ಯೆರೆಮೀಯ
17 “ಯೆಹೂದದ ಪಾಪವನ್ನ ಕಬ್ಬಿಣದ ಲೇಖನಿಯಿಂದ* ಬರೆಯಲಾಗಿದೆ.
ಅದನ್ನ ವಜ್ರದ ಚೂಪಾದ ತುದಿಯಿಂದ ಅವ್ರ ಹೃದಯದ ಹಲಗೆ ಮೇಲೆ,
ಯಜ್ಞವೇದಿಗಳ ಕೊಂಬುಗಳ ಮೇಲೆ ಕೆತ್ತಲಾಗಿದೆ,
2 ಸೊಂಪಾದ ಮರದ ಪಕ್ಕದಲ್ಲಿ, ಎತ್ತರವಾದ ಬೆಟ್ಟಗಳ ಮೇಲೆ+ ಇದ್ದ
ಈ ಯಜ್ಞವೇದಿಗಳನ್ನ, ಪೂಜಾಕಂಬಗಳನ್ನ*+ ಅವರ ಮಕ್ಕಳು ಸಹ ನೆನಪಿಸ್ಕೊಳ್ತಾರೆ,
3 ಹಳ್ಳಿಗಳಲ್ಲಿ ಇರೋ ಬೆಟ್ಟಗಳ ಮೇಲೆ ಸಹ ಇದ್ದ ಯಜ್ಞವೇದಿಗಳನ್ನ ಪೂಜಾಕಂಬಗಳನ್ನ ನೆನಪಿಸ್ಕೊಳ್ತಾರೆ.
ನಿನ್ನ ಸಿರಿಸಂಪತ್ತು, ನಿನ್ನ ಎಲ್ಲ ನಿಧಿನಿಕ್ಷೇಪಗಳನ್ನ ಬೇರೆಯವರು ಲೂಟಿ ಮಾಡೋ ತರ ಮಾಡ್ತೀನಿ,+
ನಿನಗೆ ಸೇರಿದ ಎಲ್ಲ ಪ್ರದೇಶಗಳಲ್ಲಿ ನೀನು ಮಾಡಿದ ಪಾಪಗಳಿಗಾಗಿ ನಿನ್ನ ಪೂಜಾಸ್ಥಳಗಳಲ್ಲಿ* ಇರೋದನ್ನೆಲ್ಲ ಲೂಟಿ ಮಾಡೋ ತರ ಮಾಡ್ತೀನಿ.+
4 ನಾನು ನಿನಗೆ ಕೊಟ್ಟ ಆಸ್ತಿಯನ್ನ ಕೈಯಾರೆ ಕಳ್ಕೊಳ್ತೀಯ.+
ನಿನಗೆ ಗೊತ್ತಿಲ್ಲದ ದೇಶದಲ್ಲಿ ಶತ್ರುಗಳಿಗೆ ನೀನು ದಾಸಿಯಾಗೋ ತರ ಮಾಡ್ತೀನಿ,+
ಅದು ಯಾವಾಗ್ಲೂ ಉರಿತಾ ಇರುತ್ತೆ.”
6 ಅವನು ಮರುಭೂಮಿಯಲ್ಲಿ ಒಂಟಿ ಆಗಿರೋ ಮರದ ತರ ಆಗ್ತಾನೆ,
ಅವನು ಒಳ್ಳೇದನ್ನ ಅನುಭವಿಸಲ್ಲ,
ಕಾಡಲ್ಲಿ ಒಣಗಿಹೋದ ಸ್ಥಳಗಳಲ್ಲಿ,
ಯಾರೂ ವಾಸಿಸೋಕೆ ಆಗದ ಉಪ್ಪಿನ ಪ್ರದೇಶದಲ್ಲಿ ಅವನು ವಾಸಿಸ್ತಾನೆ.
8 ಅವನು ನದಿ ಹತ್ರ ನೆಟ್ಟಿರೋ,
ತನ್ನ ಬೇರುಗಳನ್ನ ನೀರಿನ ತನಕ ಹರಡ್ಕೊಂಡಿರೋ ಮರದ ಹಾಗೆ ಆಗ್ತಾನೆ.
ಆ ಮರ ಸುಡು ಬಿಸಿಲನ್ನ ಲೆಕ್ಕಿಸಲ್ಲ,
ಅದ್ರ ಎಲೆಗಳು ಯಾವಾಗ್ಲೂ ಹಚ್ಚಹಸುರಾಗಿ ಇರುತ್ತೆ.+
ಬರಗಾಲದಲ್ಲಿ ತಲೆ ಕೆಡಿಸ್ಕೊಳ್ಳಲ್ಲ,
ಹಣ್ಣು ಕೊಡೋದನ್ನ ನಿಲ್ಲಿಸಲ್ಲ.
