ಧರ್ಮೋಪದೇಶಕಾಂಡ
19 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡಬೇಕಂತಿರೋ ದೇಶದಲ್ಲಿ ವಾಸಿಸ್ತಿರೋ ಜನ್ರನ್ನ ನಾಶ ಮಾಡಿ ಅವ್ರ ದೇಶನ ಯೆಹೋವ ನಿಮಗೆ ಕೊಡ್ತಾನೆ. ಅದನ್ನ ನಿಮ್ಮದಾಗಿ ಮಾಡ್ಕೊಂಡು ಅವ್ರ ಪಟ್ಟಣಗಳಲ್ಲಿ, ಮನೆಗಳಲ್ಲಿ ವಾಸಿಸ್ತೀರ.+ 2 ನಿಮ್ಮ ದೇವರಾದ ಯೆಹೋವ ಕೊಡೋ ಆ ದೇಶದಲ್ಲಿ ನೀವು ಆಶ್ರಯನಗರ ಮಾಡೋಕೆ ಮೂರು ಪಟ್ಟಣಗಳನ್ನ ಆರಿಸ್ಕೊಳ್ಳಬೇಕು.+ 3 ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ಆ ದೇಶನ ಮೂರು ಭಾಗ ಮಾಡಿ ಒಂದೊಂದು ಭಾಗದಲ್ಲಿ ಒಂದೊಂದು ಆಶ್ರಯನಗರ ಇರಬೇಕು. ಅಲ್ಲಿಗೆ ಹೋಗೋಕೆ ರಸ್ತೆನೂ ಮಾಡ್ಬೇಕು. ಆಗ ಯಾರನ್ನಾದ್ರು ಸಾಯಿಸಿದವನು ಅಲ್ಲಿ ಓಡಿಹೋಗೋಕೆ ಸುಲಭ ಆಗುತ್ತೆ.
4 ಆಶ್ರಯನಗರದ ವಿಷ್ಯದಲ್ಲಿ ಈ ನಿಯಮ ಪಾಲಿಸಬೇಕು: ಯಾರಾದ್ರು ಅಪ್ಪಿತಪ್ಪಿ ಇನ್ನೊಬ್ಬನನ್ನ ಕೊಂದ್ರೆ ಸತ್ತವನ ಮೇಲೆ ಈ ಹಿಂದೆ ಅವನಿಗೆ ಯಾವುದೇ ದ್ವೇಷ ಇರದಿದ್ರೆ ಅವನು ಆಶ್ರಯನಗರಕ್ಕೆ ಓಡಿಹೋಗಿ ಜೀವ ಉಳಿಸ್ಕೊಬಹುದು.+ 5 ಉದಾಹರಣೆಗೆ, ಇಬ್ರು ಕಟ್ಟಿಗೆ ತರೋಕೆ ಕಾಡಿಗೆ ಹೋಗಿ, ಒಬ್ಬ ಕೊಡಲಿಯಿಂದ ಮರ ಕಡಿತಾ ಇರುವಾಗ ಆ ಕೊಡಲಿ ಜಾರಿ ಇನ್ನೊಬ್ಬನ ಮೇಲೆ ಬಿದ್ದು ಅವನು ಸತ್ರೆ, ಸಾಯಿಸಿದ ಆ ವ್ಯಕ್ತಿ ಯಾವುದಾದ್ರೂ ಆಶ್ರಯನಗರಕ್ಕೆ ಓಡಿಹೋಗಿ ಜೀವ ಉಳಿಸ್ಕೊಬಹುದು.+ 6 ಆ ಆಶ್ರಯನಗರ ತುಂಬ ದೂರ ಇದ್ರೆ ಸೇಡು ತೀರಿಸ್ಕೊಳ್ಳಬೇಕು ಅಂತಿರೋ ವ್ಯಕ್ತಿ+ ಕೋಪದಿಂದ ಅವನನ್ನ ಅಟ್ಟಿಸ್ಕೊಂಡು ದಾರಿಯಲ್ಲೇ ಕೊಲ್ಲೋ ಸಾಧ್ಯತೆ ಇದೆ. ಆದ್ರೆ ಹಾಗೆ ಆಗಬಾರದು. ಆ ವ್ಯಕ್ತಿಗೆ ಸತ್ತವನ ಮೇಲೆ ಈ ಹಿಂದೆ ಯಾವ ದ್ವೇಷನೂ ಇಲ್ದೆ ಇರೋದ್ರಿಂದ ಅವನನ್ನ ಸಾಯಿಸೋದು ಸರಿಯಲ್ಲ.+ 7 ಹಾಗಾಗಿ ಆಶ್ರಯನಗರ ಮಾಡೋಕೆ ಮೂರು ಪಟ್ಟಣಗಳನ್ನ ಆರಿಸಬೇಕು ಅಂತ ನಿಮಗೆ ಆಜ್ಞೆ ಕೊಟ್ಟಿದ್ದೀನಿ.
