ಯೋಹಾನನಿಗೆ ಕೊಟ್ಟ ಪ್ರಕಟನೆ
14 ನಾನು ನೋಡ್ತಾ ಇದ್ದಾಗ ನನಗೆ ಏನು ಕಾಣಿಸ್ತು ಗೊತ್ತಾ? ಆ ಕುರಿಮರಿ+ ಚೀಯೋನ್ ಬೆಟ್ಟದ+ ಮೇಲೆ ನಿಂತಿತ್ತು. ಅದ್ರ ಜೊತೆ 1,44,000+ ಜನ ಇದ್ರು. ಅವ್ರ ಹಣೆ ಮೇಲೆ ಆ ಕುರಿಮರಿ ಹೆಸ್ರು, ದೇವರ ಹೆಸ್ರು ಬರೆದಿತ್ತು.+ 2 ಆಮೇಲೆ ಸ್ವರ್ಗದಿಂದ ಒಂದು ಶಬ್ದ ಕೇಳಿಸ್ತು. ಅದು ಪ್ರವಾಹದ ತರ, ದೊಡ್ಡ ಗುಡುಗಿನ ತರ ಇತ್ತು. ನಾನು ಕೇಳಿಸ್ಕೊಂಡ ಆ ಶಬ್ದ ತಂತಿವಾದ್ಯಗಳನ್ನ ಬಾರಿಸ್ತಾ ಹಾಡ್ತಿದ್ದ ಗಾಯಕರ ಶಬ್ದದ ತರ ಇತ್ತು. 3 ಅವರು ಸಿಂಹಾಸನದ ಮುಂದೆ, ನಾಲ್ಕು ಜೀವಿಗಳ+ ಮುಂದೆ, ಹಿರಿಯರ+ ಮುಂದೆ ಹೊಸ ಹಾಡಿನ+ ತರ ಹಾಡ್ತಾ ಇದ್ರು. ದೇವರು ಭೂಮಿಯಿಂದ ಕೊಂಡುಕೊಂಡ ಆ 1,44,000+ ಜನ್ರನ್ನ ಬಿಟ್ಟು ಬೇರೆ ಯಾರಿಂದಾನೂ ಆ ಹಾಡನ್ನ ಕಲಿಯೋಕೆ ಆಗಲಿಲ್ಲ. 4 ಅವರು ಸ್ತ್ರೀಯರ ಜೊತೆ ಸಂಬಂಧ ಇಟ್ಕೊಳ್ಳದೆ ತಮ್ಮನ್ನ ಶುದ್ಧವಾಗಿ ಇಟ್ಕೊಂಡಿದ್ರು. ಅವರು ಕನ್ಯೆಯರ ತರ ಪವಿತ್ರರಾಗಿದ್ರು.+ ಕುರಿಮರಿ ಎಲ್ಲೇ ಹೋದ್ರೂ ಅವನ ಹಿಂದೆನೇ ಹೋಗ್ತಿದ್ರು.+ ಈ ಜನ್ರನ್ನ ದೇವರಿಗೋಸ್ಕರ, ಕುರಿಮರಿಗೋಸ್ಕರ ಮನುಷ್ಯರಿಂದ ಮೊದಲ ಬೆಳೆಯಾಗಿ+ ಕೊಂಡ್ಕೊಂಡ್ರು.+ 5 ಅವರು ಯಾವತ್ತೂ ಮೋಸದಿಂದ ಮಾತಾಡಿರಲಿಲ್ಲ. ಅವ್ರಿಗೆ ಯಾವ ಕೆಟ್ಟ ಹೆಸ್ರೂ ಇರಲಿಲ್ಲ.+
6 ಆಗ ಆಕಾಶದ ಮಧ್ಯ ಹಾರಾಡ್ತಿದ್ದ ಇನ್ನೊಬ್ಬ ದೇವದೂತನನ್ನ ನಾನು ನೋಡ್ದೆ. ಅವನು ಭೂಮಿ ಮೇಲೆ ವಾಸ ಮಾಡ್ತಿದ್ದವ್ರಿಗೆ ಅಂದ್ರೆ ಎಲ್ಲ ದೇಶ, ಕುಲ, ಭಾಷೆ, ಜಾತಿಯ ಜನ್ರಿಗೆ ಶಾಶ್ವತವಾಗಿರೋ ಸಿಹಿಸುದ್ದಿಯನ್ನ ಹೇಳ್ತಾ ಇದ್ದ.+ 7 ಅವನು ಜೋರಾಗಿ ಹೀಗೆ ಹೇಳ್ತಿದ್ದ: “ದೇವರಿಗೆ ಭಯಪಡಿ ಆತನಿಗೆ ಗೌರವ ಕೊಡಿ. ಯಾಕಂದ್ರೆ ಆತನು ನ್ಯಾಯ ತೀರಿಸೋ ಸಮಯ ಬಂದಿದೆ.+ ಹಾಗಾಗಿ ದೇವರನ್ನ ಆರಾಧಿಸಿ. ಯಾಕಂದ್ರೆ ಆಕಾಶ, ಭೂಮಿ, ಸಮುದ್ರ, ನೀರಿನ ಬುಗ್ಗೆಗಳನ್ನ ಸೃಷ್ಟಿಮಾಡಿದ್ದು ಆತನೇ.”+
