ಯೋಹಾನನಿಗೆ ಕೊಟ್ಟ ಪ್ರಕಟನೆ
20 ಆಮೇಲೆ ಒಬ್ಬ ದೇವದೂತ ಸ್ವರ್ಗದಿಂದ ಇಳಿದು ಬರೋದನ್ನ ನೋಡ್ದೆ. ಅವನ ಕೈಯಲ್ಲಿ ಅಗಾಧ ಸ್ಥಳದ ಬೀಗದ ಕೈ+ ಮತ್ತು ಒಂದು ದೊಡ್ಡ ಸರಪಳಿ ಇತ್ತು. 2 ಅವನು ಪಿಶಾಚ,+ ಸೈತಾನ,+ ಹಳೇ ಹಾವು+ ಅಂತ ಹೆಸ್ರಿದ್ದ ಘಟಸರ್ಪವನ್ನ+ ಹಿಡಿದು 1,000 ವರ್ಷ ಬಂಧನದಲ್ಲಿಟ್ಟ. 3 ದೇಶಗಳ ಜನ್ರನ್ನ ಮೋಸಮಾಡದ ಹಾಗೆ ಅವನನ್ನ ಅಗಾಧ ಸ್ಥಳಕ್ಕೆ+ ತಳ್ಳಿ ಅದನ್ನ ಮುಚ್ಚಿ ಅದಕ್ಕೆ ಮುದ್ರೆ ಹಾಕಿದ. 1,000 ವರ್ಷ ಆದ್ಮೇಲೆ ಅವನಿಗೆ ಸ್ವಲ್ಪ ಸಮಯಕ್ಕೆ ಬಿಡುಗಡೆ ಆಗುತ್ತೆ.+
4 ಆಮೇಲೆ ನಾನು ಸಿಂಹಾಸನಗಳನ್ನ ನೋಡ್ದೆ. ಅದ್ರ ಮೇಲೆ ಕೂತಿದ್ದವ್ರಿಗೆ ದೇವರು ನ್ಯಾಯತೀರ್ಪು ಮಾಡೋ ಅಧಿಕಾರ ಕೊಟ್ಟಿದ್ದ. ಅಷ್ಟೇ ಅಲ್ಲ ಯೇಸು ಬಗ್ಗೆ ಮಾತಾಡಿದ್ದಕ್ಕೆ, ದೇವರ ಬಗ್ಗೆ ಮಾತಾಡಿದ್ದಕ್ಕೆ ಕೊಲೆ* ಆದವ್ರನ್ನ ನೋಡ್ದೆ. ಕಾಡುಪ್ರಾಣಿಯನ್ನ ಅದ್ರ ಮೂರ್ತಿಯನ್ನ ಆರಾಧಿಸದೇ ಇದ್ದವ್ರನ್ನ ಮತ್ತು ತಮ್ಮ ಹಣೆ ಮೇಲೆ, ಕೈ ಮೇಲೆ ಅದ್ರ ಗುರುತು ಹಾಕಿಸ್ಕೊಳ್ಳದೇ ಇದ್ದವ್ರನ್ನೂ ನಾನು ನೋಡ್ದೆ.+ ಅವ್ರಿಗೆ ಮತ್ತೆ ಜೀವ ಸಿಕ್ತು. ಅವರು ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳಿದ್ರು.+ 5 (ಸತ್ತವ್ರಲ್ಲಿ ಉಳಿದವ್ರಿಗೆ+ ಆ 1,000 ವರ್ಷ ಮುಗಿಯೋ ತನಕ ಮತ್ತೆ ಜೀವ ಸಿಗಲಿಲ್ಲ.) ಇವ್ರೇ ಮೊದಲ್ನೇ ಸಲ ಮತ್ತೆ ಜೀವ ಪಡ್ಕೊಂಡವರು.+ 6 ಅವರು ಖುಷಿಯಾಗಿ+ ಪವಿತ್ರರಾಗಿ ಇರ್ತಾರೆ. ಎರಡ್ನೇ ಮರಣಕ್ಕೆ+ ಇವ್ರ ಮೇಲೆ ಅಧಿಕಾರ ಇಲ್ಲ.+ ಆದ್ರೆ ಅವರು ದೇವರ ಮತ್ತು ಕ್ರಿಸ್ತನ ಪುರೋಹಿತರಾಗಿ ಇರ್ತಾರೆ.+ ಕ್ರಿಸ್ತನ ಜೊತೆ 1,000 ವರ್ಷ ರಾಜರಾಗಿ ಆಳ್ತಾರೆ.+
