ಕೀರ್ತನೆ
78 ನನ್ನ ಜನ್ರೇ, ನನ್ನ ಉಪದೇಶ* ಕೇಳಿಸ್ಕೊಳ್ಳಿ,
ನನ್ನ ಬಾಯಿಂದ ಬರೋ ಮಾತುಗಳನ್ನ ಕೇಳಿಸ್ಕೊಳ್ಳಿ.
3 ನಾವು ಕೇಳಿಸ್ಕೊಂಡ, ನಮಗೆ ಗೊತ್ತಿರೋ ವಿಷ್ಯಗಳನ್ನ,
ನಮ್ಮ ಅಪ್ಪಂದಿರು ನಮಗೆ ಹೇಳಿಕೊಟ್ಟಿದ್ದನ್ನ,+
4 ನಾವು ನಮ್ಮ ಮಕ್ಕಳಿಗೆ ಹೇಳದೆ ಇರಲ್ಲ,
ಹೊಗಳಲೇ ಬೇಕಾದ ಯೆಹೋವನ ಕೆಲಸಗಳನ್ನ ಮತ್ತು ಆತನ ಶಕ್ತಿಯನ್ನ,+
ಆತನು ಮಾಡಿದ ಅದ್ಭುತಗಳನ್ನ+
ನಾವು ಮುಂದೆ ಬರೋ ಪೀಳಿಗೆಗೆ ಹೇಳೇ ಹೇಳ್ತೀವಿ.+
5 ಆತನು ಯಾಕೋಬನಿಗೆ ಒಂದು ವಿಷ್ಯ ಜ್ಞಾಪಿಸಿದ
ಇಸ್ರಾಯೇಲ್ಯರಿಗೆ ನಿಯಮ ಪುಸ್ತಕ ಕೊಟ್ಟ,
ಈ ವಿಷ್ಯಗಳನ್ನ ನಿಮ್ಮ ಮಕ್ಕಳಿಗೆ ತಿಳಿಸಬೇಕು ಅಂತ
ಆತನು ನಮ್ಮ ಪೂರ್ವಜರಿಗೆ ಆಜ್ಞೆ ಕೊಟ್ಟ.+
6 ಆಗಲೇ ಮುಂದೆ ಬರೋ ಪೀಳಿಗೆಗೆ,
ಹುಟ್ಟೋ ಮಕ್ಕಳಿಗೆ ಅದ್ರ ಬಗ್ಗೆ ತಿಳ್ಕೊಳ್ಳೋಕೆ ಆಗುತ್ತೆ.+
ಅಷ್ಟೇ ಅಲ್ಲ ಅದನ್ನ ಅವ್ರ ಮಕ್ಕಳಿಗೂ ಹೇಳಿಕೊಡ್ತಾರೆ.+
8 ಆಗ ಅವರು ತಮ್ಮ ಪೂರ್ವಜರ ತರ ಆಗಲ್ಲ,
ಅವ್ರ ಪೂರ್ವಜರು ಮೊಂಡರೂ ದಂಗೆಕೋರರೂ ಆಗಿದ್ರು,+
ಅವ್ರ ಹೃದಯ ಚಂಚಲವಾಗಿತ್ತು,+
ಅವರು ದೇವರಿಗೆ ನಂಬಿಕೆ ದ್ರೋಹ ಮಾಡಿದ್ರು.
9 ಎಫ್ರಾಯೀಮ್ಯರ ಹತ್ರ ಬಿಲ್ಲುಗಳಿದ್ರೂ,
ಯುದ್ಧದ ದಿನ ಓಡಿಹೋದ್ರು.
14 ಆತನು ಅವ್ರನ್ನ ಹಗಲೆಲ್ಲ ಮೋಡದಿಂದ
ರಾತ್ರಿಯೆಲ್ಲ ಬೆಂಕಿಯ ಬೆಳಕಿಂದ ನಡೆಸಿದ.+
15 ಕಾಡಲ್ಲಿ ಬಂಡೆಗಳನ್ನ ಒಡೆದು,
ಸಮುದ್ರದಷ್ಟು ನೀರನ್ನ ಕೊಟ್ಟ.