8 ಅವನ ಹಿಂದೆ ಎರಡನೇ ದೇವದೂತ ಬಂದು ಹೀಗೆ ಹೇಳಿದ: “ಅವಳು ಬಿದ್ದಿದ್ದಾಳೆ! ಮಹಾ ಬಾಬೆಲ್+ ತನ್ನ ದ್ರಾಕ್ಷಾಮದ್ಯವನ್ನ ಎಲ್ಲ ದೇಶಗಳಿಗೆ ಕುಡಿಸಿ ಬಿದ್ದಿದ್ದಾಳೆ.+ ಲೈಂಗಿಕ ಅನೈತಿಕತೆ* ಮಾಡೋ ಅವಳ ಆಸೆನೇ ಆ ದ್ರಾಕ್ಷಾಮದ್ಯ.”+
9 ಅವ್ರ ಹಿಂದೆ ಮೂರನೇ ದೇವದೂತ ಬಂದು ಜೋರಾಗಿ ಹೀಗೆ ಹೇಳಿದ: “ಯಾರಾದ್ರೂ ಕಾಡುಪ್ರಾಣಿಯನ್ನಾಗಲಿ+ ಅದ್ರ ಮೂರ್ತಿಯನ್ನಾಗಲಿ ಆರಾಧಿಸಿ ತಮ್ಮ ಹಣೆ ಮೇಲೆ ಅಥವಾ ಕೈ ಮೇಲೆ ಅದ್ರ ಗುರುತನ್ನ ಹಾಕೊಂಡ್ರೆ+ 10 ಅವರು ದೇವರ ಕೋಪ ಅನ್ನೋ ದ್ರಾಕ್ಷಾಮದ್ಯವನ್ನ ಕುಡಿಬೇಕಾಗುತ್ತೆ. ಅದು ತುಂಬ ಕಡಕ್ಕಾಗಿರೋ ದ್ರಾಕ್ಷಾಮದ್ಯ.+ ದೇವರು ತನ್ನ ಕ್ರೋಧ ಅನ್ನೋ ಪಾತ್ರೆಯಲ್ಲಿ ಅದನ್ನ ಸುರಿತಾನೆ. ಆ ವ್ಯಕ್ತಿ ಪವಿತ್ರ ದೇವದೂತರ ಮುಂದೆ, ಕುರಿಮರಿಯ ಮುಂದೆ ಬೆಂಕಿ ಗಂಧಕದಲ್ಲಿ ಚಿತ್ರಹಿಂಸೆಯನ್ನ ಅನುಭವಿಸ್ತಾನೆ.+ 11 ಅವರು ಚಿತ್ರಹಿಂಸೆ ಅನುಭವಿಸೋ ಬೆಂಕಿಯ ಹೊಗೆ ಯಾವಾಗ್ಲೂ ಮೇಲೆ ಹೋಗ್ತಾನೇ ಇರುತ್ತೆ.+ ಸ್ವಲ್ಪನೂ ಬಿಡುವಿಲ್ಲದೆ ಹಗಲೂರಾತ್ರಿ ಅವರು ಚಿತ್ರಹಿಂಸೆ ಅನುಭವಿಸ್ತಾರೆ. ಕಾಡುಪ್ರಾಣಿಯನ್ನ, ಅದ್ರ ಮೂರ್ತಿಯನ್ನ ಆರಾಧಿಸುವವ್ರಿಗೆ, ಅದ್ರ ಹೆಸ್ರನ್ನ ಗುರುತಾಗಿ ಪಡೆದಿರುವವ್ರಿಗೆ ಇದೇ ಗತಿ.+ 12 ಅದಕ್ಕೆ ಪವಿತ್ರ ಜನ್ರಿಗೆ ಅಂದ್ರೆ ದೇವರ ಆಜ್ಞೆಗಳನ್ನ ಪಾಲಿಸ್ತಾ ಯೇಸು ಮೇಲೆ ನಂಬಿಕೆ+ ಇಟ್ಟಿರುವವ್ರಿಗೆ ತಾಳ್ಮೆ ಬೇಕೇ ಬೇಕು.”+
13 ಆಗ ಸ್ವರ್ಗದಿಂದ ಒಂದು ಧ್ವನಿ ಹೀಗೆ ಹೇಳೋದನ್ನ ಕೇಳಿಸ್ಕೊಂಡೆ: “ಈ ಮಾತುಗಳನ್ನ ಬರಿ. ಈಗಿಂದ ಒಡೆಯನ ಶಿಷ್ಯರಾಗಿ* ಸಾಯುವವರು ಖುಷಿಯಾಗಿ ಇರ್ತಾರೆ.+ ಹೌದು, ಅವರು ಮಾಡಿದ ಕೆಲಸಗಳು ಅವ್ರ ಜೊತೆನೇ ಹೋಗೋದ್ರಿಂದ ಅವರು ವಿಶ್ರಾಂತಿ ತಗೊಳ್ಳಲಿ ಅಂತ ದೇವರ ಪವಿತ್ರಶಕ್ತಿ ಹೇಳ್ತಿದೆ.”