8 ನಿಮ್ಮ ದೇವರಾದ ಯೆಹೋವ ನಿಮ್ಮ ಪೂರ್ವಜರಿಗೆ ಮಾತುಕೊಟ್ಟ+ ಹಾಗೆ ನಿಮ್ಮ ಪ್ರದೇಶದ ಗಡಿನ ವಿಶಾಲ ಮಾಡಿ ಈ ಇಡೀ ದೇಶನ ನಿಮ್ಮ ವಶಕ್ಕೆ ಕೊಟ್ಟ ಮೇಲೆ+ 9 ಇನ್ನೂ ಮೂರು ಪಟ್ಟಣಗಳನ್ನ ನೀವು ಆಶ್ರಯನಗರಗಳಾಗಿ ಆರಿಸ್ಕೊಳ್ಳಬೇಕು.+ ನಾನು ಇವತ್ತು ಕೊಟ್ಟ ಆಜ್ಞೆ ಪ್ರಕಾರ ನಿಮ್ಮ ದೇವರಾದ ಯೆಹೋವನನ್ನ ಪ್ರೀತಿಸಿದ್ರೆ, ಎಲ್ಲ ವಿಷ್ಯದಲ್ಲಿ ಆತನು ಹೇಳೋ ರೀತಿ ನಡ್ಕೊಂಡ್ರೆ+ ಮಾತ್ರ ನಿಮಗೆ ಈ ಇಡೀ ದೇಶ ಕೊಡ್ತಾನೆ. 10 ನೀವು ಈ ರೀತಿ ಆಶ್ರಯನಗರಗಳನ್ನ ಆರಿಸ್ಕೊಂಡ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ನಿರಪರಾಧಿಗಳ ಕೊಲೆ ಆಗಲ್ಲ.+ ನಿಮ್ಮ ಮೇಲೆನೂ ಕೊಲೆಯ ಅಪರಾಧ ಬರಲ್ಲ.+
11 ಒಬ್ಬನಿಗೆ ಇನ್ನೊಬ್ಬನ ಮೇಲೆ ದ್ವೇಷ ಇದ್ದು+ ಅವನ ಮೇಲೆ ದಾಳಿ ಮಾಡೋಕೆ ಕಾಯ್ತಾ ಅವಕಾಶ ಸಿಕ್ಕಾಗ ಅವನನ್ನ ಸಾಯೋ ಹಾಗೆ ಹೊಡೆದ್ರೆ, ಅದ್ರಿಂದ ಅವನು ಸತ್ರೆ, ಹೊಡೆದವನು ಆಶ್ರಯನಗರಕ್ಕೆ ಓಡಿಹೋದ್ರೆ 12 ಅವನ ಪಟ್ಟಣದ ಹಿರಿಯರು ಅವನನ್ನ ಆಶ್ರಯನಗರದಿಂದ ಕರೆಸಿ ಸೇಡು ತೀರಿಸ್ಕೊಳ್ಳೋನ ಕೈಗೆ ಒಪ್ಪಿಸಬೇಕು. ಅವನು ಸಾಯಬೇಕು.+ 13 ನೀವು ಅವನಿಗೆ ಕನಿಕರ ತೋರಿಸಬಾರದು. ನಿರಪರಾಧಿಯ ರಕ್ತ ಸುರಿಸಿದ ಅಪರಾಧವನ್ನ ಇಸ್ರಾಯೇಲ್ಯರ ಮಧ್ಯದಿಂದ ತೆಗೆದುಹಾಕಬೇಕು.+ ಆಗ ನಿಮಗೆ ಒಳ್ಳೇದಾಗುತ್ತೆ.