ಆ ನೀರನ್ನ ಕುಡಿದು ಅವ್ರಿಗೆ ತೃಪ್ತಿ ಆಯ್ತು.+
16 ಕಡಿದಾದ ಬಂಡೆಯಿಂದ ಆತನು ಪ್ರವಾಹ ತಂದ,
ನದಿ ನೀರು ಹರಿಯೋ ತರ ನೀರನ್ನ ಹರಿಸಿದ.+
17 ಆದ್ರೆ ಅವರು ಕಾಡಲ್ಲಿ ಸರ್ವೋನ್ನತನ ವಿರುದ್ಧ ದಂಗೆ ಎದ್ದು,
ಆತನ ವಿರುದ್ಧ ಪಾಪ ಮಾಡ್ತಾನೇ ಇದ್ರು.+
19 “ಈ ಕಾಡಲ್ಲಿ ನಮಗೆ ಊಟ ಕೊಡೋಕೆ ದೇವರಿಂದ ಆಗುತ್ತಾ?” ಅಂತ ದೇವರ ವಿರುದ್ಧ ಮಾತಾಡಿದ್ರು.+
20 ಆತನು ಬಂಡೆಯನ್ನ ಹೊಡೆದ,
ಆಗ ನೀರು ಪ್ರವಾಹದ ತರ ಹರೀತು.+
ಹಾಗಿದ್ರೂ ಅವರು “ನಮಗೆ ಆತನು ರೊಟ್ಟಿ ಕೊಡೋಕೆ ಆಗುತ್ತಾ?
ತನ್ನ ಜನ್ರಿಗೆ ಮಾಂಸ ಕೊಡೋಕೆ ಆಗುತ್ತಾ?” ಅಂತ ಕೇಳಿದ್ರು.+
21 ಅವ್ರ ಮಾತನ್ನ ಯೆಹೋವ ಕೇಳಿಸ್ಕೊಂಡಾಗ ಆತನಿಗೆ ತುಂಬ ಕೋಪ ಬಂತು,+
ಯಾಕೋಬನ ವಿರುದ್ಧ ಬೆಂಕಿ+ ಹೊತ್ತಿ ಉರೀತು,
ಇಸ್ರಾಯೇಲಿನ ವಿರುದ್ಧ ಆತನ ರೋಷಾಗ್ನಿ ಭುಗಿಲೆದ್ದಿತು.+
22 ಯಾಕಂದ್ರೆ ಅವರು ದೇವರ ಮೇಲೆ ನಂಬಿಕೆ ಇಡಲಿಲ್ಲ,+
ಅವ್ರನ್ನ ರಕ್ಷಿಸೋಕೆ ಆತನಿಗೆ ಶಕ್ತಿ ಇದೆ ಅನ್ನೋ ಭರವಸೆ ಅವ್ರಿಗೆ ಇರಲಿಲ್ಲ.
23 ಹಾಗಾಗಿ ಆತನು ಆಕಾಶದ ಮೇಘಗಳಿಗೆ ಆಜ್ಞೆ ಕೊಟ್ಟ,
ಗಗನದ ಬಾಗಿಲುಗಳನ್ನ ತೆರೆದ.
26 ಆಕಾಶದಲ್ಲಿ ಪೂರ್ವದ ಗಾಳಿ ಎಬ್ಬಿಸಿ,
ತನ್ನ ಶಕ್ತಿಯಿಂದ ದಕ್ಷಿಣ ಗಾಳಿಯನ್ನ ಬೀಸೋ ಹಾಗೆ ಮಾಡಿದ.+
27 ಧೂಳಿನ ತರ ಮಾಂಸವನ್ನ ಅವ್ರ ಮೇಲೆ ಸುರಿಸಿದ,
ಸಮುದ್ರ ತೀರದ ಮರಳಿನಷ್ಟು ಪಕ್ಷಿಗಳನ್ನ ಅವ್ರಿಗೆ ಕೊಟ್ಟ.
