ಜ್ಞಾನೋಕ್ತಿ
2 ಶ್ರೀಮಂತನಾಗಿರಲಿ ಬಡವನಾಗಿರಲಿ,
ಇಬ್ರನ್ನೂ ಸೃಷ್ಟಿ ಮಾಡಿದ್ದು ಯೆಹೋವನೇ.+
4 ದೀನತೆ, ಯೆಹೋವನ ಭಯ ಇದ್ರೆ,
ಸಿರಿಸಂಪತ್ತು, ಗೌರವ, ಜೀವ ಪಡಿತೀವಿ.+
5 ಕೆಟ್ಟವನ ದಾರಿಯಲ್ಲಿ ಮುಳ್ಳುಗಳು, ಉರ್ಲುಗಳು ಇರುತ್ತೆ,
ಆದ್ರೆ ತನ್ನ ಜೀವ ಅಮೂಲ್ಯ ಅನ್ನೋ ಯೋಚ್ನೆ ಇರುವವನು ಕೆಟ್ಟ ದಾರಿಯಿಂದ ದೂರ ಇರ್ತಾನೆ.+
10 ಗೇಲಿ ಮಾಡುವವ್ರನ್ನ ಓಡಿಸಿಬಿಡು,
ಆಗ ಕಿತ್ತಾಟ, ವಾದವಿವಾದ, ಅವಮಾನ ನಿಂತುಹೋಗುತ್ತೆ.
12 ಯೆಹೋವನ ಕಣ್ಣುಗಳು ಜ್ಞಾನ ಇರೋ ವ್ಯಕ್ತಿಯನ್ನ ಕಾದು ಕಾಪಾಡುತ್ತೆ,
ಆದ್ರೆ ಆತನು ಮೋಸಗಾರರ ಮಾತುಗಳನ್ನ ತಲೆಕೆಳಗೆ ಮಾಡ್ತಾನೆ.+
13 ಸೋಮಾರಿ “ಹೊರಗೆ ಸಿಂಹ ಇದೆ!
ಪಟ್ಟಣದ ಮುಖ್ಯಸ್ಥಳದಲ್ಲಿ* ಅದು ನನ್ನನ್ನ ಕೊಂದುಹಾಕುತ್ತೆ!”+ ಅಂತಾನೆ.
19 ಯೆಹೋವನ ಮೇಲೆ ನೀನು ತುಂಬ ನಂಬಿಕೆ ಇಡೋಕೆ,
ಇವತ್ತು ನಾನು ನಿನಗೆ ಅದನ್ನೆಲ್ಲ ವಿವರಿಸ್ತಾ ಇದ್ದೀನಿ.
20 ತುಂಬ ಸಲಹೆಗಳನ್ನ, ಮಾರ್ಗದರ್ಶನಗಳನ್ನ,
ಈ ಮುಂಚೆನೇ ನಿನಗೋಸ್ಕರ ಬರೆದಿಟ್ಟಿದ್ದೆ.
21 ಸತ್ಯವಾದ, ನೀನು ನಂಬಬಹುದಾದ ಮಾತುಗಳನ್ನ ಕಲಿಸೋಕೆ,
ನಿನ್ನನ್ನ ಕಳಿಸಿದವ್ರ ಹತ್ರ ಹೋಗಿ ಸರಿಯಾದ ವರದಿ ಕೊಡೋಕೆ ಆಗೋ ಹಾಗೆ ಕಲಿಸಿದ್ದೀನಿ.
23 ಯಾಕಂದ್ರೆ ಯೆಹೋವನೇ ಅವ್ರ ಪರವಾಗಿ ವಾದಿಸ್ತಾನೆ,+
ಅವ್ರಿಗೆ ಮೋಸ ಮಾಡುವವರ ಜೀವ ತೆಗಿತಾನೆ.
24 ಕೋಪಿಷ್ಠನ ಸಹವಾಸ ಮಾಡಬೇಡ,
ಮಾತುಮಾತಿಗೂ ಸಿಟ್ಟುಮಾಡ್ಕೊಳ್ಳೋ ವ್ಯಕ್ತಿ ಜೊತೆ ಸ್ನೇಹ ಬೆಳೆಸಬೇಡ.
26 ಕೈಕುಲುಕಿ ಒಪ್ಪಂದ ಮಾಡ್ಕೊಳ್ಳುವವ್ರ ಮಧ್ಯದಲ್ಲಾಗಲಿ
ಬೇರೆಯವ್ರಿಗೆ ಜಾಮೀನು ಕೊಡುವವ್ರ ಜೊತೆ ಆಗಲಿ ಇರಬೇಡ.+
27 ವಾಪಸ್ ಕೊಡೋಕೆ ನಿನ್ನ ಹತ್ರ ಹಣ ಇಲ್ಲಾಂದ್ರೆ,
ನೀನು ಮಲಗೋ ಹಾಸಿಗೆಯನ್ನೇ ಕಿತ್ಕೊಂಡು ಹೋಗ್ತಾರೆ.
28 ನಿನ್ನ ಪೂರ್ವಜರು ಹಾಕಿದ
ಗಡಿಯನ್ನ ಸರಿಸಬೇಡ.+
29 ತನ್ನ ಕೆಲಸದಲ್ಲಿ ನಿಪುಣನಾಗಿರೋ ವ್ಯಕ್ತಿಯನ್ನ ನೋಡಿದ್ದೀಯಾ?
ಅವನು ಸಾಮಾನ್ಯ ಜನ್ರ ಮುಂದೆ ಅಲ್ಲ,
ರಾಜರ ಮುಂದೆ ನಿಲ್ತಾನೆ.+