ಯೆಶಾಯ
54 ಯೆಹೋವ ಹೀಗೆ ಹೇಳ್ತಿದ್ದಾನೆ “ಬಂಜೆಯೇ, ಮಕ್ಕಳನ್ನ ಹೆರದವಳೇ, ಸಂತೋಷದಿಂದ ಹರ್ಷಧ್ವನಿಗೈ!+
ಹೆರಿಗೆ ನೋವು ಅಂದ್ರೆ ಏನಂತ ಗೊತ್ತಿಲ್ಲದವಳೇ,+ ಉಲ್ಲಾಸಿಸು, ಆನಂದದಿಂದ ಕೂಗು,+
ಯಾಕಂದ್ರೆ ಗಂಡ* ಇರುವವಳಿಗಿಂತ ಗಂಡ ಬಿಟ್ಟಿರುವವಳಿಗೆ ಮಕ್ಕಳು* ಹೆಚ್ಚು.+
2 ನಿನ್ನ ಡೇರೆಯನ್ನ ಇನ್ನು ಸ್ವಲ್ಪ ವಿಶಾಲಗೊಳಿಸು.+
ಭವ್ಯವಾದ ನಿನ್ನ ಡೇರೆಯ ಬಟ್ಟೆಗಳನ್ನ ಹರಡು.
ಹಿಂಜರಿಬೇಡ, ನಿನ್ನ ಡೇರೆಯ ಹಗ್ಗಗಳನ್ನ ಉದ್ದಮಾಡು,
ನಿನ್ನ ಡೇರೆಯ ಗೂಟವನ್ನ ಬಲಪಡಿಸು.+
3 ಯಾಕಂದ್ರೆ ನೀನು ನಿನ್ನ ಗಡಿಯನ್ನ ಬಲಕ್ಕೂ ಎಡಕ್ಕೂ ಹಬ್ಬಿಸ್ತೀಯ.
ನಿನ್ನ ಸಂತತಿಯವರು ಜನಾಂಗಗಳ ಮೇಲೆ ಅಧಿಕಾರ ನಡಿಸ್ತಾರೆ,
ಹಾಳುಬಿದ್ದಿರೋ ಪಟ್ಟಣಗಳಲ್ಲಿ ಅವರು ಮತ್ತೆ ವಾಸಿಸ್ತಾರೆ.+
4 ಹೆದರಬೇಡ,+ ಯಾಕಂದ್ರೆ ನಿನ್ನನ್ನ ಅಪಮಾನಕ್ಕೆ ಗುರಿಮಾಡಲಾಗಲ್ಲ,+
ನಿನಗೆ ಅವಮಾನ ಆಯ್ತಂತ ಅಂದ್ಕೊಳ್ಳಬೇಡ. ಯಾಕಂದ್ರೆ ನಿನಗೆ ನಿರಾಶೆಯಾಗಲ್ಲ.
ಯೌವನದಲ್ಲಿ ನಿನಗಾದ ಅಪಮಾನವನ್ನ ನೀನು ಮರೆತು ಬಿಡ್ತೀಯ,
ನೀನು ವಿಧವೆ ಆಗಿರೋ ಅವಮಾನವನ್ನ ಮುಂದೆ ಯಾವತ್ತೂ ನೆನಪಿಸ್ಕೊಳ್ಳಲ್ಲ.”
5 “ನಿನ್ನ ಮಹಾ ಸೃಷ್ಟಿಕರ್ತನೇ*+ ನಿನಗೆ ಗಂಡನಂತಿದ್ದಾನೆ,*+
ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು,
ಇಸ್ರಾಯೇಲ್ಯರ ಪವಿತ್ರ ದೇವರೇ ನಿನ್ನನ್ನ ಬಿಡಿಸ್ಕೊಂಡು ಬಂದವನು.+
ಆತನನ್ನ ಇಡೀ ಭೂಮಿಗೆ ದೇವರು ಅಂತ ಕರೆಯಲಾಗುತ್ತೆ.+
6 ಯಾಕಂದ್ರೆ ತೊರೆದುಬಿಟ್ಟಿರೋ ಮತ್ತು ಮನನೊಂದಿರೋ ಹೆಂಡತಿಯನ್ನ ಕರಿಯೋ ತರ,+
ಯೌವನದಲ್ಲಿ ಮದುವೆಯಾಗಿ ಆಮೇಲೆ ನಿರಾಕರಿಸಿರೋ ಹೆಂಡತಿಯನ್ನ ಕರಿಯೋ ತರ ಯೆಹೋವ ನಿನ್ನನ್ನ ಕರೆದಿದ್ದಾನೆ” ಅಂತ ನಿನ್ನ ದೇವರು ಹೇಳ್ತಿದ್ದಾನೆ.
7 “ಕ್ಷಣ ಮಾತ್ರಕ್ಕೆ ನಾನು ನಿನ್ನನ್ನ ತೊರೆದುಬಿಟ್ಟಿದ್ದೆ,
ಆದ್ರೆ ಮಹಾ ಕರುಣೆಯಿಂದ ಮತ್ತೆ ನಾನು ನಿನ್ನನ್ನ ಸೇರಿಸ್ಕೊಳ್ತೀನಿ.+
8 ವಿಪರೀತವಾದ ಕ್ರೋಧದಿಂದ* ನಾನು ನನ್ನ ಮುಖವನ್ನ ಒಂದು ಕ್ಷಣಕ್ಕೆ ನಿನ್ನಿಂದ ಮರೆಮಾಡ್ಕೊಂಡಿದ್ದೆ,+
ಆದ್ರೆ ಅಂತ್ಯವಿಲ್ಲದ ಶಾಶ್ವತ ಪ್ರೀತಿಯಿಂದ ನಾನು ನಿನಗೆ ಕರುಣೆ ತೋರಿಸ್ತೀನಿ”+ ಅಂತ ನಿನ್ನನ್ನ ಬಿಡಿಸ್ಕೊಂಡು ಬರೋ+ ಯೆಹೋವ ಹೇಳ್ತಿದ್ದಾನೆ.
