ಜ್ಞಾನೋಕ್ತಿ
3 ಯೆಹೋವನಿಗೆ ಬಲಿಗಳಿಗಿಂತ
ಸರಿಯಾದ, ನ್ಯಾಯವಾದ ಕೆಲಸಗಳೇ ಇಷ್ಟ.+
4 ಸೊಕ್ಕಿನ ಕಣ್ಣು, ಅಹಂಕಾರದ ಹೃದಯ,
ಕೆಟ್ಟವ್ರ ದಾರಿ ಬೆಳಗಿಸೋ ದೀಪ, ಇವು ಪಾಪ.+
7 ಕೆಟ್ಟವನು ಕೊಡೋ ಹಿಂಸೆ ಅವನನ್ನ ಗುಡಿಸಿ ಗುಂಡಾಂತರ ಮಾಡುತ್ತೆ,+
ಯಾಕಂದ್ರೆ ಅವನು ನ್ಯಾಯದಿಂದ ನಡ್ಕೊಳ್ಳೋಕೆ ಒಪ್ಪಲ್ಲ.
8 ಅಪರಾಧಿ ದಾರಿ ಕೆಟ್ಟದು,
ಆದ್ರೆ ತಪ್ಪು ಮಾಡದವನು ಸರಿಯಾದ ದಾರಿಯಲ್ಲಿ ನಡಿತಾನೆ.+
11 ಗೇಲಿ ಮಾಡುವವನಿಗೆ ಶಿಕ್ಷೆ ಆದಾಗ ಅನುಭವ ಇಲ್ಲದವನು ವಿವೇಕಿ ಆಗ್ತಾನೆ,
12 ನೀತಿವಂತನಾದ ದೇವರು ಕೆಟ್ಟವನ ಮನೆಯನ್ನ ನೋಡ್ತಾನೆ,
ಕೆಟ್ಟವನನ್ನ ನಾಶ ಮಾಡ್ತಾನೆ.+
14 ಗುಟ್ಟಾಗಿ ಕೊಟ್ಟ ಉಡುಗೊರೆ ಕೋಪ ಆರಿಸುತ್ತೆ,+
ಗುಟ್ಟಾಗಿ ಕೊಟ್ಟ ಲಂಚ ಕಡುಕೋಪವನ್ನ ಶಾಂತ ಮಾಡುತ್ತೆ.
15 ನ್ಯಾಯವಾಗಿ ನಡ್ಕೊಳ್ಳೋದಂದ್ರೆ ನೀತಿವಂತನಿಗೆ ಖುಷಿ,+
ಆದ್ರೆ ಕೆಟ್ಟಕೆಲಸ ಮಾಡುವವನಿಗೆ ಅದು ಅಸಹ್ಯ.
17 ಮೋಜುಮಸ್ತಿ ಪ್ರೀತಿಸುವವನು ಬಡತನಕ್ಕೆ ಹೋಗ್ತಾನೆ,+
ದ್ರಾಕ್ಷಾಮದ್ಯ, ಎಣ್ಣೆಯನ್ನ ಪ್ರೀತಿಸುವವನು ಶ್ರೀಮಂತನಾಗಿ ಏಳಿಗೆ ಆಗಲ್ಲ.
18 ನೀತಿವಂತನನ್ನ ಬಿಡಿಸೋಕೆ ಕೆಟ್ಟವನೇ ಬಿಡುಗಡೆ ಬೆಲೆ,
ಪ್ರಾಮಾಣಿಕನಿಗೆ ಮೋಸಗಾರನೇ ಬಿಡುಗಡೆ ಬೆಲೆ.+
20 ವಿವೇಕಿಯ ಮನೇಲಿ ಬೆಲೆಬಾಳೋ ನಿಧಿ, ಎಣ್ಣೆ ಇರುತ್ತೆ,+
ಆದ್ರೆ ಮೂರ್ಖ ತನ್ನ ಹತ್ರ ಇರೋದನ್ನೆಲ್ಲ ನುಂಗಿ ನೀರು ಕುಡಿತಾನೆ.+
21 ನೀತಿ, ಶಾಶ್ವತ ಪ್ರೀತಿ ತೋರಿಸುವವರು ನೀತಿವಂತರಾಗ್ತಾರೆ.
ಅವ್ರಿಗೆ ಜೀವ, ಗೌರವ ಸಿಗುತ್ತೆ.+
22 ವಿವೇಕಿ ಭದ್ರವಾದ ಪಟ್ಟಣವನ್ನ ವಶ ಮಾಡ್ಕೊಳ್ತಾನೆ,
ಆ ಪಟ್ಟಣದವರು ಯಾವುದನ್ನ ನಂಬಿದ್ರೋ ಅದನ್ನ ನೆಲಕ್ಕೆ ಉರುಳಿಸ್ತಾನೆ.+
23 ಬಾಯಿ, ನಾಲಿಗೆಯನ್ನ ಹತೋಟಿಯಲ್ಲಿ ಇಟ್ಕೊಳ್ಳೋನು,
ಕಷ್ಟದಿಂದ ತಪ್ಪಿಸ್ಕೊಳ್ತಾನೆ.+
24 ಸೊಕ್ಕು ಇರುವವನನ್ನ, ಜಂಬ ಕೊಚ್ಕೊಳ್ಳೋನನ್ನ
ಮೊಂಡ ಅಹಂಕಾರಿ ಅಂತ ಕರಿತಾರೆ.+
26 ಅವನು ಇಡೀ ದಿನ ಒಂದಲ್ಲ ಒಂದು ವಿಷ್ಯಕ್ಕೆ ಅತಿಯಾಸೆಪಡ್ತಾನೆ,
ಆದ್ರೆ ನೀತಿವಂತ ತನ್ನ ಹತ್ರ ಏನೂ ಇಟ್ಕೊಳ್ಳದೆ ಎಲ್ಲ ಕೊಟ್ಟುಬಿಡ್ತಾನೆ.+
28 ಸುಳ್ಳು ಸಾಕ್ಷಿ ನಾಶವಾಗಿ ಹೋಗುತ್ತೆ,+
ಆದ್ರೆ ಜಾಗ್ರತೆಯಿಂದ ಕೇಳಿಸ್ಕೊಳ್ಳೋ ವ್ಯಕ್ತಿ ಹೇಳೋ ಸಾಕ್ಷಿ ಬಿದ್ದುಹೋಗಲ್ಲ.
30 ಯಾವ ವಿವೇಕನೂ, ವಿವೇಚನಾ ಶಕ್ತಿನೂ, ಸಲಹೆನೂ ಯೆಹೋವನ ಮುಂದೆ ನಿಲ್ಲಲ್ಲ.+