15 ಮೃದುವಾದ ಉತ್ತರ ಕೋಪ ಕಡಿಮೆ ಮಾಡುತ್ತೆ,+
ಒರಟಾದ ಮಾತು ಕೋಪ ಬರಿಸುತ್ತೆ.+
2 ವಿವೇಕಿಯ ನಾಲಿಗೆ ಜ್ಞಾನವನ್ನ ಒಳ್ಳೇ ರೀತಿಯಲ್ಲಿ ಉಪಯೋಗಿಸುತ್ತೆ,+
ದಡ್ಡನ ಬಾಯಿ ಮೂರ್ಖತನವನ್ನ ತಟ್ಟಂತ ಒದರಿಬಿಡುತ್ತೆ.
3 ಯೆಹೋವನ ದೃಷ್ಟಿ ಎಲ್ಲಾ ಕಡೆ ಇರುತ್ತೆ,
ಆತನು ಒಳ್ಳೆಯವ್ರನ್ನ, ಕೆಟ್ಟವ್ರನ್ನ ನೋಡ್ತಾ ಇರ್ತಾನೆ.+
4 ಶಾಂತವಾಗಿರೋ ನಾಲಿಗೆ ಸಾಂತ್ವನ ಕೊಡುತ್ತೆ,+
ತಿರುಚಿದ ಮಾತು ಮನಸ್ಸನ್ನ ಜಜ್ಜಿಹಾಕುತ್ತೆ.
5 ಮೂರ್ಖ ತನ್ನ ಅಪ್ಪ ಕೊಡೋ ಶಿಸ್ತನ್ನ ಕೀಳಾಗಿ ನೋಡ್ತಾನೆ,+
ಆದ್ರೆ ಬೇರೆಯವರು ತಿದ್ದುವಾಗ ಜಾಣ ಸ್ವೀಕರಿಸ್ತಾನೆ.+
6 ನೀತಿವಂತನ ಮನೇಲಿ ತುಂಬ ಆಸ್ತಿಪಾಸ್ತಿ ಇರುತ್ತೆ,
ಕೆಟ್ಟವನ ಆದಾಯ ಅವನಿಗೆ ತೊಂದ್ರೆ ತಂದಿಡುತ್ತೆ.+
7 ವಿವೇಕಿಯ ತುಟಿಗಳು ಜ್ಞಾನವನ್ನ ಹಬ್ಬಿಸುತ್ತೆ,+
ಆದ್ರೆ ದಡ್ಡನ ಹೃದಯ ಹಾಗೆ ಮಾಡಲ್ಲ.+
8 ಕೆಟ್ಟವನ ಬಲಿಯನ್ನ ಯೆಹೋವ ಸ್ವೀಕರಿಸಲ್ಲ,+
ನೀತಿವಂತನ ಪ್ರಾರ್ಥನೆಯನ್ನ ಖುಷಿಯಿಂದ ಕೇಳ್ತಾನೆ.+
9 ಕೆಟ್ಟವನ ದಾರಿ ಯೆಹೋವನಿಗೆ ಅಸಹ್ಯ,+
ನೀತಿಯಿಂದ ನಡ್ಕೊಳ್ಳೋ ವ್ಯಕ್ತಿ ಕಂಡ್ರೆ ಆತನಿಗೆ ಪ್ರೀತಿ.+
10 ಒಳ್ಳೇ ದಾರಿಯನ್ನ ಬಿಟ್ಟುಬಿಡುವವನಿಗೆ ಶಿಸ್ತು ಇಷ್ಟ ಆಗಲ್ಲ,+
ತಿದ್ದುವಾಗ ದ್ವೇಷಿಸುವವನು ತನ್ನ ಜೀವ ಕಳ್ಕೊಳ್ತಾನೆ.+
11 ಯೆಹೋವನಿಗೆ ಸಮಾಧಿಯಲ್ಲಿ ಇರುವವ್ರನ್ನ, ನಾಶದ ಜಾಗದಲ್ಲಿ ಇರುವವ್ರನ್ನ ನೋಡಕ್ಕಾಗುತ್ತೆ ಅಂದ್ರೆ,+