7 1,000 ವರ್ಷ ಆದ ತಕ್ಷಣ ಸೈತಾನನಿಗೆ ಬಿಡುಗಡೆ ಆಗುತ್ತೆ. 8 ಅವನು ಹೊರಗೆ ಬಂದು ಭೂಮಿಯ ನಾಲ್ಕು ಮೂಲೆಗಳಲ್ಲಿರೋ ಗೋಗ್ ಮತ್ತು ಮಾಗೋಗ್ ಅನ್ನೋ ದೇಶಗಳನ್ನ ದಾರಿತಪ್ಪಿಸೋಕೆ, ಅವ್ರನ್ನ ಯುದ್ಧಕ್ಕಾಗಿ ಒಟ್ಟುಸೇರಿಸೋಕೆ ಹೋಗ್ತಾನೆ. ಅವ್ರ ಸಂಖ್ಯೆ ಸಮುದ್ರದ ಮರಳಿನಷ್ಟು ಇರುತ್ತೆ. 9 ಅವರು ಇಡೀ ಭೂಮಿಯಲ್ಲಿ ಹರಡ್ಕೊಂಡು ಪವಿತ್ರ ಜನ್ರ ಸೈನ್ಯವನ್ನ, ಪ್ರೀತಿಯ ಪಟ್ಟಣವನ್ನ ಮುತ್ಕೊಂಡ್ರು. ಆದ್ರೆ ಸ್ವರ್ಗದಿಂದ ಬೆಂಕಿ ಬಂದು ಅವ್ರನ್ನ ಸುಟ್ಟುಹಾಕ್ತು.+ 10 ಅವ್ರನ್ನ ದಾರಿತಪ್ಪಿಸ್ತಿದ್ದ ಸೈತಾನನನ್ನ ಬೆಂಕಿ ಮತ್ತು ಗಂಧಕದ ಕೆರೆಗೆ ಆ ದೇವದೂತ ತಳ್ಳಿದ. ಅಲ್ಲಿ ಈಗಾಗ್ಲೇ ಕಾಡುಪ್ರಾಣಿ,+ ಸುಳ್ಳು ಪ್ರವಾದಿ ಇದ್ರು.+ ಅಲ್ಲಿ ಅವರು ಹಗಲೂ ರಾತ್ರಿ ಯಾವಾಗ್ಲೂ ಹಿಂಸೆ ಅನುಭವಿಸ್ತಾರೆ.
11 ಆಮೇಲೆ ನಾನು ಬೆಳ್ಳಗಿರೋ ದೊಡ್ಡ ಸಿಂಹಾಸನವನ್ನ ನೋಡ್ದೆ. ಅದ್ರ ಮೇಲೆ ದೇವರು ಕೂತಿದ್ದನು.+ ಆತನ ಮುಂದಿಂದ ಭೂಮಿ ಮತ್ತು ಆಕಾಶ ಓಡಿಹೋಯ್ತು.+ ಆಮೇಲೆ ಅದು ಕಾಣಿಸ್ಲೇ ಇಲ್ಲ. 12 ಸಿಂಹಾಸನದ ಮುಂದೆ ಸತ್ತವರು ನಿಂತಿರೋದನ್ನ ನೋಡ್ದೆ. ಅವ್ರಲ್ಲಿ ದೊಡ್ಡವರು, ಚಿಕ್ಕವರು ಇದ್ರು. ಆಗ ದೇವರು ಸುರುಳಿಗಳನ್ನ ತೆರೆದನು. ಆಮೇಲೆ ಇನ್ನೊಂದು ಸುರುಳಿಯನ್ನ ದೇವರು ತೆರೆದನು. ಅದು ಜೀವದ ಸುರುಳಿ.+ ಸುರುಳಿಗಳಲ್ಲಿ ಇದ್ದ ವಿಷ್ಯಗಳ ಆಧಾರದ ಮೇಲೆ ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಆತನು ಸತ್ತವ್ರಿಗೆ ನ್ಯಾಯತೀರ್ಪು ಕೊಟ್ಟನು.+ 13 ಸಮುದ್ರ ತನ್ನೊಳಗೆ ಇದ್ದ ಸತ್ತವ್ರನ್ನ ಒಪ್ಪಿಸ್ತು. ಸಾವು ಮತ್ತು ಸಮಾಧಿನೂ* ಸತ್ತವ್ರನ್ನ ಒಪ್ಪಿಸಿದ್ವು. ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಎಲ್ರಿಗೂ ನ್ಯಾಯತೀರ್ಪು ಆಯ್ತು.+ 14 ಆಮೇಲೆ ಸಾವು+ ಮತ್ತು ಸಮಾಧಿಯನ್ನ* ಆ ದೇವದೂತ ಬೆಂಕಿ ಕೆರೆಗೆ ತಳ್ಳಿಬಿಟ್ಟ. ಈ ಬೆಂಕಿ ಕೆರೆ ಎರಡನೇ ಮರಣವನ್ನ ಸೂಚಿಸುತ್ತೆ.+ 15 ಅಷ್ಟೇ ಅಲ್ಲ ಜೀವದ ಪುಸ್ತಕದಲ್ಲಿ ಯಾರ ಹೆಸ್ರು ಇಲ್ವೋ+ ಅವ್ರನ್ನೆಲ್ಲ ಆ ಬೆಂಕಿ ಕೆರೆಗೆ ತಳ್ಳಿಬಿಟ್ಟ.+