಂದು ಬಗ್ಗಿ ನಮಸ್ಕಾರ ಮಾಡಿ “ದಯವಿಟ್ಟು ನನ್ನನ್ನ ಯಾವುದಾದ್ರೂ ಒಂದು ಪುರೋಹಿತ ಸೇವೆಗೆ ನೇಮಿಸು. ಆಗ ನನಗೆ ತಿನ್ನೋಕೆ ಒಂದು ತುಂಡು ರೊಟ್ಟಿ ಆದ್ರೂ ಸಿಗುತ್ತೆ”+ ಅಂತ ಕೇಳ್ಕೊಳ್ತಾನೆ.’”