28 ಆತನು ಪಕ್ಷಿಗಳನ್ನ ತನ್ನ ಪಾಳೆಯದ ಮಧ್ಯದಲ್ಲಿ ಬೀಳೋ ಹಾಗೆ ಮಾಡಿದ,
ಅವನ್ನ ತನ್ನ ಡೇರೆ ಸುತ್ತ ಬೀಳಿಸಿದ.
29 ಹೊಟ್ಟೆ ಬಿರಿಯೋ ತನಕ ಅವರು ತಿಂದ್ರು,
ಅವರು ಬಯಸಿದ್ದನ್ನ ಅವ್ರಿಗೆ ಕೊಟ್ಟ.+
30 ಆದ್ರೆ ಅವರು ತಮ್ಮ ಆಸೆಗೆ ಕಡಿವಾಣ ಹಾಕಲಿಲ್ಲ,
ಅವ್ರ ಬಾಯಲ್ಲಿ ಇನ್ನೂ ಊಟ ಇರೋವಾಗ್ಲೇ,
31 ದೇವರ ಕೋಪ ಅವ್ರ ಮೇಲೆ ಹೊತ್ತಿ ಉರೀತು.+
ಆತನು ಅವ್ರ ಶಕ್ತಿಶಾಲಿ ಗಂಡಸರನ್ನ ಕೊಂದುಹಾಕಿದ,+
ಇಸ್ರಾಯೇಲಿನ ಯುವಕರನ್ನ ನೆಲಕ್ಕೆ ಉರುಳಿಸಿದ.
33 ಹಾಗಾಗಿ ಆತನು ಒಂದು ಉಸಿರಿನ ಹಾಗೆ ಅವ್ರ ದಿನಗಳನ್ನ,+
ಕ್ಷಣಮಾತ್ರದಲ್ಲೇ ವಿಪತ್ತುಗಳಿಂದ ಅವ್ರ ಆಯಸ್ಸನ್ನ ಮುಗಿಸಿಬಿಟ್ಟ.
34 ಆತನು ಅವ್ರನ್ನ ಕೊಲ್ಲುತ್ತಿದ್ದಾಗೆಲ್ಲ ಅವರು ಆತನನ್ನ ಹುಡುಕ್ತಿದ್ರು,+
ವಾಪಸ್ ಬಂದು ಆತನಿಗಾಗಿ ನೋಡ್ತಿದ್ರು.
35 ಯಾಕಂದ್ರೆ ದೇವರು ತಮ್ಮ ಬಂಡೆ ಅಂತ ಅವರು ನೆನಪಿಸ್ಕೊಳ್ತಿದ್ರು+
ಸರ್ವೋನ್ನತ ದೇವರು ನಮ್ಮನ್ನ ಬಿಡಿಸ್ತಾನೆ* ಅಂತ ಜ್ಞಾಪಿಸಿಕೊಳ್ತಿದ್ರು.+
36 ಆದ್ರೆ ಅವರು ತಮ್ಮ ಬಾಯಿಂದ ಆತನನ್ನ ವಂಚಿಸೋಕೆ ಪ್ರಯತ್ನಿಸಿದ್ರು
ತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದ್ರು.
ಕಡುಕೋಪದಿಂದ ಕೆರಳೋ ಬದಲಿಗೆ,
ತುಂಬ ಸಲ ಆತನು ತನ್ನ ಕೋಪವನ್ನ ಹಿಡಿದಿಡುತ್ತಿದ್ದ.+
43 ಈಜಿಪ್ಟಲ್ಲಿ ಆತನು ತೋರಿಸಿದ ಗುರುತುಗಳನ್ನ,+
ಸೋನ್ ಪ್ರದೇಶದಲ್ಲಿ ಆತನು ಮಾಡಿದ ಅದ್ಭುತಗಳನ್ನ ಅವರು ಮರೆತುಬಿಟ್ರು.
44 ಆತನು ನೈಲ್ ನದಿ ನೀರನ್ನ ರಕ್ತ ಮಾಡಿದ,+
ಅವರು ನದಿ ನೀರನ್ನ ಕುಡಿಯೋಕೆ ಆಗದ ಹಾಗೆ ಮಾಡಿದ.