ಮನುಷ್ಯರ ಹೃದಯದಲ್ಲೇನಿದೆ ಅಂತ ನೋಡಕ್ಕಾಗಲ್ವಾ!+
12 ಗೇಲಿ ಮಾಡುವವನು ತನ್ನನ್ನ ತಿದ್ದುವವನನ್ನ ಇಷ್ಟಪಡಲ್ಲ.+
ಅವನು ವಿವೇಕಿಯ ಸಲಹೆಯನ್ನ ಕೇಳಲ್ಲ.+
13 ಹರ್ಷಹೃದಯದಿಂದ ಹಸನ್ಮುಖ,
ಮನೋವ್ಯಥೆಯಿಂದ ನಿರುತ್ಸಾಹ.+
14 ಅರ್ಥ ಮಾಡ್ಕೊಳ್ಳೋ ಹೃದಯ ಜ್ಞಾನವನ್ನ ಹುಡುಕುತ್ತೆ,+
ಮೂರ್ಖ ತನ್ನ ಬಾಯಲ್ಲಿ ಮೂರ್ಖತನವನ್ನ ತುಂಬಿಸ್ತಾನೆ.+
15 ದುಃಖದಲ್ಲಿ ಇರುವವನಿಗೆ ಜೀವನ ಯಾವಾಗ್ಲೂ ಜಿಗುಪ್ಸೆ,+
ಸಂತೋಷದ ಹೃದಯ ಇರುವವನಿಗೆ ದಿನಾಲೂ ಔತಣ.+
16 ತುಂಬ ಆಸ್ತಿ ಇದ್ದು ಚಿಂತೆಯಲ್ಲಿ ಮುಳುಗೋದಕ್ಕಿಂತ,+
ಸ್ವಲ್ಪನೇ ಇದ್ದು ಯೆಹೋವನಿಗೆ ಭಯಪಡೋದು ಒಳ್ಳೇದು.+
17 ದ್ವೇಷ ಇರೋ ಮನೇಲಿ ಮಾಂಸದೂಟ ಮಾಡೋದಕ್ಕಿಂತ,+
ಪ್ರೀತಿ ಇರೋ ಮನೇಲಿ ತರಕಾರಿ ಊಟ ಮಾಡೋದೇ ಒಳ್ಳೇದು.+
18 ಕೋಪಿಷ್ಠ ಜಗಳ ಜಾಸ್ತಿ ಮಾಡ್ತಾನೆ,+
ತಟ್ಟಂಥ ಕೋಪ ಮಾಡ್ಕೊಳ್ಳದವನು ಜಗಳನ ಶಾಂತ ಮಾಡ್ತಾನೆ.+
19 ಮೈಗಳ್ಳನ ದಾರಿ ಮುಳ್ಳಿನ ಬೇಲಿ,+
ನೀತಿವಂತನ ದಾರಿ ಸಮತಟ್ಟಾದ ಹೆದ್ದಾರಿ.+
20 ವಿವೇಕಿಯಾದ ಮಗ ತನ್ನ ಅಪ್ಪನನ್ನ ಸಂತೋಷ ಪಡಿಸ್ತಾನೆ,+
ಮೂರ್ಖ ತನ್ನ ಅಮ್ಮನನ್ನ ಕೀಳಾಗಿ ನೋಡ್ತಾನೆ.+
21 ಬುದ್ಧಿ ಇಲ್ಲದವನಿಗೆ ಮೂರ್ಖತನದಿಂದ ಸಂತೋಷ ಸಿಗುತ್ತೆ,+
ವಿವೇಚನೆ ಇರುವವನು ಸರಿ ದಾರಿಯಲ್ಲಿ ಹೋಗ್ತಾನೆ.+
22 ಸಲಹೆ ಕೇಳದಿದ್ರೆ ಮಾಡಿದ ಯೋಜನೆಗಳೆಲ್ಲ ನೆಲಕಚ್ಚುತ್ತೆ,
ತುಂಬ ಸಲಹೆಗಾರರು ಇದ್ರೆ ಸಾಧನೆ ಮಾಡಕ್ಕಾಗುತ್ತೆ.+
