ಕೀರ್ತನೆ
ದಾವೀದನ ಕೀರ್ತನೆ.
103 ನನ್ನ ಮನ ಯೆಹೋವನನ್ನ ಹೊಗಳಲಿ,
ನನ್ನಲ್ಲಿರೋ ಎಲ್ಲವೂ ಆತನ ಪವಿತ್ರ ಹೆಸ್ರನ್ನ ಕೊಂಡಾಡಲಿ.
4 ಆತನು ನನ್ನ ಜೀವವನ್ನ ಸಮಾಧಿಯಿಂದ* ಮೇಲೆ ಎಬ್ಬಿಸ್ತಾನೆ+
ತನ್ನ ಶಾಶ್ವತ ಪ್ರೀತಿ ಮತ್ತು ಕರುಣೆಯ ಕಿರೀಟವನ್ನ ನನಗೆ ಹಾಕ್ತಾನೆ.+
5 ಆತನು ನನ್ನ ಜೀವನ ಪರ್ಯಂತ ನನಗೆ ಒಳ್ಳೇ ವಸ್ತುಗಳನ್ನ ಕೊಟ್ಟು ತೃಪ್ತಿ ಪಡಿಸಿದ್ದಾನೆ.+
ಹದ್ದಿನ ತರ ನಾನು ಯಾವಾಗ್ಲೂ ಯುವಕನಾಗಿ ಇರಬೇಕು ಅಂತ ಹೀಗೆ ಮಾಡ್ತಾನೆ.+
10 ಆತನು ನಮ್ಮ ಪಾಪಗಳಿಗೆ ತಕ್ಕ ಹಾಗೆ ನಮ್ಮ ಜೊತೆ ನಡ್ಕೊಳ್ಳಲಿಲ್ಲ,+
ನಾವು ಮಾಡಿದ ತಪ್ಪುಗಳಿಗೆ ತಕ್ಕ ಶಿಕ್ಷೆ ಕೊಡಲಿಲ್ಲ.+
11 ಆಕಾಶ ಭೂಮಿಯಿಂದ ಎಷ್ಟು ಎತ್ರದಲ್ಲಿ ಇದೆಯೋ,
ಆತನಿಗೆ ಭಯಪಡೋರ ಕಡೆ ಆತನಿಗಿರೋ ಶಾಶ್ವತ ಪ್ರೀತಿನೂ ಅಷ್ಟೇ ಜಾಸ್ತಿ ಇದೆ.+
14 ಯಾಕಂದ್ರೆ ನಮ್ಮನ್ನ ರಚಿಸಿರೋದು ಹೇಗೆ ಅಂತ ಆತನಿಗೆ ಚೆನ್ನಾಗಿ ಗೊತ್ತು,+
ನಾವು ಧೂಳಾಗಿದ್ದೀವಿ ಅಂತ ಆತನು ನೆನಪಿಸ್ಕೊಳ್ತಾನೆ.+
15 ನಾಶವಾಗಿ ಹೋಗೋ ಮನುಷ್ಯನನ್ನ ನೋಡೋದಾದ್ರೆ
ಅವನ ಜೀವನ ಹುಲ್ಲಿನ ತರ ಕ್ಷಣಿಕ,+
ಅವನು ಬೈಲಲ್ಲಿರೋ ಹೂವಿನ ತರ ಅರಳ್ತಾನೆ,+
16 ಆದ್ರೆ ಗಾಳಿ ಬೀಸಿದ್ರೆ ಅದು ಇಲ್ಲದ ಹಾಗೆ ಹೋಗಿಬಿಡುತ್ತೆ,
ಅದು ಅಲ್ಲಿ ಇರಲೇ ಇಲ್ಲವೇನೋ ಅನ್ನೋ ತರ ಆಗಿಬಿಡುತ್ತೆ.
17 ಆದ್ರೆ ಯಾರು ಯೆಹೋವನಿಗೆ ಭಯಪಡ್ತಾರೋ
ಅವ್ರ ಕಡೆ ಆತನ ಪ್ರೀತಿ ಶಾಶ್ವತವಾಗಿ* ಇರುತ್ತೆ,+
ಅವ್ರ ಮಕ್ಕಳು ಮೊಮ್ಮಕ್ಕಳ ಕಡೆಗೆ ಆತನ ನೀತಿ ಯಾವಾಗ್ಲೂ ಇರುತ್ತೆ.+
18 ಆತನ ಒಪ್ಪಂದನ ಒಪ್ಕೊಳ್ಳೋ ಜನ್ರಿಗೂ+
ಆತನ ಆಜ್ಞೆಗಳನ್ನ ಜಾಗ್ರತೆಯಿಂದ ಪಾಲಿಸೋ ಜನ್ರಿಗೂ ಹಾಗೇ ಆಗುತ್ತೆ.
22 ಯೆಹೋವನ ಸೃಷ್ಟಿಗಳೇ ಆತನನ್ನ ಹೊಗಳಿ, ಆತನು ಆಳ್ವಿಕೆ ಮಾಡೋ ಎಲ್ಲ ಜಾಗಗಳಲ್ಲಿ ಆತನನ್ನ ಸ್ತುತಿಸಿ.
ನನ್ನ ತನುಮನವೆಲ್ಲ ಯೆಹೋವನನ್ನ ಹಾಡಿ ಹೊಗಳಲಿ.