ಯೆಶಾಯ
ನನ್ನ ಸಾಲಗಾರರಲ್ಲಿ ಯಾರಿಗೆ ನಾನು ನಿಮ್ಮನ್ನ ಮಾರಿಬಿಟ್ಟೆ?
ನೋಡಿ! ನಿಮ್ಮ ಸ್ವಂತ ತಪ್ಪುಗಳ ಕಾರಣ+ ನಿಮ್ಮನ್ನ ಮಾರಲಾಯ್ತು,
ನಿಮ್ಮ ಸ್ವಂತ ಅಪರಾಧಗಳಿಂದಾಗಿ ನಿಮ್ಮ ತಾಯಿಯನ್ನ ಕಳಿಸಿಬಿಡಲಾಯ್ತು.+
2 ಹೀಗಿರುವಾಗ ನಾನು ಬಂದಾಗ ಯಾಕಿಲ್ಲಿ ಯಾರೂ ಇರಲಿಲ್ಲ?
ನಾನು ಕರೆದಾಗ ಯಾಕೆ ಯಾರೂ ಉತ್ರ ಕೊಡಲಿಲ್ಲ?+
ನನ್ನ ಕೈ ರಕ್ಷಿಸೋಕಾಗದಷ್ಟು ಚಿಕ್ಕದಾಗಿದ್ಯಾ?
ಕಾಪಾಡೋ ಶಕ್ತಿ ನನಗಿಲ್ವಾ?+
ಬಾಯಾರಿಕೆಯಿಂದ ಅವುಗಳಲ್ಲಿರೋ ಮೀನುಗಳು ಸತ್ತುಹೋಗ್ತವೆ,
ಸಾಕಷ್ಟು ನೀರಿಲ್ಲದೆ ಅವು ಕೊಳೆತುಹೋಗ್ತವೆ.
ಪ್ರತಿದಿನ ಬೆಳಿಗ್ಗೆ ಆತನು ನನ್ನನ್ನ ಎಬ್ಬಿಸ್ತಾನೆ, ನನ್ನ ಕಿವಿಗಳನ್ನ ತೆರಿತಾನೆ.
ಕಲಿಯುವವರು ಗಮನಕೊಟ್ಟು ಕೇಳಿಸ್ಕೊಳ್ಳೋ ತರ ನಾನು ಆತನ ಮಾತಿಗೆ ಕಿವಿಗೊಡಬೇಕಂತ ಹಾಗೆ ಮಾಡ್ತಾನೆ.+
ನಾನು ವಿರುದ್ಧ ದಿಕ್ಕಿಗೆ ತಿರುಗಿಕೊಳ್ಳಲಿಲ್ಲ.+
6 ನನ್ನನ್ನ ಹೊಡೆಯುವವ್ರಿಗೆ ನನ್ನ ಬೆನ್ನನ್ನೂ
ಗಡ್ಡ ಕೀಳುವವ್ರಿಗೆ ನನ್ನ ಗದ್ದವನ್ನೂ ಒಪ್ಪಿಸಿದೆ.
ನನ್ನನ್ನ ಅವಮಾನಿಸ್ತಿರುವಾಗ, ನನ್ನ ಮೇಲೆ ಉಗುಳೋವಾಗ ನಾನು ನನ್ನ ಮುಖನ ಮರೆಮಾಡಲಿಲ್ಲ.+
7 ಆದರೆ ವಿಶ್ವದ ರಾಜನಾದ ಯೆಹೋವ ನನಗೆ ಸಹಾಯ ಮಾಡ್ತಾನೆ.+
ಅದಕ್ಕೇ ಅವಮಾನ ನನಗೆ ಅವಮಾನ ಅಂತನೇ ಅನಿಸಲ್ಲ.
ನಾನು ನನ್ನ ಮುಖವನ್ನ ಗಡಸು ಕಲ್ಲಿನ ತರ ಮಾಡ್ಕೊಂಡೆ.+
ಅಷ್ಟೇ ಅಲ್ಲ ನಾನು ಅಪಮಾನಕ್ಕೆ ಗುರಿಯಾಗಲ್ಲ ಅಂತ ನನಗೆ ಚೆನ್ನಾಗಿ ಗೊತ್ತು.
8 ನನ್ನನ್ನ ನೀತಿವಂತ ಅಂತ ಹೇಳೋ ದೇವರು ನನ್ನ ಹತ್ರ ಇದ್ದಾನೆ.
ಯಾರು ನನ್ನ ಮೇಲೆ ಆರೋಪ ಹೊರಿಸ್ತಾರೆ?*+
ಅವರು ಬಂದು ಮುಖಾಮುಖಿಯಾಗಿ ನನ್ನ ಜೊತೆ ಮಾತಾಡಲಿ.
ಯಾರು ನನ್ನ ವಿರುದ್ಧ ಮೊಕದ್ದಮೆ ಹೂಡ್ತಾರೆ?
ಅವರು ನನ್ನ ಹತ್ರ ಬರಲಿ.
9 ನೋಡಿ! ವಿಶ್ವದ ರಾಜನಾದ ಯೆಹೋವ ನನಗೆ ಸಹಾಯ ಮಾಡ್ತಾನೆ.
ನಾನು ಅಪರಾಧಿ ಅಂತ ತೀರ್ಪು ಮಾಡುವವರು ಯಾರು?
ಅವ್ರೆಲ್ಲ ಬಟ್ಟೆ ತರ ಸವೆದು ಹೋಗ್ತಾರೆ.
ನುಸಿ ಅವ್ರನ್ನ ತಿಂದುಹಾಕುತ್ತೆ.
10 ನಿಮ್ಮಲ್ಲಿ ಯಾರು ಯೆಹೋವನಿಗೆ ಭಯಪಡ್ತಾರೋ,
ಯಾರು ಆತನ ಸೇವಕನ ಸ್ವರ ಕೇಳಿಸ್ಕೊಳ್ತಾರೋ,+
ಯಾರು ಸ್ವಲ್ಪನೂ ಬೆಳಕಿಲ್ಲದ ಗಾಢಾಂಧಕಾರದಲ್ಲಿ ನಡಿತಾರೋ,
ಅಂಥವರಿಗೆ ಯೆಹೋವನ ಹೆಸ್ರು ಭರವಸೆ ಕೊಡಲಿ, ಅವರು ತಮ್ಮ ದೇವ್ರನ್ನ ಆಸರೆಯಾಗಿ ಮಾಡ್ಕೊಳ್ಳಲಿ.*
11 “ಬೆಂಕಿ ಹಚ್ಚುತ್ತಿರುವವ್ರೇ,
ಕಿಡಿ ಹಾರೋ ತರ ಮಾಡ್ತಿರುವವ್ರೇ,
ನೀವು ನಿಮ್ಮ ಬೆಂಕಿಯ ಬೆಳಕಲ್ಲಿ,
ನೀವು ಹೊತ್ತಿಸಿರೋ ಕಿಡಿಯ ಮಧ್ಯದಲ್ಲಿ ನಡಿರಿ.
ನಾನು ನಿಮಗೆ ವಿಧಿಸೋ ಶಿಕ್ಷೆ ಇದೇ:
ನೀವು ವಿಪರೀತ ನೋವಿಂದ ನರಳ್ತೀರ.