ಚೆಫನ್ಯ
1 ಆಮೋನನ+ ಮಗ ಯೋಷೀಯ+ ಯೆಹೂದವನ್ನ ಆಳ್ತಿದ್ದಾಗ ಯೆಹೋವನ ಸಂದೇಶ ಚೆಫನ್ಯನಿಗೆ* ಸಿಕ್ತು. ಚೆಫನ್ಯ ಕೂಷಿಯ ಮಗ. ಕೂಷಿ ಗೆದಲ್ಯನ ಮಗ. ಗೆದಲ್ಯ ಅಮರ್ಯನ ಮಗ. ಅಮರ್ಯ ಹಿಜ್ಕೀಯನ ಮಗ. ಚೆಫನ್ಯನಿಗೆ ಸಿಕ್ಕ ಸಂದೇಶ ಹೀಗಿತ್ತು:
2 “ನಾನು ಭೂಮಿ ಮೇಲಿರೋ ಎಲ್ಲವನ್ನೂ ಪೂರ್ತಿ ಅಳಿಸಿಹಾಕ್ತೀನಿ” ಅಂತ ಯೆಹೋವ ಕೂಗಿ ಹೇಳ್ತಿದ್ದಾನೆ.+
3 “ನಾನು ಮನುಷ್ಯರನ್ನ, ಪ್ರಾಣಿಗಳನ್ನ ಅಳಿಸಿಹಾಕ್ತೀನಿ.
ಮನುಷ್ಯರನ್ನೆಲ್ಲ ಭೂಮಿ ಮೇಲಿಂದ ಅಳಿಸಿಹಾಕ್ತೀನಿ” ಅಂತ ಯೆಹೋವ ಹೇಳ್ತಿದ್ದಾನೆ.
4 “ನಾನು ನನ್ನ ಕೈಯನ್ನ ಯೆಹೂದದ ವಿರುದ್ಧವಾಗಿ,
ಯೆರೂಸಲೇಮಿನ ಎಲ್ಲ ಜನ್ರ ವಿರುದ್ಧವಾಗಿ ಎತ್ತುತ್ತೀನಿ.
ಈ ಜಾಗದಲ್ಲಿ ಬಾಳನ ಸುಳಿವೇ ಸಿಗದ ಹಾಗೆ ಮಾಡ್ತೀನಿ.+
ಪುರೋಹಿತರ ಜೊತೆ ಸುಳ್ಳುದೇವರುಗಳ ಪೂಜಾರಿಗಳನ್ನೂ ನಾಶ ಮಾಡ್ತೀನಿ.+
5 ಮನೆಗಳ ಮಾಳಿಗೆ ಮೇಲೆ ಆಕಾಶದ ಸೈನ್ಯಕ್ಕೆ ನಮಸ್ಕಾರ ಮಾಡುವವ್ರನ್ನ,+
ಒಂದುಕಡೆ ಯೆಹೋವನನ್ನ ಆರಾಧಿಸ್ತಾ ಆತನಿಗೆ ನಿಷ್ಠೆ ತೋರಿಸ್ತೀವಿ ಅಂತ ಮಾತುಕೊಟ್ಟು,+
ಇನ್ನೊಂದು ಕಡೆ ಮಲ್ಕಾಮನಿಗೂ ನಿಷ್ಠೆ ತೋರಿಸ್ತೀವಿ ಅಂತ ಆಣೆ ಮಾಡುವವ್ರನ್ನ+ ಅಳಿಸಿಹಾಕ್ತೀನಿ.
6 ಯೆಹೋವನನ್ನ ಬಿಟ್ಟುಬಿಟ್ಟವ್ರನ್ನ,+
ಯೆಹೋವನಿಗಾಗಿ ಹುಡುಕದವ್ರನ್ನ, ಆತನ ನಿರ್ದೇಶನಗಳನ್ನ ಕೇಳಿ ತಿಳ್ಕೊಳ್ಳದ ಜನ್ರನ್ನ ಅಳಿಸಿಹಾಕ್ತೀನಿ.”+
7 ವಿಶ್ವದ ರಾಜ ಯೆಹೋವನ ಮುಂದೆ ಮೌನವಾಗಿರಿ, ಯಾಕಂದ್ರೆ ಯೆಹೋವನ ದಿನ ಹತ್ರ ಇದೆ.+
ಯೆಹೋವ ಒಂದು ಬಲಿಯನ್ನ ಸಿದ್ಧಮಾಡಿದ್ದಾನೆ, ಯಾರನ್ನ ಕರೆದಿದ್ದಾನೋ ಅವ್ರನ್ನೆಲ್ಲ ಆತನು ಪವಿತ್ರ ಮಾಡಿದ್ದಾನೆ.
