ಮಾರ್ಕ
8 ಆ ದಿನಗಳಲ್ಲಿ ಇನ್ನೊಂದು ಸಲ ತುಂಬ ಜನ ಯೇಸು ಹತ್ರ ಬಂದ್ರು. ಅವ್ರ ಹತ್ರ ತಿನ್ನೋಕೆ ಏನೂ ಇರ್ಲಿಲ್ಲ. ಹಾಗಾಗಿ ಯೇಸು ಶಿಷ್ಯರನ್ನ ಕರೆದು 2 “ಈ ಜನ್ರನ್ನ ನೋಡಿ ನನಗೆ ಅಯ್ಯೋ ಪಾಪ ಅನಿಸ್ತಿದೆ.+ ಅವರು ಮೂರು ದಿನದಿಂದ ನನ್ನ ಜೊತೆನೇ ಇದ್ದಾರೆ. ಅವ್ರ ಹತ್ರ ತಿನ್ನೋಕೇನೂ ಇಲ್ಲ.+ 3 ಅವ್ರಿಗೆ ಏನೂ ಕೊಡದೆ ಹಾಗೇ ಮನೆಗೆ ಕಳಿಸಿದ್ರೆ ದಾರಿಯಲ್ಲಿ ತಲೆಸುತ್ತಿ ಬಿದ್ದುಬಿಡಬಹುದು, ಅವ್ರಲ್ಲಿ ಸ್ವಲ್ಪ ಜನ ತುಂಬ ದೂರದಿಂದ ಬಂದಿದ್ದಾರೆ” ಅಂದನು. 4 ಅದಕ್ಕೆ ಶಿಷ್ಯರು “ಯಾರೂ ಇಲ್ಲದೇ ಇರೋ ಈ ಜಾಗದಲ್ಲಿ ಇಷ್ಟು ಜನ್ರಿಗೆ ರೊಟ್ಟಿ ಎಲ್ಲಿಂದ ತರೋದು?” ಅಂತ ಕೇಳಿದ್ರು. 5 ಅದಕ್ಕೆ ಯೇಸು “ನಿಮ್ಮ ಹತ್ರ ಎಷ್ಟು ರೊಟ್ಟಿ ಇದೆ?” ಅಂತ ಕೇಳಿದನು. ಅದಕ್ಕೆ ಅವರು “ಏಳು ರೊಟ್ಟಿ” ಅಂದ್ರು.+ 6 ಆಗ ಆತನು ಜನ್ರಿಗೆ ನೆಲದ ಮೇಲೆ ಕೂರೋಕೆ ಹೇಳಿ ಆ ಏಳು ರೊಟ್ಟಿ ತಗೊಂಡು ದೇವರಿಗೆ ಧನ್ಯವಾದ ಹೇಳಿದನು. ಅದನ್ನ ಮುರಿದು ಶಿಷ್ಯರಿಗೆ ಕೊಟ್ಟನು. ಶಿಷ್ಯರು ಅದನ್ನ ಜನ್ರಿಗೆ ಹಂಚಿದ್ರು.+ 7 ಅವ್ರ ಹತ್ರ ಕೆಲವು ಚಿಕ್ಕಚಿಕ್ಕ ಮೀನು ಇತ್ತು. ಯೇಸು ಅದನ್ನ ತಗೊಂಡು ದೇವರಿಗೆ ಧನ್ಯವಾದ ಹೇಳಿ ಜನ್ರಿಗೆ ಹಂಚಿ ಅಂದನು. 8 ಎಲ್ರಿಗೂ ಹೊಟ್ಟೆ ತುಂಬ್ತು. ಉಳಿದ ರೊಟ್ಟಿ ತುಂಡುಗಳನ್ನ ಕೂಡಿಸಿದಾಗ ಏಳು ಬುಟ್ಟಿ ತುಂಬ್ತು.+ 9 ಈ ಸಾರಿ ಗಂಡಸರೇ ಸುಮಾರು 4,000 ಇದ್ರು. ಆಮೇಲೆ ಯೇಸು ಅವ್ರನ್ನ ಕಳಿಸಿದನು.
