ಕೊರಿಂಥದವರಿಗೆ ಬರೆದ ಎರಡನೇ ಪತ್ರ
6 ದೇವರ ಜೊತೆ ಕೆಲಸಮಾಡೋ+ ನಾವು ನಿಮ್ಮ ಹತ್ರ ಇನ್ನೊಂದು ವಿಷ್ಯನೂ ಬೇಡ್ಕೊಳ್ತೀವಿ. ಅದೇನಂದ್ರೆ, ದೇವರ ಅಪಾರ ಕೃಪೆ ಪಡ್ಕೊಂಡಿರೋ ನಿಮಗೆ ಆ ಕೃಪೆಯನ್ನ ಆತನು ಯಾಕೆ ತೋರಿಸಿದನು ಅನ್ನೋದನ್ನ ಮರಿಬೇಡಿ.+ 2 ಯಾಕಂದ್ರೆ, “ಕೃಪೆ ತೋರಿಸೋ ಕಾಲದಲ್ಲಿ ನಾನು ನಿನ್ನ ಮಾತನ್ನ ಕೇಳಿಸ್ಕೊಂಡೆ. ರಕ್ಷಣೆಯ ದಿನ ನಾನು ನಿನಗೆ ಸಹಾಯ ಮಾಡಿದೆ” ಅಂತ ದೇವರು ಹೇಳ್ತಾನೆ.+ ಆತನು ವಿಶೇಷವಾಗಿ ಕೃಪೆ ತೋರಿಸೋ ಕಾಲ ಇದೇ. ಇದೇ ರಕ್ಷಣೆಯ ದಿನ.
3 ನಮ್ಮ ಸೇವೆ ಬಗ್ಗೆ ಯಾರೂ ಕೆಟ್ಟದಾಗಿ ಮಾತಾಡಬಾರದಂತ ನಾವು ಯಾರಿಗೂ ಯಾವ ರೀತಿಯಲ್ಲೂ ನೋವಾಗದ ಹಾಗೆ* ನಡ್ಕೊಳ್ತಾ ಇದ್ದೀವಿ.+ 4 ನಾವು ಎಲ್ಲ ತರದಲ್ಲೂ ದೇವರ ಸೇವಕರು ಅಂತ ತೋರಿಸ್ಕೊಡ್ತಾ ಇದ್ದೀವಿ.+ ನಾವು ಬೇರೆ ಬೇರೆ ಕಷ್ಟಪರೀಕ್ಷೆ, ತೊಂದ್ರೆ-ನೋವು, ಬಿಕ್ಕಟ್ಟು, ಸಮಸ್ಯೆ ಇದನ್ನೆಲ್ಲ ಸಹಿಸ್ಕೊಂಡ್ವಿ.+ 5 ತುಂಬ ಒದೆ ತಿಂದ್ವಿ, ಜೈಲಲ್ಲಿದ್ವಿ,+ ದೊಂಬಿ ಎದ್ದ ಜನ್ರ ದಾಳಿಗೆ ತುತ್ತಾದ್ವಿ, ಕಷ್ಟಪಟ್ಟು ಕೆಲಸ ಮಾಡಿದ್ವಿ, ಎಷ್ಟೋ ರಾತ್ರಿ ನಿದ್ದೆನೇ ಮಾಡಲಿಲ್ಲ, ಹೊಟ್ಟೆಗಿಲ್ಲದೆ ಇದ್ವಿ.+ 6 ನಾವು ಶುದ್ಧ ಜೀವನ ನಡೆಸಿದ್ವಿ. ಜ್ಞಾನಕ್ಕೆ ತಕ್ಕ ಹಾಗೆ ಬಾಳಿದ್ವಿ. ತಾಳ್ಮೆ,+ ದಯೆ,+ ನಿಜವಾದ ಪ್ರೀತಿ ತೋರಿಸಿದ್ವಿ,+ ಪವಿತ್ರಶಕ್ತಿಯ ಮಾರ್ಗದರ್ಶನದ ಪ್ರಕಾರ ನಡಿದ್ವಿ. 7 ಸತ್ಯವನ್ನೇ ಹೇಳಿದ್ವಿ, ದೇವರ ಶಕ್ತಿ ಮೇಲೆ ಹೊಂದಿಕೊಂಡ್ವಿ,+ ಎಡ* ಬಲ* ಕೈಗಳಲ್ಲಿ ನೀತಿಯ ಆಯುಧಗಳನ್ನ ಹಿಡ್ಕೊಂಡ್ವಿ.+ 8 ನಮಗೆ ಮಾನಮರ್ಯಾದೆ ಸಿಕ್ತು, ಅವಮಾನನೂ ಆಯ್ತು, ಹೊಗಳಿಕೆ ತೆಗಳಿಕೆ ಎರಡೂ ಬಂತು. ಜನ ನಮಗೆ ಮೋಸಗಾರರು ಅನ್ನೋ ಪಟ್ಟ ಕಟ್ಟಿದ್ರೂ ನಾವು ಸತ್ಯವಂತರಾಗೇ ಇದ್ವಿ, 9 ನಮ್ಮನ್ನ ಬೇರೆಯವರು ಗುರುತಿಸದೇ ಇದ್ರೂ ದೇವರು ಗುರುತಿಸಿದನು, ಸಾವಿನಂಚಿನಲ್ಲಿ ಇರೋ ತರ ಆದ್ರೂ* ಬದುಕಿ ಉಳಿದ್ವಿ.