9 “ಇದು ನನಗೆ ನೋಹನ ದಿನಗಳ ತರ ಇದೆ.+
ಇನ್ನು ಮುಂದೆ ಜಲಪ್ರಳಯದಿಂದ ಭೂಮಿಯನ್ನ ಮುಳುಗಿಸಲ್ಲ ಅಂತ ನಾನು ನೋಹನ ಕಾಲದಲ್ಲಿ ಆಣೆ ಮಾಡಿದ್ದೆ.+
ಅದೇ ರೀತಿ ಇನ್ನು ಯಾವತ್ತೂ ನಾನು ನಿನ್ನ ಮೇಲೆ ಕೋಪ ಮಾಡ್ಕೊಳ್ಳಲ್ಲ ಅಂತ, ನಿನ್ನನ್ನ ಗದರಿಸಲ್ಲ ಅಂತ ಆಣೆ ಮಾಡ್ತೀನಿ.+
10 ಪರ್ವತಗಳು ಅಳಿದು ಹೋದ್ರೂ
ಬೆಟ್ಟಗಳು ಕದಲಿ ಹೋದ್ರೂ
ನಿನ್ನ ಮೇಲೆ ನನಗಿರೋ ಶಾಶ್ವತ ಪ್ರೀತಿ ಅಳಿದುಹೋಗಲ್ಲ,+
ನಾನು ಮಾಡ್ಕೊಂಡಿರೋ ಶಾಂತಿಯ ಒಪ್ಪಂದ ಕದಲಿಹೋಗಲ್ಲ,”+ ಅಂತ ನಿನ್ನ ಮೇಲೆ ಕರುಣೆಯಿರೋ ಯೆಹೋವ ಹೇಳ್ತಿದ್ದಾನೆ.+
11 “ಕಷ್ಟದಲ್ಲಿರೋ ಸ್ತ್ರೀಯೇ,+ ಬಿರುಗಾಳಿಯ ಬಡಿತಕ್ಕೆ ಗುರಿ ಆಗಿರುವವಳೇ, ಸಾಂತ್ವನ ಸಿಗದಿರುವವಳೇ,+
ಗಟ್ಟಿಯಾದ ಗಾರೆ ಹಾಕಿ ನಾನು ನಿನ್ನ ಕಲ್ಲುಗಳನ್ನ ಕೂರಿಸ್ತೀನಿ
ನೀಲಮಣಿಗಳಿಂದ ನಿನ್ನ ಅಡಿಪಾಯವನ್ನ ಹಾಕ್ತೀನಿ.+
12 ನಾನು ನಿನ್ನ ಕೈಪಿಡಿಗೋಡೆಗಳಿಗೆ ಮಾಣಿಕ್ಯಗಳನ್ನ,
ನಿನ್ನ ಬಾಗಿಲುಗಳಿಗೆ ಹೊಳೆಯೋ ಕಲ್ಲುಗಳನ್ನ,*
ನಿನ್ನ ಎಲ್ಲ ಗಡಿಗಳಿಗೆ ಅಮೂಲ್ಯವಾದ ಕಲ್ಲುಗಳನ್ನ ಹಾಕ್ತೀನಿ.
14 ನಿನ್ನನ್ನ ನೀತಿಯಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ.+
ದಬ್ಬಾಳಿಕೆಯನ್ನ ನಿನ್ನಿಂದ ತುಂಬ ದೂರದಲ್ಲಿ ಇರಿಸಲಾಗುತ್ತೆ,+
ನಿನಗೆ ಯಾವ ಭಯನೂ ಇರಲ್ಲ, ಯಾವುದೂ ನಿನ್ನನ್ನ ಹೆದರಿಸಲ್ಲ,
ಅದು ನಿನ್ನ ಹತ್ರಕ್ಕೂ ಬರಲ್ಲ.+
15 ಯಾರಾದ್ರೂ ನಿನ್ನ ಮೇಲೆ ದಾಳಿ ಮಾಡಿದ್ರೆ,
ಅದು ನನ್ನ ಆದೇಶದಿಂದಲ್ಲ.
ನಿನ್ನ ಮೇಲೆ ದಾಳಿ ಮಾಡುವವರು ಯಾರೇ ಆಗಿರಲಿ ಅವರು ಸೋಲುಣ್ಣುತ್ತಾರೆ.”+
16 “ಇಗೋ! ಕೆಂಡವನ್ನ ಊದುತ್ತಾ,
ಆಯುಧಗಳನ್ನ ತಯಾರಿಸೋ
ಕರಕುಶಲಗಾರನನ್ನ ಸೃಷ್ಟಿಸಿದವನು ನಾನೇ,
ನಾಶಮಾಡೋ ನಾಶಕನನ್ನ ಸೃಷ್ಟಿಸಿದವನೂ ನಾನೇ.+