10 ತಕ್ಷಣ ಯೇಸು ಶಿಷ್ಯರ ಜೊತೆ ದೋಣಿ ಹತ್ತಿ ದಲ್ಮನೂಥ ಪ್ರದೇಶಕ್ಕೆ ಹೋದನು.+ 11 ಅಲ್ಲಿ ಫರಿಸಾಯರು ಬಂದು ಆತನನ್ನ ಪರೀಕ್ಷಿಸೋಕೆ+ ಆಕಾಶದಲ್ಲಿ ಒಂದು ಅದ್ಭುತ ತೋರಿಸಬೇಕಂತ ಮಾತಿನ ಚಕಮಕಿ ನಡೆಸಿದ್ರು. 12 ಯೇಸು ತುಂಬ ಬೇಜಾರಿಂದ “ಈ ಪೀಳಿಗೆ ಯಾವಾಗ ನೋಡಿದ್ರೂ ಅದ್ಭುತ ಮಾಡು ಅಂತ ಕೇಳುತ್ತೆ ಅಲ್ವಾ?+ ನಾನು ನಿಜ ಹೇಳ್ತೀನಿ, ಈ ಪೀಳಿಗೆ ಯಾವ ಅದ್ಭುತನೂ ನೋಡಲ್ಲ” ಅಂದನು.+ 13 ಆಮೇಲೆ ಯೇಸು ಅವ್ರನ್ನ ಬಿಟ್ಟು ಮತ್ತೆ ದೋಣಿ ಹತ್ತಿ ಆಕಡೆ ದಡಕ್ಕೆ ಹೋದನು.
14 ಆದ್ರೆ ಹೋಗುವಾಗ ಶಿಷ್ಯರು ರೊಟ್ಟಿ ತಗೊಂಡು ಹೋಗೋಕೆ ಮರೆತುಬಿಟ್ರು. ದೋಣಿಯಲ್ಲಿ ಹೋಗ್ತಿರುವಾಗ ಅವ್ರ ಹತ್ರ ಒಂದು ರೊಟ್ಟಿ ಬಿಟ್ರೆ ಬೇರೇನೂ ಇರ್ಲಿಲ್ಲ.+ 15 ಯೇಸು ಅವ್ರಿಗೆ ಸ್ಪಷ್ಟವಾಗಿ ಬುದ್ಧಿವಾದ ಕೊಡ್ತಾ “ಜಾಗ್ರತೆಯಿಂದ ಇರಿ. ಫರಿಸಾಯರ ಹುಳಿಹಿಟ್ಟಿನ ವಿಷ್ಯದಲ್ಲಿ, ಹೆರೋದನ ಹುಳಿಹಿಟ್ಟಿನ ವಿಷ್ಯದಲ್ಲಿ ಎಚ್ಚರವಾಗಿರಿ” ಅಂದನು.+ 16 ಆಗ ಅವರು ಒಬ್ರಿಗೊಬ್ರು ರೊಟ್ಟಿ ತರದೆ ಇರೋದಕ್ಕೆ ಜಗಳ ಆಡೋಕೆ ಶುರುಮಾಡಿದ್ರು. 17 ಇದನ್ನ ಗಮನಿಸಿ ಯೇಸು “ರೊಟ್ಟಿ ಇಲ್ಲ ಅಂತ ಯಾಕೆ ಜಗಳ ಆಡ್ತಿದ್ದೀರಾ? ಇನ್ನೂ ನಿಮಗೆ ಅರ್ಥ ಆಗಿಲ್ವಾ? ಅರ್ಥ ಮಾಡ್ಕೊಳ್ಳೋಕೆ ಆಗದಷ್ಟು ನಿಮ್ಮ ಮನಸ್ಸು ಮಂಕಾಗಿಬಿಟ್ಟಿದ್ಯಾ? 18 ‘ಕಣ್ಣಿದ್ರೂ ನೀವು ಯಾಕೆ ನೋಡ್ತಾ ಇಲ್ಲ. ಕಿವಿ ಇದ್ರೂ ಯಾಕೆ ಕೇಳ್ತಾ ಇಲ್ಲ?’ ನಿಮಗೆ ನೆನಪಿದ್ಯಾ? 19 ನಾನು ಆ ಐದು ರೊಟ್ಟಿ ಮುರಿದು+ 5,000 ಗಂಡಸರಿಗೆ ಹಂಚಿದಾಗ ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿಸಿದ್ರಿ?” ಅಂತ ಕೇಳಿದನು. ಅದಕ್ಕೆ ಅವರು “ಹನ್ನೆರಡು” ಅಂದ್ರು.+ 20 “ನಾನು ಏಳು ರೊಟ್ಟಿ ಮುರಿದು 4,000 ಗಂಡಸರಿಗೆ ಹಂಚಿದಾಗ ಉಳಿದಿದ್ದನ್ನ ಎಷ್ಟು ಬುಟ್ಟಿಗಳಲ್ಲಿ ತುಂಬಿದ್ರಿ?” ಅಂತ ಕೇಳಿದ್ದಕ್ಕೆ ಅವರು “ಏಳು” ಅಂದ್ರು.+ 21 ಅದಕ್ಕೆ ಯೇಸು “ನಿಮಗೆ ಇನ್ನೂ ಅರ್ಥ ಆಗ್ತಿಲ್ವಾ?” ಅಂದನು.
