ಯೆಶಾಯ
60 “ಸ್ತ್ರೀಯೇ* ಎದ್ದೇಳು,+ ಎದ್ದು ನಿನ್ನ ಬೆಳಕನ್ನ ಬೀರು. ಯಾಕಂದ್ರೆ ನಿನ್ನ ಬೆಳಕು ಬಂದಿದೆ.
ಯೆಹೋವನ ಮಹಿಮೆ ನಿನ್ನ ಮೇಲೆ ಪ್ರಕಾಶಿಸ್ತಿದೆ.+
2 ಇಗೋ! ಕತ್ತಲು ಭೂಮಿಯನ್ನ ಮುಚ್ಚಿಬಿಡಲಿದೆ,
ಗಾಢ ಅಂಧಕಾರ ಜನಾಂಗಗಳನ್ನ ಆವರಿಸಲಿದೆ,
ಆದ್ರೆ ಯೆಹೋವ ನಿನ್ನ ಮೇಲೆ ಪ್ರಕಾಶಿಸ್ತಾನೆ,
ಆತನ ಮಹಿಮೆ ನಿನ್ನ ಮೇಲೆ ಕಾಣಿಸುತ್ತೆ.
4 ಕಣ್ಣೆತ್ತಿ ಸುತ್ತಲೂ ನೋಡು!
ಅವ್ರೆಲ್ಲ ಒಟ್ಟುಸೇರಿದ್ದಾರೆ, ನಿನ್ನ ಹತ್ರ ಬರ್ತಿದ್ದಾರೆ.
5 ಆ ಸಮ್ಯದಲ್ಲಿ ನೀನು ಏನು ನೋಡ್ತೀಯೋ ಅದ್ರಿಂದ ನಿನ್ನ ಮುಖ ಕಾಂತಿ ಬೀರುತ್ತೆ,+
ನಿನ್ನ ಹೃದಯ ಸಂಭ್ರಮಿಸುತ್ತೆ ಮತ್ತು ಸಂತೋಷದಿಂದ ತುಂಬಿಹೋಗುತ್ತೆ.
ಯಾಕಂದ್ರೆ ಸಮುದ್ರದ ಸಮೃದ್ಧಿ ನಿನ್ನ ಕಡೆ ತಿರುಗುತ್ತೆ,
ಜನಾಂಗಗಳ ಸಂಪತ್ತು ನಿನ್ನ ಹತ್ರ ಬರುತ್ತೆ.+
6 ನಿನ್ನ ದೇಶವನ್ನ* ಒಂಟೆಗಳ ಗುಂಪು ತುಂಬ್ಕೊಳ್ಳುತ್ತೆ,
ಹೌದು, ಮಿದ್ಯಾನ್ ಮತ್ತು ಏಫ+ ದೇಶದ ಎಳೇ ಒಂಟೆಗಳು ಮುಚ್ಚಿಬಿಡ್ತವೆ.
ಶೆಬ ದೇಶದ ಜನ್ರೆಲ್ಲ ಬರ್ತಾರೆ,
ಅವರು ತಮ್ಮ ಜೊತೆ ಚಿನ್ನವನ್ನೂ ಸಾಂಬ್ರಾಣಿಯನ್ನೂ ತರ್ತಾರೆ.
ಅವರು ಬಂದು ಯೆಹೋವನ ಗುಣಗಾನ ಮಾಡ್ತಾರೆ.+
7 ಕೇದಾರಿನ+ ಮಂದೆಗಳೆಲ್ಲ ನಿನ್ನ ಹತ್ರ ಒಟ್ಟು ಸೇರ್ತವೆ.
ನೆಬಾಯೋತಿನ+ ಟಗರುಗಳು ನಿನ್ನ ಸೇವೆ ಮಾಡ್ತವೆ.
ಅವು ನನ್ನ ಯಜ್ಞವೇದಿ ಮೇಲೆ ಬರ್ತವೆ, ಅವುಗಳನ್ನ ನಾನು ಮೆಚ್ಚಿ ಸ್ವೀಕರಿಸ್ತೀನಿ.+
ನಾನು ನನ್ನ ಮಹಿಮಾನ್ವಿತ ಆಲಯದ* ಅಂದವನ್ನ ಹೆಚ್ಚಿಸ್ತೀನಿ.+
9 ದ್ವೀಪಗಳು ನನ್ನ ಮೇಲೆ ನಿರೀಕ್ಷೆ ಇಟ್ಕೊಂಡಿವೆ.+
ತಾರ್ಷೀಷಿನ ಹಡಗುಗಳು ಎಲ್ಲವುಗಳಿಗಿಂತ ಮುಂದಿವೆ,
ಅವು ನಿನ್ನ ಗಂಡು ಮಕ್ಕಳನ್ನ ತುಂಬ ದೂರದಿಂದ ಕರ್ಕೊಂಡು ಬರ್ತಿವೆ,+
ಅವರು ನಿನ್ನ ದೇವರಾದ ಯೆಹೋವನ ಹೆಸ್ರನ್ನ ಹೊಗಳೋಕೆ, ಇಸ್ರಾಯೇಲ್ಯರ ಪವಿತ್ರ ದೇವರನ್ನ ಘನಪಡಿಸೋಕೆ,
ತಮ್ಮ ಜೊತೆ ಬೆಳ್ಳಿಬಂಗಾರ ತರ್ತಿದ್ದಾರೆ.
