ಪೇತ್ರ ಬರೆದ ಮೊದಲನೇ ಪತ್ರ
3 ಅದೇ ತರ ಹೆಂಡತಿಯರೇ, ನಿಮ್ಮ ಗಂಡನಿಗೆ ಅಧೀನರಾಗಿ.+ ಆಗ ಒಂದುವೇಳೆ ನಿಮ್ಮ ಗಂಡ ದೇವರ ಮಾತಿನ ಪ್ರಕಾರ ನಡಿತಾ ಇಲ್ಲ ಅಂದ್ರೆ ನೀವು ಒಂದು ಮಾತೂ ಆಡದೆ ನಿಮ್ಮ ನಡತೆಯಿಂದಾನೇ ಅವ್ರ ಮನಸ್ಸನ್ನ ಗೆಲ್ಲಬಹುದು.+ 2 ಯಾಕಂದ್ರೆ ನೀವು ತುಂಬ ಗೌರವ ಕೊಡೋದನ್ನ, ನಿಮ್ಮ ಒಳ್ಳೇ ನಡತೆಯನ್ನ+ ಅವರು ಕಣ್ಣಾರೆ ನೋಡ್ತಾರೆ. 3 ನೀವು, ಮೇಲೆ ಕಾಣಿಸೋ ಅಲಂಕಾರಕ್ಕೆ ಅಂದ್ರೆ ಬೇರೆಬೇರೆ ತರ ಕೂದಲು ಬಾಚೋದು, ಚಿನ್ನದ ಒಡವೆ ಹಾಕೊಳ್ಳೋದು+ ಅಥವಾ ದುಬಾರಿ ಬಟ್ಟೆ ಹಾಕೊಳ್ಳೋದಕ್ಕೆ ಮಾತ್ರ ಗಮನ ಕೊಡಬಾರದು. 4 ಬದಲಿಗೆ ನೀವು ಹೃದಯದಲ್ಲಿ* ಎಷ್ಟು ಅಂದವಾಗಿದ್ದೀರ ಅನ್ನೋದು ಎಲ್ರಿಗೆ ಎದ್ದುಕಾಣಬೇಕು. ಶಾಂತಿ, ಸೌಮ್ಯಭಾವ ಅನ್ನೋ ಗುಣಗಳಿಂದ ನಿಮ್ಮನ್ನ ಅಲಂಕಾರ ಮಾಡ್ಕೊಬೇಕು.+ ಅದು ಯಾವತ್ತೂ ಹಾಳಾಗಿಹೋಗಲ್ಲ. ದೇವರ ದೃಷ್ಟಿಯಲ್ಲಿ ಇಂಥ ಅಲಂಕಾರಕ್ಕೇ ಬೆಲೆ ಜಾಸ್ತಿ. 5 ಹಳೇ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆ ಇಟ್ಟಿದ್ದ ನಂಬಿಗಸ್ತ ಹೆಂಗಸ್ರು ಈ ತರಾನೇ ತಮ್ಮನ್ನ ಅಲಂಕಾರ ಮಾಡ್ತಾ, ತಮ್ಮ ಗಂಡಂದಿರಿಗೆ ಅಧೀನರಾಗಿ ಇರ್ತಿದ್ರು. 6 ಸಾರ ಅಬ್ರಹಾಮನ ಮಾತನ್ನ ಯಾವಾಗ್ಲೂ ಕೇಳ್ತಿದ್ದಳು. ಅವನನ್ನ “ಯಜಮಾನ” ಅಂತ ಕರಿತಾ ಇದ್ದಳು.+ ನೀವೂ ಯಾವುದಕ್ಕೂ ಭಯಪಡ್ದೆ ಒಳ್ಳೇದನ್ನ ಮಾಡ್ತಾ ಇದ್ರೆ ಸಾರ ತರ ಆಗ್ತೀರ.+
7 ಅದೇ ತರ ಗಂಡಂದಿರೇ, ನೀವು ನಿಮ್ಮ ಹೆಂಡತಿಯನ್ನ ಚೆನ್ನಾಗಿ ಅರ್ಥ ಮಾಡ್ಕೊಂಡು ಸಂಸಾರ ಮಾಡಿ. ಸ್ತ್ರೀಯರು ನಿಮಗಿಂತ ಬಲಹೀನರು, ನಾಜೂಕಾದ ಪಾತ್ರೆ ತರ ಇದ್ದಾರೆ. ಅಷ್ಟೇ ಅಲ್ಲ, ದೇವರು ಅಪಾರ ದಯೆಯಿಂದ ಕೊಡೋ ಜೀವವನ್ನ ನಿಮ್ಮ ಜೊತೆ ಅವರೂ ಹಂಚ್ಕೊಳ್ತಾರೆ.+ ಹಾಗಾಗಿ ಅವ್ರಿಗೆ ಗೌರವ ಕೊಡಿ.+ ಆಗ ನೀವು ಮಾಡೋ ಪ್ರಾರ್ಥನೆಗೆ ಯಾವ ಅಡ್ಡಿನೂ ಇರಲ್ಲ.
