ಯೆಶಾಯ
2 ಯೆಹೂದ ಮತ್ತು ಯೆರೂಸಲೇಮಿನ ಬಗ್ಗೆ ಆಮೋಚನ ಮಗ ಯೆಶಾಯ ಈ ದರ್ಶನ ನೋಡಿದ+
ಯೆಹೋವನ ಆಲಯ ಇರೋ ಬೆಟ್ಟನ
ಎಲ್ಲ ಬೆಟ್ಟಗಳಿಗಿಂತ ಎತ್ರದಲ್ಲಿ ದೃಢವಾಗಿ ಸ್ಥಾಪಿಸಲಾಗುತ್ತೆ,+
ಅದನ್ನ ಎಲ್ಲ ಗುಡ್ಡಗಳಿಗಿಂತ ಎತ್ರಕ್ಕೆ ಏರಿಸಲಾಗುತ್ತೆ,
ಅಲ್ಲಿಗೆ ಎಲ್ಲ ದೇಶದ ಜನರು ಪ್ರವಾಹದ ತರ ಹರಿದು ಬರ್ತಾರೆ.+
ಆತನು ತನ್ನ ರೀತಿ-ನೀತಿಗಳ ಬಗ್ಗೆ ನಮಗೆ ಕಲಿಸ್ತಾನೆ,
ನಾವು ಆತನು ತೋರಿಸೋ ದಾರಿಗಳಲ್ಲಿ ನಡಿತೀವಿ” ಅಂತ ಹೇಳ್ತಾರೆ.+
4 ಆತನು ಜನಾಂಗಗಳಿಗೆ ತೀರ್ಪನ್ನ ಹೇಳ್ತಾನೆ,
ತುಂಬ ಜನಾಂಗಗಳ ವಿಷ್ಯಗಳನ್ನ ಸರಿಮಾಡ್ತಾನೆ.
ಅವರು ತಮ್ಮ ಕತ್ತಿಗಳನ್ನ ಬಡಿದು ನೇಗಿಲ ಗುಳಗಳಾಗಿ ಮಾಡ್ತಾರೆ,
ತಮ್ಮ ಈಟಿಗಳನ್ನ ಬಡಿದು ಕುಡುಗೋಲುಗಳಾಗಿ ಮಾಡ್ತಾರೆ.+
ಜನಾಂಗ ಜನಾಂಗಕ್ಕೆ ವಿರುದ್ಧ ಕತ್ತಿ ಎತ್ತಲ್ಲ,
ಇನ್ನು ಯಾವತ್ತೂ ಅವರು ಯುದ್ಧ ಮಾಡೋಕೆ ಕಲಿಯಲ್ಲ.+
6 ದೇವರೇ, ನೀನು ನಿನ್ನ ಜನ್ರನ್ನ, ಯಾಕೋಬನ ಮನೆತನದವ್ರನ್ನ ತೊರೆದುಬಿಟ್ಟಿದ್ದೀಯ.+
ಯಾಕಂದ್ರೆ ಅವರು ಪೂರ್ವ ದೇಶದ ತುಂಬ ಪದ್ಧತಿಗಳನ್ನ ತಮ್ಮದಾಗಿ ಮಾಡ್ಕೊಂಡಿದ್ದಾರೆ,
ಫಿಲಿಷ್ಟಿಯರ ಹಾಗೆ ಮಂತ್ರತಂತ್ರ+ ಮಾಡ್ತಿದ್ದಾರೆ,
ಅವರ ದೇಶ ವಿದೇಶಿಯರಿಂದ* ತುಂಬಿಹೋಗಿದೆ.
7 ಅವ್ರ ದೇಶ ಬೆಳ್ಳಿಬಂಗಾರದಿಂದ ತುಂಬಿಹೋಗಿದೆ,
ಅವ್ರ ನಿಕ್ಷೇಪಗಳಿಗೆ ಮಿತಿನೇ ಇಲ್ಲ,
ಅವ್ರ ದೇಶದಲ್ಲಿ ತುಂಬ ಕುದುರೆಗಳಿವೆ,
ಅವ್ರಲ್ಲಿ ರಥಗಳಿಗೇನೂ ಕಡಿಮೆ ಇಲ್ಲ.+
8 ಅವ್ರ ದೇಶ ಪ್ರಯೋಜನಕ್ಕೆ ಬಾರದ ದೇವರುಗಳಿಂದ ತುಂಬಿಹೋಗಿದೆ.+
ಅವರು ತಮ್ಮ ಸ್ವಂತ ಕೈಯಿಂದ ಮಾಡಿರೋ,
ತಮ್ಮ ಸ್ವಂತ ಬೆರಳುಗಳಿಂದ ರಚಿಸಿರೋ ಆ ದೇವರುಗಳಿಗೆ ಬಗ್ಗಿ ನಮಸ್ಕಾರ ಮಾಡ್ತಾರೆ.
9 ಹೀಗೆ ಅವರು ತಮ್ಮನ್ನೇ ಕೆಳಮಟ್ಟಕ್ಕೆ ಇಳಿಸ್ಕೊಳ್ತಾರೆ,
ಅವಮಾನಕ್ಕೆ ಗುರಿಯಾಗ್ತಾರೆ.
ಯಾವುದೇ ಕಾರಣಕ್ಕೂ ಅವ್ರನ್ನ ಕ್ಷಮಿಸೋಕೆ ನಿನ್ನಿಂದ ಆಗಲ್ಲ.