23 ಸರಿ ಉತ್ತರ ಕೊಡುವವನು ಸಂತೋಷವಾಗಿ ಇರ್ತಾನೆ,+
ಸರಿಯಾದ ಸಮಯದಲ್ಲಿ ಹೇಳಿದ ಮಾತು ಎಷ್ಟೋ ಉತ್ತಮ.+
24 ಜೀವದ ದಾರಿ ತಿಳುವಳಿಕೆ ಇರುವವನನ್ನ ಮೇಲೆ ಏರಿಸುತ್ತೆ,+
ಕೆಳಗಿರೋ ಸಮಾಧಿ ಕಡೆ ಹೋಗದ ಹಾಗೆ ತಡಿಯುತ್ತೆ.+
25 ಯೆಹೋವ ಅಹಂಕಾರಿಯ ಮನೆಯನ್ನ ಮುರಿದುಬಿಡ್ತಾನೆ,+
ವಿಧವೆಯ ಜಮೀನಿನ ಗಡಿಗಳನ್ನ ಕಾದು ಕಾಪಾಡ್ತಾನೆ.+
26 ಕೆಟ್ಟವನ ಸಂಚು ಯೆಹೋವನಿಗೆ ಇಷ್ಟ ಇಲ್ಲ,+
ಹಿತವಾದ ನುಡಿಗಳು ಆತನಿಗೆ ಇಷ್ಟ.+
27 ಮೋಸದಿಂದ ಹಣ ಮಾಡುವವನು ತನ್ನ ಮನೆಯವ್ರ ಮೇಲೆ ಕಷ್ಟ ತಂದಿಡ್ತಾನೆ,+
ಆದ್ರೆ ಲಂಚವನ್ನ ದ್ವೇಷಿಸುವವನು ಬಾಳಿ ಬದುಕ್ತಾನೆ.+
28 ನೀತಿವಂತನ ಹೃದಯ ಉತ್ತರ ಕೊಡೋ ಮುಂಚೆ ಯೋಚ್ನೆ ಮಾಡುತ್ತೆ,+
ಆದ್ರೆ ಕೆಟ್ಟವನ ಬಾಯಿ ಕೆಟ್ಟ ವಿಷ್ಯಗಳನ್ನ ಕಕ್ಕುತ್ತೆ.
29 ಯೆಹೋವ ಕೆಟ್ಟವ್ರಿಂದ ತುಂಬ ದೂರ ಇರ್ತಾನೆ,
ಆದ್ರೆ ನೀತಿವಂತರ ಪ್ರಾರ್ಥನೆಯನ್ನ ಕೇಳ್ತಾನೆ.+
30 ಹೊಳೆಯೋ ಕಣ್ಣನ್ನ ನೋಡಿದ್ರೆ ಹೃದಯಕ್ಕೆ ಖುಷಿ,
ಒಳ್ಳೇ ಸುದ್ದಿಯಿಂದ ಮೂಳೆಗೆ ಚೈತನ್ಯ.+
31 ಜೀವ ಕೊಡೋ ಬುದ್ಧಿಮಾತನ್ನ ಕೇಳುವವನು
ವಿವೇಕಿಗಳ ಜೊತೆ ಇರ್ತಾನೆ.+
32 ಶಿಸ್ತನ್ನ ತಿರಸ್ಕರಿಸುವವನು ತನ್ನ ಜೀವವನ್ನ ಕೀಳಾಗಿ ನೋಡ್ತಾನೆ,+
ತಿದ್ದುವಾಗ ಸ್ವೀಕರಿಸುವವನು ಅರ್ಥ ಮಾಡ್ಕೊಳ್ಳೋ ಶಕ್ತಿ ಪಡಿತಾನೆ.+
33 ಯೆಹೋವನ ಭಯವೇ ವಿವೇಕವನ್ನ ಕಲಿಸೋ ತರಬೇತಿ,+
ದೀನತೆಯಿಂದ ಇದ್ರೆ ಗೌರವ ಸಿಗುತ್ತೆ.+