ಮತ್ತಾಯ
20 ದೇವರ ಆಳ್ವಿಕೆಯನ್ನ ತೋಟದ ಯಜಮಾನನಿಗೆ ಹೋಲಿಸಬಹುದು. ಬೆಳಗಾದಾಗ ಅವನು ತನ್ನ ದ್ರಾಕ್ಷಿ ತೋಟದಲ್ಲಿ ಕೆಲಸಕ್ಕೆ ಜನ್ರನ್ನ ಹುಡುಕೋಕೆ ಹೋದ.+ 2 ‘ದಿನಕ್ಕೆ ಒಂದು ದಿನಾರು* ಕೂಲಿ ಕೊಡ್ತೀನಿ’ ಅಂತ ಹೇಳಿ ಕೆಲಸದವ್ರನ್ನ ದ್ರಾಕ್ಷಿ ತೋಟಕ್ಕೆ ಕಳಿಸಿದ. 3 ಬೆಳಿಗ್ಗೆ ಸುಮಾರು 9 ಗಂಟೆಗೆ ಮತ್ತೆ ಹೋಗಿ ಸಂತೆಯಲ್ಲಿ ಕೆಲಸ ಇಲ್ಲದೆ ನಿಂತಿದ್ದ ಕೆಲವ್ರಿಗೆ 4 ‘ನೀವು ಕೂಡ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ. ನಿಮಗೆ ಒಳ್ಳೇ ಕೂಲಿ ಕೊಡ್ತೀನಿ’ ಅಂದ. 5 ಅವರು ತೋಟಕ್ಕೆ ಹೋದ್ರು. ಆ ಯಜಮಾನ ಮತ್ತೆ ಸುಮಾರು 12 ಗಂಟೆಗೆ, ಆಮೇಲೆ ಮಧ್ಯಾಹ್ನ 3 ಗಂಟೆಗೆ ಕೆಲಸದವ್ರನ್ನ ಇದೇ ತರ ತನ್ನ ತೋಟಕ್ಕೆ ಕಳಿಸಿದ. 6 ಕೊನೆಗೆ ಸಾಯಂಕಾಲ ಸುಮಾರು 5 ಗಂಟೆಗೆ ಮತ್ತೆ ಹೋದ. ಕೆಲ್ಸ ಇಲ್ಲದೆ ಸುಮ್ಮನೆ ನಿಂತಿದ್ದ ಕೆಲವ್ರಿಗೆ ‘ಇಡೀ ದಿನ ಕೆಲಸ ಮಾಡದೆ ಯಾಕೆ ಸುಮ್ಮನೆ ನಿಂತಿದ್ದೀರ?’ ಅಂತ ಕೇಳಿದ. 7 ಅದಕ್ಕೆ ಅವರು ‘ಯಾರೂ ನಮ್ಮನ್ನ ಕೆಲಸಕ್ಕೆ ಕರೆದಿಲ್ಲ’ ಅಂದ್ರು. ಆಗ ಯಜಮಾನ ‘ನೀವೂ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸ ಮಾಡಿ’ ಅಂದ.