22 ಆಮೇಲೆ ಅವರು ಬೇತ್ಸಾಯಿದಕ್ಕೆ ಬಂದ್ರು. ಆಗ ಜನ ಒಬ್ಬ ಕುರುಡನನ್ನ ಯೇಸು ಹತ್ರ ಕರ್ಕೊಂಡು ಬಂದು ಅವನನ್ನ ಮುಟ್ಟಬೇಕು ಅಂತ ಬೇಡ್ಕೊಂಡ್ರು.+ 23 ಯೇಸು ಆ ಕುರುಡನ ಕೈಹಿಡಿದು ಊರ ಹೊರಗೆ ಕರ್ಕೊಂಡು ಹೋದನು. ಅವನ ಕಣ್ಣುಗಳ ಮೇಲೆ ಉಗುಳಿ+ ಅವನ ಮೇಲೆ ಕೈಯಿಟ್ಟು “ಏನಾದ್ರೂ ಕಾಣಿಸ್ತಿದಿಯಾ?” ಅಂತ ಕೇಳಿದನು. 24 ಅವನು ಸುತ್ತಲೂ ನೋಡಿ “ನಂಗೆ ಜನ್ರು ನಡೆದಾಡೋದು ಕಾಣಿಸ್ತಾ ಇದೆ. ಆದ್ರೆ ಅವರು ಮರದ ತರ ಕಾಣ್ತಿದ್ದಾರೆ” ಅಂದನು. 25 ಯೇಸು ಮತ್ತೆ ಅವನ ಕಣ್ಣುಗಳನ್ನ ಮುಟ್ಟಿದನು. ಅವನು ಕಣ್ಣು ಬಿಟ್ಟಾಗ ಅವನ ದೃಷ್ಟಿ ತಿರುಗಿ ಬಂತು. ಎಲ್ಲಾ ಚೆನ್ನಾಗಿ ಕಾಣಿಸೋಕೆ ಶುರುವಾಯ್ತು. 26 ಯೇಸು ಆ ವ್ಯಕ್ತಿಗೆ “ಊರ ಒಳಗೆ ಹೋಗಬೇಡ. ಮನೆಗೆ ಹೋಗು” ಅಂದನು.
27 ಯೇಸು ಮತ್ತು ಶಿಷ್ಯರು ಕೈಸರೈಯ-ಫಿಲಿಪ್ಪಿ ಹಳ್ಳಿಗಳಿಗೆ ಹೋದ್ರು. ಹೋಗೋ ದಾರಿಯಲ್ಲಿ ಶಿಷ್ಯರಿಗೆ “ನಾನು ಯಾರು ಅಂತ ಜನ ಹೇಳ್ತಾರೆ?” ಅಂತ ಕೇಳಿದನು.+ 28 ಅದಕ್ಕೆ ಅವರು “ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ+ ಅಂತ ಹೇಳ್ತಾರೆ. ಇನ್ನು ಕೆಲವರು ಎಲೀಯ ಅಂತಾರೆ.+ ಇನ್ನು ಕೆಲವರು ಒಬ್ಬ ಪ್ರವಾದಿ ಅಂತಾರೆ” ಅಂದ್ರು. 29 ಅದಕ್ಕೆ ಯೇಸು “ಆದ್ರೆ ನೀವು ನನ್ನನ್ನ ಯಾರಂತ ಹೇಳ್ತೀರಾ?” ಅಂತ ಕೇಳಿದನು. ಅದಕ್ಕೆ ಪೇತ್ರ “ನೀನು ಕ್ರಿಸ್ತ” ಅಂದನು.+ 30 ಆಗ ಯೇಸು, ತನ್ನ ಬಗ್ಗೆ ಯಾರಿಗೂ ಹೇಳಬಾರದು ಅಂತ ಅವ್ರಿಗೆ ಆಜ್ಞೆ ಕೊಟ್ಟನು.+ 31 ಅಷ್ಟೇ ಅಲ್ಲ ಮನುಷ್ಯಕುಮಾರ ತುಂಬ ಕಷ್ಟಪಡಬೇಕಾಗುತ್ತೆ. ಅಧಿಕಾರಿಗಳು, ಮುಖ್ಯ ಪುರೋಹಿತರು, ಪಂಡಿತರು ಅವನನ್ನ ಒಪ್ಕೊಳ್ಳದೆ ಕೊಂದುಹಾಕ್ತಾರೆ.