ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ. ದಾವೀದನ ಮಧುರ ಗೀತೆ.
139 ಯೆಹೋವ, ನೀನು ನನ್ನನ್ನ ಪರೀಕ್ಷಿಸಿದ್ದೀಯ, ನನ್ನ ಬಗ್ಗೆ ತಿಳ್ಕೊಂಡಿದ್ದೀಯ.+
2 ನಾನು ಯಾವಾಗ ಕೂತ್ಕೊಳ್ತೀನಿ, ಯಾವಾಗ ನಿಂತ್ಕೊಳ್ತೀನಿ ಅಂತ ನಿಂಗೊತ್ತು.+
ದೂರದಿಂದಾನೇ ನೀನು ನನ್ನ ಯೋಚನೆನ ಕಂಡುಹಿಡಿತೀಯ.+
3 ನಾನು ನಡೆದ್ರೂ, ಮಲಗಿದ್ರೂ ನೀನು ನನ್ನನ್ನ ಗಮನಿಸ್ತೀಯ.*
ನನ್ನ ಚಲನವಲನಗಳೂ ನಿನಗೆ ಚೆನ್ನಾಗಿ ಗೊತ್ತು.+
5 ನೀನು ನನ್ನ ಮುಂದೆ, ಹಿಂದೆ, ಸುತ್ತಲೂ ಇದ್ದೀಯ.
ನನ್ನ ಮೇಲೆ ನಿನ್ನ ಕೈ ಇಡ್ತೀಯ.
7 ನಿನ್ನ ಪವಿತ್ರಶಕ್ತಿಯಿಂದ ತಪ್ಪಿಸ್ಕೊಂಡು ನಾನು ಎಲ್ಲಿಗೆ ಹೋಗೋಕೆ ಆಗುತ್ತೆ?
ನಿನಗೆ ಕಾಣದಂತೆ ಎಲ್ಲಿ ಹೋಗಿ ನಾನು ಬಚ್ಚಿಟ್ಕೊಳ್ಳಲಿ?+
9 ನಾನು ಬೆಳದಿಂಗಳ ರೆಕ್ಕೆಗಳನ್ನ ಹಾಕೊಂಡು ಹಾರಿಹೋಗಿ
ತುಂಬ ದೂರ ಇರೋ ಸಮುದ್ರತೀರದಲ್ಲಿ ಇದ್ರೂ,
10 ಅಲ್ಲೂ ನಿನ್ನ ಕೈ ನನ್ನನ್ನ ನಡಿಸುತ್ತೆ,
ನಿನ್ನ ಬಲಗೈ ನನಗೆ ಆಸರೆಯಾಗಿರುತ್ತೆ.+
11 “ಕತ್ತಲು ನನ್ನನ್ನ ಬಚ್ಚಿಡುತ್ತೆ!” ಅಂತ ಅಂದ್ಕೊಂಡ್ರೆ,
ನನ್ನ ಸುತ್ತಲೂ ಇರೋ ಕತ್ತಲು ಬೆಳಕಾಗಿಬಿಡುತ್ತೆ.
12 ನಿನಗೆ ಕತ್ತಲೆ ಕತ್ತಲಲ್ಲ,
ರಾತ್ರಿಯ ಕಾರ್ಗತ್ತಲು ನಿನಗೆ ಮಧ್ಯಾಹ್ನದ ಬೆಳಕಿನ ತರ ಇರುತ್ತೆ,+
ರಾತ್ರಿ ನಿನಗೆ ಹಗಲಿಗೆ ಸಮ.+
14 ನಾನು ನಿನ್ನನ್ನ ಹೊಗಳ್ತೀನಿ, ಯಾಕಂದ್ರೆ ನೀನು ನನ್ನನ್ನ ಆಶ್ಚರ್ಯ ಹುಟ್ಟಿಸೋ ಹಾಗೆ ಅದ್ಭುತವಾಗಿ ರಚಿಸಿದ್ದೀಯ.+
ನಿನ್ನ ಕೆಲಸಗಳು ಅದ್ಭುತ,+
ಅದು ನನಗೆ ಚೆನ್ನಾಗಿ ಗೊತ್ತು.
15 ರಹಸ್ಯ ಸ್ಥಳದಲ್ಲಿ ನನ್ನನ್ನ ರೂಪಿಸ್ತಿದ್ದಾಗ,
ಅಮ್ಮನ ಹೊಟ್ಟೆಯಲ್ಲಿ ನಾನು ಬೆಳೀತಿದ್ದಾಗ,*
ನನ್ನ ಎಲುಬುಗಳೂ ನಿನಗೆ ಮರೆಯಾಗಿ ಇರಲಿಲ್ಲ.+
16 ನಾನು ಇನ್ನೂ ಪಿಂಡವಾಗಿ* ಇದ್ದಾಗಲೇ ನಿನ್ನ ಕಣ್ಣು ನನ್ನನ್ನ ನೋಡ್ತು,
ನನ್ನ ಎಲ್ಲ ಅಂಗಗಳು ಬೆಳೆಯೋದಕ್ಕಿಂತ ಮುಂಚೆನೇ,
ಅವಕ್ಕೆ ಯಾವಾಗ ಪೂರ್ತಿ ರೂಪ ಬರುತ್ತೆ ಅಂತ
ನಿನ್ನ ಪುಸ್ತಕದಲ್ಲಿ ಬರೆದಿತ್ತು.
17 ಹಾಗಾಗಿ ನಿನ್ನ ಯೋಚನೆಗಳು ನನಗೆ ಎಷ್ಟೋ ಅಮೂಲ್ಯ!+
ದೇವರೇ, ಅವನ್ನ ಎಣಿಸಕ್ಕೇ ಆಗಲ್ಲ!+
18 ನಾನು ಅವನ್ನ ಎಣಿಸಕ್ಕೆ ಕೂತ್ಕೊಂಡ್ರೆ, ಸಮುದ್ರದ ಮರಳಿನ ಕಣಗಳಿಗಿಂತ ಜಾಸ್ತಿ ಇವೆ.+
ನಾನು ನಿದ್ದೆಯಿಂದ ಎದ್ದ ಮೇಲೂ ಇನ್ನೂ ಎಣಿಸ್ತಾನೇ ಇರ್ತಿನಿ.*+
19 ದೇವರೇ, ನೀನು ಕೆಟ್ಟವರನ್ನ ಹತಿಸಿದ್ರೆ ಎಷ್ಟು ಚೆನ್ನಾಗಿರುತ್ತೆ!+
ಆಗ, ದೌರ್ಜನ್ಯ ಮಾಡೋರು* ನನ್ನಿಂದ ತೊಲಗಿಹೋಗ್ತಾರೆ.
20 ಅವರು ಕೆಟ್ಟ ಉದ್ದೇಶದಿಂದ ನಿನ್ನ ವಿರುದ್ಧ ಮಾತಾಡ್ತಾರೆ,
ಅವರು ನಿನ್ನ ಶತ್ರುಗಳು, ನಿನ್ನ ಹೆಸ್ರನ್ನ ಅಯೋಗ್ಯವಾಗಿ ಬಳಸ್ತಾರೆ.+
21 ಯೆಹೋವ, ನಿನ್ನನ್ನ ದ್ವೇಷಿಸೋರನ್ನ ನಾನು ದ್ವೇಷಿಸಲ್ವಾ?+
ನಿನ್ನ ವಿರುದ್ಧ ತಿರುಗಿ ಬೀಳೋರು ಅಂದ್ರೆ ನನಗೆ ಅಸಹ್ಯ ಅಲ್ವಾ?+