46 ಆತನು ಅವ್ರ ಬೆಳೆಯನ್ನ ಹೊಟ್ಟೆಬಾಕ ಮಿಡತೆಗಳಿಗೆ ಕೊಟ್ಟ,
ಆತನು ಅವ್ರ ಕೈಕೆಲಸದ ಫಲವನ್ನ ಮಿಡತೆಗಳ ಪಾಲುಮಾಡಿದ.+
47 ಆಲಿಕಲ್ಲಿನ ಮಳೆಯಿಂದ+ ಅವ್ರ ದ್ರಾಕ್ಷಿಬಳ್ಳಿಯನ್ನ,
ಅವ್ರ ಅತ್ತಿ ಮರಗಳನ್ನ ನಾಶಮಾಡಿದ.
49 ಆತನು ಅವ್ರ ಮೇಲೆ ತನ್ನ ರೋಷಾಗ್ನಿಯನ್ನ ಸುರಿಸಿದ,
ಕೋಪ, ಕ್ರೋಧ ಮತ್ತು ಸಂಕಟಗಳನ್ನ ತಂದ,
ಅವ್ರ ಮೇಲೆ ವಿಪತ್ತು ತರೋಕೆ ದೇವದೂತರ ದಂಡನ್ನ ಕಳಿಸಿದ.
50 ಆತನು ತನ್ನ ಕೋಪ ತೋರಿಸೋಕೆ ದಾರಿಮಾಡ್ಕೊಂಡ.
ಸಾವಿಂದ ಅವ್ರನ್ನ ಕಾಪಾಡಲಿಲ್ಲ,
ಅಂಟುರೋಗಗಳಿಗೆ ಅವ್ರನ್ನ* ಒಪ್ಪಿಸಿಬಿಟ್ಟ.
51 ಕೊನೆಗೆ ಆತನು ಈಜಿಪ್ಟಿನವರ ಮೊದಲ ಗಂಡುಮಕ್ಕಳನ್ನ ಕೊಂದುಹಾಕಿದ,+
ಹಾಮನ ಡೇರೆಯಲ್ಲಿ ಮೊದಲು ಹುಟ್ಟಿದವ್ರಿಗೆ ಅಂತ್ಯ ಹಾಡಿದ.
52 ಆಮೇಲೆ ಆತನು ಕುರಿಗಳ ತರ ಜನ್ರನ್ನ ಹೊರಗೆ ಕರ್ಕೊಂಡು ಬಂದ,+
ಕಾಡಲ್ಲಿ ಕುರುಬ ದಾರಿ ತೋರಿಸೋ ತರ ಅವ್ರಿಗೆ ದಾರಿ ತೋರಿಸಿದ.
54 ಆತನು ಅವ್ರನ್ನ ತನ್ನ ಪವಿತ್ರ ದೇಶಕ್ಕೆ ಕರ್ಕೊಂಡು ಬಂದ,+
ಆತನ ಬಲಗೈಯಿಂದ ಸಂಪಾದಿಸಿದ ಬೆಟ್ಟ ಪ್ರದೇಶಕ್ಕೆ ಕರ್ಕೊಂಡು ಬಂದ.+
55 ಆತನು ಜನಾಂಗಗಳನ್ನ ಅವ್ರ ಮುಂದಿಂದ ಓಡಿಸಿಬಿಟ್ಟ,+
ಅಳತೆಯ ದಾರದಿಂದ ಅಳೆದು ಅವ್ರಿಗೆ ಆಸ್ತಿ ಹಂಚಿಕೊಟ್ಟ,+
ಇಸ್ರಾಯೇಲ್ ಕುಲಗಳು ತಮ್ಮತಮ್ಮ ಮನೆಯಲ್ಲಿ ವಾಸಿಸೋ ತರ ಮಾಡಿದ.+
56 ಆದ್ರೆ ಅವರು ಸರ್ವೋನ್ನತ ದೇವ್ರಿಗೆ ಸವಾಲು ಹಾಕ್ತಾನೇ* ಇದ್ರು, ಆತನ ವಿರುದ್ಧ ದಂಗೆ ಏಳ್ತಾನೇ ಇದ್ರು,+