8 ಕೊನೆದಾಗಿ ಇನ್ನೊಂದು ವಿಷ್ಯ, ನಿಮ್ಮೆಲ್ರ ಯೋಚ್ನೆ ಒಂದೇ ತರ ಇರಬೇಕು.*+ ಬೇರೆಯವ್ರ ನೋವನ್ನ ಅರ್ಥ ಮಾಡ್ಕೊಬೇಕು. ಒಂದೇ ಕುಟುಂಬದವ್ರ ತರ ಪ್ರೀತಿ ತೋರಿಸಬೇಕು. ದಯೆಯಿಂದ ಮೃದುವಾಗಿ ನಡ್ಕೊಬೇಕು.+ ನಿಮ್ಮಲ್ಲಿ ದೀನತೆ+ ಇರಬೇಕು. 9 ಕೆಟ್ಟದು ಮಾಡಿದವ್ರಿಗೆ ಕೆಟ್ಟದು ಮಾಡಬೇಡಿ.+ ಅವಮಾನ ಮಾಡಿದವ್ರಿಗೆ ಅವಮಾನ ಮಾಡಬೇಡಿ.+ ಬದಲಿಗೆ ಅವ್ರಿಗೆ ಒಳ್ಳೇದನ್ನೇ ಮಾಡಿ.+ ಇದಕ್ಕಂತಾನೇ ದೇವರು ನಿಮ್ಮನ್ನ ಆರಿಸ್ಕೊಂಡಿದ್ದಾನೆ. ಹಾಗೆ ಮಾಡಿದ್ರೆ ನಿಮಗೆ ಆಶೀರ್ವಾದ ಸಿಗುತ್ತೆ.
10 ಯಾಕಂದ್ರೆ ಒಂದು ವಚನದಲ್ಲಿ ಹೀಗೆ ಹೇಳುತ್ತೆ: “ಚೆನ್ನಾಗಿ ಜೀವನ ಮಾಡ್ತಾ ಖುಷಿಯಾಗಿ ಇರಬೇಕಂತ ಅಂದ್ಕೊಳ್ಳುವವರು ಕೆಟ್ಟದ್ದನ್ನ ಮಾತಾಡದೆ, ಮೋಸ ಮಾಡದೆ ತಮ್ಮ ನಾಲಿಗೆಯನ್ನ ಹತೋಟಿಯಲ್ಲಿ ಇಟ್ಕೊಬೇಕು.+ 11 ಅಂಥವರು ಕೆಟ್ಟದ್ರಿಂದ+ ದೂರ ಇದ್ದು, ಒಳ್ಳೇದನ್ನ ಮಾಡಬೇಕು.+ ಶಾಂತಿಯನ್ನ ಹುಡುಕಿ ಅದನ್ನ ಪಡ್ಕೊಳ್ಳೋಕೆ ತುಂಬ ಪ್ರಯತ್ನ ಮಾಡಬೇಕು.+ 12 ಯಾಕಂದ್ರೆ ಯೆಹೋವನ* ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ* ಇಷ್ಟ ಇಲ್ಲ.”+
13 ನೀವು ಮನಸಾರೆ ಒಳ್ಳೇ ಕೆಲಸಗಳನ್ನ ಮಾಡಿದ್ರೆ ಯಾರು ನಿಮಗೆ ಕೆಟ್ಟದು ಮಾಡ್ತಾರೆ?+ 14 ನೀತಿವಂತರಾಗಿ ಇರೋದ್ರಿಂದ ನಿಮಗೆ ಕಷ್ಟ ಬಂದ್ರೂ ಖುಷಿಪಡಿ.+ ಆದ್ರೆ ಜನ್ರು ಹೆದರೋ ವಿಷ್ಯಗಳಿಗೆ ನೀವು ಹೆದರಬೇಡಿ,* ಚಿಂತೆ ಮಾಡಬೇಡಿ.+ 15 ಆದ್ರೆ ನಿಮ್ಮ ಹೃದಯದಲ್ಲಿ ಕ್ರಿಸ್ತನನ್ನ ಪ್ರಭು, ಪವಿತ್ರ ಅಂತ ಒಪ್ಕೊಳ್ಳಿ. ನಿಮಗಿರೋ ನಿರೀಕ್ಷೆ ಬಗ್ಗೆ ಕೇಳೋ ಪ್ರತಿಯೊಬ್ರಿಗೂ ಉತ್ರ ಕೊಡೋಕೆ ಯಾವಾಗ್ಲೂ ಸಿದ್ಧವಾಗಿರಿ. ಆದ್ರೆ ಕೋಪ ಮಾಡ್ಕೊಳ್ಳದೆ ಮೃದುವಾಗಿ,+ ತುಂಬ ಗೌರವದಿಂದ ಉತ್ರ ಕೊಡಿ.+