ಯಾಕಂದ್ರೆ ನಾನು ನಿನ್ನನ್ನ ಮಹಿಮೆಪಡಿಸ್ತೀನಿ.+
11 ನಿನ್ನ ಬಾಗಿಲುಗಳನ್ನ ಯಾವತ್ತೂ ಮುಚ್ಚಲಾಗಲ್ಲ,+
ಜನಾಂಗಗಳ ಸಿರಿಸಂಪತ್ತನ್ನ ನಿನ್ನ ಹತ್ರ ತಗೊಂಡು ಬರೋಕೆ ಆಗೋ ತರ,
ಹಗಲೂರಾತ್ರಿ ಅವುಗಳನ್ನ ತೆರೆದೇ ಇಡಲಾಗುತ್ತೆ,
ಸಿರಿಸಂಪತ್ತನ್ನ ತಗೊಂಡು ಬರೋ ಉಸ್ತುವಾರಿಯನ್ನ ಆ ಜನಾಂಗಗಳ ರಾಜರೇ ವಹಿಸ್ಕೊಳ್ತಾರೆ.+
12 ನಿನ್ನ ಸೇವೆಮಾಡದ ಯಾವುದೇ ಜನಾಂಗವಾಗಲಿ, ಯಾವುದೇ ಸಾಮ್ರಾಜ್ಯವಾಗಲಿ ನಾಶವಾಗದೆ ಹೋಗಲ್ಲ,
ಆ ಜನಾಂಗಗಳು ಸರ್ವನಾಶವಾಗ್ತವೆ.+
13 ನನ್ನ ಪವಿತ್ರ ಸ್ಥಳವನ್ನ ಅಂದಗೊಳಿಸೋಕೆ
ಜುನಿಪರ್ ಮರ, ಬೂದಿಮರ ಮತ್ತು ಶಂಕುಮರ,+
ಹೌದು, ಲೆಬನೋನಿನ ಮಹಿಮೆನೇ ನಡ್ಕೊಂಡು ನಿನ್ನ ಹತ್ರ ಬರುತ್ತೆ.+
ನಾನು ನನ್ನ ಪಾದಸನ್ನಿಧಿಯನ್ನ ಮಹಿಮೆಯಿಂದ ತುಂಬಿಸ್ತೀನಿ.+
14 ನಿನ್ನ ಮೇಲೆ ದಬ್ಬಾಳಿಕೆ ಮಾಡಿದವರ ಗಂಡುಮಕ್ಕಳು ನಿನ್ನ ಹತ್ರ ಬಂದು, ಬಗ್ಗಿ ನಿನಗೆ ನಮಸ್ಕರಿಸ್ತಾರೆ,
ನಿನ್ನನ್ನ ಅಗೌರವದಿಂದ ನೋಡ್ತಿದ್ದವರೆಲ್ಲ ನಿನ್ನ ಪಾದಗಳಿಗೆ ಬೀಳಲೇ ಬೇಕು,
ಅವರು ನಿನ್ನನ್ನ ಯೆಹೋವನ ಪಟ್ಟಣ ಅಂತ,
ಇಸ್ರಾಯೇಲ್ಯರ ಪವಿತ್ರ ದೇವರ ಚೀಯೋನ್ ಅಂತ ಕರಿಬೇಕಾಗುತ್ತೆ.+
15 ನಿನ್ನನ್ನ ತೊರೆಯಲಾಗಿದೆ, ದ್ವೇಷಿಸಲಾಗಿದೆ, ನಿನ್ನ ಮೂಲಕ ಯಾರೂ ಹಾದುಹೋಗ್ತಿಲ್ಲ,+
ಆದ್ರೆ ನಾನು ನಿನ್ನನ್ನ ಶಾಶ್ವತವಾದ ಹೆಮ್ಮೆಯ ಮೂಲವನ್ನಾಗಿಯೂ
ತಲತಲಾಂತರಗಳ ತನಕ ಸಂತೋಷಕ್ಕೆ ಕಾರಣವನ್ನಾಗಿಯೂ ಮಾಡ್ತಿನಿ.+
ಯೆಹೋವನಾದ ನಾನೇ ನಿನ್ನ ರಕ್ಷಕ,
ಯಾಕೋಬನ ಶಕ್ತಿವಂತನೇ ನಿನ್ನನ್ನ ಬಿಡುಗಡೆ ಮಾಡುವವನು ಅಂತ ನೀನು ಖಂಡಿತ ತಿಳ್ಕೊಳ್ತೀಯ.+
17 ನಾನು ತಾಮ್ರಕ್ಕೆ ಬದಲಾಗಿ ಚಿನ್ನ,
ಕಬ್ಬಿಣಕ್ಕೆ ಬದಲಾಗಿ ಬೆಳ್ಳಿ,
ಮರಕ್ಕೆ ಬದಲಾಗಿ ತಾಮ್ರ,
ಕಲ್ಲುಗಳಿಗೆ ಬದಲಾಗಿ ಕಬ್ಬಿಣ ತರ್ತಿನಿ.