ಆ ಮರದ ತರ ಅವನು ಇರ್ತಾನೆ.
9 ಹೃದಯ ಬೇರೆ ಎಲ್ಲದಕ್ಕಿಂತ ಹೆಚ್ಚು ಮೋಸ ಮಾಡುತ್ತೆ,* ಅದು ಏನು ಮಾಡೋಕ್ಕೂ ಹಿಂದೆಮುಂದೆ ನೋಡಲ್ಲ.*+
ಅದನ್ನ ತಿಳ್ಕೊಳ್ಳೋಕೆ ಯಾರಿಂದ ಆಗುತ್ತೆ?
10 ಯೆಹೋವನಾದ ನಾನು ಹೃದಯವನ್ನ ಪರೀಕ್ಷಿಸಿ,+
ಅಂತರಾಳದ ಯೋಚನೆಗಳನ್ನ* ಪರಿಶೀಲಿಸಿ
ಪ್ರತಿಯೊಬ್ಬನ ನಡತೆಗೆ ಕೆಲಸಕ್ಕೆ
ತಕ್ಕ ಪ್ರತಿಫಲ ಕೊಡ್ತೀನಿ.+
11 ಕೌಜುಗ ಪಕ್ಷಿ ತಾನಿಡದ ಮೊಟ್ಟೆಗಳನ್ನ ಕೂಡಿಸ್ಕೊಳ್ಳುತ್ತೆ,
ಮೋಸದಿಂದ ಹಣಆಸ್ತಿ ಮಾಡೋನು ಆ ಪಕ್ಷಿ ತರ ಇದ್ದಾನೆ.+
ಆ ಹಣಆಸ್ತಿ ಅವನ ಮಧ್ಯವಯಸ್ಸಲ್ಲೇ ಅವನನ್ನ ಬಿಟ್ಟು ಹೋಗುತ್ತೆ,
ಕೊನೆಯಲ್ಲಿ ಅವನು ಮೂರ್ಖ ಅಂತ ಸಾಬೀತಾಗುತ್ತೆ.”
12 ದೇವರ ಮಹಿಮಾನ್ವಿತ ಸಿಂಹಾಸನಕ್ಕೆ ಆರಂಭದಿಂದಾನೇ ಗೌರವ ಸಿಗ್ತಿದೆ,
ಆ ಸಿಂಹಾಸನ ನಮ್ಮ ಆರಾಧನಾ ಸ್ಥಳ.+
13 ಯೆಹೋವನೇ, ಇಸ್ರಾಯೇಲ್ಯರಿಗೆ ನಿರೀಕ್ಷೆ ಕೊಡೋನೇ,
ನಿನ್ನನ್ನ ಬಿಟ್ಟುಬಿಡುವವ್ರಿಗೆಲ್ಲ ಅವಮಾನ ಆಗುತ್ತೆ.
ನಿನ್ನನ್ನ* ಬಿಟ್ಟು ದೂರ ಹೋದವ್ರೆಲ್ಲರ ಹೆಸ್ರನ್ನ ಧೂಳಲ್ಲಿ ಬರಿತಾರೆ,+
ಯಾಕಂದ್ರೆ ಅವರು ಜೀವ ಕೊಡೋ ನೀರಿನ ಮೂಲನಾಗಿರೋ ಯೆಹೋವನನ್ನೇ ಬಿಟ್ಟುಬಿಟ್ಟಿದ್ದಾರೆ.+
14 ಯೆಹೋವನೇ, ನನ್ನನ್ನ ವಾಸಿ ಮಾಡು, ಆಗ ನಾನು ವಾಸಿ ಆಗ್ತೀನಿ.
ನನ್ನನ್ನ ಕಾಪಾಡು, ಆಗ ಬದುಕಿ ಉಳಿತೀನಿ.+
ಯಾಕಂದ್ರೆ ನಾನು ನಿನ್ನನ್ನೇ ಹಾಡಿ ಹೊಗಳ್ತೀನಿ.
15 ನೋಡು! ಅವರು ನನ್ನ ಹತ್ರ,
“ಯೆಹೋವ ಕೊಟ್ಟ ಮಾತು ಏನಾಯ್ತು?+
ಯಾಕೆ ಇನ್ನೂ ನಿಜ ಆಗಲಿಲ್ಲ?” ಅಂತ ಕೇಳ್ತಾರೆ.