16 ನಿಮ್ಮ ಮನಸ್ಸಾಕ್ಷಿಯನ್ನ ಶುದ್ಧವಾಗಿ ಇಟ್ಕೊಳ್ಳಿ.+ ಆಗ ಜನ್ರು ನಿಮ್ಮ ಮೇಲೆ ಯಾವ ಆರೋಪ ಹಾಕಿದ್ರೂ ಕ್ರಿಸ್ತನ ಶಿಷ್ಯರಾಗಿ ನೀವು ನಡ್ಕೊಳ್ಳೋ ರೀತಿ+ ನೋಡಿ ಅವ್ರಿಗೇ ಅವಮಾನ ಆಗುತ್ತೆ.+ 17 ಕೆಟ್ಟದು ಮಾಡಿ ಕಷ್ಟ ಅನುಭವಿಸೋದಕ್ಕಿಂತ ಒಳ್ಳೇದು ಮಾಡಿ ಕಷ್ಟ ಅನುಭವಿಸೋದೇ ಒಳ್ಳೇದು.+ ಅದೇ ದೇವರ ಇಷ್ಟ ಆಗಿದ್ರೆ ಅದು ಇನ್ನೂ ಒಳ್ಳೇದು.+ 18 ಯಾಕಂದ್ರೆ ಅನೀತಿವಂತ ಜನ್ರಿಗೋಸ್ಕರ+ ಅವ್ರ ಎಲ್ಲ ಪಾಪಗಳು ಹೋಗೋ ತರ ನೀತಿವಂತನಾದ ಕ್ರಿಸ್ತ ಒಂದೇ ಸಲ ಪ್ರಾಣ ಕೊಟ್ಟನು.+ ನಮ್ಮನ್ನ ದೇವರ ಹತ್ರ ನಡಿಸೋಕೆ ಕ್ರಿಸ್ತ ಹಾಗೆ ಮಾಡಿದನು.+ ಆತನು ಮನುಷ್ಯನಾಗಿ ಸತ್ತ,+ ಆದ್ರೆ ದೇವರು ಆತನಿಗೆ ಕಣ್ಣಿಗೆ ಕಾಣದ ದೇಹ ಕೊಟ್ಟು ಮತ್ತೆ ಜೀವಿಸೋ ತರ ಮಾಡಿದನು.+ 19 ಆಮೇಲೆ ಕ್ರಿಸ್ತ ಬಂಧನದಲ್ಲಿದ್ದ ಕೆಟ್ಟ ದೇವದೂತರಿಗೆ ತೀರ್ಪಿನ ಸಂದೇಶವನ್ನ ಸಾರಿದ.+ 20 ಆ ದೇವದೂತರು ನೋಹನ ಕಾಲದಲ್ಲಿ ದೇವರ ಮಾತು ಕೇಳಲಿಲ್ಲ.+ ನೋಹ ಹಡಗನ್ನ ಕಟ್ತಿದ್ದಾಗ+ ದೇವರು ತಾಳ್ಮೆಯಿಂದ ಕಾಯ್ತಾ ಇದ್ದ. ಆ ನಾವೆಯಲ್ಲಿ ಸ್ವಲ್ಪ ಜನ ಮಾತ್ರ ಅಂದ್ರೆ ಎಂಟು ಜನ ಮಾತ್ರ ಜಲಪ್ರಳಯದಿಂದ ಪಾರಾದ್ರು.+
21 ಈ ಕಾಲದಲ್ಲಿ ದೀಕ್ಷಾಸ್ನಾನನೂ ಅದೇ ತರ ಇದೆ. ಅದು ಈಗ್ಲೂ ನಿಮ್ಮನ್ನ ಕಾಪಾಡ್ತಿದೆ. ಯಾಕಂದ್ರೆ ಮತ್ತೆ ಜೀವ ಪಡ್ಕೊಂಡ ಯೇಸು ಕ್ರಿಸ್ತನ ಮೇಲೆ ನಿಮಗೆ ನಂಬಿಕೆ ಇದೆ. ದೀಕ್ಷಾಸ್ನಾನ ಅಂದ್ರೆ ಮೈಗೆ ಹತ್ತಿರೋ ಗಲೀಜನ್ನ ತೊಳಿಯೋದಲ್ಲ, ಬದಲಿಗೆ ಶುದ್ಧ ಮನಸ್ಸಾಕ್ಷಿ+ ಕೊಡು ಅಂತ ದೇವರ ಹತ್ರ ಬೇಡ್ಕೊಳ್ಳೋದು. 22 ಆತನು ಸ್ವರ್ಗಕ್ಕೆ ಹೋಗಿದ್ರಿಂದ ದೇವರ ಬಲಗಡೆ+ ಇದ್ದಾನೆ. ದೇವದೂತರು, ಅಧಿಕಾರ ಮತ್ತು ಶಕ್ತಿ ಇರೋ ಎಲ್ರೂ ಆತನಿಗೆ ಅಧೀನರಾಗೋ ಹಾಗೆ ದೇವರು ಮಾಡಿದ್ದಾನೆ.+