ಶಾಂತಿಯನ್ನ ನಿನ್ನ ಮೇಲ್ವಿಚಾರಕನನ್ನಾಗಿ
ನೀತಿಯನ್ನ ನಿನ್ನ ಅಧಿಕಾರಿಯನ್ನಾಗಿ ನೇಮಿಸ್ತೀನಿ.+
18 ಮುಂದೆ ಯಾವತ್ತೂ ನಿನ್ನ ದೇಶದಲ್ಲಿ ಹಿಂಸೆಯ ಕುರಿತಾದ ಸುದ್ದಿಯಾಗಲಿ,
ನಿನ್ನ ಗಡಿಯೊಳಗೆ ನಾಶ ಮತ್ತು ವಿನಾಶದ ಬಗ್ಗೆ ಮಾತಾಗಲಿ ಕೇಳಿಬರಲ್ಲ.+
ನೀನು ನಿನ್ನ ಗೋಡೆಗಳಿಗೆ ‘ರಕ್ಷಣೆ’+ ಅಂತ, ನಿನ್ನ ಬಾಗಿಲುಗಳಿಗೆ ‘ಸ್ತುತಿ’ ಅಂತ ಹೆಸ್ರಿಡ್ತೀಯ.
19 ಇನ್ನು ಮುಂದಕ್ಕೆ ಹಗಲಲ್ಲಿ ಸೂರ್ಯ ನಿನಗೆ ಬೆಳಕು ಕೊಡಲ್ಲ,
ಚಂದ್ರ ತನ್ನ ಬೆಳದಿಂಗಳನ್ನ ಸೂಸಲ್ಲ,
ಯಾಕಂದ್ರೆ ಯೆಹೋವನಾದ ನಾನೇ ನಿನಗೆ ಶಾಶ್ವತ ಬೆಳಕಾಗ್ತೀನಿ,+
ನಿನ್ನ ದೇವರಾದ ನಾನೇ ನಿನ್ನ ಸೊಬಗಾಗ್ತೀನಿ.+
20 ಇನ್ನು ಮುಂದಕ್ಕೆ ನಿನ್ನ ಸೂರ್ಯ ಮುಳುಗಲ್ಲ,
ನಿನ್ನ ಚಂದ್ರನ ಬೆಳದಿಂಗಳು ಕಡಿಮೆಯಾಗಲ್ಲ.
21 ನಿನ್ನ ಜನ್ರೆಲ್ಲ ನೀತಿವಂತರಾಗಿ ಇರ್ತಾರೆ,
ಅವರು ಈ ದೇಶವನ್ನ ಶಾಶ್ವತವಾದ ಆಸ್ತಿಯಾಗಿ ಪಡ್ಕೊಳ್ತಾರೆ.
22 ನಿಮ್ಮಲ್ಲಿರೋ ಅಲ್ಪನು ಸಾವಿರ ಮಂದಿ ಆಗ್ತಾನೆ,
ಕನಿಷ್ಠನು ಒಂದು ದೊಡ್ಡ ಜನಾಂಗ ಆಗ್ತಾನೆ.
ಯೆಹೋವನಾದ ನಾನೇ ತಕ್ಕ ಸಮಯಕ್ಕೆ ಅದ್ರ ವೇಗವನ್ನ ಹೆಚ್ಚಿಸ್ತೀನಿ.”