ಕೀರ್ತನೆ
ಆಸಾಫನ+ ಮಧುರ ಗೀತೆ.
3 ಕಪಟದಿಂದ ನಿನ್ನ ಜನ್ರ ವಿರುದ್ಧ ರಹಸ್ಯವಾಗಿ ಸಂಚು ಮಾಡ್ತಾರೆ,
ನಿನ್ನ ಅಮೂಲ್ಯ* ಜನ್ರ ವಿರುದ್ಧ ಪಿತೂರಿ ನಡಿಸ್ತಾರೆ.
4 “ಬನ್ನಿ, ಇಸ್ರಾಯೇಲ್ ಜನಾಂಗದ ಹೆಸ್ರನ್ನ ಯಾರೂ ನೆನಪಿಸ್ಕೊಳ್ಳದ ಹಾಗೆ,
ಆ ಇಡೀ ಜನಾಂಗನ ಸರ್ವನಾಶ ಮಾಡೋಣ”+ ಅಂತ ಹೇಳ್ತಿದ್ದಾರೆ.
5 ಅವ್ರೆಲ್ಲ ಒಂದಾಗಿ ಬಂದು ಸೈನ್ಯ ಕಟ್ತಿದ್ದಾರೆ,
ನಿನ್ನ ವಿರುದ್ಧ ಯುದ್ಧಮಾಡೋಕೆ ಅವರು ತಮ್ಮತಮ್ಮಲ್ಲೇ ಒಪ್ಪಂದ* ಮಾಡ್ಕೊಂಡಿದ್ದಾರೆ.+
6 ಡೇರೆಯಲ್ಲಿ ವಾಸಿಸೋ ಎದೋಮ್ಯರು, ಇಷ್ಮಾಯೇಲ್ಯರು, ಮೋವಾಬ್ಯರು,+ ಹಗ್ರೀಯರು,+
9 ನೀನು ಮಿದ್ಯಾನ್ಯರಿಗೆ ಮಾಡಿದ ಹಾಗೆ,+
ಕೀಷೋನ್ ತೊರೆ ಹತ್ರ ಇರೋ ಸೀಸೆರನಿಗೆ ಮತ್ತು ಯಾಬೀನನಿಗೆ ಮಾಡಿದ ಹಾಗೆ ಇವ್ರಿಗೂ ಮಾಡು.+
10 ಅವರು ಎಂದೋರಲ್ಲಿ ನಾಶ ಆದ್ರು,+
ಅವರು ಹೊಲಕ್ಕೆ ಗೊಬ್ಬರ ಆದ್ರು.
11 ಓರೇಬನಿಗೆ ಮತ್ತು ಜೇಬನಿಗೆ ಬಂದ ಗತಿನೇ ಅವ್ರ ಪ್ರಧಾನರಿಗೂ ಬರಲಿ.+
ಜೆಬಹನಿಗೆ ಮತ್ತು ಚಲ್ಮುನ್ನನಿಗೆ ಆದ ಗತಿನೇ ಅವ್ರ ಅಧಿಕಾರಿಗಳಿಗೂ* ಆಗಲಿ.+
12 ಯಾಕಂದ್ರೆ ಅವರು “ಬನ್ನಿ, ದೇವರು ವಾಸಿಸೋ ದೇಶನ ಆಸ್ತಿಯಾಗಿ ಪಡ್ಕೊಳ್ಳೋಣ” ಅಂತ ಹೇಳ್ತಿದ್ರು.
13 ನನ್ನ ದೇವರೇ, ಅವ್ರನ್ನ ಗಿರಗಿರನೇ ತಿರುಗೋ ಮುಳ್ಳಿನ ಪೊದೆ ತರ ಮಾಡು,+
ಗಾಳಿಗೆ ತೂರಿಹೋಗೋ ಹೊಟ್ಟಿನ ತರ ಮಾಡು.
14 ಹೇಗೆ ಬೆಂಕಿ ಕಾಡನ್ನ ಸುಟ್ಟು ಹಾಕುತ್ತೋ,
ಹೇಗೆ ಜ್ವಾಲೆ ಪರ್ವತಗಳನ್ನ ದಹಿಸಿಬಿಡುತ್ತೋ,+
15 ಹಾಗೇ ನೀನು, ನಿನ್ನ ಚಂಡಮಾರುತದಿಂದ ಅವ್ರನ್ನ ಅಟ್ಟಿಸ್ಕೊಂಡು ಹೋಗು+
ನಿನ್ನ ಸುಂಟರಗಾಳಿಯಿಂದ ಅವ್ರನ್ನ ಹೆದರಿಸು.+
17 ಅವರು ಶಾಶ್ವತವಾಗಿ ನಾಚಿಕೆಪಡಲಿ, ಯಾವಾಗ್ಲೂ ಭಯಪಡಲಿ,
ಅವ್ರಿಗೆ ಅವಮಾನ ಆಗಲಿ, ನಾಶವಾಗಿ ಹೋಗಲಿ.