+ ಜನ ನಮ್ಮನ್ನ ಶಿಕ್ಷೆ ಅನುಭವಿಸೋರ ತರ ನೋಡ್ತಿದ್ದಾರೆ, ಆದ್ರೆ ನಾವು ಸತ್ತಿಲ್ಲ.+ 10 ದುಃಖದಲ್ಲಿರೋ ತರ ಕಂಡ್ರೂ ನಾವು ಯಾವಾಗ್ಲೂ ಖುಷಿಖುಷಿಯಾಗಿದ್ವಿ, ಬಡವ್ರ ತರ ಕಂಡ್ರೂ ತುಂಬ ಜನ್ರನ್ನ ಶ್ರೀಮಂತರಾಗಿ ಮಾಡ್ತೀವಿ, ಏನೂ ಇಲ್ಲದವ್ರ ತರ ಕಂಡ್ರೂ ನಮ್ಮ ಹತ್ರ ಎಲ್ಲ ಇದೆ.+
11 ಕೊರಿಂಥದ ಸಹೋದರರೇ, ನಾವು ನಿಮ್ಮ ಜೊತೆ ಮುಚ್ಚುಮರೆ ಇಲ್ಲದೆ ಮಾತಾಡಿದ್ದೀವಿ, ನಮ್ಮ ಹೃದಯದ ಬಾಗಿಲನ್ನ ವಿಶಾಲವಾಗಿ ತೆರೆದಿದ್ದೀವಿ. 12 ನಾವು ನಿಮಗೆ ಪ್ರೀತಿಯ ಹೊಳೆನೇ ಹರಿಸಿದ್ದೀವಿ,+ ಆದ್ರೆ ನೀವು ನಮಗೆ ತೋರಿಸಬೇಕಾದ ಪ್ರೀತಿಗೆ ಅಡ್ಡಗೋಡೆ ಕಟ್ಟಿದ್ದೀರ. 13 ಹಾಗಾಗಿ ನನ್ನ ಮಕ್ಕಳು ಅಂದ್ಕೊಂಡು ನಿಮಗೆ ಹೇಳ್ತಿದ್ದೀನಿ, ನೀವೂ ನಿಮ್ಮ ಹೃದಯದ ಬಾಗಿಲನ್ನ ವಿಶಾಲವಾಗಿ ತೆರೀರಿ.+
14 ಕ್ರೈಸ್ತರಲ್ಲದವ್ರ ಜೊತೆ ಜೋಡಿ ಆಗಬೇಡಿ.*+ ಯಾಕಂದ್ರೆ, ನೀತಿಗೂ ಅನೀತಿಗೂ* ಸ್ನೇಹ ಇರುತ್ತಾ?+ ಬೆಳಕೂ ಕತ್ತಲೂ ಒಂದೇನಾ?+ 15 ಅಷ್ಟೇ ಅಲ್ಲ ಕ್ರಿಸ್ತ ಮತ್ತು ಸೈತಾನನ* ಮಧ್ಯ ಒಡನಾಟ ಇರುತ್ತಾ?+ ಕ್ರೈಸ್ತನು* ಮತ್ತು ಕ್ರೈಸ್ತನಲ್ಲದವನು ಒಂದೇನಾ?+ 16 ದೇವರ ಆಲಯಕ್ಕೂ ಮೂರ್ತಿಗಳಿಗೂ ವ್ಯತ್ಯಾಸ ಇಲ್ವಾ?+ ನಾವು ಜೀವ ಇರೋ ದೇವರ ಆಲಯ ಆಗಿದ್ದೀವಿ.+ ಇದ್ರ ಬಗ್ಗೆ ದೇವರು ಹೇಳೋದು ಏನಂದ್ರೆ “ನಾನು ಅವ್ರ ಮಧ್ಯ ವಾಸಿಸ್ತೀನಿ,+ ನಾನು ಅವ್ರ ಮಧ್ಯ ನಡೆದಾಡ್ತೀನಿ, ನಾನು ಅವ್ರ ದೇವರಾಗಿ ಇರ್ತಿನಿ. ಅವರು ನನ್ನ ಜನ್ರಾಗಿ ಇರ್ತಾರೆ.”+ 17 “ಯೆಹೋವ* ಹೇಳೋದು ಏನಂದ್ರೆ ‘ಹಾಗಾಗಿ ಅವ್ರನ್ನ ಬಿಟ್ಟು ಬನ್ನಿ, ನೀವು ಅವ್ರಿಂದ ಬೇರೆಯಾಗಿ. ಅಶುದ್ಧವಾಗಿದ್ದನ್ನ ಇನ್ನು ಮುಟ್ಟಬೇಡಿ,+ ನಾನು ನಿಮ್ಮನ್ನ ಸೇರಿಸ್ಕೊಳ್ತೀನಿ.’”+ 18 “ಸರ್ವಶಕ್ತ ಯೆಹೋವ* ಹೇಳೋದು ಏನಂದ್ರೆ ‘ನಾನು ನಿಮಗೆ ತಂದೆ ಆಗ್ತೀನಿ,+ ನೀವು ನನಗೆ ಮಕ್ಕಳಾಗ್ತೀರ.’”+