ಆತನು ಮತ್ತೆ ಮತ್ತೆ ಹೇಳ್ತಿದ್ದ ವಿಷ್ಯಗಳಿಗೆ ಗಮನ ಕೊಡಲೇ ಇಲ್ಲ.+
57 ಅವರೂ ದೇವರಿಗೆ ಬೆನ್ನು ಹಾಕಿದ್ರು, ತಮ್ಮ ಪೂರ್ವಜರ ತರ ಮೋಸ ಮಾಡಿದ್ರು.+
ಬಿಗಿಯಾಗಿರದ ಬಿಲ್ಲಿನ ತರ ಭರವಸೆ ಇಡೋಕೆ ಯೋಗ್ಯತೆ ಕಳ್ಕೊಂಡ್ರು.+
58 ಅವರದ್ದೇ ದೇವಸ್ಥಾನಗಳನ್ನ ಮಾಡ್ಕೊಂಡು ಆತನಿಗೆ ಕೋಪ ಬರಿಸ್ತಾನೇ ಇದ್ರು,+
ತಮ್ಮ ಕೆತ್ತಿದ ಮೂರ್ತಿಗಳಿಂದ ಆತನನ್ನ ರೇಗಿಸಿದ್ರು.+
59 ದೇವರು ಇದನ್ನೆಲ್ಲ ನೋಡಿ ಕೋಪ ಮಾಡ್ಕೊಂಡ,+
ಆತನು ಇಸ್ರಾಯೇಲ್ಯರನ್ನ ಸಂಪೂರ್ಣವಾಗಿ ಬಿಟ್ಟುಬಿಟ್ಟ.
61 ಆತನು ತನ್ನ ಶಕ್ತಿಯ ಗುರುತನ್ನ ಸೆರೆಯಾಗಿ ಹೋಗೋಕೆ,
ತನ್ನ ವೈಭವವನ್ನ ಶತ್ರುವಿನ ಕೈವಶವಾಗೋಕೆ ಬಿಟ್ಟುಬಿಟ್ಟ.+
62 ಆತನು ತನ್ನ ಜನ್ರನ್ನ ಕತ್ತಿಗಳಿಗೆ ಒಪ್ಪಿಸಿದ,+
ತನ್ನ ಸ್ವತ್ತಿನ ಮೇಲೆ ಕೋಪಮಾಡ್ಕೊಂಡ.
63 ಆತನ ಯುವಕರನ್ನ ಬೆಂಕಿ ನುಂಗಿಹಾಕ್ತು,
ಆತನ ಕನ್ಯೆಯರಿಗಾಗಿ ಮದ್ವೆ ಹಾಡು ಕೇಳಿಸಲಿಲ್ಲ.*
65 ಆಗ ಯೆಹೋವ ನಿದ್ದೆಯಿಂದ ಏಳೋ ವ್ಯಕ್ತಿ ತರ ಎದ್ದ,+
ದ್ರಾಕ್ಷಾಮದ್ಯದ ಮತ್ತಿನಿಂದ ಹೊರಗೆ ಬಂದ ಬಲಿಷ್ಠ ವ್ಯಕ್ತಿ ತರ ಎದ್ದ.+
66 ಆತನು ತನ್ನ ಶತ್ರುಗಳನ್ನ ಓಡಿಸಿಬಿಟ್ಟ,+
ಅವ್ರಿಗೆ ಯಾವಾಗ್ಲೂ ಅವಮಾನ ಆಗೋ ತರ ಮಾಡಿದ.
67 ಆತನು ಯೋಸೇಫನ ಡೇರೆಯನ್ನ ತೊರೆದುಬಿಟ್ಟ,
ಎಫ್ರಾಯೀಮ್ ಕುಲವನ್ನ ಆರಿಸ್ಕೊಳ್ಳಲಿಲ್ಲ.