8 ಸಂಜೆ ಆದಾಗ ದ್ರಾಕ್ಷಿ ತೋಟದ ಯಜಮಾನ ಕೆಲಸ ನೋಡ್ಕೊಳ್ಳೋನಿಗೆ ‘ಕೆಲಸದವ್ರನ್ನೆಲ್ಲ ಕರೆದು ಕೂಲಿ ಕೊಡು.+ ಕೊನೆಗೆ ಬಂದವ್ರಿಗೆ ಮೊದ್ಲು ಕೊಡು, ಮೊದ್ಲು ಬಂದವ್ರಿಗೆ ಕೊನೆಯಲ್ಲಿ ಕೊಡು’ ಅಂದ. 9 ಕೊನೆಗೆ ಬಂದವ್ರಿಗೆ ಒಂದು ದಿನಾರು ಸಿಕ್ತು. 10 ಆಗ ಮೊದ್ಲು ಬಂದವರು ತಮಗೆ ಹೆಚ್ಚು ಕೂಲಿ ಸಿಗುತ್ತೆ ಅಂತ ನೆನಸಿದ್ರು. ಆದ್ರೆ ಅವ್ರಿಗೂ ಒಂದೇ ದಿನಾರು ಸಿಕ್ತು. 11 ಆಗ ಅವರು ತೋಟದ ಯಜಮಾನನ ವಿರುದ್ಧ ಗೊಣಗಿದ್ರು. 12 ಅವರು ಯಜಮಾನನಿಗೆ ‘ಕೊನೆಗೆ ಬಂದವರು ಬರೀ ಒಂದೇ ತಾಸು ಕೆಲಸಮಾಡಿದ್ರು. ನಾವು ಇಡೀ ದಿನ ಕಷ್ಟಪಟ್ಟು ಬಿಸಿಲಲ್ಲಿ ಕೆಲಸಮಾಡಿದ್ವಿ. ಆದ್ರೆ ನಮಗೆ ಕೊಟ್ಟಷ್ಟೇ ಅವ್ರಿಗೂ ಕೊಟ್ರಿ. ಇದು ಅನ್ಯಾಯ ಅಲ್ವಾ?’ ಅಂದ್ರು. 13 ಅದಕ್ಕೆ ಯಜಮಾನ ಅವ್ರಲ್ಲಿ ಒಬ್ಬನಿಗೆ ‘ಗೆಳೆಯಾ, ನಾನು ನಿನಗೆ ಏನೂ ಅನ್ಯಾಯ ಮಾಡ್ತಾ ಇಲ್ಲ. ನೀನು ಒಂದು ದಿನಾರಿಗೆ ನನ್ನ ಹತ್ರ ಕೆಲಸಮಾಡೋಕೆ ಒಪ್ಕೊಂಡೆ ಅಲ್ವಾ?+ 14 ನಿನ್ನ ಕೂಲಿ ತಗೊಂಡು ಹೋಗು. ನಿನಗೆ ಕೊಟ್ಟ ಕೂಲಿನೇ ಒಂದು ತಾಸು ದುಡಿದವನಿಗೂ ಕೊಡಬೇಕಂತ ನನಗೆ ಅನಿಸ್ತು. 15 ನನ್ನ ದುಡ್ಡನ್ನ ನಂಗೆ ಇಷ್ಟಬಂದ ಹಾಗೆ ಖರ್ಚುಮಾಡೋ ಅಧಿಕಾರ ನನಗಿಲ್ವಾ? ನಾನು ಒಳ್ಳೇದನ್ನ ಮಾಡೋದನ್ನ ನೋಡಿ ನಿನಗೆ ಹೊಟ್ಟೆಕಿಚ್ಚಾಗ್ತಿದ್ಯಾ?’ ಅಂದ.+ 16 ಈ ತರ ಹಿಂದೆ ಇರೋ ಜನ ಮುಂದೆ ಬರ್ತಾರೆ. ಮುಂದೆ ಇರೋ ಜನ ಹಿಂದೆ ಹೋಗ್ತಾರೆ.”+
