ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ
4 ಸಹೋದರರೇ, ನಾವು ಹೇಳ್ಕೊಟ್ಟ ತರ ದೇವರು ಮೆಚ್ಚೋ ಹಾಗೆ ನೀವು ನಡಿತಾ ಇದ್ದೀರ.+ ಮುಂದಕ್ಕೂ ನೀವು ದೇವರನ್ನ ಪೂರ್ತಿ ಮೆಚ್ಚಿಸೋ ಹಾಗೆ ನಡಿತಾ ಇರಬೇಕು ಅಂತ ಪ್ರಭು ಯೇಸು ಹೆಸ್ರಲ್ಲಿ ಕೇಳ್ಕೊಳ್ತೀವಿ, ಪ್ರೋತ್ಸಾಹಿಸ್ತೀವಿ. 2 ನಾವು ನಿಮಗೆ ಕೊಟ್ಟ ನಿರ್ದೇಶನಗಳು* ಪ್ರಭು ಯೇಸು ಕೊಟ್ಟಿದ್ದು ಅಂತ ನಿಮಗೆ ಗೊತ್ತಲ್ವಾ.
3 ನೀವು ಪವಿತ್ರರಾಗಿ ಇರಬೇಕು,+ ಲೈಂಗಿಕ ಅನೈತಿಕತೆಯಿಂದ* ದೂರ ಇರಬೇಕು ಅನ್ನೋದೇ ದೇವರ ಇಷ್ಟ.+ 4 ಎಲ್ರಿಗೂ ತಮ್ಮ ದೇಹವನ್ನ ಹತೋಟಿಯಲ್ಲಿ ಇಟ್ಕೊಳ್ಳೋದು ಹೇಗೆ ಅಂತ ಗೊತ್ತಿರಬೇಕು.+ ಆಗ ದೇಹ ಪವಿತ್ರವಾಗಿರುತ್ತೆ,+ ದೇವರ ಮೆಚ್ಚಿಗೆ* ಸಿಗುತ್ತೆ. 5 ದೇವರ ಬಗ್ಗೆ ಗೊತ್ತಿಲ್ಲದ ಲೋಕದ ಜನ್ರಲ್ಲಿ ಇರೋ+ ಹಾಗೆ ಹತೋಟಿಯಿಲ್ಲದ, ತೃಪ್ತಿನೇ ಇಲ್ಲದ ಕಾಮದಾಸೆ ನಿಮ್ಮಲ್ಲಿ ಇರಬಾರದು.+ 6 ಈ ವಿಷ್ಯದಲ್ಲಿ ಯಾರೂ ಅಸಭ್ಯವಾಗಿ ನಡ್ಕೊಂಡು ತನ್ನ ಸಹೋದರನಿಗೆ* ಹಾನಿ ಮಾಡಬಾರದು. ಯಾಕಂದ್ರೆ ಇದನ್ನೆಲ್ಲ ಮಾಡುವವ್ರಿಗೆ ಯೆಹೋವ* ಶಿಕ್ಷೆ ಕೊಡ್ತಾನೆ. ನಾವು ಇದ್ರ ಬಗ್ಗೆ ಮೊದ್ಲೇ ಹೇಳಿದ್ವಿ, ಎಚ್ಚರಿಕೆ ಕೊಟ್ಟಿದ್ವಿ. 7 ಯಾಕಂದ್ರೆ ದೇವರು ನಮ್ಮನ್ನ ಅಶುದ್ಧವಾಗಿ ಜೀವಿಸೋಕೆ ಕರೀಲಿಲ್ಲ, ಪವಿತ್ರವಾಗಿ ಜೀವಿಸೋಕೆ ಕರೆದನು.+ 8 ಅದಕ್ಕೇ ಈ ಎಚ್ಚರಿಕೆಗಳನ್ನ ಬೇಡ ಅನ್ನುವವನು ಮನುಷ್ಯನನ್ನಲ್ಲ, ನಿಮಗೆ ಪವಿತ್ರಶಕ್ತಿ ಕೊಡೋ ದೇವರನ್ನೇ+ ಬೇಡ ಅಂತಿದ್ದಾನೆ.+
9 ಆದ್ರೆ ಒಡಹುಟ್ಟಿದವ್ರ ತರ ಒಬ್ರನ್ನೊಬ್ರು ಪ್ರೀತಿಸೋದ್ರ ಬಗ್ಗೆ+ ನಾವು ನಿಮಗೆ ಬರಿಬೇಕಾಗಿಲ್ಲ. ಯಾಕಂದ್ರೆ ಹಾಗೆ ಪ್ರೀತಿಸಬೇಕಂತ ದೇವರೇ ನಿಮಗೆ ಕಲಿಸಿದ್ದಾನೆ.+ 10 ಮಕೆದೋನ್ಯದಲ್ಲಿ ಇರೋ ಎಲ್ಲ ಸಹೋದರರಿಗೆ ನೀವು ಪ್ರೀತಿ ತೋರಿಸ್ತಿದ್ದೀರ. ಆದ್ರೆ ಸಹೋದರರೇ, ನೀವು ಇನ್ನೂ ಜಾಸ್ತಿ ಪ್ರೀತಿ ತೋರಿಸ್ತಾ ಇರಬೇಕಂತ ಪ್ರೋತ್ಸಾಹಿಸ್ತಾ ಇದ್ದೀವಿ. 11 ನಾವು ನಿರ್ದೇಶನ ಕೊಟ್ಟ ಹಾಗೆ ಶಾಂತಿಯಿಂದ ಜೀವಿಸಿ,+ ಬೇರೆಯವ್ರ ವಿಷ್ಯದಲ್ಲಿ ತಲೆಹಾಕದೆ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ,+ ದುಡೀರಿ.+ ಇದೇ ನಿಮ್ಮ ಗುರಿ ಆಗಿರಲಿ. 12 ಆಗ ಹೊರಗಿನ ಜನ್ರ ಮುಂದೆ ನೀವು ಸಭ್ಯವಾಗಿ ನಡಿತೀರ,+ ನಿಮಗೆ ಯಾವುದಕ್ಕೂ ಕಮ್ಮಿ ಇರಲ್ಲ.