16 ಆದ್ರೆ ನಾನು ಒಬ್ಬ ಕುರುಬನಾಗಿ ನಿನ್ನ ಹಿಂದೆ ಬರೋದನ್ನ ಬಿಟ್ಟು ಓಡಿ ಹೋಗಲಿಲ್ಲ,
ಕಷ್ಟದ ದಿನ ಯಾವಾಗ ಬರುತ್ತೋ ಅಂತ ಕಾಯಲಿಲ್ಲ.
ನಾನು ಏನೇನು ಮಾತಾಡಿದೆ ಅಂತ ನಿನಗೆ ಚೆನ್ನಾಗಿ ಗೊತ್ತು,
ಇದೆಲ್ಲ ನಿನ್ನ ಕಣ್ಮುಂದೆನೇ ಆಗಿದೆ!
17 ನನ್ನನ್ನ ಭಯಪಡಿಸಬೇಡ,
ಕಷ್ಟದ ದಿನದಲ್ಲಿ ನೀನೇ ನನಗೆ ಆಶ್ರಯ.
18 ನನಗೆ ಹಿಂಸೆ ಕೊಡುವವ್ರಿಗೆ ಅವಮಾನ ಆಗಲಿ,+
ಆದ್ರೆ ನನಗೆ ಅವಮಾನ ಆಗದ ಹಾಗೆ ನೋಡ್ಕೊ.
ಅವ್ರನ್ನ ಭಯ ಹಿಡಿಲಿ,
ಆದ್ರೆ ನನ್ನನ್ನ ಭಯ ಹಿಡಿಯದ ಹಾಗೆ ನೋಡ್ಕೊ.
ಕಷ್ಟದ ದಿನವನ್ನ ತಂದು+ ಅವ್ರನ್ನ ಜಜ್ಜಿ ಹಾಕು,
ಪೂರ್ತಿ ನಾಶಮಾಡು.
19 ಯೆಹೋವ ನನಗೆ ಹೇಳೋದು ಏನಂದ್ರೆ “ನೀನು ಹೋಗಿ ಯೆಹೂದದ ರಾಜರು ಬಂದುಹೋಗೋ ಮುಖ್ಯ ಬಾಗಿಲ* ಹತ್ರ, ಯೆರೂಸಲೇಮಿನ ಬೇರೆ ಎಲ್ಲ ಬಾಗಿಲ ಹತ್ರ ನಿಲ್ಲು.+ 20 ನೀನು ಅವ್ರಿಗೆ ಹೀಗೆ ಹೇಳಬೇಕು ‘ಈ ಬಾಗಿಲುಗಳಿಂದ ಒಳಗೆ ಬರ್ತಿರೋ ಯೆಹೂದದ ರಾಜರೇ, ಯೆಹೂದದ ಎಲ್ಲ ಜನ್ರೇ, ಯೆರೂಸಲೇಮಿನ ಎಲ್ಲ ಜನ್ರೇ ಯೆಹೋವನ ಮಾತು ಕೇಳಿ. 21 ಯೆಹೋವ ಹೀಗೆ ಹೇಳ್ತಾನೆ “ನೀವು ಜಾಗ್ರತೆಯಿಂದ ಪಾಲಿಸಬೇಕಾದ ವಿಷ್ಯ ಏನಂದ್ರೆ, ಸಬ್ಬತ್ ದಿನದಲ್ಲಿ ಯಾವ ಹೊರೆಯನ್ನೂ ಹೊರಬೇಡಿ. ಆ ದಿನ ಯಾವ ಹೊರೆಯನ್ನೂ ಯೆರೂಸಲೇಮಿನ ಬಾಗಿಲುಗಳಿಂದ ಒಳಗೆ ತರಬೇಡಿ.+ 22 ಸಬ್ಬತ್ ದಿನ ನಿಮ್ಮ ಮನೆಯಿಂದ ಯಾವ ಹೊರೆಯನ್ನೂ ಹೊರಗೆ ತಗೊಂಡು ಹೋಗಬಾರದು. ಅವತ್ತು ಯಾವ ಕೆಲಸವನ್ನೂ ಮಾಡಬಾರದು.+ ನೀವು ಸಬ್ಬತ್ ದಿನವನ್ನ ಪವಿತ್ರವಾಗಿ ನೋಡಬೇಕು. ಹೀಗೆ ಮಾಡೋಕೆ ನಿಮ್ಮ ಪೂರ್ವಜರಿಗೆ ಆಜ್ಞೆ ಕೊಟ್ಟಿದ್ದೆ.+ 23 ಆದ್ರೆ ಅವರು ನನ್ನ ಮಾತು ಕೇಳಿಲ್ಲ, ನಾನು ಹೇಳಿದ್ದನ್ನ ಕಿವಿಗೆ ಹಾಕೊಳ್ಳಲಿಲ್ಲ, ಹಠಮಾರಿಗಳಾದ್ರು, ನಾನು ಹೇಳಿದ ಹಾಗೆ ಮಾಡಲಿಲ್ಲ. ನಾನು ತಿದ್ದಿದ್ರೂ ತಿದ್ಕೊಳ್ಳಲಿಲ್ಲ.”’+