14 ಆಮೇಲೆ ನಾನು ನೋಡ್ತಾ ಇದ್ದಾಗ ಒಂದು ಬಿಳಿ ಮೋಡ ಕಾಣಿಸ್ತು. ಅದ್ರ ಮೇಲೆ ಮನುಷ್ಯಕುಮಾರನ+ ತರ ಇದ್ದ ಒಬ್ಬ ವ್ಯಕ್ತಿ ಕೂತಿದ್ದನು. ಆತನ ತಲೆ ಮೇಲೆ ಚಿನ್ನದ ಕಿರೀಟ ಇತ್ತು. ಆತನ ಕೈಯಲ್ಲಿ ಚೂಪಾದ ಕುಡುಗೋಲಿತ್ತು.
15 ಇನ್ನೊಬ್ಬ ದೇವದೂತ ಆಲಯದ ಪವಿತ್ರಸ್ಥಳದಿಂದ ಹೊರಗೆ ಬಂದು ಮೋಡದ ಮೇಲೆ ಕೂತಿದ್ದ ವ್ಯಕ್ತಿಗೆ ಜೋರಾಗಿ ಹೀಗೆ ಹೇಳಿದ: “ಭೂಮಿಯ ಬೆಳೆ ತಯಾರಾಗಿದೆ. ಕೊಯ್ಲಿನ ಸಮಯ ಬಂದಿದೆ. ಹಾಗಾಗಿ ನಿನ್ನ ಕುಡುಗೋಲಿಂದ ಭೂಮಿಯ ಬೆಳೆಯನ್ನ ಕೊಯ್ಯಿ.”+ 16 ಆಗ ಮೋಡದ ಮೇಲೆ ಕೂತಿದ್ದ ವ್ಯಕ್ತಿ ತನ್ನ ಕುಡುಗೋಲಿಂದ ಭೂಮಿಯ ಮೇಲಿದ್ದ ಬೆಳೆಯನ್ನ ಕೊಯ್ದನು.
17 ಆಮೇಲೆ ಇನ್ನೊಬ್ಬ ದೇವದೂತ ಸ್ವರ್ಗದಲ್ಲಿದ್ದ ಆಲಯದ ಪವಿತ್ರಸ್ಥಳದಿಂದ ಹೊರಗೆ ಬಂದ. ಅವನ ಕೈಯಲ್ಲೂ ಚೂಪಾದ ಕುಡುಗೋಲಿತ್ತು.
18 ಆಗ ಇನ್ನೊಬ್ಬ ದೇವದೂತ ಯಜ್ಞವೇದಿ ಕಡೆಯಿಂದ ಬಂದ. ಅವನಿಗೆ ಬೆಂಕಿ ಮೇಲೆ ಅಧಿಕಾರ ಇತ್ತು. ಅವನು ಚೂಪಾದ ಕುಡುಗೋಲನ್ನ ಹಿಡಿದಿದ್ದ ದೇವದೂತನಿಗೆ ಜೋರಾಗಿ “ಭೂಮಿ ಮೇಲಿರೋ ದ್ರಾಕ್ಷಿ ಹಣ್ಣುಗಳು ಮಾಗಿರೋದ್ರಿಂದ ನಿನ್ನ ಚೂಪಾದ ಕುಡುಗೋಲಿಂದ ದ್ರಾಕ್ಷಿಗೊಂಚಲುಗಳನ್ನ ಕೊಯ್ದು ಒಟ್ಟುಸೇರಿಸು”+ ಅಂದ. 19 ಆಗ ಆ ದೇವದೂತ ತನ್ನ ಕುಡುಗೋಲಿಂದ ಭೂಮಿಯ ಮೇಲಿದ್ದ ದ್ರಾಕ್ಷಿಬಳ್ಳಿಗಳನ್ನ ಕೊಯ್ದು ದ್ರಾಕ್ಷಿ ಹಣ್ಣುಗಳನ್ನ ದೇವರ ಕೋಪ ಅನ್ನೋ ದೊಡ್ಡ ದ್ರಾಕ್ಷಿ ತೊಟ್ಟಿಯಲ್ಲಿ ಹಾಕ್ದ.+ 20 ಪಟ್ಟಣದ ಹೊರಗೆ ಕುದುರೆಗಳು ಆ ದ್ರಾಕ್ಷಿ ತೊಟ್ಟಿಯಲ್ಲಿ ದ್ರಾಕ್ಷಿಯನ್ನ ತುಳಿದ್ವು. ಆಗ ರಕ್ತ ಹೊರಗೆ ಬಂತು. ಆ ರಕ್ತ ಕುದುರೆಯ ತಲೆಯ ಎತ್ತರದಷ್ಟು ಹರೀತಾ ಹತ್ರಹತ್ರ 300 ಕಿ.ಮೀ. ತನಕ ಹೋಯ್ತು.