17 ಯೇಸು ಯೆರೂಸಲೇಮಿಗೆ ಹೋಗ್ತಿರುವಾಗ 12 ಶಿಷ್ಯರನ್ನ ಪಕ್ಕಕ್ಕೆ ಕರ್ಕೊಂಡು ಹೋಗಿ+ 18 “ನೋಡಿ, ನಾವು ಯೆರೂಸಲೇಮಿಗೆ ಹೋಗ್ತಿದ್ದೀವಿ. ಅಲ್ಲಿ ಮನುಷ್ಯಕುಮಾರನನ್ನ ಮುಖ್ಯ ಪುರೋಹಿತರ ಮತ್ತು ಪಂಡಿತರ ಕೈಗೆ ಹಿಡ್ಕೊಡ್ತಾರೆ. ಅವರು ಅವನಿಗೆ ಮರಣದಂಡನೆ ವಿಧಿಸ್ತಾರೆ.+ 19 ಅವನನ್ನ ಯೆಹೂದ್ಯರಲ್ಲದ ಜನ್ರ ಕೈಗೆ ಒಪ್ಪಿಸ್ತಾರೆ. ಆ ಜನ ಅವನನ್ನ ಅವಮಾನ ಮಾಡ್ತಾರೆ, ಚಾಟಿಯಿಂದ ಹೊಡಿತಾರೆ, ಕಂಬಕ್ಕೆ ನೇತುಹಾಕಿ ಸಾಯಿಸ್ತಾರೆ.+ ಆದ್ರೆ ಮೂರು ದಿನ ಆದಮೇಲೆ ಅವನು ಮತ್ತೆ ಬದುಕ್ತಾನೆ” ಅಂದನು.+
20 ಇದಾದ ಮೇಲೆ ಜೆಬೆದಾಯನ ಹೆಂಡತಿ ತನ್ನ ಇಬ್ರು ಮಕ್ಕಳ+ ಜೊತೆ ಯೇಸು ಹತ್ರ ಏನೋ ಕೇಳಬೇಕು ಅಂತ ಬಂದಳು. ಅವಳು ಯೇಸುಗೆ ನಮಸ್ಕಾರ ಮಾಡಿದಳು.+ 21 ಆಗ ಯೇಸು “ನಿನಗೆ ಏನು ಬೇಕು?” ಅಂತ ಕೇಳಿದ. ಅವಳು “ನೀನು ರಾಜ ಆಗುವಾಗ ನನ್ನ ಈ ಇಬ್ರು ಮಕ್ಕಳಲ್ಲಿ ಒಬ್ಬ ನಿನ್ನ ಬಲಗಡೆಲಿ ಇನ್ನೊಬ್ಬ ಎಡಗಡೆಲಿ ಕೂರಬೇಕು. ಅದೇ ನನ್ನ ಕೋರಿಕೆ” ಅಂದಳು.+ 22 ಅದಕ್ಕೆ ಯೇಸು “ನೀವು ಏನು ಕೇಳ್ತಾ ಇದ್ದೀರಾ ಅಂತ ನಿಮಗೆ ಗೊತ್ತಿಲ್ಲ. ನಾನು ಕುಡಿಯೋ ಪಾತ್ರೆಯಲ್ಲಿ ನಿಮ್ಮಿಬ್ರಿಗೂ ಕುಡಿಯೋಕಾಗುತ್ತಾ?”+ ಅಂದ. ಅವರು “ಹೌದು ಆಗುತ್ತೆ” ಅಂದ್ರು. 23 ಆಗ ಯೇಸು “ನಾನು ಕುಡಿಯೋ ಪಾತ್ರೆಯಲ್ಲಿ ನೀವು ಖಂಡಿತ ಕುಡಿತೀರ.+ ಆದ್ರೆ ನನ್ನ ಬಲಗಡೆ, ಎಡಗಡೆ ಯಾರು ಕೂತ್ಕೊಬೇಕು ಅಂತ ನಿರ್ಧಾರ ಮಾಡೋದು ನನ್ನ ಕೈಲಿಲ್ಲ. ನನ್ನ ಅಪ್ಪ ಯಾರಿಗಾಗಿ ಆ ಜಾಗ ಸಿದ್ಧ ಮಾಡ್ತಾನೋ ಅವ್ರೇ ಅದ್ರಲ್ಲಿ ಕೂರ್ತಾರೆ” ಅಂದನು.+