24 ‘ಯೆಹೋವ ಹೇಳೋದು ಏನಂದ್ರೆ “ನಾನು ಹೇಳಿದ ಹಾಗೆ ನೀವು ತಪ್ಪದೆ ನಡ್ಕೊಂಡ್ರೆ, ಸಬ್ಬತ್ ದಿನ ಯಾವ ಹೊರೆಯನ್ನೂ ಈ ಪಟ್ಟಣದ ಬಾಗಿಲಿಂದ ಒಳಗೆ ತರದಿದ್ರೆ, ಸಬ್ಬತ್ ದಿನ ಯಾವ ಕೆಲಸವನ್ನೂ ಮಾಡ್ದೆ ಆ ದಿನವನ್ನ ಪವಿತ್ರವಾಗಿ ನೋಡಿದ್ರೆ+ 25 ದಾವೀದನ ಸಿಂಹಾಸನದಲ್ಲಿ ಕೂತ್ಕೊಳ್ಳೋ ರಾಜರು,+ ಅಧಿಕಾರಿಗಳು ರಥದಲ್ಲಿ, ಕುದುರೆಗಳ ಮೇಲೆ ಸವಾರಿಮಾಡ್ತಾ ಈ ಪಟ್ಟಣದ ಬಾಗಿಲುಗಳಿಂದ ಒಳಗೆ ಬರ್ತಾರೆ. ರಾಜರು, ಅವ್ರ ಅಧಿಕಾರಿಗಳು, ಯೆಹೂದದ ಜನ್ರು, ಯೆರೂಸಲೇಮಿನ ಜನ್ರು ಪಟ್ಟಣದ ಒಳಗೆ ಬರ್ತಾರೆ.+ ಈ ಪಟ್ಟಣದಲ್ಲಿ ಜನ್ರು ಯಾವಾಗ್ಲೂ ಇರ್ತಾರೆ. 26 ಯೆಹೂದದ ಪಟ್ಟಣಗಳಿಂದ, ಯೆರೂಸಲೇಮಿನ ಸುತ್ತಮುತ್ತ ಇರೋ ಸ್ಥಳಗಳಿಂದ, ಬೆನ್ಯಾಮೀನ್ ಪ್ರದೇಶದಿಂದ,+ ತಗ್ಗು ಪ್ರದೇಶದಿಂದ,+ ಬೆಟ್ಟ ಪ್ರದೇಶದಿಂದ, ನೆಗೆಬಿನಿಂದ* ಜನ್ರು ಬರ್ತಾರೆ. ಅವರು ಸರ್ವಾಂಗಹೋಮ ಬಲಿಗಳನ್ನ,+ ಬೇರೆ ಬಲಿಗಳನ್ನ,+ ಧಾನ್ಯ ಅರ್ಪಣೆಗಳನ್ನ,+ ಸಾಂಬ್ರಾಣಿಯನ್ನ, ಕೃತಜ್ಞತಾ ಬಲಿಗಳನ್ನ ಯೆಹೋವನ ಆಲಯಕ್ಕೆ ತರ್ತಾರೆ.+
27 ಆದ್ರೆ ನೀವು ನನ್ನ ಮಾತು ಕೇಳದೆ, ಸಬ್ಬತ್ ದಿನವನ್ನ ಪವಿತ್ರವಾಗಿ ನೋಡ್ದೆ, ಸಬ್ಬತ್ ದಿನ ಹೊರೆಗಳನ್ನ ಹೊತ್ರೆ, ಅವುಗಳನ್ನ ಯೆರೂಸಲೇಮಿನ ಬಾಗಿಲುಗಳಿಂದ ಒಳಗೆ ತಂದ್ರೆ ನಾನು ಆ ಪಟ್ಟಣದ ಬಾಗಿಲುಗಳಿಗೆ ಬೆಂಕಿ ಹಚ್ತೀನಿ. ಅದು ಖಂಡಿತ ಯೆರೂಸಲೇಮಿನ ಭದ್ರ ಕೋಟೆಗಳನ್ನ ಸುಟ್ಟು ಬಿಡುತ್ತೆ.+ ಆ ಬೆಂಕಿ ಆರಿಹೋಗಲ್ಲ.”’”+