14 ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶದಲ್ಲಿ ನಿಮಗೆ ಆಸ್ತಿ ಸಿಕ್ಕಾಗ ನಿಮ್ಮ ಪೂರ್ವಜರು ಹಾಕಿದ ಗಡಿ ಸರಿಸಿ* ನಿಮ್ಮ ಅಕ್ಕಪಕ್ಕದವರ ಆಸ್ತಿ ಒಳಗೆ ಹಾಕಬಾರದು.+
15 ಒಬ್ಬ ತಪ್ಪನ್ನ ಅಥವಾ ಪಾಪವನ್ನ ಮಾಡಿದ್ದಾನೆ ಅಂತ ತೀರ್ಮಾನಿಸೋಕೆ ಒಬ್ಬನೇ ಒಬ್ಬ ಸಾಕ್ಷಿ ಹೇಳಿದ್ರೆ ಸಾಕಾಗಲ್ಲ.+ ಇಬ್ರು ಅಥವಾ ಮೂರು ಜನ ಸಾಕ್ಷಿ ಹೇಳಿದ ಮೇಲೆನೇ ತೀರ್ಮಾನ ತಗೊಬೇಕು.+ 16 ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಕೆಟ್ಟದು ಮಾಡಬೇಕು ಅಂತ ಸುಳ್ಳು ಸಾಕ್ಷಿ ಹೇಳಿ ಅವನ ಮೇಲೆ ದೊಡ್ಡ ಆರೋಪ ಹೊರಿಸಿದ್ರೆ+ 17 ಆ ಇಬ್ರೂ ಯೆಹೋವನ ಮುಂದೆ ಅಂದ್ರೆ ಪುರೋಹಿತರ, ನ್ಯಾಯಾಧೀಶರ ಮುಂದೆ ಬರಬೇಕು.+ 18 ಆ ನ್ಯಾಯಾಧೀಶರು ಅದ್ರ ಬಗ್ಗೆ ಚೆನ್ನಾಗಿ ತನಿಖೆ ಮಾಡಬೇಕು.+ ಆಗ ಆ ವ್ಯಕ್ತಿ ಸುಳ್ಳು ಸಾಕ್ಷಿ ಹೇಳಿ ಅವನ ಮೇಲೆ ಸುಳ್ಳಾರೋಪ ಹಾಕಿದ್ದಾನೆ ಅಂತ ಗೊತ್ತಾದ್ರೆ 19 ಆ ವ್ಯಕ್ತಿ ಅವನಿಗೆ ಏನು ಮಾಡಬೇಕಂತ ಸಂಚು ಮಾಡಿದ್ದನೋ ಅದನ್ನೇ ನೀವು ಆ ವ್ಯಕ್ತಿಗೆ ಮಾಡಬೇಕು.+ ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನವನ್ನ ತೆಗಿಬೇಕು.+ 20 ಆಗ ಇದನ್ನ ಕೇಳಿಸ್ಕೊಂಡ ಜನ್ರು ಹೆದರಿ ಮುಂದೆ ಯಾವತ್ತೂ ಅಂಥ ಕೆಟ್ಟ ಕೆಲಸ ಮಾಡಲ್ಲ.+ 21 ನೀವು ಅಂಥವ್ರಿಗೆ ಕನಿಕರ ತೋರಿಸಬಾರದು.+ ಪ್ರಾಣಕ್ಕೆ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಕಾಲು ತೆಗಿಬೇಕು.+