10 ಯೆಹೋವನ ಭಯಾನಕ ಕೋಪದಿಂದಾಗಿ,
ಆತನ ವೈಭವದ ತೇಜಸ್ಸಿಂದಾಗಿ,+
ನೀವೆಲ್ಲ ಬಂಡೆ ಸಂದಲ್ಲಿ ತೂರಿಹೋಗಿ, ಧೂಳಲ್ಲಿ ಅಡಗಿಕೊಳ್ಳಿ.
11 ಗರ್ವಿಷ್ಠರು ತಲೆ ತಗ್ಗಿಸಬೇಕಾಗುತ್ತೆ,
ದುರಹಂಕಾರಿಗಳ ಸೊಕ್ಕನ್ನ ಮುರಿಯಲಾಗುತ್ತೆ.
ಆ ದಿನ ಯೆಹೋವನೊಬ್ಬನೇ ಉನ್ನತನಾಗಿ ಇರ್ತಾನೆ.
12 ಯಾಕಂದ್ರೆ ಅದು ಸೈನ್ಯಗಳ ದೇವರಾದ ಯೆಹೋವನ ದಿನ.+
ಗರ್ವಿಷ್ಠರ ಮೇಲೆ, ಅಹಂಕಾರಿಗಳ ಮೇಲೆ ಆ ದಿನ ಬರುತ್ತೆ,
ಶ್ರೀಮಂತನೇ ಆಗಲಿ, ಸಾಮಾನ್ಯನೇ ಆಗಲಿ ಎಲ್ರ ಮೇಲೂ ಬರುತ್ತೆ.+
13 ಎತ್ರವಾದ, ದೊಡ್ಡದೊಡ್ಡ ಲೆಬನೋನಿನ ಎಲ್ಲ ದೇವದಾರು ಮರಗಳು
ಬಾಷಾನಿನ ಎಲ್ಲ ಓಕ್ ಮರಗಳು,
14 ಎತ್ರವಾದ ಎಲ್ಲ ಪರ್ವತಗಳು
ಎತ್ರವಾದ ಎಲ್ಲ ಬೆಟ್ಟಗಳು,
15 ದೊಡ್ಡದೊಡ್ಡ ಕೋಟೆಗಳು, ಭದ್ರ ಗೋಡೆಗಳು,
ಮನೋಹರ ದೋಣಿಗಳು ಇವೆಲ್ಲದ್ರ ಮೇಲೆ ಆ ದಿನ ಬರುತ್ತೆ.
17 ಮನುಷ್ಯರ ಅಹಂಕಾರನ ಇಳಿಸಲಾಗುತ್ತೆ,
ದುರಹಂಕಾರಿಗಳ ಸೊಕ್ಕನ್ನ ಮುರಿಯಲಾಗುತ್ತೆ.
ಆ ದಿನ ಯೆಹೋವನೊಬ್ಬನೇ ಉನ್ನತನಾಗಿ ಇರ್ತಾನೆ.
18 ಪ್ರಯೋಜನಕ್ಕೆ ಬಾರದ ದೇವರುಗಳು ಸಂಪೂರ್ಣವಾಗಿ ಕಾಣಿಸದೆ ಹೋಗ್ತವೆ.+
19 ಭೂಮಿಯನ್ನ ಭಯದಿಂದ ನಡುಗಿಸೋಕೆ ಯೆಹೋವ ಎದ್ದೇಳುವಾಗ,
ಆತನ ಭಯಾನಕ ಸಾನಿಧ್ಯದಿಂದಾಗಿ,
ಆತನ ವೈಭವದ ತೇಜಸ್ಸಿಂದಾಗಿ,+
ಜನ್ರು ಬಂಡೆಗಳ ಗುಹೆಗಳಿಗೆ ನುಗ್ತಾರೆ,
ನೆಲದ ಗುಂಡಿಗಳಲ್ಲಿ ತೂರಿಕೊಳ್ತಾರೆ.+
20 ಮನುಷ್ಯರು ತಲೆಬಾಗಿಸಿ ನಮಸ್ಕರಿಸೋಕೆ ಮಾಡ್ಕೊಂಡ
ಪ್ರಯೋಜನಕ್ಕೆ ಬಾರದ ಬೆಳ್ಳಿಬಂಗಾರದ ದೇವರುಗಳನ್ನ
ಆ ದಿನ ಉದ್ದ ಮೂತಿಯ ಇಲಿಗಳಿಗೂ, ಬಾವಲಿಗಳಿಗೂ ಎಸಿತಾರೆ.+
21 ಭೂಮಿಯನ್ನ ಭಯದಿಂದ ನಡುಗಿಸೋಕೆ ಯೆಹೋವ ಎದ್ದೇಳುವಾಗ,
ಆತನ ಭಯಾನಕ ಸಾನಿಧ್ಯದಿಂದಾಗಿ,
ಆತನ ವೈಭವದ ತೇಜಸ್ಸಿಂದಾಗಿ,
ಜನ ಬಂಡೆಗಳ ಬಿಲಗಳಲ್ಲಿ,
ಕಡಿದಾದ ಬಂಡೆಯ ಸಂದುಗಳಲ್ಲಿ ತೂರಿಕೊಳ್ಳೋಕೆ ಹೀಗೆ ಮಾಡ್ತಾರೆ.
22 ನಿಮ್ಮ ಒಳ್ಳೇದಕ್ಕೇ ಹೇಳ್ತಿದ್ದೀನಿ, ಮೂಗಿಂದ ಉಸಿರಾಡೋ ನಶಿಸಿ ಹೋಗೋ ಮನುಷ್ಯನಲ್ಲಿ ಭರವಸೆ ಇಡಬೇಡಿ.
ಮನುಷ್ಯನನ್ನ ಯಾಕೆ ಲೆಕ್ಕಕ್ಕೆ ತಗೋಬೇಕು?