+ ಮೂರು ದಿನ ಆದಮೇಲೆ ಮತ್ತೆ ಬದುಕಿ ಬರ್ತಾನೆ ಅಂತ ಶಿಷ್ಯರಿಗೆ ಕಲಿಸೋಕೆ ಶುರುಮಾಡಿದನು.+ 32 ಯೇಸು ಮುಚ್ಚುಮರೆಯಿಲ್ಲದೆ ಅವ್ರ ಹತ್ರ ಮಾತಾಡ್ತಾ ಇದ್ದನು. ಆದ್ರೆ ಪೇತ್ರ ಆತನನ್ನ ಪಕ್ಕಕ್ಕೆ ಕರ್ಕೊಂಡು ಹೋಗಿ ಬೈದ.+ 33 ಆಗ ಯೇಸು ಶಿಷ್ಯರ ಕಡೆ ತಿರುಗಿ ಪೇತ್ರನಿಗೆ “ಸಾಕು ನಿಲ್ಲಿಸು ಸೈತಾನ! ಯಾಕಂದ್ರೆ ನೀನು ದೇವ್ರ ತರ ಯೋಚ್ನೆ ಮಾಡೋದು ಬಿಟ್ಟು ಮನುಷ್ಯರ ತರ ಯೋಚ್ನೆ ಮಾಡ್ತಾ ಇದ್ದೀಯ” ಅಂತ ಬೈದನು.+
34 ಆಮೇಲೆ ಯೇಸು ಶಿಷ್ಯರನ್ನೂ ಜನ್ರನ್ನೂ ಕರೆದು ಹೀಗಂದನು “ಯಾರಿಗಾದ್ರೂ ನನ್ನ ಶಿಷ್ಯನಾಗೋಕೆ ಮನಸ್ಸಿದ್ರೆ ಅವನು ಇನ್ಮುಂದೆ ತನಗೋಸ್ಕರ ಜೀವಿಸದೆ ತನ್ನ ಹಿಂಸಾ ಕಂಬ* ಹೊತ್ತು ನನ್ನ ಹಿಂದೆನೇ ಬರಲಿ.+ 35 ತನ್ನ ಪ್ರಾಣ ಉಳಿಸ್ಕೊಳ್ಳೋಕೆ ಆಸೆಪಡುವವನು ಅದನ್ನ ಕಳ್ಕೊಳ್ತಾನೆ. ಆದ್ರೆ ನನ್ನ ಶಿಷ್ಯನಾಗಿರೋ ಕಾರಣ ಮತ್ತು ಸಿಹಿಸುದ್ದಿಯ ಕಾರಣ ಪ್ರಾಣ ಕಳಕೊಂಡ್ರೆ ಅದು ಮತ್ತೆ ಸಿಗುತ್ತೆ.+ 36 ಒಬ್ಬ ಮನುಷ್ಯ ಲೋಕವನ್ನೇ ಗೆದ್ದು ತನ್ನ ಪ್ರಾಣ ಕಳ್ಕೊಂಡ್ರೆ ಏನು ಪ್ರಯೋಜನ?+ 37 ಪ್ರಾಣ ಉಳಿಸ್ಕೊಳ್ಳೋಕೆ ಒಬ್ಬ ಮನುಷ್ಯ ಏನು ತಾನೇ ಕೊಡೋಕಾಗುತ್ತೆ?+ 38 ನಂಬಿಕೆದ್ರೋಹಿಗಳ,* ಪಾಪಿಗಳ ಈ ಪೀಳಿಗೆಯವ್ರಲ್ಲಿ ಯಾರಾದ್ರೂ ನನ್ನ ಶಿಷ್ಯ ಅಂತ ಹೇಳ್ಕೊಳ್ಳೋಕೆ, ನನ್ನ ಮಾತುಗಳನ್ನ ನಂಬ್ತಿದ್ದೀನಿ ಅಂತ ಹೇಳೋಕೆ ನಾಚಿಕೆಪಟ್ರೆ ಮನುಷ್ಯಕುಮಾರ ಸಹ ತನ್ನ ತಂದೆಯಿಂದ ಅಧಿಕಾರ ಪಡ್ಕೊಂಡು ಪವಿತ್ರ ದೂತರ ಜೊತೆ ಬರುವಾಗ+ ಅವರು ತನ್ನ ಶಿಷ್ಯರು ಅಂತ ಹೇಳೋಕೆ ನಾಚಿಕೆಪಡ್ತಾನೆ.”+