8 “ಯೆಹೋವನಾಗಿರೋ ನಾನು ಬಲಿ ಕೊಡೋ ದಿನದಲ್ಲಿ ಅಧಿಕಾರಿಗಳಿಂದ ಲೆಕ್ಕ ಕೇಳ್ತೀನಿ,
ರಾಜನ ಮಕ್ಕಳಿಂದ,+ ವಿದೇಶಿ ಬಟ್ಟೆಗಳನ್ನ ಹಾಕೊಂಡಿರೋ ಎಲ್ರಿಂದ ಲೆಕ್ಕ ಕೇಳ್ತೀನಿ.
9 ಆ ದಿನ ಯಾರು ವೇದಿಕೆ* ಮೇಲೆ ಹತ್ತುತ್ತಾರೋ ಅವ್ರೆಲ್ಲರಿಂದ ಲೆಕ್ಕ ಕೇಳ್ತೀನಿ.
ತಮ್ಮ ಯಜಮಾನನ ಮನೆಯನ್ನ ಹಿಂಸೆ, ಮೋಸದಿಂದ ತುಂಬಿಸಿ ಬಿಟ್ಟವನಿಂದ ಲೆಕ್ಕ ಕೇಳ್ತೀನಿ.”
10 ಯೆಹೋವ ಹೀಗೆ ಹೇಳಿದ್ದಾನೆ: “ಆ ದಿನ,
ಮೀನುಬಾಗಿಲಿನ ಹತ್ರ ಕೂಗು ಕೇಳಿಸುತ್ತೆ,+
ಪಟ್ಟಣದ ಎರಡ್ನೇ ಭಾಗದಿಂದ ಗೋಳಾಟ,+
ಬೆಟ್ಟಗಳಿಂದ ಧಡಂ ಧಡಂ ಅನ್ನೋ ಶಬ್ದ ಕೇಳಿಸುತ್ತೆ.
ಯಾಕಂದ್ರೆ, ವ್ಯಾಪಾರಿಗಳು ಬಿದ್ದುಹೋಗಿದ್ದಾರೆ.*
ಬೆಳ್ಳಿಯನ್ನ ತೂಕಮಾಡಿ ಕೊಡುವವ್ರೆಲ್ಲ ನಾಶ ಆಗಿದ್ದಾರೆ.
12 ಆಗ ನಾನು ದೀಪಗಳನ್ನ ಹಿಡ್ಕೊಂಡು ಯೆರೂಸಲೇಮನ್ನ ಚೆನ್ನಾಗಿ ಹುಡುಕ್ತೀನಿ.
‘ಯೆಹೋವ ಒಳ್ಳೇದೂ ಮಾಡಲ್ಲ, ಕೆಟ್ಟದೂ ಮಾಡಲ್ಲ’ ಅಂತ ಮನಸ್ಸಲ್ಲೇ ಅಂದ್ಕೊಂಡು,
13 ಅವ್ರ ಆಸ್ತಿ ಲೂಟಿ ಆಗುತ್ತೆ, ಅವ್ರ ಮನೆಗಳು ನಾಶವಾಗುತ್ತೆ.+
ಅವರು ಮನೆಗಳನ್ನ ಕಟ್ಕೊಳ್ತಾರೆ, ಆದ್ರೆ ಅದ್ರಲ್ಲಿ ವಾಸ ಮಾಡಲ್ಲ,
ಅವರು ದ್ರಾಕ್ಷಿತೋಟಗಳನ್ನ ಮಾಡ್ಕೊಳ್ತಾರೆ, ಆದ್ರೆ ಅದ್ರ ದ್ರಾಕ್ಷಾಮದ್ಯ ಕುಡಿಯಲ್ಲ.+
ಅದು ತುಂಬ ಹತ್ರ ಇದೆ, ಬೇಗ ಬರ್ತಿದೆ!+
ಯೆಹೋವನ ದಿನದ ಶಬ್ದ ಭಯಂಕರವಾಗಿರುತ್ತೆ.+
ಆ ದಿನ ಒಬ್ಬ ವೀರ ಸೈನಿಕ ಗೋಳಾಡ್ತಾನೆ.+
ಅದು ನೋವಿನ ದಿನ, ದುಃಖದ ದಿನ,+
ಅದು ಬಿರುಗಾಳಿಯ ದಿನ, ನಾಶದ ದಿನ,
ಅದು ಕತ್ತಲೆಯ ದಿನ, ಮೊಬ್ಬಿನ ದಿನ,+
ಅದು ಕಾರ್ಮೋಡಗಳ ದಿನ, ಕಗ್ಗತ್ತಲ ದಿನ.+
16 ಭದ್ರಕೋಟೆಗಳಿರೋ ಪಟ್ಟಣಗಳ ವಿರುದ್ಧ, ಮೂಲೆಯಲ್ಲಿರೋ ಎತ್ತರವಾದ ಗೋಪುರಗಳ ವಿರುದ್ಧ,+
ಕೊಂಬಿನ ಶಬ್ದ ಮತ್ತು ಯುದ್ಧದ ಕೂಗು ಕೇಳಿಸೋ ದಿನ.+