13 ಸಹೋದರರೇ, ಸತ್ತು ಗಾಢ ನಿದ್ದೆಯಲ್ಲಿ ಇರುವವ್ರಿಗೆ+ ಮುಂದೆ ಏನಾಗುತ್ತೆ ಅಂತ ನಿಮಗೆ ಗೊತ್ತಿರಬೇಕಂತ ಇಷ್ಟಪಡ್ತೀವಿ. ಆಗ, ನಿರೀಕ್ಷೆ ಇಲ್ಲದವರು ದುಃಖಪಡೋ ಹಾಗೆ ನೀವು ದುಃಖಪಡಲ್ಲ.+ 14 ಯೇಸು ಸತ್ತು ಜೀವಂತವಾಗಿ ಎದ್ದನು ಅನ್ನೋ ನಂಬಿಕೆ ನಮಗಿದೆ.+ ಹಾಗಾದ್ರೆ ಸತ್ತಿರೋ* ಯೇಸುವಿನ ಶಿಷ್ಯರಿಗೂ ದೇವರು ಮತ್ತೆ ಜೀವ ಕೊಟ್ಟು ಆತನ ಜೊತೆ ಇರೋ ಹಾಗೆ ಮಾಡ್ತಾನೆ+ ಅನ್ನೋ ನಂಬಿಕೆ ನಮಗಿದೆ. 15 ಯೆಹೋವನ* ಮಾತಿನ ಆಧಾರದ ಮೇಲೆ ನಾವೀಗ ಹೇಳೋದು ಏನಂದ್ರೆ, ಪ್ರಭು ಮತ್ತೆ ಬರುವಾಗ ನಮ್ಮಲ್ಲಿ ಬದುಕಿರುವವರು ಈಗಾಗ್ಲೇ ಸತ್ತಿರುವವ್ರಿಗಿಂತ ಮುಂಚೆ ಸ್ವರ್ಗಕ್ಕೆ ಹೋಗಲ್ಲ. 16 ಯಾಕಂದ್ರೆ ನಮ್ಮ ಪ್ರಭು ಸ್ವರ್ಗದಿಂದ ಬರ್ತಾನೆ. ಪ್ರಧಾನ ದೇವದೂತನಾದ+ ಆತನು ಆಜ್ಞೆಗಳನ್ನ ಕೊಡೋ ಸ್ವರ ಕೇಳಿಸುತ್ತೆ, ಆತನು ದೇವರ ತುತ್ತೂರಿ ಹಿಡ್ಕೊಂಡಿರ್ತಾನೆ. ಆಗ, ಕ್ರಿಸ್ತನ ಶಿಷ್ಯರಲ್ಲಿ ಸತ್ತವರು ಮೊದ್ಲು ಜೀವಂತವಾಗಿ ಏಳ್ತಾರೆ.+ 17 ಇದಾದ ಮೇಲೆ, ಅವ್ರ ಜೊತೆ ಇರೋಕೆ ಮತ್ತು ಆಕಾಶದಲ್ಲಿ ನಮ್ಮ ಪ್ರಭುವನ್ನ ಭೇಟಿ ಆಗೋಕೆ+ ನಮ್ಮಲ್ಲಿ ಬದುಕಿರುವವ್ರನ್ನ ಮೋಡಗಳಲ್ಲಿ ಎತ್ಕೊಂಡು ಹೋಗಲಾಗುತ್ತೆ.+ ಆಗ ನಾವು ಯಾವಾಗ್ಲೂ ನಮ್ಮ ಪ್ರಭು ಜೊತೆನೇ ಇರ್ತಿವಿ.+ 18 ಹಾಗಾಗಿ ಈ ಮಾತುಗಳನ್ನ ಹೇಳಿ ಒಬ್ರನ್ನೊಬ್ರು ಸಂತೈಸ್ತಾ ಇರಿ.