24 ಉಳಿದ ಹತ್ತು ಶಿಷ್ಯರಿಗೆ ಇದು ಗೊತ್ತಾದಾಗ ಅವ್ರಿಗೆ ಈ ಇಬ್ಬರ ಮೇಲೆ ತುಂಬ ಕೋಪ ಬಂತು.+ 25 ಆದ್ರೆ ಯೇಸು ಶಿಷ್ಯರನ್ನ ಹತ್ರ ಕರೆದು “ಲೋಕದ ಅಧಿಕಾರಿಗಳು ಜನ್ರ ಮೇಲೆ ಅಧಿಕಾರ ಚಲಾಯಿಸ್ತಾರೆ, ದೊಡ್ಡವರು ಅವ್ರ ಮೇಲೆ ದಬ್ಬಾಳಿಕೆ ಮಾಡ್ತಾರೆ ಅಂತ ನಿಮಗೆ ಗೊತ್ತು.+ 26 ಆದ್ರೆ ನಿಮ್ಮಲ್ಲಿ ಹಾಗೆ ಇರಬಾರದು.+ ನಿಮ್ಮಲ್ಲಿ ದೊಡ್ಡವನು ಆಗಬೇಕು ಅಂತ ಇರುವವನು ಬೇರೆಯವ್ರ ಸೇವೆ ಮಾಡಬೇಕು.+ 27 ಎಲ್ರಿಗಿಂತ ಮುಖ್ಯ ಸ್ಥಾನದಲ್ಲಿ ಇರೋಕೆ ಆಸೆಪಡುವವನು ಬೇರೆಯವ್ರ ದಾಸನಾಗಿರಬೇಕು.+ 28 ಮನುಷ್ಯಕುಮಾರ ಸಹ ಸೇವೆ ಮಾಡಿಸ್ಕೊಳ್ಳೋಕೆ ಬರಲಿಲ್ಲ. ಸೇವೆ ಮಾಡೋಕೆ ಬಂದ.+ ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ ಕೊಡೋಕೆ ಬಂದ” ಅಂದನು.+
29 ಅವರು ಯೆರಿಕೋದಿಂದ ಹೋಗ್ತಿರುವಾಗ ತುಂಬ ಜನ ಆತನ ಹಿಂದೆ ಹೋದ್ರು. 30 ದಾರಿ ಬದಿಯಲ್ಲಿ ಕೂತಿದ್ದ ಇಬ್ರು ಕುರುಡರಿಗೆ ಯೇಸು ಇಲ್ಲಿಂದ ಹೋಗ್ತಿದ್ದಾನೆ ಅಂತ ಗೊತ್ತಾಯ್ತು. ಆಗ ಅವರು “ಸ್ವಾಮಿ, ದಾವೀದನ ಮಗನೇ, ನಮಗೆ ಕರುಣೆ ತೋರಿಸು” ಅಂತ ಕೂಗಿದ್ರು.+ 31 ಜನ ‘ಸುಮ್ಮನೆ ಇರಿ’ ಅಂತ ಬೈದ್ರೂ ಅವರು “ಸ್ವಾಮಿ, ದಾವೀದನ ಮಗನೇ, ಕರುಣೆ ತೋರಿಸು” ಅಂತ ಇನ್ನೂ ಜೋರಾಗಿ ಕೂಗಿದ್ರು. 32 ಆಗ ಯೇಸು ಅಲ್ಲೇ ನಿಂತು ಅವ್ರನ್ನ ಹತ್ರ ಕರೆದು “ನಾನು ನಿಮಗೆ ಏನು ಸಹಾಯ ಮಾಡಲಿ?” ಅಂತ ಕೇಳಿದನು. 33 ಅದಕ್ಕೆ ಅವರು “ಸ್ವಾಮಿ, ನಮಗೆ ಕಣ್ಣು ಬರೋ ತರ ಮಾಡು” ಅಂದ್ರು. 34 ಆಗ ಯೇಸುಗೆ ಅವ್ರ ಮೇಲೆ ತುಂಬ ಕನಿಕರ ಆಯ್ತು. ಅವ್ರ ಕಣ್ಣು ಮುಟ್ಟಿದಾಗ+ ಅವ್ರಿಗೆ ತಕ್ಷಣ ಕಣ್ಣು ಬಂತು. ಅವರು ಆತನ ಶಿಷ್ಯರಾದ್ರು.